ಹವಾ ಮಹಲ್

ಹವಾ ಮಹಲ್ (ಹಿಂದಿ: हवा महल, ಅನುವಾದ: "ವಾಯುವಿನ ಅರಮನೆ" ಅಥವಾ "ತಂಗಾಳಿಯ ಅರಮನೆ"), ಇದು ಭಾರತದ ಜೈಪುರ್‌ನಲ್ಲಿರುವ ಒಂದು ಅರಮನೆ. ಇದನ್ನು 1799ರಲ್ಲಿ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ಕಟ್ಟಿಸಿದ್ದರು, ಮತ್ತು ಲಾಲ್ ಛಂದ್ ಉಸ್ತಾರವರು ಹಿಂದು ದೇವರಾದ ಕೃಷ್ಣನ ಕಿರೀಟದ ಆಕಾರದಲ್ಲಿ ಇದರ ವಿನ್ಯಾಸಗೊಳಿಸಿದ್ದರು. ಜಟಿಲ ಜಾಲರಿ ಕಾಮಗಾರಿಯಿಂದ ಅಲಂಕೃತ ಝರೊಕಾ ಎಂದು ಕರೆಯಲಾದ 953 ಚಿಕ್ಕ ಕಿಟಕಿಗಳು ಒಳಗೊಂಡ ಇದರ ಅದ್ವಿತೀವಾದ ಐದು-ಅಂತಸ್ತಿನ ಹೊರರೂಪ ಜೇನುಗೂಡಿನ ಜೇನುಹಟ್ಟಿಗೆ ಕೂಡ ಸದೃಶ್ಯವಾಗಿದೆ. ಈ ಜಲರಿಯ ಮುಖ್ಯ ಉದ್ದೇಶವೆಂದರೆ ರಾಜ ಮನೆತನದ ಮಹಿಳೆಯರಿಗೆ ಅವರು ಕಾಣದಂತೆ ಕೆಳಗಿನ ರಸ್ತೆಯ ದಿನನಿತ್ಯದ ಜೀವನವನ್ನು ನೋಡಲು ಸಾಧ್ಯವಾಗಬೇಕೆಂದು, ಕಾರಣ ಅಂದು ಅವರು ಕಟ್ಟುನಿಟ್ಟಾಗಿ "ಪರಧಾ" ಅನ್ನು (ಮುಖದ ಹೊದಿಕೆ) ಪಾಲಿಸಬೇಕಿತ್ತು.

ಕೆಂಪು ಹಾಗೂ ಗುಲಾಬಿ ಮರಳುಗಲ್ಲಿನಿಂದ ಕಟ್ಟಲಾದ, ಈ ಅರಮನೆ ಜೈಪುರ್‌ನ ವ್ಯಾಪಾರ ಕೇಂದ್ರದ ಮುಖ್ಯ ಸಾರ್ವಜನಿಕ ರಸ್ತೆಯ ಹೃದಯ ಸ್ಥಾನದಲ್ಲಿದೆ. ಇದು ನಗರದ ಅರಮನೆಯ ಭಾಗವಾಗಿದ್ದು, ಜೆನೇನ ಅಥವಾ ಮಹಿಳೆಯರ ಕೋಣೆಗಳಿಗೆ ವಿಸ್ತರಿಸಿದೆ, ಜನಾನರ ಕೋಣೆಗಳು. ವಿಶೇಷವಾಗಿ ನಸುಕಿನಲ್ಲಿ ನೋಡಿದಾಗ ಇದು ಸೂರ್ಯೋದಯದ ಹೊಂಗಿರಣಗಳಿಂದ ಬೆಳಗಿ ಗಮನಾರ್ಹವಾಗಿ ಕಾಣುತ್ತದೆ.

