ಹೂವರ್ ಆಣೆಕಟ್ಟು

ಒಂದು ಕಾಲಕ್ಕೆ ಬೌಲ್ಡರ್ ಅಣೆಕಟ್ಟು ಎಂದು ಹೆಸರಾಗಿದ್ದ ಹೂವರ್ ಅಣೆಕಟ್ಟು ಆಮೇರಿಕ ಸಂಯುಕ್ತ ಸಂಸ್ಧಾನದ ಅರಿಜೋನಾ ಮತ್ತು ನೆವಾಡ ರಾಜ್ಯಗಳ ಗಡಿಯಲ್ಲಿರುವ ಕೊಲೊರೆಡೊ ನದಿಯ ಕಪ್ಪು ಕಣಿವೆಯಲ್ಲಿ ಕಾಂಕ್ರೀಟ್‌ನಿಂದ ನಿರ್ಮಿಸಲಾಗಿರುವ ಕಮಾನಿನಾಕಾರದ ಗುರುತ್ವಾಕರ್ಷಕ ಅಣೆಕಟ್ಟು ೧೯೩೬ರಲ್ಲಿ ಅದರ ನಿರ್ಮಾಣ ಕಾರ್ಯ ಮುಗಿದಾಗ ಅದು ಜಗತ್ತಿನ ಅತಿದೊಡ್ಡ ಜಲವಿದ್ಯುತ್ ಸ್ಧಾವರ ಮತ್ತು ಅತಿದೊಡ್ಡ ಕಾಂಕ್ರೀಟ್‌ ರಚನೆ ಅಥವಾ ಈ ಎರಡೂ ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಈ ದಾಖಲೆಯನ್ನು ಮುರಿದದ್ದು ೧೯೪೫ರಲ್ಲಿ ನಿರ್ಮಿಸಿದ ಗ್ರ್ಯಾಂಡ್‌ಕೌಲಿ ಅಣೆಕಟ್ಟು. ಈಗ ಇದು ಜಗತ್ತಿನ ೩೮ನೆಯ ಅತಿದೊಡ್ಡ ಜಲವಿದ್ಯುತ್ ಸ್ಧಾವರ. ಈ ಅಣೆಕಟ್ಟು ನೇವಡಾದ ಲಾಸ್‌ವೆಗಾಸ್‌ನ ಅಗ್ನೇಯ ಭಾಗದಲ್ಲಿದೆ, 30 mi (48 km)ಮೊದಲಿಗೆ ಆಮೇರಿಕ ಸಂಯುಕ್ತ ಸಂಸ್ಧಾನದ ವಾಣಿಜ್ಯ ಕಾರ್ಯದರ್ಶಿಯಾಗಿ, ನಂತರ ಅಧ್ಯಕ್ಷನಾಗಿದ್ದ ಹೆರ್ಬರ್ಟ್ ಹೂವರ್ ಇದರ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿದ್ದ; ಆತನ ಹೆಸರನ್ನು ಈ ಅಣೆಕಟ್ಟಿಗೆ ಇಡಲಾಗಿದೆ. ಇದರ ನಿರ್ಮಾಣ ಕಾರ್ಯ ೧೯೩೧ರಲ್ಲಿ ಪ್ರಾರಂಭವಾಗಿ ನಿಗಧಿ ಪಡಿಸಿದ ಅವಧಿಗಿಂತ ಎರಡು ವರ್ಷಗಳಿಗೂ ಹೆಚ್ಚು ಕಾಲ ತೆಗೆದುಕೊಂಡು ೧೯೩೬ರಲ್ಲಿ ಮುಕ್ತಾಯವಾಯಿತು. ಈ ಅಣೆಕಟ್ಟು ಮತ್ತು ವಿದ್ಯುತ್ ಸ್ಧಾವರವನ್ನ ಆಮೇರಿಕ ಸಂಯುಕ್ತ ಸಂಸ್ಧಾನದ ಅಂತರಿಕ ಇಲಾಖೆಯ ಬ್ಯೂರೋ ಆಫ್ ರಿಕ್ಲಮೇಷನ್ ನಿರ್ವಹಿಸುತ್ತದೆ. ೧೯೮೧ರಲ್ಲಿ ರಾಷ್ಟ್ರೀಯ ಚಾರಿತ್ರಿಕ ಸ್ಧಳಗಳ ದಾಖಲೆಗೆ ಸೇರ್ಪಡೆ ಗೊಂಡ ಹೂವರ್ ಅಣೆಕಟ್ಟು ೧೯೮೫ರಲ್ಲಿ ರಾಷ್ಟ್ರೀಯ ಚಾರಿತ್ರಿಕ ಸ್ಧಳವೆಂಬ ಸ್ಧಾನ ಗಳಿಸಿಕೊಂಡಿತು. ಈ ಅಣೆಕಟ್ಟಿನಿಂದ ಲೇಕ್‌ಮೀಡ್ ಎಂಬ ಜಲಾಶಯ ಸೃಷ್ಟಿಯಾಗಿದ್ದು, ಅಣೆಕಟ್ಟಿನ ನಿರ್ಮಾಣದ ಉಸ್ತುವಾರಿ ನಡೆಸಿದ ಎಲ್‌ವುಡ್‌ ಮೀಡ್‌ನ ಹೆಸರನ್ನು ಇದಕ್ಕೆ ಇಡಲಾಗಿದೆ.

ಯೋಜನೆ ಮತ್ತು ಒಪ್ಪಂದಗಳು

೧೯೨೨ರಲ್ಲಿ ಜಲಾನಯನ ರಾಜ್ಯಗಳಿಂದ ತಲಾ ಒಬ್ಬ ಪ್ರತಿನಿಧಿ ಮತ್ತು ಫೆಡರಲ್ ಸರ್ಕಾರದ ಒಬ್ಬ ಪ್ರತಿನಿಧಿಯನ್ನು ಒಳಗೊಂಡಂತೆ ಒಂದು ಆಯೋಗವನ್ನು ರಚಿಸಲಾಯಿತು. ವಾರನ್‌ಹಾರ್ಡಿಂಗ್‌ನ ಅಧ್ಯಕ್ಷೀಯ ಪಾರುಪತ್ಯದಡಿಯಲ್ಲಿ ವಾಣಿಜ್ಯ ಕಾರ್ಯದರ್ಶಿಯಾಗಿದ್ದ ಹೆರ್ಬರ್ಟ್ ಹೂವರ್ ಫೆಡರಲ್ ಸರ್ಕಾರದ ಪ್ರತಿನಿಧಿಯಾಗಿದ್ದ. ೧೯೨೨ರಲ್ಲಿ ಹೂವರ್, ಅರಿಜೋನಾ, ಕ್ಯಾಲಿಫೋರ್ನಿಯಾ, ಕೊಲೊರೆಡೊ, ನೆವಾಡ, ನ್ಯೂಮೆಕ್ಸಿಕೊ,ಉತಾಹ ಮತ್ತು ಮ್ಯೋಮಿಂಗ್ ರಾಜ್ಯಗಳ ರಾಜ್ಯಪಾಲರು ಸಭೆ ಕರೆದು ರಾಜ್ಯಗಳ ಉಪಯೋಗಕ್ಕಾಗಿ ಕೊಲೊರೆಡೊ ನದಿಯ ನೀರಿನ ಸಮಪಾಲು ಪಡೆದು ಕೊಳ್ಳುವಂತೆ ಒಂದು ವ್ಯವಸ್ಧೆಯನ್ನು ರೂಪಿಸಿದ. ೨೪ ನವೆಂಬರ್ ೧೯೨೨ರಲ್ಲಿ ಕೊಲೊರೆಡೊ ನದಿ ನೀರಿನ ಒಪ್ಪಂದಕ್ಕೆ ಸಹಿ ಬಿತ್ತು, ನದಿಯ ಜಲಾಶಯನ ಪ್ರದೇಶವನ್ನು ಮೇಲು ಮತ್ತು ಕೆಳ ಹಂತವಾಗಿ ರಾಜ್ಯಗಳೊಂದಿಗೆ ಮತ್ತು ಪ್ರಾಂತ್ಯಗಳ ಒಳಗೆ ವಿಭಜಿಸಿ ನೀರನ್ನು ಹೇಗೆ ಪಾಲು ಮಾಡಿಕೊಳ್ಳಬೇಕೆಂದು ನಿರ್ಧರಿಸಲಾಯಿತು. ಹೂವರ್ ಸಂಧಾನ ಎಂದು ಹೆಸರಾಗಿರುವ ಈ ಒಪ್ಪಂದ ಬೌಲ್ಡರ್ ಅಣೆಕಟ್ಟು ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಈ ಬೃಹತ್ ಅಣೆಕಟ್ಟನ್ನು ಪ್ರವಾಹ ತಡೆಗಟ್ಟಿ, ಆ ನೀರನ್ನು ನೀರಾವರಿ ಹರಿವು ಮತ್ತು ಜಲವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಲಾಯಿತು.

ಬೌಲ್ಡರ್ ಅಣೆಕಟ್ಟಿನ ನಿರ್ಮಾಣಕ್ಕಾಗಿ ಕಾಂಗ್ರೆಸಿನ ಒಪ್ಪಿಗೆ ಪಡೆದು ಕೊಳ್ಳಲು ೧೯೨೨ರಲ್ಲಿ ಜನಪ್ರತಿನಿಧಿ ಸಭೆ ಮತ್ತು ಸೆನೇಟ್‌ನಲ್ಲಿ ಎರಡು ಮಸೂದೆಗಳನ್ನು ಮಂಡಿಸುವ ಮೂಲಕ ಮೊದಲ ಪ್ರಯತ್ನ ನಡೆಯಿತು. ಕಾಂಗ್ರೆಸಿನ ಸದಸ್ಯ ಫಿಲ್ ಡಿ. ಸ್ವಿಂಗ್ ಮತ್ತು ಸೆನೇಟರ್ ಹಿರಂ W. ಜಾನ್ಸನ್ ಮಂಡಿಸಿದ ಈ ಮಸೂದೆಗಳು ಸ್ವಿಂಗ್-ಜಾನ್ಸನ್ ಮಸೂದೆಗಳೆಂದು ಹೆಸರಾಗಿವೆ. ಈ ಮಸೂದೆಗಳು ಮತದಾನದ ಹಂತಕ್ಕೆ ಬರಲು ವಿಫಲಗೊಂಡು ಅವುಗಳನ್ನು ಅನೇಕ ಸಲ ಮರು ಮಂಡನೆ ಮಾಡಲಾಯಿತು. ಡಿಸೆಂಬರ್ ೧೯೨೮ರಲ್ಲಿ ಕಾಂಗ್ರೆಸ್ ಮತ್ತು ಸೆನೇಟ್‌ಗಳು ಅಂತಿಮವಾಗಿ ಈ ಮಸೂದೆಗಳನ್ನು ಒಪ್ಪಿ ಕೊಂಡು ಅಧ್ಯಕ್ಷೀಯ ಒಪ್ಪಿಗೆಗಾಗಿ ಕಳುಹಿಸಿ ಕೊಟ್ಟವು. ೨೧ ಡಿಸೆಂಬರ್೧೯೨೮ರಲ್ಲಿ ಬೌಲ್ಡರ್ ಕಣಿವೆ ಯೋಜನೆಯನ್ನು ಒಪ್ಪಿದ ಅಧ್ಯಕ್ಷ ಕ್ಯಾಲ್ಪಿನ್‌ ಕೂಲಿಡ್ಜ್ ಮಸೂದೆ ಸಹಿ ಹಾಕಿದ. ಬೌಲ್ಡರ್ ಕಣಿವೆ ಯೋಜನೆ . ೧೯೩೦ರಲ್ಲಿ ಅದರ ಪ್ರಾರಂಭಿಕ ಕಾಮಗಾರಿ ಶುರುವಾಗುವ ವೇಳೆಗೆ ಹೆರ್ಬರ್ಟ್ ಹೂವರ್ ಅಧ್ಯಕ್ಷ ಪದವಿಗೇರಿದ್ದ. ಈ ಮೊದಲು ಈ ಅಣೆಕಟ್ಟನ್ನು ಬೌಲ್ಡರ್ ಕಣಿವೆಯಲ್ಲಿ ಕಟ್ಟುವ ಯೋಜನೆ ಇತ್ತಾದ್ದರಿಂದ ಇದು ಬೌಲ್ಡರ್ ಕಣಿವೆ ಯೋಜನೆ ಎಂದು ಹೆಸರಾಯಿತು. ಮುಂದೆ ಈ ಅಣೆಕಟ್ಟಿನ ಸ್ಧಳವನ್ನು ಕೆಳ ಹರಿವಿನ ಕಪ್ಪು ಕಣಿವೆಗೆ ಎಂಟು ಮೈಲಿ (೧೩ಕಿ.ಮೀ) ಗಳಷ್ಟು ಮುಂದೂಡಲಾಯಿತು; ಆದರೆ ಯೋಜನೆಯ ಹೆಸರು ಹಾಗೇ ಉಳಿದು ಕೊಂಡಿತು. ಅಣೆಕಟ್ಟನ್ನು ಕಪ್ಪು ಕಣಿವೆಗೆ ಸ್ಧಳಾಂತರ ಮಾಡಲು ಇದ್ದ ಪ್ರೇರಣೆ ಎಂದರೆ, ಅಣೆಕಟ್ಟಿನ ಸ್ಧಳದ ಕೆಳಗಿನ ಭೂಮಿ ನದಿಯ ಭೌತಿಕ ಹತೋಟಿಗೆ ಬೌಲ್ಡರ್ ಜಲಾನಯನ ಅಷ್ಟು ಸ್ಧಿರವಾಗಿರಲಿಲ್ಲ. ಕಪ್ಪು ಕಣಿವೆಗೆ ಅಷ್ಟು ದೂರದ ಕೆಳ ಹರಿವಿನಲ್ಲಿ ಉತ್ತಮವಾದ ಸಂಪೂರ್ಣ ನದಿ ನಿಯಂತ್ರಣವನ್ನು ಒದಗಿಸಿಕೊಟ್ಟಿತು.

