ಸಾಲ್ಜ್‌ಬರ್ಗ್‌

 Salzburg (·info) ಇದು (Austro-Bavarian: Såizburg; ಶಬ್ಧಶಃ: "ಉಪ್ಪಿನ ನಗರ") ಆಸ್ಟ್ರಿಯಾದಲ್ಲಿ ನಾಲ್ಕನೇ ದೊಡ್ಡ ನಗರ ಮತ್ತು ಸಾಲ್ಜ್‌ಬರ್ಗ್‌ನ ಸಂಯುಕ್ತ ರಾಜ್ಯವಾಗಿದೆ.

ಸಾಲ್ಜ್‌ಬರ್ಗ್‌ನ‌ "ಹಳೆಯ ನಗರ" (ಆಲ್ಟ್‌ಸ್ಟಾಟ್‌ ) ಆಗಿದ್ದು ಅಂತರಾಷ್ಟ್ರೀಯವಾಗಿ ಬರೋಕ್‌ ವಾಸ್ತುಶಿಲ್ಪಕ್ಕಾಗಿ ಮತ್ತು ಉತ್ತರ ಆಲ್ಪ್ಸ್ ನಗರದ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ನಗರವೆಂದು ಪ್ರಖ್ಯಾತಿ ಪಡೆದಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ 1997ರಲ್ಲಿ ಸೇರಿಸಲಾಗಿದೆ. ಈ ನಗರವು ಅದರ ಆಫೈನ್(ಉನ್ನತ ಪರ್ವತ)ದ ಪರಿಸರಕ್ಕಾಗಿ ಪ್ರಸಿದ್ಧಿಯಾಗಿದೆ.

18ನೇ ಶತಮಾನದ ಸಂಗೀತ ಸಂಯೋಜಕ ವೋಲ್ಫ್‌ಗ್ಯಾಂಗ್ ಅಮಡೇಸ್ ಮೊಜಾರ್ಟ್ ಸಾಲ್ಜ್‌ಬರ್ಗ್‌‌ನಲ್ಲಿ ಜನಿಸಿದನು. 20ನೇ ಶತಮಾನದ ಮಧ್ಯದಲ್ಲಿ, ನಗರವನ್ನು ಅಮೇರಿಕಾದ ಸಂಗೀತಮಯ ಸಿನಿಮಾವಾದ ದ ಸೌಂಡ್‌ ಆಫ್ ಮ್ಯೂಸಿಕ್‌ ನ ಭಾಗಗಳಿಗಾಗಿ ಸಂಯೋಜಿಸಲ್ಪಟ್ಟಿತು, ಇದು ಆಸ್ಟ್ರಿಯಾದ ಪ್ರಮುಖ ಹೆಗ್ಗುರುತಾಗಿದೆ. ಸಂಗೀತಮಯ ಚಿತ್ರವು ರಿಚರ್ಡ್ ರಾಜರ್ಸ್ ಮತ್ತು ಆಸ್ಕರ್ ಹಮ್ಮರ್‌ಸ್ಟೈನ್‌ IIರ ಸಹಭಾಗಿತ್ವದಲ್ಲಿ ನಿರ್ಮಾಣವಾಯಿತು.

ಸಾಲ್ಜ್‌ಬರ್ಗ್ ರಾಜ್ಯದ ರಾಜಧಾನಿ‌ (ಲ್ಯಾಂಡ್‌ ಸಾಲ್ಜ್‌ಬರ್ಗ್‌ ) ಮೂರು ವಿಶ್ವವಿದ್ಯಾಲಯಗಳನ್ನು ಹೊಂದಿದೆ. ಇದು ದೊಡ್ಡ ಯುವ ವಿದ್ಯಾರ್ಥಿ ಸಮೂಹವನ್ನು ಹೊಂದಿದ್ದು ಆ ಪ್ರದೇಶಕ್ಕೆ ಚೈತನ್ಯ ಮತ್ತು ಉತ್ಸಾಹವನ್ನು ತುಂಬುತ್ತಾರೆ, ಮತ್ತು ವಿಶ್ವವಿದ್ಯಾಲಯಗಳು ಆ ಸಮುದಾಯಕ್ಕೆ ಸಂಸ್ಕಾರವನ್ನು ನೀಡುತ್ತಾರೆ.

ಭೌಗೋಳಿಕತೆ

ಸಾಲ್ಜ್‌ಬರ್ಗ್‌ ಸಾಲ್ಜಾಕ್ ನದಿಯ ಒಂದು ದಡದಲ್ಲಿದೆ ಮತ್ತು ಆಲ್ಪ್ಸ್‌ನ ಉತ್ತರ ಗಡಿಯಲ್ಲಿದೆ. ಸಾಲ್ಜ್‌ಬರ್ಗ್‌ನ ದಕ್ಷಿಣದಲ್ಲಿ ಪರ್ವತಗಳಿದ್ದು ಉತ್ತರದಲ್ಲಿ ಸಮತಟ್ಟಾದ ಪ್ರದೇಶವನ್ನು ಹೊಂದಿದೆ. ಆಲ್ಫೈನ್ ಶಿಖರಕ್ಕೆ ಹತ್ತಿರವಾದ— 1972 ಮೀಯ ಅಂಟರ್ಸ್‌ಬರ್ಗ್—ನಗರ ಕೇಂದ್ರಭಾಗದಿಂದ ಕೆಲವು ಕಿಲೋಮೀಟರುಗಳ ದೂರದಲ್ಲಿದೆ. ಆಲ್ಟ್‌ಸ್ಟಾಟ್‌ , ಅಥವಾ "ಹಳೆಯ ನಗರ"ವು ಬರೋಕ್ ಗೋಪುರಗಳು ಮತ್ತು ಚರ್ಚುಗಳು ಮತ್ತು ಬೃಹತ್ತಾದ ಫೆಸ್ಟಂಗ್ ಹೊಹೆನ್ಸಾಲ್ಜ್‌ಬರ್ಗ್‌ ನಿಂದ ತುಂಬಿದೆ. ಈ ಪ್ರದೇಶವು ಎರಡು ಚಿಕ್ಕ ಪರ್ವತಗಳನ್ನು ಹೊಂದಿದೆ,ಮೂಂಚ್ಸ್‌ಬರ್ಗ್ ಮತ್ತು ಕಪುಜಿನೆರ್‌ಬರ್ಗ್‌ , ಇವುಗಳು ನಗರದ ಹಸಿರು ಶ್ವಾಸಕೋಶಗಳಂತೆ ವರ್ತಿಸುತ್ತವೆ. ಸುಮಾರು ಮುನಿಚ್‌ನ 150 ಕಿಮೀ ಪೂರ್ವಭಾಗದಲ್ಲಿ , ಲೂಬ್ಲಿಯಾನ 281 ಕಿಮೀ ವಾಯವ್ಯದಲ್ಲಿ ಮತ್ತು ವಿಯೆನ್ನಾದ 300 ಕಿಮೀ ಪಶ್ಚಿಮದಲ್ಲಿ ಸಾಲ್ಜ್‌ಬರ್ಗ್ ನೆಲೆಸಿದೆ.

ಹವಾಮಾನ

ಸಾಲ್ಜ್‌ಬರ್ಗ್‌ನ ಹವಾಮಾನವು ತಂಪಾಗಿದೆ ಮತ್ತು ಆರ್ದ‌ವಾಗಿದೆ (ಕೊಪೆನ್ ಸಿಎಫ್‌ಬಿ ).

Salzburg-Flughafen (LOWS)ದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Record high °C (°F) 16.3
(61.3)
21.7
(71.1)
24.9
(76.8)
27.9
(82.2)
32.2
(90)
35.6
(96.1)
37.7
(99.9)
35.6
(96.1)
32.1
(89.8)
28.2
(82.8)
23.5
(74.3)
18.6
(65.5)
37.7
(99.9)
ಅಧಿಕ ಸರಾಸರಿ °C (°F) 3.2
(37.8)
5.6
(42.1)
10.4
(50.7)
14.3
(57.7)
19.9
(67.8)
22.2
(72)
24.4
(75.9)
24.2
(75.6)
20.1
(68.2)
14.8
(58.6)
7.8
(46)
4.0
(39.2)
14.2
(57.6)
Daily mean °C (°F) −0.8
(30.6)
0.7
(33.3)
4.8
(40.6)
8.5
(47.3)
13.8
(56.8)
16.5
(61.7)
18.6
(65.5)
18.3
(64.9)
14.3
(57.7)
9.3
(48.7)
3.6
(38.5)
0.4
(32.7)
9.0
(48.2)
ಕಡಮೆ ಸರಾಸರಿ °C (°F) −4.0
(24.8)
−2.9
(26.8)
0.7
(33.3)
3.8
(38.8)
8.4
(47.1)
11.5
(52.7)
13.5
(56.3)
13.5
(56.3)
10.1
(50.2)
5.5
(41.9)
0.6
(33.1)
−2.5
(27.5)
4.9
(40.8)
Record low °C (°F) −25.4
(−13.7)
−21.8
(−7.2)
−21.6
(−6.9)
−3.9
(25)
−2.1
(28.2)
2.0
(35.6)
3.7
(38.7)
4.3
(39.7)
−1.6
(29.1)
−8.0
(17.6)
−17.8
(0)
−26.8
(−16.2)
−26.8
(−16.2)
Average precipitation mm (inches) 59.9
(2.358)
54.7
(2.154)
78.7
(3.098)
83.1
(3.272)
114.5
(4.508)
154.8
(6.094)
157.5
(6.201)
151.3
(5.957)
101.3
(3.988)
72.6
(2.858)
83.0
(3.268)
72.8
(2.866)
೧,೧೮೪.೨
(೪೬.೬೨೨)
Average snowfall cm (inches) 24.0
(9.45)
23.9
(9.41)
21.7
(8.54)
2.9
(1.14)
0.1
(0.04)
0
(0)
0
(0)
0
(0)
0
(0)
0
(0)
12.1
(4.76)
27.8
(10.94)
112.5
(44.29)
Average precipitation days 10.1 9.5 11.9 11.8 12.1 15.0 14.4 13.2 10.8 9.3 10.8 11.8 140.7
Average snowy days 15.4 11.7 6.1 1.4 0 0 0 0 0 0.1 5.1 13.1 52.9
Mean sunshine hours 67.0 91.9 130.0 152.6 196.4 193.9 221.1 202.8 167.7 129.7 81.2 62.8 ೧,೬೯೭.೧
Source: Central Institute for Meteorology and Geodynamics

