ಸ್ಫಿಂಕ್ಸ್‌ (ಸಿಂಹನಾರಿ)

ಸ್ಫಿಂಕ್ಸ್ (ಸಿಂಹನಾರಿ) (ಪುರಾತನ ಗ್ರೀಕ್‌: Σφίγξ / Sphinx , ಕೆಲವೊಮ್ಮೆ Φίξ /Phix ) ಎಂಬುದು ಒಂದು ಕಾಲ್ಪನಿಕ ರೂಪವಾಗಿದೆ. ಇದು ಮೈಚಾಚಿಕೊಂಡಿರುವ ಸಿಂಹದ ದೇಹ ಹಾಗೂ ಮಾನವನ ತಲೆ ಹೊಂದಿರುವ ಬೃಹತ್‌ ಪ್ರತಿಮೆ. ಹಳೆಯ ರಾಜ್ಯ ಈಜಿಪ್ಟ್‌ನ ಕೆತ್ತನೆ ಮಾಡಲಾದ ಪ್ರತಿಮೆಗಳಲ್ಲಿ ಇದರ ಮೂಲಗಳಿವೆ. ಇದಕ್ಕೆ ಪುರಾತನ ಗ್ರೀಕರು 'ದಮನಕಾರಿ ಗಂಡು ದೈತ್ಯ, ಗ್ರೀಕ್‌ ಪೌರಾಣಿಕ ಕಥೆಯ ಒಂದು ಪುರಾತನ ರೂಪಕ್ಕೆ ತಮ್ಮದೇ ಆದ ಹೆಸರಿಟ್ಟರು. ದಕ್ಷಿಣ ಹಾಗೂ ಅಗ್ನೇಯ ಏಷ್ಯಾ ವಲಯಗಳಲ್ಲಿ ಇಂತಹದ್ದೇ ಪ್ರತಿರೂಪಗಳು ಕಂಡುಬಂದಿವೆ. ಯುರೋಪೀಯ ಶೃಂಗಾರ ಕಲೆಯಲ್ಲಿ, ಸಿಂಹನಾರಿಯು ನವೋದಯ ಯುಗದಲ್ಲಿ ಪ್ರಮುಖ ಪುನಶ್ಚೇತನ ಕಂಡಿತು. ಆನಂತರ, ಮೂಲ ಈಜಿಪ್ಟ್‌ ಪರಿಕಲ್ಪನೆಯನ್ನು ಹೋಲುವ ಸಿಂಹನಾರಿಯ ರೂಪವನ್ನು ಹಲವು ಇತರೆ ಸಂಸ್ಕೃತಿಗಳಿಗೆ ರಫ್ತುಮಾಡಲಾಯಿತು. ಮೂಲದಲ್ಲಿದ್ದ ವಿವರಣೆಗಳ ಅನುವಾದ ಹಾಗೂ ಇತರೆ ಸಾಂಸ್ಕೃತಿಕ ಪರಂಪರೆಗೆ ಹೋಲಿಸಿದಂತೆ ಪರಿಕಲ್ಪನೆಯ ವಿಕಸನಗಳ ಕಾರಣ, ಈ ಹೊಸ ರೂಪಗಳನ್ನು ಭಿನ್ನ ರೀತಿಗಳಲ್ಲಿ ನಿರೂಪಿಸಲಾಗಿವೆ.