ಗುತ್ತಿಗೆದಾರರು

ಬೌಲ್ಡರ್ ಅಣೆಕಟ್ಟಿನ ಕಟ್ಟಡ ಕಾಮಗಾರಿಯನ್ನು ೧೧ ಮಾರ್ಚ್ ೧೯೩೧ರಲ್ಲಿ ಇಡಾಹೊದ ಬೋಯಿಸ್‌ನ ಮೋರಿಸನ್‌ ಕೂಡ್ಸೆನ್ ಎಂಬ ಸಂಯುಕ್ತ ಕಂಪನಿ, ಉತಾಹದ ಓಗ್ಡೆನ್ನಿನ ಉತಾಹ್ ಕನ್ಸ್‌ಟ್ರಕ್ಷನ್ ಕಂಪನಿ, ಓರೆಗಾನ್‌ನ ಫೋರ್ಟ್‌ಲ್ಯಾಂಡಿನ ಫೆಸಿಫಿಕ್ ಬ್ರಿಡ್ಜ್ ಕಂಪನಿ, ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡಿನ ಹೆನ್ರಿ ಜೆ ಕೈಸರ್ ಮತ್ತು W.A ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್‌ನ ಬೆಕ್ಟೆಲ್ ಕಂಪನಿ, ಲಾಸ್‌ಏಂಜೆಲೀಸ್‌ನ ಮ್ಯಾಕ್‌ಡೊನಾಲ್ಡ್ ಮತ್ತು ಕಾಹ್ನ್‌ಲಿಮಿಟೆಡ್ ಮತ್ತು ಓರೆಗಾನ್‌ನ ಫೋರ್ಟ್‌ಲ್ಯಾಂಡಿನ ಜೆ.ಎಫ್ ಷಿಯಾ ಕಂಪನಿ ಎಂಬ ಆರು ಕಂಪನಿಗಳಿಗೆ ಗುತ್ತಿಗೆ ಕೊಡಲಾಯಿತು. ಈ ಆರು ಕಂಪನಿಗಳ ಮುಖ್ಯ ಎಗ್ಸಿಕ್ಯುಟಿವ್ ಆಗಿದ್ದ ಫ್ರಾಂಕ್ ಕ್ರೌವ್ ಅಣೆಕಟ್ಟುಗಳನ್ನು ಕಟ್ಟುವ ಅನೇಕ ತಾಂತ್ರಿಕತೆಗಳನ್ನು ಕಂಡು ಹಿಡಿದಿದ್ದ.

ಕಟ್ಟಡ ಕಾಮಗಾರಿಯ ಕಾಂಕ್ರೀಟ್ ಸುರಿಯುವ ಮತ್ತು ಅದನ್ನು ಬನಿ ಮಾಡುವ ಹಂತದಲ್ಲಿ ಕಾಂಕ್ರೀಟಿನ ಒಳಗಡೆ ನಳಿಕೆಗಳ ಮೂಲಕ ಶೀತಲ ನೀರನ್ನು ಭಾಗಗಳಲ್ಲಿ ಹರಿಸುವ ಅಗತ್ಯವಿರುತ್ತದೆ. ಕಾಂಕ್ರೀಟ್‌ನ್ನು ಘನೀಕರಿಸಲು ನಡೆಯುವ ಕೆಲವು ರಾಸಾಯನಿಕ ಪ್ರತಿಕ್ರಿಯೆಗಳು ಉಂಟುಮಾಡುವ ಶಾಖವನ್ನು ಹೀರಿಕೊಳ್ಳಲು ಇದು ಅವಶ್ಯಕ. ಒಂದೇ ಸಲ ಸುರಿದು, ಅದರ ಜೊತೆಗೆ ಹೆಚ್ಚುವರಿಯಾಗಿ ತಂಪು ಮಾಡಿದಿದ್ದರೆ ಕಾಂಕ್ರೀಟ್ ಸದೃಡವಾಗಿ ಬನಿಯಾಗಲು ಸುಮಾರು ೧೨೫ ವರ್ಷಗಳ ಕಾಲ ತೆಗೆದುಕೊಳ್ಳುತ್ತದೆಂದು ಲೆಕ್ಕ ಹಾಕಲಾಗಿತ್ತು. ಆರು ಕಂಪನಿಗಳು ಇಂಕ್., ಈ ಬಹುಪಾಲು ಕೆಲಸ ಮಾಡಿದವು, ಆದರೆ ಇಷ್ಟ ಬೃಹತ್ ಪ್ರಮಾಣದಲ್ಲಿ ತಂಪು ಮಾಡುವ ಯೋಜನೆ ತಮ್ಮ ತಾಂತ್ರಿಕ ಪರಿಣತಿಗೆ ಮೀರಿದ್ದೆಂದು ಅವರಿಗೆ ಗೊತ್ತಾಗ ತೊಡಗಿತು. ಆದ್ದರಿಂದ ತಂಪು ಮಾಡುವ ಅವಶ್ಯಕತೆಗಳನ್ನು ಪೂರೈಸಲು ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್‌ಗೆ ಗುತ್ತಿಗೆ ಕೊಡಲಾಯಿತು. ಕೆಲಸಗಾರರಿಗಾಗಿ "ಬೌಲ್ಡರ್ ಸಿಟಿ" ಎಂಬ ಹೊಸನಗರವನ್ನು ಕಟ್ಟಲು ಆರು ಕಂಪನಿಗಳಿಗೆ ಗುತ್ತಿಗೆ ಕೊಡಲಾಯಿತು. ಆಗಿನ ಅರ್ಥಿಕ ಮುಗ್ಗಟ್ಟನ್ನು ಎದುರಿಸಲು ಹೆಚ್ಚು ಉದ್ಯೋಗ ಸೃಷ್ಟಿ ಮಾಡಲು ಅಣೆಕಟ್ಟಿನ ಕಟ್ಟಡದ ವೇಗವನ್ನು ಹೆಚ್ಚಿಸಲಾಯಿತು; ಆದರೆ ೧೯೩೧ರ ಪ್ರಾರಂಭದಲ್ಲಿ ಅಣೆಕಟ್ಟಿನ ಕೆಲಸಗಾರರ ಮೊದಲ ತಂಡ ನಿವೇಶನಕ್ಕೆ ಬರುವ ಹೊತ್ತಿಗೆ ಆ ನಗರ ನಿರ್ಮಾಣ ಇನ್ನೂ ಮುಗಿದಿರಲಿಲ್ಲ. ಅಣೆಕಟ್ಟಿನ ಕಾಮಗಾರಿಯ ಮೊದಲ ಬೇಸಿಗೆ ಅವಧಿಯಲ್ಲಿ, ನಗರ ನಿರ್ಮಾಣ ಕಾರ್ಯ ಮುಂದುವರೆಯುತ್ತಿದ್ದಾಗ ಕೆಲಸಗಾರರು ಮತ್ತು ಅವರ ಕುಟುಂಬಗಳಿಗೆ ಟಾರ್ಪಾಲುಗಳಿಂದ ಕಟ್ಟಿದ ತಾತ್ಕಾಲಿಕ ಷೆಡ್ಡುಗಳಲ್ಲಿ ವಸತಿ ಕಲ್ಪಿಸಲಾಯಿತು ಈ ಟಾರ್ಪಾಲಿನ್ ಷೆಡ್ಡುಗಳು ಮತ್ತು ಅಣೆಕಟ್ಟೆ ನಿವೇಶನದಲ್ಲಿನ ಕೆಲಸಗಳ ಅಪಾಯಕಾರಿ ಪರಿಸ್ಧಿತಿ ಬಗ್ಗೆ ಕೆಲಸಗಾರರಿಗೆ ಅಸಮಾಧಾನವಾಗಿ ಇದು ೮ ಆಗಸ್ಟ್ ೧೯೩೧ರಲ್ಲಿ ಹರತಾಳಕ್ಕೆ ದಾರಿ ಮಾಡಿಕೊಟ್ಟಿತು. ಆರು ಕಂಪನಿಗಳು ಹರತಾಳ ದಮನಕಾರರಿಗೆ ಬಂದೂಕು ಮತ್ತು ದೊಣ್ಣೆಗಳನ್ನು ಕೊಟ್ಟು ಅದನ್ನು ದಮನ ಮಾಡುವ ರೀತಿಯಲ್ಲಿ ಪ್ರತಿಕ್ರಿಯಿಸಿತು; ಹರತಾಳ ಬೇಗ ತಣ್ಣಗಾಯಿತು. ಆದರೆ ಈ ಅಸಮಾಧಾನ ಬೌಲ್ಡರ್ ಸಿಟಿ ನಿರ್ಮಾಣವನ್ನು ಚುರುಕು ಗೊಳಿಸುವಂತೆ ಅಧಿಕಾರಸ್ತರನ್ನು ಪ್ರೇರೇಪಿಸಿತು; ೧೯೩೨ರ ವಸಂತ ಕಾಲದ ವೇಳೆಗೆ ಟಾರ್ಪಾಲಿನ ಬೌಲ್ಡರ್ ಟೌನ್ ಹಾಳು ಬಿತ್ತು. ಕಾಮಗಾರಿಯ ಅವಧಿಯಲ್ಲಿ ಬೌಲ್ಡರ್ ಸಿಟಿಯಲ್ಲಿ ಜೂಜು, ಕುಡಿತ ಮತ್ತು ಸೂಳೆಗಾರಿಕೆಗೆ ಅವಕಾಶವಿರಲಿಲ್ಲ. ಈ ಇಂದಿನ ತನಕ ಜೂಜಿನ ಗಂಧಗಾಳಿ ಇಲ್ಲ ನೆವಾಡದ ಎರಡು ಪ್ರದೇಶಗಳ ಪೈಕಿ ಬೌಲ್ಡರ್ ಸಿಟಿ ಒಂದು; ಇಲ್ಲಿ ೧೯೬೯ರ ತನಕ ಆಲ್ಕೋಹಾಲ್ ಮಾರಾಟ ಕಾನೂನು ಬಾಹಿರವಾಗಿತ್ತು. ಸುರಂಗಗಳಲ್ಲಿ ಕೆಲಸ ಮಾಡುತ್ತಿರುವಾಗ ಅನೇಕ ಕೆಲಸಗಾರರು ಅಲ್ಲಿನ ಯಂತ್ರಗಳು ಉಗುಳುತ್ತಿದ್ದ ಕಾರ್ಬನ್ ಮಾನಾಕ್ಸೈಡ್‌ನಿಂದ ನರಳ ಬೇಕಾಯಿತು. ಗುತ್ತಿಗೆದಾರರು ಈ ಇದು ನ್ಯೂಮೋನಿಯಾ ಕಾಯಿಲೆ ಇದಕ್ಕೆ ನಾವು ಜವಾಬ್ಧಾರರಲ್ಲ ಎಂದು ಹೇಳಿ ನುಣುಚಿಕೊಂಡರು. ನೆವಾಡದ ಅಧಿಕಾರಿಗಳು ರಾಜ್ಯದ ಗಾಳಿಯ ಗುಣಮಟ್ಟದ ಬಗೆಗಿನ ಕಾನೂನುಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದಾಗ ಗುತ್ತಿಗೆದಾರರು ಅವರನ್ನು ಕೋರ್ಟಿನ ಮೆಟ್ಟಿಲು ಹತ್ತಿಸಿದರು. ಹೂವರ್ ಅಣೆಕಟ್ಟು ಕಟ್ಟುವಾಗ ಅಧಿಕೃತವಾಗಿ ಸತ್ತ ಕೆಲಸಗಾರರು ಕೇವಲ ೯೬. ಕೆಲವು ಕೆಲಸಗಾರರು ಕಾಯಿಲೆಯಾಗಿ "ನ್ಯೂಮೋನಿಯಾ" ಎಂದು ಹೇಳಲಾದ ಕಾಯಿಲೆಯಾಗಿ ಸತ್ತರು. ಅಧಿಕೃತ ಸಾವಿನ ಪಟ್ಟಿಯಲ್ಲಿ ಅನೇಕ ಸಾವಿನ ಲೆಕ್ಕವಾಗಿಲ್ಲ. []"ಬ್ಯೂರೋ ಆಫ್ ರೆಕ್ಲಮೇಷನ್ ಸಾವಿನ ಅಂಕಿ ಸಂಖ್ಯೆಗಳು ತೋರಿಸುವಂತೆ ಕಟ್ಟಡ ಕಾಮಗಾರಿ ಅವಧಿಯಲ್ಲಿ ಬೇರೆ ಯಾವುದೇ ಕಾರಣಗಳಿಗಿಂತ ಹೆಚ್ಚಾಗಿ ನ್ಯೂಮೋನಿಯಾದಿಂದ ೪೨ ಸಾವುಗಳು ಸಂಭವಿಸಿವೆ." ಜನವರಿ ೧೯೩೬ರಲ್ಲಿ ಆರು ಕಂಪನಿಗಳು ೫೦ ಗ್ಯಾಸ್ ಸೂಟ್ ಕಕ್ಷಿದಾರರು ಜೊತೆಯಲ್ಲಿ ನ್ಯಾಯಾಲಯದ ಹೊರಗಡೆ ಅಘೋಷಿತ ಮೊತ್ತಕ್ಕೆ ಪರಿಹಾರ ಕಂಡುಕೊಂಡವು.

