ಚಿಚೆನಿಟ್ಜ್

ಚಿಚೆನಿಟ್ಜ್ (pronounced ; Yucatec Maya: Chi'ch'èen Ìitsha', "ಇದು ಮೂಲದಲ್ಲಿ ಒಂದು ಜಲವೇಗದ ಬಾವಿಯಲ್ಲಿದ್ದಇಟ್ಜಾ") ಪ್ರಖ್ಯಾತ ಅತಿದೊಡ್ಡಪೂರ್ವ-ಕೊಲಂಬಿಯನ್ ನಪುರಾತತ್ವ ಪ್ರದೇಶವಾಗಿದೆ. ಇದು ಮಾಯಾ ನಾಗರಿಕತೆ ಯಿಂದ ನಿರ್ಮಿಸಲ್ಪಟ್ಟಿದೆ.ಇದು ಉತ್ತರದ ಯುಕಾಟಾನ್ ದ್ವೀಪ,ದ ಮಧ್ಯ ನೆಲೆಸಿದ್ದು ಯುಕಾಟಾನ್ ರಾಜ್ಯದಲ್ಲಿದೆ, ಇಂದಿನ-ಕಾಲದ ಮೆಕ್ಸಿಕೊದಲ್ಲಿದೆ

ಚಿಚೆನಿಟ್ಜ್ ಉತ್ತರ ಮಾಯಾದ ಇಳಿಜಾರು ಕಣಿವೆ ಪ್ರದೇಶದ ಹಿಂದಿನಲೇಟ್ ಕ್ಲಾಸಿಕ್ ನಲ್ಲಿದ್ದು ಅದರ ಕೇಂದ್ರ ಸ್ಥಾನ ಟೆರ್ಮಿನಲ್ ಕ್ಲಾಸಿಕ್ ಮೂಲಕ ಹಾದು ಹೋಗುತ್ತದೆ.ಅಲ್ಲದೇ ಅದರ ಪೂರ್ವ ಆರಂಭಿಕ ಪೊಸ್ಟ್ ಕ್ಲಾಸಿಕ್ ಸಮಯದಲ್ಲಿ ನಿರ್ಮಾಣಗೊಂಡಿದೆ. ಈ ಪ್ರದೇಶವು ವಿವಿಧ ಪ್ರದೇಶದ ಹವಾಗುಣದ ಪುರಾತತ್ವದ ಶೈಲಿಗಳನ್ನು ಕಣ್ಮುಂದೆ ತರುತ್ತದೆ.ಅದನ್ನು "ಮೆಕ್ಸಿಕನೈಸ್ಡ್ "ಎಂದೂ ಹೇಳಲಾಗುತ್ತದೆ.ಕೇಂದ್ರ ಮಿಕ್ಸಿಕೊ ಭಾಗದಲ್ಲಿನ ಪೂಕ್ ವರೆಗೆ ವಿಭಿನ್ನ ಶೈಲಿಗಳು ಇಲ್ಲಿ ಗೋಚರಿಸುತ್ತವೆ.ಉತ್ತರ ಇಳಿಜಾರು ಪ್ರದೇಶದ ಪೂಕ್ ಮಾಯಾ ಸ್ಥಳದ ಹೆಗ್ಗುರುತುಗಳನ್ನು ಉಳಿಸಿದೆ. ಕೇಂದ್ರ ಮೆಕ್ಸಿಕನ್ ಶೈಲಿಗಳ ಅಸ್ತಿತ್ವವು ಈ ಹಿಂದಿನ ನೇರ ವಲಸೆಯಿಂದ ಅದರ ಪ್ರತಿನಿಧಿಯಂತೆ ಕಾಣುತ್ತವೆ.ಇಲ್ಲವೆ ಅದು ಕೇಂದ್ರ ಮಿಕ್ಸಿಕೊದ ವಿಜಯದ ಗುರುತಾಗಿಯೂ ಇರಬಹುದು.ಆದರೆ ಕೆಲವು ಸಮಕಾಲೀನ ವ್ಯಾಖ್ಯಾನಕಾರರ ಮೇರೆಗೆ ಈ ಮಾಯಾ-ರಹಿತ ಶೈಲಿಗಳು ಬಹುಶಃ ಆಗಿನ ಸಾಂಸ್ಕೃತಿಕ ವಿಭಜನೆಯ ಸಂಕೇತವಾಗಿ ಪರಿಣಮಿಸುತ್ತವೆ.

ಚಿಚೆನಿಟ್ಜ್ ದ ಹಾಳು ಅವಶೇಷಗಳು ಫೆಡೆರಲ ನ ಆಸ್ತಿಯಾಗಿವೆ.ಇವುಗಳನ್ನು ಮತ್ತು ಆ ಪುರಾತತ್ವದ ಸ್ಮರಣಿಕೆಗಳನ್ನು ಮೆಕ್ಸಿಕೊದ ಇನ್ ಸ್ಟಿಟುಟೊ ನ್ಯಾಸಿಯೊನಿಲ್ ಡೆ ಅಂಟ್ರೊಪೊಲೊಜಿಯಾ ಹಿಸ್ಟೊರಿಯಾ (ನ್ಯಾಶನಲ್ ಇನ್ ಸ್ಟಿಟುಟ್ ಆಫ್ ಅಂಥ್ರೊಪೊಲಾಜಿ ಅಂಡ್ ಹಿಸ್ಟರಿ , INAH) ರಕ್ಷಿಸಿ ತನ್ನ ಉಸ್ತುವಾರಿಯಲ್ಲಿ ಇಟ್ಟುಕೊಂಡಿದೆ. ಈ ಭೂಮಿಯು ಸ್ಮಾರಕಗಳ ಪ್ರದೇಶವಾಗಿದ್ದು ಹಲವಾರು ದಿನಗಳ ವರೆಗೆ ಅಂದರೆ 2010 ಮಾರ್ಚ್ 29 ವರೆಗೆ ಖಾಸಗಿ ಒಡೆತನದಲ್ಲಿತ್ತು.ನಂತರ ಇದನ್ನು ಯುಕಾಟಾನ್ ರಾಜ್ಯ ಖರೀದಿಸಿ ತನ್ನ ಸುಪರ್ದಿಗೆ ಪಡೆಯಿತು.

ಹೆಸರು ಮತ್ತು ಅದರ ಶೈಲಿಯ ಹಿರಿಮೆ

ಈ ಮಾಯಾ ಎಂಬ ಹೆಸರು "ಚಿಚೆ'ಎನ್ ಇಟ್ಜಾ " ಅಂದರೆ "ಇಟ್ಜಾದ ಮುಖಭಾಗದ ಆಳದಲ್ಲಿ ಮಧ್ಯಭಾಗದಲ್ಲಿದೆ." ಇಲ್ಲಿ ಚಿ, ಎಂದರೆ "ಬಾವಿ" ಅಥವಾ"ಅಂಚು", ಮತ್ತು ಚ್'ಎ'ಎನ್, ಅಂದರೆ"ಬಾವಿ." ಇಟ್ಜಾವೆಂಬುದು ಹಿಂದಿನ ಜನಾಂಗವೊಂದರ ಪೀಳಿಗೆಯ ಸಮೂಹ, ಆಗಿನ ಕಾಲದಲ್ಲಿ ಉತ್ತರ ಪರ್ಯಾಯ ದ್ವೀಪದ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯ ಪಡೆದಿತ್ತು. ಮೂಲದಲ್ಲಿ ಈ ಹೆಸರನ್ನು ಮಾಯಾ ಇಟ್ಜ್, ನಿಂದ ಪಡೆಯಲಾಗಿದೆ.ಇದರರ್ಥ "ಮಾಯೆ," ಮತ್ತು (ಹ)ಎ, ಅಂದರೆ"ಜಲರಾಶಿ." ಇಟ್ಜಾ ಎಂಬುದನ್ನು ಸ್ಯಾನಿಶ್ ನಲ್ಲಿ "ಬ್ರುಜಾಸ್ ಡೆಲ್ ಅಗ್ವಾ (ನೀರಿನ ಮಾಂತ್ರಿಕ ಹರಿವು)"ಆದರೆ ಪೂರ್ಣಾರ್ಥವೆಂದರೆ ಜಲ ಮಾಂತ್ರಿಕರು ಎಂದು ಹೇಳಬಹುದು.[]

ಈ ಹೆಸರು ಸ್ಪ್ಯಾನಿಶ್ ನಲ್ಲಿ ಚಿಚೆನ್ ಇಟ್ಜಾ ಅದನ್ನು ಇನ್ನೊಂದು ಅನುವಾದವನ್ನು ನೋಡಿದಾಗ ಅದರ ಹೆಸರಿನ ಅಂತ್ಯದ ಪದಗುಚ್ಛವನ್ನು ಒಂದೇ ತೆರನಾಗಿ ಉಚ್ಚಾರ ಮಾಡಲಾಗುತ್ತದೆ. ಇನ್ನುಳಿದ ಆದ್ಯತಾ ಶಬ್ದವೆಂದರೆ ಅಕ್ಷರ ಸಂಯೋಜನೆ ಮೂಲದಲ್ಲಿ ಒಂದೇ ಆಗಿದ್ದರೂ ಅದನ್ನು ಮಾಯಾ ಭಾಷೆಯಲ್ಲಿ ಅದನ್ನು ಚಿಚೆನ್ ಇಟ್ಜಾ ಎಂದು ಹೇಳಲಾಗುತ್ತದೆ.(ಅದರ ಉಚ್ಚಾರ ಹೀಗಿದೆ]) ಈ ರಚನೆಯ ಧ್ವನಿಸ್ವರವು ಚ್ ' ಮತ್ತು ಚ್ 'ಇದು ಮೂಲ ಶಬ್ದ ಆಕಾರದಲ್ಲಿ ಅದನ್ನು ಚ್ 'ಎ'ಎನ್ ಎಂದೂ ಪದ ಉಚ್ಛರಣೆ ಮಾಡಲಾಗುತ್ತದೆ.ಇದರಲ್ಲಿ 'ಇ'ಎಂಬುದು ತಟಸ್ಥವಾಗಿರದೇ ಮಾಯಾ ಶಬ್ದೋಚ್ಛಾರಣೆಯಲ್ಲಿ ಅಥವಾ ಅದರಲ್ಲಿ ಮಾಯಾ ದ ಭಾವಸೂಚಕವಾಗಿರುತ್ತದೆ).ಇಲ್ಲಿ ಕಂಠ ಧ್ವನಿ ಬಳಕೆಯ ಪರಿಣಾಮ ಇದರಲ್ಲಿ ಕಾಣಸಿಗುತ್ತದೆ, ಈ ಪದ "ಇಟ್ಜಾ'" ನಲ್ಲಿನ ಕೊನೆಗೆ ಉಚ್ಚರಿಸುವ 'ಎ'ಅಕ್ಷರದ ಮೇಲೆ ಹೆಚ್ಚು ಒತ್ತು ಕೊಡಲಾಗುತ್ತದೆ.ಅದರ ನಂತರ ಧ್ವನಿಸ್ವರಾಚರಣೆಯ ಪೂರ್ಣವಿರಾಮ ಬರುತ್ತದೆ.(ಇದು ಅಪೊಸ್ಟ್ರೊಫಿ ಅಥವಾ ಪ್ರತ್ಯಯ ಪದದ ಸೂಚನೆಯಾಗಿದೆ).