ಸಾಮಾನ್ಯವಾಗಿ, ದೇವಾಲಯಗಳ ಕಾವಲಿರುವುದು ಸಿಂಹನಾರಿಗಳ ಪಾತ್ರವಾಗಿತ್ತು. ರಾಜರುಗಳ ಗೋರಿಗಳು ಅಥವಾ ಧಾರ್ಮಿಕ ದೇವಾಲಯಗಳಂತಹ ವಾಸ್ತುಶಿಲ್ಪ ರಚನೆಗಳೊಂದಿಗೆ ಸಿಂಹನಾರಿಗಳನ್ನು ಸ್ಥಾಪಿಸಲಾಯಿತು. ಅತ್ಯಂತ ಹಳೆಯ ಸಿಂಹನಾರಿ ತುರ್ಕಿ ದೇಶದ ಗೊಬೆಕ್ಲಿ ಟೆಪೆಯಲ್ಲಿ ಪತ್ತೆ ಮಾಡಲಾಗಿತ್ತು. ಇದು 9,500 B.C. ಕಾಲಮಾನದಷ್ಟು ಹಳೆಯದಾಗಿದೆ. ನಾಲ್ಕನೆಯ ರಾಜಪರಂಪರೆಯ ಹೆಟೆಫೆರೆಸ್‌ IIನನ್ನು ನಿರೂಪಿಸುವ ಸಿಂಹನಾರಿಯು ಈಜಿಪ್ಟ್‌ನಲ್ಲಿರುವ ಮೊದಲ ಸಿಂಹನಾರಿಯಾಗಿದೆ. ಇದು 2723 ರಿಂದ 2563 BC ತನಕ ಉಳಿದುಕೊಂಡಿತ್ತು. ಅತಿ ದೊಡ್ಡ ಹಾಗೂ ಚಿರಪರಿಚಿತ ಸಿಂಹನಾರಿಯೆಂದರೆ ಗೀಜಾದ ಮಹಾ ಸಿಂಹನಾರಿ (ಅರಬಿಕ್ ಭಾಷೆ:: أبو الهول,). ಇದು ಈಜಿಪ್ಟ್‌ ದೇಶದ ನೈಲ್‌ ನದಿಯ ಪಶ್ಚಿಮ ದಂಡೆಯಲ್ಲಿರುವ ಗೀಜಾ ಪ್ರಸ್ಥಭೂಮಿಯಲ್ಲಿದ್ದು, ಪೂರ್ವ ದಿಕ್ಕಿಗೆ ಮುಖ ಮಾಡಿದೆ. ಈ ಸಿಂಹನಾರಿಯೂ ಸಹ ಇದೇ ರಾಜಪರಂಪರೆಗೆ ಸೇರಿದೆ. ಇದರ ನಿರ್ಮಾಣದ ದಿನಾಂಕ ಕುರಿತು ನಿಖರ ಮಾಹಿತಿಯಲ್ಲದಿದ್ದರೂ, ಮಹಾ ಸಿಂಹನಾರಿಯ ಶಿರವು ಫೇರೋ ಖಫ್ರಾನ ಮುಖವನ್ನು ಹೋಲುತ್ತದೆ ಎಂದು ನಂಬಲಾಗಿದೆ.

ಇದನ್ನು ನಿರ್ಮಿಸಿದವರು ಈ ಪ್ರತಿಮೆಗಳಿಗೆ ಏನು ಹೆಸರುಗಳಿಂದ ಕರೆದರೂ ತಿಳಿಯದು. ಸಾವಿರ ವರ್ಷಗಳ ನಂತರ, ಮಹಾ ಸಿಂಹನಾರಿಯ ಸ್ಥಳದಲ್ಲಿ, ಥುಟ್ಮೋಸ್‌ IV 1400 BCEನಲ್ಲಿ ಸ್ಥಾಪಿಸಿದ ಫಲಕದಲ್ಲಿ ಆ ಯುಗದ ಸ್ಥಳೀಯ ಸೂರ್ಯದೇವನ ಮೂರು ಅಂಶಗಳನ್ನು ನಮೂದಿಸಲಾಗಿದೆ: ಖೆಪೆರಾ - ರೇ - ಆಟುಮ್‌ ಗೋರಿ ಹಾಗೂ ದೇವಾಲಯ ಸಂಕೀರ್ಣಗಳಲ್ಲಿ ಈ ರಚನೆಗಳನ್ನು ಸೇರಿಸುವ ಪದ್ಧತಿಯು ಬಹುಬೇಗನೆ ಸಾಂಪ್ರದಾಯಿಕ ರೂಢಿಯಾಯಿತು. ತಮ್ಮ ಪ್ರಬಲ ದೈವ ಸೆಖ್ಮೆಟ್‌ನೊಂದಿಗೆ ಬಾಂಧವ್ಯ ತೋರಿಸಿಕೊಳ್ಳಲು, ಹಲವು ಫೇರೋಗಳು ತಮ್ಮ ಗೋರಿಗಳ ಕಾವಲುಗಾರ ಪ್ರತಿಮೆಗಳ ಮೇಲೆ ತಮ್ಮ ಶಿರಭಾಗವನ್ನು ಕೆತ್ತಿಸಿಕೊಳ್ಳುತ್ತಿದ್ದರು.

