ಬಕಿಂಗ್ಹ್ಯಾಮ್ ಅರಮನೆ

ಬಕಿಂಗ್ಹ್ಯಾಮ್ ಅರಮನೆ ಯು ಬ್ರಿಟಿಷ್ ರಾಜವಂಶದ ಪ್ರಧಾನ ನಿವಾಸ ಮತ್ತು ಲಂಡನ್‌ ನೆಲೆಯಾಗಿದೆ. ವೆಸ್ಟ್‌ಮಿಂಸ್ಟರ್ ನಗರದಲ್ಲಿರುವ ಈ ಅರಮನೆಯು ರಾಜ್ಯದ ವಿಶೇಷ ಸಮಾರಂಭಗಳು ಮತ್ತು ರಾಜಯೋಗ್ಯ ಆತಿಥ್ಯಕ್ಕಿರುವ ಒಂದು ವ್ಯವಸ್ಥೆಯಾಗಿದೆ. ಇದು ರಾಷ್ಟ್ರೀಯ ಸಂತೋಷ ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ರಿಟಿಷ್ ಜನರು ಸೇರುವ ಒಂದು ಮುಖ್ಯ ಕೇಂದ್ರ.

ಮೂಲತಃ ಬಕಿಂಗ್ಹ್ಯಾಮ್‌ ನಿವಾಸ ವೆಂದು ಕರೆಯಲ್ಪಡುತ್ತಿದ್ದ ಮತ್ತು ಇಂದಿನ ಅರಮನೆಯ ಮುಖ್ಯ ಭಾಗವಾಗಿರುವ ಈ ಕಟ್ಟಡವು ಕನಿಷ್ಠ ೧೫೦ ವರ್ಷಗಳ ಕಾಲ ಖಾಸಗಿ ಒಡೆತನದಲ್ಲಿದ್ದ ಜಾಗದಲ್ಲಿ ೧೭೦೫ರಲ್ಲಿ ಬಕಿಂಗ್ಹ್ಯಾಮ್‌‌ನ ಡ್ಯೂಕ್‌ಗಾಗಿ ನಿರ್ಮಿಸಿದ ಒಂದು ದೊಡ್ಡ ಪುರಭವನವಾಗಿತ್ತು. ಇದನ್ನು ನಂತರ ೧೭೬೧ರಲ್ಲಿ ಜಾರ್ಜ್ III ವಶಪಡಿಸಿಕೊಂಡು, ರಾಣಿ ಚಾರ್ಲೊಟ್‌ಗೆ ಖಾಸಗಿ ನಿವಾಸವಾಗಿ ಮಾಡಿದರು ಮತ್ತು ಅದನ್ನು "ರಾಣಿಯ ನಿವಾಸ"ವೆಂದು ಕರೆಯಲಾಯಿತು. ೧೯ನೇ ಶತಮಾನದಲ್ಲಿ, ಮುಖ್ಯವಾಗಿ ಜಾನ್ ನ್ಯಾಶ್ ಮತ್ತು ಎಡ್ವರ್ಡ್ ಬ್ಲೋರ್ ಮೊದಲಾದ ವಾಸ್ತುಶಿಲ್ಪಿಗಳು ಇದರ ಮಧ್ಯಭಾಗದ ಅಂಗಣದ ಸುತ್ತ ಮೂರು ಪಾರ್ಶ್ವ ಭಾಗಗಳನ್ನು ನಿರ್ಮಿಸಿ ವಿಸ್ತಾರಗೊಳಿಸಿದರು. ಬಕಿಂಗ್ಹ್ಯಾಮ್ ಅರಮನೆಯು ಅಂತಿಮವಾಗಿ ೧೮೩೭ರಲ್ಲಿ ರಾಣಿ ವಿಕ್ಟೋರಿಯಾರ ಒಪ್ಪಿಗೆಯೊಂದಿಗೆ ಬ್ರಿಟಿಷ್ ರಾಜರ ಅಧಿಕೃತ ರಾಜೋಚಿತ ಅರಮನೆಯಾಯಿತು. ಅಂತಿಮ ಪ್ರಮುಖ ಹೆಚ್ಚುವರಿ ರಚನೆಗಳನ್ನು ೧೯ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು ೨೦ನೇ ಶತಮಾನದ ಆರಂಭದಲ್ಲಿ ಮಾಡಲಾಯಿತು, ಮುಖ್ಯವಾಗಿ ಪೂರ್ವದ ಮುಂಭಾಗದಲ್ಲಿ ಪ್ರಸಿದ್ಧ ಬಾಲ್ಕನಿಯನ್ನು ನಿರ್ಮಿಸಲಾಯಿತು, ಅಲ್ಲಿ ಹೊರಗಿನ ಜನಸಮೂಹವನ್ನು ಎದುರಿಸಲು ರಾಜ-ಕುಟುಂಬವು ಸಾಂಪ್ರದಾಯಿಕವಾಗಿ ಸೇರುತ್ತಿತ್ತು. ಆದರೆ ಆ ಅರಮನೆಯ ಚ್ಯಾಪಲ್ ವಿಶ್ವ ಸಮರ II ರ ಸಂದರ್ಭದಲ್ಲಿ ಜರ್ಮನ್ ಬಾಂಬಿನಿಂದ ನಾಶಗೊಂಡಿತು; ನಂತರ ಅಲ್ಲಿ ರಾಣಿಯ ಗ್ಯಾಲರಿಯನ್ನು ನಿರ್ಮಿಸಲಾಯಿತು ಮತ್ತು ೧೯೬೨ರಲ್ಲಿ ರಾಜವಂಶದ ಸಂಗ್ರಹದ ಕಲಾಕೃತಿಗಳನ್ನು ಪ್ರದರ್ಶಿಸಲು ಸಾರ್ವಜನಿಕರಿಗೆ ತೆರವುಗೊಳಿಸಲಾಯಿತು.

೧೯ನೇ ಶತಮಾನದ ಆರಂಭದ ಮೂಲಭೂತ ಒಳಾಂಗಣ ವಿನ್ಯಾಸಗಳಲ್ಲಿ ಪ್ರಕಾಶಮಾನ ಬಣ್ಣದ ಗಾರೆಕಲ್ಲು ಹಾಗೂ ನೀಲಿ ಮತ್ತು ಗುಲಾಬಿ ಬಣ್ಣದ ಲ್ಯಾಪಿಸ್‌ಅನ್ನು ವ್ಯಾಪಕವಾಗಿ ಬಳಸಲಾಯಿತು, ಸರ್ ಚಾರ್ಲ್ಸ್ ಲಾಂಗ್‌ರ ಸೂಚನೆಯೊಂದಿಗೆ ಮಾಡಲಾದ ಇವುಗಳಲ್ಲಿ ಹೆಚ್ಚಿನವು ಈಗಲೂ ಉಳಿದಿವೆ. ರಾಜ ಎಡ್ವರ್ಡ್ VII ಬೆಲ್ಲೆ ಎಪೋಕ್ಯೂ ಕೆನೆಬಣ್ಣದ ಮತ್ತು ಬಂಗಾರ ಬಣ್ಣದ ಯೋಜನೆಯಲ್ಲಿ ಭಾಗಶಃ ಪುನರಲಂಕರಣವನ್ನು ಮಾಡಿದರು. ಅನೇಕ ಸಣ್ಣ ಸ್ವಾಗತ ಕೊಠಡಿಗಳನ್ನು ಬ್ರೈಟನ್‌ನ ರಾಯಲ್ ಪೆವಿಲಿಯನ್ ಮತ್ತು ಕಾರ್ಲ್ಟನ್ ಹೌಸ್‌ನಿಂದ ಪಡೆದ ಪೀಠೋಪಕರಣಗಳು ಮತ್ತು ಸಲಕರಣಗಳೊಂದಿಗೆ ಚೈನೀಸ್ ಆಳ್ವಿಕೆಯ ಶೈಲಿಯಲ್ಲಿ ಸಜ್ಜುಗೊಳಿಸಲಾಗಿದೆ. ಬಕಿಂಗ್ಹ್ಯಾಮ್ ಅರಮನೆ ಉದ್ಯಾನವು ಲಂಡನ್‌‌ನಲ್ಲಿರುವ ಅತಿ ದೊಡ್ಡ ಖಾಸಗಿ ಉದ್ಯಾನವಾಗಿದೆ.

ಅಧಿಕೃತ ಮತ್ತು ರಾಜ್ಯ ಮನರಂಜನೆಗೆ ಬಳಸುವ ವೈಭವದ ಕೋಣೆಗಳನ್ನು ಅರಮನೆಯ ಬೇಸಿಗೆಯ ಪ್ರದರ್ಶನವಾಗಿ ಪ್ರತಿ ವರ್ಷ ಹೆಚ್ಚಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕರಿಗೆ ತೆರವುಗೊಳಿಸಲಾಗುತ್ತದೆ. ಈ ಅರಮನೆಯನ್ನು ಕೆಲವೊಮ್ಮೆ ಆಡುಮಾತಿನಲ್ಲಿ ಬಕ್ ಹೌಸ್ ಎಂದು ಕರೆಲಾಗುತ್ತದೆ.

ಇತಿಹಾಸ

ಜಾಗ

ಮಧ್ಯ ಯುಗದಲ್ಲಿ, ಬಕಿಂಗ್ಹ್ಯಾಮ್ ಅರಮನೆಯ ಜಾಗವನ್ನು ಮೇನರ್ ಆಫ್ ಎಬರಿಯ (ಅಯ ಎಂದೂ ಕರೆಯುತ್ತಾರೆ) ಭಾಗವಾಗಿ ರಚಿಸಲಾಯಿತು. ಈ ಜವುಗು ಭೂಮಿಗೆ ಟಿಬರ್ನ್ ನದಿಯಿಂದ ನೀರು ಸರಬರಾಜು ಮಾಡಲಾಯಿತು, ಈ ನದಿಯು ಈಗಲೂ ಅರಮನೆಯ ಅಂಗಣದ ಕೆಳಗೆ ಮತ್ತು ದಕ್ಷಿಣದ ಪಾರ್ಶ್ವದಲ್ಲಿ ಹರಿಯುತ್ತದೆ. ಈ ನದಿಯನ್ನು ದಾಟಬಹುದಾದ ಸ್ಥಳದಲ್ಲಿ (ಕೌ ಫೋರ್ಡ್‌ನಲ್ಲಿ) ಐ ಕ್ರಾಸ್ ಹಳ್ಳಿಯು ಬೆಳೆಯಿತು. ಈ ಜಾಗದ ಮಾಲಿಕತ್ವವು ಅನೇಕ ಬಾರಿ ಹಲವಾರು ಮಂದಿಗೆ ಬದಲಾಯಿತು; ಇದರ ಮಾಲೀಕರಾಗಿದ್ದವರೆಂದರೆ ಸ್ಯಾಕ್ಸನ್ ಅವಧಿಯ ಉತ್ತರಾರ್ಧದಲ್ಲಿ ಎಡ್ವರ್ಡ್ ಕನ್ಫೆಸರ್ ಮತ್ತು ಆತನ ಪತ್ನಿ ಎಡಿತ್ ಆಫ್ ವೆಸ್ಸೆಕ್ಸ್ ಮತ್ತು ನಂತರ ನಾರ್ಮನ್ ಕಾಂಕ್ವೆಸ್ಟ್ ವಿಲಿಯಂ ದಿ ಕಾಂಕರರ್(ಮೊದಲನೇ ವಿಲಿಯಂ). ವಿಲಿಯಂ ಆ ಜಾಗವನ್ನು ಜಿಯೋಫ್ರಿ ಡಿ ಮ್ಯಾಂಡೆವಿಲ್ಲೆಗೆ ನೀಡಿದರು, ಆತ ಅದನ್ನು ವೆಸ್ಟ್‌ಮಿಂಸ್ಟರ್ ಅಬ್ಬೆಯ ಸಂನ್ಯಾಸಿಗಳಿಗೆ ವರ್ಗಾಯಿಸಿದರು.

