ಜಾಮಾ ಮಸೀದಿ, ದೆಹಲಿ

Coordinates: 28°39′04″N 77°14′02″E / 28.651°N 77.234°E / 28.651; 77.234

Jama Masjid
alt=
Location Delhi, India
Branch/tradition Barelvi Hanafi
Architectural information
Style Islamic
Capacity 85,000
Length 80 m
Width 27 m
Dome(s) 3
Minaret(s) 2
Minaret height 41 m

ಮುಖ್ಯ ಮುಂಭಾಗದ ನೋಟ ಜಾಮಾ ಮಸೀದಿ, ದೆಹಲಿ, 1852. ಜಾಮಾ ಮಸೀದಿಯ ಗುಮ್ಮಟ ಚೌಕದ ದೃಶ್ಯಾವಳಿ

ಮಸ್ಜಿದ್-ಐ ಜಹಾನ್-ನುಮಾ (ಪರ್ಸಿಯನ್: مسجد جھان نما, ವಿಶ್ವದ ಪ್ರತಿಧ್ವನಿಸುವ ಮಸೀದಿ), ಇದನ್ನು ಸಾಮಾನ್ಯವಾಗಿ ದಿಲ್ಲಿಯ ಜಾಮಾ ಮಸೀದಿ ಎಂದು ಹೇಳಲಾಗುತ್ತದೆ. ಇದು ಭಾರತದ ಹಳೆ ದೆಹಲಿಯ ದೊಡ್ಡ ಮಸೀದಿ ಎಂದು ಕರೆಯಲ್ಪಡುತ್ತದೆ. ಇದು ತಾಜ್ ಮಹಲ್ ನಿರ್ಮಾತೃ ಮೊಘಲ್ ಸಾಮ್ರಾಟ ಶಹ ಜಹಾನ್ ಒಡೆತನದಲ್ಲಿತ್ತು. ಮತ್ತು ಇದನ್ನು ಕ್ರಿ.ಪೂ. 1656ರಲ್ಲಿ ಮಸೀದಿ ಕಟ್ಟಡ ಕಾಮಗಾರಿಯನ್ನು ಪೂರೈಸಲಾಯಿತು. ಇದು ಭಾರತದಲ್ಲಿಯೇ ಅತಿದೊಡ್ಡ ಮತ್ತು ಉತ್ತಮವಾಗಿ ಮೂಡಿಬಂದ ಮಸೀದಿಯಾಗಿದೆ. ಇದು ಹಳೆ ದೆಹಲಿಯ ಅತಿ ಜನಸಂದಣಿ ಇರುವ ಹಾಗೂ ಮಧ್ಯಭಾಗದಲ್ಲಿರುವ ಚವಾರಿ ಬಜಾರ್ ರಸ್ತೆಯ ಮಾರ್ಗದಲ್ಲಿ ಬರುತ್ತದೆ.

ಜಾಮಾ ಮಸೀದಿ ಎಂಬುದು ನಂತರದ ಹೆಸರಾಗಿದ್ದು, ಇಲ್ಲಿ ವಾರದ ಪ್ರತಿ ಶುಕ್ರವಾರ ಮಧ್ಯಾಹ್ನ ಮುಸ್ಲಿಂರು ಪ್ರಾರ್ಥನೆಗಾಗಿ ಜುಮ್ಮಾದಲ್ಲಿ ಸೇರುತ್ತಾರೆ. ಮಸೀದಿಗಳಲ್ಲಿ ಸಾಮಾನ್ಯವಾಗಿ ಪ್ರಾರ್ಥನೆ ನಡೆಯುತ್ತದೆ. ಇದನ್ನು ಪ್ರಾರ್ಥನಾ ಮಸೀದಿ ಅಥವಾ ಜಾಮಿ ಮಸೀದಿ ಎಂದು ಕರೆಯುತ್ತಾರೆ. ಮಸೀದಿಯ ಆವರಣದೊಳಗೆ ಸುಮಾರು 25 ಸಾವಿರ ಮಂದಿ ಭಕ್ತರು ಒಟ್ಟಿಗೆ ಸೇರುವ ಸ್ಥಳಾವಕಾಶವಿದೆ. ಈ ಮಸೀದಿಯ ಉತ್ತರ ಗೇಟ್ ಬಳಿ ಕೆಲ ಮಹಾತ್ಮರ ಅವೇಶಷಗಳು ಪತ್ತೆಯಾಗಿವೆ. ಇದರಲ್ಲಿ ಕುರಾನ್‌ (Qur'an) ಜಿಂಕೆ ಚರ್ಮದ ಮೇಲೆ ಬರೆದ ಪುರತಾನ ಪ್ರತಿ ಲಭ್ಯವಾಗಿದೆ.

