ಬರ್ಮುಡಾ ತ್ರಿಕೋಣ

ಬರ್ಮುಡಾ ತ್ರಿಕೋಣ (ಸೈತಾನನ ತ್ರಿಕೋಣ) ಅಮೇರಿಕಾ ಖಂಡದಲ್ಲಿರುವ ಬರ್ಮುಡಾ, ಫ್ಲೊರಿಡಾದ ದಕ್ಷಿಣ ತುದಿ ಮತ್ತು ಪೊರ್ಟೊರೀಕೊ ಮಧ್ಯದಲ್ಲಿರುವ ಸುಮಾರು ೪,೦೦೦,೦೦೦ ಚದುರ ಕಿ.ಮಿ (೧೫ ಲಕ್ಷ ಚದುರ ಮೈಲಿ) ಉತ್ತರ ಅಟ್ಲಾಂಟಿಕ್ ಸಾಗರ ಪ್ರದೇಶ. ಈ ಪ್ರದೇಶ, ಭೌತಶಾಸ್ತ್ರದ ನಿಯಮಗಳನ್ನು ಉಲ್ಲಂಘಿಸುವ ನಿಗೂಢ ಶಕ್ತಿಯ ಕೇಂದ್ರ ಎಂದು ಹಲವರು ನಂಬಿದ್ದಾರೆ. ಈ ಪ್ರದೇಶದಲ್ಲಿ ಹಲವಾರು ಹಡಗುಗಳು ಹಾಗು ವಿಮಾನಗಳು ಯಾವುದೆ ಸುಳಿವಿಲ್ಲದೆ ನಿಗೂಢವಾಗಿ ಕಣ್ಮರೆಯಾಗಿವೆ ಎಂಬ ಪ್ರತೀತಿ ಇದೆ. ವಿಚಾರವಾದಿಗಳು ಮತ್ತು ವಿಜ್ಞಾನಿಗಳು ಯಾವುದೆ ಹೆಚ್ಚು ಹಡಗುಗಳು ಮತ್ತು ವಿಮಾನಗಳ ಸಂಚಾರವಿರುವ ಸ್ಥಳದಲ್ಲಿ ಸಂಭವಿಸುವ ದುರ್ಘಟನೆಯ ಪ್ರಮಾಣದಷ್ಟೆ ದುರ್ಘಟನೆ ಇಲ್ಲೂ ಸಹ ಸಂಭವಿಸಿದೆ ಎಂದು ನಿಗೂಢ ಶಕ್ತಿಯ ವಾದವನ್ನು ತಳ್ಳಿಹಾಕಿದ್ದರೆ. ಗಮನಿಸಬೇಕಾದ ಸಂಗತಿಯಂದರೆ ಪ್ರತಿದಿನವು ಯವುದೆ ಅಹಿತಕರ ಘಟನೆ ಎದುರಿಸದೆ ಹಲವಾರು ಹಡಗುಗಳು ಮತ್ತು ವಿಮಾನಗಳು ಈ ಪ್ರದೇಶದವನ್ನು ಹಾಯ್ದು ಸಂಚರಿಸುತ್ತಿವೆ.