೧೫೩೧ರಲ್ಲಿ, ಹೆನ್ರಿ VIII ಎಟನ್ ಕಾಲೇಜ್‌ನಿಂದ ಸೇಂಟ್ ಜೇಮ್ಸ್ ಆಸ್ಪತ್ರೆಯನ್ನು (ನಂತರ ಸೇಂಟ್ ಜೇಮ್ಸ್ ಅರಮನೆ) ವಶಪಡಿಸಿಕೊಂಡರು ಮತ್ತು ೧೫೩೬ರಲ್ಲಿ ಆತ ವೆಸ್ಟ್‌ಮಿಂಸ್ಟರ್ ಅಬ್ಬೆಯಿಂದ ಮೇನರ್ ಆಫ್ ಎಬರಿಯನ್ನು ಪಡೆದುಕೊಂಡರು. ಈ ವರ್ಗಾವಣೆಗಳು ಬಕಿಂಗ್ಹ್ಯಾಮ್ ಅರಮನೆಯ ಜಾಗವನ್ನು ಸುಮಾರು ೫೦೦ ವರ್ಷಗಳ ಹಿಂದೆ ವಿಲಿಯಂ ದಿ ಕಾಂಕೆರರ್ ಬೇರೆಯವರಿಗೆ ನೀಡಿದ ನಂತರ ಮೊದಲ ಬಾರಿಗೆ ರಾಜರ ಕೈಗೆ ಹಿಂದಿರುಗಿಸಿದವು.

ವಿವಿಧ ಮಾಲೀಕರು ಇದನ್ನು ರಾಜಯೋಗ್ಯ ಭೂಮಾಲೀಕರಿಂದ ಗೇಣಿಗೆ ತೆಗೆದುಕೊಂಡರು ಮತ್ತು ೧೭ನೇ ಶತಮಾನದಲ್ಲಿ ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಪಡೆಯುವ ಹಿಡುವಳಿಯು ಹುಚ್ಚು ಸಟ್ಟಾ ಬಂಡವಾಳ ಹೂಡಿಕೆಗೆ ಸಂಬಂಧಿಸಿತ್ತು. ಅನಂತರ ಐ ಕ್ರಾಸ್ ಹಳೆಯ ಹಳ್ಳಿಯು ಕ್ಷೀಣಿಸಲು ಆರಂಭವಾಯಿತು ಮತ್ತು ಆ ಪ್ರದೇಶವು ಬಂಜರುಭೂಮಿಯಾಯಿತು. ಹಣದ ಅವಶ್ಯಕತೆಯಿಂದಾಗಿ ಜೇಮ್ಸ್ I ರಾಜವಂಶಪಾರಂಪರ್ಯವಾಗಿ ಬಂದ ಆಸ್ತಿಯ ಒಂದು ಭಾಗವನ್ನು ಮಾರಾಟ ಮಾಡಿದರು. ಮತ್ತೊಂದು ಭಾಗವನ್ನು ಉಳಿಸಿಕೊಂಡು, ಅಲ್ಲಿ ರೇಷ್ಮೆ ಕೈಗಾರಿಕೆಗಾಗಿ ಒಂದು 4-acre (16,000 m2) ಹಿಪ್ಪುನೇರಳೆ ತೋಟವನ್ನು ನಿರ್ಮಿಸಿದರು. (ಇದು ಇಂದಿನ ಅರಮನೆಯ ವಾಯವ್ಯ ಭಾಗದಲ್ಲಿದೆ.) ಕ್ಲೆಮೆಂಟ್ ವಾಕರ್ ಅನಾರ್ಕಿಯ ಆಂಗ್ಲಿಕಾನ ದಲ್ಲಿ (೧೬೪೯) 'ಎಸ್. ಜೇಮ್ಸ್‌ನ ಹಿಪ್ಪುನೇರಳೆ ತೋಟದಲ್ಲಿನ ಹೊಸದಾಗಿ ಹುಟ್ಟಿಕೊಂಡ ಸೋಡಮ್ ಮತ್ತು ಸ್ಪಿನ್ಟ್ರೀಸ್'ಅನ್ನು ಸೂಚಿಸಿದ್ದಾರೆ; ಇದು ಈ ಜಾಗವು ಭೋಗಲೋಲುಪತೆಯ ಸ್ಥಳವಾಗಿರಬಹುದೆಂಬುದನ್ನು ಸೂಚಿಸುತ್ತದೆ. ಅಂತಿಮವಾಗಿ ೧೭ನೇ ಶತಮಾನದ ಉತ್ತರಾರ್ಧದಲ್ಲಿ, ಈ ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಪಡೆದ ಹಿಡುವಳಿಯನ್ನು ಆಸ್ತಿಯ ಒಡೆಯ ಸರ್ ಹ್ಯೂಘ್ ಆಡ್ಲೆಯಿಂದ ಮುಂದಿನ ಹಕ್ಕುದಾರಿಣಿ ಮೇರಿ ಡೇವಿಸ್‌‌ ವಂಶಪಾರಂಪರ್ಯವಾಗಿ ಪಡೆದರು.

ಆ ಜಾಗದಲ್ಲಿದ್ದ ಮೊದಲ ನಿವಾಸಗಳು

ಗೋರಿಂಗ್ ನಿವಾಸ

ಬಹುಶಃ ಆ ಜಾಗದಲ್ಲಿ ಸ್ಥಾಪಿಸಲಾದ ಮೊದಲ ನಿವಾಸವೆಂದರೆ ೧೬೨೪ರಲ್ಲಿ ನಿರ್ಮಿಸಲಾದ ಸರ್ ವಿಲಿಯಂ ಬ್ಲೇಕ್‌ರ ನಿವಾಸ. ನಂತರದ ಮಾಲೀಕರೆಂದರೆ ಲಾರ್ಡ್ ಗೋರಿಂಗ್, ಆತ ೧೬೩೩ರಿಂದ ಬ್ಲೇಕ್‌ರ ನಿವಾಸವನ್ನು ವಿಸ್ತರಿಸಿದರು ಮತ್ತು ಈಗ ಇರುವ ತೋಟದ ಹೆಚ್ಚಿನ ಭಾಗವನ್ನು ಅಭಿವೃದ್ಧಿಗೊಳಿಸಿದರು, ಆಗ ಅದನ್ನು ಗೋರಿಂಗ್ ಗ್ರೇಟ್ ಗಾರ್ಡನ್ ಎಂದು ಕರೆಯಲಾಗುತ್ತಿತ್ತು. ಆದರೆ ಆತ ಆ ಹಿಪ್ಪುನೇರಳೆ ತೋಟವನ್ನು ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಪಡೆಯುವ ಬಗ್ಗೆ ಆಸಕ್ತಿಯನ್ನು ತೋರಿಸಲಿಲ್ಲ. ಗೋರಿಂಗ್‌ಗೆ ತಿಳಿಯದೆ,೧೬೪೦ರಲ್ಲಿ ರಾಜ ಚಾರ್ಲ್ಸ್ I ಲಂಡನ್‌‌ಗೆ ಓಡಿಹೋಗುವುದಕ್ಕಿಂತ ಮೊದಲು ಕಾನೂನಿಗೆ ಅನುಗುಣವಾಗಿ ಜಾರಿಗೆ ತರಲು" ಅಗತ್ಯವಾದ ದಾಖಲೆಯು ಮಹಾ-ಮುದ್ರೆಯನ್ನು ಪಡೆಯಲು ವಿಫಲಗೊಂಡಿತು. (ಈ ನಿರ್ಣಾಯಕ ಲೋಪವು ಬ್ರಿಟಿಷ್ ರಾಜ-ಕುಟುಂಬವು ರಾಜ ಜಾರ್ಜ್ IIIರ ಅಧೀನದಲ್ಲಿ ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಪಡೆಯುವ ಹಿಡುವಳಿಯನ್ನು(ಫ್ರೀಹೋಲ್ಡ್) ಪುನಃ ಸ್ವಾಧೀನಪಡಿಸಿಕೊಳ್ಳಲು ಸಹಕರಿಸಿತು.)

ಅರ್ಲಿಂಗ್ಟನ್ ನಿವಾಸ

ದುಂದುವೆಚ್ಚ ಮಾಡುವ ಗೋರಿಂಗ್ ಗೇಣಿ ಕೊಡಲು ವಿಫಲಗೊಂಡರು; ನಂತರ ಅರ್ಲಿಂಗ್ಟನ್‌ನ ಮೊದಲ ಅರ್ಲ್ ಹೆನ್ರಿ ಬೆನ್ನೆಟ್ ಆ ಭವನವನ್ನು ಪಡೆದುಕೊಂಡರು ಮತ್ತು ಈಗ ಗೋರಿಂಗ್ ನಿವಾಸವೆಂದು ಕರೆಯಲ್ಪಡುವ ಅದು ೧೬೭೪ರಲ್ಲಿ ಹೊತ್ತಿಕೊಂಡಾಗ ಅದರಲ್ಲಿ ವಾಸಿಸುತ್ತಿದ್ದರು. ನಂತರದ ವರ್ಷದಲ್ಲಿ ಆ ಜಾಗದಲ್ಲಿ ಅರ್ಲಿಂಗ್ಟನ್ ನಿವಾಸವು -ಇಂದಿನ ಅರಮನೆಯ ದಕ್ಷಿಣದ ಪಾರ್ಶ್ವ- ನಿರ್ಮಿಸಲ್ಪಟ್ಟಿತು ಮತ್ತು ಅದರ ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಪಡೆಯುವ ಹಿಡುವಳಿಯನ್ನು ೧೭೦೨ರಲ್ಲಿ ಖರೀದಿಸಲಾಯಿತು.

ಬಕಿಂಗ್ಹ್ಯಾಮ್‌ ಮನೆ

ಈಗಿನ ಅರಮನೆಯ ವಾಸ್ತುಶಿಲ್ಪೀಯ ಜೀವಾಳವಾಗಿರುವ ನಿವಾಸವನ್ನು ೧೭೦೩ರಲ್ಲಿ ಬಕಿಂಗ್ಹ್ಯಾಮ್‌ ಮತ್ತು ನಾರ್ಮನ್‌ಬೈಯ ಮೊದಲ ಡ್ಯೂಕ್‌ಗಾಗಿ ನಿರ್ಮಿಸಲಾಯಿತು, ಇದನ್ನು ವಿಲಿಯಂ ವಿಂಡೆ ವಿನ್ಯಾಸಗೊಳಿಸಿದರು. ಇದು ಪಾರ್ಶ್ವದಲ್ಲಿ ಎರಡು ಸಣ್ಣ ಸೇವಾ ಕೊಠಡಿಗಳೊಂದಿಗೆ ದೊಡ್ಡ, ಮೂರು-ಅಂತಸ್ತಿನ ಕೇಂದ್ರ ಬ್ಲಾಕ್‌ನ ಶೈಲಿಯನ್ನು ಒಳಗೊಂಡಿತ್ತು. ಬಕಿಂಗ್ಹ್ಯಾಮ್‌ ನಿವಾಸವನ್ನು ಬಕಿಂಗ್ಹ್ಯಾಮ್‌ನ ವಂಶಜ ಸರ್ ಚಾರ್ಲ್ಸ್ ಶೆಫ್ಫೀಲ್ಡ್ ೧೭೬೧ರಲ್ಲಿ ಜಾರ್ಜ್ IIIಗೆ £೨೧,೦೦೦ (೨೦೧೬ ನ ಪ್ರಕಾರ £<s,tro.) ಮೌಲ್ಯಕ್ಕೆ ಮಾರಾಟ ಮಾಡಿದರು.}}) ಮೌಲ್ಯಕ್ಕೆ ಮಾರಾಟ ಮಾಡಿದರು.) ಮೌಲ್ಯಕ್ಕೆ ಮಾರಾಟ ಮಾಡಿದರು.

ಅಜ್ಜ ಜಾರ್ಜ್‌ II ರಂತೆ, ಜಾರ್ಜ್‌ III ಸಹ ಹಿಪ್ಪುನೇರಳೆ ತೋಟವನ್ನು ಮಾರಾಟ ಮಾಡಲು ನಿರಾಕರಿಸಿದರು, ಆದ್ದರಿಂದ ಶೆಫ್ಫೀಲ್ಡ್‌ಗೆ ಆ ಜಾಗದ ಸಂಪೂರ್ಣ ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಪಡೆಯುವ ಹಿಡುವಳಿಯನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಶೆಫ್ಫೀಲ್ಡ್ ಬಕಿಂಗ್ಹ್ಯಾಮ್‌ ನಿವಾಸವನ್ನು ಮಾರಾಟ ಮಾಡಿದಾಗ, ಅದು ರಾಜ ಕುಟುಂಬದ ಕೈಗೆ ಬಂದಿತು.