ನಿರ್ಮಾಣ

ಐತಿಹಾಸಿಕ ಜಾಮಾ ಮಸೀದಿಯನ್ನು (ಶುಕ್ರವಾರದ ಮಸೀದಿ) ಶಹಜಹಾನಾಬಾದ್ ದಿಬ್ಬ (ಸಣ್ಣ ಗುಡ್ಡ)ದಲ್ಲಿ ನಿರ್ಮಿಸಲಾಯಿತು. ಇದನ್ನು ಭಾರತದ ಮೊಘಲ್ ಸಾಮ್ರಾಜ್ಯದ 5ನೇ ರಾಜ ಜಹಜಹಾನ್ ಕ್ರಿ.ಪೂ. 1650 ಅಕ್ಟೋಬರ್ 6ರಂದು ಕಟ್ಟಿಸಿದನು. (10th Shawwal 1060 AH). ಈ ಮಸೀದಿಯನ್ನು ನಿರ್ಮಾಣ ಮಾಡಲು ಸುಮಾರು 6 ವರ್ಷಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳಲಾಯಿತು. ಇದಕ್ಕಾಗಿ ಸುಮಾರು 5,000ಕ್ಕೂ ಹೆಚ್ಚು ಕಾರ್ಮಿಕರು ದುಡಿದಿದ್ದಾರೆ. ಇದಕ್ಕೆ ತಗುಲಿದ ಒಟ್ಟು ವೆಚ್ಚ ಆಗಿನ ಕಾಲದಲ್ಲಿ 10 ಲಕ್ಷ (ಒಂದು ಮಿಲಿಯನ್) ರುಪಾಯಿ ಆಗಿದ್ದು. ಇದೇ ರಾಜ ಆಗ್ರಾದಲ್ಲಿ ತಾಜ್ ಮಹಲ್ ಅನ್ನು ನಿರ್ಮಿಸಿದ್ದಾನೆ. ಮತ್ತು ಜಾಮಾ ಮಸೀದಿ ಎದುರಿಕೆ ಕೆಂಪುಕೋಟೆಯನ್ನು ಸಹ ಈತ ನಿರ್ಮಿಸಿದ್ದಾನೆ. ಇದನ್ನು ಕ್ರಿ.ಪೂ. 1656ರಲ್ಲಿ ಅಂತಿಮವಾಗಿ ನಿರ್ಮಾಣ ಮಾಡಲಾಯಿತು. ಇದು 3 ದೊಡ್ಡ ಗೇಟ್ (ಬಾಗಿಲು) ಅನ್ನು ಹೊಂದಿದ್ದು, ನಾಲ್ಕು ಗೋಪುರಗಳಿವೆ. ಮತ್ತು ಎರಡು 40 ಮೀಟರ್ ಉದ್ದದ ಮಸೀದಿಯ ಸ್ತಂಭಗೋಪುರವನ್ನು ಕೆಂಪು ಕಲ್ಲು ಮತ್ತು ಬಿಳಿ ಬಣ್ಣದ ಮಾರ್ಬಲ್ಸ್ ನಿಂದ ನಿರ್ಮಿಸಲಾಗಿದೆ.

