ಗೀಜಾದ ಮಹಾ ಪಿರಾಮಿಡ್

ಗೀಜಾದ ಮಹಾ ಪಿರಾಮಿಡ್ (ಇದು ಖುಫುದ ಪಿರಾಮಿಡ್ ಮತ್ತು ಚಿಯೋಪ್ಸ್‌ನ ಪಿರಾಮಿಡ್ ಎಂಬುದಾಗಿಯೂ ಕರೆಯಲ್ಪಡುತ್ತದೆ) ಇದು ಪ್ರಸ್ತುತದಲ್ಲಿ ಈಜಿಪ್ತ್‌ನ ಇಐ ಗೀಜಾ ಆಗಿರುವ ಗೀಜಾ ಮೆಕ್ರೊಪೊಲಿಸ್ ಗಡಿಯಲ್ಲಿರುವ ಮೂರು ಪಿರಾಮಿಡ್‌ಗಳಲ್ಲಿ ಅತ್ಯಂತ ಹಳೆಯದು ಮತ್ತು ಅತ್ಯಂತ ದೊಡ್ಡದಾಗಿರುವ ಪಿರಾಮಿಡ್ ಆಗಿದೆ. ಇದು ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿದೆ, ಮತ್ತು ತನ್ನ ಮೊದಲಿನ ಸ್ಥಿತಿಯಲ್ಲಿಯೇ ಇರುವ ಒಂದೇ ಒಂದು ಅದ್ಭುತವಾಗಿದೆ. ಪಿರಾಮಿಡ್ ಇದು ಈಜಿಪ್ತಿನ ನಾಲ್ಕನೆ ಯ ರಾಜಮನೆತನದ ಫಾರೂಕ್ ಖುಫು (ಗ್ರೀಕ್‌ನಲ್ಲಿ ಚಿಯೋಪಸ್) ಇವರ ಸ್ಮಾರಕವಾಗಿ ನಿರ್ಮಿಸಲ್ಪಟ್ಟಿದೆ ಮತ್ತು ೧೪ ರಿಂದ ೨೦- ವರ್ಷಗಳ ಅವಧಿಯವರೆಗೆ ಅಂದರೆ ಸರಿ ಸುಮಾರು ಕ್ರಿಪೂ ೨೫೬೦ ರ ಸಮಯದಲ್ಲಿ ಕೊನೆಗೊಳ್ಳಲ್ಪಟಿತು ಎಂಬುದಾಗಿ ಈಜಿಪ್ತ್‌ ಶಾಸ್ತ್ರಜ್ಞರು ನಂಬಿದ್ದಾರೆ.

ಇತಿವೃತ್ತ

  • ಪ್ರಾಥಮಿಕವಾಗಿ ೧೪೬.೫ ಮೀಟರ್‌ಗಳಲ್ಲಿ (೪೮೦.೬ ಫೂಟ್), ಮಹಾ ಪಿರಾಮಿಡ್ ೩,೮೦೦ ವರ್ಷಗಳವರೆಗೂ ಜಗತ್ತಿನಲ್ಲಿ ಅತ್ಯಂತ ಎತ್ತರವಾದ ಮಾನವ ನಿರ್ಮಿತ ಕಟ್ಟಡ ವಿನ್ಯಾಸವಾಗಿತ್ತು. ಅಂತಹ ಒಂದು ದಾಖಲೆಯು ಅಷ್ಟು ದೀರ್ಘ ಅವಧಿಯವರೆಗೆ ಯಾವತ್ತಿಗೂ ಕೂಡ ಅಸ್ತಿತ್ವದಲ್ಲಿರಲಿಲ್ಲ. ಮೂಲಭೂತವಾಗಿ, ಮಹಾ ಪಿರಾಮಿಡ್ ಒಂದು ಮೃದುವಾದ ಬಾಹ್ಯ ಮೆಲ್ಮೈಯನ್ನು ಉಂಟುಮಾಡಿದ ಆಚ್ಛಾದನ ಕಲ್ಲುಗಳಿಂದ ಆವೃತವಾಗಲ್ಪಟ್ಟಿತ್ತು; ಪ್ರಸ್ತುತದಲ್ಲಿ ಕಂಡುಬರುವುದು ಮೂಲಭೂತವಾದ ನಡುಭಾಗದ ವಿನ್ಯಾಸವಾಗಿದೆ.
  • ಒಮ್ಮೆ ಬಾಹ್ಯ ವಿನ್ಯಾಸವನ್ನು ಆವರಿಸಿದ್ದ ಆಚ್ಛಾದನ ಕಲ್ಲುಗಳಲ್ಲಿ ಕೆಲವು ಕಲ್ಲುಗಳು ಈಗಲೂ ಕೂಡ ಮೂಲಾಧಾರದಲ್ಲಿ ಕಂಡುಬರುತ್ತವೆ. ಮಹಾ ಪಿರಾಮಿಡ್‌ನ ನಿರ್ಮನದ ತಂತ್ರಗಾರಿಕೆಗಳ ಬಗ್ಗೆ ವಿಭಿನ್ನವಾದ ವೈಜ್ಞಾನಿಕ ಮತ್ತು ಪರ್ಯಾಯವಾದ ಸಿದ್ಧಾಂತಗಳು ಅಸ್ತಿತ್ವದಲ್ಲಿವೆ. ಹೆಚ್ಚಾಗಿ ಮನ್ನಣೆಗೆ ಪಾತ್ರವಾಗಲ್ಪಟ್ಟ ನಿರ್ಮಾಣದ ಸಿದ್ಧಾಂತಗಳು ಇದು ಗಣಿಯಿಂದ ದೊಡ್ಡದಾದ ಕಲ್ಲುಗಳನ್ನು ತೆಗೆಯುವುದು ಮತ್ತು ಅವುಗಳನ್ನು ಎಳೆದುಕೊಂಡು ಬರುವುದು ಮತ್ತು ಸರಿಯಾದ ಸ್ಥಾನದಲ್ಲಿ ಇರಿಸುವುದು ಎಂಬ ಕಲ್ಪನೆಯ ಮೇಲೆ ಅವಲಂಬಿತವಾಗಿದೆ.
  • ಮಹಾ ಪಿರಾಮಿಡ್‌ನಲ್ಲಿ ಮೂರು ಕೋಣೆಗಳಿವೆ (ವಿಭಾಗಗಳಿವೆ) ಎಂಬುದಾಗಿ ತಿಳಿಯಲಾಗಿದೆ. ಅತ್ಯಂತ ಕೆಳಗಿರುವ ವಿಭಾಗವು ಆಧಾರಶಿಲೆಯಾಗಿ ಕತ್ತರಿಸಲ್ಪಟ್ಟಿದೆ, ಅದರ ಮೇಲೆ ಪಿರಾಮಿಡ್ ನಿರ್ಮಾಣವಾಗಲ್ಪಟ್ಟಿದೆ ಮತ್ತು ಅದು ಈಗಲೂ ಕೂಡ ಸಂಪೂರ್ಣವಾಗದೇ ಉಳಿದುಕೊಂಡಿದೆ. ರಾಣಿಯ ವಿಭಾಗ ಮತ್ತು ರಾಜನ ವಿಭಾಗ ಎಂದು ಕರೆಯಲ್ಪಟ್ಟಿರುವ ವಿಭಾಗಗಳು
  • ಪಿರಾಮಿಡ್ ವಿನ್ಯಾಸದಲ್ಲಿ ಮೇಲಿನ ಸ್ಥಾನವನ್ನು ಪಡೆದುಕೊಂಡಿವೆ. ಗೀಜಾದ ಮಹಾ ಪಿರಾಮಿಡ್ ಇದು ಈಜಿಪ್ತ್‌ನಲ್ಲಿ ಏರಿಕೆ ಕ್ರಮ ಮತ್ತು ಇಳಿಕೆ ಕ್ರಮದ ಎರಡೂ ರೀತಿಯ ವಿಭಾಗಗಳನ್ನು ಹೊಂದಿರುವ ಏಕೈಕ ಪಿರಾಮಿಡ್ ಆಗಿದೆ. ಗೀಜಾ ಸಂಕೀರ್ಣದ ಪ್ರಮುಖ ಭಾಗವು ಕಟ್ಟಡಗಳ ಒಂದು ಸ್ಥಾಪನೆಯಾಗಿದೆ, ಅದು ಖುಫುರ ಸ್ಮರಣಾರ್ಥವಾಗಿ ಎರಡು ಶವಾಗಾರ ಮಂದಿರಗಳು (ಒಂದು ಪಿರಾಮಿಡ್‌ಗೆ ಸನಿಹದಲ್ಲಿದೆ ಮತ್ತು ಇನ್ನೊಂದು ನೈಲ್‌ನ ಸಮೀಪದಲ್ಲಿದೆ), ಖುಫುರ ಪತ್ನಿಯರಿಗಾಗಿ ಮೂರು ಸಣ್ಣದಾದ ಪಿರಾಮಿಡ್‌ಗಳನ್ನು ಹೊಂದಿದೆ, ಎಲ್ಲದಕ್ಕಿಂತಲೂ ಚಿಕ್ಕದಾದ ಒಂದು "ಸೆಟಲೈಟ್" ಪಿರಾಮಿಡ್ ಇದು ಎರಡು ಮಂದಿರಗಳನ್ನು ಸಂಯೋಜಿಸುವ ಒಂದು ಎತ್ತರಿಸಿದ ಕಾಲುದಾರಿಯಾಗಿ ನಿರ್ಮಾಣವಾಗಲ್ಪಟ್ಟಿದೆ, ಮತ್ತು ಉದಾತ್ತ ನೀತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಸಣ್ಣ ಚಪ್ಪಡಿ ಕಲ್ಲುಗಳು ಸ್ಮಾರಕವನ್ನು ಆವರಿಸಿಕೊಂಡಿವೆ.