ರಾಣಿಯ ನಿವಾಸದಿಂದ ಅರಮನೆಗೆ

ಆ ನಿವಾಸವನ್ನು ಮೂಲತಃ ಒಂದು ಖಾಸಗಿ ಆಶ್ರಯ ಸ್ಥಾನವಾಗಿ ಅದರಲ್ಲೂ ವಿಶೇಷವಾಗಿ ರಾಣಿ ಚಾರ್ಲೊಟ್‌ಗಾಗಿ ನಿರ್ಮಿಸಲಾಗಿತ್ತು ಮತ್ತು ಅದನ್ನು ರಾಣಿಯ ನಿವಾಸವೆಂದು ಕರೆಯಲಾಗುತ್ತಿತ್ತು, ಅವರ ೧೫ ಮಕ್ಕಳಲ್ಲಿ ೧೪ ಮಕ್ಕಳು ಇಲ್ಲೇ ಜನಿಸಿದರು. ಸೇಂಟ್ ಜೇಮ್ಸ್‌ನ ಅರಮನೆಯು ಅಧಿಕೃತ ಮತ್ತು ಶುಭಾಶುಭ ಕರ್ಮಾಚರಣೆಗಳನ್ನು ನಡೆಸುವ ರಾಜವಂಶದ ನಿವಾಸವಾಗಿ ಉಳಿಯಿತು.

ಈ ನಿವಾಸಕ್ಕೆ ಹೊಸ ರೂಪ ಕೊಡುವ ಕಾರ್ಯವು ೧೭೬೨ರಲ್ಲಿ ಆರಂಭವಾಯಿತು. ೧೮೨೦ರಲ್ಲಿ ಪಟ್ಟಕ್ಕೆ ಬಂದ ನಂತರ ಜಾರ್ಜ್‌ IV ಒಂದು ಸಣ್ಣ, ಅನುಕೂಲಕರ ನಿವಾಸವನ್ನು ನಿರ್ಮಿಸುವ ಕಲ್ಪನೆಯೊಂದಿಗೆ ಇದರ ನವೀಕರಣವನ್ನು ಮುಂದುವರಿಸಿದರು. ನವೀಕರಣ ಕಾರ್ಯವು ಪ್ರಗತಿಯಲ್ಲಿದ್ದಾಗ ೧೮೨೬ಲ್ಲಿ ರಾಜ ತನ್ನ ವಾಸ್ತುಶಿಲ್ಪಿ ಜಾನ್ ನ್ಯಾಶ್‌ರ ನೆರವಿನೊಂದಿಗೆ ಈ ನಿವಾಸವನ್ನು ಒಂದು ಅರಮನೆಯಾಗಿ ಮಾರ್ಪಡಿಸಲು ನಿರ್ಧರಿಸಿದರು. ಕೆಲವು ಪೀಠೋಪಕರಣಗಳನ್ನು ಕಾರ್ಲ್ಟನ್ ನಿವಾಸದಿಂದ ತರಲಾಯಿತು ಹಾಗೂ ಮತ್ತೆ ಕೆಲವನ್ನು ಫ್ರೆಂಚ್ ಕ್ರಾಂತಿಯ ನಂತರ ಫ್ರಾನ್ಸಿನಿಂದ ಕೊಂಡುತರಲಾಯಿತು. ಹೊರಗಿನ ಮುಂಭಾಗವನ್ನು ಜಾರ್ಜ್‌ IV ಸೂಚಿಸಿದಂತೆ ಫ್ರೆಂಚ್ ನವ-ಕ್ಲಾಸಿಕಲ್ ಶೈಲಿಯ ಪ್ರಭಾವದಲ್ಲಿ ವಿನ್ಯಾಸಗೊಳಿಸಲಾಯಿತು. ಈ ನವೀಕರಣ ಕಾರ್ಯದ ಖರ್ಚು ಘಾತೀಯ ಪ್ರಮಾಣದಲ್ಲಿ ಹೆಚ್ಚಾಯಿತು ಮತ್ತು ೧೮೨೯ರಲ್ಲಿ ನ್ಯಾಶ್‌ನ ವಿನ್ಯಾಸಗಳ ಮಿತಿಮೀರಿದ ವೆಚ್ಚವು ಆತನನ್ನು ವಾಸ್ತುಶಿಲ್ಪಿ ಎಂಬ ಸ್ಥಾನದಿಂದ ತೆಗೆದುಹಾಕಿತು. ೧೮೩೦ರಲ್ಲಿ ಜಾರ್ಜ್‌ IV ಮರಣ ಹೊಂದಿದ ನಂತರ ಅವರ ತಮ್ಮ ವಿಲಿಯಂ IV ಈ ಕೆಲಸವನ್ನು ಪೂರ್ಣಗೊಳಿಸಲು ಎಡ್ವರ್ಡ್ ಬ್ಲೋರ್‌ರನ್ನು ನೇಮಿಸಿದರು. ೧೮೩೪ರಲ್ಲಿ ಅಸ್ತಿತ್ವದಲ್ಲಿದ್ದ ಅದೇ ಹೆಸರಿನದು ಬೆಂಕಿಯಿಂದ ನಾಶಗೊಂಡ ನಂತರ, ವಿಲಿಯಂ ಈ ಅರಮನೆಯನ್ನು ಸಂಸತ್ತಿನ ಹೊಸ ನಿವಾಸಗಳಾಗಿ ಪರಿವರ್ತಿಸಲು ನಿರ್ಧರಿಸಿದರು.

ರಾಜವಂಶದ ನಿವಾಸ

ಬಕಿಂಗ್ಹ್ಯಾಮ್ ಅರಮನೆಯು ಅಂತಿಮವಾಗಿ ೧೮೩೭ರಲ್ಲಿ ರಾಣಿ ವಿಕ್ಟೋರಿಯಾರ ಒಪ್ಪಿಗೆಯಂತೆ ರಾಜವಂಶದ ಪ್ರಧಾನ ನಿವಾಸವಾಯಿತು. ರಾಣಿ ವಿಕ್ಟೋರಿಯಾ ಈ ಅರಮನೆಯು ಪೂರ್ಣಗೊಳ್ಳುವುದಕ್ಕಿಂತ ಮೊದಲು ಆಕೆಯ ಪೂರ್ವಾಧಿಕಾರಿ ವಿಲಿಯಂ IV ಸಾವನ್ನಪ್ಪಿದರಿಂದ ಅಲ್ಲಿ ವಾಸಿಸಿದ ಮೊದಲ ರಾಣಿಯಾಗಿದ್ದಾರೆ. ವೈಭವದ ಕೋಣೆಗಳು ಸ್ವರ್ಣಲೇಪ ಮತ್ತು ಬಣ್ಣದ ವಿಜೃಂಭಣೆಯಿಂದ ಕೂಡಿದ್ದವು, ಇವುಗಳಿಗೆ ಹೋಲಿಸಿದರೆ ಹೊಸ ಅರಮನೆಯ ಸೌಕರ್ಯಗಳು ಸ್ವಲ್ಪ ಕಡಿಮೆ ವೈಭವವನ್ನು ಹೊಂದಿದ್ದವು. ಹೊಗೆ ಕೊಳವೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಉಗುಳಿದರೆ ಬೆಂಕಿಯು ಕ್ರಮೇಣ ತಗ್ಗುವಂತೆ ಈ ಕೊಳವೆಗಳನ್ನು ರೂಪಿಸಲಾಗಿತ್ತು ಮತ್ತು ಅದರ ಪರಿಣಾಮವಾಗಿ ಅರಮನೆಯ ಒಳಾಂಗಣವು ಭಾರಿ ಪ್ರಮಾಣದ ಮಂಜಿನ ಪ್ರಭಾವಕ್ಕೆ ಒಳಗಾಯಿತು. ಗಾಳಿ-ಬೆಳಕುಗಳ ಸಂಚಾರವು ತುಂಬಾ ಕಡಿಮೆಯಿದ್ದುದರಿಂದ ಒಳಾಂಗಣದಲ್ಲಿ ಕೆಟ್ಟ ವಾಸನೆ ಬರುತ್ತಿತ್ತು. ಇದಕ್ಕಾಗಿ ಅನಿಲ ಲ್ಯಾಂಪುಗಳನ್ನು ಅಳವಡಿಲು ನಿರ್ಧರಿಸಿದಾಗ, ಕೆಳಗಿನ ಅಂತಸ್ತುಗಳಿಗೆ ಅನಿಲವನ್ನು ಪೂರೈಸುವ ಬಗ್ಗೆ ಗಂಭೀರ ಸಮಸ್ಯೆಯು ಎದುರಾಯಿತು. ಇಲ್ಲಿನ ಸಿಬ್ಬಂದಿಗಳು ಅಲಕ್ಷ್ಯದಿಂದ ಕೆಲಸ ಮಾಡುತ್ತಿದ್ದರು ಮತ್ತು ಮೈಗಳ್ಳರಾಗಿದ್ದರು, ಅದರಿಂದ ಅರಮನೆಯು ಸ್ವಚ್ಛವಾಗಿರಲಿಲ್ಲವೆಂದು ಹೇಳಲಾಗಿದೆ. ೧೮೪೦ರಲ್ಲಿ ರಾಣಿಯ ವಿವಾಹವಾದ ನಂತರ ಆಕೆಯ ಪತಿ ರಾಜ ಆಲ್ಬರ್ಟ್ ರಾಜಕುಟುಂಬದ ಗೃಹವಿಭಾಗಗಳು ಮತ್ತು ಸಿಬ್ಬಂದಿಗಳ ಪುನಸ್ಸಂಘಟನೆ ಹಾಗೂ ಅರಮನೆಯ ವಿನ್ಯಾಸ ಲೋಪಗಳ ಬಗ್ಗೆ ಗಮನ ಹರಿಸಿದರು. ಎಲ್ಲಾ ಸಮಸ್ಯೆಗಳು ೧೮೪೦ರ ಅಂತ್ಯದೊಳಗೆ ಪರಿಹರಿಸಲ್ಪಟ್ಟವು. ಆದರೆ ನಿರ್ಮಾಪಕರಿಗೆ ಆ ದಶಕದೊಳಗೆ ಮತ್ತೆ ಬರಲು ಅವಕಾಶ ಒದಗಿಬಂತು.

೧೮೪೭ರಲ್ಲಿ, ಈ ದಂಪತಿಗಳು ರಾಜಪರಿವಾರಕ್ಕೆ ಮತ್ತು ತಮ್ಮ ಬೆಳೆಯುತ್ತಿರುವ ಕುಟುಂಬಕ್ಕೆ ಈ ಅರಮನೆಯು ತುಂಬಾ ಸಣ್ಣದಾಗಿದೆಯೆಂದು ಭಾವಿಸಿದರು. ಅದರಿಂದಾಗಿ ಕೇಂದ್ರ ಪ್ರಾಂಗಣವನ್ನು ಆವರಿಸಿ ಹೊಸ ಪಾರ್ಶ್ವಭಾಗವನ್ನು ಎಡ್ವರ್ಡ್ ಬ್ಲೋರ್‌ರ ವಿನ್ಯಾಸದಂತೆ ಥೋಮಸ್ ಕ್ಯುಬಿಟ್ ನಿರ್ಮಿಸಿದರು. ಮಾಲ್‌ನ ಎದುರಿಗಿರುವ ಪೂರ್ವದಿಕ್ಕಿನ ದೊಡ್ಡ ಮುಂಭಾಗವು ಇಂದಿನ ಬಕಿಂಗ್ಹ್ಯಾಮ್ ಅರಮನೆಯ 'ಸಾರ್ವಜನಿಕ ಮುಂಭಾಗ'ವಾಗಿದೆ ಮತ್ತು ಇದು ಬಾಲ್ಕನಿಯನ್ನು ಹೊಂದಿದೆ, ಅಲ್ಲಿಂದ ರಾಜ-ಪರಿವಾರವು ಪ್ರಮುಖ ಸಂದರ್ಭಗಳಲ್ಲಿ ಮತ್ತು ವಾರ್ಷಿಕವಾಗಿ ಟ್ರೂಪಿಂಗ್ ದಿ ಕಲರ್‌ನ ನಂತರ ಜನಸ್ತೋಮವನ್ನು ಎದುರಿಸುತ್ತದೆ. ನೃತ್ಯ ಮಂದಿರ ಕೊಠಡಿಯನ್ನು ಮತ್ತು ವೈಭವದ ಕೋಣೆಗಳ ಮತ್ತೊಂದು ಗುಂಪನ್ನೂ ಈ ಅವಧಿಯಲ್ಲಿ ನಿರ್ಮಿಸಲಾಯಿತು, ಇವನ್ನು ನ್ಯಾಶ್‌ನ ಶಿಷ್ಯ ಸರ್ ಜೇಮ್ಸ್ ಪೆನ್ನೆಥ್ರೋನ್ ವಿನ್ಯಾಸಗೊಳಿಸಿದರು.