ಚರಿತ್ರೆ

ಸುಮಾರ ೧೯೫೦ರ ದಶಕದಲ್ಲಿ ನಿಗೂಢ ಕಣ್ಮರೆ ಪ್ರಕರಣಗಳು ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ೧೯೬೪ರಲ್ಲಿ ವಿನ್ಸೆಂಟ್ ಗಾಡ್ಡಿಸ್ "ಬರ್ಮುಡಾ ಟ್ರಯಾಂಗಲ್" (ಬರ್ಮುಡಾ ತ್ರಿಕೋಣ) ಎಂಬ ಹೆಸರುನ್ನು ತನ್ನ ಲೇಖನಗಳ ಮೂಲಕ ಪ್ರಚಾರಗೊಳಿಸಿದನು. ೧೯೭೪ರಲ್ಲಿ ಚಾರ್ಲ್ಸ್ ಬರ್ಲಿಟ್ಜ್ ತನ್ನ "ದಿ ಬರ್ಮುಡಾ ಟ್ರಯಾಂಗಲ್" ಎಂಬ ಪುಸ್ತಕದ ಮುಖಾಂತರ ಈ ಸ್ಥಳದ ಮಹಿಮೆಯನ್ನು ಅತೀವ ಜನಪ್ರಿಯತೆಗೆ ಕೊಂಡೊಯ್ದನು. ತನ್ನ ಪುಸ್ತಕದಲ್ಲಿ ಅಮೇರಿಕಾದ ನೌಕಾಪಡೆಯ ೫ ಜನರ ವಿಮಾನಾರೂಡ ತಂಡದ ನಿಗೂಢ ಕಣ್ಮರೆ ಸೇರಿದಂತೆ ಹಲವಾರು ಇತರ ಪ್ರಕರಣಗಳನ್ನು ದಾಖಲಿಸಿದನು. ಈ ಪುಸ್ತಕ ಅತಿ ಹೆಚ್ಚು ಮಾರಟ ಕಂಡು ಜನಪ್ರಿಯವಾಯಿತು. ಅನೇಕ ಉತ್ಸುಕ ಓದುಗಾರರಿಂದ ನಿಗೂಢ ಸ್ಥಳದ ಹಿಂದಿರುವ ರಹಸ್ಯವನ್ನು ವಿಶ್ಲೇಷಿಸುವ ಪ್ರಯತ್ನ ಕೂಡ ಕಂಡುಬಂತು. ಈ ಸ್ಥಳದ ರಹಸ್ಯ ಬಿಡಿಸುವ ಸಲುವಾರ್ಥ, ಬಾಹ್ಯಾಕಾಶವಾಸಿಗಳ ಕೈವಾಡ, ಸಮದ್ರಲ್ಲಿ ಮುಳುಗಿರುವ ಪುರಾತನ ಆಟ್ಲಾಂಟಿಸ್ ಜನಾಂಗದ ಯಂತ್ರ, ಪ್ರಕೃತಿಯ ವಿಕೋಪ, ಹೆಚ್ಚು ಹಡಗುಗಳು ಮತ್ತು ವಿಮಾನಗಳ ಸಂಚಾರ ಆದ್ದರಿಂದ ಹೆಚ್ಚು ದುರ್ಘಟನೆ, ಅತಿಮಾನುಷ ಶಕ್ತಿಗಳ ಸಂಚಯ ಇತ್ಯಾದಿ ವಾದಗಳನ್ನು ಜನರು ಮಂಡಿಸತೊಡಗಿದರು.