ಈಜಿಪ್ಟ್‌ನ ಇತರೆ ಖ್ಯಾತ ಸಿಂಹನಾರಿಗಳ ಪೈಕಿ ಒಂದು ಫೇರೋ ಹಟ್ಷೆಪ್ಷುಟ್‌ನ ಶಿರವನ್ನು ಹೊತ್ತಿರುವುದು ಸಹ ಸೇರಿದೆ. ಈಕೆಯ ತದ್ರೂಪವನ್ನು ಬೆಣಚುಕಲ್ಲಿನಲ್ಲಿ ಕೆತ್ತಲಾಗಿದ್ದು, ನ್ಯೂಯಾರ್ಕ್‌ನ ಮೆಟ್ರೊಪೊಲಿಟನ್‌ ಮ್ಯೂಸಿಯಮ್‌ ಆಫ್‌ ಆರ್ಟ್‌ ವಸ್ತುಸಂಗ್ರಹಾಲಯದಲ್ಲಿಡಲಾಗಿದೆ. ಮೆಂಫಿಸ್‌ನ ಹಾಲುಗಲ್ಲಿನ ಸಿಂಹನಾರಿಯನ್ನು ಈಗ ಬಯಲು ವಸ್ತು ಸಂಗ್ರಹಾಲಯದಲ್ಲಿಡಲಾಗಿದೆ. ಗೋರಿಗಳು ಹಾಗೂ ದೇವಾಲಯಗಳತ್ತ ದಾರಿಗಳಲ್ಲಿ ಕಾವಲುಗಾರ ಸಿಂಹನಾರಿಗಳನ್ನು ಸಾಲಾಗಿ ಜೋಡಿಸುವುದಲ್ಲದೆ, ಬಹಳ ವೈಭವೋಪೇತ ಸಂಕೀರ್ಣ ಮಳಿಗೆಗಳ ಮೆಟ್ಟಿಲುಗಳಲ್ಲಿ ಸಹ ಜೋಡಿಸಲು ಈ ವಿನ್ಯಾಸವನ್ನು ವಿಸ್ತರಿಸಲಾಯಿತು. ಆಮೊನ್‌ನನ್ನು ನಿರೂಪಿಸುವ ಒಂಬೈನೂರು ಟಗರು ಶಿರವುಳ್ಳ ಆಕೃತಿಗಳನ್ನು, ತನ್ನ ಪಂಥವು ಪ್ರಬಲವಾಗಿದ್ದ ಥಿಬ್ಸ್‌ನಲ್ಲಿ ನಿರ್ಮಿಸಲಾಗಿತ್ತು.

ಗ್ರೀಕ್‌ ಸಂಪ್ರದಾಯಗಳು

ಕಂಚಿನ ಯುಗದಿಂದಲೂ, ಹೆಲೀನರು ಈಜಿಪ್ಟ್‌ನೊಂದಿಗೆ ವ್ಯವಹಾರ ಹಾಗೂ ಸಾಂಸ್ಕೃತಿಕ ಸಂಪರ್ಕಗಳನ್ನಿಟ್ಟುಕೊಂಡಿದ್ದರು.

ಅಲೆಕ್ಸ್ಯಾಂಡರ್‌ ದಿ ಗ್ರೇಟ್‌ ಈಜಿಪ್ಟ್‌ ತನ್ನದಾಗಿಸಿಕೊಳ್ಳುವ ಮುಂಚೆ, ಈ ಪ್ರತಿಮೆಗಳಿಗೆ ಗ್ರೀಕ್‌ ಭಾಷಾ 'ಸ್ಫಿಂಕ್ಸ್ '‌ ಎಂದು ಹೆಸರಿಸಲಾಗಿತ್ತು. ಗ್ರೀಸ್‌ ದೇಶದ ಇತಿಹಾಸಕಾರರು ಮತ್ತು ಭೂಗೋಳಶಾಸ್ತ್ರಜ್ಞರು ಈಜಿಪ್ಟ್‌ ಸಂಪ್ರದಾಯದ ಕುರಿತು ವಿಸ್ತಾರವಾಗಿ ಬರೆದರು. ಅವರು ಕೆಲವೊಮ್ಮೆ ಟಗರು-ಶಿರವುಳ್ಳ ಸ್ಫಿಂಕ್ಸ್‌ಗಳಿಗೆ ಕ್ರಿಯೊಸ್ಫಿಂಕ್ಸಸ್ ‌ ಮತ್ತು ಹಕ್ಕಿಯ ಶಿರವುಳ್ಳ ಸ್ಫಿಂಕ್ಸ್‌ಗಳಿಗೆ ಹೀರೊಕೊಸ್ಫಿಂಕ್ಸಸ್ ‌ ಎಂದು ಕರೆಯುತ್ತಿದ್ದರು. []