ರಾಜ ಆಲ್ಬರ್ಟ್‌ ಸಾವನ್ನಪ್ಪುವುದಕ್ಕಿಂತ ಮೊದಲು, ಆ ಅರಮನೆಯು ಸಾಧಾರಣವಾಗಿ ಸಂಗೀತ ಮನರಂಜನೆಯ ಸ್ಥಳವಾಗಿತ್ತು ಮತ್ತು ಶ್ರೇಷ್ಠ ಆಧುನಿಕ ಸಂಗೀತಗಾರರು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಮನರಂಜನೆ ನೀಡಿದ್ದಾರೆ. ಸಂಯೋಜಕ ಫೆಲಿಕ್ಸ್ ಮೆಂಡಲ್ಸನ್ ಅಲ್ಲಿ ಮೂರು ಸಮಾರಂಭಗಳಲ್ಲಿ ಪ್ರದರ್ಶನ ನಡೆಸಿಕೊಟ್ಟಿದ್ದಾರೆಂದು ಹೇಳಲಾಗುತ್ತದೆ. ಜೊಹಾನ್ ಸ್ಟ್ರಾಸ್ II ಮತ್ತು ಆತನ ವಾದ್ಯವೃಂದವು ಇಂಗ್ಲೆಂಡ್‌ನಲ್ಲಿರುವಾಗ ಈ ಅರಮನೆಯಲ್ಲಿ ಪ್ರದರ್ಶನ ನಡೆಸಿಕೊಟ್ಟರು. ಸ್ಟ್ರಾಸ್‌ನ "ಅಲಿಸ್ ಪೋಲ್ಕ"ವು ರಾಣಿಯ ಮಗಳು ರಾಜಕುಮಾರಿ ಅಲಿಸ್‌ಳ ಗೌರವಾರ್ಥವಾಗಿ ೧೮೪೯ರಲ್ಲಿ ಅರಮನೆಯಲ್ಲಿ ನಡೆಸಿಕೊಟ್ಟ ಮೊದಲ ಪ್ರದರ್ಶನವಾಗಿದೆ. ವಿಕ್ಟೋರಿಯಾರ ನಿರ್ದೇಶನದಡಿಯಲ್ಲಿ, ಬಕಿಂಗ್ಹ್ಯಾಮ್ ಅರಮನೆಯು ಸಾಧಾರಣವಾಗಿ ಅದ್ಧೂರಿ ಪೋಷಾಕು ನೃತ್ಯ ಗೋಷ್ಠಿಗಳಿಗೆ ರಂಗವಾಗುತ್ತಿತ್ತು, ಇದಕ್ಕೆ ಹೆಚ್ಚುವರಿಯಾಗಿ ಇಲ್ಲಿ ನಿಯತಕ್ರಮದಲ್ಲಿ ರಾಜೋಚಿತ ಸಮಾರಂಭಗಳು, ಅಧಿಕಾರ ಪ್ರದಾನಗಳು ಮತ್ತು ಪ್ರದರ್ಶನಗಳು ನಡೆಯುತ್ತಿದ್ದವು.

೧೮೬೧ರಲ್ಲಿ ವಿಧವೆಯಾದ ತೀವ್ರ ವ್ಯಥೆಗೊಳಗಾದ ರಾಣಿಯು ಜನಸಂಪರ್ಕದಿಂದ ದೂರ ಉಳಿದರು ಮತ್ತು ಬಕಿಂಗ್ಹ್ಯಾಮ್ ಅರಮನೆಯನ್ನು ಬಿಟ್ಟು ವಿಂಡ್ಸರ್ ಕೋಟೆ, ಬಾಲ್ಮೊರಲ್ ಕೋಟೆ ಮತ್ತು ಒಸ್ಬರ್ನ್ ನಿವಾಸದಲ್ಲಿ ವಾಸಿಸಿದರು. ಅನೇಕ ವರ್ಷಗಳ ಕಾಲ ಆ ಅರಮನೆಯನ್ನು ತೀರ ವಿರಳವಾಗಿ ಬಳಸಲಾಯಿತು ಮತ್ತು ಅಲಕ್ಷ ತೋರಿಸಲಾಯಿತು. ಅಂತಿಮವಾಗಿ, ಸಾರ್ವಜನಿಕರು ಆಕೆಗೆ ಲಂಡನ್‌ಗೆ ಹಿಂದಿರುಗುವಂತೆ ಬಲವಂತ ಪಡಿಸಿದರೂ ಆಕೆ ಸಾಧ್ಯವಾದಾಗಲೆಲ್ಲಾ ಬೇರೆ ಕಡೆ ವಾಸಿಸಲು ಇಷ್ಟಪಡುತ್ತಿದ್ದರು. ರಾಜಪರಿವಾರದ ಕಾರ್ಯಕ್ರಮಗಳೂ ಸಹ ಅರಮನೆಯ ಬದಲಿಗೆ ವಿಂಡ್ಸರ್ ಕೋಟೆಯಲ್ಲಿ ನಡೆಯುತ್ತಿದ್ದವು, ಸದಾ ಶೋಕ ಪ್ರದರ್ಶನ ಕರಿಯ ಉಡುಪನ್ನು ಧರಿಸಿದ ಮಂಕಾದ ರಾಣಿಯು ಆ ಕಾರ್ಯಕ್ರಮಗಳ ಅಧ್ಯಕ್ಷತೆಯ ವಹಿಸುತ್ತಿದ್ದರು. ಅನೇಕ ವರ್ಷಗಳ ಕಾಲ ಬಕಿಂಗ್ಹ್ಯಾಮ್ ಅರಮನೆಯನ್ನು ಮುಚ್ಚಲಾಗಿತ್ತು.

ಒಳಾಂಗಣ

ಈ ಅರಮನೆಯು ೧೦೮ ಮೀಟರ್‌ಗಳಷ್ಟು ಉದ್ದ ಮತ್ತು ೧೨೦ ಮೀಟರ್‌ಗಳಷ್ಟು ಅಗಲವಿದೆ. ೨೪ ಮೀಟರ್‌ಗಳಷ್ಟು ಎತ್ತರವಿರುವ ಇದು ಸುಮಾರು 77,000 m2 (830,000 sq ft) ನಷ್ಟು ವಿಸ್ತೀರ್ಣವನ್ನು ಹೊಂದಿದೆ. ಅರಮನೆಯ ಹಿಂಭಾಗದಲ್ಲಿ ಪಶ್ಚಿಮಕ್ಕೆ ಮುಖಮಾಡಿರುವ ತೋಟದ ಮುಂದುಗಡೆಯ ಹಿಂಭಾಗದಲ್ಲಿರುವ ಮುಖ್ಯ ಅಂತಸ್ತಿನಲ್ಲಿ ಅರಮನೆಯ ಪ್ರಧಾನ ಕೊಠಡಿಗಳಿವೆ. ಈ ಅಲಂಕೃತ ವೈಭವದ ಕೋಣೆಗಳ ಗುಂಪಿನ ಮುಖ್ಯ ಕೇಂದ್ರವೆಂದರೆ ಸಂಗೀತ ಕೊಠಡಿ, ಇದರ ದೊಡ್ಡ ಕಮಾನು ಮುಂಭಾಗದ ಪ್ರಧಾನ ಲಕ್ಷಣವಾಗಿದೆ. ಸಂಗೀತ ಕೊಠಡಿಯ ಪಕ್ಕದಲ್ಲಿ ನೀಲಿ ಮತ್ತು ಬಿಳಿ ಭೇಟಿ-ಕೊಠಡಿಗಳಿವೆ. ಈ ಕೊಠಡಿಗಳ ಮಧ್ಯದಲ್ಲಿ ವೈಭವದ ಕೋಣೆಗಳಿಗೆ ಸಂಪರ್ಕ ಕಲ್ಪಿಸುವ ಕಾರಿಡಾರ್ ಆಗಿ ಒಂದು ಚಿತ್ರ ಗ್ಯಾಲರಿ ಇದೆ, ಇದು ೫೫ ಗಜಗಳಷ್ಟು (೫೦ ಮೀಟರ್) ಉದ್ದವಿದ್ದು ಎದ್ದು ಕಾಣುತ್ತದೆ. ಈ ಗ್ಯಾಲರಿಯಲ್ಲಿ ರೆಂಬ್ರ್ಯಾಡ್ಟ್, ವ್ಯಾನ್ ಡಿಕ್, ರುಬೆನ್ಸ್ ಮತ್ತು ವರ್ಮೀರ್ ಮೊದಲಾದವರ ಚಿತ್ರಗಳನ್ನೂ ಒಳಗೊಂಡಂತೆ ಅಸಂಖ್ಯಾತ ಚಿತ್ರಗಳನ್ನು ಜೋಡಿಸಲಾಗಿದೆ; ಚಿತ್ರ ಗ್ಯಾಲರಿಯ ನಂತರ ಮುಖ್ಯವಾದ ಕೋಣೆಗಳೆಂದರೆ ಸಿಂಹಾಸನ ಕೊಠಡಿ ಮತ್ತು ಹಸಿರು ಭೇಟಿ ಕೊಠಡಿ. ಹಸಿರು ಭೇಟಿ ಕೊಠಡಿಯು ಸಿಂಹಾಸನ ಕೊಠಡಿಗೆ ಒಂದು ವಿಶಾಲ ಪ್ರವೇಶ ಕೋಣೆಯಾಗಿದೆ ಮತ್ತು ಇದು ಮುಖ್ಯ ಮೆಟ್ಟಿಲ ಸಾಲಿನ ಮೇಲ್ಭಾಗದಲ್ಲಿ ರಕ್ಷಾ-ಗೃಹದಿಂದ ಸಿಂಹಾಸನದೆಡೆಗೆ ಹೋಗುವ ಕರ್ಮಾಚರಣೆಯ ಹಾದಿಯ ಭಾಗವಾಗಿದೆ. ರಕ್ಷಾ-ಗೃಹವು ರೋಮನ್ ಪೋಷಾಕಿನಲ್ಲಿರುವ ರಾಣಿ ವಿಕ್ಟೋರಿಯಾ ಮತ್ತು ರಾಜ ಆಲ್ಬರ್ಟ್‌ರ ಬಿಳಿ ಮಾರ್ಬಲ್ ಶಿಲ್ಪಗಳನ್ನು ಹೊಂದಿದೆ, ಅವನ್ನು ಚಿತ್ರ ನೇಯ್ದ ಕೈಮಗ್ಗದ ಬಟ್ಟೆಯಿಂದ ಒಳಪದರ ಜೋಡಿಸಿದ ನ್ಯಾಯವೇದಿಕೆಯಲ್ಲಿ ಜೋಡಿಸಲಾಗಿದೆ. ಈ ಸಾಂಪ್ರದಾಯಿಕ ಕೊಠಡಿಗಳನ್ನು ಕೇವಲ ಕರ್ಮಾಚರಣೆಯ ಮತ್ತು ಅಧಿಕೃತ ಮನರಂಜನೆಗೆ ಮಾತ್ರ ಬಳಸಲಾಗುತ್ತದೆ, ಆದರೆ ಪ್ರತಿ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ತೆರವುಗೊಳಿಸಲಾಗುತ್ತದೆ.