ಇತಿಹಾಸ ಮತ್ತು ವಿವರಣೆ

  • ಇದನ್ನು ಈಜಿಪ್ತಿನ ನಾಲ್ಕನೇ ರಾಜಸಂತತಿಯಾದ ಪೆರೊ ಖುಪು ಇವರ ಸ್ಮರಣಾರ್ಥವಾಗಿ ಕಟ್ಟಲಾಗಿದ್ದು ಇದು ಸುಮಾರು ಹದಿನಾಲ್ಕರಿಂದ ಇಪ್ಪತ್ತು ವರ್ಷಗಳನ್ನು ನಿರ್ಮಾಣಕ್ಕಾಗಿ ತೆಗೆದುಕೊಂಡಿದೆಯೆಂದು ಅಂದಾಜಿಸಲಾಗಿದೆ. ಖುಫುನ ವಜೀರನಾದ ಹೆಮೊನ್‌ ಅಥವಾ ಹೆಮಿಯುನು ಈತನನ್ನು ಈ ಬೃಹತ್‌ ಪಿರಾಮಿಡ್ಡಿನ ಕಲಾಕಾರನೆಂದು ನಂಬಲಾಗಿದೆ. ಕಟ್ಟುವ ಸಂದರ್ಭದಲ್ಲಿ ನಿಜವಾದ ಪಿರಾಮಿಡ್‌ ಇಜಿಪ್ತಿಯನ್ನರ ಲೆಕ್ಕದ ಮಾನವಾದ ಮುಂಗೈ ಲೆಕ್ಕದಲ್ಲಿ ೨೮೦ ಮೊಳ (ಕ್ಯುಬಿಟ್ಸ್‌) ಎತ್ತರವಿದ್ದಿತ್ತು. ಅಂದರೆ ನಿರಂತರ ಸವೆತದಿಂದಾಗಿ ಮತ್ತು ಪಿರಾಮಿಡಿಯನ್‌ಗಳ ಕೊರತೆಯಿಂದಾಗಿ ಈಗ ಅದರ ಎತ್ತರ ಈಗ 138.8 metres (455.4 ft). ಈಗಿನ ಎತ್ತರವು ಪ್ರತಿಯೊಂದು ದಿಕ್ಕಿನಲ್ಲೂ ೪೪೦ ರಾಜ ಮೊಳಗಳಾಗುತ್ತವೆ.
  • ರಾಜ ಮೊಳವೆಂದರೆ ೦.೫೨೪ ಮೀಟರುಗಳಿಗೆ ಸಮನಾಗುತ್ತವೆ. ಒಟ್ಟಾರೆ ಪಿರಾಮಿಡ್ಡಿನ ತೂಕವನ್ನು ೫.೯ ಮಿಲಿಯನ್‌ ಟನ್‌ ಎಂದು ಅಂದಾಜಿಸಲಾಗಿದೆ. ಒಳಸ್ಥರದಲ್ಲಿರುವ ದಿಬ್ಬದ ಗಾತ್ರವು ಅಂದಾಜು ೨,೫೦೦,೦೦೦ ಘನ ಮೀಟರ್‌ಗಳಾಗುತ್ತವೆ. ಇದೆಲ್ಲ ಅಂಕೆಸಂಖ್ಯೆಯಿಂದ ತಿಳಿದು ಬರುವ ಅಂಶವೆಂದರೆ ಅಂದಾಜು ೨೦ವರ್ಷಗಳಲ್ಲಿ ಕಟ್ಟಲ್ಪಟ್ಟ ಈ ಪಿರಾಮಿಡ್‌ಗೆ ದಿನವೊಂದಕ್ಕೆ ಸರಾಸರಿ ೮೦೦ ಟನ್‌ ಕಲ್ಲುಗಳನ್ನು ಸರಬರಾಜು ಮಾಡಲಾಗಿದೆ. ಇದು ಅಂದಾಜು ೨.೩ ಮಿಲಿಯನ್‌ ಕಲ್ಲುಗಳನ್ನು ಹೊಂದಿದೆ. ೨೦ವರ್ಷಗಳಲ್ಲಿ ಮುಗಿದ ಕಟ್ಟಡಕ್ಕೆ ರಾತ್ರಿ ಹಗಲು ಪ್ರತೀ ಗಂಟೆಗೆ ಸರಾಸರಿ ೧೨ಕಲ್ಲುಗಳನ್ನು ಸರಿಯಾದ ಜಾಗಕ್ಕೆ ಜೋಡಿಸುತ್ತಾ ಸಾಗಲಾಗಿದೆ.
  • ಪಿರಾಮಿಡ್‌ನ ಬಗೆಗಿನ ಈ ಲೆಕ್ಕಾಚಾರವನ್ನು ಪ್ರಥಮ ಬಾರಿಗೆ ೧೮೮೦–೮೨ ರಲ್ಲಿ ಈಜಿಪ್ತ್‌ಶಾಸ್ತ್ರಜ್ಞರಾದ ಸರ್‌ ಪ್ಲಿಂಡರ್ಸ್‌ ಪೆಟ್ರೆ ಇವರು ಮಾಡಿದರು ಮತ್ತು ಪಿರಾಮಿಡ್ಸ್‌ ಎಂಡ್‌ ಟೆಂಪಲ್ಸ್‌ ಆಫ್‌ ಗೀಜಾ ಎಂದು ಬರಹವನ್ನು ಪ್ರಕಟಿಸಿದರು. ಈಗ ಸಿಗುವ ಸಾಮಾನ್ಯವಾಗಿ ಎಲ್ಲ ವಿವರಗಳು ಇವರ ಮಾನದ ಮೇಲೆಯೇ ತೆಗೆಯಲಾಗುತ್ತದೆ. ಈ ಪಿರಾಮಿಡ್ಡಿನ ಹಲವಾರು ಕಲ್ಲುಗಳು ಮತ್ತು ಒಳ ಭಾಗದ ಇಟ್ಟಿಗೆಗಳು ಕೇವಲ ಒತ್ತಡದ ಮೇಲೆ ನಿಂತವುಗಳಾಗಿವೆ.
  • ಉತ್ತರ ಪೂರ್ವದಲ್ಲಿನ ಕಲ್ಲುಗಳ ಅಧ್ಯಯನದಿಂದ ತಿಳಿದುಬರುವುದೇನೆಂದರೆ ಪ್ರಾರಂಭದಲ್ಲಿ ಹೊಂದಿಕೊಳ್ಳುವ ಜೋಡಣೆಯು ಕೇವಲ ೦.೫ ಮಿಲಿಮಿಟರುಗಳು ಅಥವಾ ಒಂದು ಇಂಚಿನ ೧/೫೦ನೇ ಭಾಗವಿದೆ. ಈ ಪಿರಾಮಿಡ್‌ ೩,೮೦೦ ವರ್ಷಗಳ ವರೆಗೆ ಅತ್ಯಂತ ಎತ್ತರದ ಮನುಷ್ಯನಿರ್ಮಿತ ಆಕೃತಿಯಾಗಿ ಉಳಿದಿತ್ತು. ಆದರೆ ನಂತರದಲ್ಲಿ ಅತಿಶಯವಾದ ೧೬೦ ಮಿಟರ್‌ ಎತ್ತರದ ಶಿಖರದ ಲಿಂಕನ್‌ ಕೆಥಡ್ರಲ್ ಪ್ರಧಾನ ಕಟ್ಟಡವನ್ನು ಕ್ರಿ.ಪೂ ೧೩೦೦ರಲ್ಲಿ ಕಟ್ಟಿದಾಗ ಅದು ಅತ್ಯಂತ ಎತ್ತರದ್ದಾಯಿತು. ಆ ಕೆಲಸದಲ್ಲಿನ ಶ್ರದ್ಧೆ ಹೇಗಿತ್ತೆಂದರೆ ಪಿರಾಮಿಡ್‌ನ ನಾಲ್ಕು ಮೂಲೆಗಳಲ್ಲಿನ ವ್ಯತ್ಯಾಸವು ಕೇವಲ ೫೮ ಅಗಲದಲ್ಲಿ ಮಿಲಿಮಿಟರ್‌ಗಳಷ್ಟಿದೆ. ಅಡಿಪಾಯವು ಅಡ್ಡಸ್ಥರದಲ್ಲಿದ್ದು ೨೧ ಮಿ.ಮಿ.ರಷ್ಟಿದೆ. ಚೌಕಾಕಾರದ ಅಡಿಪಾಯವು ನಾಲ್ಕು ಚೌಕಾಕಾರದ ಮೂಲೆಗಳಿಗೆ ಹತ್ತಿರದಲ್ಲಿದ್ದು (ನಾಲ್ಕು ನಿಮಿಷಗಳ ಕೋನದಲ್ಲಿ) ಆಯಸ್ಕಾಂತೀಯ ಉತ್ತರಕ್ಕಲ್ಲದೇ ನಿಜವಾದ ಉತ್ತರಕ್ಕೆ ಅಭಿಮುಖವಾಗಿದೆ. *ಅಂತಿಮ ಹಂತದ ಚೌಕಟ್ಟು ಕೇವಲ ದೋಷವು ೧೨ ಸೆಕೆಂಡುಗಳ ಕೋನದಲ್ಲಿದೆ. ಈ ವಿಶಿಷ್ಟವಾದ ರಚನೆಯು ಪೆಟ್ರಿ ಯವರ ಸಮಗ್ರ ನೋಟ ಮತ್ತು ಇತರರ ಅಧ್ಯಯನದಿಂದ ಇದು ನಿಜವಾಗಿ ನಾಲ್ಕು ದಿಕ್ಕಿನ ಅಡಿಪಾಯದಲ್ಲೂ ೨೮೦ಕ್ಯುಬಿಟ್ಸ್‌ ಎತ್ತರ ಮತ್ತು ೪೪೦ಕ್ಯುಬಿಟ್ಸ್‌ ಉದ್ದವಾಗಿತ್ತೆಂದು ತಿಳಿದು ಬರುತ್ತದೆ. ಪರಿಧಿಯ ಎತ್ತರವಾದ ೧೭೬೦/೨೮೦ ಕ್ಯಬಿಟ್ಸ್‌ ೨πಗೆ ಸಮನಾಗಿದ್ದು ೦.೦೫%ಕ್ಕಿಂತ ಸರಿಯಾಗಿರುತ್ತದೆ.(ಅಂದಾಜು π ಮೌಲ್ಯವು ೨೨/೭ರಷ್ಟಾಗುತ್ತದೆ.)
  • ಕೆಲವು ಈಜಿಪ್ತ್‌ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಂತೆ ಈ ಆಕೃತಿಯು ಪೂರ್ವನಿಯೋಜಿತವಾಗಿ ಕಲ್ಪಿಸಿಕೊಂಡು ಮಾಡಿದ ಕಾರ್ಯವಾಗಿದೆ. ವರ್ನರ್‌ ಬರೆದಂತೆ " π ಮೌಲ್ಯವನ್ನು ಪ್ರಾಚಿನ ಈಜಿಪ್ತ್‌ನನವರು ವಿಷೇಶವಾಗಿ ಬಳಸದೇ ಇದ್ದರೂ ಕೂಡ ಅದಕ್ಕೆ ಸಮನಾದ ಮೌಲ್ಯಗಳನ್ನೇ ಬಳಸಿ ದ್ದಾರೆ ಎಂದು ನಾವು ನಿರ್ಧಾರಕ್ಕೆ ಬರಬಹುದಾಗಿದೆ. ಪಿರಾಮಿಡ್ಸ್‌ ಎಂಡ್‌ ಟೆಂಪಲ್ಸ್‌ ಆಫ್‌ ಗೀಜಾ ಪುಸ್ತಕದ ಲೇಖಕರಾದ ಪಿಟ್ರೆಯವರು ಬರೆದಂತೆ "ಅವುಗಳಲ್ಲಿನ ವರ್ತುಲಾಕಾರದ ಅನುಪಾತವು ಎಷ್ಟು ನಿಖರವಿತ್ತೆಂದರೆ ಅವರು ಕಟ್ಟಡ ನಿರ್ಮಾಣದ ನಿಪುಣರೆಂದು ಶ್ಲಾಘಿಸಬಹುದಾಗಿದೆ".
  • ಇನ್ನೊಬ್ಬ ಬರಹಗಾರರು ಹೇಳಿದಂತೆ ಪ್ರಾಚೀನ ಈಜಿಪ್ತಿಯನ್ನರು ಪೈ ಸೂತ್ರವನ್ನು ಅವರು ಈ ಸೂತ್ರವನ್ನು ತಮ್ಮ ಕಲಾಕೃತಿಗಳಲ್ಲಿ ಬಳಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಪಿರಾಮಿಡ್‌ಗಳ ನಿರ್ಮಾಣವು ಕೇವಲ ಸರಳವಾದ ಲಂಬಕೋನ ತ್ರಿಬುಜದ ಸೂತ್ರದ ಮೇಲೆ ಮಾಡಲಾಗಿದೆ.

ಉಪಕರಣಗಳು

  • ಕಟ್ಟಡವು ಸುಮಾರು ೨.೩ ಮಿಲಿಯನ್‌ ಸುಣ್ಣದ ಕಲ್ಲುಗಳನ್ನು ಹೊಂದಿದೆ. ಬಹುತೇಕವಾಗಿ ಎಲ್ಲ ಕಲ್ಲುಗಳನ್ನು ಹತ್ತಿರದ ಕಲ್ಲುಗಣಿಗಳಿಂದ ತಂದವುಗಳಾಗಿವೆ. ಹೊರಮೈಯಲ್ಲಿ ಬಳಸಲಾದ ತುರಾ ಸುಣ್ಣದ ಕಲ್ಲನ್ನು ಹತ್ತಿರದಲ್ಲಿರುವ ನದಿಯ ಉದ್ದಗಲಕ್ಕೂ ಸಂಗ್ರಹಿಸಲಾಗಿದೆ. ದೊಡ್ಡ ಗ್ರೈನೈಡ್‌ ಕಲ್ಲುಗಳು ರಾಜನ ಕೊಣೆಯ ಹತ್ತಿರದಲ್ಲಿ ಕಂಡುಬರುತ್ತವೆ.ಇವುಗಳು ಸುಮಾರು ೨೫ ರಿಂದ ೮೦ ಟನ್‌ಗಳಷ್ಟು ತೂಕವಿದ್ದು ಅವುಗಳನ್ನು ೫೦೦ ಮೈಲುಗಳಿಗಿಂತಲೂ ದೂರದ ಆಸ್ವಾನ್‌ದಿಂದ ತರಲಾಗಿದೆ. ಪ್ರಾಚೀನ ಈಜಿಪ್ತಿಯನ್ನರು ಕಲ್ಲುಗಳಿಗೆ ಮರದಿಂದ ತಯಾರಿಸಿದ ಸುತ್ತಿಗೆ ಮತ್ತು ಬೆಣೆಗಳ ಮೂಲಕ ಹೊಡೆದು ನೀರಿನಲ್ಲಿ ನೆನೆಸುತ್ತಿದ್ದರು.
  • ಕಲ್ಲು ನೀರಿನಲ್ಲಿ ಚೆನ್ನಾಗಿ ನೆನೆದ ಬಳಿಕ ಮತ್ತು ಜೋರಾಗಿ ಹೊಡೆದು ಕಲ್ಲುಗಳ ಬಿರುಕನ್ನು ದೊಡ್ಡ ಮಾಡುತ್ತಿದ್ದರು. ಒಮ್ಮೆ ಆ ಕಲ್ಲುಗಳನ್ನು ಕತ್ತರಿಸಿದ ಬಳಿಕ ಅವುಗಳನ್ನು ನೈಲ್‌ ನದಿಯಲ್ಲಿ ಹಡಗುಗಳ ಮೂಲಕ ಮೈಲ್ಮುಕ ಅಥವಾ ಕೆಳಮುಖವಾಗಿ ಸಾಗಿಸಲಾಗುತ್ತಿತ್ತು. ಸುಮಾರು ೫.೫ ಮಿಲಿಯನ್‌ ಟನ್‌ ಸುಣ್ಣದ ಕಲ್ಲುಗಳನ್ನೂ ೮,೦೦೦ಟನ್‌ ಗ್ರೈನೆಡ್‌ ಕಲ್ಲುಗಳನ್ನೂ( ಆಸ್ವಾನ್‌ದಿಂದ ಆಮದು ಮಾಡಿಕೊಂಡವುಗಳು) ಮತ್ತು ೫೦೦,೦೦೦ ಟನ್‌ಗಳಷ್ಟು ಗಾರೆಯನ್ನು ಈ ಬೃಹರ್‌ ಪಿರಾಮಿಡ್‌ ನಿರ್ಮಾಣಕ್ಕೆ ಬಳಸಲಾಯಿತು.