ನಿರ್ಮಾಣ ಚಟುವಟಿಕೆಗಳು

ನೆಲ ಕಾಮಗಾರಿ

ಅಣೆಕಟ್ಟಿನ ಕಟ್ಟಡದ ನಿವೇಶನವನ್ನು ಪ್ರವಾಹದಿಂದ ರಕ್ಷಿಸಲು ಎರಡು ಕಾಫರ್ ಅಣೆಕಟ್ಟುಗಳನ್ನು ಕಟ್ಟಲಾಯಿತು. ನದಿಯನ್ನು ಇನ್ನೂ ಬೇರೆಡೆಗೆ ತಿರುಗಿಸದಿದ್ದರೂ, ಮೇಲು ಹಂತದ ಕಾಫರ್ ಅಣೆಕಟ್ಟುನ್ನು ೧೯೩೨ರ ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ನದಿಯ ನೆವಾಡ ಅಂಚಿನಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕುದುರೆ ಲಾಳದ ಆಕಾರದ ತಡೆಗೋಡೆ ಕಾಫರ್ ಅಣೆಕಟ್ಟನ್ನು ರಕ್ಷಿಸಿತು. ಅರಿಜೋನಾದ ಸುರುಗಗಳನ್ನು ಪೂರ್ಣ ಗೊಳಿಸಿ, ನದಿಯನ್ನು ಬೇರೆಡೆಗೆ ತಿರುಗಿಸಿದ ನಂತರ ಕಾಮಗಾರಿ ಶೀಘ್ರ ಗತಿಯಲ್ಲಿ ಪೂರ್ಣಗೊಂಡಿತು. ಕಾಫರ್ ಅಣೆಕಟ್ಟುಗಳನ್ನು ಸ್ಧಾಪಿಸಿ, ಕಾಮಗಾರಿ ಸ್ಧಳದ ನೀರನ್ನು ತೆರವು ಮಾಡಿದ ನಂತರ ಅಣೆಕಟ್ಟಿನ ತಳಪಾಯಕ್ಕೆ ಅಗೆತ ಶುರುವಾಯಿತು. ಅಣೆಕಟ್ಟು ಕಠಿಣ ಶಿಲೆಯ ಮೇಲೆ ಸ್ಧಿರವಾಗಿ ನಿಲ್ಲುವಂತೆ ಮಾಡಲು ಕಠಿಣ ಶಿಲೆ ಸಿಗುವ ತನಕ ನದಿಯ ಪಾತ್ರದ ಕೊಚ್ಚಣಿ ಮಣ್ಣು ಇತರೆ ಸಡಿಲ ಪದಾರ್ಥಗಳನ್ನು ತೆಗೆದು ಹಾಕುವುದು ಅವಶ್ಯಕವಾಗಿತ್ತು. ತಳಪಾಯದ ಅಗೆತದ ಕೆಲಸ ೧೯೩೩ ಜೂನ್‌ನಲ್ಲಿ ಪೂರ್ಣಗೊಂಡಿತು. ತಳಪಾಯದ ಅಗೆತದ ಅವಧಿಯಲ್ಲಿ ಅಂದಾಜು 1,500,000 cubic yards (1,100,000 m3)ರಷ್ಟು ಪದಾರ್ಥವನ್ನು ತೆಗೆದು ಹಾಕಲಾಯಿತು. ಅಣೆಕಟ್ಟು ಗುರುತ್ವ ಕಮಾನಿನ ರೂಪದಲ್ಲಿ ವಿನ್ಯಾಸವಾಗಿದ್ದರಿಂದ ಕಣಿವೆಯ ಪಕ್ಕದ ಗೋಡೆಗಳು ಜಲಾಶಯದ ನೀರಿನ ಒತ್ತಡವನ್ನು ತಾಳಿಕೊಳ್ಳುವಂತಿದ್ದವು. ಆದ್ದರಿಂದ ಶಿಥಿಲವಾಗಿರದ ಗಟ್ಟಿ ಕಲ್ಲಿನ ತಳ ಸಿಗುವ ತನಕ, ಅನೇಕ ಶತಮಾನಗಳ ಜೌಗು, ಚಳಿಗಾಲದ ಘನೀಕೃತತೆಯಿಂದ ಉಂಟಾದ ಬಿರುಕುಗಳು ಮತ್ತು ಅರಿಜೋನಾ-ನೆವಾಡ ಮರುಭೂಮಿಗಳ ಬಿಸಿಯಾಗುವ/ತಂಪಾಗುವ ವಾಯು ವರ್ತುಲಕ್ಕೆ ಸಿಗದಂತಹ ತಳ ಪದರ ಸಿಗುವ ತನಕ ಪಕ್ಕದ ಗೋಡೆಗಳನ್ನ ಅಗೆಯಲಾಯಿತು.

ನದಿ ತಿರುವು

ನಿರ್ಮಾಣ ಕಾಮಗಾರಿಯ ಸುತ್ತಲೂ ನದಿಯ ಹರಿವನ್ನು ಬೇರೆಡೆಗೆ ತಿರುಗಿಸಲು, ನೆವಾಡದ ಕಡೆ ಎರಡು ಮತ್ತು ಅರಿಜೋನಾದ ಕಡೆಗೆ ಎರಡು, ಒಟ್ಟು ನಾಲ್ಕು ತಿರುವು ಸುರಂಗಗಳನ್ನು ಕಣಿವೆಯ ಗೋಡೆಗಳಲ್ಲಿ ಕೊರೆಯಲಾಯಿತು. ಈ ಸುರಂಗಗಳು 56 feet (17 m)ವ್ಯಾಸದಲ್ಲಿದ್ದವು ಅವುಗಳ ಒಟ್ಟು ಉದ್ದ ಹೆಚ್ಚು ಕಡಿಮೆ 16,000 ft (4,900 m) ಅಥವಾ 3 mi (4.8 km) ಗಿಂತ ಹೆಚ್ಚು. ನೆವಾಡದ ಸುರಂಗ ಕೆಳ ಹಂತದಲ್ಲಿ ೧೯೩೧ರಲ್ಲಿ ಸುರಂಗ ಕೊರೆತ ಶುರುವಾಯಿತು. ಇದಾದ ಕೊಂಚ ಕಾಲದಲ್ಲಿ ಅರಿಜೋನಾ ಕಣಿವೆಯ ಗೋಡೆಯಲ್ಲಿ ಇದೇ ರೀತಿಯ ಎರಡು ಸುರಂಗಗಳ ಕೊರೆತ ಶುರುವಾಯಿತು. ಮಾರ್ಚ್ ೧೯೩೨ರಲ್ಲಿ ಸುರಂಗಗಳ ಕಾಂಕ್ರೀಟ್ ಮರಳು ಗಾಜಿನ ಕಾಮಗಾರಿ ಆರಂಭವಾಯಿತು. ಮೊದಲಿಗೆ ತಳಪಾಯಕ್ಕೆ ಕಾಂಕ್ರೀಟ್ ಸುರಿಯಲಾಯಿತು. ಕಾಂಕ್ರೀಟ್ ಸುರಿಯಲು ಪ್ರತಿ ಸುರಂಗದ ಉದ್ದಕ್ಕೂ ಹಳಿಗಳ ಮೇಲೆ ಚಲಿಸುವ ಗ್ಯಾಂಟ್ರಿ ಕ್ರೇನುಗಳನ್ನು ಬಳಸಲಾಯಿತು. ನಂತರ ಪಕ್ಕದ ಗೋಡೆಗಳಿಗೆ ಕಾಂಕ್ರೀಟ್ ಸುರಿಯಲಾಯಿತು. ಚಲಿಸುವಂತಹ ಸ್ಟೀಲ್ ಬಗೆಯ ವಿಭಾಗಳನ್ನು ಸೈಡ್‌ವಾಲ್‌ಗಳಲ್ಲಿ ಬಳಸಲಾಗುತ್ತದೆ. ಅಂತಿಮವಾಗಿ ನ್ಯೂಮ್ಯಾಟಿಕ್ ಗನ್‌ಗಳನ್ನು ಬಳಸಿ ಸುರಂಗದ ಚಾವಣಿಗಳಿಗೆ ಕಾಂಕ್ರೀಟ್ ಸುರಿಯಲಾಯಿತು. ಕಾಂಕ್ರೀಟಿನ ಮೇಲು ಹೊದಿಕೆ 3 ft (0.91 m) ಮಂದವಾಗಿದ್ದು ಸುರಂಗದ ವ್ಯಾಸವನ್ನು 50 ft (15 m) ನಷ್ಟು ತಗ್ಗಿಸಿತು. ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡ ನಂತರ ಎರಡು ಹೊರಮುಖ ಸುರಂಗಗಳ ಪ್ರವೇಶ ದ್ವಾರವನ್ನು ಮುಚ್ಚಲಾಯಿತು. ಮತ್ತು ಸುರಂಗಗಳ ಅರ್ಥಭಾಗದಲ್ಲಿ ಕಾಂಕ್ರೀಟಿನ ಕೊಂಡುಗಳನ್ನು ಜಡಿಯಲಾಯಿತು. ಕಾಂಕ್ರೀಟಿನ ಕೊಂಡುಗಳನ್ನು ಜಡಿದ ಕೆಳಹರಿವಿನ ಅರ್ಥ ಸುರಂಗಗಳು ಈಗ ಅಣೆಕಟ್ಟಿನ ಕೊಂಡಿಯಂತೆ ಕೆಲಸ ಮಾಡುತ್ತಿವೆ.

ಕಲ್ಲಿನ ತೆರವು

ಪ್ರತಿ ಕಮಾನು ಗೋಡೆಗಳಿಗೆ ಎರಡು ಲಂಬಮುಖಿ ತಳಪಾಯಗಳನ್ನ ( ವಾಡದ ಕಡೆಗೆ ಮತ್ತು ಅರಿಜೋನಾದ ಕಡೆಗೆ ) ಕಠಿಣ ಶಿಲೆಗಳ ಮೇಲೆ ಸ್ಧಾಪಿಸಬೇಕಾಗಿತ್ತು; ಸಾವಿರಾರು ವರ್ಷಗಳಿಂದ ಬಿಸಿಲು ಚಳಿ,ಮಳೆಗೆ ತೆರೆದು ಕೊಂಡು ಶಿಥಿಲವಾಗಿದ್ದ ಕಣಿವೆಯ ಗೋಡೆಗಳ ಮೇಲು ಮೈಯನ್ನು, ಅದರ ಬಿರುಕುಗಳನ್ನು ಕೆತ್ತ ಬೇಕಿತ್ತು. ಈ ಕಲ್ಲಿನ ಬಿರುಕು ಪದರಗಳನ್ನು ತೆಗೆದು ಹಾಕಿದವರನ್ನು ಹೈ-ಸ್ಕೇಲರ್ಸ್ ಎಂದು ಕರೆಯಲಾಗುತ್ತಿತ್ತು. ಕಣಿವೆಯ ಮೇಲ್ತುದಿಯಿಂದ ಇಳಿ ಬಿಟ್ಟ ಹಗ್ಗಗಳಲ್ಲಿ ನೇತಾಡುತ್ತಾ ಈ ಹೈಸ್ಕೇಲರ್ಸ್ ಕಣೆವೆಯ ಗೋಡೆಗಳುದ್ದಕ್ಕೂ ಇಳಿಯುತ್ತಾ ಜಾಕ್ ಹ್ಯಾಮರ್‌ಗಳು ಮತ್ತು ಡೈನಾಮೈಟುಗಳನ್ನು ಬಳಸಿ ಸಡಿಲ ಕಲ್ಲುಗಳನ್ನು ತೆಗೆದು ಹಾಕಿದರು.