ಜನಸಂಖ್ಯಾ ಬೆಳವಣಿಗೆ

1935ರಲ್ಲಿ ಸಾಲ್ಜ್‌ಬರ್ಗ್‌ ಅಕ್ಕಪಕ್ಕದ ಪುರಸಭೆಗಳನ್ನಾಕ್ರಮಿಸಿದ್ದರಿಂದ ಜನಸಂಖ್ಯೆಯು ತೀವ್ರವಾಗಿ ಹೆಚ್ಚಿತು. ವಿಶ್ವ ಸಮರ IIರ ನಂತರ ಅನೇಕ ನಿರಾಶ್ರಿತರು ಈ ನಗರದಲ್ಲಿ ನೆಲೆಸಿದರು. ಯುದ್ಧಾನಂತರದ ಅಮೇರಿಕಾದ ಸೈನಿಕರ ಆಶ್ರಯಕ್ಕಾಗಿ ಹೊಸ ವಾಸಯೋಗ್ಯ ಸ್ಥಳಗಳನ್ನು ನಿರ್ಮಿಸಲಾಯಿತು, ಅವರು ತೊರೆದ ನಂತರ ನಿರಾಶ್ರಿತರಿಗಾಗಿ ಆ ಸ್ಥಳವನ್ನು ಬಳಸಲಾಯಿತು. 1950ರ ಸುಮಾರಿನಲ್ಲಿ ಸಾಲ್ಜ್‌ಬರ್ಗ್ 100,000ಕ್ಕೂ ಹೆಚ್ಚು ಪ್ರಜೆಗಳನ್ನು ಹೊಂದಿತ್ತು, ಮತ್ತು 2006ರ ವೇಳೆಗೆ 150,000 ಪ್ರಜೆಗಳನ್ನು ಹೊಂದಿತ್ತು. 2007ರಲ್ಲಿ ಒಟ್ಟು, ಸುಮಾರು 210,000 ಪ್ರಜೆಗಳು ವಾಸವಿದ್ದರು.[]

Historical population
Year Pop.   ±%  <tr><td colspan="3" style="border-top: 1px solid black; font-size: 85%; text-align: left;">Source: Statistik Austria</td></tr>

ಇತಿಹಾಸ

ಪ್ರಾಚೀನತೆಯಿಂದ ಆಧುನಿಕ ಯುಗದ ಪ್ರಾರಂಭದವರೆಗೆ

ಈ ಪ್ರದೇಶದಲ್ಲಿ ನಿಯೊಲಿಟಿಕ್ ಯುಗದಲ್ಲಿ ಮಾನವ ವಸತಿಯ ಕುರುಹುಗಳು ಕಂಡುಬಂದಿತು. ಸಾಲ್ಜ್‌ಬರ್ಗ್‌ ಮೊದಲ ವಸತಿಯು ಕೆಲ್ಟ್‌ರಿಂದ ಆರಂಭವಾಯಿತು.

ಕ್ರಿಪೂ.15ರಲ್ಲಿ ರೋಮನ್ ಸಾಮ್ರಾಜ್ಯದಿಂದ ಪ್ರತ್ಯೇಕ ವಸಾಹತುಗಳು ಸಮ್ಮಿಶ್ರಗೊಂಡವು. ಆ ಸಮಯದಲ್ಲಿ ನಗರವನ್ನು ಜುವವುಮ್‌ ಎಂದು ಕರೆಯುತ್ತಿದ್ದರು ಮತ್ತು ಕ್ರಿಶ.45ರಲ್ಲಿ ರೋಮನ್ ಮಿನಿಸಿಪಿಯಮ್ ಸ್ಥಾನಕ್ಕೇರಿತು. ಜುವವುಮ್‌ ನೊರಿಕಮ್‌ನ ರೋಮನ್ ಪ್ರಾಂತ್ಯದ ಪ್ರಮುಖ ಪ್ರದೇಶವಾಗಿದೆ. ನೊರಿಕನ್ ಗಡಿಯ ಪತನದ ನಂತರ, ಜುವವುಮ್ ಅವನತಿ ಹೊಂದಿತು ಮತ್ತು 7ನೇ ಶತಮಾನದ ಅಂತ್ಯದಲ್ಲಿ ನಾಮಾವಶೇಷವಾಯಿತು.

ನಗರದ ಪುನರ್ನಿರ್ಮಾಣದ ಕೀರ್ತಿಯು ಲೈಫ್ ಆಫ್ ಸೈಂಟ್ ರುಪೆರ್ಟ್‌ ಆದ 8ನೇ ಶತಮಾನದ ಸಂತನಿಗೆ ಸಲ್ಲುತ್ತದೆ. c. 700ರಲ್ಲಿ ಬವೇರಿಯಾದ ಥಿಯೊಡೊ ರುಪೆರ್ಟ್‌ನಿಗೆ ಬಿಶಪ್ ಆಗಲು ಕೇಳಿದಾಗ, ರುಪೆರ್ಟ್ ತನ್ನ ಬ್ಯಾಸಿಲಿಕಾ(ಸಾರ್ವಜನಿಕ ಗೃಹ)ವಾಗಿ ನದಿಯ ಈ ಸ್ಥಳವನ್ನು ಅನ್ವೇಷಿಸಿದನು. ರುಪೆರ್ಟ್ ಜುವವುಮ್‌ನ್ನು ಆಯ್ಕೆ ಮಾಡಿ, ಪಾದಿಗಳನ್ನು ಅಧಿಕೃತವಾಗಿ ನೇಮಿಸಿದನು,ಮತ್ತು ಪೈಡಿಂಗ್‌‌ನ್ನು ಆ ಪ್ರದೇಶಕ್ಕೆ ಸೇರಿಸುತ್ತಾರೆ. ರುಪೆರ್ಟ್ ಆ ನಗರಕ್ಕೆ "ಸಾಲ್ಜ್‌ಬರ್ಗ್‌" ಎಂದು ಹೆಸರಿಟ್ಟನು. ಪಾಗನ್‌ರನ್ನು ಕ್ರಿಸ್ತ ಧರ್ಮಕ್ಕೆ ಪರಿವರ್ತಿಸಲು ಸಂಚರಿಸಿದನು.

ಸಾಲ್ಜ್‌ಬರ್ಗ್‌ ಹೆಸರಿನ ಅರ್ಥವೆಂದರೆ "ಉಪ್ಪಿನ ಕೋಟೆ". ಸಾಲ್ಜಾ‌ಕ್ ನದಿಯಲ್ಲಿ ದೋಣಿಯ ಮೂಲಕ ಉಪ್ಪನ್ನು ಸಾಗಿಸುತ್ತಿದ್ದುದರಿಂದ ಆ ಹೆಸರು ಬಂದಿತು, 8ನೇ ಶತಮಾನದಲ್ಲಿ ಸುಂಕ ಸಂಗ್ರಹವನ್ನಾರಂಭವಾಯಿತು, ಇದು ಯುರೋಪಿನ ನದಿಗಳಲ್ಲಿನ ಅನೇಕ ಸಮುದಾಯ ಮತ್ತು ನಗರದ ವಾಡಿಕೆಯಾಗಿತ್ತು.

ನಗರದ ಕೋಟೆಯಾದ ಫೆಸ್ಟಂಗ್ ಹೊಹೆನ್ಸಾಲ್ಜ್‌ಬರ್ಗ್‌ನ್ನು 1077ರಲ್ಲಿ ನಿರ್ಮಿಸಲಾಯಿತು ಮತ್ತು ನಂತರದಲ್ಲಿ ವಿಸ್ತರಿಸಲಾಯಿತು.

ಸಾಲ್ಜ್‌ಬರ್ಗ್‌‌ನ ಸ್ವಾತಂತ್ರ್ಯ

14ನೇ ಶತಮಾನದ ಅಂತ್ಯದಲ್ಲಿ ಬವೇರಿಯಾದಿಂದ ಸ್ವತಂತ್ರವಾಯಿತು. ಸಾಲ್ಜ್‌ಬರ್ಗ್‌ ಇದು ಆರ್ಚ್‌ಬಿಷಪ್ರ ಕಚೇರಿ ಇರುವ ಸ್ಥಳವಾಗಿತ್ತು. ರೋಮನ್ ಸಾಮ್ರ್ಯಾಜ್ಯದ ರಾಜ ಬಿಷಪ್ ರ ಕಚೇರಿ ಇದ್ದ ಸ್ಥಳ ಕೂಡಾ ಇದಾಗಿತ್ತು.