ದೆಹಲಿ, ಆಗ್ರಾ, ಅಜ್ಮೀರ್ ಮತ್ತು ಲಾಹೋರ್‌‍ಗಳಲ್ಲಿ ಶಹಜಹಾನ್ ಹಲವಾರು ಮುಖ್ಯವಾದ ಮಸೀದಿಗಳನ್ನು ನಿರ್ಮಿಸಿದ್ದಾನೆ. ಜಾಮಾ ಮಸೀದಿಯ ಮಹಡಿ ಯೋಜನೆಯು ಆಗ್ರಾ ಸಮೀಪದ ಫಾತೇಪುರ್ ಸಿಕ್ರಿ, ಜಾಮಾ ಮಸೀದಿಯನ್ನು ಹೋಲುತ್ತದೆ. ಆದರೆ ದೆಹಲಿಯಲ್ಲಿರುವ ಜಾಮಾ ಮಸೀದಿಯು ಈ ಎರಡಕ್ಕಿಂತಲೂ ಎರಡುಪಟ್ಟು ದೊಡ್ಡದಾಗಿ ನಿರ್ಮಾಣವಾಗಿದೆ. ನಂತರದಲ್ಲಿ ಇದರ ಮಹತ್ವವೂ ಕೂಡ ಹೆಚ್ಚುತ್ತಾ ಹೋಯಿತು. ಏಕೆಂದರೆ ಈತ ಈ ಮಸೀದಿಯನ್ನು ನಿರ್ಮಾಣ ಮಾಡಲು ವಿಸ್ತಾರವಾದ ಪ್ರದೇಶವನ್ನು ಆಯ್ಕೆಮಾಡಿದ್ದ. ಸ್ವಲ್ಪಮಟ್ಟಿಗೆ ದೊಡ್ಡದಾಗಿ ಕಾಣುವ ಲಾಹೋರ್ ನ ಬಾದಶಾಹಿ ಮಸೀದಿಯನ್ನು ಶಹಜಹಾನ್ ಮಗನಾದ ಔರಂಗಾಜೇಬ್ 1673ರಲ್ಲಿ ಕಟ್ಟಿಸಿದ. ಇದು ನೋಡಲು ದೆಹಲಿಯಲ್ಲಿರುವ ಜಾಮಾ ಸಮೀದಿಯನ್ನು ಹೋಲುತ್ತದೆ.

ವಾಸ್ತುಶಿಲ್ಪ

ಮಸೀದಿಯ ಆವರಣವು ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಮೂರು ಹಂತವಾಗಿ ನಿರ್ಮಾಣವಾಗಿದೆ. ಎಲ್ಲವನ್ನೂ ಕೆಂಪು ಮರಳುಶಿಲೆಯಿಂದ ನಿರ್ಮಿಸಲಾಗಿದೆ. ಉತ್ತರ ಭಾಗದ ಬಾಗಿಲು (ಗೇಟ್) ಮೂವತ್ತೊಂಬತ್ತು ಹಂತಗಳನ್ನು (ಸ್ಟೆಪ್ಸ್) ಹೊಂದಿದೆ. ಮಸೀದಿಯ ದಕ್ಷಿಣ ಭಾಗವು ಮೂವತ್ತಮೂರು ಹಂತಗಳನ್ನು ಹೊಂದಿದೆ. ಪೂರ್ವ ಭಾಗದ ಬಾಗಿಲು ಪ್ರಧಾನ ಬಾಗಿಲಾಗಿದ್ದು ಇದು 35 ಹಂತಗಳನ್ನು ಹೊಂದಿದೆ. ಈ ಹಂತಗಳನ್ನು ಮನೆಗಳ ಆಹಾರ ಮಳಿಗೆಗಳು, ಅಂಗಡಿಗಳು ಮತ್ತು ಬೀದಿ ಕಲಾವಿದರಿಗೆ ಬಳಸಲಾಗುತ್ತಿತ್ತು. ಮಸೀದಿಯ ಪೂರ್ವ ಭಾಗವು ಸಂಜೆ ವೇಳೆಗೆ ವ್ಯಾಪಾರ ಮಳಿಗೆಗಳಾಗಿ ಬದಲಾವಣೆಯಾಗುತ್ತಿದ್ದವು. ಇಲ್ಲಿ ಕೋಳಿ ಹಾಗೂ ಹಕ್ಕಿಗಳನ್ನು ಮಾರಾಟ ಮಾಡಲಾಗುತ್ತಿತ್ತು. 1857ರ ಭಾರತ ಸ್ವಾತಂತ್ರ್ಯ ಹೋರಾಟಕ್ಕಿಂತ ಮುಂಚಿತವಾಗಿ ಉತ್ತರ ಭಾಗದ ಸಮೀಪ ಮದರಸಾವನ್ನು ಸ್ಥಾಪಿಸಲಾಗಿತ್ತು. ಈ ದಂಗೆಯ ನಂತರ ಇದನ್ನು ಕೆಡವಲಾಯಿತು.