ವೈಜ್ಞಾನಿಕ ವಿವರಣೆಗಳು

ಸಂಶಯವಾದಿಗಳ ವಿಚಾರ

ಮೊದಲಿಂದಲು ವಿಚಾರವಾದಿಗಳು ಮತ್ತು ವಿಜ್ಞಾನಿಗಳು ಈ ವಿಚಾರದಲ್ಲಿ ಅನುಮಾನದ ದೃಷ್ಟಿ ತೆಳದಿದ್ದರು. ಕೆಲ ವಿಮರ್ಶಕರು ಚಾರ್ಲ್ಸ್ ಬರ್ಲಿಟ್ಜ್ ತನ್ನ ಪುಸ್ತಕದಲ್ಲಿ ಜನರ ಕುತೂಹಲ ಕೆರಳಿಸಲು ಸತ್ಯಾಂಶದ ಉತ್ಪ್ರೇಕ್ಷೆ ಮಾಡಿದ್ದನೆಂದು ಟೀಕಿಸಿದ್ದಾರೆ. ಯಾವುದೆ ಹೆಚ್ಚು ಹಡಗುಗಳು ಮತ್ತು ವಿಮಾನಗಳ ಸಂಚಾರವಿರುವ ಸ್ಥಳದಲ್ಲಿ ಸಂಭವಿಸುವ ದುರ್ಘಟನೆಯ ಪ್ರಮಾಣದಷ್ಟೆ ದುರ್ಘಟನೆ ಇಲ್ಲೂ ಸಹ ನೆಡದಿದೆ ಎನ್ನುವುದು ಅವರ ವಾದ. "ಲಾಯ್ಡ್ ಆಫ್ ಲಂಡನ್" ಈ ಪ್ರದೇಶ ಯಾವುದೆ ಅನ್ಯ ಸಾಗರ ಪ್ರದೇಶಕ್ಕಿಂತ ಹೆಚ್ಚು ಅಪಾಯಕಾರಿಯಾಗಿಲ್ಲ ಎಂದು ನಿರ್ಣಯಿಸಿ, ಈ ಪ್ರದೇಶ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರಿಗೆ ಅಸಾಧಾರಣ ಅಥವಾ ಹೆಚ್ಚು ವಿಮಾ ಶುಲ್ಕ ವಿಧಿಸುವುದಿಲ್ಲ. ಕಡಲು ರಕ್ಷಣಾ ಪಡೆಯ ದಾಖಲೆಗಳೂ ಕೂಡ ಇದನ್ನು ಸಮರ್ಥಿಸುತ್ತದೆ.

ಕುಶೆಯ ಅಧ್ಯಯನ

ಅಮೇರಿಕಾದ ಆರಿಜೋನ ವಿಶ್ವವಿದ್ಯಾಲಯದ ವಾಚನಾಲಯಾಧಿಕಾರಿಯಾಗಿದ್ದ ಲಾರೆನ್ಸ್ ಕುಶೆ, ಬರ್ಮುಡಾ ತ್ರಿಕೋಣದ ಬಗ್ಗೆ ಮಾಹಿತಿ ಕೋರಿ ಬಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತಿದ್ದನ್ನು ಗಮನಿಸಿ, ಬರ್ಮುಡಾ ತ್ರಿಕೋಣದ ಬಗ್ಗೆ ಹಲವು ವರ್ಷ ಕೂಲಂಕುಶವಾಗಿ ವಿಚಾರಣೆ ಮತ್ತು ಅಧ್ಯಯನ ನೆಡಸಿದನು. ತದನಂತರ ೧೯೭೫ರಲ್ಲಿ ತನ್ನ ನಿರ್ಣಯಗಳನ್ನು "ದಿ ಬರ್ಮುಡ ಟ್ರಯಂಗಲ್ ಮಿಸ್ಟರಿ: ಸಾಲ್ವಡ್" ಎಂಬ ಪುಸ್ತಕರೂಪದಲ್ಲಿ ಪ್ರಕಟಗೊಳಿಸಿದನು. ಲಾರೆನ್ಸ್ ಕುಶೆ ತನ್ನ ಪುಸ್ತಕದಲ್ಲಿ, ಚಾರ್ಲ್ಸ್ ಬರ್ಲಿಟ್ಜ್ ದಾಖಲು ಮಾಡಿದ್ದ ಹಲವಾರು ಘಟನೆಗಳು ಮತ್ತು ಪ್ರತ್ಯಕ್ಷದರ್ಶಿಗಳು ಹಾಗು ಸಂಭಂದಪಟ್ಟವರ ಹೇಳಿಕೆಗಳಲ್ಲಿರುವ ವೈಪರಿತ್ಯ ಮತ್ತು ವಿರೋಧಾಭಾಸವನ್ನು ಬಯಲು ಮಾಡಿದನು. ಲಾರೆನ್ಸ್ ಕುಶೆ, ಹಲವಾರು ದಾಖಲಿಸಲ್ಪಟ್ಟ ವಿವರಗಳಲ್ಲಿರುವ ತಪ್ಪುಗಳನ್ನು ಬಹಿರಂಗ ಮಾಡುತ್ತ ಅನೇಕ ಘಟನೆಗಳು ಬರ್ಮುಡಾ ತ್ರಿಕೋಣ ಸಮುದ್ರ ಪ್ರದೇಶದಲ್ಲಿ ನೆಡಯಲೇ ಇಲ್ಲ ಎಂದು ವಾದಿಸಿದನು. ಅವನು ಅಂತಿಮವಾಗಿ ಹೀಗೆ ತೀರ್ಪಿತ್ತನು.