ಆಧುನಿಕ ಯುಗ

ಧಾರ್ಮಿಕ ಸಂಘರ್ಷಗಳು

ಅಕ್ಟೋಬರ್ 31, 1731ರಂದು, ಮಾರ್ಟಿನ್ ಲೂಥರ್‌ನ 214ರ ವಾರ್ಷಿಕೋತ್ಸವದಲ್ಲಿ ವಿಟ್ಟನ್‌ಬರ್ಗ್‌ ಸ್ಕೂಲ್‌ಗಾಗಿ, ತನ್ನ 95 ಕ್ಷೇತ್ರ ಕಾರ್ಯದ ವಿವರವನ್ನು ರೋಮನ್ ಕ್ಯಾಥೊಲಿಕ್ ಆರ್ಚ್‌ಬಿಷಪ್ ಕೌಂಟ್‌ ಲಿಯೋಪಾರ್ಡ್ ಆಂಟನ್ ವೊನ್ ಫಿರ್ಮಿಯಾನ್ ದೇಶಾಂತರ ಪ್ರಯಾಣದ ವಲಸೆ ಪೆಟೆಂಟ್‌ ಗೆ ಸಹಿ ಮಾಡಿದರು. ಇದರ ಪ್ರಕಾರ ಎಲ್ಲ ಪ್ರೊಟೆಸ್ಟಂಟರು ತಮ್ಮ ಕ್ಯಾಥೋಲಿಕ್ ವಿರೋಧ ನಂಬಿಕೆಗಳನ್ನು ಬಿಡದಿದ್ದಲ್ಲಿ. ಅವರನ್ನು ನಗರದಿಂದ ಹೊರಹಾಕಲು ಒಪ್ಪಿಗೆಯನ್ನು ಇದು ಹೊಂದಿತ್ತು. (ಇದನ್ನು ಯುರೋಪಿನ ಅನೇ ನಗರಗಳಲ್ಲಿ ಅನೇಕ ಜ್ಯೂಗಳ ವಿರುದ್ಧವಾಗಿ ಪ್ರಕಟಿಸಿದ ಉಚ್ಛಾಟನೆಯ ರಾಜಶಾಸನದೊಂದಿಗೆ ಗೊಂದಲಕ್ಕೊಳಗಾಗೆಬೇಕಿಲ್ಲ.)

ಭೂಮಿಯ ಮಾಲೀಕರು ಪ್ರದೇಶವನ್ನು ಮಾರಲು ಮತ್ತು ತೊರೆಯಲು ಎರಡು ದಿನಗಳ ಗಡುವನ್ನು ನೀಡಿದರು. ದನ, ಕುರಿ, ಪೀಟೋಪಕರಣಗಳು ಮತ್ತು ಭೂಮಿಯನ್ನು ಮಾರುಕಟ್ಟೆಯಲ್ಲಿ ಎಸೆಯಲಾಯಿತು, ಮತ್ತು ಸಲ್ಜ್‌ಬರ್ಗಿನ ಜನರು ವಾನ್ ಫಿರ್ಮಿಯಾನ್‌ರ ಕ್ಯಾಥೊಲಿಕ್ ಒಕ್ಕೂಟದವರಿಂದ ಸ್ವಲ್ಪ ಹಣವನ್ನು ಪಡೆದರು. ವಾನ್ ಫಿರ್ಮಿಯಾನ್‌‌ ವಶಪಡಿಸಿಕೊಂಡ ಭೂಮಿಯಲ್ಲಿ ಹೆಚ್ಚಿನದನ್ನು ತನ್ನ ಕುಟುಂಬದವರಿಗೆ ಹಂಚಿದನು ಮತ್ತು ಪ್ರೊಟೆಸ್ಟೆಂಟ್‌ರ ಪುಸ್ತಕಗಳು ಮತ್ತು ಬೈಬಲ್‌ಗಳನ್ನು ಸುಟ್ಟುಹಾಕಿದರು. ಅನೇಕ 12 ವರ್ಷದ ಮತ್ತು ಕಡಿಮೆ ವಯಸ್ಸಿನ ಮಕ್ಕಳನ್ನು ಬಂಧಿಸಿ ರೋಮನ್‌ ಕ್ಯಾಥೋಲಿಕ್ಕರನ್ನಾಗಿ ಬೆಳೆಸಲಾಯಿತು. ಭೂಮಿಯನ್ನು ಹೊಂದಿದ ಜನರಿಗೆ ಒಂದು ಮುಖ್ಯ ಅನುಕೂಲತೆಯೆಂದರೆ: ಮೂರು ತಿಂಗಳ ಅವರ ಬಹಿಷ್ಕಾರದ ಗಡುವು ಕೆಟ್ಟ ಚಳಿಗಾಲದಿಂದಾಗಿ ಮೂರು ತಿಂಗಳು ಮುಂದುವರೆಯಿತು.

ಗುತ್ತಿಗೆದಾರ ರೈತರು, ವರ್ತಕರು, ಕೆಲಸಗಾರರು ಮತ್ತು ಗಣಿಗಾರರಿಗೆ ಅವರಲ್ಲಿರುವ ವಸ್ತುವನ್ನು ಮಾರಲು ಮತ್ತು ಜಾಗ ತೊರೆಯಲು ಕೇವಲ ಎಂಟು ದಿನದ ಗಡುವನ್ನು ನೀಡಲಾಯಿತು. ಮೊದಲ ನಿರಾಶ್ರಿತರನ್ನು ಪ್ರೊಟೆಸ್ಟೆಂಟ್ ರಾಜರ ಆಳ್ವಿಕೆಯಿರುವ ಜರ್ಮನಿಯ ಅತ್ಯಂತ ಚಳಿಯಿರುವ ಮತ್ತು ಶೀತ ಮಾರುತಗಳಿರುವ ಉತ್ತರಭಾಗಕ್ಕೆ ಕಳುಹಿಸಲಾಯಿತು. ಅವರ ಮಕ್ಕಳು ಸಾಮಾನು ಸರಂಜಾಮುಗಳನ್ನು ಹೊತ್ತುಕೊಂಡು ನಡೆದರು ಅಥವಾ ಸವಾರಿ ಮಾಡಿದರು ಅಥವಾ ಬಂಡಿಗಳಲ್ಲಿ ಚಲಿಸಿದರು. ಅವರು ಪ್ರಯಾಣಿಸಿದಾಗ ಗಡೀಪಾರಾದವರ ಬಳಿ ಇದ್ದ ಉಳಿತಾಯದ ಮೊತ್ತವು ವ್ಯಯವಾಯಿತು. ಅವರು ಪ್ರಯಾಣಿಸುತ್ತಿರುವಾಗ ಕಳ್ಳರಿಂದ ರಕ್ಷಣೆ ನೀಡಲು ಸೈನಿಕರು ಕಂದಾಯ, ಸುಂಕ ಮತ್ತು ಹಣಕ್ಕಾಗಿ ದಾಳಿ ಮಾಡಿದರು.

ಅವರ ವಸಾಹತುಗಳು ಉತ್ತರಕ್ಕೆ ಚಲಿಸಿದಂತೆ ಅವರ ದುರವಸ್ಥೆಯು ಹೆಚ್ಚಾಯಿತು. ಗುರ್ಟೆಹ್‌ ಬರೆದ ಪದ್ಯ "ಹೆರ್ಮನ್ ಮತ್ತು ಡೊರೊಥೀಯ", ಸಾಲ್ಜ್‌ಬರ್ಗ್‌ ಬಹಿಷ್ಕಾರದಿಂದಾದ ಪ್ರಚೋದನೆಯಿಂದಾದ ಫ್ರೆಂಚ್‌ ಚಳುವಳಿಯ ನಂತರದಲ್ಲಾದ ಸ್ಪೋಟವನ್ನು ವಿವರಿಸಿತು. ಪ್ರೊಟೆಸ್ಟೆಂಟರು ಮತ್ತು ಕೆಲವು ಕ್ಯಾಥೊಲಿಕ್ಕರು ಚಳಿಗಾಲದಲ್ಲಿನ ಅವರ ಉಚ್ಛಾಟನೆಯ ಕ್ರೂರತೆಯಿಂದ ಹೆದರಿದರು ಮತ್ತು ಅವರು ತೋರಿದ ದೈರ್ಯವು ಅವರ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಪ್ರಾರಂಭದಲ್ಲಿ ನಿಧಾನವಾಗಿ ನಿರಾಶ್ರಿತರು ಅವರನ್ನು ಸ್ವಾಗತಿಸಿದ ಮತ್ತು ಸಹಾಯ ನೀಡುವ ನಗರಗಳಿಗೆ ತೆರಳಿದರು. ಆದರೆ ನಿರಾಶ್ರಿತರು ನೆಲೆಸಲು ಬೆಕಾದಷ್ಟು ದೊಡ್ಡ ಪ್ರಮಾಣದ ಸ್ಥಳವಿರಲಿಲ್ಲ.

ಕೊನೆಯದಾಗಿ 1732ರಲ್ಲಿ ರಾಜ ಪರ್ಶಿಯಾ ಫೆಡರಿಕ್ ವಿಲಿಯಂ I 12,000 ಸಲ್ಜ್‌ಬರ್ಗ್‌ನ ಪ್ರೊಟೆಸ್ಟೆಂಟ್ ನಿರಾಶ್ರಿತರನ್ನು ಸ್ವೀಕರಿಸಿದನು, ಅವರು ಇಪ್ಪತ್ತು ವರ್ಷಗಳ ಹಿಂದೆ ಪ್ಲೇಗ್‌ ಬಂದು ನಾಶವಾಗಿದ್ದ ಪೂರ್ವ ಪರ್ಶಿಯಾದಲ್ಲಿ ನೆಲೆಸಿದರು. ಇತರ ಚಿಕ್ಕ ಗುಂಪುಗಳು ಹಂಗೇರಿ ಸಾಮ್ರಾಜ್ಯದ ಈಗ ಸ್ಲೊವಾಕಿಯಾ ಮತ್ತು ಸೆರ್ಬಿಯಾಗಳೆಂದು ಕರೆಯುವ ಡೆಬ್ರೆತ್ಸೆನ್‌ ಮತ್ತು ಬನಟ್‌ ಪ್ರದೇಶಗಳಲ್ಲಿ ನೆಲೆಸಿದವು; ಹಂಗೇರಿ ಸಾಮ್ರಾಜ್ಯವು ಪ್ಲೇಗ್‌ನಿಂದ ಮತ್ತು ಒಟ್ಟೋಮನ್ ದಾಳಿಯಿಂದ ನಾಶವಾಗಿದ್ದ ಡಾನ್ಯೂಬ್‌ ನದಿಯಪ್ರದೇಶಗಳನ್ನು ಜನಭರಿತವನ್ನಾಗಿ ಮಾಡಲು ಜರ್ಮನ್ನರನ್ನು ನೇಮಿಸಿದರು. ಸೆಲ್ಜ್‌ಬರ್ಗರು ಜರ್ಮನಿಯ ಪ್ರೊಟೆಸ್ಟೆಂಟ್‌ ಪ್ರದೇಶಗಳಾದ ಬರ್ಲಿನ್ ಮತ್ತು ಹಾನೊವೆರ್; ಮತ್ತು ನೆದರ್ಲ್ಯಾಂಡ್‌ಗಳಿಗೆ ವಲಸೆ ಹೋದರು.