ಇದರ ಬಗ್ಗೆ ಚಿಲಾಮ್ ಬಲಾಮ್ಎಂಬ ಪುಸ್ತಕದಲ್ಲಿ ಸಾಕ್ಷಿ ದೊರಕಿದ್ದು ,ಉತ್ತರದ ಯಾಕಟಾನ್ ರಾಜ್ಯಕ್ಕೆ ಇಟ್ಜಾ ಅವರ ಜನಾಂಗೀಯ ಆಗಮನಕ್ಕಿಂತ ಮೊದಲು ಈ ಜಾಗೆಗೆ ಮತ್ತೊಂದು ಹೆಸರಿತ್ತು. ಈ ಹೆಸರನ್ನು ಉಚ್ಚರಿಸಲು ಕಷ್ಟವಾಗುತ್ತದೆ ಯಾಕೆಂದರೆ ಇದರ ಅಕ್ಷರ ಸಂಯೋಜನೆಯು ಜಟಿಲವಾಗಿದ್ದು ಇದನ್ನು ಉಕ್ ಯಾಬ್ನಾಲ್ ಎಂದು ಕರೆಯಲಾಗುತ್ತದೆ,ಇಲ್ಲವೆ ಉಕ್ ಹಬ್ ನಾಲ್ ಅಥವಾ ಉಕ್ ಅಬ್ನಾಲ್ ಎಂದು ಕರೆಯಲಾಗುತ್ತದೆ. ”ಆದರೆ ಕೆಲವು ಮೂಲಗಳ ಪ್ರಕಾರ ಮೊದಲ ಶಬ್ದವೆಂದರೆ ಏಳು ಎಂದರ್ಥ,ಆದರೆ ಇನ್ನುಳಿದ ಪದಗುಚ್ಛದ ಅನುವಾದದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತದೆ.ಇದರಲ್ಲಿ ಅನುವಾದಗಳು "ಸೆವೆನ್ ಬುಶಿಸ್ ","ಸೆವೆನ್ ಗ್ರೇಟ್ ಹೌಸಿಸ್ "ಅಥವಾ ಸೆವೆನ್ ಲೈನ್ಸ್ ಆಫ್ ಅಬ್ನಾಲ್ " ಎಂದು ಹೇಳಲಾಗುತ್ತದೆ.

ಇತಿಹಾಸ

ಉತ್ತರ ಯುಕಾಟಾನ್ ರಾಜ್ಯವು ಹೆಚ್ಚು ಶುಷ್ಕ ಭೂಮಿ ಹೊಂದಿದ್ದು,ಆಂತರಿಕ ನದಿಗಳು ಅಂತರ್ಮುಖಿಯಾಗಿ ಹರಿಯುತ್ತಿವೆ. ಇದರಲ್ಲಿ ಎರಡು ದೊಡ್ಡ ನೈಸರ್ಗಿಕ ನೀರಿನ ಹೊಂಡಗಳಿದ್ದು ಅವುಗಳನ್ನು ಅಂತರ್ಜಲರಾಶಿ ಗಳು ಎಂದು ಕರೆಯಲಾಗುತ್ತದೆ.ಇವುಗಳು ಚೆಚಿನಿಯಾಕ್ಕೆ ವರ್ಷಪೂರ್ತಿ ಬೇಕಾಗುವ ಸಾಕಷ್ಟು ನೀರಿನ ಪೂರೈಕೆಗೆ ಸಹಾಯ ಮಾಡುತ್ತವೆ.ಹೀಗಾಗಿ ಇದು ಜನವಸತಿಗೆ ಆಕರ್ಷಣೀಯ ಸ್ಥಳವಾಗಿದೆ. ಈ ಎರಡು ಜಲಸಂಗ್ರಹಗಳ ಜಲರಾಶಿಯಲ್ಲಿ "ಸೆನೊಟೆ ಸಗಾರ್ಡೊ " ಅಥವಾ ಪವಿತ್ರ ಜಲರಾಶಿ ಎನ್ನಲಾಗುತ್ತದೆ.(ಇದನ್ನೇ ಬಹುದಿನಗಳಿಂದ ಪವಿತ್ರ ಬಾವಿ ಇಲ್ಲವೆ ತ್ಯಾಗದ ಬಾವಿ ಎಂದೂ ಕರೆಯಲಾಗುತ್ತದೆ)ಇದೀಗ ಬಹಳ ಪ್ರಸಿದ್ದಿ ಪಡೆದುಕೊಂಡಿದೆ. ಇದರ ಯುದ್ದದ ಗೆಲುವಿನ ನಂತರದ ಸಂದರ್ಭದ ಮೂಲಗಳ ಪ್ರಕಾರ (ಮಾಯಾ ಮತ್ತು ಸ್ಪ್ಯಾನಿಶ್ )ಆಗ ಪೂರ್ವ ಕೊಲಂಬಿಯನ್ ಮಾಯಾ ಕಾಲದಲ್ಲಿ ಆ ಜಲರಾಶಿಯಲ್ಲಿ ಹಲವಾರು ಅಮೂಲ್ಯ ವಸ್ತುಗಳು ಮತ್ತು ಮಾನವ ಜೀವಿಗಳನ್ನು ಬಲಿಕೊಟ್ಟು ಮಾಯಾ ವರುಣ ದೇವ ಚಾಕ್ ನನ್ನು ತೃಪ್ತಿಪಡಿಸಲು ಮಳೆ ಬರಿಸಲಾಯಿತೆಂಬ ನಂಬಿಕೆಯೂ ಇದೆ. ಎಡ್ವರ್ಡ್ ಹರ್ಬೆರ್ಟ್ ಥಾಂಪ್ಸನ್ ಇದನ್ನು 1904 ರಿಂದ1910,ರ ವರೆಗೆ ಈ ಹೊಂಡದ ಜಲರಾಶಿಯಲ್ಲಿನ ಸೆನೊಟೆ ಸ್ಯಾಗ್ರಾಡೊ ದ ಹೂಳೆತ್ತುವ ಕಾರ್ಯ ಮಾಡಿಸಿದ.ಅದರಲ್ಲಿ ಹಲವಾರು ಪುರಾತನ ಪಳೆಯುಳಿಕೆಗಳಾದ ಚಿನ್ನ, ಹಳೆ ರತ್ನ, ಪಾತ್ರೆಗಳು, ಮತ್ತುಸುವಾಸಿತ ವಸ್ತು,ಗಳಲ್ಲದೇ ಮಾನವ ದೇಹದ ಅವಶೇಷಗಳು ದೊರೆತಿವೆ. ಇತ್ತೀಚಿನ ಅಧ್ಯಯನದ ಪ್ರಕಾರ ಮನುಷ್ಯನ ದೊರೆತ ಅವಶೇಷ ಗಮನಿಸಿದರೆ ಅವು ಅವರು ತಮ್ಮ ಜೀವವನ್ನು ತ್ಯಾಗ ಮಾಡಿರುವಾಗ ಉಂಟಾದ ಗಾಯಗಳಂತೆ ಗೋಚರಿಸಿವೆ.

ಮೇಲೇರಿಕೆ, ಉನ್ನತೀಕರಣ

ಚಿಚೆನಿಟ್ಜ್ ನಂತರದ ದಿನಗಳಲ್ಲಿ ಪ್ರಾದೇಶಿಕತೆಯಲ್ಲಿ ಮೇಲ್ದರ್ಜೆ ಪಡೆಯಿತು.ಆರಂಭಿಕ ಉನ್ನತ ಕಾಲಮಾನದಲ್ಲಿ ಉನ್ನತೀಕರಣ ಹೊಂದಿತು. (ಸುಮಾರು 600 AD) ಅದಲ್ಲದೇ ನಂತರದ ಉನ್ನತಿಕರಣದ ಕಾಲಮಾನದಲ್ಲೂ ಮತ್ತು ಆರಂಭಿಕ ಅವಧಿಯ ಉನ್ನತಿ ಕಾಣುತ್ತದೆ.ನಂತರ ಈ ಪ್ರದೇಶವು ಪ್ರಮುಖ ಪ್ರಾದೇಶಿಕ ರಾಜಧಾನಿಯಾಗಿ ಖ್ಯಾತವಾಯಿತು.ಇದರಿಂದಾಗಿ ಇದು ಬಹುತೇಕ ರಾಜಕೀಯ,ಸಾಮಾಜಿಕ ಸಂಸ್ಕೃತಿ ಆರ್ಥಿಕ ಮತ್ತು ಉತ್ತರ ಭಾಗದ ಮಾಯಾ ಇಳಿಜಾರು ಕಣಿವೆಯಲ್ಲಿ ಇದು ತನ್ನ ಬೇರುಗಳನ್ನು ಹೊಂದಿದೆ. ಚೆಚಿನಿಟ್ಜಾದ ಸಹಬಾಂಧ್ಯವು ಅದರ ಇಳಿಮುಖ ಮತ್ತು ಅದರ ವಿಭಜನೆ ಅವಧಿಯಲ್ಲೂ ಅದು ಪ್ರಮುಖ ಲಕ್ಷಣಗಳನ್ನು ತೋರಿಸುತ್ತದೆ.ದಕ್ಷಿಣ ಭಾಗದ ಮಾಯಾ ಇಳಿಜಾರು ಕಣಿವೆ ಪ್ರದೇಶದ ಸ್ಥಳಗಳಾದ ಉದಾಹರಣೆಗೆ ಟಿಕಾಲ್ ಇತ್ಯಾದಿ.

ಕೆಲವು ಜನಾಂಗ ಇತಿಹಾಸದ ಮೂಲಗಳ ಪ್ರಕಾರ 987 ರ ಸುಮಾರಿಗೆ ಟೊಲ್ಟೆಕ್ ಆಳರಸ ಟೊಪಿಲ್ಟಜಿನ್ ಅಕಾಟಲ್ ಕ್ವಿಜಾಲ್ಕೊಟಾ ಎಂಬಾತ ಇಲ್ಲಿಗೆ ಕೇಂದ್ರ ಮೆಕ್ಸಿಕೊದಿಂದ ಸೈನ್ಯಪಡೆಯೊಂದಿಗೆ ಬಂದು (ಅಲ್ಲದೇ ಸ್ಥಳೀಯ ಮಾಯಾ ಮಿತ್ರಕೂಟವೂ ಅವನೊಂದಿಗಿತ್ತು) ನಂತರ ಆತ ಚೆಚೆನಿಟ್ಜಾವನ್ನು ರಾಜಧಾನಿಯನ್ನಾಗಿ ಮಾಡಿ ಟುಲಾ ಎಂಬುದನ್ನು ಎರಡನೆಯ ರಾಜಧಾನಿಯಾಗಿಸಿದ. ಇಲ್ಲಿನ ಕಲೆ ಮತ್ತು ಕಟ್ಟಡ ವಾಸ್ತು ವಿನ್ಯಾಸ ಶೈಲಿಗಳು ಆಸಕ್ತಿದಾಯಕ ಮಾಯಾ ಮತ್ತು ಟೊಲ್ಟೆಕ್ ಎರಡೂ ಸಂಸ್ಕೃತಿಗಳ ಮಿಶ್ರಣವನ್ನು ಕಾಣಿಸುತ್ತದೆ. ಹೇಗೆಯಾದರೂ ಇತ್ತೀಚಿನ ಚೆಚಿನಿಟ್ಜಾದ ಮರು ದಿನಾಂಕ ಗಮನಿಸಿದರೆ (ಕೆಳಗೆ ನೋಡಿ)ಚೆಚಿನಿಟ್ಜಾ ಈ ಹಿಂದಿನ/ಅವಧಿಗಿಂತ ಮೊದಲ ಉನ್ನತೀಕರಣದ ಅಭಿವೃದ್ಧಿ ಹೊಂದಿರುವ ಕ್ಷೇತ್ರ ಪರಿಚಯವನ್ನು ನೀಡುತ್ತದೆ.ಅದೇ ರೀತಿ ಟುಲಾ ಆರಂಭಿಕ ಉನ್ನತೀಕರಣದ ನಂತರದ ಸ್ಮಾರಕವಾಗಿ ಕಾಣುತ್ತದೆ.(ಹೀಗೆ ಅದು ಅಧ್ಯಯನದ ದಿಕ್ಕನ್ನು ಪ್ರಭಾವದೊಂದಿಗೆ ಬದಲಾವಣೆಗೊಳಪಡಿಸುತ್ತದೆ.)