  • ಯಾವುದೆ ಹೆಚ್ಚು ಹಡಗುಗಳು ಮತ್ತು ವಿಮಾನಗಳ ಸಂಚಾರವಿರುವ ಸ್ಥಳದಲ್ಲಿ ಸಂಭವಿಸುವ ದುರ್ಘಟನೆಯ ಪ್ರಮಾಣದಷ್ಟೆ ದುರ್ಘಟನೆ ಇಲ್ಲೂ ಸಹ ಸಂಭವಿಸಿದೆ.
  • ಚಂಡಮಾರುತ ಮತ್ತು ದೊಡ್ಡ ಅಲೆಗಳು ಸದಾ ಏಳುವ ಈ ಪ್ರದೇಶದಲ್ಲಿ ಕೆಲವು ದುರ್ಘಟನೆಗಳನ್ನು ನಿಗೂಢಕರ ಘಟನೆಗಳೆನ್ನಲಾಗುವುದಿಲ್ಲ ಮತ್ತು ಅನೇಕ ದೋಣಿ ಮತ್ತು ಹಡಗುಗಳ ಕಣ್ಮರೆಯ ಪ್ರಕರಣ ಕೇವಲ ಅಸಮರ್ಥ ಅನ್ವೇಷಣೆಯ ಫಲಶ್ರುತಿ ಎಕೆಂದರೆ ಮರಳಿ ಬಂದರು ಸೇರಿದ ದೋಣಿ ಮತ್ತು ಹಡಗುಗಳ ಸುದ್ದಿಯನ್ನು ಕೈಬಿಡಲಾಗಿದೆ.
  • ಚಾರ್ಲ್ಸ್ ಬರ್ಲಿಟ್ಜ್ ಮತ್ತು ಇತರರಿಂದ ದಾಖಲಿತ ಅಹಿತಕರ ಘಟನೆಗಳು ನೆಡೆದ ದಿನ ಸಮುದ್ರ ಶಾಂತವಾಗಿತ್ತೆಂಬ ಅಂಶ, ಅದೆ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡ ಹವಾಮಾನ ವರದಿಯ ಜೊತೆ ತಾಳೆ ಹೊಂದುವುದಿಲ್ಲ.