ಮಾರ್ಚ್‌ 12, 1734ರಂದು ಸಾಲ್ಜ್‌ಬರ್ಗ್‌ನ ಅರವತ್ತು ಜನ ಬಹಿಷ್ಕೃತರ ಚಿಕ್ಕ ತಂಡ ಮೊದಲು ಲಂಡನ್ನಿಗೆ ತೆರಳಿ ಉತ್ತರ ಅಮೇರಿಕಾದ ವಸಾಹತುವಾದ ಧಾರ್ಮಿಕ ಸ್ವಾತಂತ್ರ್ಯವನ್ನು ಬಯಸುತ್ತಿದ್ದ ಜಾರ್ಜಿಯಾದಲ್ಲಿ ನೆಲಸಿದರು. ನಂತರದ ವರ್ಷಗಳಲ್ಲಿ ಎರಡನೆ ಗುಂಪು ಚಲಿಸಿತು ಮತ್ತು 1741ರಲ್ಲಿ ಒಟ್ಟು ಸಮಾರು 150 ಸಾಲ್ಜ್‌ಬರ್ಗ್‌ ಬಹಿಷ್ಕೃತರು ಸವನ್ನಾಹ್ ನದಿಯ ಎಬನೀಜರ್‌‍ನಲ್ಲಿ ನೆಲೆಸಿದರು (ಜಾನ್ ಎ. ಟ್ರೆವುಲ್ಟೆನ್‌ನ್ನು ನೋಡಿ).

ಹಲವಾರು ಶತಮಾನಗಳಿಂದ ಪರ್ಷಿಯಾದ ಲಿತುಯೇನಿಯಾದಲ್ಲಿರುವ ಪ್ರೊಟೆಸ್ಟೆಂಟ್‌ ಸೆಲ್ಜ್‌ಬರ್ಗರು ತಮ್ಮ ಭಾಷೆಯ ಚರ್ಚುಗಳು ಮತ್ತು ಶಾಲೆಗಳನ್ನು ಹೊಂದಿದ್ದು ತಮ್ಮದೇ ಆದ ಜರ್ಮನ್ ಜನಾಂಗೀಯ ಗುರುತನ್ನು ಹೊಂದಿದ್ದಾರೆ. ಅವರ ಪೂರ್ವಜರನ್ನು ವಿಶ್ವ ಸಮರ IIರ ನಂತರ ಬಹಿಷ್ಕರಿಸಲಾಗಿತ್ತು.

ಜರ್ಮನ್ ಜನಾಂಗೀಯ ಬಹಿಷ್ಕೃತರು ಪಶ್ಚಿಮ ಯುರೋಪ್‌, ಸಂಯುಕ್ತ ಸಂಸ್ಥಾನ ಮತ್ತಿತರ ಪಾಶ್ಚಿಮಾತ್ಯ ದೇಶಗಳೆಡೆಗೆ ತೆರಳಿದರು. ಪಶ್ಚಿಮ ಜರ್ಮನಿಯಲ್ಲಿ ನೆಲೆಸಿರುವ ಜನರು ಸೆಲ್ಜ್‌ಬರ್ಗರೆನ್ನುವ ತಮ್ಮ ಐತಿಹಾಸಿಕ ಗುರುತನ್ನು ಉಳಿಸಿಕೊಳ್ಳಲು ಸಮುದಾಯದ ಸಂಸ್ಥೆಯನ್ನುಸ್ಥಾಪಿಸಿದರು.

ಗುಪ್ತ ಸಂಘಟನೆಗಳು

1772-1803ರಲ್ಲಿ, ಪ್ರಧಾನ ಬಿಷಪ್‌ ಹೈರಾನಮಸ್ ಗ್ರಾಫ್ ವಾನ್ ಕೊಲೊರೆಡೊನಡಿಯಲ್ಲಿ ಸಾಲ್ಜ್‌ಬರ್ಗ್‌ ಗುಪ್ತ ಸಂಘಟನೆಗಳಿಗೆ ಕೇಂದ್ರವಾಯಿತು.

ಸಾಲ್ಜ್‌ಬರ್ಗ್‌‌ನ ಮತದಾರರ ಸಮುದಾಯ

1803ರಲ್ಲಿ, ರಾಜ ನೆಪೋಲಿಯನ್‌ರು ಪ್ರಧಾನ ಬಿಷಪ್‌ ಸ್ಥಾನದಲ್ಲಿದ್ದವರನ್ನು ಕೆಳಗಿಸಿಸಿದರು ಮತ್ತು ಸಾಲ್ಜ್‌ಬರ್ಗ್‌‌ನ ಮತದಾರರ ಸಮುದಾಯದ ಮೂಲಕ ಟಸ್ಕನಿಯ ಮಾಜಿ ಗ್ರಾಂಡ್‌ ಡ್ಯೂಕ್‌ (ಪ್ರಾಂತಸೇನಾಯಕ)ರಾಗಿದ್ದ ಟಸ್ಕನಿಯ ಫರ್ಡಿನಂಡ್‌ IIIರಿಗೆ ಆ ಸ್ಥಾನ ನೀಡಲಾಯಿತು.

ಸಾಲ್ಜ್‌ಬರ್ಗ್‌ನ ಆಸ್ಟ್ರಿಯಾ ಒಗ್ಗೂಡುವಿಕೆ‌

1805ರಲ್ಲಿ ಸಾಲ್ಜ್‌ಬರ್ಗ್‌ ಆಸ್ಟ್ರಿಯಾ ಸಾಮ್ರಾಜ್ಯಕ್ಕೆ ಬಕ್ರ್ಟಸ್ ಗಾಡನ್‌ನೊಂದಿಗೆ ಸೇರಿತು.

ಬವೇರಿಯನ್ ಆಡಳಿತದಲ್ಲಿ ಸಾಲ್ಜ್‌ಬರ್ಗ್

1809ಲ್ಲಿ ವಾಗ್ರಮ್‌ನಲ್ಲಿನ ಆಸ್ಟ್ರಿಯಾದ ಸೋಲಿನ ನಂತರ ಸಾಲ್ಜ್‌ಬರ್ಗ್‌ನ ಗಡಿಯು‌ ಬವೇರಿಯಾ ಸಾಮ್ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು.

ಸಾಲ್ಜ್‌ಬರ್ಗ್‌‌ನ ಬೇರ್ಪಡುವಿಕೆ ಮತ್ತು ಆಸ್ಟ್ರಿಯಾ ಮತ್ತು ಬವೇರಿಯಾದಿಂದ ಒಗ್ಗೂಡುವಿಕೆ

ವಿಯೆನ್ನಾದ ಕಾಂಗ್ರೆಸ್‌ನಲ್ಲಿ 1815ರಲ್ಲಿ ಇದು ಅಂತಿಮವಾಗಿ ಆಸ್ಟ್ರಿಯಾಕ್ಕೆ ಹಿಂದಿರುಗಿತು, ಆದರೆ ರುಪೆರ್ಟಿಗೌ ಮತ್ತು ಬೆರ್ಕ್ಟಸ್ಗಾಡನ್‌‌ಗಳು ಬವೇರಿಯಾಕ್ಕೆ ವರ್ಗಾಯಿಸಲ್ಪಟ್ಟಿತು. ಸಾಲ್ಜ್‌ಬರ್ಗ್‌ ಸಾಲ್ಜಾಕ್ ಪ್ರಾಂತ್ಯವಾಗಿ ಒಗ್ಗೂಡಿತು ಮತ್ತು ಸಾಲ್ಜ್‌ಬರ್ಗರ್‌ಲ್ಯಾಂಡನ್ನು ಲಿಂಜ್ರು ಆಳುತ್ತಿದ್ದರು. 1850ರಲ್ಲಿ ಸಾಲ್ಜ್‌ಬರ್ಗ್‌ ಡಚ್ಚಿ ಆಫ್ ಸಾಲ್ಜ್‌ಬರ್ಗ್‌ನ ರಾಜಧಾನಿಯಾಯಿತು, ಇದು ಆಸ್ಟ್ರಿಯಾ ಸಾಮ್ರಾಜ್ಯದ ರಾಜನಿಗೊಳಪಟ್ಟ ಪ್ರದೇಶವಾಗಿದೆ. 1866ರಲ್ಲಿ ನಗರವು ಆಸ್ಟ್ರಿಯಾ-ಹಂಗೇರಿಯ ಭಾಗವಾಗಿ ಆಸ್ಟ್ರಿಯಾ ಸಾಮ್ರಾಜ್ಯದ ರಾಜನಿಗೊಳಪಟ್ಟ ಪ್ರದೇಶದ ರಾಜಧಾನಿಯಾಯಿತು.

20ನೆಯ ಶತಮಾನ

ವಿಶ್ವ ಸಮರ I

ಆಸ್ಟ್ರಿಯಾ-ಹಂಗೇರಿ ಗಡಿಯ ರಾಜದಾನಿಯಾಗಿದ್ದ ಸಾಲ್ಜ್‌ಬರ್ಗ್ 1918ರಲ್ಲಿ ಸೋತಿತು.