ರಾಜಕೀಯ ಸಂಘಟನೆ

ಹಲವಾರು ಪುರಾತತ್ವಜ್ಞರ ಪ್ರಕಾರ 1980 ರ ಸುಮಾರಿಗೆ ಮಾಯಾ ರಾಜಕೀಯತೆ ಆರಂಭಿಕ ಉನ್ನತಿಯ ಸಂದರ್ಭದಲ್ಲಿ ಚಿಚೆನಿಟ್ಜ್ ಯಾವುದೇ ಏಕೈಕ ರಾಜನಿಂದ ಆಳಲ್ಪಟ್ಟಿಲ್ಲ ಅಥವಾ ಒಂದೇ ಒಂದು ಆಡಳಿತ ಪ್ರಾದೇಶಿಕತೆ ಯಾಗಿ ಗುರುತಿಸಿಕೊಂಡಿಲ್ಲ.ಎಂಬುದು ಧೃಡವಾಗಿದೆ. ಬದಲಾಗಿ ನಗರದ ರಾಜಕೀಯ ಸಂಘಟನೆಯು "ಮಲ್ಟೆಪಾಲ್ " ನಿಂದ ರಚಿತ ಪದ್ದತಿಯಾಗಿರಬೇಕಿತ್ತು.ಆದರೆ ಇದು ಉನ್ನತ ಶ್ರೇಣಿಯ ಸದಸ್ಯರ ಸಮೂಹಯುಳ್ಳ ಜನರಿಂದ ಆಡಳಿತ ನಡೆಸಲ್ಪಡುತಿತ್ತು. ಈ ಪದ್ದತಿಯು 1990 ರಲ್ಲಿ ಜನಪ್ರಿಯವಾಗಿತ್ತಾದರೂ ಇತ್ತೀಚಿನ ದಿನಗಳಲ್ಲಿ ನಡೆದ ಸಂಶೋಧನೆಯಿಂದಾಗಿ ಈ "ಮಲ್ಟೆಪಲ್ " ಪದ್ದತಿಯು ಎಲ್ಲರಿಂದ ಪ್ರಶ್ನೆಗೊಳಗಾಗುತ್ತಿದೆ.ಇದರ ಪರಿಕಲ್ಪನೆಯು ಉತ್ತಮ ಪ್ರತಿಕ್ರಿಯೆ ತರಬೇಕಾದರೆ ಇದರಲ್ಲಿನ ಅನುಮಾನಗಳನ್ನು ಹೊಡೆದು ಹಾಕಿತು. ಸದ್ಯದ ಮಾಯಾ ಕುಶಲತೆಯ ಸೂತ್ರಗಳು ಸಾಂಪ್ರದಾಯಿಕ ಮಾದರಿಗಳಾಗಿ ಕೆಲಸ ಮಾಡುತ್ತಿವೆ.ಮಾಯಾ ರಾಜ್ಯಾಡಳಿತದ ಉನ್ನತ ಮಟ್ಟವು ದಕ್ಷಿಣ ಕೆಳ ಇಳಿಜಾರು ಭಾಗವನ್ನು ನಿರೂಪಿಸುತ್ತದೆ.

ಆರ್ಥಿಕತೆ

ಚಿಚೆನಿಟ್ಜ್ ಅದರ ಪ್ರಮುಖ ಆರ್ಥಿಕ ಕೇಂದ್ರವನ್ನು ಯಾವಾಗಲೂ ಉಳಿಸಿಕೊಂಡಿದೆ.ಉತ್ತರ ಮಾಯಾ ಪ್ರದೇಶದಲ್ಲಿ ಅತ್ಯಂತ ದೂರದ ಅಂಚಿನಲ್ಲಿ ಅದು ನೆಲೆಯಾದರೂ ಅದು ತನ್ನ ಹೆಸರು ಉಳಿಸಿಕೊಂಡಿದೆ. ಸುತ್ತಲೂ ನೀರು ಆವರಿಸಿರುವ ದ್ವೀಪದ ವ್ಯಾಪಾರ ವ್ಯವಹಾರದಲ್ಲಿ ಅದು ಪಾಲ್ಗೊಂಡಿದೆ.ಈ ಜಲಾವೃತ್ತ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಇಂಬು ನೀಡಿದೆ.ಅದರ ಬಂದರು ಇಸ್ಲಾ ಕೆರಿಟೋಜ್ ,ಕ್ಷೇತ್ರದಲ್ಲಿ ಅದು ವ್ಯಾಪಾರಿ ವ್ಯವಹಾರಗಳಿಗೆ ಹಾದಿ ಕಂಡುಕೊಂಡಿದೆ. ಚಿಚೆನಿಟ್ಜ್ ತನ್ನ ವ್ಯಾಪಾರಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಉದಾಹರಣೆಗೆ ಕೇಂದ್ರ ಮೆಕ್ಸಿಕೊ (ಆಬ್ಸಿಡಿಯನ್) ಮತ್ತು ದಕ್ಷಿಣದ ಕೇಂದ್ರ ಅಮೆರಿಕಾ (ಗೊಲ್ಡ್) ನಿಂದಾಗಿ ಅಗತ್ಯಗಳನ್ನು ಪಡೆದುಕೊಂಡಿದೆ.

ಇಳಿಮುಖ

ಹಳೆಯ ಮಾಯಾ ಕಾಲಮಾನದ ಗತಿಯನ್ನು ಅವಲೋಕಿಸಿದಾಗ (ಉದಾಹರಣೆಗೆ,ಚಿಲಾಮ್ ಬಲಾಮ್ ಚುಮೆಯೆಲ್), ಗ್ರಂಥದಲ್ಲಿ ಅದರ ಆಡಳಿತ ಸಾಮ್ರಾಜ್ಯದ ವಿವರ ದೊರೆಯುತ್ತದೆ.ಹುನಾಕ್ ಸೀಲ್ ಎಂಬಾತನ ಮಾಯಾಪಾನ್,ಆಡಳಿತಾವಧಿಯಲ್ಲಿ ಚಿಚೆನಿಟ್ಜ್ ನ್ನು 13 ನೆಯ ಶತಮಾನದಲ್ಲಿ ಗೆದ್ದುಕೊಂಡನು. ಹುನಾಕ್ ಸೀಲ್ ಎಂಬಾತ ತನ್ನ ಆಡಳಿತದಲ್ಲೇ ಸ್ವತಃ ಗೆದ್ದು ತನ್ನ ಸ್ವಯಂ ಪ್ರವಾದಿತನದ ಶೌರ್ಯವನ್ನು ತೋರಿದ. ಆಗಿನ ಆಚರಣೆ ಪ್ರಕಾರ ಅಲ್ಲಿನ ಜಲರಾಶಿಯ ಬಾವಿಗೆ (ಸಿನೊಟ್ ಸಾಗ್ರಾಡೊ) ತಳ್ಳಲ್ಪಡುತ್ತಾನೋ ಆತ ಬದುಕಿದರೆ ಒಬ್ಬ ಪ್ರವಾದಿಯಾಗಿ ಹೊರಬರುತ್ತಾನೆಂಬುದು ಆಗಿನ ಜನರ ನಂಬಿಕೆಯಾಗಿತ್ತು. ಈ ಸಮಾರಂಭವೊಂದರಲ್ಲಿ ಹಳೆಯ ಕಾಲಮಾನದ ಗತಿ ವಿಧಿಗಳ ಗಮನಿಸಿದರೆ ಅಲ್ಲಿ ಬದುಕುಲಿದವರೇ ಇರಲಿಲ್ಲ.ಆಗ ಹುನಾಕ್ ಸೀಲ್ ಸಿನೊಟ್ ಸಾಗ್ರಾಡೊದಲ್ಲಿ ನುಸುಳಿದ,ನಂತರ ಹೊರಬಂದಾಗ ಆತ ತನ್ನಷ್ಟಕ್ಕೆ ತಾನೇ ಪ್ರವಾದಿತ್ವದ ಉನ್ನತಿ ಪಡೆದ ಎಂದು ಹೇಳಲಾಗುತ್ತದೆ

ಅದರೆ ಆಗಿನ ಪುರಾತತ್ವದ ಸರ್ವೆ ಪ್ರಕಾರ ಚೆಚಿನಿಟ್ಜ್ ವನ್ನು ದಾಳಿಮಾಡಿ ಲೂಟಿ ಮಾಡಲಾಯಿತು;ಆದರೆ ಇದು ಮಾಯಾಪಾನ್ ಆಡಳಿತದ ಕೆಲಸವಲ್ಲ ಎಂಬುದರ ಸಾಕ್ಷ್ಯವೂ ಇದೆ. ಇಲ್ಲದಿದ್ದರೆ ಚೆಚಿನಿಟ್ಜ್ ಒಂದು ನಗರ ಕೇಂದ್ರ ಪ್ರದೇಶವಾಗಿ ಬೆಳೆಯುತ್ತಿರಲಿಲ್ಲ ಪುರಾತತ್ವದ ಸರ್ವೆ ಪ್ರಕಾರ ಚಿಚೆನಿಟ್ಜ್ AD 1000,ಯಲ್ಲಿ ತನ್ನ ಇಳಿಕೆ ಕಂಡಿತೆನ್ನಬಹುದು.ಅಂದರೆ ಮಾಯಾಪಾನ್ ಆಡಳಿತದ ಎರಡು ಶತಮಾನಗಳಿಗೆ ಮುಂಚೆ ಇದು ತನ್ನ ಅವನತಿ ಕಂಡಿತ್ತು. ಸದ್ಯ ಮಾಯಾಪಾನ್ ವಲಯದ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಯು ಈ ಪುರಾತನ ಇತಿಹಾಸದ ಬಗ್ಗೆ ಬೆಳಕು ಚೆಲ್ಲಬಹ್ದುದೆಂಬ ನಿರೀಕ್ಷೆ ಇದೆ.

ಯಾವಾಗ ಚಿಚೆನಿಟ್ಜ್ "ಕುಸಿಯಿತೋ" (ಅಂದರೆ ನಾಗರಿಕ ಚಟುವಟಿಕೆಗಳು ಸ್ತಬ್ದಗೊಂಡು ಅಲ್ಲಿನ ಜನಸಂಖ್ಯೆ ಕ್ಷೀಣಿಸತೊಡಗಿತು).ಆದರೆ ಇದು ಸಂಪೂರ್ಣವಾಗಿ ತ್ಯಜಿಸಿ ಬಯಲಾಗಲಿಲ್ಲ. ಆದರೆ ಇದರ ವಿಜಯದ-ನಂತರದ ಮೂಲಗಳ ಪ್ರಕಾರ ಮಾಯಾ ಮತ್ತುಸ್ಪ್ಯಾನಿಶ್ ಗಳ ಅವದಿಯಲ್ಲಿ ಸಿನೊಟ್ ಸಾಗ್ರಾಡೊ (ಜಲರಾಶಿ ಅಂತರ್ಕೊಳ) ಯಾವಾಗಲೂ ತನ್ನ ಪವಿತ್ರ ಯಾತ್ರಿ ಸ್ಥಾನವನ್ನು ಉಳಿಸಿಕೊಂಡಿದೆ.