ಮಸೀದಿಯು ಪಶ್ಚಿಮ ದಿಕ್ಕಿಗೆ ಮುಖವನ್ನು ಮಾಡಿದೆ. ಇದರ ಮೂರು ಭಾಗಗಳು ಕಮಾನಿನಾಕಾರದ ಸಾಲುಮರಗಳಿಂದ ಆವೃತವಾಗಿವೆ. ಈ ಎಲ್ಲವೂ ಉತ್ತುಂಗ ಶಿಖರದ ಗೋಪುರಗಳಂತೆ ಬಾಗಿಲಿನ ದಾರಿಯ ಮಧ್ಯಭಾಗದಲ್ಲಿ ಕಾಣಸಿಗುತ್ತದೆ. ಈ ಮಸೀದಿಯು 261 ಅಡಿ (80 ಮೀ) ಉದ್ದ ಹಾಗೂ 90 ಅಡಿ (27 ಮೀ) ಅಗಲವನ್ನು ಹೊಂದಿದೆ. ಮತ್ತು ಇದರ ಮೇಲ್ಚಾವಣಿಯು ಮಹಲುಗಳನ್ನು ಹೊಂದಿದ್ದು, ಜತೆಗೆ ಇದಕ್ಕೆ ಬದಲೀ ವ್ಯವಸ್ಥೆಯಾಗಿ ಬಿಳಿ ಮತ್ತು ಕಪ್ಪು ಬಣ್ಣದ ಮಾರ್ಬಲ್ಸ್ ಪಟ್ಟೆಯನ್ನು ನೀಡಲಾಗಿತ್ತು. ಇದರ ತುತ್ತತುದಿಗಿರುವ ಭಾಗವು ಬಂಗಾರದಿಂದ ಆವೃತವಾಗಿತ್ತು. ಎರಡು ಉತ್ತುಂಗದ ಮಸೀದಿಯ ಸ್ತಂಭಗೋಪುರವು 130 ಅಡಿ (41ಮೀ) ಉದ್ದ, ಮತ್ತು 130 ಹಂತಗಳನ್ನು ಹೊಂದಿದ್ದು, ಇದರುದ್ದಕ್ಕೂ ಬಿಳಿ ಮಾರ್ಬಲ್ ಮತ್ತು ಕೆಂಪು ಉಸುಕುಶಿಲೆಯ ಪಟ್ಟಿಯನ್ನು ಬಳಸಲಾಗಿದೆ. ಇದನ್ನು ಮಹಲಿನ ಪಾರ್ಶ್ವ ಭಾಗದಲ್ಲಿ ಕಾಣಬಹುದಾಗಿದೆ. ಮಸೀದಿಯ ಸ್ತಂಭಗೋಪುರ ಮೂರು ಗ್ಯಾಲರಿಗಳಿಂದ ವಿಭಾಗಿಸಲ್ಪಟ್ಟಿದೆ. ಮತ್ತು ಮೇಲೆ 12 ಬದಿಗಳಲ್ಲಿ ತೆರೆದ ಮಹಲುಗಳ ಪ್ರದೇಶಗಳನ್ನು ಕಾಣಬಹುದಾಗಿದೆ. ಮಸೀದಿಯ ಹಿಂಭಾಗದಲ್ಲಿ ಪೂರ್ಣಗೊಂಡಿರುವ ನಾಲ್ಕು ಸಣ್ಣ ಮಸೀದಿಯ ಸ್ತಂಭಗೋಪುರವು ಮುಂಭಾಗದಲ್ಲಿರುವ ಸ್ತಂಭಗೋಪುರದಂತೆ ಕಾಣುತ್ತವೆ.