ಜರ್ಮನ್ ಸಾಮ್ರಾಜ್ಯದ ಮೂರನೇ ಭಾಗ

ಆಸ್ಟ್ರಿಯಾ ಆ‍ಯ್‌ನ್ಚುಲೆಸ್‌ನ ಸಂದರ್ಭದಲ್ಲಿ ಸಾಲ್ಜ್‌ಬರ್ಗ್‌ ಅದರ ಭಾಗವಾಗಿತ್ತು, ಆಸ್ಟಿಯಾದ ಸ್ವಾತಂತ್ರ್ಯಕ್ಕಾಗಿ ಜನಮತಗಣನೆಯ ಒಂದು ದಿನದ ಮೊದಲು ಅಂದರೆ ಮಾರ್ಚ್‌12, 1938ರಲ್ಲಿ ಜರ್ಮನ್ ಸಾಮ್ರಾಜ್ಯದ ಮೂರನೇ ಭಾಗವಾಗಿ ಸೇರ್ಪಡಿಯಾಯಿತು. ಜರ್ಮನ್ ತಂಡಗಳು ನಗರಕ್ಕೆ ಚಲಿಸಿದವು. ರಾಜಕೀಯ ವಿರೋಧಿಗಳು, ಜ್ಯೂ ನಾಗರೀಕರು ಮತ್ತು ಇತರ ಅಲ್ಪಸಂಖ್ಯಾತರನ್ನು ಬಂಧಿಸಿ ಗಡಿಪಾರು ಮಾಡಿದರು. ಸಿನಗಾಗ್‌ಗಳನ್ನು ಹಳುಮಾಡಿದರು ಮತ್ತು ಆ ಸ್ಥಳದಲ್ಲಿ ಸೋವಿಯತ್ ಒಕ್ಕೂಟ ಮತ್ತಿತರ ದೇಶಗಳವರು ಬಂಧಿತರಿಗಾಗಿ ಅನೇಕ ಪಿಒಡಬ್ಲು ಶಿಬಿರಗಳನ್ನು ಸ್ಥಾಪಿಸಿದರು.

2ನೇ ಜಾಗತಿಕ ಸಮರ

ವಿಶ್ವ ಸಮರ IIರ ಸಮಯದಲ್ಲಿ ಕೆಜಡ್‌ ಸಲ್ಜ್‌ಬರ್ಗ್-ಮ್ಯಾಕ್ಸಗ್ಲಾನ್‌ರ ಕಾನ್ಸಟ್ರೇಶನ್ ಶಿಬಿರಗಳನ್ನು ಇಲ್ಲಿ ಸ್ಥಾಪಿಸಲಾಯಿತು. ಇದು ಒಂದು ರೊಮ ಶಿಬಿರವಾಗಿದ್ದು ಕೂಲಿ ಕಾರ್ಮಿಕರನ್ನು ಸ್ಥಳೀಯ ಕೈಗಾರಿಕೆಗೆಳಿಗೆ ಒದಗಿಸುತ್ತಿದ್ದರು.

ಒಕ್ಕೂಟದವರು ಬಾಂಬ್‌ ದಾಳಿಯಿಂದ 7,600 ಮನೆಗಳನ್ನು ನಾಶಮಾಡಿದರು ಮತ್ತು 550 ನಿವಾಸಿಗಳನ್ನು ಕೊಲ್ಲಲಾಯಿತು. ನಗರದ ಸೇತುವೆಗಳು ಮತ್ತು ಕೆಥೆಡ್ರಲ್‌ನ ಸೌಧಗಳು ನಾಶವಾದರೂ ಹೆಚ್ಚಿನ ಬರೋಕ್ ವಾಸ್ತುಶಿಲ್ಪಗಳು ಹಾಗೆ ಉಳಿದವು. ಇದರ ಪರಿಣಾಮವಾಗಿ ನಗರವು ತನ್ನ ಶೈಲಿಯಲ್ಲಿರುವ ನಗರಗಳ ಉದಾಹರಣೆಗಳಲ್ಲೊಂದಾಯಿತು. ಅಮೇರಿಕಾದ ತಂಡಗಳು ಸಾಲ್ಜ್‌ಬರ್ಗ್‌ನ್ನು‌ ಮೇ 5, 1945ರಂದು ಪ್ರವೇಶಿಸಿತು.

ವಿಶ್ವ ಸಮರ IIರ ನಂತರ ಸಾಲ್ಜ್‌ಬರ್ಗ್‌ ನಗರದಲ್ಲಿ ಅನೇಕ ಡಿಪಿ ಶಿಬಿರಗಳಿದ್ದವು. ಅವುಗಳೆಂದರೆ ರಿಯೆಡನ್‌ಬರ್ಗ್, ಹೆರ್ಜಲ್ ಶಿಬಿರ (ಫ್ರಾಂಜ್-ಜೊಸೆಫ್ಸ್-ಕಸೆರ್ನೆ), ಮುಲ್ನ್ ಶಿಬಿರ, ಬೆಟ್ ಬೈಲಿಕ್, ಬೆಟ್ ಟ್ರುಂಪೆಲ್ಡರ್‌, ಮತ್ತು ನ್ಯೂ ಪ್ಯಾಲೆಸ್ತೈನ್. ಸಾಲ್ಜ್‌ಬರ್ಗ್‌ ಆಸ್ಟ್ರಿಯಾದಲ್ಲಿರುವ ಅಮೇರಿಕಾ ಆಕ್ರಮಿತ ಪ್ರದೇಶದ ಕೇಂದ್ರವಾಗಿತ್ತು.

ಪ್ರಸಕ್ತ ದಿನಗಳು

ವಿಶ್ವ ಸಮರ IIದ ನಂತರ ಸಾಲ್ಜ್‌ಬರ್ಗ್‌, ಸಾಲ್ಜ್‌ಬರ್ಗ್‌ ರಾಜ್ಯ(ಲ್ಯಾಂಡ್‌ ಸಾಲ್ಜ್‌ಬರ್ಗ್‌ ) ರಾಜಧಾನಿಯಾಯಿತು.

ಜನವರಿ 27, 2006ರಂದು ವೋಲ್ಫ್‌ಗ್ಯಾಂಗ್ ಮೊಜಾರ್ಟ್‌ನ 250ನೇ ಜನ್ಮ ದಿನದಂದು, ಎಲ್ಲಾ ಸಾಲ್ಜ್‌ಬರ್ಗ್‌‌ನ 35 ಚರ್ಚುಗಳ ಗಂಟೆಗಳು ರಾತ್ರಿ 8 ಗಂಟೆಯ ಸ್ವಲ್ಪ ನಂತರ (ಸ್ಥಳೀಯ ಸಮಯ) ಭಾರಿಸುವ ಮೂಲಕ ಆಚರಿಸುತ್ತಾರೆ. ಪ್ರಮುಖ ಆಚರಣೆಗಳನ್ನು ವರ್ಷಾದ್ಯಂತ ಆಚರಿಸಲಾಗುತ್ತದೆ.

ಜಿಲ್ಲೆಗಳು

ಸಾಲ್ಜ್‌ಬರ್ಗ್ 24 ನಗರದ ಜಿಲ್ಲೆಗಳು ಮತ್ತು 3 ನಗರಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ಜಿಲ್ಲೆಗಳನ್ನು ಹೊಂದಿದೆ.

ನಗರದ ಜಿಲ್ಲೆಗಳೆಂದರೆ (Stadtteile ):

  • ಐಗನ್
  • ಆಲ್ಟ್‌ಸ್ಟಾಟ್‌
  • ಇಸಬೆತ್-ವರ್ಸ್ಟಾಟ್‌
  • ನೈಸ್
  • ನೈಸ್-ಸುಡ್
  • ನಿಲ್
  • ಇಟ್ಲಿಂಗ್
  • ಇಟ್ಲಿಂಗ್-ನೊರ್ಡ್‌
  • ಕಸೆರ್ನ್
  • ಲಾಂಗ್‌ವಿಯೆಡ್‌
  • ಲೆಹೆನ್
  • ಲಿಯೊಪೊಲ್ಡ್‌ಸ್ಕ್ರೋನ್-ಮೂಸ್
  • ಲಿಎಫೆರಿಂಗ್
  • ಮ್ಯಾಕ್ಗಾನ್‌
  • ಮ್ಯಾಕ್ಗಾನ್‌-ವೆಸ್ಟ್
  • ಮೊರ್ಜ್
  • ಮುಲ್ನ್
  • ಸೆಯುಸ್ಟಾಟ್
  • ನೊನ್ನಟಾಲ್
  • ಪಾರ್ಶ್
  • ರಿಯೆಡನ್‌ಬರ್ಗ್
  • ಸಾಲ್ಜ್‌ಬರ್ಗ್‌-ಸುಡ್‌
  • ಟೆಕ್ಸಾಮ್
  • ಶಲ್ಮೊಸ್

ಜನಸಂಖ್ಯೆ ಅಧಿಕವಿರುವ ಪ್ರದೇಶಗಳು (Landschaftsräume )

  • ಗೈಸ್‌ಬರ್ಗ್
  • ಹೆಲ್ಬ್ರುನ್
  • ಹೆವುಬೆರ್ಗ್

ಪ್ರಮುಖ ಸ್ಥಳಗಳು

ಸಾಲ್ಜ್‌ಬರ್ಗ್ ಪ್ರವಾಸಿಗರ ಮೆಚ್ಚಿನ ಸ್ಥಳ, ಕೆಲವು ಋತುಮಾನದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರಿಂದ ತುಂಬಿಕೊಂಡಿರುತ್ತದೆ. ಮೊಜಾರ್ಟ್‌ನ ಜನ್ಮಸ್ಥಳವಲ್ಲದೆ ಇನ್ನಿತರ ಪ್ರಸಿದ್ಧ ಸ್ಥಳಗಳೆಂದರೆ:

ಓಲ್ಡ್‌‌ ಟೌನ್‌‌

  • 1996ರಲ್ಲಿ ಸಂಪೂರ್ಣ ಸಾಲ್ಜ್‌ಬರ್ಗ್‌‌ನ ಹಳೆಯ ನಗರವನ್ನು ವಿಶ್ವ ಪರಂಪರೆಯ ತಾಣವೆಂದು ಗುತುತಿಸಲಾಗಿದೆ.
  • ಬರೊಕ್ ವಾಸ್ತುಶಿಲ್ಪವನ್ನು ಹೊಂದಿರುವ ಅನೇಕ ಚರ್ಚುಗಳು ವಿಶ್ವವಿಖ್ಯಾತವಾಗಿವೆ.
  • ಸಾಲ್ಜ್‌ಬರ್ಗ್‌ ಕೆಥೆಡ್ರಲ್ (ಸಾಲ್ಜ್‌ಬರ್ಗರ್ ಡಾಮ್ )
  • ಹಳೆಯ ನಗರದ ಬೆಟ್ಟದಲ್ಲಿರುವ ಹೊಹೆನ್ಸಾಲ್ಜ್‌ಬರ್ಗ್ ಕೋಟೆ (ಫೆಸ್ಟಂಗ್ ಹೊಹೆನ್ಸಾಲ್ಜ್‌ಬರ್ಗ್ ) ಯುರೋಪಿನಲ್ಲೇ ಅತ್ಯಂತ ದೊಡ್ಡ ಕೋಟೆಯಾಗಿದೆ, ಇಲ್ಲಿಂದ ಸಂಪೂರ್ಣ ಸಾಲ್ಜ್‌ಬರ್ಗ್‌ನ್ನು ನೋಡಬಹುದು‌.
  • ಫ್ರನ್ಜಿಸ್ಕನೆರ್‌ಚರ್ಚ್
  • ಸೈಂಟ್‌ ಪೀಟರ್‌ನ ಸಮಾಧಿಸ್ಥಳ (ಪೀಟರ್ಸ್‌ಫ್ರಿಡಾಫ್ )
  • ನಿನ್ಬರ್ಗ್ ಅಬೆ, ಸಂತ ಬೆನೆಡಿಕ್ಟನ ನಿವಾಸ
  • ರೆಸಿಡೆಂಜ್ ಅರಮನೆ (ಶೋಭಾಯಮಾನ ಪ್ರಿನ್ಸ್-ಪ್ರಧಾನ ಬಿಷಪ್‌ನ ನಿವಾಸ), ಇದು ರೆಸಿಡೆಂಜ್‌ಗಲೆರಿಯೆಯನ್ನು ಹೊಂದಿದೆ
  • ಮೊಜಾರ್ಟ್‌ನ ಜನ್ಮಸ್ಥಳ
  • ಮೊಜಾರ್ಟ್‌ನ ನಿವಾಸ
  • ವಿಶ್ವವಿದ್ಯಾಲಯ ಚರ್ಚ್
  • ಸಿಗ್ಮಂಡ್‌ಸ್ಟಾರ್ (ಥವಾ ನೆಯುಟರ್)
  • ಗಥೈಡ್‌ಗಾಸಾ

ಒಳ ಹಳೆಯ ನಗರದ ಹೊರಭಾಗ

  • ದೊಡ್ಡ ಉದ್ಯಾನದ ತುಂಬಾ ಹೂಗಳಿರುವ ಮಿರಾಬೆಲ್ ಅರಮನೆ.
  • ಸೈಂಟ್‌ ಸಿಬಾಶ್ಚನ್‌ನ ಸಮಾಧಿಸ್ಥಳ (ಸಿಬಾಶ್ಚನ್ಸ್‌ಫ್ರೈಡಾಫ್ )
  • ಲಿಯೊಪೊಲ್ಡ್‌ಸ್ಕ್ರೋನ್ ಅರಮನೆಯು ಒಂದು ರೊಕೊಕೊ ಅರಮನೆಯಾಗಿದೆ ಮತ್ತು ಲಿಯೊಪೊಲ್ಡ್‌ಸ್ಕ್ರೋನ್-ಮೂಸ್‌ನಲ್ಲಿರುವ ರಾಷ್ಟ್ರೀಯ ಐತಿಹಾಸಿಕ ಸ್ಮಾರಕ, ಇದು ಸಾಲ್ಜ್‌ಬರ್ಗ್‌ನ ದಕ್ಷಿಣ ಜಿಲ್ಲೆಯಲ್ಲಿದೆ.
  • ಹೆಲ್ಬ್ರುನ್‌ನಲ್ಲಿನ ಉದ್ಯಾನಗಳು ಮತ್ತು ಕೋಟೆಗಳಿಗೆ ಪ್ರಸಿದ್ಧಿಯಾಗಿದೆ.
  • ಪ್ರವಾಸ ಕಂಪನಿಗಳು ದ ಸೌಂಡ್‌ ಅಫ್ ಮ್ಯೂಸಿಕ್‌ ಚಿತ್ರದ ಸ್ಥಳಗಳಿಗೆ ನಿಗದಿಪಡಿಸುತ್ತಾರೆ.

ಪ್ರಧಾನ ಸಾಲ್ಜ್‌ಬರ್ಗ್ ‌ಪ್ರದೇಶದೊಳಗೆ

  • ಅನಿಫ್ ಕೋಟೆ
  • ಕ್ಯಾಲ್ವರಿ ಬೆಟ್ಟದಲ್ಲಿರುವ ಬ್ಯಾಸಿಲಿಕಾ ಮರಿಯಾ ಪ್ಲೈನ್, ಒಂದು ಸಾಲ್ಜ್‌ಬರ್ಗ್‌ನ ‌ಉತ್ತರ ಕೊನೆಯಲ್ಲಿರುವ ಹಳೆಯ ಬರೋಕ್ ಚರ್ಚ್‌.
  • ಸಾಲ್ಜ್‌ಬರ್ಗರ್‌ ಪ್ರೈಲಿಚ್‌ಮ್ಯೂಸಿಯಮ್ ಗ್ರೊಗ್‌ಮೈನ್‌, ಒಂದು ತೆರೆದ ವಸ್ತುಸಂಗ್ರಹಾಲಯವಾಗಿದ್ದು ತೋಟದಮನೆ/ಕಟ್ಟಡಗಳ ಆಕೃತಿಗಳನ್ನು ಐತಿಹಾಸಿಕ ಮಾದರಿಯಲ್ಲಿ ರಚಿಸಿಡಲಾಗಿದೆ.
  • ಶ್ಲೊಸ್ ಕ್ಲೆಶೆಮ್‌ ಅರಮನೆ(ಪ್ರಸ್ತುತ ಇದು ಮೋಜು ಮಂದಿರ)ಯನ್ನು ಮೊದಲು ಅಡಾಲ್ಫ್ ಹಿಟ್ಲರ್‌ ಬಳಸುತ್ತಿದ್ದನು.
  • ಬೆರ್ಕ್ಟಸ್ಗಾಡನ್‌ ಹತ್ತಿರವಿರುವ ಹಿಟ್ಲರ್‌ ಪರ್ವತದಲ್ಲಿರುವ ಬೆರ್ಗಾಫ್‌ನಲ್ಲಿ ಈಗಲ್ಸ್ ನೆಸ್ಟ್‌ ಮಾತ್ರ ಉಳಿದುಕೊಂಡಿದೆ.
  • ಸಾಲ್ಜ್‌ಬರ್ಗ್‌ ರಾಜ್ಯದ ಪಶ್ಚಿಮದಲ್ಲಿ ಮತ್ತು ಮುಂದುವರೆದು ಅಪ್ಪರ್‌ ಆಸ್ಟ್ರಿಯಾ ಮತ್ತು ಸ್ಟೈರಿಯಾದಲ್ಲಿರುವ ಸರೋವರಗಳ ಪ್ರದೇಶವೆಂದರೆ ಸಲ್ಜ್‌ಕಮ್ಮೆರ್‌ಗಟ್‌.
  • ಅಂಟರ್ಸ್‌ಬರ್ಗ್ ಪರ್ವತವು ನಗರದ ಪಕ್ಕದಲ್ಲಿದೆ, ಜರ್ಮನಿ-ಆಸ್ಟ್ರಿಯಾದ ಗಡಿ ಪ್ರದೇಶದಲ್ಲಿದೆ, ಮತ್ತು ನಗರ ಮತ್ತು ಆಲ್ಪ್ಸ್‌ಗಳ ಪೂರ್ಣ ನೋಟವನ್ನೊದಗಿಸುತ್ತದೆ.
  • ಸ್ಕೀಯಿಂಗ್‌ (ಹಿಮ ಹಾವುಗೆ ತೊಟ್ಟು-ಜಾರುವುದು) ಒಂದು ಚಳಿಗಾಲದ ಆಕರ್ಷಣೆಯಾಗಿದೆ. ಸಾಲ್ಜ್‌ಬರ್ಗ್‌ ಸ್ಕೀಯಿಂಗ್‌ ಸೌಲಭ್ಯವನ್ನು ಹೊಂದಿಲ್ಲ, ಆದರೆ ಇದು ದಕ್ಷಿಣದಿಂದ ಸ್ಕೀಯಿಂಗ್‌ ಪ್ರದೇಶವನ್ನು ತಲುಪಲು ಹೆದ್ದಾರಿಯಾಗಿದೆ. ಚಳಿಗಾಲದಲ್ಲಿ ಯುರೋಪಿನಾದ್ಯಂತ ಇದರ ವಿಮಾನನಿಲ್ದಾಣಕ್ಕೆ ಬಾಡಿಗೆ ವಿಮಾನಗಳು ಬರುತ್ತವೆ.

ಸಾಲ್ಜ್‌ಬರ್ಗ್‌ ಪ್ರಾಣಿ ಸಂಗ್ರಹಾಲಯ

  • ಸಾಲ್ಜ್‌ಬರ್ಗ್‌ ಪ್ರಾಣಿ ಸಂಗ್ರಹಾಲಯವು ನಗರದ ದಕ್ಷಿಣ ಭಾಗದಲ್ಲಿದೆ, ಅನಿಫ್ ಪುರಸಭೆಗೊಳಪಡುತ್ತದೆ.