ಸ್ಪ್ಯಾನಿಶ್ ರ ಆಗಮನ

ಆಗ 1526 ರಲ್ಲಿಸ್ಪ್ಯಾನಿಶ್ ಗೆದ್ದುಕೊಂಡ ಫ್ರಾನ್ಸಿಸ್ಕೊ ಡೆ ಮೊಂಟೆಜೊ (ಗ್ರಿಜೆಲ್ವಾ ಮತ್ತು ಕೊರ್ತೇಜ್ ಗಳ ದಾಳಿಗಳ ಪ್ರಸಿದ್ದ ನೇತಾರ) ಇದರ ಗೆಲುವಿನ ನಂತರ ಆತ ಸ್ಪೇನ್ ರಾಜನಲ್ಲಿ ಯುಕಾಟಾನ್ ನ ಉತ್ತರದಾಯಿತ್ವ ವಹಿಸಿಕೊ ಎಂದು ಭಿನ್ನವಿಸಿಕೊಂಡ. ಆತನ ಮೊದಲ ಪ್ರಚಾರವು 1527,ರ ಹೊತ್ತಿಗೆ ಯುಕಾಟಾನ್ ನ ಎಲ್ಲಾ ದ್ವೀಪ ಪ್ರದೇಶವನ್ನು ಪೂರ್ಣಒಳಗೊಳಿಸಿತ್ತು.ತನ್ನ ಪಡೆಗಳನ್ನು ಅಲ್ಲಿಗೆ ಕಳಿಸಿದನಾದರೂ ಕೇವಲ ಒಂದು ಸಣ್ಣ ಕೋಟೆ ಕ್ಸಮಾಹಾ ',ಯನ್ನು ಮಾತ್ರ ವಶಪಡಿಸಿಕೊಳ್ಳಲು ಸಾಧ್ಯವಾಗಿತ್ತು.ಅದರ ಬಳಿ ಇರುವ ಪ್ರದೇಶ ಅಂದರೆ ಸದ್ಯ ದಕ್ಷಿಣದ ಕಾಂಕುನ್ ಎಂದು ಹೆಸರಾಗಿದೆ. ಮೊಂಟೊಜೊ ಯುಕಾಟಾನ್ ಗೆ 1531 ರಲ್ಲಿ ಮರಳಿದ.ತನ್ನೆಲ್ಲಾ ಮೊದಲಿನ ಶಕ್ತಿಗಳ ಒಟ್ಟಿಗೆ ಸೇರಿಸಿ ತನ್ನ ಪ್ರಧಾನ ಕ್ಯಾಂಪ್ ಮೂಲವನ್ನು ಪಶ್ಚಿಮ ಕರಾವಳಿಯ ಕ್ಯಾಂಪೆಚೆಯಲ್ಲಿ ಮಾಡಿಕೊಂಡ. ಆತ ತನ್ನ ಪುತ್ರ, ಫ್ರಾನ್ಸಿಸ್ಕೊ ಮೊಂಟಾಜೊ ಕಿರಿಯವನಾದವನನ್ನು 1532 ರ ನಂತರದಲ್ಲಿ ಯುಕಾಟಾನ್ ನ ಉತ್ತರದ ಮತ್ತು ಆಂತರಿಕ ದ್ವೀಪ ಪ್ರದೇಶಗಳ ಭಾಗಗಳ ಗೆದ್ದುಬರುವಂತೆ ಕಳುಹಿಸಿದ. ಆತನ ಮುಖ್ಯ ಉದ್ದೇಶವೆಂದರೆ ಚಿಚೆಯಿಟ್ಜ್ ಗೆ ಹೋಗುವುದು ಅಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸುವುದು ಆತನ ಗುರಿಯಾಗಿತ್ತು.

ನಂತರ ಕಿರಿಯ ಮೊಂಟಾಜೊ ಚಿಚೆನಿಟ್ಜ್ ಗೆ ಬಂದು ಅದನ್ನು ಸಿಯುಡಾಡ್ ರಿಯಲ್ ಎಂದು ಮರುನಾಮಕರಣ ಮಾಡಿದ. ಮೊದಲಲ್ಲಿ ಆತ ಕೆಲ ವಿರೋಧ ಎದುರಿಸಬೇಕಾಯಿತು,ನಂತರ ನಗರದ ಪ್ರದೇಶಗಳನ್ನು ಆಯಾ ವಲಯನ್ನಾಗಿ ವಿಂಗಡಿಸಿ ಅದಕ್ಕೆ ತನ್ನ ಸೈನಿಕರನ್ನು ನೇಮಕ ಮಾಡಿದ. ಆಗ ಮಾಯಾ ಇನ್ನಷ್ಟು ಏಕಾಂಗಿತನ ಅನುಭವಿಸಿತು,ಬರಬರುತ್ತಾ ಅವರು ಸ್ಪ್ಯಾನಿಶ್ ಮೇಲೆ ದಿಗ್ಬಂಧನ ವಿಧಿಸಿದರು.ಕರಾವಳಿಗೆ ಅವರ ಪೂರೈಕೆಯ ಮಾರ್ಗವನ್ನು ಬಂದ್ ಮಾಡಲಾಗಿತ್ತು.ಅವರನ್ನು ಹಳೆಯ ನಗರದ ಹಾಳು ಕೊಂಪೆಯಲ್ಲಿಯೇ ತಮ್ಮದೇ ಆದ ನಿರ್ಭಂಧ ವಿಧಿಸಿಕೊಂಡಿದ್ದರು. ತಿಂಗಳುಗಳು ಕಳೆದರೂ ಮರುಉತ್ತೇಜನ ಬರಲೇ ಇಲ್ಲ. ಕಿರಿಯ ಮೊಂಟೆಜೊ ಮಾಯಾದ ವಿರುದ್ದ ದಾಳಿ ನಡೆಸಿದಾಗ ತನ್ನ ಉಳಿದ ಪಡೆಗಳಲ್ಲಿ 150 ನ್ನು ಕಳೆದುಕೊಂಡ. ಹೀಗೆ ಆತ ಕತ್ತಲೆಯ ಕರಾಳ ರಾತ್ರಿಯಲ್ಲಿ ಚಿಚೆನಿಟ್ಜ್ ನ್ನು 1534 ರಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಜಾಗ ಖಾಲಿ ಮಾಡಿದ. ಹೀಗೆ 1535, ರಲ್ಲಿ ಬಹುತೇಕ ಎಲ್ಲಾ ಸ್ಪ್ಯಾನಿಶ್ ರನ್ನು ಯುಕಾಟಾನ್ ದ್ವೀಪದಿಂದ ಹೊರ ಹಾಕಲಾಯಿತು.

ನಂತರದ ಅವಧಿಯಲ್ಲಿ ಮೊಂಟೊಜೊ ಯುಕಾಟಾನ್ ಗೆ ಬಂದು ಕಾಂಪೆಚೆ ಮತ್ತು ಚಾಂಪ್ಟೊನ್ ಮಾಯಾ ಸೈನ್ಯವನ್ನು ಕಟ್ಟಿ ದೊಡ್ಡ ಪ್ರಮಾಣದ ಇಂಡಿಯೊ-ಸ್ಪ್ಯಾನಿಶ್ ಸೈನ್ಯಪಡಿಯನ್ನು ರಚಿಸಿ ದ್ವೀಪವನ್ನು ಗೆದ್ದುಕೊಂಡ. ನಂತರ ಸ್ಪ್ಯಾನಿಶ್ ರಾಜ್ಯಾಧಿಕಾರವು ಭೂಮಿಯನ್ನು ನೀಡಿತಲ್ಲದೇ ಅದರ ಜೊತೆಗೇ ಚಿಚೆನಿಟ್ಜ್ ವನ್ನೂ ಕೊಡಮಾಡಿತು. ಅದಲ್ಲದೇ 1588 ರ ಹೊತ್ತಿಗೆ ಅದು ದನದ ಹುಲ್ಲುಗಾವಲಿಗಾಗಿ ಕೆಲಸ ಆರಂಭಿಸಿತು.

ಕ್ಷೇತ್ರ ವರ್ಣನೆ

ಈ ಕ್ಷೇತ್ರ ಪ್ರದೇಶವು ಅತ್ಯುತ್ತಮ ಶಿಲೆಗಳಲ್ಲಿ ನಿರ್ಮಿಸಿದ ಕಟ್ಟಡಗಳನ್ನು ಒಳಗೊಂಡಿದೆ.ರಾಜ್ಯದ ಹಲವೆಡೆ ಅವುಗಳನ್ನು ವಿಭಿನ್ನ ರೀತಿಯಲ್ಲಿ ರಕ್ಷಣೆಗೆ ಒಳಪಡಿಸಲಾಯಿತು ಈ ಕಟ್ಟಡಗಳು ನಿಬಿಡವಾದ ಜಾಲವನ್ನು ರಸ್ತೆ ರಹದಾರಿಯನ್ನೊಳಗೊಂಡಿದೆ.ಹಳೆಯ ಕಾಲದಲ್ಲಿ ನಿರ್ಮಿಸಿದ ಪಾದಚಾರಿ ಮಾರ್ಗಗಳು ಅವುಗಳನ್ನು ಸಾಕ್ಬೆಒಬಿ ಎನ್ನುತ್ತಾರೆ. ಪುರಾತತಜ್ಞರು ಇದರಲ್ಲಿ ಬಹುತೇಕ 100 ಸಾಕ್ಬಿಯೊಬ್ ಗಳನ್ನು ಪತ್ತೆ ಹಚ್ಚಿದರು.ಇಡೀ ಅಡ್ಡದಾರಿಯಡಿ ಇವುಗಳ ನಿರ್ಮಾಣ ಮಾಡಲಾಗಿತ್ತು.ಇದು ಎಲ್ಲೆಡೆಯಿಂದಲೂ ನಗರದೆಡೆಗೆ ತಮ್ಮ ದಿಕ್ಕನ್ನು ಪಡೆಯುತ್ತವೆ. ಪುರಾತತಜ್ಞರು ಇದರಲ್ಲಿ ಬಹುತೇಕ 100 ಸಾಕ್ಬಿಯೊಬ್ ಗಳನ್ನು ಪತ್ತೆ ಹಚ್ಚಿದರು.ಇಡೀ ಅಡ್ಡದಾರಿಯಡಿ ಇವುಗಳ ನಿರ್ಮಾಣ ಮಾಡಲಾಗಿತ್ತು.ಇದು ಎಲ್ಲೆಡೆಯಿಂದಲೂ ನಗರದೆಡೆಗೆ ತಮ್ಮ ದಿಕ್ಕನ್ನು ಪಡೆಯುತ್ತವೆ.

ಆಂತರಿಕ ಗೋಡೆಗಳ ಎತ್ತರದ ಭಾಗಗಳಲ್ಲಿ ವಿಭಜಿತ್ ಅಂಚುಗಳ ಮೇಲೆ ಆಟಗಾರರ ತಂಡದ ಸಮೂಹವನ್ನು ಚಿತ್ರಿಸಲಾಗಿದೆ. ಈ ಒಂದು ಸಮೂಹದಲ್ಲಿ ಓರ್ವ ಆಟಗಾರನ ಶಿರ್ಶ್ಛೇದನ ಮಾಡಲಾಗಿದ್ದು ಅದರ ಗಾಯದಿಂದ ಏಳು ರಕ್ತದ ಹರಿವುಗಳನ್ನು ತೋರಿಸಲಾಗಿದ್ದು ಅದರಲ್ಲಿ ಆರು ಹಾವಿನಂತೆ ನಲಿದಾಡಿದಂತೆ ಕಂಡರೆ ಮಧ್ಯದ್ದು ಕೊನೆಯಾದ ಗಿಡದಂತೆ ಕಾಣಿಸುತ್ತದೆ.

ಗ್ರೇಟೆ ಬಾಲ್ ಕೋರ್ಟ್ ನ ಕೊನೆಯಲ್ಲಿ ಉತ್ತರ ದೇವಾಲಯ ವಿದೆ,ಇದನ್ನು ದಿ ಟೆಂಪಲ್ ಆಫ್ ಬಿಯರ್ಡೆಡ್ ಮ್ಯಾನ್ (ಗಡ್ಡವಿರುವ ಮನುಷ್ಯನ ದೇವಾಲಯ) ಎಂದು ಕರೆಯುವುದು ಅಲ್ಲಿನ ವಾಡಿಕೆಯಾಗಿದೆ. ಈ ಸಣ್ಣ ಕಟ್ಟಡದ ಒಳಪಾರ್ಶ್ವದ ಗೋಡೆಗಳ ಮತ್ತು ಮಧ್ಯದ ಕೆತ್ತನೆಯು ಗದ್ದದ ಮೇಲಿನ ಕೂದಲನ್ನು ಹೋಲುವ ಗಡ್ಡವನ್ನು ಸೂಚಿಸುತ್ತದೆ. ಅದರೆ ದಕ್ಷಿಣ ಕೊನೆಯಲ್ಲಿರುವ ದೇವಾಲಯವು ದೊಡ್ಡದಾಗಿದೆ; ಆದರೆ ಹಾಳು ಬಿದ್ದಿದೆ.