ಇತಿಹಾಸ

ಕಛ್‌ವಾಹ ವಂಶದ ಮಹಾರಾಜ ಸವಾಯಿ ಜೈ ಸಿಂಗ್, ರಾಜಸ್ಥಾನದ ಅರಸ ಮೂಲತಹ ಜೈಪುರ್ ನಗರವನ್ನು 1727ರಲ್ಲಿ ಯೋಜಸಿ ನಿರ್ಮಿಸಿದರು. ಹೇಗಿದ್ದರು, ಅವರ ಮೊಮ್ಮಗ ಹಾಗೂ ಮಹಾರಾಜ ಸವಾಯಿ ಮಾಧೊಸಿಂಗ್ I ರ ಮಗನಾದ, ಸವಾಯಿ ಪ್ರತಾಪ್ ಸಿಂಗ್‌ರವರು 1799ರಲ್ಲಿ ರಾಜಯೋಗ್ಯ ನಗರದ ಅರಮನೆಯ ಮುಂದುವರಿಕೆಯಾಗಿ ಹವಾ ಮಹಲ್ ಅನ್ನು ಕಟ್ಟಿದರು. ಹಿಂದೂ ದೇವರಾದ ಕೃಷ್ಣನ ಪ್ರತಿವಿದ್ದ ಆಳವಾದ ಭಕ್ತಿ ಪ್ರತಾಪ್ ಸಿಂಗ್‌ರನ್ನು ಭಗವಂತನ ಮುಕುಟ ಅಥವಾ ರುಮಾಲಾಗಿ ಅಲಂಕರಿಸಿದ ಭಂಗಿಯ ಈ ನಿರ್ಮಾಣದ ಸಮರ್ಪಣೆಗೆ ಪ್ರೇರಿಸಿತು ಎಂದು ಅನುಮಾನಿಸಲಾಗಿದೆ.ಇದರ ನಿಖರ ಇತಿಹಾಸಕ್ಕೆ ಯಾವುದೇ ಐತಿಹಾಸಿಕ ದಾಖಲೆ ಇಲ್ಲದಿದ್ದರು, ಕಟ್ಟುನಿಟ್ಟಾದ ಪರಧಾ (ಮಹಿಳೆಯರನ್ನು ಪುರುಷರು ನೋಡಲು ತಡೆಯುವ ರೂಢಿ) ಸಂಪ್ರದಾಯದ ಅಡಿಯಲ್ಲಿದ್ದ ರಾಜ ಮನೆತನದ ಮಹಿಳೆಯರು ಮಾರುಕಟ್ಟೆಯ ಕೇಂದ್ರದ ನಡಾವಳಿ ಹಾಗೂ ರಾಜಯೋಗ್ಯ ಮೆರವಣಿಗೆ ಹಾಗೂ ಉತ್ಸವಗಳನ್ನು ಕಲ್ಲಿನಿಂದ ಕೊರೆದ ಪರದೆಯ ಹಿಂದೆ ಕುಳಿತು ವೀಕ್ಷಿಸಲು ಅವಕಾಶ ಕಲ್ಪಿಸಿದ್ದರು ಎಂದು ಊಹಿಸಲಾಗಿದೆ. ಹೊರ ಜನರು ನೋಡದಂತೆ, ಸುಖಸಾಧನಗಳ ಸೌಕರ್ಯಗಳ ಹಾಗೂ ಕಟ್ಟುನಿಟ್ಟಾದ ಪರದೆಯ ಹಿಂದಿನ ಅನನ್ಯತೆಯ ಮಧ್ಯದಲ್ಲಿ, ಇದನ್ನೆ ಹವಾ ಮಹಲ್ ವೈಖರಿಯಲ್ಲಿ ಮಾಡಿತು.

ಇದರ ಅಸಾಮಾನ್ಯ ವಿನ್ಯಾಸದ ಕಿಟಕಿ ಪರದೆಗಳು ಬೇಕಿರುವ ತಂಪು ತಂಗಾಳಿಯನ್ನು ಒದಗಿಸುವ ಕಾರಣ, ಹಲವು ವರ್ಷಗಳವರೆಗೆ ಜೈಪುರ್‌ನ ರಾಜ ಮನೆತನದ ಆಳ್ವಿಕೆಯಲ್ಲಿ ಈ ಮಹಲ್ ಅನ್ನು ಬೇಸಿಗೆ ಕಾಲದ ಉಸಿರುಕಟ್ಟುವ ಬಿಸಿ ವಾತಾವರಣದಲ್ಲಿ ಆಶ್ರಯಧಾಮವೆಂದು ಕೂಡ ಬಳಸುತ್ತಿದ್ದರು. ಇದೊಂದು ಐತಿಹಾಸಿಕ ಅದ್ಭುತ ಅರಮನೆ.