ಪ್ರಖ್ಯಾತ ನಾಗರಿಕರು

  • ಸಂಗೀತ ಸಂಯೋಜಕ ವೋಲ್ಫ್‌ಗ್ಯಾಂಗ್ ಅಮಡೇಸ್ ಮೊಜಾರ್ಟ್‌ ಇಲ್ಲಿಯೇ ಜನಿಸಿ ಬೆಳೆದವರು ಮತ್ತು 1769 ರಿಂದ 1781ವರೆಗೆ ಆರ್ಚ್‌ಬಿಷಪ್ ಆಗಿ ಕೆಲಸ ನಿರ್ವಹಿಸಿದರು. ಇವರ ಜನ್ಮಸ್ಥಳ ಮತ್ತು ವಾಸವಿದ್ದ ಮನೆಯು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಹಳೆಯ ಪಟ್ಟಣದ ಚರ್ಚಿನ ಸ್ಮಶಾನದಲ್ಲಿ ಇವರ ಕುಟುಂಬದ ಶವಸಂಸ್ಕಾರ ಮಾಡಲಾಗಿದೆ. ಅಲ್ಲದೆ ’ವುಲ್ಫರ್ಲ್‌’ಗಳಿಗಾಗಿ ಹಲವಾರು ಸ್ಮಾರಕಗಳು ನಗರದಲ್ಲಿ ತಲೆ ಎತ್ತಿವೆ.
  • ಶಬ್ದಸಂಬಂಧಿ ಚಿಕಿತ್ಸೆಯಲ್ಲಿ ತಜ್ಞರಾಗಿದ್ದ ಕ್ರಿಸ್ಟಿಯನ್ ಡೋಪ್ಲರ್ ಜನಿಸಿದ್ದು ಕೂಡ ಸಾಲ್ಜ್‌ಬರ್ಗ್‌‌ನಲ್ಲಿಯೆ. ಡೋಪ್ಲರ್ ಪರಿಣಾಮ ಸಂಶೋಧನೆಯಿಂದಾಗಿ ಹೆಚ್ಚು ಪ್ರಸಿದ್ಧಿ ಹೊಂದಿದ್ದಾರೆ.
  • ಜೋಸೆಫ್ ಮೊಹ್ರ್‌ರ ಜನ್ಮಸ್ಥಾನ ಸಾಲ್ಜ್‌ಬರ್ಗ್‌. ಇವರು ಫ್ರಾನ್ಜ್ ಗ್ರುಬರ್ ಜೊತೆ ಸೇರಿ "ಸೈಲೆಂಟ್ ನೈಟ್‌"ಗಾಗಿ ಸಂಗೀತ ಸಂಯೋಜಿಸಿ ಪಠ್ಯವನ್ನು ಬರೆದಿದ್ದಾರೆ. ನೆರೆಯ ಒಬರ್ನ್‌ಡೋರ್ಫ್‌ನಲ್ಲಿ ಪಾದ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ 1818ರಲ್ಲಿ ಮೊದಲ ಬಾರಿಗೆ ಈ ಹಾಡನ್ನು ಪ್ರದರ್ಶಿಸಿದರು.
  • ಬವೇರಿಯಾದ ಮಿರಾಬೆಲ್ ಅರಮನೆಯಲ್ಲಿ ರಾಜಕುಮಾರ ಒಟ್ಟೊ ಫ್ರೀಡ್ರಿಕ್ ಲಡ್ವಿಗ್ ಜನಿಸಿದನು, ಇತನು ಜನಿಸುವುದಕ್ಕೆ ಕೆಲ ದಿನ ಮೊದಲು ಬವೇರಿಯಾ ಆಸ್ಟ್ರೀಯಾದ ಆಡಳಿತಕ್ಕೆ ಪುನಃ ಹಿಂದಿರುತ್ತು ನಂತರ ಇವನು ಒಟ್ಟೊ ಆಫ್ ಗ್ರೀಸ್ ರಾಜನಾದನು.
  • ಪ್ರಸಿದ್ಧ ಬರಹಗಾರ ಸ್ಟೀಫನ್ ಜ್ವಾಗ್ 1934ರವರೆಗೆ ಸುಮಾರು 15 ವರ್ಷ ಸಾಲ್ಜ್‌ಬರ್ಗ್‌‌ನಲ್ಲಿ ವಾಸವಿದ್ದರು.
  • ಮಾರಿಯಾ ವ್ಯಾನ್ ಟ್ರ್ಯಾಪ್ (ನಂತರದಲ್ಲಿ ಮರಿಯಾ ಟ್ರ್ಯಾಪ್) ಮತ್ತು ಅವರ ಕುಟುಂಬವನ್ನು ನಾಜಿಗಳಿಂದ ತಪ್ಪಿಸಿಕೊಳ್ಳಲಿ ಅಮೆರಿಕಾಗೆ ಪಲಾಯನ ಮಾಡುವವರೆಗೆ ಸಾಲ್ಜ್‌ಬರ್ಗ್‌ನಲ್ಲಿ ವಾಸವಿದ್ದರು.
  • 19ನೆಯ ಶತಮಾನದ ಆಸ್ಟ್ರೀಯಾ ಕಲಾವಿದ-ಶೃಂಗಾರಕಾರ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಹನ್ಸ್ ಮಕಾರ್ಟ್‌ರ ಜನನ ಸ್ಥಳ ಸಾಲ್ಜ್‌ಬರ್ಗ್‌. ಇವರ ಗೌರವಾರ್ಥವಾಗಿ ಮಕಾರ್ಟ್‌ಫ್ಲ್ಯಾಟ್ (ಮಕಾರ್ಟ್ ಸ್ಕ್ವೇರ್ ) ನಿರ್ಮಿಸಲಾಗಿದೆ.
  • ಬರಹಗಾರ ಥಾಮಸ್ ಬೆರ್ನ್ಹಾರ್ಡ್ ಸಾಲ್ಜ್‌ಬರ್ಗ್‌ನಲ್ಲಿಯೆ ಬೆಳೆದು ತಮ್ಮ ಜೀವನದ ಬಹುಭಾಗವನ್ನು ಇಲ್ಲಿಯೇ ಕಳೆದರು.
  • ಹೆರ್ಬರ್ಟ್ ವಾನ್ ಕರಾಜನ್ ಒಬ್ಬ ಪ್ರಸಿದ್ಧ ಸಂಗೀತಗಾರ ಮತ್ತು ಸಂಯೋಜಕ. ಸಾಲ್ಜ್‌ಬರ್ಗ್‌ನಲ್ಲಿ ಜನಿಸಿ 1989ರಲ್ಲಿ ನೆರೆಯ ಅನೀಫ್‌ನಲ್ಲಿ ಮರಣ ಹೊಂದಿದರು.
  • ಮಾನವ ಶಾಸ್ತ್ರಜ್ಞ ಅಡೊ ಲಡ್‌ವಿಗ್ ಕೂಡ ಜನಿಸಿದ್ದು ಇಲ್ಲಿಯೇ.
  • ಫಾರ್ಮುಲಾ ಒನ್ ಚಾಲಕ, ರೋಲ್ಯಾಂಡ್ ರಾಟ್ಜೆನ್‌ಬರ್ಗರ್‌ರ ಜನ್ಮಸ್ಥಾನ ಸಾಲ್ಜ್‌ಬರ್ಗ್‌. 1994 ಸ್ಯಾನ್ ಮಾರಿನೊ ಗ್ರ್ಯಾಂಡ್ ಫ್ರಿಕ್ಸ್‌ ಚಾಂಪಿಯನ್‌ಶಿಪ್‌ಗಾಗಿ ಅಭ್ಯಾಸ ನಡೆಸುವಾಗ ಸಾವನ್ನಪ್ಪಿದರು.
  • ಜೋಸೆಫ್ ಲುಟ್ಗೆಬ್,ಫ್ರೆಂಚ್ ಕಹಳೆ ನುಡಿಸುವ ಕಲಾವಿದ
  • ಮೇ 10 1946ರಂದು ಸಾಲ್ಜ್‌ಬರ್ಗ್ನಲ್ಲಿ ಜನಿಸಿದ ಕ್ಲೌಸ್ ಅಗೆರ್ ಹೆಸರುವಾಸಿಯಾದ ಸಂಯೋಜಕ ಮತ್ತು ಮೊಜಾರ್ಟಿಯಂ ಪ್ರಾಧ್ಯಾಪಕ‌.
  • ಆಸ್ಟ್ರೀಲಿಯನ್ ರೂಲ್ಸ್ ಫುಟ್ಬಾಲರ್ ಮತ್ತು ಎ‌ಎಫ್‌ಎಲ್ ಹಾಲ್ ಆಫ್ ಫೇಮ್ ಆಟಗಾರರಾದ ಅಲೆಕ್ಸ್ ಜೆಸಾವುಲೆಂಕೊ, ಅಗಸ್ಟ್ 2 1945ರಂದು ಸಾಲ್ಜ್‌ಬರ್ಗ್‌ನಲ್ಲಿ ಜನಿಸಿದರು, ಇವರು ಫುಟ್ಬಾಲ್ "ದಂತಕಥೆ"ಯಾಗಿ ಪ್ರಸಿದ್ದಿ ಹೊಂದಿದ್ದಾರೆ.
  • ಜರ್ಮನಿಯ ಸಾಹಿತ್ಯದಲ್ಲಿ ಹೆಸರು ಮಾಡಿದ ಜಾರ್ಜ್ ಟ್ರಾಲ್ ಜನಿಸಿದ್ದು ಸಾಲ್ಜ್‌ಬರ್ಗ್‌ನಲ್ಲಿಯೆ‌.
  • 1884ರಲ್ಲಿ ಕಾನೂನು ಪದವಿ ಪಡೆದ ನಂತರದಲ್ಲಿ ಥಿಯೊಡರ್ ಹೆರ್ಜಲ್ ಸಾಲ್ಜ್‌ಬರ್ಗ್‌ನ ನ್ಯಾಯಾಲಯಗಳಲ್ಲಿ ಕೆಲಸ ನಿರ್ವಹಿಸಿದರು.