ಪೂರ್ವ ಭಾಗದ ಗೋಡೆಗಳಿಗೆ ತಾಗಿದಂತೆ ಕಟ್ಟಲಾದ ಇದು ಟೆಂಪಲ್ಸ್ ಆಫ್ ದಿ ಜಾಗ್ವರ್ ಎಂದು ಹೇಳಲಾಗಿದೆ. ಮೇಲ್ಭಾಗದಲ್ಲಿರುವ ಟೆಂಪಲ್ ಆಫ್ ಜಾಗ್ವರ್ ಬಾಲ್ ಕೋರ್ಟ್ ನ್ನು ಮೇಲ್ಛಾವಣಿಯಿಂದ ತೋರಿಸಿದರೆ ಅದರ ಪ್ರವೇಶದ್ವಾರದಲ್ಲಿ ಇಬ್ಬರು ಕಾವಲಿನವರಿದ್ದಾರೆ.ಅದರ ವಿಭಜಿತ ಕೋನದಲ್ಲಿ ವಿಶಾಲವಾಗಿ ಚಿತ್ರಿಸಿದ ಗರಿಗಳಿರುವ ಸರ್ಪದ ಪ್ರತಿಕೃತಿ ಕಾಣುತ್ತದೆ. ಒಳಗಿರುವ ಗೋಡೆ ಮೇಲಿನ ಭಿತ್ತಿಯು ಬಹಳಷ್ಟು ಹಾಳಾಗಿದ್ದು,ಅದು(ಕದನದ) ಯುದ್ದವೊಂದರ ಸನ್ನಿವೇಶವನ್ನು ತೋರಿಸುತ್ತದೆ.

ಲೋವರ್ ಟೆಂಪಲ್ ಆಫ್ ದಿ ಜಾಗ್ವರ್ ನ ಪ್ರವೇಶದ್ವಾರದಲ್ಲಿ ಇದು ಬಾಲ್ ಕೋರ್ಟ್ ನ ಹಿಂದಿನ ಭಾಗವನ್ನು ತೆರೆದಿಡುತ್ತದೆ,ಇಲ್ಲಿ ಇನ್ನೊಂದು ಚಿರತೆ ಚಿತ್ರದ ಸಿಂಹಾಸನ ಕಾಣಸಿಗುತ್ತದೆ.ಇದು El ಕಾಸ್ಟಿಲ್ಲೊದ ದೇವಾಲದಂತೆ ಇದ್ದರೂ ಇದರಲ್ಲಿ ಉತ್ತಮ ಅಲಂಕಾರ ಮತ್ತು ಚಿತ್ರದಿಂದ ರೂಪರೇಷಗಳ ಕೆತ್ತನೆ ಮಾತ್ರ ಚಿತ್ರಲೋಕದಿಂದ ಮಾಯವಾಗಿದೆ. ಗೋಡೆಯ ಹೊರ ವಿಭಾಗದ ಮೂಲೆಗಳು ದೇವಾಲಯದ ಒಳಗೋಡೆಯಂತೆಯೇ ಉತ್ತಮ ಕೆತ್ತನೆ ಮತ್ತು ಬಿಡಿಬಿಡಿಯಾದ ಚಿತ್ರಗಳನ್ನು ಹೊಂದಿವೆ.

ಝೋಪಂಟ್ಲಿ

ಎಲ್ಲಾ ಸ್ಮಾರಕಗಳಿಗಿಂತ, ಈ ಝೋಪಂಟ್ಲಿ ಯುಮೆಕ್ಸಿಕನ್ ಪ್ರಸ್ಥ ಭೂಮಿ ಗೆ ಅತ್ಯಂತ ಹತ್ತಿರವಾದ ಸ್ಥಳವಾಗಿದೆ. ಈ ಸ್ಮಾರಕವು ಉಬ್ಬಿದ ಒಂದು ಸಮಪಾತಳಿಯಲ್ಲಿನ ವೇದಿಕೆಯಲ್ಲಿ ಮಾನವವ ಬುರುಡೆಗಳನ್ನು ಪ್ರದರ್ಶಿಸುತ್ತದೆ.

ಗರುಡ ಪಕ್ಷಿಗಳ ಮತ್ತು ಚಿರತೆಯ ಹೋಲುವ ಪ್ರಾಣಿಗಳ ಚಿತ್ರಿಸಿದ ವೇದಿಕೆ

El ಕ್ಯಾಸ್ಟಿಲ್ಲೊ ದ ನಂತರದ ಮುಂಭಾಗದಲ್ಲಿ ಈ ವೇದಿಕೆಗಳ ಸರಣಿಗಳು ಇವೆ. ಗರುಡ ಪಕ್ಷಿಗಳಿಗೆ ಮತ್ತು ಚಿರತೆಗಳಿಗೆ ಮಾಯಾ ಮತ್ತು ಟೊಲ್ಟಿಕ್ ಶೈಲಿಯ ಮಿಶ್ರಣದಲ್ಲಿ ವೇದಿಕೆ ನಿರ್ಮಿಸಲಾಗಿದೆ. ಪ್ರತಿಯೊಂದು ಭಾಗದ ಬದಿಯಲ್ಲಿ ಮೇಲೆ ಏರಿಹೋಗಲು ಸ್ಟೇರ್ ಕೇಸ್ ಗಳಿವೆ.(ಮೇಲೇರುವ ಮೆಟ್ಟಲು) ಆಚೀಚೆ ಬದಿಗಳಲ್ಲಿ ಒಂದು ನಿಗದಿತ ಕೋನದಲ್ಲಿ ಚಿತ್ರಿಸಿರುವ ಹೆಂಗಸಿನ ಮುಖಯುಳ್ಳ ಗರುಡ ಗಳು ಮತ್ತು ಚಿರತೆಗಳು ಮಾನವನ ಹೃದಯಗಳಂತೆ ಕಾಣುವ ವಸ್ತುವೊಂದನ್ನು ತಿನ್ನುತ್ತಿವೆ.

ಪ್ರೇಮದ ಅಧಿದೇವತೆಯ ವೇದಿಕೆ

ಈ ಭಿತ್ತಿ ವೇದಿಕೆಯಲ್ಲಿ ಬಾಹ್ಯಾಕಾಶದ ಗ್ರಹ ಶುಕ್ರ ನನ್ನು ಪ್ರತಿಬಿಂಬಿಸಲಾಗಿದೆ. ಇದರ ಒಳಭಾಗದಲ್ಲಿ ಪುರಾತತ್ವಜ್ಞರು ಕಲ್ಲಿನಲ್ಲಿ ವಿಶಾಲವಾಗಿ ಕೆತ್ತಿದ ಮೂಲೆ ಆಕೃತಿಯ ಭಿತ್ತಿಚಿತ್ರಗಳು ಕಾಣುತ್ತವೆ,ಎಂದು ಹೇಳಿದ್ದಾರೆ;ಆದರೆ ಇವುಗಳನ್ನು ಏಕೆ ಕೆತ್ತಲಾಗಿದೆ ಅಥವಾ ನಿರ್ಮಿಸಲಾಗಿದೆ ಎಂಬುದು ಗೊತ್ತಾಗದ ಸಂಗತಿಯಾಗಿದೆ. ಈ ವೇದಿಕೆಯನ್ನು El ಕ್ಯಾಸ್ಟಿಲ್ಲೊ ಮತ್ತು ದಿ ಸಿನೊಟ್ ಸಾಗ್ರಾಡೊ ಮಧ್ಯದಲ್ಲಿ ನಿಲ್ಲಿಸಲಾದ ಒಂದು ಚಿತ್ರಣವಾಗಿದೆ.

ಸಾಕ್ಬೆ ನಂಬರ್ ಒನ್ (ಪ್ರಥಮ ಸಾಲಿನಲ್ಲಿರುವ ಕಟ್ಟಡ ವಿನ್ಯಾಸ)

ಸಾಕ್ಬೆ , ಸಿನೊಟ್ ಸಾಗ್ರಾಡೊಗೆ ಹಾದಿ ಮಾಡಿ ಕೊಡುತ್ತದೆ ,ಇದು ಚಿಚೆನಿಟ್ಜ್ ನಲ್ಲಿಯೇ ಅತಿ ದೊಡ್ಡ ಮತ್ತು ವಿಶಾಲ ತಳಹದಿಯಲ್ಲಿ ರಚಿತವಾಗಿದೆ. ಈ “ಶ್ವೇತ ರಸ್ತೆ ” 270 metres (890 ft) ಯು ಉದ್ದ ಮತ್ತು ಸುಮಾರು 9 metres (30 ft) ರಷ್ಟು ಉದ್ದಗಲವಾಗಿದೆ. ಒಂದು ಕೆಳಮಟ್ಟದ ಗೋಡೆಯಿಂದ ಆರಂಭಗೊಳ್ಳುವ ಇದು ಶುಕ್ರದ ವೇದಿಕೆಯಿಂದ ಕೆಲವೇ ಮೀಟರ್ ದೂರದಲ್ಲಿದೆ. ಪುರಾತತ್ವಶಾಸ್ತ್ರಜ್ಞರ ಪ್ರಕಾರ ಒಂದು ಕಾಲದಲ್ಲಿ ಈ ರಸ್ತೆಯ ಆರಂಭದಲ್ಲಿ ವಿಭಿನ್ನ ರಚನೆಯ ವಿಸ್ತೃತ ಕಟ್ಟಡಗಳಿದ್ದವು.

ಸಿನೊಟ್ ಸಾಗ್ರಾಡೊ (ನೆಲದೊಳಗಿನ ಜಲರಾಶಿಯ ಕೊಳದ ಸ್ವಾಭಾವಿಕ ಪ್ರದೇಶ)

ಈ ಯುಕಾಟಾನ್ ದ್ವೀಪವು ಒಂದು ಸುಣ್ಣದ ಕಲ್ಲಿನ ಸಮಪಾತಳಿಯ ನೆಲವಾಗಿದೆ,ಇಲ್ಲಿ ಯಾವುದೇ ನದಿಗಳಾಗಲೀ ಹಳ್ಳಗಳಾಗಲೀ ಇಲ್ಲ. ಈ ಪ್ರದೇಶದಲ್ಲಿ ಅಲ್ಲಲ್ಲಿ ತಗ್ಗು-ಕಂದಕಗಳ ನೈಸರ್ಗಿಕ ಸ್ಥಳಗಳಿವೆ;(ನೆಲಕುಸಿತದಿಂದುಂಟಾದ ನೀರಿನ ಕಂದಕ)ಸಿಂಕ್ ಹೋಲ್ಗಳು, ಇವುಗಳನ್ನು ನೆಲಕೊಳಗಳು ಎಂದು ಕರೆಯುತ್ತಾರೆ, ಇದು ಭೂಮಿಯೊಳಗಿನ ಆಂತರಿಕ ಅಂತರ್ಜಲಮಟ್ಟ ವನ್ನು ಮೇಲ್ಭಾಗದಲ್ಲಿಯೇ ಗುರುತಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಅತ್ಯಂತ ಪ್ರಭಾವ ಬೀರುವ ನೈಸರ್ಗಿಕ ತಾಣವೆಂದರೆ ಸಿನೊಟ್ ಸಾಗ್ರಾಡೊ ಇದು ಸುಮಾರು 60 metres (200 ft)ರಷ್ಟು ವ್ಯಾಸಯುಳ್ಳದ್ದಾಗಿದೆ.ಇದರ ದಂಡೆಗಳಲ್ಲಿನ ಗುಣಲಕ್ಷಣಗಳು ಇದರ ಅಂತರಜಲಮಟ್ಟದ 27 metres (89 ft) ಕ್ಕಿಂತ ಕಡಿಮೆ ಎನ್ನುವಷ್ಟು ಇಳಿಮುಖಕ್ಕೆ ಕಾರಣವಾಗುತ್ತವೆ.