ಮೀಥೇನ್ ಹೈಡ್ರೇಟ್‌ಗಳ ಪತ್ತೆ

ಕೆಲವು ಹಡಗುಗಳು ಮತ್ತು ವಿಮಾನಗಳ ಕಣ್ಮರೆಯ ಹಿಂದೆ ಈ ಪ್ರದೇಶದಲ್ಲಿರುವ ಹೆಚ್ಚು ಪ್ರಮಾಣದ ಮೀಥೇನ್ ಹೈಡ್ರೇಟ್‍ಗಳಿರಬಹುದು ಎಂಬ ವೈಜ್ಞಾನಿಕ ವಿವರಣೆ ಕೂಡ ಇದೆ. ೧೯೮೧ರಲ್ಲಿ ಅಮೇರಿಕಾದ ಭೂಗರ್ಭಶಾಸ್ತ್ರ ಇಲ್ಲಾಖೆಯು ದೇಶದ ದಕ್ಷಿಣಪೂರ್ವ ಕಡಲಲ್ಲಿ ಹೈಡ್ರೇಟ್‌ಗಳು ಪತ್ತೆಯಾಗಿವೆ ಎಂದು ತನ್ನ ಅನ್ವೇಷಣಾ ವರದಿಯಲ್ಲಿ ತಿಳಿಸಿದೆ. ನಿರಂತರ ಮೀಥೇನ್ ಸ್ರವದಿಂದ ಕೆಲ ಸಮುದ್ರ ಭಾಗದಲ್ಲಿ ಜಲಸಾಂದ್ರತೆ ಕಡಿಮೆಯಾಗಿ ಹಡಗುಗಳು ತೇಲಲಾರದೆ ಅನಿರೀಕ್ಷಿತವಾಗಿ ಮುಳುಗುವ ಸಾಧ್ಯತೆ ಇದೆ. ಇದನ್ನು ಪ್ರಯೋಗಗಳಿಂದ ನಿರ್ದಿಷ್ಟಪಡಿಸಲಾಗಿದೆ. ಮೀಥೇನ್ ಅನಿಲ ವಿಮಾನವನ್ನು ಕೂಡ ಕೆಳಕ್ಕುರುಳಿಸಬಲ್ಲದು. ಮೀಥೇನ್ ಅನಿಲ ವಾತವರಣದಲ್ಲಿರುವ ಗಾಳಿಯ ಸಾಂದ್ರತೆಯನ್ನು ಕಮ್ಮಿ ಮಾಡಿ ವಿಮಾನದ ತೇಲುವಿಕೆಯನ್ನು ಕ್ಷಯಿಸಬಹುದು. ವಿಮಾನದ ಎತ್ತರ ಮಾಪಕ ಆಲ್ಟಿಮೀಟರ್ ಕೂಡ ವಾತವರಣದಲ್ಲಿರುವ ಗಾಳಿಯ ಸಾಂದ್ರತೆಯನ್ನು ಆಧಾರಿಸಿಯೆ ಕೆಲಸ ಮಾಡುವುದು. ಹಾಗಾಗಿ ಯಾವಗ ಮೀಥೇನ್ ಅನಿಲ ವಾತವರಣದಲ್ಲಿರುವ ಗಾಳಿಯ ಸಾಂದ್ರತೆಯನ್ನು ಕಮ್ಮಿ ಮಾಡುವುದೊ, ಆಗ ವಿಮಾನ ಕೆಳಗಿದ್ದರು ಬಹಳ ಎತ್ತರದಲ್ಲಿರುವಂತೆ ಭಾಸವಾಗುವುದು. ಮೊಡಕವಿದ ವಾತಾವರಣದಲ್ಲಿ ಹಾಗು ಕತ್ತಲಲ್ಲಿ ಇದು ವಿಮಾನಕ್ಕೆ ಮಾರಕವಾಗಬಹುದು. ಇದಲ್ಲದೆ ಅಲ್ಪ ಪ್ರಮಾಣದ ಮೀಥೇನ್ ವಿಮಾನದ ಇಂಜಿನ್‍ನಲ್ಲಿ ಸೇರಿದರೂ, ಅಲ್ಲಿಯ ಗಾಳಿಯನ್ನು ಹೊರಹಾಕಿ ಇಂಜಿನ್‍ನನ್ನು ಸ್ಥಗಿತಗೊಳಿಸುವುದು. ಇದನ್ನು ಸಹ ಪ್ರಯೋಗಗಳಿಂದ ನಿರ್ದಿಷ್ಟಪಡಿಸಲಾಗಿದೆ

ಅನಿರೀಕ್ಷಿತ ದೊಡ್ಡ ಅಲೆಗಳು

ಅಧ್ಯಯನಗಳ ಪ್ರಕಾರ ಸಮುದ್ರಗಳಲ್ಲಿ ಸುಮಾರು ೩೦ ಮೀಟರ್(೧೦೦ ಅಡಿ)ಎತ್ತರದ ಅಲೆಗಳು ಏಳುವ ಸಾಧ್ಯತೆಗಳಿವೆ. ಬಹಳ ವಿರಳವಾದರು, ಇಂತಹ ಅಲೆಗಳು ಎದ್ದರೆ ಸುಲಭವಾಗಿ ಹಡಗುಗಳನ್ನು ಮುಳುಗಿಸಬಹುದು. ಬರ್ಮುಡಾ ತ್ರಿಕೋಣ ಪ್ರದೇಶದಲ್ಲಿ ಇಂತಹ ಅಲೆಗಳೇಳುವ ಸಂಭವ ಹೆಚ್ಚಾಗಿರುವ ಕಾರಣ, ಕೆಲವು ಹಡಗುಗಳ ಅಲೆಗಳ ಕಾರಣದಿಂದಾಗಿ ಮುಳುಗಿವೆಂಬ ವಿವರಣೆ ಚಾಲ್ತಿಯಲ್ಲಿದೆ.