ಕಾಂಕ್ರೀಟ್

೬ ಜೂನ್ ೧೯೩೩ರಂದು ಅಣೆಕಟ್ಟಿಗೆ ಮೊದಲ ಕಾಂಕ್ರೀಟನ್ನು ಸುರಿಯಲಾಯಿತು. ಈವರೆಗೆ ಹೂವರ್ ಅಣೆಕಟ್ಟೆಯಷ್ಟು ದೊಡ್ಡ ಗಾತ್ರದ ಕಟ್ಟಡವನ್ನು ಕಟ್ಟಿರಲಿಲ್ಲವಾಗಿ, ಈ ಅಣೆಕಟ್ಟು ಕಾಮಗಾರಿಯಲ್ಲಿ ಬಳಸಿದ ವಿಧಾನಗಳಿಲ್ಲ ಈ ಹಿಂದೆ ಪ್ರಯತ್ನ ಪಟ್ಟಿರದ ವಿಧಾನಗಳು. ಕಾಂಕ್ರೀಟ್ ಬದಿಗೆ ಬರುತ್ತಿದ್ದಂತೆ ಸಂಕುಚಿತಗೊಳ್ಳುವುದರಿಂದ ಮತ್ತು ಬಿಸಿಯಾಗುವುದರಿಂದ ಕಾಂಕ್ರೀಟಿನ ಅಸಮವಾದ ಸಂಕುಚಿತತೆ ಮತ್ತು ಅಸಮ ತಂಪಾಗುವಿಕೆ ಗಂಭೀರ ಸಮಸ್ಯೆಗಳನ್ನು ಒಡಿತು. ಬ್ಯೂರೋ ಆಫ್ ರಿಕ್ಲಮೇಷನ್‌ನ ಎಂಜಿನಿಯರುಗಳು, ಕಾಂಕ್ರೀಟಿನ ನಿರಂತರ ಒಂದೇ ಒಳ ಸುರಿಯಲ್ಲಿ ಕಟ್ಟಿದರೂ ಅದು ವಾತಾವರಣದ ಸಹಜ ಉಷ್ಣಾಂಶದ ಮಟ್ಟಕ್ಕೆ ಬರಲು ೧೨೫ ವರ್ಷಗಳನ್ನು ತೆಗೆದುಕೊಳ್ಳತ್ತದೆಂದು ಲೆಕ್ಕ ಹಾಕಿದರು ಇದರಿಂದ ಉಂಟಾಗುವ ಒತ್ತಡದಿಂದ ಅಣೆಕಟ್ಟು ಬಿರುಕು ಬಿಟ್ಟು ಕುಸಿದು ಬೀಳುವ ಸಂಭವವಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಅಣೆಕಟ್ಟನ್ನು ಅನೇಕ ಸರಣಿಗಳಲ್ಲಿ ಒಳ ಅಗುಣಿ ಹಾಕಿಕೊಳ್ಳುವಂತೆ ಕಾಂಕ್ರೀಟ್ ಸುರಿತದಿಂದ ನಿರ್ಮಿಸಲಾಯಿತು. ಕಾಂಕ್ರೀಟನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಂಪು ಮಾಡಲು ಪ್ರತಿ ರಚನೆಯಲ್ಲಿ ೧ ಅಂಗುಲ (೨೫ ಮಿ.ಮಿ) ದಷ್ಟು ತೆಳುವಾದ ಉಕ್ಕಿನ ನಳಿಕೆಗಳ ಸುರುಳಿಗಳನ್ನು ಅಳವಡಿಸಲಾಯಿತು. ಬನಿ ಬರುತ್ತಿರುವ ಕಾಂಕ್ರೀಟಿನಿಂದ ಉಷ್ಣವನ್ನು ಹೀರಿಕೊಳ್ಳುವಂತೆ ಈ ನಳಿಕೆಗಳ ಮೂಲಕ ನದಿಯ ನೀರನ್ನು ಹರಿಸಲಾಯಿತು. ಕಾಂಕ್ರೀಟನ್ನು ಮತ್ತಷ್ಟು ತಂಪು ಮಾಡಲು ಕೆಳ ಹಂತದ ಕಾಫರ್ ಅಣೆಕಟ್ಟಿನ ಶೀತಲ ಸ್ಧಾವರದಿಂದ ತಂಪಗೆ ಕೊರೆಯುತ್ತಿದ್ದ ನೀರನ್ನು ಈ ನಳಿಕೆಗಳ ಸುರುಳಿಗಳ ಮೂಲಕ ಹರಿಸಲಾಯಿತು. ಪ್ರತಿ ಪದರವೂ ಸಾಕಷ್ಟು ತಂಪಾದ ನಂತರ ತಂಪು ಮಾಡುವ ನಳಿಕೆಗಳನ್ನು ಕತ್ತರಿಸಿ ನ್ಯೂಮ್ಯಾಟಿಕ್ ಗ್ರೌಟ್ ಗನ್‌ಗಳ ಮೂಲಕ ಅವುಗಳನ್ನು ಮುಚ್ಚಲಾಯಿತು. ಅಣೆಕಟ್ಟಿನಲ್ಲಿ ವಿನ್ಯಾಸ ಮತ್ತು ಕಾಮಗಾರಿಯ ಉಸ್ತುವಾರಿ ಹೊತ್ತಿದ್ದ ಜಾನ್ ಎಲ್ ಸ್ಯಾವೇಜ್‌ಗೆ ಕಾಂಕ್ರೀಟನ್ನು ತಂಪು ಮಾಡುವ ವಿಧಾನ ರೂಪಿಸುವ ಜವಾಬ್ಧಾರಿ ಕೂಡ ಇತ್ತು. ಈ ಅಣೆಕಟ್ಟಿನಲ್ಲಿ ಎಷ್ಟು ಪ್ರಮಾಣದ ಕಾಂಕ್ರೀಟ್ ಇದೆಯೆಂದರೆ ಈ ಕಾಂಕ್ರೀಟನ್ನು ಬಳಸಿ ಸ್ಯಾನ್ ಫ್ರಾನ್ಸಿಸ್ಕೋನಿಂದ ನ್ಯೂಯಾರ್ಕ್ ತನಕ ಎರಡು ಲೇನುಗಳ ಹೆದ್ದಾರಿ ನಿರ್ಮಾಣ ಮಾಡಬಹುದು.

ವಾಸ್ತು ಶೈಲಿಗಳು

ಅಣೆಕಟ್ಟು ಮತ್ತು ವಿದ್ಯುತ್ ಸ್ಧಾವರದ ಪೂರ್ಣ ಗೊಂಡ ರಚನೆಗೆ ಇದ್ದ ಮೂಲ ವಿನ್ಯಾಸ ಎಂದರೆ ಗಾಥಿಕ್ ಶೈಲಿಯಿಂದ ಸ್ಪೂರ್ತಿ ಪಡೆದ ಕಲ್ಲು ಉಪ್ಪರಿಗೆ ಮತ್ತು ಸಿಂಗಾರವಿಲ್ಲದ ಸರಳವಾದ ಕಾಂಕ್ರೀಟ್ ಗೋಡೆ ಮತ್ತು ಕೈಗಾರಿಕಾ ಗೋದಾಮಿನಂತೆ ಕಾಣುವ ವಿದ್ಯುತ್ ಸ್ಧಾವರ.[] ಇಷ್ಟೊಂದು ಅಗಾಧ ಪ್ರಮಾಣದ ಕಾಮಗಾರಿಗೆ ಇದು ತಕ್ಕದಲ್ಲದ ವಿನ್ಯಾಸ ಎಂದು ಹಲವಾರು ಟೀಕಿಸಿದರು, ಹೀಗಾಗಿ, ಆಗ್ಗೆ ಡೆನ್ಪೆರ್‌ನಲ್ಲಿ ಫೆಡರಲ್ ಬ್ಯೂರೋ ಆಫ್ ರಿಕ್ಲಮೇಷನ್‌ನ ಪ್ರಧಾನ ಕಚೇರಿಯಲ್ಲಿ ಉಸ್ತುವಾರಿ ವಾಸ್ತು ಶಿಲ್ಪಿಯಾಗಿದ್ದ ಲಾಸ್ ಏಂಜೆಲೀಸ್-ಮೂಲದ ವಾಸ್ತು ಶಿಲ್ಪಿ ಗೊರ್ಡಾನ್.ಬಿ ಕಾಫ್‌ಮನ್‌ನನ್ನು ಕಟ್ಟಡದ ಹೊರಾಂಗಣ ಮರು ವಿನ್ಯಾಸಕ್ಕಾಗಿ ಕರೆಸಿಕೊಳ್ಳಲಾಯಿತು.[] ಕಾಫ್‌ಮನ್‌ ಅಣೆಕಟ್ಟೆಯ ಕಟ್ಟಡಗಳನ್ನು ಸೊಗಸಾದ ಸಿಂಗಾರ ಕಲಾಶೈಲಿಯ ಮೂಲಕ ಅನುಕ್ರಮಗೊಳಿಸಿದ. ಅಣೆಕಟ್ಟೆಯ ಮುಂಭಾಗದ ಕಟ್ಟಡದಲ್ಲಿ ಕೆತ್ತನೆಯ ಕುಸುರಿಗೆಲಸದ ಗೋಪುರಗಳು, ಪ್ರಮೇಶದ್ವಾರದ ಗೋಪುರಗಳಲ್ಲಿ ನೆವಾಡ ಮತ್ತು ಅರಿಜೋನಾದ ವೇಳೆಯನ್ನು ತೋರಿಸುವ ಗಡಿಯಾರಗಳು, ಪೆಸಿಫಿಕ್ ಸ್ಟ್ಯಾಂಡರ್ಡ್ ಟೈಮ್‌ಜೋನ್ ಅಥವಾ ಡೇಲೈಟ್ ಟೈಮ್‌ಜೋನ್ ಮತ್ತು ಮೌಂಟನ್ ಸ್ಟ್ಯಾಂಡರ್ಡ್ ಟೈಮ್‌ಜೋನ್ ಸೂಚಕ ಗಡಿಯಾರಗಳನ್ನು ಅನುಕ್ರಮವಾಗಿ ಜೋಡಿಸಿದ (ಯಾಕೆಂದರೆ ಅರಿಜೋನಾ ಡೇಲೈಟ್ ಸೇವಿಂಗ್ ಜೋನ್‌ಅನ್ನು ವೀಕ್ಷಿಸುವುದಿಲ್ಲ, ಉತ್ತರದ ಬೇಸಿಗೆಯಲ್ಲಿ ಅರ್ಧ ವರ್ಷದ ಕಾಲ ಎರಡೂ ಗಡಿಯಾರಗಳು ಒಂದೇ ವೇಳೆಯನ್ನು ತೋರಿಸುತ್ತವೆ.)