ಹೊರಪದರದ ಕಲ್ಲುಗಳು

  • ಈ ಪಿರಾಮಿಡ್ಡಿನ ಹೊರಮಾಟವನ್ನು ಬಿಳಿ ಮಿಶ್ರಿತ ಕೆಸಿಂಗ್‌ ಕಲ್ಲುಗಳಿಂದ ಇಳಿಜಾರು ಮುಖದಲ್ಲಿ ಕಟ್ಟಲಾಗಿದೆ. ಆದರೆ ಅವು ಚಪ್ಪಟೆಯಾಗಿವೆ. ಸುಣ್ಣದ ಕಲ್ಲುಗಳನ್ನು ಅತ್ಯಂತ ನುಣ್ಣಗೆ ಮಾಡಲಾಗಿದೆ. ಅವುಗಳನ್ನು ಅತ್ಯಂತ ಜಾಗ್ರತೆಯಿಂದ ೫½ಮುಂಗೈ ಅಳತೆಯಲ್ಲಿ ಓರೆಯಾಗಿ ಬೇಕಾದ ಆಕಾರ ಬರುವಂತೆ ನಯವಾಗಿ ಕೆತ್ತಲಾಗಿದೆ. ಈಗ ನೋಡಲು ಒಂದೇ ಸಿದ್ದಾಂತದಡಿಯಲ್ಲಿ ಕೊರೆದು ಇರಿಸಿದಂತೆ ಭಾಸವಾಗುತ್ತದೆ. ಕ್ರಿ.ಪೂ.೧೩೦೦ರಲ್ಲಿ ನಡೆದ ಸಾಂದ್ರವಾದ ಭೂಕಂಪದಲ್ಲಿ ಬಹಳಷ್ಟು ಸುಣ್ಣದ ಕಲ್ಲುಗಳು ನಾಶವಾದವು.
  • ಅವುಗಳನ್ನು ನಂತರದಲ್ಲಿ ಬಾಹ್ರಿ ಸುಲ್ತಾನ್‌ ಅನ್‌ ನಸಿರ್‌-ಅದ್‌-ದಿನ್‌ ಆಲ್‌ ಹಸನ್‌ ಈತನು ೧೩೫೬ರಲ್ಲಿ ಕೈರೋದಲ್ಲಿ ಮಸೀದಿಗಳನ್ನು ಮತ್ತು ಕೋಟೆಗಳನ್ನು ಕಟ್ಟಲು ಹೊತ್ತೊಯ್ದನು. ಈ ಕಲ್ಲುಗಳನ್ನು ಇಂದಿಗೂ ಪಿರಾಮಿಡ್ಡಿನ ಭಾಗವೆಂದು ಗುರುತಿಸ ಬಹುದಾಗಿದೆ. ನಂತರ ಸಂಶೊಧಕರ ವರದಿಯ ಪ್ರಕಾರ ಅವು ಹೆಚ್ಚಿನ ಪ್ರಮಾಣದಲ್ಲಿ ಸುಣ್ಣದ ಕಲ್ಲುಗಳನ್ನು ಕಳೆದುಕೊಳ್ಳುತ್ತಾ ಸವಕಳಿಯಾಗುತ್ತಾ ಬಂದವು. ಉತ್ಖನನದ ವೇಳೆಯಲ್ಲಿ ಬಹುತೇಕ ಸುಣ್ಣದ ಕಲ್ಲುಗಳನ್ನು ಹಾಳುಗೆಡವಲಾಯಿತು.
  • ಇಂದು ಕೆಳಸ್ಥರಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸುಣ್ಣದ ಕಲ್ಲುಗಳನ್ನು ಪಿರಾಮಿಡ್‌ನ ಸುತ್ತಲೂ ಶತಮಾನದ ವ್ಯಕ್ತಿ ನಿಷ್ಠೆಯ ಕುರುಹಾಗಿ ಕಾಣಬಹುದಾಗಿದೆ. ಪಿಟ್ರಿಯವರೂ ಕೂಡ ೧೯೩ ಸೆ.ಮಿ.± ೨೫ಸೆ.ಮಿ. ಕಲ್ಲುಗಳಿರುವುದನ್ನು ಗುರುತಿಸಿದ್ದಾರೆ. ಅವರ ನಿರ್ಧಾರದಂತೆ ಉತ್ತರಭಾಗದಲ್ಲಿನ ಶಿಖರವನ್ನು ನಂತರ ಆದ ತಪ್ಪನ್ನು ಸರಿಪಡಿಸಿಕೊಳ್ಳುವುದಕ್ಕೊಸ್ಕರ ಪುನಃ ಬದಲಾಯಿಸಿ ಕಟ್ಟಲಾಗಿದೆ.
  • ಈ ಕಟ್ಟಡದ ಕಾರ್ಯವನ್ನು ಈಗಿನ ಕಾಲದ ನೇತ್ರತಜ್ಞನಿಗೆ ಹೋಲಿಸಿ ಸರಿಯಾದ ಕೋನದಲ್ಲಿ ಕಲ್ಲುಗಳನ್ನು ಜೋಡಿಸಿ ನಿರ್ಮಿಸುವ ಕಾರ್ಯವು ಸಿಮೆಂಟ್‌ ದೊರೆಯುವ ಈ ಕಾಲದಲ್ಲಿಯೂ ದುಸ್ಸಾದ್ಯವಾದ ಕೆಲಸವಾಗಿದೆ ಎಂದಿದ್ದಾರೆ. ಅವರ ಪ್ರಕಾರ (ಪೆಟ್ರಿಯವರ ಪ್ರಕಾರ ಸಿಮೆಂಟ್‌) ಗಾರೆಯು ಕಲ್ಲುಗಳು ಒಂದಕ್ಕೊಂದು ಸರಿಯಾಗಿ ಹೊಂದಿಕೊಳ್ಳುವಂತೆ ಮಾಡಿ ಈ ಅಸಾಧ್ಯವಾದ ಕೆಲಸವನ್ನು ಸಾಧ್ಯವಾಗಿಸಿ ತೋರಿಸಿದೆ.

ನಿರ್ಮಾಣ ಸಿದ್ಧಾಂತಗಳು

  • ಪಿರಾಮಿಡ್‌ ಕಟ್ಟಡ ನಿರ್ಮಾಣ ತಂತ್ರಜ್ಞಾನದ ಬಗ್ಗೆ ಹಲವು ಬಗೆಯ ವಾದಗಳಿವೆ. ಕಲ್ಲುಗಳನ್ನು ಗಣಿಯಿಂದ ತಂದವುಗಳೆಂದು ಎಲ್ಲರೂ ನಂಬುವುದಿಲ್ಲ. ವಸ್ತು ವಿಜ್ಞಾನ ಶಾಸ್ತ್ರಜ್ಞರಾದ ಜೊಸೆಫ್‌ ಡೆವಿದೊವಿಟ್ಸ್‌ ಹೇಳುವ ಪ್ರಕಾರ ಅವರು ಸುಣ್ಣದಕಲ್ಲುಗಳಿಂದಲೇ ಗಾರೆಯುನ್ನೂ ತಯಾರಿಸಿದ್ದಾರೆ ಎಂದು ಹೆಳುತ್ತಾರೆ ಆದರೆ ಅದನ್ನು ಇತರ ಈಜಿಪ್ತ್‌ ಶಾಸ್ತ್ರಜ್ಞರು ಒಪ್ಪುವುದಿಲ್ಲ. ಉಳಿದವರ ಪ್ರಕಾರ ದೊಡ್ಡಕಲ್ಲುಗಳನ್ನೇ ಪಿರಾಮಿಡ್‌ನ ಹತ್ತಿರ ಸಾಗಿಸಲಾಗಿದೆ.
  • ಆದರೆ ಅವರು ಅದನ್ನು ಎಳೆದು ತಂದರೋ, ಎತ್ತಿ ತಂದರೋ, ಅಥವಾ ಉರುಳಿಸುತ್ತಾ ಬಂದರೋ ಎಂಬುದನ್ನು ನಂಬುವುದಕ್ಕಾಗುವುದಿಲ್ಲ. ಗ್ರೀಕರು ನಂಬುವ ಪ್ರಕಾರ ಗುಲಾಮರ ದುಡಿಮೆಯನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಆದರೆ ಆಧುನಿಕ ಈಜಿಪ್ತ್‌ ಶಾಸ್ತ್ರಜ್ಞರ ಪ್ರಕಾರ ಹತ್ತಾರು ಸಾವಿರ ಚಾಣಾಕ್ಷ ಕೆಲಸಗಾರರಿಂದ ಈ ಕಾರ್ಯವನ್ನು ಮಾಡಲಾಗಿದೆ. ವೆರ್ನರ್‌ ಅವರ ಪ್ರಕಾರ ೧೦೦,೦೦೦ ಪುರುಷರ ಎರಡು ಗುಂಪು ಗಳಿದ್ದು, ೨೦,೦೦೦ ಐದು ಜಾ ಅಥವಾ ಫೈಲ್ (ಗುಂಪು) ದಂತೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಶ್ರೇಣಿ ಹಂಚಿಕೆ ನಡೆಸಲಾಗಿತ್ತು. ತದನಂತರ ಅವರ ಚಾಣಾಕ್ಷತನಕ್ಕೆ ತಕ್ಕಂತೆ ಅವರನ್ನು ವಿಭಾಗಿಸಲಾಗಿತ್ತು.
  • ಪಿರಾಮಿಡ್‌ನ ಅತಿದೊಡ್ಡ ರಹಸ್ಯವು ಅದರ ನಿರ್ಮಾಣದಲ್ಲಿನ ಯೋಜನೆಯಾಗಿದೆ. ಜೊನ್‌ ರೊಮರ್‌ ಅವರ ಪ್ರಕಾರ ಈ ಪಿರಾಮಿಡ್‌ ಕೂಡ ಇತರ ಪಿರಾಮಿಡ್‌ನ ತಂತ್ರಜ್ಞಾನವನ್ನೇ ಒಳಗೊಂಡಿದ್ದು ಕೆಳಂತಸ್ತಿನಲ್ಲಿ ೧ ರಿಂದ ೧ ಅನುಪಾತವನ್ನು ಹೊಂದಿದೆ. ಅವರು ಬರೆದಂತೆ ಈ ಕೆಲಸದ ಯೋಜನೆಯ ಚಿತ್ರಣವು ಅಷ್ಟೊಂದು ನಿಖರವಾಗಿದ್ದರಿಂದಲೇ ಇಂತಹ ದೊಡ್ಡ ನಿರ್ಮಾಣವನ್ನು ಮಾಡಲು ಸಾಧ್ಯವಾಯಿತು.