ಈ ವೈಭವದ ಕೋಣೆಗಳ ಕೆಳಗೆ ಸ್ವಲ್ಪ ಕಡಿಮೆ ವಿಜೃಂಭಣೆಯ ಕೋಣೆಗಳಿವೆ, ಅವನ್ನು ಅರೆ-ವೈಭವದ ಕೋಣೆಗಳೆಂದು ಕರೆಯಲಾಗುತ್ತದೆ. ಮಾರ್ಬಲ್ ಹಜಾರದಿಂದ ತೆರೆದುಕೊಳ್ಳುವ ಈ ಕೊಠಡಿಗಳನ್ನು ಸ್ವಲ್ಪ ಕಡಿಮೆ ಸಾಂಪ್ರದಾಯಿಕ ಮನರಂಜನೆಗೆ ಬಳಸಲಾಗುತ್ತದೆ, ಉದಾ. ಉಪಹಾರ ಪಾರ್ಟಿಗಳು ಮತ್ತು ಖಾಸಗಿ ಭೇಟಿ. ಕೆಲವು ಕೊಠಡಿಗಳನ್ನು ವಿಶೇಷ ಸಂದರ್ಶಕರಿಗಾಗಿ ಸೂಚಿಸಲಾಗಿದೆ ಮತ್ತು ಅಲಂಕರಿಸಲಾಗಿದೆ, ಉದಾಹರಣೆಗಾಗಿ, ೧೮೪೪ ಕೊಠಡಿ , ಇದನ್ನು ರಷ್ಯಾದ ಚಕ್ರವರ್ತಿ ನಿಕೋಲಸ್ Iರ ರಾಜ್ಯ ಭೇಟಿಗಾಗಿ ಆ ವರ್ಷದಲ್ಲಿ ಅಲಂಕರಿಸಲಾಗಿತ್ತು ಹಾಗೂ ಕಮಾನು ಕೊಠಡಿಯ ಮತ್ತೊಂದು ಪಕ್ಕದಲ್ಲಿರುವ ೧೮೫೫ ಕೊಠಡಿ , ಇದನ್ನು ಫ್ರಾನ್ಸಿನ ನೆಪೋಲಿಯನ್ IIIರ ಭೇಟಿಯ ಗೌರವಾರ್ಥವಾಗಿ ವ್ಯವಸ್ಥೆಗೊಳಿಸಲಾಗಿತ್ತು. ಇವುಗಳ ಮಧ್ಯಭಾಗದಲ್ಲಿರುವುದು ಕಮಾನು ಕೊಠಡಿ. ಇಲ್ಲಿಗೆ ವಾರ್ಷಿಕವಾಗಿ ಸಾವಿರಾರು ಅತಿಥಿಗಳು ರಾಣಿಯ ಉದ್ಯಾನ ಪಾರ್ಟಿಗಳಿಗಾಗಿ ಬರುತ್ತಿರುತ್ತಾರೆ. ರಾಣಿಯು ಉತ್ತರ ಪಾರ್ಶ್ವದಲ್ಲಿರುವ ಕೊಠಡಿಗಳ ಒಂದು ಸಣ್ಣ ಗುಂಪನ್ನು ಖಾಸಗಿಯಾಗಿ ಬಳಸಿಕೊಳ್ಳುತ್ತಾರೆ.

೧೮೪೭ ಮತ್ತು ೧೮೫೦ರ ಸಂದರ್ಭದಲ್ಲಿ, ಬ್ಲೋರ್ ಪೂರ್ವದ ಹೊಸ ಪಾರ್ಶ್ವ ಭಾಗವನ್ನು ನಿರ್ಮಿಸುತ್ತಿದ್ದಾಗ ಬ್ರೈಟನ್ ಪೆವಿಲಿಯನ್‌ನಿಂದ ಮತ್ತೊಮ್ಮೆ ಪೀಠೋಪಕರಣಗಳನ್ನು ಕದಿಯಲಾಯಿತು. ಅದರ ಪರಿಣಾಮವಾಗಿ, ಹೊಸ ಪಾರ್ಶ್ವ ಭಾಗದ ಹೆಚ್ಚಿನ ಕೊಠಡಿಗಳು ಒಂದು ವಿಭಿನ್ನ ಪೌರಸ್ತ್ಯ ವಾತಾವರಣವನ್ನು ಹೊಂದಿವೆ. ಕೆಂಪು ಮತ್ತು ನೀಲಿ ಚೈನೀಸ್ ಉಪಹಾರ ಕೊಠಡಿಯನ್ನು ಬ್ರೈಟನ್ ಭೋಜನ ಕೂಟ ಮತ್ತು ಸಂಗೀತ ಕೊಠಡಿಗಳ ಭಾಗಗಳಿಂದ ರಚಿಸಲಾಗಿದೆ, ಆದರೆ ಇದು ಡಬ್ಲ್ಯೂ. ಎಮ್. ಫೀತ್ಯಾಮ್ ವಿನ್ಯಾಸಗೊಳಿಸಿದ ಒಂದು ಹೊಗೆ-ಕೊಳವೆಯನ್ನೂ ಹೊಂದಿದೆ. ಹಳದಿ ಬೇಟಿ-ಕೊಠಡಿಯು ಅಲಂಕಾರದ ನಮೂನೆಗಳನ್ನೊಳಗೊಂಡ ಗೋಡೆ-ಕಾಗದವನ್ನು ಹೊಂದಿದೆ, ಇದನ್ನು ೧೮೧೭ರಲ್ಲಿ ಬ್ರೈಟನ್ ಸಭಾಂಗಣಕ್ಕೆ ಪೂರೈಸಲಾಗಿತ್ತು ಮತ್ತು ಈ ಕೊಠಡಿಯಲ್ಲಿರುವ ಹೊಗೆ-ಕೊಳವೆಯು ಗೂಡಿನಲ್ಲಿ ತಲೆತೂಗುತ್ತಿರುವ ಚೀನೀ ಬೊಂಬೆಗಳು ಮತ್ತು ಭಯಂಕರವಾಗಿ ಕಾಣುವ ರೆಕ್ಕೆಗಳಿರುವ ಡ್ರ್ಯಾಗನ್ ಚಿತ್ರಗಳನ್ನು ಹೊಂದಿರುವ ಚೈನೀಸ್ ಹೊಗೆ-ಕೊಳವೆಯು ಹೇಗೆ ಕಾಣಬಹುದು ಎಂಬುದರ ಒಂದು ಯುರೋಪಿಯನ್ ನೋಟವಾಗಿದೆ, ಇದನ್ನು ರಾಬರ್ಟ್ ಜೋನ್ಸ್ ವಿನ್ಯಾಸಗೊಳಿಸಿದ್ದಾರೆ.

ಈ ಪಾರ್ಶ್ವ ಭಾಗದ ಕೇಂದ್ರದಲ್ಲಿ ಪ್ರಸಿದ್ಧ ಬಾಲ್ಕನಿಯಿದೆ, ಅದರ ಗಾಜಿನ ದ್ವಾರಗಳ ಹಿಂದೆ ಕೇಂದ್ರ ಕೊಠಡಿಯಿದೆ. ಇದು ಚೈನೀಸ್-ಶೈಲಿಯ ಸಭಾಂಗಣವಾಗಿದೆ, ಇದನ್ನು ವಿನ್ಯಾಸಕ ಸರ್ ಚಾರ್ಲ್ಸ್ ಅಲ್ಲಮ್‌ನ ನೆರವಿನೊಂದಿಗೆ ೧೯೨೦ರ ಉತ್ತರಾರ್ಧದಲ್ಲಿ ಹೆಚ್ಚು "ಬಂಧಕ" ಚೀನೀಸ್ ಅಂಶವನ್ನು ರಚಿಸಿದ ರಾಣಿ ಮೇರಿ ವರ್ಧಿಸಿದರು, ಆದರೂ ಲ್ಯಾಕರ್ ದ್ವಾರಗಳನ್ನು ಬ್ರೈಟನ್‌ನಿಂದ ೧೮೭೩ರಲ್ಲಿ ತೆಗೆದುಕೊಂಡುಬರಲಾಗಿತ್ತು. ಪೂರ್ವ ಪಾರ್ಶ್ವ ಭಾಗದ ಮುಖ್ಯ ಅಂತಸ್ತಿನ ಉದ್ದಕ್ಕೂ ಪ್ರಧಾನ ಕಾರಿಡಾರ್ ಎನ್ನುವ ವಿಶೇಷ ಗ್ಯಾಲರಿಯಿದೆ, ಇದು ಪ್ರಾಂಗಣದ ಪೂರ್ವ ಭಾಗದಾದ್ಯಂತ ಹರಡಿಕೊಂಡಿದೆ. ಇದು ಪ್ರತಿಬಿಂಬಿಸುವ ಬಾಗಿಲುಗಳು ಮತ್ತು ಅಡ್ಡ ಗೋಡೆಗಳನ್ನು ಹೊಂದಿದೆ, ಇವು ಬ್ರೈಟನ್‌‌ನ ಪೋರ್ಸೆಲೈನ್ ಪಗೋಡಗಳು ಮತ್ತು ಇತರ ಪೌರಾಸ್ತ್ಯ ಪೀಠೋಪಕರಣಗಳನ್ನು ಹೋಲುತ್ತವೆ. ಚೈನೀಸ್ ಉಪಹಾರ ಕೊಠಡಿ ಮತ್ತು ಹಳದಿ ಭೇಟಿ ಕೊಠಡಿಯು ಈ ಗ್ಯಾಲರಿಯ ಎರಡೂ ಕೊನೆಯಲ್ಲಿವೆ ಹಾಗೂ ಕೇಂದ್ರ ಕೊಠಡಿಯು ಇದರ ಮಧ್ಯಭಾಗದಲ್ಲಿದೆ.

೧೯ನೇ ಶತಮಾನದ ಮೂಲತಃ ಒಳಾಂಗಣ ವಿನ್ಯಾಸಗಳೆಂದರೆ ಪ್ರಕಾಶಮಾನ ಬಣ್ಣದ ಗಾರೆಕಲ್ಲು ಹಾಗೂ ನೀಲಿ ಮತ್ತು ಗುಲಾಬಿ ಬಣ್ಣದ ಲ್ಯಾಪಿಸ್‍‌‌‌ಗಳ ವ್ಯಾಪಕ ಬಳಕೆ, ಇದನ್ನು ಸರ್ ಚಾರ್ಲ್ಸ್ ಲಾಂಗ್‌ರ ಮಾರ್ಗದರ್ಶನದಂತೆ ಮಾಡಲಾಯಿತು. ಈ ವಿನ್ಯಾಸಗಳಲ್ಲಿ ಹೆಚ್ಚಿನವು ಈಗಲೂ ಉಳಿದಿವೆ. ರಾಜ ಎಡ್ವರ್ಡ್ VII ಬೆಲ್ಲೆ ಎಪೋಕ್ಯೂ ಕೆನೆಬಣ್ಣದ ಮತ್ತು ಬಂಗಾರ ಬಣ್ಣದ ಯೋಜನೆಯಲ್ಲಿ ಭಾಗಶಃ ಪುನರಲಂಕರಣವನ್ನು ಮಾಡಿದರು.

ಬ್ರಿಟನ್‌ಗೆ ಭೇಟಿ ನೀಡುವಾಗ ವಿದೇಶಿ ಮುಖಂಡರಿಗೆ ಸಾಮಾನ್ಯವಾಗಿ ಬಕಿಂಗ್ಹ್ಯಾಮ್ ಅರಮನೆಯಲ್ಲಿ ರಾಣಿಯು ಮನರಂಜನಾ ಕೂಟಗಳನ್ನು ಏರ್ಪಡಿಸುತ್ತಾರೆ. ಅವರಿಗೆ ಬೆಲ್ಜಿಯನ್ ಕೊಠಡಿಗಳ ಗುಂಪು ಎಂದು ಕರೆಯುವ ಕೋಣೆಗಳ ದೊಡ್ಡ ಗುಂಪೊಂದನ್ನು ನಿಗದಿಪಡಿಸಲಾಗುತ್ತದೆ, ಅವು ಮಂತ್ರಿಯ ಮೆಟ್ಟಿಲು ಸಾಲಿನ ಬುಡದಲ್ಲಿ, ಉತ್ತರಕ್ಕೆ ಮುಖಮಾಡಿರುವ ಉದ್ಯಾನದ ಪಾರ್ಶ್ವ ಭಾಗದ ನೆಲ ಅಂತಸ್ತಿನಲ್ಲಿವೆ. ಈ ಕೊಠಡಿಗಳ ಗುಂಪು ಕಿರಿದಾದ ಕಾರಿಡಾರ್‌ಗಳಿಂದ ಕೂಡಿಸಲ್ಪಟ್ಟಿವೆ, ಇವುಗಳಿಗೆ ಸಾಸರ್ ಕಮಾನು-ಚಾವಣೆಗಳು ಒಂದು ಹೆಚ್ಚುವರಿ ಎತ್ತರವನ್ನು ನೀಡಿವೆ, ಇವನ್ನು ನ್ಯಾಶ್ ಸೋಯಾನೆ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಈ ಕೋಣೆಗಳ ಗುಂಪಿನ ಎರಡನೇ ಕಾರಿಡಾರ್ ಗಾತಿಕ್ ಪ್ರಭಾವಿತ ಅಡ್ಡ ಕಮಾನು-ಚಾವಣಿಯನ್ನು ಹೊಂದಿದೆ. ಬೆಲ್ಜಿಯನ್ ಕೊಠಡಿಗಳನ್ನು ಅವುಗಳ ಈಗಿರುವ ಶೈಲಿಯಲ್ಲೇ ಅಲಂಕರಿಸಲಾಗಿತ್ತು ಮತ್ತು ಅವುಗಳಿಗೆ ರಾಜ ಆಲ್ಬರ್ಟ್‌ರ ಅಂಕಲ್ ಮತ್ತು ಬೆಲ್ಜಿಯನ್ನರ ಮೊದಲ ರಾಜ ಲಿಯೊಪೋಲ್ಡ್ Iರ ಹೆಸರನ್ನು ಇಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಆ ಕೊಠಡಿಗಳ ಗುಂಪನ್ನು ವಿದೇಶಿ ಮುಖಂಡರಿಗೆ ಪ್ರತ್ಯೇಕವಾಗಿ ಮೀಸಲಿರಿಸಲಾಗಿರಲಿಲ್ಲ; ೧೯೩೬ರಲ್ಲಿ, ಅಲ್ಲಿ ಎಡ್ವರ್ಡ್ VIII ವಾಸಿಸಲು ಆರಂಭಿಸಿದಾಗ ಆ ಕೊಠಡಿಗಳ ಗುಂಪು ಅರಮನೆಯ ಖಾಸಗಿ ವಿಭಾಗವಾದವು.