ಘಟನೆಗಳು

  • ಪ್ರತಿವರ್ಷ ಜುಲೈ ಅಗಸ್ಟ್‌ನಲ್ಲಿ ನಡೆಯುವ ಪ್ರಸಿದ್ಧ ಸಂಗೀತ ಹಬ್ಬವಾದ ಸಾಲ್ಜ್‌ಬರ್ಗ್‌ ಹಬ್ಬವು ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರತಿ ವರ್ಷ ಈಸ್ಟರ್ ಸಮಯದಲ್ಲಿ ಸಣ್ಣ ಪ್ರಮಾಣದ ಸಾಲ್ಜ್‌ಬರ್ಗ್‌ ಈಸ್ಟರ್ ಹಬ್ಬ ನಡೆಯುತ್ತದೆ.
  • ಯುರೋಫ್ರಿಕ್ಸ್ ಮಲ್ಟಿಮೀಡಿಯಾ ಪ್ರಶಸ್ತಿ ಸಮಾರಂಭವು ಸಾಲ್ಜ್‌ಬರ್ಗ್‌ನಲ್ಲಿ ನಡೆಯುತ್ತದೆ.

ಸಾರಿಗೆ ವ್ಯವಸ್ಥೆ

ವ್ಯಾಪಕವಾದ ರೈಲು ಸಂಪರ್ಕವು ನಗರಕ್ಕೆ ಸೇವೆ ಸಲ್ಲಿಸುತ್ತಿದ್ದು, ವಿಯೆನ್ನಾ, ಮ್ಯುನಿಚ್, ಇನ್ಸ್‌ಬ್ರುಕ್, ಮತ್ತು ಜ್ಯೂರಿಚ್ ನಗರಗಳ ಜೊತೆಗೆ ದಿನನಿತ್ಯವು ಪೂರ್ವ-ಪಶ್ಚಿಮ ರೈಲು ಸೇವೆ ಒದಗಿಸುತ್ತಿದೆ ಮತ್ತು ಪ್ರತಿನಿತ್ಯ ಅತಿವೇಗದ ಐಸಿಇ ಸೇವೆ ಒದಗಿಸುತ್ತಿದೆ. ನಗರವು ಆಲ್ಫ್ಸ್ ಮೂಲಕ ಇಟಲಿಗೆ ದಕ್ಷಿಣ ಭಾಗದ ರೈಲುಗಳ ಕೇಂದ್ರ ಸ್ಥಾನವಾಗಿ ಕೆಲಸ ನಿರ್ವಹಿಸುತ್ತಿದೆ.

ಸಾಲ್ಜ್‌ಬರ್ಗ್‌ ವಿಮಾನನಿಲ್ದಾಣವು ಯೂರೋಪಿನ ನಗರಗಳಾದ ಫ್ರ್ಯಾಂಕ್‌ಫರ್ಟ್, ವಿಯೆನ್ನಾ, ಲಂಡನ್, ರೊಟ್ಟ್‌ಡ್ಯಾಮ್, ಆ‍ಯ್‌ಮ್ಸ್ಟರ್‌ಡ್ಯಾಂ, ಬ್ರುಸೆಲ್ಸ್, ಡುಸೆಲ್‌ಡೋರ್ಫ್ ಮತ್ತು ಜ್ಯೂರಿಚ್,ಹ್ಯಾಮ್ಬರ್ಗ್ ಮತ್ತು ಡಬ್ಲಿನ್‌ಗಳಿಗೆ ವಿಮಾನ ಸೇವೆ ನೀಡುತ್ತಿದೆ. ಇದಲ್ಲದೆ ಹಲವಾರು ಬಾಡಿಗೆ ವಿಮಾನಗಳ ಸೇವೆಯನ್ನು ನೀಡುತ್ತದೆ.

ಮುಖ್ಯನಗರಗಳಲ್ಲಿ ಟ್ರಾಲಿಬಸ್‌ ಸೇವೆಯಿದ್ದು ಇಪ್ಪತ್ತು ಮಾರ್ಗಗಳಲ್ಲಿ ಸಂಚರಿಸುತ್ತವೆ, ಮತ್ತು ಹತ್ತು ನಿಮಿಷಕ್ಕೊಂದು ಬಸ್ ಸೇವೆ ಲಭ್ಯವಿದೆ. ಸಾಲ್ಜ್‌ಬರ್ಗ್‌ ನಾಲ್ಕು ಮಾರ್ಗಗಳ S-Bahn ವ್ಯವಸ್ಥೆ ಹೊಂದಿದ್ದು (S1, S2, S3, S11), ಮುಖ್ಯ ರೈಲು ನಿಲ್ದಾಣಗಳಿಂದ ಪ್ರತಿ 30 ನಿಮಿಷಕ್ಕೊಂದು ರೈಲು ಹೊರಡುತ್ತದೆ ಮತ್ತು ಈ ಬಗ್ಗೆ ಮಾಹಿತಿಯು ಒಬಿಬಿ ನೆಟ್‌ನಲ್ಲಿ ದೊರೆಯುತ್ತದೆ. ಹೊರ ಹೋಗುವ S1 ಮಾರ್ಗವು ಒಬರ್ನ್‌ಡೋರ್ಫ್ ನಲ್ಲಿರುವ ಜಗತ್‌ ಪ್ರಸಿದ್ಧ ಸೈಲೆಂಟ್ ನೈಟ್ ಚರ್ಚ್‌ಗೆ ಸುಮಾರು 25 ನಿಮಿಷದಲ್ಲಿ ತಲುಪುತ್ತದೆ.

ಜನಪ್ರಿಯ ಸಂಸ್ಕೃತಿ

1960ರಲ್ಲಿನ ದ ಸೌಂಡ್ ಆಫ್ ಮ್ಯೂಜಿಕ್ ಚಲನಚಿತ್ರವನ್ನು ಸಾಲ್ಜ್‌ಬರ್ಗ್‌ ಮತ್ತು ಸಾಲ್ಜ್‌ಬರ್ಗ್ ರಾಜ್ಯದಲ್ಲಿ ತಯಾರಿಸಲಾಯಿತು. ಮಾರಿಯಾ ವ್ಯಾನ್ ಟ್ರ್ಯಾಪ್ ಎಂಬ ಸಾಲ್ಜ್‌ಬರ್ಗ್‌ ಮೂಲದ ಕ್ರೈಸ್ತ ಸನ್ಯಾಸಿನಿಯ ನಿಜವಾದ ಕಥೆಯನ್ನಾಧರಿಸಿದೆ ಈಕೆಯು ಉನ್ನತಾಧಿಕಾರಿಗಳ ಕುಟುಂಬದ ಜೊತೆಗೆ ಜರ್ಮನಿಯ ಆ‍ಯ್‌ನ್ಚುಲೆಸ್‌ನಿಂದ ಪಲಾಯನ ಮಾಡಿದಳು. ಆಸ್ಟ್ರೀಯಾದಲ್ಲಿ ಈ ಚಿತ್ರವು ಪ್ರಸಿದ್ಧವಾಗಲಿಲ್ಲ, ಆದರೆ ಚಿತ್ರೀಕರಣ ನಡೆದ ಸ್ಥಳಕ್ಕೆ ಒಬ್ಬರೆ ಅಥವಾ ಪ್ರವಾಸದ ಮೂಲಕ ಸಂದರ್ಶಿಸಲು ಜನರು ಆಸೆ ಪಡುತ್ತಾರೆ.

ಆಸ್ಟ್ರೀಯಾದ ಅಪರಾಧ ಸರಣಿ ಸ್ಟಾಕಿಂಗರ್ ಸಾಲ್ಜ್‌ಬರ್ಗ್ ನಗರದಲ್ಲಿ ನಡೆಯುತ್ತದೆ‌.

2010ರ ನೈಟ್ & ಡೇ ಚಿತ್ರದ ಬಹುಭಾಗವನ್ನು ಸಾಲ್ಜ್‌ಬ??

Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
Duncan Howsley
25 August 2016
Make sure to check out the crypt for the strange, candlelit silhouettes!
Justin
2 January 2016
Absolutely breathtaking interior. Total must-see for anybody who loves art or architecture
Taras Kobets
15 June 2016
It's very old and very big church. The size of the building is huge for this small city. One can get on the 2nd roof floor for 15eur
Can Erdem
29 December 2015
Biggest church of Salzburg
Pelin Dura
7 January 2016
amazing design
Molotov Cupcake
20 March 2023
Das älteste, kontinuierlich besetzte Männerkloster nördlich der Alpen. Gehört zum Benedektiner-Orden.
8.4/10
Vadim I ಮತ್ತು 5,405 ಹೆಚ್ಚಿನ ಜನರು ಇಲ್ಲಿದ್ದಾರೆ
Radisson Blu Hotel Altstadt

starting $264

Hotel Sacher Salzburg

starting $447

Hotel Sacher Salzburg

starting $543

Hotel Goldgasse

starting $491

Stein Hotel

starting $159

Arthotel Blaue Gans

starting $370

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Salzburg Cathedral

The Salzburg Cathedral (German: Salzburger Dom) is a 17th century

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Kapitelplatz und Kapitelgasse

Kapitelplatz este o piață mare situată la sud de catedrală în Cent

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Residenzplatz

Residenzplatz is one of the most popular places in Salzburg,

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Alte Residenz

The Alte Residenz in the Old Town of Salzburg was the city palace of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Hohensalzburg Castle

Hohensalzburg Castle(Festung Hohensalzburg ,literally 'High Salzburg

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Petersfriedhof

The Petersfriedhof or Sant Peter's cemetery is one of the twelve

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Franciscan Church, Salzburg

The Franciscan Church (German: Franziskanerkirche) is one of the

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Kollegienkirche, Salzburg

The Kollegienkirche (Collegiate Church) in Salzburg, Austria, is the

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Tihany Abbey

The Tihany Abbey is a Benedictine monastery established at Tihany in

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Melk Abbey

Melk Abbey or Stift Melk is an Austrian Benedictine abbey, and one of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Durham Cathedral Priory

Durham Priory was a Benedictine priory associated with Durham

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Mont Saint-Michel

Le Mont-Saint-Michel (English. St Michael's Mount) is a rocky tidal

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Monastery of San Xulián de Samos

The Monastery of St Julian of Samos (Galician: Mosteiro de San Xulián

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