ಈ ಸಿನೊಟ್ ಸಾಗ್ರಾಡೊ ಮಾಯಾ ಪ್ರದೇಶದ ಯಾತ್ರಿಗಳಿಗೆ ಒಂದು ಯಾತ್ರಾರ್ಥಿ ಸ್ಥಳವಾಗಿದೆ.ಈ ಹಿಂದಿನ ಜನಾಂಗೀಯ ಕಥೆಗಳ ಆಧಾರ ನೋಡಿದರೆ ಬರಗಾಲ ಮತ್ತು ಕ್ಷಾಮದ ಸಂದರ್ಭದಲ್ಲಿ ಈ ಸ್ಥಳದಲ್ಲಿ ಜನರು ವರುಣನ ಕೃಪೆಗಾಗಿ ತಮ್ಮ ತ್ಯಾಗ ಬಲಿದಾನ ಅರ್ಪಿಸುತ್ತಿದ್ದರು. ಪುರಾತತ್ವಶಾಸ್ತ್ರಜ್ಞರ ಪ್ರಕಾರ ಈ ಜಲರಾಶಿ ಸಿನೊಟ್ ನ ತಳಭಾಗದಲ್ಲಿ ಸಾವಿರಾರು ವಸ್ತುಗಳನ್ನು ಪತ್ತೆ ಮಾಡಲಾಗಿದೆ. ಉದಾಹರಣೆಗಾಗಿ ಚಿನ್ನ, ರತ್ನಾಭರಣ, ಕಪ್ಪು ಖನಿಜದ ವಸ್ತು, ಚಿಪ್ಪು, ಕಟ್ಟಿಗೆ, ಬಟ್ಟೆ,ಅಲ್ಲದೇ ಮಕ್ಕಳ ಮತ್ತು ಪುರುಷರ ತಲೆ ಬುರುಡೆಗಳು ದೊರೆತಿವೆ.

ಬಲಿಪೀಠಗಳ ದೇವಾಲಯ

El ಕ್ಯಾಸ್ಟಿಲ್ಲೊದ ಪೂರ್ವ ಭಾಗದಲ್ಲಿ ಇರುವ ಸರಣಿ ಕಟ್ಟಡಗಳಲ್ಲಿ ಈ ಬಲಿಪೀಠಗಳ ದೇವಾಲಯ ಉತ್ತರದ ಅಂಚಿನಲ್ಲಿ ಪ್ರತಿಷ್ಠಾಪಿತಗೊಂಡಿದೆ. ಈ ಹೆಸರನ್ನು ಏಕೆ ಇಡಲಾಯಿತೆಂಬುದಕ್ಕೆ ಇಲ್ಲಿನ ಕಟ್ಟಡಗಳಲ್ಲಿ ಪುರುಷರು ಕಟ್ಟಡದ ಕಂಬಗಳನ್ನು ತಮ್ಮೆರೆಡು ಕೈಯೆತ್ತಿ ಮೇಲಕ್ಕೆ ಹಿಡಿದಿರುವಂತೆ ಕೆತ್ತಲಾಗಿದೆ.ಇದನ್ನು "ಅಟ್ಲಾಂಟಾಸ್ "ಅಥವಾ ಪುರುಷ ಸ್ಥಂಬಗಳೆನ್ನುತ್ತಾರೆ.

ಯೋಧರ ಸ್ಮರಣಾರ್ಥದ ದೇವಾಲಯಗಳು

ಈ ಯೋಧರ ಸ್ಮಾರಕ ದೇವಾಲಯಗಳ ಪ್ರಮುಖ ದ್ವಾರದಲ್ಲಿ ಮೆಟ್ಟಲಿನ ಪಿರಾಮಿಡ್ ಆಕಾರಗಳ ವಿಶಾಲ ಸಾಲುಗಳಿವೆ.ಈ ಸಾಲಿನಲ್ಲಿ ಯೋಧರ ಚಿತ್ರಗಲನ್ನು ಇಲ್ಲಿ ಚಿತ್ರಿಸಲಾಗಿದೆ. ಈ ಕಟ್ಟಡದ ಸಂಕೀರ್ಣವು ದೇವಾಲಯದ ಮತ್ತೊಂದು ಭಾಗವಾದ ಬಿ ಯನ್ನು ಟೊಲ್ಟಿಕ್ಟುಲಾದ,ರಾಜಧಾನಿ ಮತ್ತು ಇದು ಇವೆರಡೂ ಪ್ರದೇಶಗಳ ಮಧ್ಯೆ ಇರುವ ಸಾಂಸ್ಕೃತಿಕ ಸಂಬಂಧಗಳನ್ನು ಸೂಚಿಸುತ್ತದೆ. ಆದರೆ ಚಿಚೆನಿಟ್ಜ್ ನಲ್ಲಿ ಒಟ್ಟಾರೆ ದೊಡ್ಡ ಪ್ರಮಾಣದಲ್ಲಿ ಇವುಗಳ ರಚನೆಯಾಗಿದೆ. ಪಿರಾಮಿಡ್ ನ ಮೇಲೇರಿ ಹತ್ತುವ ಮೆಟ್ಟುಲುಗಳು ಅದರ ಶೃಂಗಕ್ಕೆ ದಾರಿ ಮಾಡಿಕೊಡುತ್ತವೆ.(ಇದು ಮುಂದೆ ಪಿರಾಮಿಡ್ ದೇವಾಲಯದ ಪ್ರವೇಶ ದ್ವಾರದ ವರೆಗೂ ಕೊಂಡುಯ್ಯುತ್ತದೆ ) ಅದನ್ನೇ ಚಾಕ್ ಮೂಲ್ ಎಂದು ಹೆಸರಿಸಲಾಗಿರುತ್ತದೆ. ಈ ದೇವಾಲಯವು ಈ ಹಿಂದಿನ ಕಟ್ಟಡವೊದನ್ನು ಹೂತುಹೋಗುವಂತೆ ಮಾಡುತ್ತದೆ,ಅದೇ ಚಾಕ್ ಮೂಲ್ ಎನ್ನಲಾಗುತ್ತದೆ. ಪುರಾತತ್ವಶಾಸ್ತ್ರದ ತ್ವರಿತ ಸಂಶೋಧನೆ ಮತ್ತು ಈ ಕಟ್ಟಡದ ಸಂರಕ್ಷಣೆಯನ್ನು ಕಾರ್ನೆಗೆ ಇನ್ ಸ್ಟಿಟುಟ್ ಆಫ್ ವಾಶಿಂಗ್ಟನ್ ಸುಮಾರು 1925-1928 ರಿಂದ ಅದರ ಉಸ್ತುವಾರಿ ನೋಡುತ್ತಾ ಬಂದಿದೆ. ಇದರ ಸಂರಕ್ಷಣೆಗೆ ಪ್ರಮುಖ ಕಾರಣರಾದ ವ್ಯಕ್ತಿ ಎಂದರೆ ಅರ್ಲ್ ಎಚ್ . ಮೊರಿಸ್ ಇದರ ಸಂಪೂರ್ಣ ದಂಡಯಾತ್ರೆಯ, ಪಯಣದ ಬಗ್ಗೆ ಆತ ಪುಸ್ತಕವೊಂದನ್ನು ಪ್ರಕಟಿಸಿದ್ದಾರೆ.ಅದರ ಸಂಪುಟ ಟೆಂಪಲ್ ಆಫ್ ದಿ ವಾರಿಯರ್ಸ್ .

ವಾಸ್ತುಶಿಲ್ಪದ ಸಾವಿರಾರು ಸ್ಥಂಬಗಳ ಸಮೂಹ

ಯೋಧರ ದೇವಾಲಯದ ಕಂಬದ ಸಾಲಿನ ಸರಣಿಯುದ್ದಕ್ಕೂ ಇಂದು ಪ್ರತಿಬಿಂಬಿಸಲ್ಪಡುವ ಸಾವಿರಾರು ವಿಭಾಗದ ಕಂಬಗಳಿವೆ,ನಗರ ಪ್ರದೇಶ ಬೆಳೆದಂತೆ ಇವು ಕಟ್ಟಡದ ಬೆಂಬಲದ ಸ್ಥಾವರಗಳಾಗಿ ಬೆಳೆದವು.ಇದು ಛಾವಣಿಯ ಹೊಸ ವಿಧಾನಕ್ಕೆ ಹೆಚ್ಚು ಒತ್ತು ನೀಡಿದೆ. ಈ ವಾಸ್ತು ಶಿಲ್ಪದ ಕಂಬಗಳು ಮೂರು ವಿವಿಧ ಭಾಗಗಳಾಗಿ ವಿಭಜಿಸಲ್ಪಟ್ಟಿವೆ: ಒಂದು ಪೂರ್ವ ಸಮೂಹ ಇದು ಯೋಧರ ದೇವಾಲಯದ ಮುಂಭಾಗದ ಸಾಲಿನ ವರೆಗೂ ವಿಸ್ತಾರಗೊಂಡಿದೆ. ಉತ್ತರ ಭಾಗದ ಸಮೂಹವು ಯೋಧರ ದೇವಾಲಯದ ದಕ್ಷಿಣ ಗೋಡೆಯ ಬದಿಯಲ್ಲಿದ್ದು, ಪಿಲ್ಲರ್ ಗಳನ್ನೊಳಗೊಂಡಿದೆ,ಅಲ್ಲದೇ ಯೋಧರ ಚಿತ್ರಗಳ ಕೆತ್ತನೆ ಮಾಡಲಾಗಿದೆ; ಅಲ್ಲದೇ ಈಶಾನ್ಯ ಭಾಗದ ಸಮೂಹದಲ್ಲಿ ಯೋಧರ ದೇವಾಲಯದ ಸಣ್ಣ ಭಾಗವು ವಾಯವ್ಯದ ಮೂಲೆಯ ದೇವಾಲಯದ ಭಾಗವನ್ನು ತೋರಿಸುತ್ತದೆ.ಇಲ್ಲಿ ಮೇಲ್ಭಾಗದಲ್ಲಿ ದೇವರ ಮತ್ತು ಇನ್ನಿತರ ಜನರ ಪ್ರಾಣಿ,ಸರ್ಪಗಳ ಚಿತ್ರಗಳ ಕೆತ್ತನೆ ಮಾಡಲಾಗಿದೆ. ಈಶಾನ್ಯ ಭಾಗದ ವಾಸ್ತುಶಿಲ್ಪದ ಕಟ್ಟಡವು ಉತ್ತಮ ತಂತ್ರಗಾರಿಕೆಯನ್ನು ಪಡೆದಿದೆ.ಇದರಲ್ಲಿ ಬರುವ ಎಲ್ಲಾ ಮಳೆ ನೀರನ್ನು ಒಂದು ಫನ್ನೆಲ್ (ನಾಳಿಕೆ) ಮೂಲದ ಮಾರ್ಗದಲ್ಲಿ ಹರಿಯುವಂತೆ ಮಾಡುವ ಈ ಎಂಜನೀಯರಿಂಗ್ ಒಂದು ಅಧ್ಭುತವಾದ ಕಲೆಗಾರಿಕೆಯೇ ಹೌದು.ಇದು ರೆಜೊಲ್ಲಾಡಾ ಅಂದರೆ ಈ ಹಿಂದಿನ ಅಂತರಜಲರಾಶಿಯ ಜಾಗಕ್ಕೆ 40 metres (130 ft) ರಷ್ಟು ದೂರದಲ್ಲಿದೆ