ಕಾಫ್‌ಮನ್‌ನ ಸಲಹೆಯ ಮೇರೆಗೆ ಹೊಸ ಅಣೆಕಟ್ಟಿನ ಗೋಡೆ ಮತ್ತು ನೆಲದ ಸಿಂಗಾರವನ್ನು ವಿನ್ಯಾಸ ಮಾಡಲು ಡೆನ್ಪೆರ್‌ನ ಕಲಾವಿದ ಆಲೆನ್ ಟಪ್ಪರ್ ಟ್ರೂನನ್ನು ಕರೆಸಿಕೊಂಡು ಆತನಿಗೆ ಆ ಜವಾಬ್ಧಾರಿ ವಹಿಸಿ ಕೊಡಲಾಯಿತು. ಟ್ರೂ ಆ ಪ್ರಾಂತದ ಇಂಡಿಯನ್ ಬುಡಕಟ್ಟು ಜನಾಂಗಗಳಾದ ನವಾಜೊ ಮತ್ತು ಪುಯೆಬ್ಲೊ ಸಂಸ್ಕೃತಿಗಳ ಚಿತ್ರಿಕೆಗಳನ್ನು ವಿನ್ಯಾಸಕ್ಕೆ ಬಳಸಿಕೊಳ್ಳ ತೊಡಗಿದ. ಈ ವಿನ್ಯಾಸವನ್ನು ಪ್ರಾರಂಭದಲ್ಲಿ ಕೆಲವರು ವಿರೋಧಿಸಿದರಾದರೂ ಟ್ರೂಗೆ ಮುಂದುವರೆಯುವಂತೆ ಸೂಚಿಸಿ ಆತನನ್ನು ಸಲಹೆಗಾರ ಕಲಾವಿದನನ್ನಾಗಿ ಅಧಿಕೃತವಾಗಿ ನೇಮಕ ಮಾಡಿಕೊಳ್ಳಲಾಯಿತು. ರಾಷ್ಟ್ರೀಯ ಮಾನವಿಕ ಲ್ಯಾಬೋರೇಟರಿಯ ನೆರವಿನೊಂದಿಗೆ ಟ್ರೂ ಇಂಡಿಯನ್ ಮರಳು ಚಿತ್ರಗಾರಿಕೆ, ಹೆಣಿಗೆ, ಬುಟ್ಟಿಗಳು ಮತ್ತು ಸೆರಮಿಕ್ ಕಲೆಗಳ ಸಿಂಗಾರ ಚಿತ್ರಿಕೆಗಳ ವಿಶ್ವಾಸಾರ್ಹತೆಯ ಬಗ್ಗೆ ಸಂಶೋಧನೆ ಕೈ ಗೊಂಡ. ಈ ಕಲ್ಪನೆಗಳು ಮತ್ತು ಬಣ್ಣಗಳು ಆಮೇರಿಕಾದ ಮೂಲನಿವಾಸಿ ಸಂಸ್ಕೃತಿಗಳು, ಮಳೆ, ಮಿಂಚು, ನೀರು, ಮೋಡಗಳು,ಸ್ಧಳೀಯ ಪ್ರಾಣಿಗಳು, ಹಲ್ಲಿ, ಹಾವು, ಪಕ್ಷಿಗಳು ಮತ್ತು ಅಗ್ನೇಯದ ಮೆಸಾಸ್‌ನ ಭೂವಿನ್ಯಾಸ ಕುರಿತ ಮೂಲನಿವಾಸಿ ದರ್ಶನಗಳ ನೆಲಗಟ್ಟು ಹೊಂದಿದ್ದವು. ನಡಿಗೆಯ ಹಾದಿ ಮತ್ತು ಬೃಹತ್ ಅಣೆಕಟ್ಟಿನ ಆಂತರಿಕ ಗೋಡೆಗಳ ಜೊತೆಗೆ ಜೋಡಿಸಲಾದ ಈ ಕಲಾಕೃತಿಗಳ ಜೊತೆಗೆ ಕಲಾವಿದ ಟ್ರೂ ಸಾಂಕೇತಿಕ ರಚನೆಗಳ ಮೂಲಕ ಯಂತ್ರಗಳ ಕಾರ್ಯಶೀಲತೆಯನ್ನು ಕೂಡ ಪ್ರತಿಫಲಿಸಿದ; ಒಟ್ಟಿಗೇ ಇದು ಪುರಾತನವಾಗಿ ಮತ್ತು ಆಧುನಿಕವಾಗಿ ಕಾಣಿಸುತ್ತಿತ್ತು. ಟೊರಾಜೊ ನೆಲಹಾಸಿನ ಮೇಲೆ ಚಿತ್ರಿತವಾಗಿದ್ದ ಈ ಆಮೇರಿಕನ್ ಭಾರತೀಯ ಸಂಸ್ಕೃತಿಗಳ ಚಿತ್ರಿಕೆಗಳು ಆಗಾಧ ಗಾತ್ರದ ಟರ್ಬೈವಿನ ಜೋಡಿ ಚಕ್ರಗಳಂತೆ ಕಾಣಿಸುತ್ತವೆ; ಆದರೂ ಅವು ಮೂಲದಲ್ಲಿ ತಮ್ಮ ಆಮೇರಿಕದ ಇಂಡಿಯನ್ ಮೂಲ ನಿವಾಸಿ ಸಂಸ್ಕೃತಿಗಳ ವಿಶಿಷ್ಟತೆಗಳನ್ನು ಉಳಿಸಿಕೊಂಡಿದೆ. ಆಮೇರಿಕನ್ ಇಂಡಿಯನ್ ಮೂಲ ನಿವಾಸಿ ಸಂಸ್ಕೃತಿಯ ಆಕಾರ ಮತ್ತು ವಿನ್ಯಾಸಗಳಲ್ಲಿ ಕಲಾವಿದ ಟ್ರೂಗೆ ಪುರಾತನ ಗ್ರೀಕರು ಮತ್ತು ರೋಮನ್ನರ ಕಲಾಕೃತಿಗಳ ಸಾಮ್ಯತೆ ಕಂಡಿದೆ. ಕಲಾವಿದ ಟ್ರೂನ ವಿನ್ಯಾಸಗಳು ಕಾಫ್ ಮನ್ನನ ಸ್ಮಾರಕ ವಾಸ್ತುಶಿಲ್ಪದ ಒಡನಾಡಿಯಂತಾಗಿ ಇವು ಆಮೇರಿಕದ ಆಧುನಿಕ ದೇವಾಲಯವನ್ನ ಸೃಷ್ಟಿಸಿದವು ಅಂತಾ ಹೇಳಬಹುದು. ವಾಸ್ತುಶಿಲ್ಪಿ ಕಾಫ್ ಮನ್ ಮತ್ತು ಇಂಜಿನಿಯರುಗಳ ನಡುವಿನ ಒಪ್ಪಂದದ ಮೇರೆಗೆ ಕಲಾವಿದ ಟ್ರೂ ಪೈಪುಗಳು ಮತ್ತು ಯಂತ್ರಗಳಿಗೆ ವಿಶಿಷ್ಠ. ಹೊಸತನದ ವರ್ಣ ಸಂಕೇತಗಳನ್ನು ರೂಪಿಸಿದ; ಇದನ್ನು ಬ್ಯೂರೋ ಆಫ್ ರಿಕ್ಲಮೇಷನ್‌ನ ಎಲ್ಲ ಯೋಜನೆಗಳಲ್ಲಿ ಜಾರಿಗೆ ತರಲಾಯಿತು. ಕಲಾವಿದ ಟ್ರೂನ ಸಲಹೆಗಾರ ಕಲಾವಿದ ಕೆಲಸ ೧೯೪೨ರ ತನಕ ಮುಂದುವರೆದು ಅವನು ಪಾರ್ಕರ್, ಶಾಸ್ತಾ ಮತ್ತು ಗ್ಯ್ರಾಂಡ್ ಕೌಲೀ ಅಣೆಕಟ್ಟುಗಖ್ಳು ಮತ್ತು ವಿದ್ಯುತ್ ಸ್ಧಾವರಗಳಿಗೆ ಕೂಡ ವಿನ್ಯಾಸದ ಕೆಲಸ ಪೂರ್ಣಮಾಡಿದ. ಈ ಕಾಲದಲ್ಲಿ ನ್ಯೂಯಾರ್ಕರ್ ಮ್ಯಾಗಜಿನ್‌ನಲ್ಲಿ ಪ್ರಕಟವಾದ ಪದ್ಯವೊಂದರಲ್ಲಿ ಬೌಲ್ಡರ್ ಅಣೆಕಟ್ಟಿನಲ್ಲಿ ಕಲಾವಿದ ಟ್ರೂನ ಕಲಾಕೃತಿಗಳ ಬಗ್ಗೆ ತಮಾಷೆ ಮಾಡಿತ್ತು; ಅದರ ಒಂದು ಭಾಗ ಹೀಗಿತ್ತು; " ಕಿಡಿಯನ್ನು ಕಳೆದು ಕೊಂಡರೂ ಕನಸನ್ನು ಸಮರ್ಥಿಸುಕೋ; ಆದರೆ ಗುರುತಿಸಬಹುದಾದ ಮೌಲ್ಯವೆಂದರೆ ಅದರಲ್ಲಿನ ವರ್ಣ ವಿನ್ಯಾಸ. . .”

ಕಾಮಗಾರಿ ಸಾವುಗಳು

ಅಣೆಕಟ್ಟಿನ ನಿರ್ಮಾಣಕ್ಕೆ ಸಂಬಂಧಿಸಿದಂತೆ ೧೧೨ ಜನರ ಸಾವು ಸಂಭವಿಸಿತು. ಅಣೆಕಟ್ಟಿನ ಕಾಮಗಾರಿ ನಡೆಯುವಾಗ ಎಷ್ಟು ಜನ ಸತ್ತರು, ಸತ್ತವರ ಪೈಕಿ ಮೊದಲಿಗರಾರು ಮತ್ತು ಕೊನೆಯವರ್ಯಾರು ಎಂಬ ಬಗ್ಗೆ ಬೇರೆ ಬೇರೆ ಲೆಕ್ಕಾಚಾರಗಳಿವೆ. ಜನಪ್ರಿಯವಾಗಿರುವ ಒಂದು ಕತೆಯ ಪ್ರಕಾರ ಹೂವರ್ ಅಣೆಕಟ್ಟಿನ ನಿರ್ಮಾಣ ಕಾರ್ಯದಲ್ಲಿ ಸತ್ತ ಮೊದಲನೆಯ ಮನುಷ್ಯ, ಅಣೆಕಟ್ಟಿಗಾಗಿ ಜೆ.ಜಿ ಟೈಯೆರ್ನಿ ನೀರಿನಲ್ಲಿ ಮುಳುಗಿ ಹೋದ. ಕಾಕತಾಳೀಯವೆಂದರೆ ಅಣೆಕಟ್ಟು ನಿರ್ಮಾಣವಾಗುತ್ತಿದ್ದಾಗ ೧೩ ವರ್ಷಗಳ ನಂತರ ಸತ್ತ ಕೊನೆಯ ಮನುಷ್ಯ, ಅವನ ಮಗ ಪ್ಯಾಟ್ರಿಕ್ w ಟೈಯೆರ್ನಿ. ಸಾವುಗಳ ಪೈಕಿ ೯೬ ಸಾವುಗಳು ನಿವೇಶನದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಸಂಭವಿಸಿದವು. ಏನೇ ಆದರೂ ಅಣೆಕಟ್ಟಿಗಾಗಿ ಪ್ರಚ್ಛನ್ನ ನಿವೇಶನವನ್ನು ಯೋಚನೆ ಮಾಡುತ್ತಿದ್ದಾಗ ನಿರ್ಮಾಣಕ್ಕೆ ಮೊದಲು ಇನ್ನೊಬ್ಬ ಮೋಜಿಣಿದಾರ ಸತ್ತ; ಈ ಅಂಕಿ ಅಂಶಗಳು ನಿರ್ಮಾಣ ಅವಧಿಯ ಇತರೆ ಆಕಸ್ಮಿಕ ಮತ್ತು ಕಾಕತಾಳೀಯ ( ಹೃದಯಾಘಾತ, ಹೃದಯ ಸ್ಧಬ್ಧ ಇತ್ಯಾದಿ) ಸಾವುಗಳನ್ನ ಒಳಗೊಳ್ಳುವುದಿಲ್ಲ.

ನಿರ್ಮಾಣ ಕಾಮಗಾರಿಯ ಚಾರಿತ್ರಿಕ ಸಾಧನ ಸಲಕರಣೆಗಳು

ಆರು ಕಂಪನಿಗಳು ನಿರ್ಮಾಣ ಕಾಮಗಾರಿಗೆ ಸ್ಧಿರವಾಗಲು, ರೈಲು ಹಳಿಗಳ ಮೇಲೆ ಚಲಿಸುವಂತ ವಿಶೇಷ ಸರಕು ಸಾಗಣೆ ವಾಹನಗಳನ್ನ ರಚಿಸಿ ಕೊಂಡಿದ್ದವು. ಇವುಗಳ ಪೈಕಿ ಒಂದು ಸರಕುವಾಹನ ಕ್ಯಾಲಿಪೋರ್ನಿಯಾದ ಪೊರ್ಟೊಲಾದ ವೆಸ್ಟರ್ನ್ ಪೆಸಿಫಿಕ್ ರೈಲು ರೋಡ್ ಮ್ಯೂಸಿಯಂನಲ್ಲಿ ಇಂದಿಗೂ ಉಳಿದಿದೆ. ಅಣೆಕಟ್ಟಿನ ನಿಮಾರ್ಣ ಕಾಮಗಾರಿ ಮುಗಿದ ನಂತರ ವೆಸ್ಟರ್ನ್ ಪೆಸಿಫಿಕ್ ರೈಲ್ ರೋಡ್ ಇಂತಹ ಅನೇಕ ವಾಹನಗಳನ್ನ ತನ್ನ ವಶಕ್ಕೆ ತೆಗೆದುಕೊಂಡು ಕಂಪನಿಯ ಸೇವೆಗೆ ಬಳಸಿಕೊಂಡಿತು.