ಒಳಾಂಗಣ‌

  • ಮಹಾ ಪಿರಾಮಿಡ್‌ನ ಆರ‍ಂಭದ ಪ್ರವೇಶ ಭೂ ಮಟ್ಟದಿಂದ 17 metres (56 ft) ಆಗಿ ಲಂಬವಾಗಿದೆ ಹಾಗೂ ಪಿರಾಮಿಡ್‌ನ ಮಧ್ಯ ರೇಖೆಯಿಂದ 7.29 metres (23.9 ft) ಪೂರ್ವದಲ್ಲಿದೆ. ಈ ಮೂಲ ಪ್ರವೇಶದಿಂದ ಒಳಭಾಗದಲ್ಲಿ .96 metres (3.1 ft) ಎತ್ತರವಾದ ಹಾಗೂ 1.04 metres (3.4 ft) ಅಗಲವಾದ ಕೆಳಗಿಳಿಯುವ ದಾರಿ ಇದೆ, ಇದು ೨೬° ೩೧'೨೩" ದ ಕೋನದಲ್ಲಿ ಪಿರಾಮಿಡ್‌ನ ಕಲ್ಲುಕೆಲಸದ ಮೂಲಕ ಕೆಳಗೆ ಹೋಗಿ ಅಡಿಯಲ್ಲಿರುವ ತಳಪಾಯಗೆ ಹೋಗುತ್ತದೆ.
  • 105.23 metres (345.2 ft) ದಾರಿ ಆದ ಮೇಲೆ ಹಾದಿ ಸಮತಲವಾಗುತ್ತದೆ ಹಾಗೂ ಇನ್ನು 8.84 metres (29.0 ft) ವರೆಗೆ ಮುಂದುವರಿದು ಕೆಳಗಿನ ಕೋಣೆಗೆ ಹೋಗುತ್ತದೆ. ಇದು ಸಂಪೂರ್ಣಗೊಂಡಿಲ್ಲವೆಂದು ಕಾಣುತ್ತದೆ. ಕೆಳಗಿನ ಕೋಣೆಯ ದಕ್ಷಿಣ ಗೋಡೆಯಲ್ಲಿ ಸಮತಲ ದಾರಿಯ ಮುಂದುವರಿಕೆಯಿದೆ; ಕೋಣೆಯ ನೆಲದಲ್ಲಿ ಒಂದು ಗುಂಡಿಯನ್ನು ಕೂಡ ತೋಡಲಾಗಿದೆ. ಕೆಲವು ಇಜಿಪ್ಟೋಶಾಸ್ತ್ರಜ್ಞರು ಸೂಚಿಸುವ ಪ್ರಕಾರ ಈ ಕೆಳಗಿನ ಕೋಣೆಯನ್ನು ಆರಂಭದಲ್ಲಿ ಹೂಳುವುದಕ್ಕೆ ಉದ್ದೇಶಿಸಿತು, ಆದರೆ ನಂತರ ರಾಜ ಖುಫು ತನ್ನ ಮನಸು ಬದಲಾಯಿಸಿ ಪಿರಾಮಿಡ್‌ನ ಎತ್ತರದ ಮೇಲಿನ ಭಾಗದಲ್ಲಿ ಇರಲು ಬಯಸಿದ.
  • ಪ್ರವೇಶದಿಂದ 28.2 metres (93 ft)ದಲ್ಲಿ ಕೆಳಗಿಳಿಯುವ ದಾರಿಯ ಛಾವಣಿಯ ಮೇಲೆ ಒಂದು ಚೌಕ ತೂತು ಇದೆ. ಆರಂಭದಲ್ಲಿ ಹಾಸುಗಲ್ಲಿನಿಂದ ಅಡಗಿಸಿಟ್ಟ, ಇದು ಆರೋಹಿಸುವ ದಾರಿಯ ಪ್ರಾರಂಭ. ಆರೋಹಿಸುವ ದಾರಿ 39.3 metres (129 ft) ಉದ್ದ ಇದ್ದು, ಕೆಳಗಿಳಿಯುವ ದಾರಿಯಷ್ಟು ಅಗಲ ಹಾಗೂ ಎತ್ತರವಿದ್ದು, ಅದರ ಇಳಿಜಾರು ಕೂಡ ನಿಖರವಾಗಿ ಅದೇ ಸಮಾನಾದ ಕೋನದಲ್ಲಿ ಇದೆ. ಆರೋಹಿಸುವ ದಾರಿಯ ಕೆಳಭಾಗ ಮೂರು ದೊಡ್ಡ ಬೆಣಚು ಕಲ್ಲು ಬಂಡೆಗಳಿಂದ ಮುಚ್ಚಲಾಗಿದೆ. ಪ್ರತ್ಯೇಕ 1.5 metres (4.9 ft) ರಷ್ಟು ಉದ್ದ. ಭವ್ಯವಾದ ಉದ್ದನೆಯ ಕಿರುಹಾದಿಯ ಆರಂಭದಲ್ಲಿ ಬಲಗೈ ಭಾಗದತ್ತ ಗೋಡೆಯಲ್ಲಿ ಒಂದು ತುಂಡು ಮಾಡಿದ ತೂತು ಇದೆ (ಹಾಗೂ ಈಗ ತಂತಿಗಳ ಕಸೂತಿ ಕೆಲಸದಿಂದ ಮುಚ್ಚಲಾಗಿದೆ). ಇದು ಲಂಬವಾದ ಸುರಂಗದ್ವಾರದ ಪ್ರಾರಂಭ.
  • ಇದು ಪಿರಾಮಿಡ್‌ನ ಕಲ್ಲುಕೆಲಸದ ಕ್ರಮವಿಲ್ಲದ ದಾರಿಯಿಂದ ಮುಂದುವರಿದು ಕೆಳಗಿಳಿಯುವ ದಾರಿಯನ್ನು ಸೇರುತ್ತದೆ. ಭವ್ಯವಾದ ಉದ್ದನೆಯ ಕಿರುಹಾದಿಯ ಆರಂಭದಲ್ಲಿ "ರಾಣಿಯ ಕೋಣೆ"ಯತ್ತ ಹೋಗುವ ಒಂದು ಸಮತಲವಾದ ದಾರಿ ಕೂಡ ಇದೆ. ಈ ದಾರಿ ಬಹು ದೂರದವರೆಗೂ ೧.೧m (೩'೮") ಎತ್ತರವಾಗಿದೆ, ಆದರೆ ಕೋಣೆಯ ಹತ್ತಿರ ನೆಲದ ಮೇಲೆ ಒಂದು ಮೆಟ್ಟಿಲಿದೆ, ಅದರ ನಂತರ ದಾರಿ 1.73 metres (5.7 ft) ಎತ್ತರವಾಗಿದೆ. ರಾಣಿಯ ಕೋಣೆಯು ಪಿರಾಮಿಡ್‍ನ ಉತ್ತರ ಹಾಗೂ ದಕ್ಷಿಣ ಮುಖಗಳಿಂದ ನಿಖರವಾಗಿ ಅರ್ಧ-ದಾರಿಯಲ್ಲಿದೆ ಮತ್ತು ಉತ್ತರದಿಂದ ದಕ್ಷಿಣಕ್ಕೆ 5.75 metres (18.9 ft) ಅಳತೆ, ಪೂರ್ವದಿಂದ ಪಶ್ಚಿಮಕ್ಕೆ 5.23 metres (17.2 ft) ಅಳತೆಯಿದ್ದು ನೆಲದ ಮೇಲೆ 6.23 metres (20.4 ft) ಶಿಖರದೊಂದಿಗೆ ಒಂದು ಮೊನಚಾದ ಛಾವಣಿ ಹೊಂದಿದೆ. ಕೋಣೆಯ ಪೂರ್ವ ಅಂತ್ಯಯದಲ್ಲಿ ಒಂದು ಆವರಣ 4.67 metres (15.3 ft) ಎತ್ತರವಿದೆ. ಆವರಣದ ಆರಂಭದ ಆಳ 1.04 metres (3.4 ft) ಇತ್ತು, ಆದರೆ ಅಂದಿನಿಂದ ನಿಧಿ ಹುಡುಕುವವರಿಂದ ಆಳವಾಗಿದೆ.
  • ರಾಣಿಯ ಕೋಣೆಯ ಉತ್ತರ ಹಾಗೂ ದಕ್ಷಿಣ ಗೋಡೆಗಳಲ್ಲಿ ಸುರಂಗದ್ವಾರಗಳಿವೆ, ರಾಜನ ಕೋಣೆಯ ಸುರಂಗದ್ವಾರ ತಕ್ಷಣ ಮೇಲ್ಗಡೆಗೆ ಬಾಗಿದಂತೆ ಇಲ್ಲಿ ಇಲ್ಲ, ಈ ಸುರಂಗದ್ವಾರಗಳು ಸುಮಾರು ೨m (೬') ವರೆಗೆ ಸಮತಲವಾಗಿದ್ದು ನಂತರ ಮೇಲ್ಗಡೆ ಬಾಗುತ್ತವೆ. ವೆನ್ಮನ್ ಡಿಕ್ಸೊನ್, ಒಬ್ಬ ಬ್ರಿಟಿಷ್ ಇಂಜಿನೀಯರ್ ಇಂದ ೧೮೭೨ರಲ್ಲಿ ಸಮತಲದ ಅಂತರವನ್ನು ಕಡಿಮೆಗೊಳಿಸಲಾಗಿತ್ತು. ಇವರು ರಾಜರ ಕೋಣೆಯಲ್ಲಿ ಇಂತಹ ಸುರಂಗದ್ವಾರಗಳು ಇರಬೇಕು ಎಂಬ ದೃಷ್ಟಾಂತವನ್ನು ನಂಬಿದ್ದರು. ಅವನು ಸರಿ ಎಂದು ರುಜುವಾತಾಯಿತು, ಆದರೆ ಸುರಂಗ ದ್ವಾರಗಳು ಪಿರಾಮಿಡ್‍ನ ಬಾಹ್ಯಾ ಮುಖಗಳಿಗೆ ಅಥವಾ ರಾಣಿಯ ಕೋಣೆಗೆ ಸಂಪರ್ಕವಾಗದಿರದ ಕಾರಣ, ಅವುಗಳ ಉದ್ದೇಶ ತಿಳಿದಿಲ್ಲ.
  • ಅವನ ಒಂದು ಸುರಂಗದ್ವಾರದ ಅಂತ್ಯದಲ್ಲಿ, ಡಿಕ್ಸನ್ ತಿಳಿಯದ ಉದ್ದೇಶದ ಕಪ್ಪು ಡೈಯೊರೈಟ್‌ನ ಒಂದು ಚೆಂಡು ಹಾಗೂ ಒಂದು ಕಂಚಿನ ಉಪಕರಣಗಳನ್ನು ಸಂಶೋಧಿಸಿದರು. ಎರಡೂ ವಸ್ತುಗಳು ಪ್ರಸ್ತುತ ಬ್ರಿಟಿಷ್ ವಸ್ತು ಸಂಗ್ರಹಣಾಲಯದಲ್ಲಿವೆ.

೧೯೯೨ರಲ್ಲಿ ಒಬ್ಬ ಜರ್ಮನ್ ಇಂಜಿನೀಯರ್ ರುಡೊಲ್ಫ್ ಗ್ಯಾಂಟೆಂಬ್ರಿಂಕ್ ರಾಣಿಯ ಕೋಣೆಯ ಸುರಂಗದ್ವಾರಗಳನ್ನು ಅನ್ವೇಷಿಸಿದರು. ಇದನ್ನು ಅವರು ತಮ್ಮ ಸ್ವಂತ ವಿನ್ಯಾಸದ "Upuaut ೨" ಎಂದು ಕರೆಯಲಾದ ತೆವಳುವಿಕೆಯ ರೋಬೊಟ್ ಅನ್ನು ಬಳಸಿ ಅನ್ವೇಷಿಸಿದರು. ಒಂದು ಸುರಂಗದ್ವಾರ ಸುಣ್ಣದ ಕಲ್ಲಿನ "ಬಾಗಿಲುಗಳ" ಜೊತೆ ಎರಡು ತಾಮ್ರದ ಸವೆದುಹೋದ "ಹಿಡಿಕೆಗಳಿಂದ" ಮುಚ್ಚಲಾಗಿತ್ತು. ಕೆಲವು ವರ್ಷಗಳ ನಂತರ ನ್ಯಾಷ್ನಲ್ ಜಿಯೋಗ್ರಾಫಿಕ್ ಸೊಸೈಟಿ ಅದೇ ತರಹದ ಒಂದು ರೋಬೊಟ್ ಅನ್ನು ಸೃಷ್ಟಿಸಿತು.