ರಾಜಪರಿವಾರದ ಸಮಾರಂಭಗಳು

ರಾಜಪರಿವಾರದ ಉಡುಗೆ

ಹಿಂದೆ, ಮಿಲಿಟರಿ ಸಮವಸ್ತ್ರವನ್ನು ಧರಿಸದ ಪುರುಷರು ೧೮ನೇ ಶತಮಾನದ ವಿನ್ಯಾಸದ ಬ್ರಿಚಿಸ್‌ಗಳನ್ನು ಧರಿಸಬೇಕಾಗಿತ್ತು. ಮಹಿಳೆಯರ ಸಂಜೆಯುಡುಪೆಂದರೆ ಹಿಂದುಗಡೆ ಇಳಿಬಿದ್ದ ನಿಲುವಂಗಿ ಮತ್ತು ತಲೆಯುಡಿಗೆ ಅಥವಾ ತಲೆಕೂದಲಲ್ಲಿ ಗರಿಗಳನ್ನು ಸಿಕ್ಕಿಸಿಕೊಳ್ಳುವುದು (ಅಥವಾ ಎರಡೂ).

ರಾಜಪರಿವಾರದ ಸಾಂಪ್ರದಾಯಿಕ ಸಮವಸ್ತ್ರ ಮತ್ತು ಉಡುಪನ್ನು ನಿಯಂತ್ರಿಸುವ ಪೋಷಾಕು-ಕೋಡ್ ಕ್ರಮೇಣ ಸಡಿಲಗೊಂಡಿತು. ವಿಶ್ವ ಸಮರ I ರ ನಂತರ, ರಾಣಿ ಮೇರಿಯು ತನ್ನ ಲಂಗವನ್ನು ಕೆಲವು ಇಂಚುಗಳಷ್ಟು ಗಿಡ್ಡಗೊಳಿಸುವ ಮೂಲಕ ಫ್ಯಾಷನ್ ಆಗಿರಲು ಬಯಸಿದರಿಂದ, ಆಕೆ ರಾಜನ ಪ್ರತಿಕ್ರಿಯೆಯನ್ನು ಅಳೆಯಲು ಮೊದಲು ರಾಣಿಯ ಸೆಜ್ಜೆವಳ್ತಿ(ಲೇಡಿ-ಇನ್-ವೈಟಿಂಗ್)ಯ ಲಂಗವನ್ನು ಗಿಡ್ಡಗೊಳಿಸುವಂತೆ ಕೇಳಿದರು. ಇದರಿಂದ ರಾಜ ಜಾರ್ಜ್ V ದಿಗಿಲುಗೊಂಡರು ಮತ್ತು ಆಕೆಯ ಲಂಗದ ಕೆಳಅಂಚು ಫ್ಯಾಷನ್ ಆಗಿರದೆ ಹಾಗೆಯೇ ಉಳಿದುಕೊಂಡಿತು. ಅನಂತರ ರಾಜ ಜಾರ್ಜ್ VI ಮತ್ತು ಆತನ ಪತ್ನಿ ರಾಣಿ ಎಲಿಜಬೆತ್ ಹಗಲು ಹೊತ್ತಿನ ಲಂಗಗಳನ್ನು ಗಿಡ್ಡಗೊಳಿಸಲು ಒಪ್ಪಿದರು.

ಇಂದು ಯಾವುದೇ ಅಧಿಕೃತ ಉಡುಪು ಕೋಡ್ ಇಲ್ಲ. ಬಕಿಂಗ್ಹ್ಯಾಮ್ ಅರಮನೆಗೆ ಆಹ್ವಾನಿಸಲ್ಪಟ್ಟ ಹೆಚ್ಚಿನ ಪುರುಷರು ಹಗಲು ಹೊತ್ತಿನಲ್ಲಿ ಸೇವಾ ಸಮವಸ್ತ್ರ ಅಥವಾ ಲೌಂಜ್ ಸೂಟ್‌ಗಳನ್ನು ಧರಿಸುತ್ತಾರೆ, ಕೆಲವು ಮಂದಿ ಬೆಳಗಿನ ಕೋಟುಗಳನ್ನು ಧರಿಸುತ್ತಾರೆ ಮತ್ತು ಸಂಜೆ ಹೊತ್ತಿನಲ್ಲಿ ಸಮಾರಂಭದ ಶಿಷ್ಟಾಚಾರದ ಆಧಾರದಲ್ಲಿ ಕಪ್ಪು ಟೈ ಅಥವಾ ಬಿಳಿ ಟೈಯನ್ನು ಧರಿಸುತ್ತಾರೆ. 'ಬಿಳಿ ಟೈ'ಯನ್ನು ಧರಿಸುವ ಸಮಾರಂಭವಾಗಿದ್ದರೆ, ಮಹಿಳೆಯರು ತಲೆಯುಡಿಗೆಯನ್ನು ಧರಿಸುತ್ತಾರೆ.

ಡೆಬ್ಯೂಟಾಂಟ್‌ಗಳ ಔಪಚಾರಿಕ ಪರಿಚಯ

ರಾಜರಿಗೆ ಶ್ರೀಮಂತವರ್ಗದ ಕನ್ಯೆಯರ ಔಪಚಾರಿಕ ಪರಿಚಯಗಳು ಸಿಂಹಾಸನ ಕೊಠಡಿಯಲ್ಲಿ ನಡೆದವು. ಈ ಕನ್ಯೆಯರನ್ನು ಡೆಬ್ಯೂಟಾಂಟ್‌ಗಳೆಂದು ಕರೆಯಲಾಯಿತು ಮತ್ತು ಆ ಸಮಾರಂಭವು- ಅವರ 'ಹೊರಬರುವಿಕೆ' ಎಂದು ಕರೆಯುವ- ಸಮಾಜಕ್ಕೆ ಅವರ ಮೊದಲ ಪ್ರವೇಶವನ್ನು ಸೂಚಿಸಿತು. ಡೆಬ್ಯೂಟಾಂಟ್‌ಗಳು ಸಂಪೂರ್ಣ ರಾಜಪರಿವಾರದ ಉಡುಪನ್ನು ಧರಿಸಿದ್ದರು, ಉದ್ದನೆಯ ಮೂರು ಆಸ್ಟ್ರಿಚ್ ಗರಿಗಳನ್ನು ತಮ್ಮ ತಲೆಕೂದಲಲ್ಲಿ ಸಿಕ್ಕಿಸಿಕೊಂಡಿದ್ದರು. ಅವರು ಒಳ ಪ್ರವೇಶಿಸಿ, ಗೌರವ ನಮನ ಮಾಡಿ, ಬ್ಯಾಲೆ ನೃತ್ಯದಲ್ಲಿ ಹಿಂದೆಕ್ಕೆ ಚಲಿಸಿದರು ಮತ್ತು ಸೂಚಿತ ಉದ್ದದ ಉಡುಪಿನ ಕುಶಲಚಲನೆಯೊಂದಿಗೆ ಇನ್ನೊಮ್ಮೆ ಗೌರವ ವಂದನೆ ಸಲ್ಲಿಸಿದರು. (ಸಂಜೆಯ ಓಲಗವೆಂದು ಕರೆಯುವ ಆ ಸಮಾರಂಭವು ಹಿಂದಿನ ರಾಜ್ಯಭಾರದ 'ಅರಮನೆಯ ಭೇಟಿ ಕೊಠಡಿ'ಗಳನ್ನು ಹೋಲುತ್ತಿತ್ತು.)

೧೯೫೮ರಲ್ಲಿ, ರಾಣಿ ಡೆಬ್ಯುಟಾಂಟ್‌ಗಳ ಪರಿಚಯ ಪಾರ್ಟಿಗಳನ್ನು ರದ್ದುಗೊಳಿಸಿ, ಅವುಗಳ ಬದಲಿಗೆ ಉದ್ಯಾನ ಪಾರ್ಟಿಗಳನ್ನು ಗೊತ್ತುಮಾಡಿದರು. ಇಂದು ಸಿಂಹಾಸನ ಕೊಠಡಿಯನ್ನು ಸಾಂಪ್ರದಾಯಿಕ ಭಾಷಣಗಳ ಸ್ವಾಗತ ಸಮಾರಂಭಕ್ಕೆ ಬಳಸಲಾಗುತ್ತದೆ, ಉದಾ, ರಾಣಿಯ ಜನ್ಮದಿನದಂದು ಆಕೆ ಮಾಡುವ ಭಾಷಣ. ಇದು ರಾಜವಂಶದ ವಿವಾಹದ ಭಾವಚಿತ್ರಗಳು ಮತ್ತು ಕುಟುಂಬದ ಛಾಯಾಚಿತ್ರಗಳಿರುವ ಸಿಂಹಾಸನದ ವೇದಿಕೆಯಲ್ಲಿ ನಡೆಯುತ್ತದೆ.

ಬಿರುದು-ಪ್ರದಾನ

ನೈಟ್‌ ಪದವಿಗಳಂತಹ ಬಿರುದು-ಪ್ರದಾನಗಳು ಮತ್ತು ಇತರ ಪ್ರಶಸ್ತಿ ಪ್ರದಾನಗಳು ೧೮೫೪ರಲ್ಲಿ ನಿರ್ಮಿಸಲ್ಪಟ್ಟ ಅರಮನೆಯ ನೃತ್ಯ ಮಂದಿರ ಕೊಠಡಿಯಲ್ಲಿ ನಡೆಯುತ್ತವೆ. 36.6 m (120.08 ft) ಉದ್ದ, 18 m (59.06 ft) ಅಗಲ ಮತ್ತು 13.5 m (44.29 ft) ಎತ್ತರವಿರುವ (೧೨೦' X ೫೯' X ೪೪' ೩.೫") ಇದು ಅರಮನೆಯಲ್ಲೇ ಅತ್ಯಂತ ದೊಡ್ಡ ಕೊಠಡಿಯಾಗಿದೆ. ಇದು ಪ್ರಾಮುಖ್ಯತೆ ಮತ್ತು ಬಳಕೆಯಲ್ಲಿ ಸಿಂಹಾಸನ ಕೊಠಡಿಯನ್ನು ಮೀರಿಸಿದೆ. ಬಿರುದು ಪ್ರದಾನ ಸಂದರ್ಭದಲ್ಲಿ, ರಾಣಿಯು ಒಂದು ಭಾರಿ, ಗುಮ್ಮಟಾಕಾರದ ವೆಲ್ವೆಟ್-ಬಟ್ಟೆಯ ಮೇಲ್ಕಟ್ಟಿನ ಅಡಿಯಲ್ಲಿ ಸಿಂಹಾಸನ ವೇದಿಕೆಯ ಮೇಲೆ ನಿಲ್ಲುತ್ತಾರೆ. ಈ ಮೇಲ್ಕಟ್ಟನ್ನು ಶಾಮಿಯಾನ ಅಥವಾ ಬಾಲ್ಡಾಚಿನ್(ಕಿಂಕಾಪು) ಎಂದು ಕರೆಯಲಾಗುತ್ತದೆ ಮತ್ತು ಇದನ್ನು ೧೯೧೧ರಲ್ಲಿ ದೆಹಲಿಯ ಪಟ್ಟಾಭಿಷೇಕದ ದರ್ಬಾರಿನಲ್ಲಿ ಬಳಸಲಾಗಿತ್ತು. ಪ್ರಶಸ್ತಿ ಸ್ವೀಕೃತದಾರರು ತಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ರಾಣಿಯ ಹತ್ತಿರಕ್ಕೆ ಹೋಗಿ ತಮ್ಮ ಬಿರುದನ್ನು ಪಡೆಯುವಾಗ ಸಂಗೀತಗಾರರ ಗ್ಯಾಲರಿಯಲ್ಲಿ ಒಂದು ಮಿಲಿಟರಿ ವಾದ್ಯ-ವೃಂದವು .