ವಿನ್ಯಾಸ ರಚನೆ

ಹವಾ ಮಹಲ್‌ನ ಹಿಂಭಾಗದ ಹೊರನೋಟದ ದೃಶ್ಯಗಳು
ಮುಖ್ಯ ರಸ್ತೆಯಿಂದ ಮುಂಭಾಗದ ಸಂಪೂರ್ಣ ನೋಟ ಹವಾ ಮಹಲ್‌ನ ಪೂರ್ತಿ ಹಿಂಭಾಗದ ನೋಟ

ತನ್ನ ಎತ್ತರದ ಅಡಿಪಾಯಯಿಂದ 50 feet (15 m) ಎತ್ತರಕ್ಕೆ ಏರುವ ಐದು-ಅಂತಸ್ತಿನ ಗೋಪುರದ ಆಕಾರದ ಸ್ಮಾರಕ ಈ ಅರಮನೆ. ನಿರ್ಮಾಣದ ಮೇಲಿನ ಮೂರು ಅಂತಸ್ತುಗಳಲ್ಲಿ ಒಂದು ಕೋಣೆ ಅಗಲದ ಆಯಾಮವಿದ್ದು ಮೊದಲ ಹಾಗೂ ಎರಡನೆಯ ಅಂತಸ್ತುಗಳ ನಿರ್ಮಾಣದ ಹಿಂಭಾಗದಲ್ಲಿ ಚಾವಣಿಯಿಲ್ಲದ ಅಂಗಳವಿದೆ. ಮುಂದಿರುವ ಏರಿಕೆ ರಸ್ತೆಯಿಂದ ಗಮನಿಸಿದರೆ, ಸಣ್ಣ ಕಿಟಕಿಗಳಿಂದ ಕಟ್ಟಲಾದ ಜೇನು ಗೂಡಿನ ಜೇನುಹಟ್ಟಿಯ ಜಾಲದಂತೆ ಕಾಣುತ್ತದೆ. ಪ್ರತಿಯೊಂದು ಸಣ್ಣ ಕಿಟಕಿಯಲ್ಲಿ ಚಿಕ್ಕಪ್ರತಿರೂಪದ ಕಿಟಕಿಗಳಿದ್ದು ಅವುಗಳಲ್ಲಿ ಮರಳುಗಲ್ಲಿನ ಕೆತ್ತನೆಯ ಜಾಲರಗಳು, ಶಿಖರಾಲಂಕಾರಗಳು ಹಾಗೂ ಗುಮ್ಮಟಗಳಿವೆ. ಸ್ಮಾರಕಗೆ ತನ್ನ ಅದ್ವಿತೀಯ ಮುಂಭಾಗದ ನೋಟ ನೀಡುವ, ಇದೊಂದು ಅರೆ-ಅಷ್ಟಕೋನ ಗೋಡೆಗಳ ವಿಭಾಗದ ವಾಸ್ತವ ಸಮೂಹ. ಕಟ್ಟಡದ ಹಿಂಭಾಗದ ಒಳಮುಖದಲ್ಲಿ ಅಗತ್ಯ-ಆಧಾರದ ಕೋಣೆಗಳನ್ನು ಕನಿಷ್ಠ ಅಲಂಕಾರವನ್ನು ಒಳಗೂಡಿಸಿ, ಸ್ತಂಭಗಳು ಹಾಗೂ ಮೊಗಸಾಲೆಗಳಿಂದ ಕಟ್ಟಲಾಗಿದೆ, ಹಾಗೂ ಅದು ಹಾಗೆಯೆ ಮೇಲನೇಯ ಮಹಡಿಯವರೆಗೆ ಹರಡಿದೆ. ಮಹಲಿನ ಒಳಾಂಗಣವನ್ನು "ಪಟ್ಟಿಗಳು ಅಥವಾ ಹೊಂಬಣ್ಣದಿಂದ ಖಚಿತಗೊಳಿಸಿ ಹಗುರಗೊಳಿಸದ ಹಲವು ಬಣ್ಣಗಳ ಅಮೃತಶಿಲೆಯ ಕೋಣೆಗಳು ಒಳಗೊಂಡಿವೆ; ಹಾಗೂ ಕಾರಂಜಿಗಳು ಅಂಗಣದ ಮಧ್ಯ ಭಾಗವನ್ನು ಅಲಂಕರಿಸುತ್ತವೆ" ಎಂದು ವರ್ಣಿಸಲಾಗಿದೆ.