ದಕ್ಷಿಣ ಅಟ್ಲಾಂಟಿಕ್ ವ್ಯತಿಕ್ರಮ ಪ್ರದೇಶ

ದಕ್ಷಿಣ ಅಟ್ಲಾಂಟಿಕ್ ವ್ಯತಿಕ್ರಮ ಪ್ರದೇಶ ಅಟ್ಲಾಂಟಿಕ್ ಸಾಗರದ ಒಂದು ಭಾಗ. ಇಲ್ಲಿ ವಿದ್ಯುತ್ ತರಂಗಗಳ ಪ್ರವಾಹ ಹೆಚ್ಚಿದ್ದು, ಈ ಪ್ರವಾಹದಿಂದ ಎಲೆಕ್ಟ್ರಾನಿಕ್ ಮಾಪಕಗಳ ಕಾರ್ಯ ಸ್ಥಗಿತ ಮತ್ತು ದಿಕ್ಕ್ಸೂಚಿಗಳ ಮುಳ್ಳಿನ ತಿರುಗುವಿಕೆ ಆಗಿರಬಹುದೆಂಬ ವಿವರಣೆಯಿದೆ.

ಕುತೂಹಲಕಾರಿ ಪ್ರಸಂಗಗಳು

ಬಹಳ ಕುತೂಹಲಕಾರಿ ಪ್ರಕರಣವೆಂದರೆ ಅಮೇರಿಕಾದ ನೌಕಾಪಡೆಯ ೧೯ನೆ ಸಂಖ್ಯೆಯ ವಿಮಾನದಲ್ಲಿದ್ದ ೫ ಜನರ ತಂಡದ ನಿಗೂಢ ಕಣ್ಮರೆ. ಚರ್ಲ್ಸ್ ಬರ್ಲಿಟ್ಜ್ ದಾಖಲಿಸಿದಂತೆ, ಡಿಸೆಂಬರ್ ೫ ೧೯೪೫ರೊಂದು ೫ ನಿಷ್ಣಾತ ವಿಮಾನಚಾಲಕರ ತಂಡ ತರಬೇತಿಗೆಂದು ಫೊರ್ಟ್ ಲೌಡರ್‌ಡೇಲ್, ಫ್ಲೊರಿಡಾ ವಿಮಾನ ಅಡ್ಡೆಯನ್ನು ೧೯ನೆ ಸಂಖ್ಯೆಯ ವಿಮಾನದಲ್ಲಿ ಬಿಟ್ಟಿತು. ವಿಮಾನದಿಂದ ರೇಡಿಯೊ ಮೂಲಕ ವಿಚಿತ್ರ ದೃಶ್ಯಗಳ ದರ್ಶನವಾಗುತ್ತಿರುವ ಬಗ್ಗೆ ತಿಳಿಸಿದ ತಂಡ ಹಾಗೆಯೆ ಕಣ್ಮರೆಯಾಯಿತು. ಬರ್ಲಿಟ್ಜ್ ಪ್ರಕಾರ ಅವರಿದ್ದ ಟಿ.ಬಿ.ಏಮ್ ಅವೆಂಜರ್ ವಿಮಾನ, ನೀರಿನಲ್ಲಿ ತೇಲುವ ಕ್ಷಮತೆ ಹೊಂದಿದ್ದು ದುರ್ಘಟನೆ ಸಂಭವಿಸಿದ್ದರೂ ಕೂಡ ಪ್ರಾಶಾಂತ ಹವಾಮಾನವಿದ್ದ ಆ ದಿನಗಳಲ್ಲಿ, ಕೆಲದಿನಗಳಮಟ್ಟಿಗಾದರೂ ಸಮುದ್ರದಲ್ಲಿ ಅದರ ಅವಶೇಷ ತೇಲುತ್ತಿರಬೆಕಿತ್ತು. ಆದರೆ ನೌಕಾಪಡೆಯು ಶತ ಪ್ರಯತ್ನದ ನಂತರವೂ ಏನು ಸಿಗಲಿಲ್ಲ. ಇದಲ್ಲದೆ ಅದೆ ವಿಮಾನವನ್ನು ಹುಡುಕಿಕೊಂಡು ಹೊದ ನೌಕಾಪಡೆಯ ಇನ್ನೊಂದು ವಿಮಾನ ಕೂಡ ಕಣ್ಮರೆಯಾಯಿತು. ನೌಕಾಪಡೆ ತನ್ನ ತನಿಖಾ ವರದಿಯಲ್ಲಿ ದುರ್ಘಟನೆ "ಗೊತ್ತಿಲ್ಲದ ಕಾರಣಗಳಿಂದಾಗಿ" ಸಂಭವಿಸುತು ಎಂದು ಬರೆದಿದ್ದು ಇನ್ನಷ್ಟು ಕುತೂಹಲ ಕೆರಳಿಸಿತು.