ಮಸೀದಿಯ ಒಳಗಿರುವ ಮಹಲುಗಳ ಕೆಳಗೆ ಇರುವ ಸಭಾಂಗಣದಲ್ಲಿ ಏಳು ಕಮಾನುಗಳುಳ್ಳ ಬಾಗಿಲುಗಳು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ನಿಂತಿವೆ. ಮತ್ತು ಮಸೀದಿಯ ಗೋಡೆಗಳು ಅದರ ಉದ್ದದ ನಡುವಿನ ಭಾಗವು ಮಾರ್ಬಲ್ ಗಳಿಂದ ಆವೃತವಾಗಿವೆ. ಇದರ ಆಚೆ ಪ್ರಾರ್ಥನಾ ಸಭಾಂಗಣವಿದ್ದು, ಇದು 61 ಮೀಟರ್ X 27.5 ಮೀಟರ್ ಸುತ್ತಳತೆಯನ್ನು ಹೊಂದಿದೆ. ಜತೆಗೆ ಹನ್ನೊಂದು ಕಮಾನುಗುಳುಳ್ಳ ದ್ವಾರಬಾಗಿಲನ್ನು ಹೊಂದಿದ್ದು, ಇದರ ಮಧ್ಯವಿರುವ ಕಮಾನು ಬಾಗಿಲು ಅಗಲವಾಗಿ ಮತ್ತು ಎತ್ತರವಾಗಿ ನಿರ್ಮಾಣ ಹೊಂದಿದೆ. ಮತ್ತು ದಪ್ಪವೂ ಸ್ಥೂಲವೂ ಆದ (ಘನವಾದ) ಮುಂಬಾಗಿಲನ್ನು ಹೊಂದಿದೆ. ಎಲ್ಲ ಬದಿಗಳಲ್ಲೂ ತೆಳ್ಳಗಿನ ಸ್ತಂಭಗೋಪುರವನ್ನು ನಿರ್ಮಾಣ ಮಾಡಲಾಗಿದೆ. ಜತೆಗೆ ಅಷ್ಟಭುಜಾಕೃತಿಯಲ್ಲಿ ಮೇಲ್ಭಾಗದ ಪ್ರದೇಶವನ್ನು ನಿರ್ಮಿಸಲಾಗಿದೆ. ಈ ಎಲ್ಲ ಕಮಾನು ಪ್ರವೇಶ ದ್ವಾರಗಳು ಬಿಳಿ ಮಾರ್ಬಲ್ ನ ಫಲಕವನ್ನು ಹೊಂದಿದ್ದು, 4 ಅಡಿ (1.2 ಮೀ) ಉದ್ದ 2.5 ಅಡಿ (760 ಮಿ.ಮೀ) ಅಗಲವನ್ನು ಹೊಂದಿದ್ದು, ಕಪ್ಪು ಮಾರ್ಬಲ್ ಅಕ್ಷರಗಳಿಂದ ಕೆತ್ತಲಾಗಿದೆ. ಇದರಲ್ಲಿ ಮಸೀದಿ ನಿರ್ಮಾಣದ ಇತಿಹಾಸವನ್ನು ಬರೆಯಲಾಗಿದೆ. ಮತ್ತು ಶಹಜಹಾನ್ ನ ಆಳ್ವಿಕೆ ಮತ್ತು ಸಾಮರ್ಥ್ಯವನ್ನು ಇದರಲ್ಲಿ ವೈಭವೀಕರಿಸಲಾಗಿದೆ. ಮಧ್ಯಭಾಗದ ಕಮಾನಿನ ಮೇಲೆ ‘ದಿ ಗೈಡ್’ (ದಾರಿತೋರಿಸುವಾತ) ಎಂದು ಬರೆಯಲಾಗಿದೆ.