ಈ ಅದ್ವಿತೀಯ ನಿರ್ಮಾಣದ ವಾಸ್ತುಶಿಲ್ಪಿ ಅಂದಿನ ಕಾಲದಲ್ಲಿ ಭಾರತದ ಅತ್ಯುತ್ತಮ-ಯೋಜಿತ ನಗರದಲ್ಲೊಂದಾದ ಜೈಪುರ್ ನಗರದ ಯೋಜನೆಯನ್ನು ಸಾಕಾರಿಸಿದ ಲಾಲ್ ಛಂಧ್ ಉಸ್ತಾ. ನಗರದ ಇತರ ಸ್ಮಾರಕಗಳ ರಂಗಸಜ್ಜಿಕೆಯ ಹೋಲಿಕೆಯಂತೆ ಇದನ್ನು ಕೆಂಪು ಹಾಗೂ ಗುಲಾಬಿ ಬಣ್ಣದ ಮರಲುಗಲ್ಲಿನಿಂದ ಕಟ್ಟಲಾಗಿದೆ, ಇದರ ಬಣ್ಣ ಜೈಪುರ್‌ಗೆ ನೀಡಿದ "ಪಿನ್ಕ್ ಸಿಟಿ" ಎಂಬ ಬಿರುದಿನ ವಿಶೇಷಣವನ್ನು ಪೂರ್ತಿಯಾಗಿ ಪ್ರಮಾಣಿಸುತ್ತದೆ. ಇದರ ಮುಂಭಾಗ ಕಠಿಣವಾಗಿ ಕೊರೆದ 953 ಗೂಡುಗಳ ಝರೋಕಗಳನ್ನು ಚಿತ್ರಿಸುತ್ತದೆ (ಕೆಲವನ್ನು ಮರದಿಂದ ಮಾಡಲಾಗಿವೆ), ಇದು ನಿರ್ಮಾಣದ ಹಿಂಭಾಗದ ನಿರಾಡಂಬರವಾಗಿ ಕಾಣುವ ಭಾಗಕ್ಕೆ ಬಲವಾದ ವಿಭಿನ್ನತೆಯನ್ನು ತೋರಿಸುತ್ತದೆ. ಇದರ ಸಾಂಪ್ರದಾಯಿಕ ಹಾಗೂ ವಾಸ್ತುಶಿಲ್ಪದ ಪರಂಪರೆ ಹಿಂದೂ ರಾಜಪುತರ ವಾಸ್ತುಶಿಲ್ಪ ಹಾಗೂ ಇಸ್ಲಾಮರ ಮುಘಲ್ ವಾಸ್ತುಶಿಲ್ಪದ ಸಮ್ಮಿಲನದ ನಿಜವಾದ ಪ್ರತಿಬಿಂಬ; ಗುಮ್ಮಟದ ಮೇಲ್ಛಾವಣಿಗಳು, ಕೊಳವೆಯಾಕಾರದ ಸ್ಥಂಬಗಳು, ಕಮಲ ಹಾಗೂ ಹೂವಿನ ಚಿತ್ರಾಕೃತಿಗಳು ರಾಜಪುತರ ಶೈಲಿಯಲ್ಲಿ ಕಂಡು ಬರುತ್ತದೆ, ಮತ್ತು ಇದರ ಕಲ್ಲುಗಳ ಮೇಲೆ ಬಳ್ಳಿಗೆಲಸದ ಅಲಂಕಾರ ಮಾಡಿ ಖಚಿತಗೊಳಿಸಿದ ಕೃತಿ ಹಾಗೂ ಕಮಾನುಗಳು ಇಸ್ಲಾಮಿಕ್ ಶೈಲಿಯನ್ನು ಸ್ಪಷ್ಟವಾಗಿ ದರ್ಶಿಸುತ್ತದೆ(ಫತೆಪುರ್ ಸಿಕ್ರಿಯಲ್ಲಿನ ಪಂಚ ಮಹಲ್ - ವಾಯುವಿನ ಅರಮನೆಯ ಹೋಲಿಕೆಯನ್ನು ವಿಶಿಷ್ಟವಾಗಿ ತೋರಿಸಿದ ರೀತಿ).