ಬಾಹ್ಯಸಂಪರ್ಕ ಕೊಂಡಿಗಳು

ವಿಶ್ವ ಭೂಪಟದಲ್ಲಿ ಬರ್ಮುಡಾ ತ್ರಿಕೋಣದ ವಿವರ
ಯು.ಸಿ.ಜಿ.ಎಸ್ ನ ಅನಿಲ ಹೈಡ್ರೇಟ್‌ಗಳ ಮುಖ್ಯ ಪುಟ.
ಅಮೇರಿಕಾ ನೌಕಾಪಡೆಯ ಐತಿಹಾಸಿಕ ಕೆಂದ್ರದ ಪ್ರಶ್ನೋತ್ತರ ಪುಟ.
೧೯ನೆ ಸಂಖ್ಯೆಯ ವಿಮಾನದ ಬಗ್ಗೆ ಪ್ರಶ್ನೋತ್ತರ.
ಬರ್ಮುಡಾ-ಟ್ರಯಾಂಗಲ್.ಒಅರ್‌ಜಿ ತಾಣ.

Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
ಬರ್ಮುಡಾ ತ್ರಿಕೋಣ ಗೆ ಇನ್ನೂ ಯಾವುದೇ ಸಲಹೆಗಳು ಅಥವಾ ಸುಳಿವುಗಳಿಲ್ಲ. ಸಹ ಪ್ರಯಾಣಿಕರಿಗೆ ಉಪಯುಕ್ತ ಮಾಹಿತಿಯನ್ನು ಪೋಸ್ಟ್ ಮಾಡುವವರಲ್ಲಿ ನೀವು ಮೊದಲಿಗರಾಗಿರಬಹುದು? :)
Grace Bay Club

starting $504

Blue Haven Resort - All Inclusive

starting $428

The Atrium Resort

starting $537

Royal West Indies

starting $270

Ocean Club West Resort

starting $0

Caribbean Paradise Inn

starting $225

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಆಲ್ಕಟ್ರಾಝ್

ಆಲ್ಕಟ್ರಾಝ್ ಸುಮಾರು ೧೮.೮೬ (೭.೬೩ ಹೆಕ್ಟೇರ್) ಎಕರೆಜಾಗದಲ್ಲಿ ೧೯೩೪ ನೆ ಇಸ

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Winchester Mystery House

The Winchester Mystery House is a well-known California mansion that

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Government House (Saskatchewan)

Government House, Regina, Saskatchewan, was constructed as a residence

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Andrew Bayne Memorial Library

The Andrew Bayne Memorial Library is a public library in Bellevue, a

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Goodleburg Cemetery

Goodleburg Cemetery is a cemetery located in Wales, New York. It is

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