  • ಇದು ದಕ್ಷಿಣ ದ್ವಾರದಲ್ಲಿ ಒಂದು ಚಿಕ್ಕ ತೂತನ್ನು ಕೊರೆಯಿತು ಹಾಗೂ ಅದರ ಹಿಂದೆ ಮತ್ತೊಂದು ದೊಡ್ಡ ದ್ವಾರವನ್ನು ಕಂಡಿತು. ತಿರುಚು ಹಾಗೂ ತಿರುಗುವಿಕೆಗಳಿಂದ ಸಂಚರಿಸಲು ಕಷ್ಟವಾಗಿದ್ದ ಉತ್ತರದ ದಾರಿ ಕೂಡ ಒಂದು ಬಾಗಿಲಿನಿಂದ ತಡೆಗಟ್ಟಲಾಗಿತ್ತು ಎಂದು ಕಂಡು ಬಂತು.
  • ಭವ್ಯವಾದ ಉದ್ದನೆಯ ಕಿರುಹಾದಿಯ ಆರೋಹದ ದಾರಿಯ ಇಳಿಜಾರನ್ನು ಮುಂದುವರಿಸುತ್ತದೆ, ಆದರೆ ಅದು 8.6 metres (28 ft) ಎತ್ತರ ಹಾಗೂ 46.68 metres (153.1 ft) ಉದ್ದ ಇದೆ. ತಳದಲ್ಲಿ ಇದು 2.06 metres (6.8 ft) ಅಗಲವಿದೆ, ಆದರೆ 2.29 metres (7.5 ft) ನಂತರ ಪ್ರತೇಕ ಭಾಗದಲ್ಲಿ ಗೋಡೆಯೊಳಗಿನ ಬಂಡೆಗಳು ಒಳಭಾಗದತ್ತ 7.6 centimetres (3.0 in) ಇಂದ ಚೂಚುದೂಲಗೊಂಡಿವೆ. ಇಂತಹ ಏಳು ಮೆಟ್ಟಲುಗಳಿವೆ, ಹೀಗಾಗಿ ಭವ್ಯವಾದ ಉದ್ದನೆಯ ಕಿರುದಾರಿಯ ಮೇಲೆ ಬರಿ 1.04 metres (3.4 ft) ಅಗಲವಿದೆ. ನೆಲದ ಉದ್ದನೆಯ ಕಿರುಹಾದಿಯಿಂದ ಸ್ವಲ್ಪ ಮಟ್ಟದ ಕೋನದಲ್ಲಿ ಹಾಸುಗಲ್ಲುಗಳಿಂದ ಛಾವಣಿ ತಯಾರಿಸಲಾಗಿದೆ, ಪ್ರತಿಯೊಂದು ಕಲ್ಲು ಉದ್ದನೆಯ ಕಿರುಹಾದಿಯ ಮೇಲಿರುವ ಕಡಿತದಲ್ಲಿ ತಡೆಹಲ್ಲು ಸಾಲುಗಳಂತೆ ಸೇರಿ ಬೆಸೆಯುವಂತೆ ಇದೆ ಕೆಳಗಿರುವ ಬಂಡೆಯ ಮೇಲೆ ಊರುವ ಬದಲು ಉದ್ದನೆಯ ಕಿರುಹಾದಿಯ ಗೋಡೆ ಪ್ರತಿಯೊಂದು ಬಂಡೆಯನ್ನು ಆಧಾರಿಸಲಿ ಎಂಬುದೇ ಅದರ ಉದ್ದೇಶವಾಗಿತ್ತು, ಇಲ್ಲವಾದರೆ ಇದು ಉದ್ದನೆಯ ಕಿರುಹಾದಿಯ ಕೆಳಗಿನ ಭಾಗಕ್ಕೆ ಒಪ್ಪಿಕೊಳ್ಳಲಾಗದ ಒಟ್ಟು ಒತ್ತಡಾವನ್ನು ಕೊಡುತಿತ್ತು.
  • ಉದ್ದನೆಯ ಕಿರುಹಾದಿಯ ಮೇಲ್ಭಾಗದ ಬಲಗೈಯತ್ತ ಛಾವಣಿಯ ಹತ್ತಿರ ಒಂದು ತೂತು ಇದೆ, ಇದು ಒಂದು ಚಿಕ್ಕ ಸುರಂಗದಲ್ಲಿ ತೆರೆಯುತ್ತದೆ, ಇದರಿಂದ ಅತಿ ಕೆಳಗಿನ ತಗ್ಗಿರುವ ಕೋಣೆಗಳಿಗೂ ಪ್ರವೇಶ್ ಪಡೆಯಬಹುದು. ಇತರ ತಗ್ಗಿರುವ ಕೋಣೆಗಳು ೧೮೩೭/೮ ರಲ್ಲಿ ಕೊಲ್ನೆಲ್ ಹೊವಾರ್ಡ್ ವೈಸ್ ಹಾಗೂ J. S. ಪೆರಿಂಗ್ ಅವರಿಂದ ಸಂಶೋಧಿಸಲಾಗಿತ್ತು. ಇವರು ಸುರಂಗಗಳನ್ನು ಸ್ಫೋಟದ ಪುಡಿಯನ್ನು ಬಳಸಿ ಮೇಲ್ಗಡೆಯತ್ತ ತೋಡಿದರು. ಉದ್ದನೆಯ ಕಿರುದಾರಿಯ ನೆಲದಲ್ಲಿ ಒಂದು ಹಲಗೆಗಳ ಓಡೆ ಅಥವಾ ಮೆಟ್ಟಿಲು ಪ್ರತ್ಯೇಕ ಬದಿಯಲ್ಲಿದೆ. 51 centimetres (20 in) ಅಗಲ, ಅವುಗಳ ನಡುವೆ ಕೆಳಗಡೆಯ ಇಳಿಜಾರನ್ನು 1.04 metres (3.4 ft) ಅಗಲಕ್ಕೆ ಬಿಡಲಾಗಿದೆ. ಹಲಗೆಗಳ ಓಡೆಯಲ್ಲಿ ೫೪ ಕಂಡಿಗಳಿವೆ.
  • ಉದ್ದನೆಯ ಕಿರುಹಾದಿಯ ಗೋಡೆಗಳ ಮೇಲೆ ಪ್ರತಿಯೊಂದು ಬದಿಯಲ್ಲಿ ೨೭ ಇದ್ದು ಅವು ಲಂಬವಾದ ಹಾಗೂ ಸಮತಲ ಕಂಡಿಗಳ್ಇಗೆ ಹೋಲುತ್ತವೆ. ಇದು ಒಂದು ಶಿಲುಬೆ ಆಕಾರಕ್ಕೆ ರೂಪಗೊಂಡು ಹಲಗೆಗಳ ಓಡೆಯ ಕಂಡಿಯಿಂದ ಮೇಲಕ್ಕೇರುತ್ತದೆ. ಈ ಕಂಡಿಗಳ ಉದ್ದೇಶ ತಿಳಿದಿಲ್ಲ. ಆದರೆ ಆರೋಹಿಸುವ ದಾರಿಯಷ್ಟು ಅಗಲವಿರುವ ಉದ್ದನೆಯ ಕಿರುದಾರಿಯ ನೆಲದಲ್ಲಿರುವ ಮಧ್ಯದ ಮೋರಿಯು, ಭಾರಿ ಉದ್ದನೆಯ ಕಿರುದಾರಿಯಲ್ಲಿ ತಡೆಯುವ ಬಂಡೆಗಳನ್ನು ಸಂಗ್ರಹಿಸಲು ಬಳಸಿರಬಹುದು ಹಾಗೂ ಅವುಗಳನ್ನು ದಾರಿಯಲ್ಲಿ ಕುಸಿದು ಬೀಳದೆ ಹಿಡಿದಿರಲು ಈ ಕಂಡಿಗಳು ಮರದತೊಲೆಗಳನ್ನು ಹಿಡಿದಿರಿಬಹುದು ಎಂದು ಅಂದಾಜು ಮಾಡಲಾಗಿದೆ. ಇದು, ಬದಲಿಗೆ, ಆರೋಹಿಸುವ ದಾರಿಯನ್ನು ಸಂಪೂರ್ಣವಾಗಿ ತುಂಬಲು ಆರಂಭದಲ್ಲಿ ಮೂರು ತಡೆಯುವ ಬಂಡೆಗಳಿಗಿಂತ ಹೆಚ್ಚು ಉದ್ದೇಶಿತವಿತ್ತು ಎಂಬ ಒಂದು ಪ್ರಸ್ತಾಪಕ್ಕೆ ಎಡೆಯಾಗಿದೆ.
  • ಭಾರಿ ಉದ್ದನೆಯ ಕಿರುದಾರಿಯ ಮೇಲೆ ಸುಮಾರು 1.02 metres (3.3 ft) ಉದ್ದದ ಸಮತಲವಾದ ದಾರಿಗೆ ಎಡೆ ಮಾಡುವ ಒಂದು ಮೆಟ್ಟಿಲಿದೆ, ಇಲ್ಲಿ ನಾಲ್ಕು ಕಂಡಿಗಳು ಪತ್ತೆಯಾಗಿವೆ, ಅವುಗಳಲ್ಲಿ ಮೂರು ಬಹುಶಃ ಕೋಟೆ ಕೊತ್ತಳಗಳಲ್ಲಿರುವ ದೊಡ್ಡ ಗ್ರಾನೈಟ್ ಸಲಾಕೆಯ ಬಾಗಿಲುಗಳನ್ನು ಹಿಡಿಯಲು ಉದ್ದೇಶಿತವಿರಬಹುದು. ಪೆಟ್ರೆಯಿಂದ ಕೆಳಗಿಳಿಯುವ ದಾರಿಯಲ್ಲಿ ಕಂಡು ಹಿಡಿಯಲ್ಪಟ್ಟ ಗ್ರಾನೈಟ್‌ನ ತುಂಡುಗಳು ಈ ಕಣ್ಮರೆಯಾದ ಬಾಗಿಲುಗಳಿಂದ ಬಂದಿರಬಹುದು. ರಾಜನ ಕೋಣೆ ಪೂರ್ವದಿಂದ ಪಶ್ಚಿಮದವರೆಗೆ 10.47 metres (34.4 ft) ಹಾಗೂ ಉತ್ತರದಿಂದ ದಕ್ಷಿಣದವರೆಗೆ 5.234 metres (17.17 ft) ರಷ್ಟು ಇದೆ.
  • ಈ ಅಂತಸ್ತಿನ ಮೇಲೆ ಒಂದು ಚಪ್ಪಟೆ ಛಾವಣಿ 5.974 metres (19.60 ft) ಇದೆ. ನೆಲದಿಂದ ೦.೯೧ m (೩ ft) ಎತ್ತರದಲ್ಲಿ ಉತ್ತರ ಹಾಗೂ ದಕ್ಷಿಣ ಗೋಡೆಗಳ ಮೇಲೆ ಎರಡು ಕಿರಿದಾದ ಸುರಂಗದ್ವಾರಗಳಿವೆ (ಪಿರಾಮಿಡ್‌ಯೊಳಗೆ ಗಾಳಿಯ ಚಲಾವಣೆಯನ್ನು ಇರಿಸಲು ಒಂದನ್ನು ಈಗ ಸೆಳೆಪಂಖದಿಂದ ತುಂಬಲಾಗಿದೆ). ಈ ಸುರಂಗದ್ವಾರಗಳ ಉದ್ದೇಶ ಸ್ಪಷ್ಟವಾಗಿಲ್ಲ: ಅವುಗಳು ನಕ್ಷತ್ರಗಳ ಆಧಾರದ ಮೇಲೆ ನಿಲ್ಲಿಸಲ್ಪಟ್ಟವುಗಳಾಗಿವೆ ಅಥವಾ ಉತ್ತರ ಮತ್ತು ದಕ್ಷಿಣ ಆಕಾಶದ ಆಧಾರದ ಮೇಲೆ. ಆದರೆ ಅವುಗಳಲ್ಲಿ ಒಂದು ನಾಯಿಯ ಕಾಲಿನ ರೀತಿ ಯಲ್ಲಿದ್ದು ಅದು ಅವುಗಳ ಮೂಲಕ ನಕ್ಷತ್ರಗಳನ್ನು ನೋಡಲಾಗುವಂತೆ ಕಟ್ಟಲಾಗಿಲ್ಲ ಎಂಬುದು ಸ್ಥಿರವಾಗುತ್ತದೆ. ಇಜಿಪ್ಟೋಶಾಸ್ತ್ರಜ್ಞರು ಹಲವು ಸಮಯದವರೆಗೆ ಇವುಗಳು ವಾತಾಯನ ವ್ಯವಸ್ಥೆಗಿರುವ "ಗಾಳಿ ಸುರಂಗದ್ವಾರಗಳು" ಎಂದು ನಂಬಿದ್ದರು.
  • ಈ ಕಲ್ಪನೆಯನ್ನು ವಿಸ್ತ್ರತವಾಗಿ ತ್ಯಜಿಸಲಾಗಿದೆ, ಕಾರಣ ರಾಜನ ಆತ್ಮ ಸ್ವರ್ಗಕ್ಕೆ ಏರಲು ಇರುವ ಸಾಂಪ್ರದಾಯಿಕ ಉದ್ದೇಶಕ್ಕೆ ಸಂಬಂಧಪಟ್ಟಂತೆ ಈ ಸುರಂಗದ್ವಾರಗಳ ಒಲವು ಇತ್ತು. ರಾಜನ ಕೋಣೆ ಸಂಪೂರ್ಣವಾಗಿ ಗ್ರಾನೈಟ್‌ ಮುಖದಾಗಿದೆ. ಛಾವಣಿಯ ಮೇಲೆ, ಒಟ್ಟು ಸುಮಾರು ೪೦೦ ಟನ್ನಗಳಷ್ಟು ತೂಕದ ಹಾಸುಗಲ್ಲಿನಿಂದ ನಿರ್ಮಿತವಾಗಿದ್ದು ತಗ್ಗಿದ ಕೋಣೆಗಳು ಎಂದು ಪ್ರಚಲಿತವಾದ ಐದು ಕೋಣೆಗಳಿವೆ. ಮೊದಲ ನಾಲ್ಕು, ರಾಜನ ಕೊಣೆಯಂತೆ, ಕೊಣೇಯ ಮೇಲೆ ನೆಲದಿಂದ ನಿರ್ಮಿತ ಚಪ್ಪಟೆ ಛಾವಣಿಗಳನ್ನು ಹೊಂದಿವೆ, ಆದರೆ ಕೊನೆಯ ಕೋಣೆಯಲ್ಲಿ ಮೊನಚಾದ ಛಾವಣಿ ಇದೆ.
  • ಒಂದು ಉದ್ದ ನಳಿಕಾವಾದ್ಯವನ್ನು ಮೊದಲನೆಯ ಕೊಣೆಯ ಒಳಮಾಳಿಗೆಯಲ್ಲಿರುವ ಒಂದು ಬಿರುಕಿನ ಮೂಲಕ ತಳವುದರಲ್ಲಿ ಸಫಲನಾದಾಗ ವೈಸ್ ಮೇಲಿನ ಕೊಣೆಗಳ ಉಪಸ್ಥಿತಿಯನ್ನು ಸಂದೇಹಿಸಿದ. ಕೆಳಗಿನಿಂದ ಮೆಲ್ಗಡೆಗೆ, ಕೋಣೆಗಳು "ಡೆವಿಡ್ಸನ್ ಕೋಣೆ", "ವೆಲಿಂಗ್ಟನ್ ಕೋಣೆ", "ಲೇಡಿ ಆರ್ಬುಥ್ನೊಟ್‌ಳ ಕೋಣೆ" ಹಾಗೂ "ಕ್ಯಾಂಪ್ಬೆಲ್‌ರ ಕೋಣೆ" ಎಂದು ಪ್ರಚಲಿತಗೊಂಡಿವೆ. ಕೋಣೆಯ ಮೇಲಿನ ಕಲ್ಲಿನ ತೂಕದಿಂದ ರಾಜನ ಕೋಣೆಯ ಛಾವಣಿ ಕುಸಿದು ಹೋಗುವ ಸಾಧ್ಯತೆಯಿಂದ ಸುರಕ್ಷಿತಗೊಳಿಸಲು ಈ ಕಕ್ಷೆಗಳು ಉದ್ದೇಶಿತವಾಗಿವೆ ಎಂದು ನಂಬಲಾಗಿದೆ.
  • ಈ ಕೋಣೆಗಳನ್ನು ನೋಡುವ ಉದ್ದೇಶವಿರದಿದ್ದ ಕಾರಣ, ಅವು ಯಾವುದೇ ರೀತಿಯಲ್ಲಿ ಪೂರ್ಣಗೊಂಡಿಲ್ಲ ಹಾಗೂ ಕೆಲವು ಕಲ್ಲುಗಳ ಮೇಲೆ ಮೇಸ್ತ್ರಿಯ ಗುರುತುಗಳು ಇನ್ನು ಚಿತ್ರಿತವಿದೆ. ಕ್ಯಾಂಪ್ಬೆಲ್‌ರ ಕೋಣೆಯ ಒಂದು ಕಲ್ಲಿನ ಮೇಲೆ ಒಂದು ಗುರುತಿದೆ, ಇದು ಕೆಲಸಗಾರರ ಒಂದು ಗುಂಪಿನ ಹೆಸರು ಎಂದು ಗೋಚರವಾಗುತ್ತದೆ, ಪಿರಾಮಿಡ್‌ನಲ್ಲಿ ಫರೊಹ್ ಖುಫು‌ಗೆ ಇದೊಂದೆ ಉಲ್ಲೇಖವಾಗಿ ನಿಗಮಿತಗೊಂಡಿದೆ. ರಾಜನ ಕೋಣೆಯಲ್ಲಿರುವ ಏಕಮಾತ್ರ ವಸ್ತು ಒಂದು ಲಂಬಾತ್ಮಕ ಗ್ರಾನೈಟ್ "ಸಾರ್ಕೊಫಾಗಸ್", ಇದರ ಒಂದು ಮೂಲೆ ತುಂಡಾಗಿದೆ.
  • ಆರೋಹಿಸುವ ದಾರಿಗಿಂತ ಸಾರ್ಕೊಫಾಗಸ್ ಸ್ವಲ್ಪ ದೊಡ್ಡದಾಗಿದೆ, ಛಾವಣೆಯನ್ನು ಅದರ ಜಾಗದಲ್ಲಿ ಇಡುವ ಮುಂಚೆ ಇದನು ಇಟ್ಟಿರಬಹುದು ಎಂದು ಇದು ಸೂಚಿಸುತ್ತದೆ. ಕೋಣೆಯ ಗೋಡೆಗಳ ಸೂಕ್ಷ್ಮವಾದ ಕಲ್ಲುಕೆಲಸದಲ್ಲಿ ಇಲ್ಲದ ಹಾಗೆ, ಸಾರ್ಕೊಫಾಗಸ್ ಅನ್ನು ಹಲವು ಸ್ಥಳಗಳಲ್ಲಿ ಗರಗಸದ ಗುರುತುಗಳು ಕಾಣುವಂತೆ ಒರಟಾಗಿ ಸಂಪೂರ್ಣಗೊಳಿಸಲಾಗಿದೆ. ಅದೇ ಕಾಲದ ಇತರ ಪಿರಾಮಿಡ್‌ಗಳಲ್ಲಿ ಕಂಡು ಬಂದ ಅಲಂಕೃತ ಸಾರ್ಕೊಫಾಗಿ ಹಾಗೂ ಸೂಕ್ಷ್ಮ ಸಂಪೂರ್ಣತೆಗೆ ಇದು ವಿರುದ್ಧವಾಗಿದೆ. ಪೆಟ್ರೆಯ ಸಲಹೆ ಪ್ರಕಾರ ಅಂತಹದೇ ಒಂದು ಸಾರ್ಕೊಫಾಗಸ್ ಉದ್ದೇಶಿತವಿತ್ತು ಆದರೆ ಅಸ್ವಾನ್‌ಯಿಂದ ಉತ್ತರ ದಿಕ್ಕಿನಲ್ಲಿ ಬರುವ ಹಾದಿಯ ನದಿಯಲ್ಲಿ ಕಾಣೆಯಾದ ಕಾರಣ ಒಂದು ಗಡಿಬಿಡಿಯಲ್ಲಿ ಮಾಡಿದ ಬದಲಿಯನ್ನು ಬಳಸಲಾಗಿತು.