ದಕ್ಷಿಣ ಭಾಗದ ಸಾವಿರ ವಾಸ್ತು ವಿನ್ಯಾಸದ ಸಮೂಹವು ಮೂರು ಸಣ್ಣ ಒಳಭಾಗಕ್ಕೇ ಹತ್ತಿಕೊಂಡ ಕಟ್ಟಡಗಳಿವೆ. ಈ ಟೆಂಪಲ್ ಆಫ್ ಕಾರ್ವಡ್ ಕಾಲ್ಮ್ಸ್ ಅಂದರೆ ಕೆತ್ತನೆ ವಾಸ್ತುಶಿಲ್ಪದ ದೇವಾಲಯವು ಸಣ್ಣದಾಗಿದ್ದರೂ ಮುಂಭಾಗದ ಪ್ರಾಂಗಣ,ಒಳಭಾಗದ ಆವರಣ ಇದು ಮುಂದೆ ಚಾಕ್ ಮೂಲ್ ಗೆ ದಾರಿ ಮಾಡಿಕೊಡುತ್ತದೆ;ಹೀಗೆ ವಿಭಜಿಸಲ್ಪಟ್ಟಿದೆ. ಇನ್ನೂ ಹಲವಾರು ವಾಸ್ತುಶಿಲ್ಪ ವಿನ್ಯಾಸದ ಕಂಬದ ಕೆತ್ತನೆಗಳಿವೆ ಆದ್ರೆ ಒಳಭಾಗದ ಮುಕ್ತ ಕಲೆಗೆ ಸುಮಾರು 40 ವ್ಯಕ್ತಿಗತ ಗಣ್ಯರ ಚಿತ್ರಣಗಳಿವೆ. ಈ ಟೆಂಪಲ್ ಆಫ್ ದಿ ಸ್ಮಾಲ್ ಟೇಬಲ್ಸ್ (ಅಂದರೆ ತ್ಯಾಗಪೀಠದ ಸಣ್ಣ ದೇವಾಲಯ)ಇದು ಹೊರಭಾಗದಲ್ಲಿ x’s ಮತ್ತು o’s ಅಳತೆಯ ಪ್ರತಿಕೃತಿಯನ್ನು ಹೊಂದಿದೆ. ಅದಲ್ಲದೇ ಅಹೌ ಬಾಲಮ್ ಕೌವಿಲ್ ನ ಅರಮನೆ (ಇದನ್ನು ಥಾಂಪ್ಸನ್ಸ್ ಟೆಂಪಲ್’ ಎನ್ನುತ್ತಾರೆ), ಇದು ಎರಡು ಹಂತದಲ್ಲಿನ ಸಣ್ಣ ಕಟ್ಟಡವಾಗಿದ್ದು ಇದರಲ್ಲಿ ಚಿರತೆ ಹೋಲುವ ಪ್ರಾಣಿಗಳ ಪ್ರದರ್ಶನ ಅಂದರೆa (ಬಾಲಾಮ್ ಮಾಯಾದಲ್ಲಿ) ಅದಲ್ಲದೇ ಮಾಯಾ ಕಾಲದ ದೇವತೆ ಕೌವಿಲ್ ಅಲಂಕಾರಿಕ ಉಬ್ಬು ಶಿಲ್ಪದವುಗಳನ್ನು ಪ್ರದರ್ಶಿಸಲಾಗಿದೆ.

ಸ್ಟೀಂ ಬಾಥ್ (ಹಬೆಯ ಸ್ನಾನ)

ಈ ಅಪರೂಪದ ಕಟ್ಟಡವು ಮೂರು ಭಾಗಗಳನ್ನೊಳಗೊಂಡಿದೆ: ಒಂದು ನಿರೀಕ್ಷಣಾ ಗ್ಯಾಲರಿ(ಆವರಣ), ಒಂದು ಸ್ನಾನ ಗೃಹ, ಮತ್ತು ಒಂದು ಹಬೆ ಸ್ನಾನದ ಕೋಣೆ, ಕಲ್ಲುಗಳನ್ನು ಬಿಸಿ ಮಾಡಿ ಹಬೆಯನ್ನು ಆ ಕೊಠಡಿಗೆ ಸಾಗಿಸಲಾಗುವ ಅನನ್ಯ ವ್ಯವಸ್ಥೆ ಇದಾಗಿದೆ.

El ಮೆರ್ಕಾಡೊ (ಅಮೆರಿಕನ್ ಕಟ್ಟಡ ವಿನ್ಯಾಸ)

ಯೋಧರ ಸಂಕೀರ್ಣದಲ್ಲಿ ಈ ರಚನೆಯು ದಕ್ಷಿಣದ ತುದಿಯನ್ನು ಆಯತಾಕಾರದ ಪಂಜಿನಲ್ಲಿ ನಿಲ್ಲಿಸಿದೆ. ಇದನ್ನು ಹೀಗೆ ಹೆಸರಿಸಲು ಕಾರಣವೆಂದರೆ ಈ ಗ್ಯಾಲರಿಯಲ್ಲಿ ಕಲ್ಲುಗಳನ್ನು ಒತ್ತೊತ್ತಾಗಿ ಜೋಡಿಸಲಾಗಿದೆ.ತೆರೆದ ಒಳಾಂಗಣದ ಈ ಪ್ರದರ್ಶನವು ಮಾರುಕಟ್ಟೆ ಪ್ರದೇಶದಲ್ಲಿನ ಆರಂಭಿಕ ವಾಸ್ತುಗಳ ಚಿತ್ರಣ ನೀಡುತ್ತದೆ. ಆದರೆ ಇಂದಿನ ಪುರಾತತ್ವಶಾಸ್ತ್ರಜ್ಞರ ಪ್ರಕಾರ ಈ ವಾಸ್ತುವಿನ್ಯಾಸವು ವಾಣಿಜ್ಯೋದ್ದೇಶಕ್ಕಿಂತ ಹೆಚ್ಚಾಗಿ ವೈಭವದ ಸಿರಿ ತೋರುವುದಾಗಿದೆ ಎಂದು ಹೇಳಿದ್ದಾರೆ.

ಒಸ್ಸಾರಿಯೊ ಸಮೂಹ (ತಲೆ ಬುರುಡೆಗಳ ಸಾಲು-ಸಮೂಹ)

ದಕ್ಷಿಣ ಭಾಗದಲ್ಲಿರುವ ಉತ್ತರ ಸಮೂಹವು ಸಣ್ಣ ವೇದಿಕೆಯಾಗಿದ್ದು,ಇದು ಹಲವು ಮಹತ್ವದ ಕಟ್ಟಡ ರಚನೆಗಳನ್ನೊಳಗೊಂಡಿದೆ.ಇವು ಚಿಚೆನಿಟ್ಜ್ ನ ಎರಡನೆಯ ಅತಿದೊಡ್ಡ ಎಕ್ಸ್ಟೊಲಿಕ್ ಕಟ್ಟಡ ವಿನ್ಯಾಸವೆನಿಸಿದೆ.

ಒಸ್ಸಾರಿಯೊ

El ಕ್ಯಾಸ್ಟಿಲ್ಲೊ,ದಂತೆಯೇ ಈ ಮೆಟ್ಟಿಲುಗಳುಳ್ಳ-ಪಿರಾಮಿಡ್ ದೇವಾಲಯಗಳು ವೇದಿಕೆಯನ್ನು ಸಣ್ಣ ಪ್ರಮಾಣದಲ್ಲಿ ಪ್ರದರ್ಶಿಸಿ ತಮ್ಮ ಸಾಮರ್ಥ್ಯ ಮೆರೆಯುತ್ತವೆ. ಇದು ತನ್ನ ನೆರೆಯಂತೆಯೇ ದೊಡ್ಡದಾಗಿದ್ದು ನಾಲ್ಕೂ ಬದಿಯಲ್ಲಿ ಏರುವ ಮೆಟ್ಟಿಲ ಸಾಲುಗಳುಳ್ಳ ಸ್ಟೇರ್ ಕೇಸ್ ಒಳಗೊಂಡಿದೆ. ಇದರ ಮೇಲ್ಭಾಗದಲ್ಲೊಂದು ದೇವಾಲಯವಿದ್ದು ಇದು El ಕ್ಯಾಸ್ಟಿಲ್ಲೊವನ್ನು ಹೋಲುತ್ತದೆ,ಮಧ್ಯ ಭಾಗದಲ್ಲಿ ಈ ಪಿರಾಮಿಡ್ ನ ಕೆಳಗಿರುವ ನೈಸರ್ಗಿಕ ಗವಿ 12 metres (39 ft)ಯ ಭಾಗವನ್ನು ತೋರುತ್ತದೆ. ಎಡ್ವರ್ಡ್ ಎಚ್ . ಥಾಂಪ್ಸನ್ ಈ ಗವಿಯನ್ನು 1800 ರ ಕೊನೆಯಲ್ಲಿ, ಉತ್ಖನನ ಮಾಡಿದ,ಆತ ಈ ಸಂದರ್ಭದಲ್ಲಿ ಹಲವಾರು ತಲೆ ಬುರುಡೆಗಳು ಮತ್ತು ರತ್ನಾಭರಣದ ಮಾದರಿಗಳು,ಮುತ್ತುಗಳ ಸರ ಇತ್ಯಾದಿ ದೊರೆತವು. ಅದಕ್ಕೆ ಆತ ದಿ ಹೈ ಪ್ರೀಸ್ಟ್ಸ್ ಟೆಂಪಲ್ ಎಂದು ಆ ರಚನೆಗೆ ಹೆಸರಿಟ್ಟ. ಆದರೆ ಇಂದಿನ ಪುರಾತತ್ವಶಾಸ್ತ್ರಜ್ಞರು ಈ ರಚನೆಯು ಯಾವುದೇ ಗೋರಿಯಲ್ಲ ಅಥವಾ ಇನ್ನಾವುದೇ ಗಣ್ಯ ವ್ಯಕ್ತಿಗಳ ಸಮಾಧಿಯಲ್ಲಿರುವವರು ಪಾದ್ರಿಗಳು ಅಥವಾ ಅರ್ಚಕರೆನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಕ್ಸ್ಟೊಲೊಕ್ ದೇವಾಲಯ

ಒಸ್ಸಾರಿಯೊ ವೇದಿಕೆಯ ಹೊರಭಾಗದಲ್ಲಿ ಇತ್ತೀಚಿಗೆ ದೇವಾಲಯಗಳ ದೃಶ್ಯಾವಳಿಗಳಿಗೆ ಪೂರಕವಾಗುವ ಭಾಗಗಳನ್ನು ಸಂರಕ್ಷಿಸಿಡಲಾಗಿದೆ.ಅಂದರೆ ದೊಡ್ಡ ಅಂತರ್ಜಲರಾಶಿಯುಳ್ಳ ಸಿನೊಟ್ ಇದನ್ನು ಚಿಚೆನಿಟ್ಜ್ ನಲ್ಲಿ ಮಾಯಾ ಭಾಷೆಯ (ದೊಡ್ಡ ಹಲ್ಲಿ ಜಾತಿ) ಇಗುನಾ "ಎಕ್ಸ್ಟೊಲೊಕ್ " ಎಂದು ಹೇಳಲಾಗುತ್ತದೆ. ಈ ದೇವಾಲಯಗಳಲ್ಲಿನ ಉದ್ದದ ಕಂಬಗಳಲ್ಲಿ ಸರಣಿ ಚಿತ್ರಗಳ ಸನ್ನಿವೇಶಗಳು,ಗಿಡಗಳ ಪ್ರಾತಿನಿಧ್ಯ,ಪಕ್ಷಿಗಳು ಮತ್ತು ಪೌರಾಣಿಕ ದೃಶ್ಯಗಳನ್ನು ಉಬ್ಬು ಶಿಲ್ಪದಲ್ಲಿ ಕೆತ್ತಲಾಗಿದೆ