ಸಿಟಿ ಪ್ಯಾಲೆಸ್‌ನ ದಿಕ್ಕಿನಿಂದ ಹವಾ ಮಹಲ್‌ನ ಪ್ರವೇಶ ಒಂದು ಸಾಮ್ರಾಜ್ಯಶಾಹಿ ಬಾಗಿಲ ಮುಖಾಂತರವಿದೆ. ಇದು ಮೂರು ದಿಕ್ಕುಗಳಲ್ಲಿರುವ ಎರಡು ಅಂತಸ್ತಿನ ಕಟ್ಟಡವುಳ್ಳ ಒಂದು ದೊಡ್ಡ ಅಂಗಣದತ್ತ ತೆರೆಯುತ್ತದೆ, ಹವಾ ಮಹಲ್ ಇದರ ಪೂರ್ವ ದಿಕ್ಕನ್ನು ಆವರಿಸುತ್ತದೆ. ಒಂದು ಪುರಾತತ್ವ ಶಾಸ್ತ್ರದ ವಸ್ತು ಸಂಗ್ರಹಾಲಯ ಕೂಡ ಈ ಅಂಗಣದಲ್ಲಿದೆ.

ಹವಾ ಮಹಲ್ ಮಹಾರಾಜ ಜೈ ಸಿಂಗ್‌ರ chef-d'œuvre ಎಂದು ಕೂಡ ಪ್ರಚಲಿತವಾಗಿತ್ತು, ಇದರ ಸೊಬಗು ಹಾಗೂ ಮಹಲಿನಲ್ಲಿ ಒಳಗೊಂಡ ಒಳಭಾಗದ ಕಾರಣ ಇದು ಅವರ ಅತ್ಯಂತ ಪ್ರಿಯ ವಿಶ್ರಾಂತಿಧಾಮವಾಗಿತ್ತು. ಮುಂಭಾಗದ ಸಣ್ಣ ಕಿಟಕಿಗಳ ಮೂಲಕ ಹಾದು ಸಾಗುವ ತಂಗಾಳಿಯಿಂದ ಕೋಣೆಗಳಲ್ಲಾಗುವ ತಂಪು ಪ್ರಭಾವವನ್ನು, ಪ್ರತಿ ಕೋಣೆಯ ಮಧ್ಯದಲ್ಲಿ ಕಟ್ಟಲಾದ ಕಾರಂಜಿಗಳು ಹೆಚ್ಚಿಸುತ್ತವೆ.

ಮಹಲಿನ ಮೇಲ್ಛಾವಣಿಯಿಂದ ನೋಡಿದ ದೃಶ್ಯಾವಳಿ ಸ್ತಬ್ಧಗೊಳಿಸುವಂತಿದೆ. ಪೂರ್ವದಲ್ಲಿರುವ ಪೇಟೆ (ಸೆರೆದಿಯೊರಿ ಪೇಟೆ ಅಥವಾ ಮಾರುಕಟ್ಟೆ) ಪಾರಿಸ್‌ರ ಮಾರ್ಗಗಳನ್ನು ಹೋಲಿಸುತ್ತದೆ. ಹಸಿರು ಕಂದರಗಳು ಹಾಗೂ ಗುಡ್ಡಗಳು ಹಾಗೂ ಆಮೆರ್ ಕೊಟೆ ಪಶ್ಚಿಮ ಹಾಗೂ ಉತ್ತರದ ದೃಶ್ಯವಿವರವನ್ನು ನಿರ್ಮಿಸುತ್ತದೆ. ಥಾರ್‌ ಮರುಭೂಮಿಯ, ತೀರಾ ಸಡಿಲವಾದ ಮರಳು ಹೊಂದಿರುವ ಪ್ರದೇಶವು ದಕ್ಷಿಣ ಮತ್ತು ಪೂರ್ವಕ್ಕೆ ಹೊಂದಿದೆ. ಹಿಂದಿನ ಕಠಿಣವಾದ ಹಾಗೂ ನಿರ್ಜನ ಪ್ರದೇಶವಾದ ಈ ಭೂ ಪ್ರದೇಶದ ಎಲ್ಲ ಪರಿವರ್ತನೆಯು ಜೈಪುರ್‌ನ ಮಹಾರಾಜರ ಐಕ್ಯ ಪ್ರಯಾಸದ ಕಾರಣದಿಂದಾಗಿ ಸಂಭವಿಸಿತು. ಎಷ್ಟು ಮಟ್ಟಿಗೆ ಅಂದರೆ ಈ ಮಹಲ್ ಅನ್ನು ವರ್ಸೆಲಿಸ್‌ನ ಪ್ರತಿರೂಪ ಎಂದು ಹೇಳಲಾಗಿದೆ. ಸ್ಮಾರಕದ ಮೇಲಿನ ಅಂತಸ್ತಿನಿಂದ ಜಂತರ್ ಮಂತರ್ ಹಾಗೂ ಸಿಟಿ ಪ್ಯಾಲೆಸ್‌ನ ದೃಶ್ಯಗಳನ್ನು ಕೂಡ ವೀಕ್ಷಿಸಬಹುದು.