ಶಸ್ತ್ರಚಿಕಿತ್ಸೆ

ವಿದ್ಯುತ್ ಸ್ಥಾವರ

ಲೇಕ್ ಮೀಡ್‌ನಿಂದ ಕ್ರಮೇಣ ಸಂಕುಚಿತಗೊಳ್ಳುತ್ತಾ ಹೋಗುವ ಪೆನ್ ಸ್ಟಾಕ್‌ಗಳಿಂದ ವಿದ್ಯುತ್ ಸ್ಧಾವರಕ್ಕೆ ಹರಿಯುವ ನೀರಿನ ವೇಗ ಟರ್ಬೈನ್ ತಲುಪುವ ವೇಳೆಗೆ 85 mph (137 km/h)ರಷ್ಟಾಗುತ್ತದೆ. ಕೊಲೊರೆಡೊ ನದಿಯ ನೀರಿನ ಪೂರ್ಣ ಹರಿವು ಟರ್ಬೈನ್‌ಗಳ ಮೂಲಕ ಹಾದು ಹೋಗುತ್ತದೆ. ( ಅದು ಸ್ಧಾಪಿತವಾಗಿರುವ ಅಣೆಕಟ್ಟೆಯ , ಅಂಚುಗಳ ಅರೆ ರಂಧ್ರಮಯ ಜ್ವಾಲಾ ಮುಖಿ ಶಿಲೆಗಳಲ್ಲಿನ ಜಿನುಗುವಿಕೆಯನ್ನು ಹೊರತು ಪಡಿಸಿ) ಕೋಡಿಗಳ ಬಳಕೆ ಅಪರೂಪ ೧೯೮೬ ರಿಂದ ೧೯೯೩ರ ತನಕ ಯೋಜನೆಯ ಉತ್ಪಾದನ ಶೀಲತೆಯ ದರ ನಿಗದಿ ನಂತರ ಸ್ಧಾವರದ ಕೆಲಸ ಕಾರ್ಯಗಳಿಗೆ ಒದಗಿಸಲಾಗುವ ೨.೪ ಮೆಗಾವ್ಯಾಟ್[] ವಿದ್ಯುತ್ ಸೇರಿದಂತೆ ಒಟ್ಟು ವಿದ್ಯುತ್ ಉತ್ಪಾದನೆ ಪ್ರಮಾಣ ಸುಮಾರು ೨೦೮೦ ಮೆಗಾವ್ಯಾಟ್‌ಗಳು. ವಿದ್ಯುತ್ ಸ್ಧಾವರಕ್ಕಾಗಿ ನಡೆದ ಅಗೆತ ಅಣೆಕಟ್ಟಿಗಾಗಿ ನಡೆದ ಅಗೆತದೊಂದಿಗೆ ಏಕಕಾಲಕ್ಕೆ ನಡೆಯಿತು. ಅಣೆಕಟ್ಟಿನ ಕೆಳಹರಿವಿನ ತುದಿಯಲ್ಲಿರುವ U ಆಕಾರದ ಕಟ್ಟಡದ ತಳಪಾಯದ ಅಗೆತ ಕಾಮಗಾರಿ ೧೯೩೩ ರ ಕೊನೆ ಭಾಗದಲ್ಲಿ ಮುಗಿದ ನವೆಂಬರ್ ೧೯೩೩ರಲ್ಲಿ ಮೊದಲನೆ ಕಾಂಕ್ರೀಟ್ ರಚನೆಯನ್ನು ಸ್ಧಾಪಿಸಲಾಯಿತು. ಹೂವರ್ ಜಲವಿದ್ಯುತ್ ಸ್ಧಾವರದ ಜನರೇಟರ್‌ಗಲು ಕೊಲೊರೆಡೊ ನದಿಯಿಂದ ಲಾಸ್ ಏಂಜಲೀಸ್‌ಗೆ ೨೬೬ ಮೈಲಿಗಳಷ್ಟು (೪೨೮ ಕಿ.ಮೀ) ದೂರದ ತನಕ ೨೬ ಅಕ್ಬೋಬರ್ ೧೯೩೬ರಿಂದ ವಿದ್ಯುತ್ ಪ್ರಸರಣವನ್ನು ಶುರು ಮಾಡಿಕೊಂಡಿತು. ೧೯೬೧ರ ತನಕ ಹೆಚ್ಚುವರಿ ವಿದ್ಯುತ್‌ಜನಕ ಘಟಕಗಳನ್ನು ಸೇರಿಸಲಾಯಿತು. ಮೂಲ ಯೋಜನೆ ನದಿಯ ಪ್ರತಿ ಅಂಚೆನಲ್ಲಿ ತಲಾ ೮ ರಂತೆ ಒಟ್ಟು ೧೬ ದೊಡ್ಡ ವಿದ್ಯುತ್‌ಜನಕಗಳನ್ನು ಅಳವಡಿಸುವಂತೆ ರೂಪುಗೊಂಡಿತ್ತು, ಆದರೆ ಅಳವಡಿಸಿದ ಒಟ್ಟು ೧೭ ವಿದ್ಯುತ್‌ಜನಕಗಳ ಪೈಕಿ ಅರಿಜೋನಾ ಕಡೆಗೆ ಒಂದು ದೊಡ್ಡ ವಿದ್ಯುತ್‌ಜನಕದ ಬದಲು ಎರಡು ಕಿರಿಯ ವಿದ್ಯುತ್‌ಜನಕಗಳನ್ನ ಅಳವಡಿಸಲಾಯಿತು. ಪ್ರತಿ ವಿದ್ಯುತ್‌ಜನಕದ ಉತ್ಪಾದನೆಯನ್ನ ಪುರಸಭೆಗಳಿಗೆ ಅರ್ಪಿಸಲಾಗಿದ್ದ ಕಾಲದಲ್ಲಿ ಚಿಕ್ಕ ವಿದ್ಯುತ್‌ಜನಕಗಳ ಉತ್ಪಾದನೆಯನ್ನ ಚಿಕ್ಕ ಪುರಸಭೆಗಳ ಸೇವೆಗಾಗಿ ಬಳಸಿಕೊಳ್ಳಲಾಯಿತು; ಇದು ಆದದ್ದು ಅಣೆಕಟ್ಟೆಯ ಒಟ್ಟು ವಿದ್ಯುತ್ ಉತ್ಪಾದನೆಯನ್ನ ಗ್ರಿಡ್‌ಗೆ ವರ್ಗಾಯಿಸಿ ಹಂಚಿಕೆಗೆ ಸಿದ್ಧಪಡಿಸುವ ಮೊದಲು. ಜಲವಿದ್ಯುತ್ ಸ್ಧಾವರಗಳು ವಿದ್ಯುತ್ತಿನ ಬೇಡಿಕೆಯ ಆಧಾರದ ಮೇಲೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಅಥವಾ ಕಡಿಮೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಉಗಿ ಚಾಲಿತ ಟರ್ಬೈನಿನ ವಿದ್ಯುತ್‌ ಸ್ಧಾವರಗಳ ಉತ್ಪಾದನೆಯನ್ನು ಹೆಚ್ಚು ಕಡಿಮೆ ಮಾಡಲು ಸಾಧ್ಯವಿಲ್ಲ ಯಾಕೆಂದರೆ ಅವುಗಳ ವ್ಯವಸ್ಧೆಯಲ್ಲಿ ಹುದುಗಿರುವ ಉಷ್ಣ ಚಲನ ಶೀಲತೆಯ ತಟಸ್ತತೆಯಿಂದ ನೀರಿನ ನಿಯಂತ್ರಣ ಅಣೆಕಟ್ಟು. ನಿರ್ಮಾಣದ ಪ್ರಾಥಮಿಕ ಕಾಳಜಿ ಅಣೆಕಟ್ಟು ಸ್ವಯಂ ಸುಸ್ಧಿರವಾಗಿರಲು ವಿದ್ಯುತ್ ಉತ್ಪಾದನೆ ನೆರವಾಯಿತು. ಇದರಿಂದ ೫೦ ವರ್ಷಗಳ ಕಾಲದ ನಿರ್ಮಾಣ ಸಾಲವನ್ನು ಮರುಪಾವತಿ ಮಾಡಲು ಮತ್ತು ವಾರ್ಷಿಕ ನಿರ್ವಹಣಾ ಬಜೆಟ್ಟಿನ ಬಹು ಮಿಲಿಯನ್ ಡಾಲರ್‌‍ಗಳನ್ನು ಪಾವತಿಸಲು ಸಾಧ್ಯವಯಿತು. ಕೆಳ ಹರಿವಿನ ನೀರಿನ ಬೇಡಿಕೆಗೆ ಪ್ರತಿಯಾಗಿ ಮಾತ್ರ ಬಿಡುಗಡೆ ಮಾಡಲಾಗುವ ನೀರಿನಿಂದ ವಿದ್ಯುತ್ ಉತ್ಪಾದನೆ ಸಾಧ್ಯವಾಯಿತು.

***

ಬ್ಯೂರೋ ಆಫ್ ರಿಕ್ಲಮೇಷನ್ ವರದಿಯಂತೆ ಶಕ್ತಿ ಬಿಡುಗಡೆಯಾಗುವುದು ಕೆಳಗಿನಂತಿದೆ:

ಪ್ರದೇಶ ಶೇಕಡಾವಾರು
ಮೆಟ್ರೋಪಾಲಿಟನ್ ವಾಟರ್ ಡಿಸ್ಟ್ರಿಕ್ಟ್ ಆಫ್ ಸದರನ್ ಕ್ಯಾಲಿಫೋರ್ನಿಯಾ 28.5393%
ನೇವಡಾ ರಾಜ್ಯ 23.3706%
ಅರಿಜೋನಾ ರಾಜ್ಯ 18.9527%
ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ 15.4229%
ಸದರನ್ ಕ್ಯಾಲಿಫೋರ್ನಿಯಾ ಎಡಿಸನ್ ಕಂಪನಿ 5.5377%
ಬೌಲ್ಡರ್ ಸಿಟಿ, ನೇವಡಾ 1.7672%
ಗ್ಲೆಂಡಾಲೆ, ಕ್ಯಾಲಿಫೋರ್ನಿಯಾ 1.5874%
ಪಸಡೆನ, ಕ್ಯಾಲಿಫೋರ್ನಿಯಾ 1.3629%
ಅನಾಹೀಮ್‌, ಕ್ಯಾಲಿಫೋರ್ನಿಯಾ 1.1487%
ರಿವರ್‌ಸೈಡ್, ಕ್ಯಾಲಿಫೋರ್ನಿಯಾ 0.8615%
ವೆರ್ನಾನ್, ಕ್ಯಾಲಿಫೋರ್ನಿಯಾ 0.6185%
ಬರ್ಬಾಂಕ್, ಕ್ಯಾಲಿಫೋರ್ನಿಯಾ 0.5876%
ಅಜುಸಾ, ಕ್ಯಾಲಿಫೋರ್ನಿಯಾ 0.1104%
ಕಾಲ್ಟನ್, ಕ್ಯಾಲಿಫೋರ್ನಿಯಾ 0.0884%
ಬ್ಯಾನಿಂಗ್, ಕ್ಯಾಲಿಫೋರ್ನಿಯಾ 0.0442%