ಮಸೀದಿಯ ಜಗಲಿಯನ್ನು 5 ಅಡಿ (1.5 ಮೀ) ಹಾಸುಗಲ್ಲಿನಿಂದ ಟೆರಾಸ್ ವರೆಗೆ ನಿರ್ಮಿಸಲಾಗಿದೆ. ಮಸೀದಿಯ ಒಳಗೆ ಮೂರು ಹಂತಗಳನ್ನು ಮುಖ್ಯವಾಗಿ ನಿರ್ಮಿಸಲಾಗಿದೆ. ಇದನ್ನು ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ರಚಿಸಲಾಗಿದೆ. ಮಸೀದಿಯ ಮಹಡಿಯು ಬಿಳಿ ಮತ್ತು ಕಪ್ಪು ಮಾರ್ಬಲ್ ಗಳಿಂದ ಆವೃತವಾಗಿದ್ದು, ಇದರ ಅಲಂಕಾರಿಕಾ ವಸ್ತುಗಳು ಮುಸ್ಲಿಂ ರ ಪ್ರಾರ್ಥನಾ ಮ್ಯಾಟ್ ಅನ್ನು ಹೋಲುವಂತಿದೆ. ತೆಳುವಾದ ಕಪ್ಪು ಮಾರ್ಬಲ್ ಪಟ್ಟಿಯನ್ನು ಭಕ್ತರ ಅನುಕೂಲಕ್ಕಾಗಿ ಗುರುತಿಸಲಾಗಿದೆ. ಇದು 3 ಅಡಿ ಉದ್ದ ಹಾಗೂ ಒಂದೂವರೆ ಅಡಿ ಅಗಲವನ್ನು ಹೊಂದಿದೆ. ಒಟ್ಟಾರೆಯಾಗಿ 899 ಕಡೆಗಳಲ್ಲಿ ಗುರುತುಗಳನ್ನು ಮಸೀದಿಯ ಮಹಡಿಯಲ್ಲಿ ಮಾಡಲಾಗಿದೆ. ಮಸೀದಿಯ ಹಿಂಭಾಗದಲ್ಲಿ ಉದ್ದನೆಯ ಶಿಲೆ ಇದ್ದು, ಮಸೀದಿಯು ಈ ಶಿಲೆಗಲ್ಲುಗಳ ಜತೆ ನಿರ್ಮಿತವಾಗಿದೆ.

ಭಯೋತ್ಪಾದನಾ ಘಟನೆಗಳು

2006 ಬಾಂಬ್ ಸ್ಫೋಟ

Main article: 2006 Jama Masjid explosions

2006 ಏಪ್ರಿಲ್ 14ರಂದು, ಜಾಮಾ ಮಸೀದಿಯಲ್ಲಿ ಎರಡು ಬಾರಿ ಬಾಂಬ್ ಸ್ಫೋಟ ಸಂಭವಿಸಿತು. ಮೊದಲ ಬಾಂಬ್ ಸ್ಫೋಟವು ಸುಮಾರು 5.26 ನಿಮಿಷಕ್ಕೆ ಸಂಭವಿಸಿದರೆ, ಎರಡನೇ ಸ್ಫೋಟ ಸುಮಾರು 5.33ಕ್ಕೆ (ಐಎಸ್ ಟಿ) ಸಂಭವಿಸಿತು. ಇದರಲ್ಲಿ ಕೊನೆಪಕ್ಷ 13 ಮಂದಿ ಗಾಯಗೊಂಡಿದ್ದರು. ಈ ಸ್ಫೋಟವನ್ನು ಶುಕ್ರವಾರದಂದು ಮಾಡಲಾಗಿದ್ದು, ಈ ಸ್ಫೋಟ ಸಂದರ್ಭದಲ್ಲಿ ಮಸೀದಿಯಲ್ಲಿ ಸುಮಾರು 1000 ಜನರು ಪ್ರಾರ್ಥನೆಗಾಗಿ ಜಮಾವಣೆಗೊಂಡಿದ್ದರು. ಇದು ಮುಸ್ಲಿಂರ ಪುಣ್ಯ ದಿನವಾಗಿತ್ತು. ಏಕೆಂದರೆ ಇದು ಮಲಿದ್ ಅನ್ ನಬಿ, ಇಸ್ಲಾಮಿಕ್ ಪ್ರವಾದಿ ಮೊಹಮ್ಮದ್ ಜನ್ಮದಿನವಾಗಿತ್ತು. ಈ ಮಸೀದಿಯ ವಕ್ತಾರ ಹೇಳುವಂತೆ, ಈ ಘಟನೆಯಿಂದ ಮಸೀದಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.