ಔಪಚಾರಿಕ ಔತಣ-ಕೂಟಗಳು

ಔಪಚಾರಿಕ ಔತಣ-ಕೂಟಗಳನ್ನೂ ಸಹ ನೃತ್ಯ ಮಂದಿರದಲ್ಲಿ ನಡೆಸಲಾಗುತ್ತದೆ; ಈ ಸಾಂಪ್ರದಾಯಿಕ ಔತಣ-ಕೂಟಗಳನ್ನು ವಿದೇಶಿ ಮುಖಂಡರ ವಿಶೇಷ ಭೇಟಿಯ ದಿನದಂದು ಸಂಜೆ ಏರ್ಪಡಿಸಲಾಗುತ್ತದೆ. ಈ ವಿಶೇಷ ಸಂದರ್ಭಗಳಲ್ಲಿ, ೧೫೦ ಅಥವಾ ಅದಕ್ಕಿಂಚ ಹೆಚ್ಚು ಅತಿಥಿಗಳು ಸಾಂಪ್ರದಾಯಿಕ 'ಬಿಳಿ ಟೈ ಮತ್ತು ಅಲಂಕಾರ'ಗಳೊಂದಿಗೆ, ಮಹಿಳೆಯರು ತಲೆಯುಡಿಗೆಗಳನ್ನು ಧರಿಸಿಕೊಂಡು ಚಿನ್ನದ ತಟ್ಟೆಗಳಲ್ಲಿ ಊಟ ಮಾಡುತ್ತಾರೆ. ಬಕಿಂಗ್ಹ್ಯಾಮ್ ಅರಮನೆಯ ಅತ್ಯಂತ ದೊಡ್ಡ ಮತ್ತು ಹೆಚ್ಚು ಸಾಂಪ್ರದಾಯಿಕ ಸ್ವಾಗತ ಸಮಾರಂಭವು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ನಡೆಯುತ್ತದೆ, ಅಂದು ರಾಣಿ ಲಂಡನ್‌ನಲ್ಲಿ ವಾಸವಾಗಿರುವ ವಿದೇಶಿ ‌ರಾಯಭಾರ ಘಟಕದ ಸದಸ್ಯರಿಗೆ ಮನರಂಜನೆಯನ್ನು ಏರ್ಪಡಿಸುತ್ತಾರೆ. ಈ ವಿಶೇಷ ಸಂದರ್ಭದಲ್ಲಿ, ಚಿತ್ರ ಗ್ಯಾಲರಿಯ ಉತ್ತರದ ದ್ವಾರಗಳಿಂದ ಆರಂಭಿಸಿ ಎಲ್ಲಾ ವೈಭವದ ಕೋಣೆಗಳು ರಾಜಕುಟುಂಬದವರಿಂದ ಬಳಸಲ್ಪಡುತ್ತವೆ. ನ್ಯಾಶ್ ರೂಪಿಸಿದ ಎಲ್ಲಾ ದೊಡ್ಡ, ಇಬ್ಬದಿಯಲ್ಲೂ ಪ್ರತಿಬಿಂಬಿಸುವ ದ್ವಾರಗಳು ಅಸಂಖ್ಯಾತ ಸ್ಫಟಿಕ ಗೊಂಡೆದೀಪಗಳನ್ನು ಮತ್ತು ಮೇಣದ ಬತ್ತಿ ಕಂಬಗಳನ್ನು ಪ್ರತಿಫಲಿಸುತ್ತಾ ತೆರೆದಿರುತ್ತವೆ, ಇದು ಬೆಳಕು ಮತ್ತು ಅವಕಾಶದ ದೃಷ್ಟಿ-ಭ್ರಾಂತಿಯನ್ನು ಉಂಟುಮಾಡುತ್ತದೆ.

ಇತರ ಸಮಾರಂಭಗಳು ಮತ್ತು ಕಾರ್ಯಕ್ರಮಗಳು

ಹೊಸ ರಾಯಭಾರಿಗಳ ಸ್ವಾಗತ ಸಮಾರಂಭಗಳಂತಹ ಸಣ್ಣ ಕಾರ್ಯಕ್ರಮಗಳು '೧೮೪೪ ಕೊಠಡಿ'ಯಲ್ಲಿ ನಡೆಯುತ್ತವೆ. ಈ ಸಂದರ್ಭದಲ್ಲೂ ರಾಣಿಯು ಸಣ್ಣ ಮಧ್ಯಾಹ್ನದ-ಭೋಜನ ಕೂಟಗಳನ್ನು ಏರ್ಪಡಿಸುತ್ತಾರೆ ಮತ್ತು ಹೆಚ್ಚಾಗಿ ಪ್ರಿವಿ ಕೌನ್ಸಿಲ್‌ ಸಭೆಗಳೂ ನಡೆಯುತ್ತವೆ. ದೊಡ್ಡ ಮಧ್ಯಾಹ್ನದ-ಭೋಜನ ಕೂಟಗಳು ಹೆಚ್ಚಾಗಿ ಬಾಗಿದ ಮತ್ತು ಗೊಮ್ಮಟಾಕಾರದ ಸಂಗೀತ ಕೊಠಡಿಯಲ್ಲಿ ಅಥವಾ ವೈಭವದ ಭೋಜನ ಕೊಠಡಿಯಲ್ಲಿ ಏರ್ಪಡುತ್ತವೆ. ಎಲ್ಲಾ ಸಾಂಪ್ರದಾಯಿಕ ವಿಶೇಷ-ಸಂದರ್ಭಗಳಂದು ಮತ್ತು ಸಮಾರಂಭಗಳಂದು ರಾಜನ ಅಂಗರಕ್ಷಕ ದಳದವರು ಅವರ ಐತಿಹಾಸಿಕ ಸಮವಸ್ತ್ರದಲ್ಲಿ ಮತ್ತು ದರ್ಬಾರು ಬಕ್ಷಿ ಮೊದಲಾದ ರಾಜನ ಇತರ ಅಧಿಕಾರಿಗಳು ಹಾಜರಿರಬೇಕು.

ವಿಶ್ವ ಸಮರ IIರಲ್ಲಿ ಅರಮನೆಯ ಚ್ಯಾಪಲ್‌ನ ಮೇಲೆ ಬಾಂಬ್ ದಾಳಿ ಮಾಡಿದರಿಂದ, ರಾಜವಂಶದ ನಾಮಕರಣದ ದೀಕ್ಷಾಸ್ನಾನಗಳನ್ನು ಕೆಲವು ಸಂದರ್ಭಗಳಲ್ಲಿ ಸಂಗೀತ ಕೊಠಡಿಯಲ್ಲಿ ನಡೆಸಲಾಗಿದೆ. ರಾಣಿಯ ಮೊದಲ ಮೂರು ಮಕ್ಕಳ ದೀಕ್ಷಾಸ್ನಾನವನ್ನು ಇಲ್ಲಿ ವಿಶೇಷ ಚಿನ್ನದ ದಿವ್ಯಸ್ನಾನದ ತೊಟ್ಟಿಯಲ್ಲಿ ಮಾಡಿಸಲಾಗಿದೆ. ರಾಜ ವಿಲಿಯಂರಿಗೂ ಸಹ ಸಂಗೀತ ಕೊಠಡಿಯಲ್ಲಿ ದೀಕ್ಷಾಸ್ನಾನ ಮಾಡಿಸಲಾಗಿತ್ತು; ಆದರೆ ಆತನ ಸಹೋದರ ರಾಜ ಹ್ಯಾರಿಗೆ ವಿಂಡ್ಸರ್‌ನ ಸೇಂಟ್ ಜಾರ್ಜ್ ಚ್ಯಾಪಲ್‌‌ನಲ್ಲಿ ದೀಕ್ಷಾಸ್ನಾನ ಮಾಡಿಸಲಾಗಿತ್ತು.

ವರ್ಷದ ಅತ್ಯಂತ ದೊಡ್ಡ ಕಾರ್ಯಕ್ರಮಗಳೆಂದರೆ ರಾಣಿಯ ಉದ್ಯಾನ ಪಾರ್ಟಿಗಳು, ಈ ಪಾರ್ಟಿಗಳಲ್ಲಿ ಉದ್ಯಾನದಲ್ಲಿ ಸುಮಾರು ೮,೦೦೦ ಮಂದಿ ಆಹ್ವಾನಿತರು ಪಾಲ್ಗೊಳ್ಳುತ್ತಾರೆ.

ಆಧುನಿಕ ಇತಿಹಾಸ

೧೯೦೧ರಲ್ಲಿ ಎಡ್ವರ್ಡ್ VIIರ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯಲ್ಲಿ ಹೊಸ ಬದಲಾವಣೆಗಳು ಕಂಡುಬಂದವು. ಹೊಸ ರಾಜ ಮತ್ತು ಆತನ ಪತ್ನಿ ರಾಣಿ ಅಲೆಕ್ಸಾಂಡ್ರ ಲಂಡನ್‌‌ನ ಉನ್ನತ ವರ್ಗದವರಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದರು ಮತ್ತು "ಮಾರ್ಲ್‌ಬೋರೋ ಹೌಸ್ ಸೆಟ್" ಎನ್ನುವ ಅವರ ಸ್ನೇಹಿತರನ್ನು ಈ ಯುಗದ ಹೆಚ್ಚು ಹೆಗ್ಗಳಿಕೆ ಹೊಂದಿದ, ಫ್ಯಾಷನ್‌ಗಾರರೆಂದು ಪರಿಗಣಿಸಲಾಗಿತ್ತು. ನೃತ್ಯ ಮಂದಿರ, ಪ್ರಧಾನ ಪ್ರವೇಶ, ಮಾರ್ಬಲ್ ಸಭಾಂಗಣ, ಭವ್ಯ ಮೆಟ್ಟಿಲ ಸಾಲು, ಸಂಪರ್ಕ ಕೋಣೆ ಯಾ ಹಾದಿ ಮತ್ತು ಗ್ಯಾಲರಿಗಳನ್ನು ಬೆಲ್ಲೆ ಎಪೋಕ್ಯೂ ಕೆನೆಬಣ್ಣದ ಮತ್ತು ಚಿನ್ನದ ಬಣ್ಣದ ಯೋಜನೆಯಲ್ಲಿ ಪುನರಲಂಕರಣ ಮಾಡಿದ ಬಕಿಂಗ್ಹ್ಯಾಮ್ ಅರಮನೆಯು ಮತ್ತೊಮ್ಮೆ ವೈಭವಯುತವಾಗಿ ಮನರಂಜನೆ ನೀಡುವ ಒಂದು ವ್ಯವಸ್ಥೆಯಾಯಿತು. ರಾಜ ಎಡ್ವರ್ಡ್‌‌ ಅರಮನೆಯಲ್ಲಿ ನಿರ್ವಹಿಸಿದ ಭಾರಿ ಪ್ರಮಾಣದ ಪುನರಲಂಕರಣ ಕಾರ್ಯವು ನ್ಯಾಶ್‌ನ ಮೂಲತಃ ಕೆಲಸಕ್ಕೆ ಪೂರಕವಾಗಿಲ್ಲವೆಂದು ಹೆಚ್ಚಿನವರು ಅಭಿಪ್ರಾಯ ಪಟ್ಟಿದ್ದಾರೆ. ಆದರೂ ಇದನ್ನು ಸುಮಾರು ಒಂದೂ ನೂರು ವರ್ಷಗಳ ಕಾಲ ಉಳಿಸಲಾಗಿತ್ತು.

The east front of Buckingham Palace was completed in 1850 (shown on the left); it was remodelled to its present form in 1913 (shown on the right).