ಕೋಡಿಗಳು

ಅಣೆಕಟ್ಟು ಕಂಠ ಮಟ್ಟಕ್ಕೆ ತುಂಬದಂತೆ ಎರಡು ಕೋಡಿದಾರಿಗಳ ಮೂಲಕ ಅದನ್ನು ರಕ್ಷಿಸಲಾಗಿದೆ. ಕೋಡಿಗಳ ಪ್ರದೇಶ ದ್ವಾರಗಳನ್ನು ಅಣೆಕಟ್ಟಿನ ಪ್ರತಿ ಅಂಬುಟ್‌ಮೆಟಿನ ಹಿಂದೆ ಇದ್ದು ಅವು ಕಣಿವೆಯ ಗೋಡೆಗಳಿಗೆ ಸಮಾನಾಂತರವಾಗಿ ಹರಿಯುತ್ತವೆ. ಕೋಡಿಗಳ ಪ್ರದೇಶ ವ್ಯವಸ್ಧೆ ವಿಶಿಷ್ಟವಾದ ಬದಿ ಹರಿವಿನ ಹೊರದಾರಿಯಾಗಿದ್ದು ಪ್ರತಿ ಕೋಡಿಗೆ ನಾಲ್ಕು ಉದ್ದನೆಯ100 ft (30 m) ಉತ್ತಮ ಉಕ್ಕಿನ ಕೊಂಡುಗಳನ್ನು16 ft (4.9 m) ಅಳವಡಿಸಲಾಗಿದೆ. ಪ್ರತಿ ಬಾಗಿಲು ಐದು ಮಿಲಿಯನ್ ಪೌಂಡುಗಳಷ್ಟು ತೂಕವಿದ್ದು ಅವುಗಳನ್ನ ಮಾನವ ಚಾಲಿತ ಅಥವಾ ಸ್ವಯಂಚಾಲಿತ ಎರಡೂ ರೀತಿಯಲ್ಲಿ ಬಳಸಬಹುದು. ಜಲಾಶಯದ ನೀರಿನ ಮಟ್ಟ ಮತ್ತು ಪ್ರವಾಹ ಪರಿಸ್ಧಿತಿ ಅನುಗುಣವಾಗಿ ಕೋಡಿಯ ಬಾಗಿಲುಗಳನ್ನ ಏರಿಸಲಾಗುತ್ತದೆ ಮತ್ತು ಇಳಿಸಲಾಗುತ್ತದೆ. ನೀರು ಕೋಡಿಗೆ ಪ್ರವೇಶಿಸುವುದನ್ನ ಬಾಗಿಲುಗಳು ಸಂಪೂರ್ಣವಾಗಿ ತಡೆಯಲಾರವು, ಆದರೆ ಜಲಾಶಯದಲ್ಲಿ ಹೆಚ್ಚುವರಿಯಾಗಿ ೧೬ ಅಡಿಗಳಷ್ಟು ನೀರಿನ ಮಟ್ಟ ಕಾದು ಕೊಳ್ಳಲು ನೆರವಾಗುತ್ತವೆ. ಕೋಡಿಗಳ ಮೇಲೆ ಹರಿಯಲು ನೀರು ನಿರ್ಮಾಣದ ತಿರುವು ಸುರಂಗಗಳಿಗೆ ಹರಿಯುವ ಮೊದಲು600 ft (180 m) ಉದ್ದನೆಯ ಮತ್ತು 50 ft (15 m)ವಿಶಾಲವಾದ ಕೋಡಿ ಸುರಂಗಗಳಿಗೆ ಧುಮ್ಮಿಕ್ಕುತ್ತದೆ ನಂತರ ಅಣೆಕಟ್ಟಿನ ಕೆಳಭಾಗದಲ್ಲಿರುವ ನದಿಯ ಪ್ರಧಾನ ಪಾತ್ರವನ್ನು ಸೇರಿ ಮುಂದಕ್ಕೆ ಹರಿಯುತ್ತದೆ. ಜಲಾಶಯದ ಮೇಲು ತುದಿಯಿಂದ ನದಿಯ ತಳಕ್ಕೆ ಇರುವ ಅಂದಾಜು ಇಳಿಜಾರಿನಿಂದ ಕೂಡಿದ ಕೋಡಿಗಳ ಸಂಕೀರ್ಣ700 ft (210 m) ಪ್ರದೇಶ ವ್ಯವಸ್ಧೆ ಜಟಿಲ ಎಂಜಿನಿಯರಿಂಗ್ ಸಮಸ್ಯೆಯಾಗಿದ್ದು ಅನೇಕ ವಿನ್ಯಾಸ ಸವಾಲುಗಳನ್ನು ಒಡ್ಡುತ್ತದೆ. T ಕೋಡಿಯ ಒಟ್ಟಾರೆ ಹರಿವಿನ ಸಾಮರ್ಥ್ಯವನ್ನು ೧೯೪೧ರ ನಿರ್ಮಾಣೋತ್ತರ ಕಾಲದಲ್ಲಿ ಅನುಭವ ಜನತೆಯ ಮೂಲಕ ಪರೀಕ್ಷಿಸಲಾಯಿತು. ಈ ಪರೀಕ್ಷೆಗಳು ಕೋಡಿ ಸುರಂಗಗಳು ಪೂರ್ಣಪ್ರಮಾಣದಲ್ಲಿ ಹರಿಯುವಾಗ ಕುಳಿಗಳು ಉಂಟಾಗಿ ಸುರಂಗಗಳಿಗೆ ಹಾನಿ ಮಾಡಬಹುದೆಂದು ಕೂಡ ತೋರಿಸುತ್ತವೆ. ೧೯೮೩ರ ಬೇಸಿಗೆಯಲ್ಲಿ ಆರು ವಾರಗಳ ಬಳಕೆಯ ಕಾಲದಲ್ಲಿ ಇನ್ನೂ ಹೆಚ್ಚಿನ ಹಾನಿ ಉಂಟಾದ ನಂತರ ಸುರಂಗದ ಗೋಡೆಗಳನ್ನ ದುರಸ್ತಿ ಮಾಡಿ ಕುಳಿಯುಂಟಾಗುವ ಸಾಧ್ಯತೆಗಳನ್ನ ತಗ್ಗಿಸಲು ಸುರಂಗ ವಿನ್ಯಾಸದಲ್ಲಿ ಮಾರ್ಪಾಡು ಮಾಡಲಾಯಿತು. ಆದರೂ ಕೋಡಿಯ200,000 cu ft/s (5,700 m3/s) ಪ್ರತಿ ಸುರಂಗ ನಯಾಗಾರ ಜಲಪಾತದ ಹರಿವಿನಷ್ಟು ನೀರನ್ನು ನಿಭಾಯಿಸಬಲ್ಲುದು. ಕೋಡಿಯ ದೊಡ್ಡ ಸುರಂಗಗಳನ್ನು ಅಣೆಕಟ್ಟೆಯ ಚರಿತ್ರೆಯಲ್ಲಿ ಕೇವಲ ಎರಡು ಸಲ ಬಳಸಲಾಗಿದೆ ೧೯೪೧ರಲ್ಲಿ ಪರೀಕ್ಷೆಯ ಜೊತೆಗೆ ೧೯೮೩ರಲ್ಲಿ ಪ್ರವಾಹ ಪರಿಸ್ಧಿತಿ ತಲೆದೋರಿದ್ದರಿಂದ ಕೋಡಿಗಳನ್ನ ಬಳಸಲಾಯಿತು. ೧೯೯೯ರಲ್ಲಿ ಲೇಕ್‌ಮೀಡ್ ಜಲಾನಯನ ಪ್ರದೇಶದಲ್ಲಿ ವಿಪರೀತ ಮಳೆಯಾಗಿ ನೀರಿನ ಮಟ್ಟ ಏರುತ್ತಿದ್ದರಿಂದ ಅಣೆಕಟ್ಟಿನ ಹಿಂದಕ್ಕೆ ನೀರು ಬದಲು ಕೋಡಿಗಳನ್ನು ಬಳಸಲಾಯಿತು.

ಪರಿಸರಾತ್ಮಕ ಪರಿಣಾಮಗಳು

ಹೂವರ್ ಅಣೆಕಟ್ಟು ಮತ್ತು ಅದರಿಂದ ಜಲ ಬಳಕೆಯ ಬದಲಾವಣೆಗಳಿಂದ ಕೊಲೊರೆಡೊ ನದಿಯ ಮುಖಜ ಭೂಮಿಯ ಡೆಲ್ಟಾ ಪ್ರದೇಶದಲ್ಲಿ ವಿನಾಶಾತ್ಮಕ ಪರಿಣಾಮಗಳು ಉಂಟಾದವು. ಅಣೆಕಟ್ಟೆಯ ನಿರ್ಮಾಣವನ್ನ ಅಲ್ಲಿನ ಅರಣ್ಯ ಪ್ರದೇಶದ ಕುಗ್ಗುವಿಕೆ ಕಾಲದ ಪ್ರಾರಂಭ ಎಂದು ಹೇಳಲಾಗಿತ್ತು. ೧೯೩೦ರ ಕೊನೆಯ ಆರು ವರ್ಷಗಳಲ್ಲಿ, ಅಣೆಕಟ್ಟೆ ನಿರ್ಮಾಣದ ನಂತರ ಲೇಕ್‌ಮೀಡ್ ಜಲಾಶಯ ಭರ್ತಿಯಾದರೂ ಯಾವುದೇ ನೀರು ನದಿಯ ಮುಖಜ ಭೂಮಿಯನ್ನು ತಲುಪಲಿಲ್ಲ. ನದಿಯ ಡೆಲ್ಟಾ ಪ್ರದೇಶದ ಅರಣ್ಯ 65 kilometres (40 mi)ಧಾಮ ಒಂದು ಕಾಲಕ್ಕೆ ತಾಜಾ ನೀರು ಮತ್ತು ಉಪ್ಪುನೀರು ಮಿಶ್ರವಾಗುವ ವಲಯವಾಗಿದ್ದು ಇದು ನದಿಯ ಮುಖಜ ಭೂಮಿಯ ದಕ್ಷಿಣ ತನಕ ಚಾಚಿಕೊಂಡಿತ್ತು. ಈಗ ಇದು ತಗ್ಗು ಅರಣ್ಯ ಧಾಮವಾಗಿ ಪರಿವರ್ತನೆಯಾಗಿ ನದಿಯ ಮುಖಜ ಭೂಮಿಗೆ ಹೋಲಿಸದರೆ ಇಲ್ಲಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಹೂವರ್ ಅಣೆಕಟ್ಟನ್ನು ನಿರ್ಮಿಸುವುದಕ್ಕೆ ಮೊದಲ ಕೊಲೊರೆಡೊ ನದಿಯಲ್ಲಿ ನೈಸರ್ಗಿಕ ಪ್ರವಾಹ ಉಂಟಾಗುತ್ತಿತ್ತು. ಅಣೆಕಟ್ಟಿನಿಂದ ನೈಸರ್ಗಿಕ ಪ್ರವಾಹ ಕಣ್ಮರೆಯಾದ ದೆಸೆ ಸಸ್ಯ ಮತ್ತು ಪ್ರಾಣಿಗಳೂ ಸೇರಿದಂತೆ ಅನೇಕ ಜೀವ ಪ್ರಭೇಧಗಳು ನಾಶವಾದವು. ಅಣೆಕಟ್ಟೆಯ ನಿರ್ಮಾಣದಿಂದ, ಅಣೆಕಟ್ಟೆಯ ಕೆಳಹರಿವಿನಲ್ಲಿ ಅನೇಕ ಸ್ಧಳೀಯ ಮೀನುಗಳ ಪ್ರಭೇಧ ಮತ್ತು ಪ್ರಮಾಣವನ್ನು ನಾಶ ಮಾಡಿದಂತಾಯಿತು. ಕೊಲೊರೆಡೊ ನದಿಯ ಸ್ಧಳೀಯ ಮೀನುಗಳಾದ ಬೋನಿಟೈಲ್ ಚಬ್, ಕೊಲೊರೆಡೊ ಪಿಕೆಮಿನೌ, ಹಂಪ್‌ಬ್ಯಾಕ್ ಚಬ್ ಮತ್ತು ರೋಜರ್ ಬ್ಯಾಕ್ ಸಕ್ಕರ್ ಪ್ರಭೇಧಗಳನ್ನು ಆಮೇರಿಕ ಫೆಡರಲ್ ಸರ್ಕಾರ ಅಪಾಯಕ್ಕೆ ಒಳಗಾಗಿರುವ ಮತ್ಸ್ಯ ಪ್ರಭೇಧಗಳೆಂದು ಪಟ್ಟಿಮಾಡಿದೆ.

ರಸ್ತೆ ಸಾರಿಗೆ ಬಳಕೆ

ಅಣೆಕಟ್ಟೆಯ ಮೇಲು ಭಾಗದಲ್ಲಿ ವಾಹನ ಸಂಚಾರಕ್ಕೆ ಎರಡು ಲೇನಿನ ದಾರಿಯಿದೆ. ಅದು ಅಮೇರಿಕದ ಮಾರ್ಗ 93ಗೆ ಕೊಲೊರೆಡೊ ನದಿ ದಾಟಲು ಸಹಾಯಕವಾಗಿದೆ. ಅಣೆಕಟ್ಟೆಗೆ ಹತ್ತಿರವಾಗುವ ರಸ್ತೆಯ ಎರಡು ಲೇನ್‌ಗಳ ವಿಭಾಗ ಕಿರಿದಾಗಿದ್ದು, ಅನೇಕ ಅಪಾಯಕಾರಿ ಹೇರ್ ಪಿನ್ ತಿರುವುಗಳಿವೆ ಮತ್ತು ಇಲ್ಲಿ ಕಲ್ಲುಗಳು ಉರುಳಿ ಬೀಳುತ್ತಿರುತ್ತವೆ. ಇನ್ನೂ ಹೆಚ್ಚಿನ ಹೆದ್ದಾರಿ ಸಾಮರ್ಥ್ಯ ಮತ್ತು ಉತ್ತಮ ರಕ್ಷಣೆ ಒದಗಿಸಲು ಉದ್ದೇಶಿಸಲಾಗಿರುವ ಹೂವರ್ ಡ್ಯಾಮ್ ಬೈಪಾಸ್ ರಸ್ತೆ ೨೦೧೦ ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು ಅದು ಆಮೇರಿಕದ ೯೩1,500 ft (460 m) ಸಂಚಾರವನ್ನು ಅಣೆಕಟ್ಟಿನ ಕೆಳಭಾಗಕ್ಕೆ ತಿರುಗಿದುತ್ತದೆ. ಈ ಬೈಪಾಸ್ ರಸ್ತೆ ಉಕ್ಕು ಮತ್ತು ಕಾಂಕ್ರೀಟಿನ ಸಂಯುಕ್ತ ಕಮಾನು ಸೇತುವೆಯಾಗಿದ್ದು ತಾತ್ಕಾಲಿಕವಾಗಿ ಅದಕ್ಕೆ ಮೈಕ್ ಓ ಕ್ಯಾಲಘಾನ್-ಪ್ಯಾಟ್ ಟಿಲ್‌‍ಮನ್ ಸ್ಮಾರಕ ಸೇತುವೆ ಎಂಬ ಹೆಸರು ಕಟ್ಟಲಾಗಿದೆ. ಬೈಪಾಸ್ ರಸ್ತೆ ಕಾಮಗಾರಿ ಮುಗಿದ ನಂತರ ಹಾದು ಹೋಗುವ ವಾಹನಗಳನ್ನ ಹೂವರ್ ಅಣೆಕಟ್ಟಿನ ಹತ್ತಿರ ನಿರ್ಬಂಧಿಸಲಾಗುತ್ತದೆ. ಇದರ ಜೊತೆಗೆ ೧1 ಸೆಪ್ಬೆಂಬರ್ 2001 ರ ಭಯೋತ್ಪಾದಕ ದಾಳಿಯ ನಂತರ ಗಣನೀಯ ಭದ್ರತಾ ಕಾಳಜಿ ವ್ಯಕ್ತವಾಗಿದೆ. ದಾಳಿಯ ಕಾರಣ ಹೂವರ್ ಡ್ಯಾಮ್ ಬೈಪಾಸ್ ರಸ್ತೆ ಯೋಜನೆಯನ್ನ ಚುರುಕುಗೊಳಿಸಲಾಗಿದೆ. ಹೂವರ್ ಅಣೆಕಟ್ಟನ್ನು ಹಾದು ಹೋಗುವ ವಾಹನ ಸಂಚಾರವನ್ನು ನಿಯಮಿತ ಗೊಳಿಸಲಾಗಿದೆ. ಅಣೆಕಟ್ಟನ್ನು ದಾಟುವುದಕ್ಕೆ ಮೊದಲು ಕೆಲವು ಬಗೆಯ ವಾಹನಗಳನ್ನ ತಪಾಸಣೆಗೆ ಒಳಪಡಿಸಲಾಗುತ್ತದೆ, ಸೆಮಿ ಟ್ರೈಲರ್ ಟ್ರಕ್,40 feet (12 m) ಸರಕು ಸಾಗಣಿ ಬಸ್ಸುಗಳು ಮತ್ತು ಪೆಟ್ಟಿಗೆ ಟ್ರಕ್ಕುಗಳ ಸಂಚಾರವನ್ನು ಸಂಪೂರ್ಣ ವಾಗಿ ನಿಷೇಧಿಸಲಾಗಿದೆ. ವಾಹನ ಸಂಚಾರವನ್ನು ನೆವಾಡದ ಲಾಫ್‌ಲಿನ್ ಹತ್ತಿರ ದಕ್ಷಿಣದ ಕೊಲೊರೆಡೊ ನದಿ ಸೇತುವೆಯ ಕಡೆಗೆ ತಿರುಗಿಸಲಾಗಿದೆ.