2010 ಗುಂಡಿನ ದಾಳಿ

2010 ಸೆಪ್ಟೆಂಬರ್ 15ರಂದು ಮಸೀದಿಯ 3ನೇ ಬಾಗಿಲಿನ ಸಮೀಪವಿರುವ ಬೈಕ್‌‍ನಿಂದ ಬಂದವರು ಬಸ್‌ ಮೇಲೆ ಬಹಿರಂಗವಾಗಿ ಗುಂಡು ಹಾರಿಸಿದ್ದರಿಂದ ಇಬ್ಬರು ಥೈವಾನಿ ಪ್ರವಾಸಿಗರು ಗಾಯಗೊಂಡಿದ್ದರು.

ಚಿತ್ರಸಂಪುಟ

ಜಾಮಾ ಮಸೀದಿಯ ಇಮಾಮರುಗಳು

  • 1) ಸೈಯದ್ ಅಬ್ದುಲ್ ಗಫೂರ್ ಶಾಹ್ ಬುಕಾರಿ ಶಾಹಿ ಇಮಾಮ್
  • 2) ಸೈಯದ್ ಅಬ್ದುಲ್ ಶಕೂರ್ ಶಾಹ್ ಬುಕಾರಿ ಶಾಹಿ ಇಮಾಮ್
  • 3) ಸೈಯದ್ ಅಬ್ದುಲ್ ರಹೀಮ್ ಶಾಹ್ ಬುಕಾರಿ ಶಾಹಿ ಇಮಾಮ್
  • 4)ಸೈಯದ್ ಅಬ್ದುಲ್ ಗಫೂರ್ ಶಾಹ್ ಬುಕಾರಿ ಥಾನಿ ಶಾಹಿ ಇಮಾಮ್
  • 5) ಸೈಯದ್ ಅಬ್ದುಲ್ ರೆಹಮಾನ್ ಶಾಹ್ ಬುಕಾರಿ ಶಾಹಿ ಇಮಾಮ್
  • 6)ಸೈಯದ್ ಅಬ್ದುಲ್ ಕರೀಮ್ ಶಾಹ್ ಬುಕಾರಿ ಶಾಹಿ ಇಮಾಮ್
  • 7)ಸೈಯದ್ ಮೀರ್ ಜೀವನ್ ಶಾಹ್‌ ಬುಕಾರಿ ಶಾಹಿ ಇಮಾಮ್
  • 8)ಸೈಯದ್ ಮೀರ್ ಅಹಮದ್ ಅಲಿ ಶಾಹ್ ಬುಕಾರಿ ಶಾಹಿ ಇಮಾಮ್
  • 9)ಸೈಯದ್ ಮೊಹಮದ್ ಶಾಹ್ ಬುಕಾರಿ ಶಾಹಿ ಇಮಾಮ್
  • 10)ಮೌಲಾನಾ ಸೈಯದ್ ಅಹಮದ್ ಬುಕಾರಿ ಶಾಹಿ ಇಮಾಮ್
  • 11)ಮೌಲಾನಾ ಸೈಯದ್ ಹಮೀದ್ ಬುಕಾರಿ ಶಾಹಿ ಇಮಾಮ್
  • 12) ಸೈಯದ್ ಅಬ್ದುಲ್ಲಾ ಬುಕಾರಿ [1]
  • 13) ಸೈಯದ್ ಅಹಮ್ಮದ್ ಬುಕಾರಿ[2]

ಜಾಮಿಯಾ ಮಸಿದಿಯ ಇಮಾಮ್‌ರ ಇತಿಹಾಸ, ದೆಹಲಿ, ಭಾರತ[3]