ಪ್ರವೇಶ

  • ಪ್ರಸ್ತುತದಲ್ಲಿ ಪ್ರವಾಸಿಗರು ಮಹಾ ಪಿರಾಮಿಡ್ ಅನ್ನು ಕ್ಯಾಲಿಫ್ ಆಲ್-ಮಾ’ಮುನ್‌ರಿಂದ ಸರಿಸುಮಾರು ಕ್ರಿಶ ೮೨೦ ರ ಸಮಯದಲ್ಲಿ ನೇಮಿಸಲ್ಪಟ್ಟ ಕೆಲಸಗಾರರಿಂದ ನಿರ್ಮಿಸಲ್ಪಟ್ಟ ಲೂಟಿಗಾರರ ಸುರಂಗಮಾರ್ಗದ ಮೂಲಕ ಪ್ರವೇಶಿಸುತ್ತಾರೆ. ಸುರಂಗಮಾರ್ಗವು ಸರಿಸುಮಾರು 27 metres (89 ft) ಗೆ ಪಿರಾಮಿಡ್‌ನ ಕಲ್ಲುಕಟ್ಟಡದ ಮೂಲಕ ನೇರವಾಗಿ ಕತ್ತರಿಸಲ್ಪಟ್ಟಿದೆ, ನಂತರದಲ್ಲಿ ಇಳಿಮುಖವಾಗಿರುವ ಪ್ರದೇಶದಲ್ಲಿ ಅಡ್ದಬರುವ ಕಲ್ಲುಗಳನ್ನು ತಡೆಗಟ್ಟುವುದಕ್ಕೆ ಏರುಮುಖವಾಗಿ ಎಡಕ್ಕೆ ತಿರುಗಿಕೊಂಡಿದೆ.
  • ಈ ಕಲ್ಲುಗಳನ್ನು ತೆಗೆಯುವುದಕ್ಕೆ ಅಸಮರ್ಥರಾದ ಕಾರಣದಿಂದ, ಕೆಲಸಗಾರರು ಏರುಮುಖವಾಗಿರುವ ಪ್ರದೇಶವನ್ನು ತಲುಪುವವರೆಗೆ ಪಿರಾಮಿಡ್‌ನ ಮೃದುವಾದ ಕಲ್ಲುಗಳ ಮೂಲಕ ತಮ್ಮ ಪಾರ್ಶ್ವದಲ್ಲಿ ಸುರಂಗಮಾರ್ಗವನ್ನು ಕೊರೆದರು. ಈ ಪ್ರದೇಶದಿಂದ ಇಳಿಮುಖವಾಗಿರುವ ಪ್ರದೇಶವನ್ನು ಪ್ರವೇಶಿಸುವುದಕ್ಕೆ ಸಾಧ್ಯವಾಗುತ್ತದೆ, ಆದರೆ ಈ ರೀತಿಯ ಪ್ರವೇಶವು ವಾಸ್ತವಿಕವಾಗಿ ನಿಷೇಧಿಸಲ್ಪಟ್ಟಿದೆ.