ನಾಮಕರಣ ವಿವಾದ

ಮೊದಲಿಗೆ ಈ ಅಣೆಕಟ್ಟನ್ನು ಬೌಲ್ಡರ್ ಕಣಿವೆಯಲ್ಲಿ ಯೋಜಿಸಲಾಗಿತ್ತು, ಆದರ ಸುಸ್ಧಿರತೆಗಾಗಿ ಅದನ್ನ ಕಪ್ಪು ಕಣಿವೆಗೆ ಸ್ಧಳಾಂತರಿಸಲಾಯಿತು, ಆದರೆ ಅದರ ಹೆಸರು ಮಾತ್ರ ಬೌಲ್ಡರ್ ಅಣೆಕಟ್ಟು ಎಂದೇ ಉಳಿದುಕೊಂಡಿತು. ಬೌಲ್ಡರ್ ಕೇನ್ಯಾನ್ ಪ್ರಾಜೆಕ್ಟ್ ಆಕ್ಟ್ ೧೯೨೮ (BCPA) ಅದಕ್ಕೆ ಒಂದು ಹೆಸರನ್ನು ಕೂಡ ಪ್ರಸ್ತಾಪಿಸಿಲ್ಲ. BCPA ಸರ್ಕಾರಕ್ಕೆ ಅವಕಾಶ ಕೊಟ್ಟಿರುವುದು ನಿರ್ಮಾಣ ಮಾಡಿ, ಕಾರ್ಯ ನಿರ್ವಹಿಸಿ ಮತ್ತು ಕೊಲೊರೆಡೊ ನದಿಯ ಕಪ್ಪು ಕಣಿವೆ ಅಥವಾ ಬೌಲ್ಡರ್ ಕಣಿವೆಯಲ್ಲಿ ಅಗಿಂದಾಗ್ಗೆ ಒದಗಿ ಬರುವ ಕಾಮಗಾರಿಗಳನ್ನು ನಿರ್ವಹಿಸಿ ಎಂದು ಮಾತ್ರ. ಈ ಯೋಜನೆಯ ಕೆಲಸ ೭ ಜುಲೈ ೧೯೩೦ ರಂದು ಪ್ರಾರಂಭವಾಯಿತು.

೧೭ ಸೆಪ್ಬೆಂಬರ್ ೧೯೩೦ ರಂದು ಯೋಜನೆ ಅಧಿಕೃತವಾಗಿ ಪ್ರಾರಂಭವಾದಾಗ ಅಧ್ಯಕ್ಷ ಹೂವರ್‌ನ ಆಂತರಿಕ ಕಾರ್ಯದರ್ಶಿ ರೇಲೈಮನ್ ವಿಲ್‌ಬರ್ ಕೊಲೊರೆಡೊ ನದಿಗೆ ಕಟ್ಟಲಾಗುತ್ತಿರುವ ಅಣೆಕಟ್ಟಿಗೆ ಅಂದಿನ ಆಮೇರಿಕಾ ಸಂಯುಕ್ತ ಅಧ್ಯಕ್ಷನ ಗೌರವಾರ್ಥವಾಗಿ ಹೂವರ್ ಅಣೆಕಟ್ಟು ಎಂದು ನಾಮಕರಣ ಮಾಡಲಾಗುತ್ತವೆ ಎಂದು ಘೋಷಿಸಿದ. ಆಯಾ ಮುಖ್ಯ ಅಣೆಕಟ್ಟಗಳನ್ನು ಕಟ್ಟುವಾಗ ಅಧ್ಯಕ್ಷೀಯ ಅಧಿಕಾರದಲ್ಲಿದ್ದವರ ಹೆಸರುಗಳನ್ನು ಅವುಗಳಿಗೆ ಇಡಲಾಗುವ ಅಸ್ತಿತ್ವದಲ್ಲಿದ್ದ ಪರಂಪರೆಯನ್ನು ವಿಲ್‌ಬರ್ ಅನುಸರಿಸಿದ್ದ್ ಅಂತಹ ಅಣೆಕಟ್ಟುಗಳೆಂದರೆ, ಥಿಯೊಡೊರ್ ರೂಸ್‌ವೆಲ್ಟ್ ಅಣೆಕಟ್ಟು, ವಿಲ್ಸನ್ ಅಣೆಕಟ್ಟು ಮತ್ತು ಕೂಲಿಡ್ಜ್ ಅಣೆಕಟ್ಟು. ಆದರೂ ಈ ಯಾವುದೇ ಅಣೆಕಟ್ಟೆಗಳಿಗೆ ಹಾಲಿ ಅಧ್ಯಕ್ಷೀಯ ಅಧಿಕಾರಸ್ತರ ಹೆಸರುಗಳನ್ನ ಇಡಲಾಗಿರಲಿಲ್ಲ, ಆಯಾ ಅಧ್ಯಕ್ಷರುಗಳ ಪದವಿಯ ಅವಧಿ ಮುಗಿದ ನಂತರ ಈ ಅಣೆಕಟ್ಟುಗಳ ನಿರ್ಮಾಣ ಕಾರ್ಯ ಮುಗಿಯಿತು. ಹೇಳ ಬೇಕು ಅಂದರೆ ಅಧ್ಯಕ್ಷ ಹೂವರ್ ಮತ್ತೆ ಅಧ್ಯಕ್ಷೀಯ ಪದವಿಗೆ ಮರು ಚುನಾಯಿತನಾಗಲು ಈಗಾಗಲೇ ಪ್ರಚಾರ ಶುರು ಮಾಡಿಕೊಂಡಿದ್ದ; ಆರ್ಧಿಕ ಮುಗ್ಗಟ್ಟು ಎದುರಾಗಿತ್ತು ಹೆಚ್ಚು ಉದ್ಯೋಗಗಳನ್ನ ಸೃಷ್ಟಿಸಿದ ಕೀರ್ತಿ ಅವನಿಗೆ ಬೇಕಾಗಿತ್ತು. ೧೪ ಫೆಬ್ರುವರಿ ೧೯೩೧ ರಲ್ಲಿ ಜಾರಿಗೆ ಬಂದ ಕಾಂಗ್ರೆಸಿನ ಕಾಯಿದೆ ಹೂವರ್ ಅಣೆಕಟ್ಟು ಎಂಬ ಹೆಸರನ್ನು ಅಧಿಕೃತ ಗೊಳಿಸಿತು. ಆದರೂ ೧೯೩೨ ರಲ್ಲಿ ಹರ್ಬರ್ಟ್ ಹೂವರ್ ಪ್ರತಿಸ್ಪರ್ಧಿ ಫ್ರಾಂಕ್ಲಿನ್ ಡಿಲಾನೊ ರೂಸ್‌ವೆಲ್ಟ್ ಎದುರು ಅವನ ಮರುಚುನಾವಣೆ ಬಿಡ್‌ನಲ್ಲಿ ಸೋತ. ತನ್ನ ನೆನಪುಗಳಲ್ಲಿ ಹೂವರ್ ತಾನು ಸೋತ ನಂತರ ಕ್ಯಾಲಿಫೋರ್ನಿಯಾದ ತನ್ನ ಪಾಲ್ ಆಲ್ಟೊ ಮನೆಯಿಂದ ವಾಷಿಂಗ್ಟ್‌ನ್ನಿಗೆ ಮರಳುವಾಗ ೧೨ ನವೆಂಬರ್ ೧೯೩೨ ರಂದು ಅಣೆಕಟ್ಟೆಯ ಕೆಲಸದ ಪ್ರಗತಿಯನ್ನು ಪರಿಶೀಲಿಸಲು ರಾತ್ರಿ ಹೊತ್ತು ಅಲ್ಲಿಗೆ ಹೋಗಿದ್ದ ಬಗ್ಗೆ ಬರೆದು ಕೊಂಡಿದ್ದಾನೆ. ಅವನು ಹೇಳುತ್ತಾನೆ ನಾನು ಬಹುದಿನಗಳಿಂದ ಕಂಡಿದ್ದ ಮಹಾನ್ ಕನಸು ಈಗ ಕಲ್ಲು ಮತ್ತು ಸಿಮೆಂಟಿನ ಮೂಲಕ ನೈಜ ಆಕಾರ ಪಡೆದು ಕೊಳ್ಳುತ್ತಿರುವುದನ್ನು ಕಾಣಲು ನನಗೆ ಅಪಾರ ಸಂತೋಷವಾಗುತ್ತಿದೆ. ನಾನು ಕೊಲೊರೆಡೊ ನದಿ ಅಯೋಗದ ಅಧ್ಯಕ್ಷನಾಗಿ ಇಂದಿಗೆ ಹತ್ತು ವರ್ಷಗಳಾದವು .... ಈ ಅಣೆಕಟ್ಟು ಮನುಷ್ಯ ಈ ಎರಡು ತನ್ನ ಕೈಗಳಿಂದ ಪ್ರಯತ್ನಿಸದಂತಹ ಮಹಾನ್ ಎಂಜಿನಿಯರಿಂಗ್ ಕಾಮಗಾರಿ. ಅವನು ಅದರ ಉದ್ದೇಶಗಳ ಬಗ್ಗೆ ದೊಡ್ಡ ಪಟ್ಟ??

Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
HISTORY
21 June 2012
Hoover Dam was built during the Great Depression, between 1931 and 1936. The project employed thousands of workers, cost more than 100 lives and gave rise to Boulder City.
Роберт Пискуле
All the best things of Las Vegas are away from the strip. You can drive over the Hoover dam and get to free parking on the Arizona side (saves $10). You can also walk on the bridge.
C-SPAN
27 June 2016
The dam was built during the Great Depression and provided flood control, crop irrigation, and hydroelectric power for the southwestern states, and many jobs. To learn more watch this C-SPAN video.
Katie Whalon
27 November 2018
Purchase a guided tour or pay for parking and explore on your own. I highly recommend going on the bridge. It's a beautiful view and a nice walk. Eat at The Coffee Cup on the way through Boulder City.
Mary Rodriguez
27 August 2018
This is an amazing sight to see and story to hear of how the Dam was built. I have new respect for the security they have-the Dam is very important to life to the Western states! Wonderful trip!
Sean Foley
3 September 2018
Incredible!! Amazing finally getting to see this place up close!! Definitely a place You have to see up close to actually be able to comprehend how Massive it is!!!
Hoover Dam Lodge

starting $81

The Westin Lake Las Vegas Resort & Spa

starting $84

Quality Inn

starting $68

Boulder Dam Hotel

starting $84

Best Western Hoover Dam Hotel

starting $75

Railroad Pass Hotel and Casino

starting $49

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Lake Mead

Lake Mead is the largest reservoir in the United States. It is

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Ethel M Botanical Cactus Garden

Ethel M Botanical Cactus Gardens is 3 acres (1.2 ha) of botanical g

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
McCarran International Airport

McCarran International Airport Шаблон:Airport codes is the prima

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Hard Rock Hotel and Casino (Las Vegas)

The Hard Rock Hotel and Casino is a resort near the Las Vegas Strip in

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Welcome to Fabulous Las Vegas sign

The Welcome to Fabulous Las Vegas sign is a Las Vegas landmark funded

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
The Little Church of the West

The Little Church of the West is a wedding chapel on the Las Vegas

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
MGM Grand Las Vegas

The MGM Grand Las Vegas is a hotel casino located on the Las Vegas

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
The Little White Wedding Chapel

The Little White Wedding Chapel in Las Vegas, Nevada has been the site

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Cahora Bassa

The Cahora Bassa lake is Africa's fourth-largest artificial lake,

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Aswan Dam

Aswan Dam refers to two dams, both located near Aswan, Egypt. Most

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Orlík Dam

The Orlík Dam (Czech: Vodní nádrž Orlík) is the largest hydr

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Tokuyama Dam

The Tokuyama Dam is a future hydroelectric plant in Japan.

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Upper Kotmale Dam

The Upper Kotmale Dam (also known as the Upper Kotmale Hydropower

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