ಇವನ್ನೂ ನೋಡಿ

  • ಇಸ್ಲಾಮಿಕ್‌ ವಾಸ್ತುಶೈಲಿ
  • ಮುಸ್ಲಿಂ ಕಲೆ
  • ಸಾಹ್ನ್‌
  • ಇಸ್ಲಾಮಿಕ್ ಇತಿಹಾಸದ ಕಾಲಘಟ್ಟ

ಟಿಪ್ಪಣಿಗಳು

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:
ಜಾಮಾ ಮಸೀದಿ, ದೆಹಲಿ
ಬಿಂಬಗಳು

</center>





ವರ್ಗ:ಐತಿಹಾಸಿಕ ಸ್ಮಾರಕಗಳು ವರ್ಗ:ಭಾರತದ ಇತಿಹಾಸ


Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
Sheikh Nuruzzaman
1 January 2016
Definitely visit this historic Mosque if you are in Delhi and don't forget to enjoy the birds eye view of Old Delhi from one of it's Minar!
Chetu19
9 October 2015
Walking distance from chandni chowk metro station and Red fort. I had been during Ramzan. The crowd was so much that its a delight to watch. Have food @ karim. Parcel it.
Shantanu Srivastava
7 August 2014
Also, now that you're here and want lip-smacking non-veg food, do try Karim's or Jawahar in the lane opposite to Gate #1. Classics.
Swen Graham
17 December 2014
You can climb the minarets for a small fee and a decent amount of heavy breathing. The view is worth it.
Veysel Soylu
9 April 2017
"Tam adı Masjid-i Jahān-Numā, bilinen adıyla Jama (Cemaat) Camiidir. Eski Delhi'nin başlıca en büyük camiidir. Hindistan’ın Beşinci Babür İmparator’u Şah Cihan tarafından yaptırılmıştır.
Frankspotting @teporingo Carlos Alberto
Una mesquita de alto tránsito con historia y 3 estilos arquitectónicos cerca del mercado de especias. Lleva ropa que cubra hombros y piernas particularmente mujeres puedes rentas telas para cubrirte.
7.8/10
Barsuk ಮತ್ತು 6,547 ಹೆಚ್ಚಿನ ಜನರು ಇಲ್ಲಿದ್ದಾರೆ
WelcomHeritage Haveli Dharampura

starting $139

Aiwan-e-Shahi

starting $30

Hotel Al Gulzar

starting $28

Hotel Tara Palace Chandni Chowk

starting $28

Hotel Arina Inn

starting $26

Hotel Wall City

starting $36

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Red Fort

The Delhi Fort also known as Lal Qil'ah, or Lal Qila (Hindi: लाल क़िला

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Moti Masjid (Delhi)

The Moti Masjid (Hindi: मोती मस्जिद, Urdu: موتی مسجد, translat

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Fatehpuri Masjid

Fatehpuri Masjid is located at the western end of the oldest street of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Nigambodh Ghat

Nigambodh Ghat is located on the banks of the Yamuna river coast in

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Raj Ghat and associated memorials

Raj Ghat (Hindi: राज घाट) is a memorial to Mahatma Gandhi. It is a bla

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Agrasen ki Baoli

Agrasen ki Baoli (also known as Agrasen ki Baoli), designated a

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Hanuman Temple, Connaught Place

Hanuman Temple in Connaught Place, New Delhi, is an ancient (pracheen

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ತ್ರಿಯುಗಿ ನಾರಾಯಣ

ತ್ರಿಯುಗಿ ನಾರಾಯಣ ಭಾರತದ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Murat Paşa Mosque

The Murat Paşa Mosque (Turkish: Murat Paşa Camii) is an Ottoman m

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Blue Mosque, Tabriz

The Blue Mosque (فارسی. مسجد کبود Masjed-e Kabud, azərbaycanca

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Jamali Kamali Mosque and Tomb

Jamali Kamali Mosque and Tomb located in the Archeological Village

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Hassan II Mosque

The Hassan II Mosque (العربية. مسجد الحسن الثاني), locate

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Mosque of Cristo de la Luz

Christ of the Light or Cristo de la Luz is the only of the ten former

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