ಹವಾ ಮಹಲ್‌ನ ಮೇಲಿನ ಎರಡು ಅಂತಸ್ತುಗಳ ಪ್ರವೇಶದ್ವಾರವನ್ನು ಬರಿ ಇಳಿವೋರೆ ಮೂಲಕ ತಯಾರಿಸಲಾಗಿದೆ. ರಾಜಸ್ಥಾನ ಸರ್ಕಾರದ ಪುರಾತತ್ವ ಶಾಸ್ತ್ರ ಇಲಾಖೆಯು ಮಹಲಿನ ವುಸ್ತುವಾರಿಯನ್ನು ನೋಡಿಕೊಳ್ಳುತ್ತದೆ.

ಪುನಃಸ್ಥಾಪನೆ ಹಾಗೂ ನವೀಕರಣ

50 ವರುಷಗಳ ದೀರ್ಘ ಅಂತರದ ನಂತರ, ಸ್ಮಾರಕಗೆ ಒಂದು ಮುಖಮರ್ದನ ನೀಡಲು 2005ರಲ್ಲಿ ಮಹಲಿನ ಪುನಃಸ್ಥಾಪನೆ ಹಾಗೂ ನವೀಕರಣದ ಕಾರ್ಯಗಳನ್ನು Rs 45 ಲಕ್ಷಗಳ ಖರ್ಚಿನ ಅಂದಾಜಿಗೆ ಕೈಗೆ ತೆಗೆದುಕೊಳ್ಳಲಾಯಿತು. ಜೈಪುರ್‌ನ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಸಂಘದ ಕ್ಷೇತ್ರ ಕೂಡ ಕೈ ನೀಡುತ್ತಿದೆ ಮತ್ತು ಯುನಿಟ್ ಟ್ರಸ್ಟ್ ಒಫ್ ಇಂಡಿಯಾ ಹವಾ ಮಹಲ್‌ನ ಉಸ್ತುವಾರಿ ನೋಡಿಕೊಳ್ಳುವುದಾಗಿ ಸ್ವೀಕಾರ ಮಾಡಿದೆ.

ಪ್ರವಾಸಿಗರ ಮಾಹಿತಿ

"ಕಾಲ್ಪನಿಕ ವಾಸ್ತುಶಿಲ್ಪ ಕಲೆಯ ಮಾದರಿ" ಎಂದು ಕರೆಯಲಾದ ಈ ಮಹಲ್, ಜೈಪುರ್ ನಗರದ ಉತ್ತರದಲ್ಲಿ ಬಡಿ ಚೌಪದ್ (ದೊಡ್ಡ ನಾಲ್ಕು ಚೌಕ) ಎಂದು ಕರೆಯಲಾದ ಮುಖ್ಯ ರಸ್ತೆಯ ಅಡ್ಡಹಾಯ್ದ ವಿಭಾಗದಲ್ಲಿ ಸ್ಥಾಪಿತವಾಗಿದೆ. ಜೈಪುರ್ ನಗರ ದೇಶದ ಇತರ ಭಾಗಗಳಿಗೆ ರಸ್ತೆ, ರೈಲು ಹಾಗೂ ವಾಯು ಮಾರ್ಗಗಳಿಂದ ಉತ್ತಮವಾಗಿ ಸಂಪರ್ಕ ಹೊಂದಿದೆ. ಇಂಡಿಯನ್ ರೈಲ್ವೆಸ್‌ನ ಬ್ರಾಡ್ ಗೇಜ್ ಮಾರ್ಗದಲ್ಲಿ ಜೈಪುರ್ ರೈಲು ನಿಲ್ದಾಣ ಒಂದು ಮುಖ್ಯ ಕೇಂದ್ರ ನಿಲ್ದಾಣ. ಜೈಪುರ್ ಪ್ರಮುಖ ಹೆದ್ದಾರಿಗಳಿಂದ ಕೂಡ ಸಂಪರ್ಕ ಹೊಂದಿದೆ ಮತ್ತು ಸಂಗೆನರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಗರದಿಂದ 13 kilometres (8.1 mi) ಅಂತರದಲ್ಲಿದೆ.