ಪಿರಾಮಿಡ್ ಸಂಕೀರ್ಣ

  • ಮಹಾ ಪಿರಾಮಿಡ್ ಇದು ಸಣ್ಣ ಪಿರಾಮಿಡ್‌ಗಳನ್ನು ಒಳಗೊಂಡಂತೆ ಹಲವಾರು ಕಟ್ಟಡಗಳ ಒಂದು ಸಂಕೀರ್ಣವಾಗಿದೆ. ಪಿರಾಮಿಡ್ ಗೋಪುರವು (ಮಂದಿರವು) ಪಿರಾಮಿಡ್‌ನ ಪೂರ್ವ ದಿಕ್ಕಿನಲ್ಲಿ ಕಂಡುಬರುತ್ತದೆ ಮತ್ತು ಉತ್ತರದಿಂದ ದಕ್ಷಿಣಕ್ಕೆ 52.2 metres (171 ft) ಉದ್ದವಿದೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ 40 metres (130 ft) ರವರೆಗೆ ವ್ಯಾಪಿಸಿದೆ, ಇದು ಕಪ್ಪು ಅಗ್ನಿಶಿಲೆಯ ನೆಲಗಟ್ಟಿನ ಕಾರಣದಿಂದಾಗಿ ಸಂಪೂರ್ಣವಾಗಿ ಕಾಣದಂತಾಗಿದೆ. ಪಿರಾಮಿಡ್ ಅನ್ನು ಕಂದರ ಮತ್ತು ಕಂದರದ ಮಂದಿರಕ್ಕೆ ಸಂಪರ್ಕಿಸಿದ ಎತ್ತರಿಸಿದ ಕಾಲುದಾರಿಯ ಕೆಲವೇ ಕೆಲವು ಅಲ್ಪಾವಶೇಷಗಳು ಮಾತ್ರವೇ ಅಸ್ತಿತ್ವದಲ್ಲಿವೆ. ಕಂದರದ ದೇಗುಲವು ನಾಜ್ಲೆಟ್ ಎಲ್-ಸಮ್ಮಾನ್‌ರ ಹಳ್ಳಿಯ ಅಡಿಯಲ್ಲಿ ಸ್ಥಾಪಿತವಾಗಲ್ಪಟ್ಟಿದೆ;
  • ಅಗ್ನಿಶಿಲೆಯ ನೆಲಗಟ್ಟು ಮತ್ತು ಸುಣ್ಣದಕಲ್ಲಿನ ಗೋಡೆಗಳು ಕಂಡುಬರುತ್ತವೆ ಆದರೆ ಈ ಪ್ರದೇಶವು ಉತ್ಖನನಕ್ಕೆ (ಗುಣಿ ತೋಡುವುದಕ್ಕೆ) ಯೋಗ್ಯವಾಗಿಲ್ಲ. ಅಗ್ನಿಶಿಲೆಯ ವಿಭಾಗಗಳು ಒಂದು ವಿಧದ ಛೇದಿಸುವಿಕೆಯ ಜೊತೆಗೆ ಸೀಳಲ್ಪಟ್ಟಿರುವ "ಸುಸ್ಪಷ್ಟವಾದ ಸಾಕ್ಷ್ಯವನ್ನು" ತೋರಿಸುತ್ತವೆ.
  • ಅವುಗಳು ಒಂದು ನಿಮಿಷಕ್ಕೆ ೧ ೧/೨  ಇಂಚುಗಳ (೪೦ ಮಿಮೀ) ಪ್ರಮಾಣದಲ್ಲಿ ಸೀಳುವ ಸಾಮರ್ಥ್ಯವನ್ನು ಹೊಂದಿರುವ ಉದ್ದದಲ್ಲಿ ೧೫ ಫೂಟ್ ಇರುವ ಬ್ಲೇಡ್‌ನಿಂದ ಕತ್ತರಿಸಲ್ಪಟ್ಟಿದೆ ಎಂಬುದಾಗಿ ಅಂದಾಜು ಮಾಡಲಾಗಿದೆ. ಜಾನ್ ರೋಮರ್ ಈ "ಉತ್ತಮ ಛೇದಕ"ವು ಒಂದು ತಾಮ್ರದ ಹಲ್ಲೆಯನ್ನು ಹೊಂದಿತ್ತು ಮತ್ತು ೩೦೦ ಎಲ್‌ಬಿಎಸ್ ತೂಕವನ್ನು ಹೊಂದಿತ್ತು ಎಂಬುದಾಗಿ ಸೂಚಿಸುತ್ತಾರೆ. ಅಂತಹ ಒಂದು ಛೇದಕವು ಒಂದು ಮರದ ಊರೆಕಟ್ಟಿಗೆ ಜೋಡಿಸಲ್ಪಟ್ಟಿರುತ್ತದೆ ಮತ್ತು ಕಲ್ಲುಗಳನ್ನು ಕತ್ತರಿಸುವುದಕ್ಕೆ ಹೆಚ್ಚು ಸಂಭಾವ್ಯವಾಗಿ ತರಕಾರಿಗಳ ಎಣ್ಣೆ, ಕತ್ತರಿಸುವ ಮರಳು ಅಥವಾ ಸಾಣೆಕಲ್ಲು ಅಥವಾ ಪೌಂಡೆಡ್ ಕ್ವಾರ್ಟ್ಜ್ ಜೊತೆಗೆ ಬಳಸಲ್ಪಡುತ್ತವೆ ಮತ್ತು ಇದರ ಜೊತೆ ಕಾರ್ಯನಿರ್ವಹಿಸುವುದಕ್ಕೆ ಸುಮಾರು ಹನ್ನೆರಡು ಮಂದಿಗಳ ಅವಶ್ಯಕತೆಯಿರುತ್ತದೆ. ದಕ್ಷಿಣ ಭಾಗದಲ್ಲಿ ಉಪ (ಸಹಾಯಕ) ಪಿರಾಮಿಡ್‌ಗಳು ಕಂಡು ಬರುತ್ತವೆ. ಅವುಗಳು ಜನಪ್ರಿಯವಾಗಿ ರಾಣಿಯ ಪಿರಾಮಿಡ್‌ಗಳು ಎಂಬುದಾಗಿ ಕರೆಯಲ್ಪಡುತ್ತವೆ. ಮೂರು ಪಿರಾಮಿಡ್‌ಗಳು ಸಂಪೂರ್ಣ ಎತ್ತರವಾಗಿರುವಂತೆ ಕಂಡು ಬರುತ್ತವೆ. ಆದರೆ ನಾಲ್ಕನೆಯ ಪಿರಾಮಿಡ್ ಎಷ್ಟು ವಿನಾಶಕ್ಕೊಳಗಾಗಿದೆಯೆಂದರೆ ಇದರ ಆಧಾರ ಕಲ್ಲುಗಳ ಮೊದಲನೆಯ ಸಾಲು ಮತ್ತು ಮೇಲುಕಲ್ಲಿನ ಅವಶೇಷಗಳನ್ನು ಇತ್ತೀಚಿಗೆ ಸಂಶೋಧಿಸುವವರೆಗೆ ಇದರ ಅಸ್ತಿತ್ವವು ಸಂಶಯಾಸ್ಪದವಾಗಿತ್ತು.
  • ಪಿರಾಮಿಡ್‌ನ ಸುತ್ತಮುತ್ತ ನೆಲಗಟ್ಟಿನ ಅಡಿಯಲ್ಲಿ ಇರುವುದು ರಾಣಿ ಹೆಟೆಫೆರೆಸ್‌, ಸ್ನೆಫೆರು ಸಹೋದರಿ-ಪತ್ನಿ ಮತ್ತು ಖುಫುರ ತಾಯಿಯರ ಸ್ಮಾರಕಗಳಾಗಿವೆ. ರೈಸ್ನರ್ ದಂಡಯಾತ್ರೆಯ ಮೂಲಕ ಸಂಶೋಧಿಸಲ್ಪಟ್ಟ ಸಮಾಧಿಯು ಮೊದಲಿನ ಸ್ಥಿತಿಯಲ್ಲಿಯೇ ಉಳಿಯಲ್ಪಟ್ಟಿತ್ತು, ಆದಾಗ್ಯೂ ಜಾಗರೂಕತೆಯಿಂದ ಸೀಲ್ ಮಾಡಲ್ಪಟ್ಟ ಹೆಣದ ಪೆಟ್ಟಿಗೆಯು ಖಾಲಿಯಾಗಿತ್ತು. ಗೀಜಾ ಪಿರಾಮಿಡ್ ಸಂಕೀರ್ಣವು ಖುಫು ಪಿರಾಮಿಡ್ ಸಂಕೀರ್ಣಗಳ ಇತರ ವಿನ್ಯಾಸಗಳಾದ ಖಾಫ್ರೆ ಮತ್ತು ಮೆನ್‌ಕೊರ್‌ಗಳನ್ನು ಒಳಗೊಳ್ಳುತ್ತದೆ. ಇದು ಒಂದು ಬೃಹದಾಕಾರದ ಕಲ್ಲಿನ ಗೋಡೆಯಿಂದ ಸುತ್ತುವರೆ ಯಲ್ಪಟ್ಟಿದೆ, ಗಡಾರೆಯ ಗೋಡೆ, ಮತ್ತು ಅದರ ಹೊರಭಾಗದಲ್ಲಿ ಮಾರ್ಕ್ ಲೆಹ್ನರ್ ಒಂದು ಕಾರ್ಮಿಕರ ನಗರವನ್ನು ಸಂಶೋಧಿಸಿದರು, ಅದು "ದ ಲೊಸ್ಟ್ ಸಿಟಿ" ಎಂಬುದಾಗಿಯೂ ಕರೆಯಲ್ಪಡುತ್ತದೆ.
  • ಅದು ಕುಂಬಾರ ಶೈಲಿಗಳ ಮೂಲಕ ವಿನ್ಯಾಸಗೊಳಿಸಲ್ಪಟ್ಟಿತ್ತು, ಮುದ್ರೆಯ ಲಾಂಛನಗಳು, ಮತ್ತು ಸ್ತರ ವ್ಯವಸ್ಥೆಗಳು ನಿರ್ಮಾಣವಾಗಲ್ಪಟ್ಟವು ಮತ್ತು ಖಾಫ್ರೆ ( ಕ್ರಿ.ಪೂ. ೨೫೨೦-೨೪೯೪) ಮತ್ತು ಮೆನ್‌ಕೊರ್ (ಕ್ರಿ.ಪೂ. ೨೪೯೦-೨೪೭೨) ಇವರುಗಳ ರಾಜ್ಯಾಧಿಪತ್ಯದ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದವು. ೧೯೭೦ ರ ದಶಕದ ಪ್ರಾರಂಭದಲ್ಲಿ, ಆಸ್ಟ್ರೇಲಿಯಾದ ಪ್ರಾಕ್ತನ ಶಾಸ್ತ್ರಜ್ಞ ಕಾರ್ಲ್ ಕ್ರೊಮರ್ ಪ್ರಸ್ಥಭೂಮಿಯ ದಕ್ಷಿಣ ಭಾಗದಲ್ಲಿ ದಿಣ್ಣೆಯನ್ನು ಸಂಶೋಧಿಸಿದರು. ಈ ದಿಣ್ಣೆಯು ಖುಫುರ ಮಡ್‌ಬ್ರಿಕ್ ಲಾಂಛನಗಳನ್ನು ಒಳಗೊಂಡಂತೆ ಕರಕೌಶಲಗಳನ್ನು ಒಳಗೊಂಡಿತ್ತು, ಅದನ್ನು ಅವರು ಒಬ್ಬ ಕರಕುಶಲಿಯ ಜೊತೆಗಿನ ಒಪ್ಪಂದದ ಮೂಲಕ ಗುರುತಿಸಿದರು. ಖುಫುರ ಕಣಿವೆ ಮಂದಿರದ ದಕ್ಷಿಣದ ಕಡೆಗಿರುವ ಮಡ್‌ಬ್ರಿಕ್ ಕಟ್ಟಡಗಳು ಖುಫುದ ಮಣ್ಣಿನ ಮೇಲ್ಛಾವಣಿಯನ್ನು ಒಳಗೊಂಡಿದ್ದವು ಮತ್ತು ಖುಫುರ ಮರಣದ ನಂತರ ಅವರ ಅಭಿನಿವೇಶದ ಒಂದು ಒಪ್ಪಂದವಾಗಿ ಸೂಚಿಸಲ್ಪಟ್ಟಿತು. ಕನಿಷ್ಠ ಪಕ್ಷ ಖುಫುರ ಅಧಿಪತ್ಯ ಮತ್ತು ಐದನೆಯ ರಾಜಮನೆತನದ ಕೊನೆಯವರೆಗೆ ಬಳಸಲ್ಪಟ್ಟ ಕಾರ್ಮಿಕರ ಸಮಾಧಿಯು ೧೯೯೦ ರಲ್ಲಿ ಜಾಹಿ ಹವಾಸ್‌ರಿಂದ ಗಡಾರೆಯ ಗೋಡೆಯ ದಕ್ಷಿಣ ಭಾಗವು ಸಂಶೋಧಿಸಲ್ಪಟ್ಟಿತು.