ಎಕ್ಸ್ಟೊಲೊಟ್ ದೇವಾಲಯ ಮತ್ತು ಒಸ್ಸರಿಯೊ ರಚನೆಗಳು ಹಲವಾರು ಕಲಾ ಮಿಶ್ರಣದ ವಿನ್ಯಾಸಗಳನ್ನೊಳಗೊಂಡಿದೆ: ಶುಕ್ರ ಗ್ರಹದ ವೇದಿಕೆ (ಇದು ಸಾಮಾನ್ಯವಾಗಿ El ಕ್ಯಾಸ್ಟಿಲ್ಲೊ ದೇವಾಲಯದ ವಿನ್ಯಾಸದ ಸರಿಸಮ ರಚನೆಗೆ ಹೋಲುತ್ತದೆ), ಗೋರಿ ಸಮಾಧಿಗಳ ವೇದಿಕೆ , ಮತ್ತು ಒಂದು ಸಣ್ಣ , ದುಂಡನೆಯ ರಚನಾಶಿಲ್ಪ ಕಾಣುತ್ತದೆ ಅದನ್ನು ಯಾವುದೇ ಹೆಸರನ್ನು ನೀಡಲಾಗಿಲ್ಲ. ಈ ಮೂರೂ ಕಟ್ಟಡದ ರಚನೆಗಳನ್ನು ಒಸ್ಸಾರಿಯೊದ ಸಾಲಿನಲ್ಲಿ ವಿಸ್ತರಿಸಿರುವಂತೆ ಮಾಡಲಾಗಿದೆ. ಇದಲ್ಲದೇ ಒಸ್ಸಾರಿಯೊ ವೇದಿಕೆಯು ಒಂದು ಗೋಡೆಯನ್ನಾಧರಿಸಿ ರಚನೆಗೊಂಡರೆ, ಅದು ಮುಂದೆ ಸಾಕ್ಬೆ ಮೂಲಕ ನೂರಾರು ಅಡಿಗಳಷ್ಟಿರುವ ಎಕ್ಸ್ಟೊಲೊಕ್ ದೇವಾಲಯಕ್ಕೆ ದಾರಿ ಮಾಡಿಕೊಡುತ್ತದೆ.

ಹೌಸ್ ಆಫ್ ದಿ ಮೆಟೇಟ್ಸ್ ಅಂಡ್ ಹೌಸ್ ಆಫ್ ಮೆಸ್ಟಿಜಾಸ್ (ಕಲ್ಲುಗಣಿಗಳ ನೆಲೆ ಮತ್ತು ಪವಿತ್ರ ಯಾತ್ರಾರ್ಥಿಗಳ ಜಾಗೆ)

ದಕ್ಷಿಣದ ಒಸ್ಸಾರಿಯದ ಗಡಿಯಲ್ಲಿ ಇರುವ ಭಾಗದಲ್ಲಿ ಪುರಾತತ್ವಶಾಸ್ತ್ರಜ್ಞರ ಪ್ರಕಾರ ಎರಡು ಸಣ್ಣ ಕಟ್ಟಡಗಳಿದ್ದು ಇವು ಪುರಾತನ ಕಾಲದ ಮಹತ್ವದ ಗಣ್ಯ ವ್ಯಕ್ತಿಗಳ ನೆಲೆವಾಸವಾಗಿದ್ದವೆಂದು ಹೇಳಿದ್ದಾರೆ.

ದಿ ಕಾಸಾ ಕೊಲೊರಾಡಾ ಗ್ರುಪ್ (ಪುರಾತತ್ವ ವಿಭಾಗಕ್ಕೆ ಅಗತ್ಯವಿರುವ ತಾಣದ ಸಮೂಹದ ಪ್ರದೇಶ)

ಅದೇ ರೀತಿ ಒಸ್ಸಾರಿಯೊ ಗ್ರುಪ್ ನ ಸಣ್ಣ ಭೂಭಾಗದಲ್ಲಿನ ಹಲವಾರು ಕಟ್ಟಡ ರಚನೆ ಶೈಲಿಗಳು ಚಿಚೆನಿಟ್ಜ್ ದ ಅತ್ಯಂತ ಹಳೆಯದಾದ ರಚನೆಗಳೆಂದು ಹೇಳಲಾಗುತ್ತದೆ.ಇದು ಬಹುತೇಕ ಪುರಾತತ್ವ ಉತ್ಖನದ ಉತ್ತಮ ವಲಯದ ಜಾಗೆ ಎಂದು ಹೇಳಲಾಗುತ್ತದೆ.

ಕಾಸಾ ಕೊಲೊರಾಡಾ (ಸ್ಪ್ಯಾನಿಶ್ ರ ಕೆಂಪು ಮನೆ)

ಚಿಚೆನಿಟ್ಜ್ ದಲ್ಲಿರುವ ಹಲವಾರು ಕಟ್ಟಡ ರಚನೆಗಳು ಸ್ಪ್ಯಾನಿಶ್ ಫಾರ್ ರೆಡ್ ಹೌಸ್ ಎಂದು ಹೇಳಲಾಗುವವುಗಳನ್ನು ಜೋಪಾನವಾಗಿ ಕಾಯ್ದಿಡಲಾಗಿದೆ. ಇದಕ್ಕೆ ಮಾಯಾ ಹೆಸರೂ ಚಿಚಂಚೊಬ್ ಎಂದು ಕರೆಯಲಾಗುತ್ತದೆ,INAH ದ ಪ್ರಕಾರ ಇದರರ್ಥ "ಸಣ್ಣ ರಂಧ್ರಗಳು" ಎಂದು ಕರೆಯಲಾಗುತ್ತದೆ. ಒಂದು ವಲಯದ ಚೇಂಬರ್ ಅಥವಾ ಕಟ್ಟಡದ ವಿಭಾಗದಲ್ಲಿ ವಿಸ್ತೃತ ಚಿತ್ರಕಲೆಗಳ ಪ್ರಾಕಾರಗಳಿವೆ,ಇವು ಚಿಚೆನಿಟ್ಜ್ ವನ್ನಾಳಿದ ಆಡಳಿತಗಾರರ ಹೆಸರನ್ನು ಹೇಳುತ್ತವೆ.ಬಹುತೇಕ ಹತ್ತಿರದ ನಗರ ಎಕ್ ಬಲಾಮ್ ಮತ್ತು ಮಾಯಾ ದಿನಾಂಕವನ್ನು ಅವು ಸೂಚಿಸುತ್ತಿವೆ.ಇದು 869 a.d.e.,ಕಾಲಕ್ಕೆ ಸಮತೆಯನ್ನು ಕಾಣಿಸುತ್ತದೆ.ಹೀಗೆ ಇಂತಹ ದಿನಾಂಕಗಳು ಅತ್ಯಂತ ಹಳೆಯ ಚಿಚೆನಿಟ್ಜ್ ವನ್ನು ನೆನಪಿಗೆ ತರುತ್ತದೆ.

ನಂತರ 2009,ರಲ್ಲಿ INAH ಸ್ಮಾಲ್ ಬಾಲ್ ಕೋರ್ಟ್ ನ್ನು ಸಂರಕ್ಷಿಸಿದೆ.ಇದು ಕಾಸಾ ಕೊಲೊರಾಡಾದ ಹಿಂಭಾಗದ ಗೋಡೆಗೆ ಹತ್ತಿರವಾಗಿದೆ.

ದಿ ಹೌಸ್ ಆಫ್ ದಿ ಡೀರ್ (ಚಿಗರೆ ವಾಸದ ನೆಲೆ)

ಆದರೆ ಕಾಸಾ ಕೊಲೊರಾಡಾ ಹಲವಾರು ಒಳ್ಳೆಯ ಸ್ಥಿತಿಯ ಕಟ್ಟಡಗಳ ಸಂರಕ್ಷಣೆಗೆ ಸೂಕ್ತವಾಗಿದೆ,ಇನ್ನುಳಿದ ಕಟ್ಟಡಗಳೂ ಸಹ ಈ ಸಮೂಹದಲ್ಲಿ ಜೀರ್ಣಗೊಂಡ ಅಥವಾ ಸವೆದು ಹೋದರೂ ಅಪವಾದವೆಂಬಂತೆ ಉಳಿದುಕೊಂಡಿವೆ. ಇದರಲ್ಲಿ ಒಂದು ಕಟ್ಟಡವು ಅರ್ಧದಲ್ಲಿ ಊರ್ಧ್ವಮುಖಿಯಾಗಿದೆ.ಇದನ್ನು ಕಾಸಾ ಡೆಲ್ ವೆನಾಡೊ (ಹೌಸ್ ಆಫ್ ದಿ ಡೀರ್ ) ಎನ್ನಲಾಗುತ್ತದೆ. ಈ ಹೆಸರಿನ ಮೂಲದ ಬಗ್ಗೆ ಗೊತ್ತಾಗಿಲ್ಲವಾದರೂ ಈ ಕಟ್ಟಡದಲ್ಲಿ ಯಾವುದೇ ಪ್ರಾಣಿ ಅಥವಾ ಚಿರತೆಯ ಚಿತ್ರಗಳ ಚಿತ್ರಕಲೆ ಈ ಕಟ್ಟಡದ ಮೇಲೆ ಕಾಣಿಸುವುದಿಲ್ಲ.

ಸೆಂಟ್ರಲ್ ಗ್ರುಪ್ (ಕೇಂದ್ರ ಸಮೂಹ)

ಲಾಸ??

Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
Angie Perez
27 December 2015
Try to get as early as possible to avoid crowds, that can make a big difference in your visit. It can be visited in half an hour. Do not miss the restauran Oxtum on your way out!
Wagner SL
6 June 2016
One of the most interesting and largest Mayan archaeological sites. Better get there early to escape the horde of tourists arriving from Cancun. Hellish heat, but there is some shade. Bring much water
Gordon Mei
15 November 2015
You'll sometimes see guys dressed as Mayan warriors near the entrance of the site. After the pyramid and main landmarks, check out the stone observatory in the back, about a 10m walk from the pyramid.
Paula Madeira
28 December 2021
Incredible place with a lot to see. It is huge and so beautiful. It is pricey, but worth every cent. You can pay part of the entrance with a credit card and $80 pesos need to be in cash.
Tony T
1 July 2022
the moment you walk out of the surrounding forest and lay eyes on "El Castillo" of Chichen-Itza,the sense of wonder, awe, and majesty immediately impacts you.There is an energy that en captivates you
Maurice
5 July 2017
Apart from all the souvenir vendors and the fact you cant approach any of the monuments, it is a beautiful place. But really come early, because from 11am the whole site is packed with tourists.
Hacienda Chichen Resort and Yaxkin Spa

starting $110

Mayaland Hotel & Bungalows

starting $88

The Lodge at Chichen Itza

starting $137

Hotel Okaan

starting $80

Villas Arqueologicas Chichen Itza

starting $45

Hotel Dolores Alba Chichen

starting $26

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Cancuén

Канкуен (ісп. Cancuén) — руїни міста цивілізації майя в деп

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
El Castillo, Chichen Itza

El Castillo (Spanish for 'The Castle') is the nickname of a

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Sacred Cenote

The Sacred Cenote (Spanish: cenote sagrado, 'sacred well';

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
El Caracol, Chichen Itza

El Caracol, also referred to as the Observatory or more formally by

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Ik Kil

Ik Kil is a well known cenote outside Pisté in the Tinúm M

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Ek' Balam

Ek' Balam is a pre-Columbian archaeological site in municipality of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Hacienda Chenché de las Torres

Hacienda Chenché de las Torres is located in the Temax Municipality

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Ake

Aké is an archaeological site of the pre-Columbian Maya civilization,

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Uxmal

Uxmal (Yucatec Maya: Óoxmáal) is a large pre-Columbian ruined city o

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Palenque

Palenque (Bàak' in Modern Maya) is a Maya archeological site near the

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Calakmul

Calakmul (also Kalakmul and other less frequent variants) is the name

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Temple of the Inscriptions

The Temple of the Inscriptions (Classic Maya: Bʼolon Yej Teʼ Naah (

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Tulum

Tulum ( (Tulu'um in Modern Maya) ; in Spanish orthography,

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