ಹವಾ ಮಹಲ್‌ನ ಪ್ರವೇಶ ಮುಂಭಾಗದಲ್ಲಿಲ್ಲದೆ ಪಾರ್ಶ್ವದಿಂದ ಹಿಂಭಾಗಕ್ಕೆ ಇದೆ. ಹವಾ ಮಹಲ್‌ನ ದಿಕ್ಕಿನಲ್ಲಿ, ಬಲಕ್ಕೆ ತಿರುಗಿ ಇನ್ನೊಮ್ಮೆ ಮೊದಲ ಬಲಕ್ಕೆ ತಿರುಗಿದರೆ, ಒಂದು ಕಮಾನಿನ ಪ್ರವೇಶಕ್ಕೆ ದಾರಿಯಾಗಿ ಅದು ಕಟ್ಟಡದ ಹಿಂಭಾಗಕ್ಕೆ ಮುಂದುವರಿಯುತ್ತದೆ.

Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
Mel Helama
18 September 2015
The stunning wall is on the outside you don't need to get inside, tho the view from top is good, but if you look for the great one wall, that's around the corner.
ITC Hotels
3 October 2012
The Hawa Mahal, built in 1799 has now become one of the major landmarks of Jaipur. The palace is shaped like a pyramid & is a five-storied building, with small windows, screens & arched walls.
Bruna Cruz
1 July 2017
The stunning wall with more than 900 windows view is only from outside, don't miss it, get down from the car and enjoy the beauty architecture of this palace.
Cynthia Verónica
19 September 2014
If you want to take a picture from the back side (from the street), go in the morning because in the afternoon the sun is gonna bother u.
rice / potato
16 December 2017
???? Head one block North of Hawa Mahal for Jaipur's best souvenir: a portrait by Mr. Tikam Chand's vintage camera
Pushkin Shukla
13 December 2017
Huge history. So many windows and first of its kind Mahal to show the cross ventilation system ! Do hire a Guide to explain you details
ITC Rajputana Hotel Jaipur

starting $72

Treebo Raya Inn

starting $14

Pearl Palace Heritage - The Boutique Guest House

starting $47

Hotel Jai Palace

starting $11

OYO 2326 Hotel Star Plaza

starting $16

Abhineet Palace Hotel

starting $78

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಯಂತ್ರ ಮಂತ್ರ

ಜನಪ್ರಿಯವಾಗಿ ಜಂತರ್ ಮಂತರ್ ಎಂದು ಕರೆಯಲ್ಪಡುವ ಯಂತ್ರ ಮಂತ್ರ ಒಂದು ವಿಷು ಆಧಾ

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಜೈಪುರ

ಜೈಪುರ ಅಥವಾ ಜಯಪುರ ರಾಜಸ್ಥಾನ ರಾಜ್ಯದ ರಾಜಧಾನಿ.ಜೈಪುರವು ಭಾರತದ ಪಿಂಕ್ ಸಿಟಿ ಎಂದ

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Jal Mahal

Jal Mahal (meaning “Water Palace”) is a palace located in the mid

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Raj Bhavan (Rajasthan)

Raj Bhavan (Hindi for Government House) is the official residence of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Jaigarh Fort

Jaigarh Fort (Rajasthani/Hindi: जयगढ़ क़िला) is situated on the pro

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಅಮೇರ್

ಅಮೇರ್ ಅಥವಾ ಅಂಬೇರ್ ರಾಜಸ್ಥಾನ ರಾಜ್ಯದಲ್ಲಿರುವ ಒಂದು ನ

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಅಂಬರ್ ಕೋಟೆ

ಅಂಬರ್ ಕೋಟೆ ಭಾರತದ ರಾಜಸ್ತಾನದ ಆಮೆರ್ ನಲ್ಲಿರುವ ಒಂದ

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Chand Baori

Chand Baori is a famous stepwell situated in the village of Abhaneri

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Palacios nazaríes

Les palais nasrides constituent un ensemble palatin destiné à la vie d

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Dolmabahçe Palace

The Dolmabahçe Palace (Turkish: Dolmabahçe Sarayı) in Istanbul, Tu

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Monplaisir Palace

The Monplaisir Palace is part of the Peterhof Palace Complex, Russia.

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Laxenburg castles

Laxenburg castles are imperial palaces and castles outside Vienna, in

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Quinta da Regaleira

Quinta da Regaleira is a quinta located near the historic centre of

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