ದೋಣಿಗಳು

  • ಪಿರಾಮಿಡ್‌ನ ಸುತ್ತಲೂ ಮೂರು ಹಡಗಿನ ಆಕಾರದ ಗುಣಿಗಳಿವೆ ಅವುಗಳಲ್ಲಿ ಸಂಪೂರ್ಣವಾದ ಹಡಗನ್ನು ಇಡಬಹುದಾಗಿದೆ ಮತ್ತು ಅವುಗಳು ಅಷ್ಟು ಆಳವಾಗಿಲ್ಲ. ಮೇ ೧೯೫೪ರಲ್ಲಿ ಪ್ರಾಕ್ತನ ಶಾಸ್ತ್ರ ಶಾಸ್ತ್ರಜ್ಞರಾದ ಕಮಾಲ್‌ ಈ ಮುಲ್ಲಾಖ್ ಅವರು ನಾಲ್ಕನೇ ಗುಣಿಯನ್ನು ಕಂಡು ಹಿಡಿದಿ ದ್ದಾರೆ. ಅದು ಉದ್ದನೆಯ ತೆಳ್ಳನೆಯ ಚೌಕಾಕಾರದಲ್ಲಿದ್ದು ೧೫ ಟನ್‌ವರೆಗಿನ ತೂಕವನ್ನು ಹಿಡಿದುಕೊಳ್ಳುವಷ್ಟು ಸಶಕ್ತವಾಗಿದೆ. ಒಳಗಡೆ ೧,೨೨೪ ಮರದ ತುಂಡುಗಳಿದ್ದು ಅತ್ಯಂತ ಉದ್ದವಾದ23 metres (75 ft) ಮತ್ತು ಅತ್ಯಂತ ಚಿಕ್ಕವುಗಳನ್ನೂ ಹೊಂದಿದೆ.10 centimetres (0.33 ft) ಇವು ಸಮೀಪದಲ್ಲಿನ ಹಡಗು ನಿರ್ಮಾಣಕಾರರಾದ ಹಾಜ್‌ ಅಹಮದ್‌ ಯುಸುಪ್‌ ಅವರ ಜವಾಬ್ದಾರಿಯಾಗಿದ್ದವು.
  • ಅವರು ನಿಧಾನವಾಗಿ ಮತ್ತು ನಿಖರವಾಗಿ ಹೇಗೆ ಈ ತುಂಡುಗಳ ಜೋಡಣೆಯಾಗಿತ್ತು ಎಂಬುದನ್ನು ವಿಶ್ಲೇಷಿಸಿದ್ದಾರೆ. ಈ ಮರದ ತುಂಡುಗಳನ್ನು ಸಂಪೂರ್ಣ ನಿರ್ಮಾಣ ಮುಗಿಯುವ ವರೆಗೂ ಅಂದರೆ ಹದಿನಾಲ್ಕು ವರ್ಷವು ಬಳಸಿಕೊಳ್ಳಲಾಗಿದೆ. ಇದರ ಫಲವೆಂದರೆ ನಯನ ಮನೋಹರ ವಾದ 43.6 metres (143 ft) ಉದ್ದವಾದ ಹಡಗುಗಳು ನಿರ್ಮಾಣವಾದವು ಮರದ ಬೊಡ್ಡೆಗಳನ್ನು ಹಗ್ಗಗಳಿಂದ ಬಂದಿಸಲಾಗುತ್ತಿತ್ತು. ಈಗ ಅದನ್ನು ಹಡಗಿನಾಕಾರದಲ್ಲಿ ಪಿರಾಮಿಡ್‌ನ ಒಳಗಡೆ ಹವಾನಿಯಂತ್ರಣ ಕೊಟಡಿಯಲ್ಲಿರುವ ಮ್ಯೂಸಿಯಂನಲ್ಲಿ ನೋಡಬಹುದಾಗಿದೆ. ಮ್ಯೂಸಿ ಯಂನ್ನು ಕಟ್ಟುವಾಗ ಎರಡನೇ ಹಡಗು ಗುಣಿಯನ್ನು ಸಂಶೋಧಿಸಲಾಯಿತು. ಅದನ್ನು ಇನ್ನುವರೆಗೂ ತೆಗೆಯಲಾಗಿಲ್ಲ ಕಾರಣವೆಂದರೆ ಮುಂದೆ ಬರುವ ತಂತ್ರಜ್ಞಾನದಿಂದಾಗಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕಬಹುದು ಎಂದು ಅಂದಾಜಿಸಲಾಗಿದೆ.

ಲೂಟಿ

  • ಯಶಸ್ವಿಯಾದ ಪಿರಾಮಿಡ್‌ಗಳು ಕಡಿಮೆಯಾದರೂ ಕೂಡ ಪಿರಾಮಿಡ್‌ ಕಟ್ಟುವ ಕಾರ್ಯವು ಮಧ್ಯರಾಜಯುಗದವರೆಗೂ ಮುಂದುವರೆಯಿತು. ಬರಹಗಾರರಾದ ಬ್ರಿಯರ್‌ ಮತ್ತು ಹೊಬ್ಸ್‌ ಹೇಳುವಂತೆ, "ಹೊಸದಾಗಿ ಬಂದ ರಾಜರಿಂದ ಎಲ್ಲ ಪಿರಾಮಿಡ್‌ಗಳನ್ನು ನಂತರದ ದಿನಗಳಲ್ಲಿ ಮರಳುಗಾಡಿನಲ್ಲಿ ವ್ಯಾಲಿ ಆಫ್ ದ ಕಿಂಗ್ಸ್ ಎಂದು ಕರೆಯುವಲ್ಲಿ ರಾಜರ ಗೋರಿಗಳನ್ನು ಕಟ್ಟುವ ಪದ್ದತಿಯು ಪ್ರಾರಂಭವಾದಾಗ ಕೊಳ್ಳೆಹೊಡೆಯಲಾಗಿದೆ". ಜೊಯ್ಸ್‌ ಥೈಲ್ಡೆಸ್ಲಿ ಹೇಳಿದಂತೆ ಕ್ರಿ.ಶ ೮೨೦ರಲ್ಲಿ ಅರಬ್ ಖಲೀಫನಾದ ಅಬ್ದುಲ್‌ ಆಲ್‌ ಮಾಮುನ್‌ ಪಿರಾಮಿಡ್‌ಗೆ ಪ್ರವೇಶಿಸುವ ಮೊದಲೇ ಮಧ್ಯಕಾಲದ ಅರಸರಿಂದಲೇ ಬೃಹತ್‌ ಪಿರಾಮಿಡ್‌ಗಳು ಬರಿದಾಗಲ್ಪಟ್ಟವು.

ಇವನ್ನೂ ಗಮನಿಸಿ

  • ದೇಶದ ಇತಿಹಾಸಿಕ ಖಗೋಳಶಾಸ್ತ್ರ ಸಂಬಂಧಿತ ಪ್ರದೇಶಗಳ ಪಟ್ಟಿ
  • ಈಜಿಪ್ತ್‌ ಸಂಬಂಧಿತ ಲೇಖನಗಳ ಪರಿವಿಡಿ
  • ಈಜಿಪ್ಟಿನ ಪಿರಮಿಡ್‌ಗಳ ಪಟ್ಟಿ
  • ದೊಡ್ಡ ಶಿಲೆಗಳ ತೂಕವನ್ನೊಳಗೊಂಡಂತೆ ಪ್ರಪಂಚದ ಅತಿದೊಡ್ಡ ಏಕಶಿಲೆಗಳ ಪಟ್ಟಿ
  • ಪಿರಾಮಿಡ್‌ ಇಂಚ್‌
  • ಪಿರಮಿಡಿಯೋನ್‌
  • ಸ್ವಂತತ್ರವಾಗಿ ನಿಂತಿರುವ ಪ್ರಪಂಚದ ಅತಿ ಎತ್ತರದ ನಿರ್ಮಾಣಗಳು

ಉಲ್ಲೇಖಗಳು

ಟಿಪ್ಪಣಿಗಳು ಗ್ರಂಥಸೂಚಿ
  • Bauval, Robert &, Hancock, Graham (1996). Keeper of Genesis. Mandarin books. ISBN . 
  • Brier, Bob &, Hobbs, A. Hoyt (1999). Daily Life of the Ancient Egyptians. Greenwood Press. ISBN . 
  • Calter, Paul A. (2008). Squaring the Circle: Geometry in Art and Architecture. Key College Publishing. ISBN . 
  • Clayton, Peter A. (1994). Chronicle of the Pharaohs. Thames & Hudson. ISBN . 
  • Cole, JH. (1925). Determination of the Exact Size and Orientation of the Great Pyramid of Giza. Cairo: Government Press. SURVEY OF EGYPT Paper No. 39. 
  • Collins, Dana M. (2001). The Oxford Encyclopedia of Ancient Egypt. Oxford University Press. ISBN . 
  • Cremin, Aedeen (2007). Archaeologica. Frances Lincoln. ISBN . 
  • Dilke, O.A.W. (1992). Mathemat
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
Dave Mc
27 August 2018
The pyramids don't look that far from the road, but they're actually are really far, they're just wicked big so they look closer than they actually are. The camel tours are expensive, but worth it!
DoubleTree by Hilton
If you are a horse riding lover visit FB Stables and Ride in the shadow of the Great Pyramids or further afield on a half day trip to Saqqara or Abu Sir or camp out over night with a barbecue and fire
Dave Mc
27 August 2018
The pyramids a really, really huge. You might think about climbing one, but once you get there, you'll change your mind!
Dave Mc
27 August 2018
The pyramids are really a must see, bucket list item. If you have the opportunity, you definitely have to do it.
David Ladera
21 May 2018
I would recommend to avoid crowded hours even if the weather is hot to have a better experience. Camel tours are 100 EGB / 30 min / 1 person
Veysel Soylu
2 March 2017
It's amazing to visit pyramids at the age of thousands... No words enough to describe them. Get rid of people who asking money from you all the time
9.6/10
Vadim I ಮತ್ತು 76,562 ಹೆಚ್ಚಿನ ಜನರು ಇಲ್ಲಿದ್ದಾರೆ
ನಕ್ಷೆ
0.5km from Khafraa, Nazlet El-Semman, Al Haram, Giza Governorate, ಈಜಿಪ್ಟ್ ನಿರ್ದೇಶನಗಳನ್ನು ಪಡೆ
Fri 8:00 AM–4:00 PM
Sat 8:00 AM–5:00 PM
Sun 9:00 AM–5:00 PM
Mon 10:00 AM–4:00 PM
Tue-Wed 9:00 AM–4:00 PM

Great Pyramids of Giza ನಲ್ಲಿ Foursquare

ಗೀಜಾದ ಮಹಾ ಪಿರಾಮಿಡ್ ನಲ್ಲಿ Facebook

Marriott Mena House, Cairo

starting $247

Four Seasons Hotel Cairo at The First Residence

starting $180

Swiss Inn Nile Hotel

starting $29

Barcelo Cairo Pyramids

starting $60

Amarante Pyramids Hotel

starting $34

Hor Moheb Hotel

starting $31

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Khufu ship

The Khufu ship is an intact full-size vessel from Ancient Egypt that

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Giza Necropolis

The Giza Necropolis stands on the Giza Plateau, on the outskirts of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Pyramid of Khafre

The Pyramid of Khafre is the second largest of the Ancient Egyptian

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಸ್ಫಿಂಕ್ಸ್‌ (ಸಿಂಹನಾರಿ)

ಸ್ಫಿಂಕ್ಸ್ (ಸಿಂಹನಾರಿ) (ಪುರಾತನ ಗ್ರೀಕ್‌: Σφίγξ / Sphinx ,

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Pyramid of Menkaure

The Pyramid of Menkaure, located on the Giza Plateau in the

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Layer Pyramid

The Layer Pyramid (known locally in Arabic as il-haram il-midawwar,

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Abu Rawash

Abu Rawash (also known as Abu Roach, Abu Roash), 8 km to the North of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Pyramid of Djedefre

The Pyramid of Djedefre consists today mostly of ruins located at Abu

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Pyramid of Djoser

|Owner=Djoser

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Red Pyramid

The Red Pyramid, also called the North Pyramid is the largest of the

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Bent Pyramid

The Bent Pyramid, located at the royal necropolis of Dahshur,

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Giza Necropolis

The Giza Necropolis stands on the Giza Plateau, on the outskirts of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Pyramid of Amenemhat III (Dahshur)

King Amenemhat III built the Black pyramid during the Middle Kingdom

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