ಅಂತಿಮ ಪ್ರಮುಖ ನಿರ್ಮಾಣ ಕಾರ್ಯವನ್ನು ರಾಜ ಜಾರ್ಜ್ Vರ ಆಳ್ವಿಕೆಯ ಸಂದರ್ಭದಲ್ಲಿ ಮಾಡಲಾಯಿತು, ೧೯೧೩ರಲ್ಲಿ ಸರ್ ಆಸ್ಟನ್ ವೆಬ್ ಬ್ಲೋರ್‌ನ ೧೮೫೦ರ ಪೂರ್ವದ ಮುಂಭಾಗವನ್ನು ಚೆಶೈರ್‌ನ ಜಿಯಕೊಮೊ ಲಿಯೋನಿಯ ಲೈಮ್ ಉದ್ಯಾನವನ್ನು ಭಾಗಶಃ ಹೋಲುವಂತೆ ಮರುವಿನ್ಯಾಸಗೊಳಿಸಿದರು. ಈ ಹೊಸಮುಖ ನೀಡಿದ ಪ್ರಧಾನ ಮುಂಭಾಗವನ್ನು (ಪೋರ್ಟ್‌ಲ್ಯಾಂಡ್ ಶಿಲೆಯ) ವಿಕ್ಟೋರಿಯಾ ಸ್ಮಾರಕದ ಹಿಂದೆರೆಯಾಗಿ ವಿನ್ಯಾಸಗೊಳಿಸಲಾಯಿತು, ಈ ರಾಣಿ ವಿಕ್ಟೋರಿಯಾರ ದೊಡ್ಡ ಸ್ಮಾರಕ ಪ್ರತಿಮೆಯು ಮುಖ್ಯ ದ್ವಾರದ ಹೊರಗಿದೆ. ೧೯೧೦ರಲ್ಲಿ ಎಡ್ವರ್ಡ್ VIIರ ಉತ್ತರಾಧಿಕಾರಿಯಾದ ಜಾರ್ಜ್‌ V ತನ್ನ ತಂದೆಗಿಂತ ಹೆಚ್ಚು ಗಂಭೀರ ವ್ಯಕ್ತಿತ್ವವನ್ನು ಹೊಂದಿದ್ದರು; ಈತನ ಅವಧಿಯಲ್ಲಿ ದುಂದುವೆಚ್ಚದ ಪಾರ್ಟಿಗಳಿಗಿಂತ ಅಧಿಕೃತ ಮನರಂಜನೆಗೆ ಮತ್ತು ರಾಜವಂಶದ ಕರ್ತವ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಯಿತು. ಆತ ಒರಿಜಿನಲ್ ಡಿಕ್ಸಿಲ್ಯಾಂಡ್ ಜ್ಯಾಸ್‌ ವಾದ್ಯ-ವೃಂದ(೧೯೧೯) – ಇದು ವಿದೇಶಿ ಮುಖಂಡರಿಗೆ ನೀಡಿದ ಮೊದಲ ಜ್ಯಾಸ್‌ ಪ್ರದರ್ಶನವಾಗಿದೆ, ಸಿಡ್ನಿ ಬೆಚೆಟ್ ಮತ್ತು ಲೂಯಿಸ್ ಆರ್ಮ್‌ಸ್ಟ್ರಾಂಗ್ (೧೯೩೨) ಮೊದಲಾದ ಜ್ಯಾಸ್‌ ಸಂಗೀತಗಾರರನ್ನು ಒಳಗೊಂಡ ಅನೇಕ ಆದೇಶ ಪ್ರದರ್ಶನಗಳನ್ನು ವ್ಯವಸ್ಥೆಗೊಳಿಸಿದರು. ಇದರಿಂದಾಗಿ ಅರಮನೆಯು ೨೦೦೯ರಲ್ಲಿ ಯುನೈಟೆಡ್ ಕಿಂಗ್ಡಮ್‌ನಲ್ಲಿ ಜ್ಯಾಸ್‌ ಸಂಗೀತಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಒಂದು ಸ್ಥಳವೆಂದು ಬ್ರೆಕನ್ ಜ್ಯಾಸ್‌ ಫೆಸ್ಟಿವಲ್‌ನಿಂದ (ಒಂದು ರೀತಿಯ)ನೀಲಿ ಬಿರುದಿಗೆ ನಾಮನಿರ್ದೇಶನಗೊಂಡಿತು. ಜಾರ್ಜ್‌ V ರ ಪತ್ನಿ ರಾಣಿ ಮೇರಿಯು ಕಲಾ ರಸಿಕರಾಗಿದ್ದರು. ಆಕೆ ಪೀಠೋಪಕರಣಗಳು ಮತ್ತು ಕಲೆಯ ರಾಜವಂಶದ ಸಂಗ್ರಹದ ಬಗ್ಗೆ, ಇದಕ್ಕೆ ಸೇರಿಸುವುದು ಮತ್ತು ಪುನರ್ವಶಪಡಿಸುವುದು ಎರಡರ ಬಗ್ಗೆಯೂ, ಅತೀವ ಆಸಕ್ತಿಯನ್ನು ತೋರಿದರು. ರಾಣಿ ಮೇರಿಯು ಹಲವಾರು ಹೊಸ ನೆಲೆವಸ್ತುಗಳು ಮತ್ತು ಸಲಕರಣೆಗಳನ್ನು ಜೋಡಿಸಿದರು, ಉದಾ, ೧೮೧೦ರ ಕಾಲದ ಬೆಂಜಮಿನ್ ವುಲ್ಲಿಯಾಮಿಯ ಮಾರ್ಬಲ್ ಸಾಮ್ರಾಜ್ಯದ-ಶೈಲಿಯ ಹೊಗೆಕೊಳವೆಗಳು. ಇವನ್ನು ರಾಣಿಯು ಉದ್ಯಾನದ ಮುಂಭಾಗದ ಕೇಂದ್ರದಲ್ಲಿರುವ ವಿಶಾಲ ಕೆಳ ಕೋಣೆ, ನೆಲ ಅಂತಸ್ತಿನ ಕಮಾನು ಕೊಠಡಿಯಲ್ಲಿ ಜೋಡಿಸಿದರು. ರಾಣಿ ಮೇರಿಯು ನೀಲಿ ಭೇಟಿ-ಕೊಠಡಿಯ ಅಲಂಕಾರಕ್ಕೂ ಜವಾಬ್ದಾರರಾಗಿದ್ದಾರೆ. ಹಿಂದೆ ದಕ್ಷಿಣದ ಭೇಟಿ-ಕೊಠಡಿಯೆಂದು ಕರೆಯಲಾಗುತ್ತಿದ್ದ ೬೯ ಅಡಿ (೨೧ ಮೀ) ಉದ್ದವಿರುವ ಈ ಕೊಠಡಿಯು ವಿಶೇಷವಾಗಿ ನ್ಯಾಶ್ ವಿನ್ಯಾಸಗೊಳಿಸಿದ ಚಾವಣಿಯನ್ನು ಹೊಂದಿದೆ, ಇದು ದೊಡ್ಡ ಸ್ವರ್ಣಲೇಪದ ಆಸರೆ ಚಾಚುಪೀಠಗಳಿಂದ ಕೂಡಿದ ಮಾಳಿಗೆ-ಗೂಡನ್ನು ಹೊಂದಿದೆ.

೧೯೯೯ರಲ್ಲಿ ರಾಜವಂಶದ ಸಂಗ್ರಹ ವಿಭಾಗದಿಂದ ಪ್ರಕಟಗೊಂಡ ಪುಸ್ತಕವೊಂದು, ಅರಮನೆಯು ೧೯ ವೈಭವದ ಕೋಣೆಗಳು, ೫೨ ಪ್ರಧಾನ ಶಯನಗೃಹಗಳು, ೧೮೮ ಸಿಬ್ಬಂದಿಗಳ ಶಯನಗೃಹಗಳು, ೯೨ ಕಛೇರಿಗಳು ಮತ್ತು ೭೮ ಸ್ನಾನಗೃಹಗಳನ್ನು ಹೊಂದಿದೆಯೆಂದು ವರದಿ ಮಾಡಿದೆ. ದೊಡ್ಡದಾಗಿ ಕಂಡುಬಂದರೂ ಇದು ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಟ್ಸಾರ್ಸ್ಕೋಯ್ ಸೆಲೊದಲ್ಲಿರುವ ರಷ್ಯಾ ಸಾಮ್ರಾಜ್ಯದ ಅರಮನೆಗಳು, ರೋಮ್‌ನಲ್ಲಿರುವ ಪಪಾಲ್ ಅರಮನೆ, ಮ್ಯಾಡ್ರಿಡ್‌ನ ರಾಜಮನೆತನದ ಅರಮನೆ, ಸ್ಟಾಕ್ಹೋಲ್ಮ್ ಅರಮನೆ ಅಥವಾ ಹಿಂದಿನ ವೈಟ್‌ಹಾಲ್‌ನ ಅರಮನೆ ಮೊದಲಾದವುಗಳಿಗೆ ಹೋಲಿಸಿದರೆ ಸಣ್ಣದಾಗಿದೆ ಹಾಗೂ ಫಾರ್ಬಿಡನ್ ಸಿಟಿ ಮತ್ತು ಪೊಟಾಲ ಅರಮನೆಗೆ ಹೋಲಿಸಿದರೆ ಇದು ಚಿಕ್ಕದಾಗಿದೆ. ಅರಮನೆಯು ಸಣ್ಣದಾಗಿದೆಯೆಂಬುದು ಒಳಗಿನ ಪ್ರಾಂಗಣವನ್ನು ನೋಡಿ ತಿಳಿಯಬಹುದು. ೧೯೩೮ರಲ್ಲಿ ಅರಮನೆಯಲ್ಲಿ ಒಂದು ಸಣ್ಣ ಬದಲಾವಣೆಯನ್ನು ಮಾಡಲಾಯಿತು, ಈ ಸಂದರ್ಭದಲ್ಲಿ ಸಸ್ಯ-ರಕ್ಷಣಾಗೃಹವಾಗಿ ನ್ಯಾಶ್ ವಿನ್ಯಾಸಗೊಳಿಸಿದ ಮತ್ತು ೧೯೧೧–೧೩ರಲ್ಲಿ ವ್ಯವಹಾರ ಅಂಗಣವಾಗಿ ಮಾರ್ಪಡಿಸಲಾದ ವಾಯವ್ಯ ಭಾಗದಲ್ಲಿದ್ದ ಉದ್ಯಾನಗೃಹವನ್ನು ಒಂದು ಈಜುಕೊಳವಾಗಿ ಪರಿವರ್ತಿಸಲಾಯಿತು.

ವಿಶ್ವ ಸಮರ I ರ ಸಂದರ್ಭದಲ್ಲಿ, ರಾಜ ಜಾರ್ಜ್ V ಮತ್ತು ರಾಣಿ ಮೇರಿಯ ಆಗ

Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
Nathalia Lima
30 September 2016
Skip the irrelevant change of the guards and go straight to visit inside the palace. Stunning! The last visit is 16h15, its not full and you can see the sunset in the coffee at the palace garden.
George X
9 August 2015
No1 palace to visit. End July till early September open to public-20£. They open the state rooms & u can see what's happening inside.Free audio tour. Amazing rooms, paintings, stairs etc. Recommended!
Eric Dallemagne
8 April 2017
One of the world's most famous addresses, #Buckingham #Palace is the official London residence of the #Queen of #England and an item on many lists of #London must-sees.
Karen
24 December 2018
The palace is just gorgeous. If you're here to see the horse guard parade, make sure you check the calendar the day you're planning to go. Find yourself a prime spot by getting there by 10!
Matt Ta-Min
20 August 2015
Visit to the state rooms was well worth the entrance fee. Quite crowded but that's to be expected for such an amazing and historic site. Audio guide is free and pretty good.
Bea Matti 
30 July 2015
If it's your first time in London, go for it!
8.5/10
Trevor N C, Dan S. ಮತ್ತು 528,723 ಹೆಚ್ಚಿನ ಜನರು ಇಲ್ಲಿದ್ದಾರೆ
Spectacular Strand 2 bed apartment!!

starting $0

Amba Hotel Charing Cross

starting $645

1 Compton

starting $0

Clarendon Serviced Apartments - Chandos Place

starting $0

The Grand at Trafalgar Square

starting $418

Amba Hotel Charing Cross

starting $0

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Garden at Buckingham Palace

The Garden at Buckingham Palace is situated at the rear (west) of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Royal Mews

A Royal Mews is a mews (i.e. combined stables, carriage house and in

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Green Park

Green Park (officially The Green Park) is one of the Royal Parks of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
The Guards Museum

The Guards Museum is a military museum in Central London, England. It

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Clarence House

Clarence House is a royal home in London, situated on The Mall. It is

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Victoria Palace Theatre

Victoria Palace Theatre is a West End theatre in Victoria Street, in

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
St. James's Palace

St. James's Palace is one of London's oldest palaces. It is situated

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Queen's Chapel

The Queen's Chapel is a Christian chapel in central London, England

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Nymphenburg Palace

The Nymphenburg Palace (German: Schloss Nymphenburg), i.e. 'Nymph's

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Royal Pavilion

The Royal Pavilion is a former royal residence located in Brighton,

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ವೆಸ್ಟ್‌ಮಿನಿಸ್ಟರ್‌ ಅರಮನೆ

ವೆಸ್ಟ್‌ಮಿನಿಸ್ಟರ್‌ ಅರಮನೆ ಯನ್ನು ಸಂಸತ್ತು ಭವನಗಳು ಅಥವಾ ವೆಸ್ಟ್‌ಮಿನಿಸ್ಟರ್

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Kensington Palace

Kensington Palace is a royal residence set in Kensington Gardens in

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
St. James's Palace

St. James's Palace is one of London's oldest palaces. It is situated

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