ಸ್ಫಿಂಕ್ಸ್‌ ಎಂಬ ಶಬ್ದದ ಮೂಲ ಗ್ರೀಕ್‌ Σφίγξ, ಬಹುಶಃ ಕ್ರಿಯಾಪದ σφίγγω (sphíngō (ಸ್ಫಿಂಗೊ) ), ಅರ್ಥಾತ್‌ "ದಮನ ಮಾಡುವುದು". ಸಿಂಹಗಳ ಗುಂಪಿನಲ್ಲಿ ಬೇಟೆಯಾಡುವುದು ಹೆಣ್ಣು ಸಿಂಹಗಳಾಗಿದ್ದು, ಅವು ಬೇಟೆಯ ಕತ್ತನ್ನು ಬಾಯಲ್ಲಿ ಕಚ್ಚಿ ಹಿಸುಕಿ, ಬೇಟೆಯಾದ ಪ್ರಾಣಿಯು ಉಸಿರು ಕಟ್ಟಿ ಸಾಯುವ ತನಕ ಬಿಗಿ ಹಿಡಿದಿಟ್ಟುಕೊಳ್ಳುತ್ತವೆ. ಹಾಗಾಗಿ ಈ ವಿಚಾರವು ಸ್ಫಿಂಕ್ಸ್‌ ಎಂಬ ಹೆಸರಿನ ಮೂಲವಾಗಿರಬಹುದು. ಸ್ಫಿಂಕ್ಟರ್ (ಗುದನಾಳ) ‌ ಎಂಬ ಪದಕ್ಕೂ ಸಹ ಇದೇ ಆಧಾರವಾಗಿದೆ. ಆದಾಗ್ಯೂ, ಇತಿಹಾಸಕಾರಿಣಿ ಸೂಸಾನ್‌ ವೈಸ್‌ ಬಾರ್‌ ಸೂಚಿಸುವ ಪ್ರಕಾರ, 'ಸ್ಫಿಂಕ್ಸ್' ಎಂಬ ಶಬ್ದವು ಈಜಿಪ್ಟ್‌ ಭಾಷಾ ಹೆಸರಾದ 'ಷೆಸೆಪಂಖ್‌' (ಬದುಕಿರುವ ಪ್ರತಿಮೆ) ನ ಗ್ರೀಕ್‌ ಅಶಿಷ್ಟ ರೂಪವಾಗಿತ್ತಂತೆ. ಇಲ್ಲಿ ಮೃಗದ ಬದಲಿಗೆ, ಸ್ಫಿಂಕ್ಸ್‌ನ ಪ್ರತಿಮೆ ಯನ್ನು ಉಲ್ಲೇಖಿಸಲಾಗಿತ್ತು. ಈ ಸ್ಪಿಂಕ್ಸ್‌ನ್ನು 'ಲಿವಿಂಗ್ ರಾಕ್‌‌'ನಿಂದ ಕೆತ್ತನೆ ಮಾಡಲಾಗಿತ್ತು. (ಇದು ನಿರ್ಮಾಣದ ಸ್ಥಳದಲ್ಲಿಯೇ ಇದ್ದ ಬಂಡೆಯಾಗಿತ್ತು, ಇನ್ನೊಂದು ಸ್ಥಳದಿಂದ ಒಯ್ದು ತಂದ ಬಂಡೆಯಾಗಿರಲಿಲ್ಲ).

ಗ್ರೀಕ್‌ ಪುರಾಣಗಳಲ್ಲಿ ಒಂದೇ ಒಂದು ಸ್ಫಿಂಕ್ಸ್‌ ಇತ್ತು. ಅದು ವಿನಾಶ ಮತ್ತು ದುರದೃಷ್ಟದ ಅಪೂರ್ವ ಪ್ರತೀಕವಾಗಿತ್ತು. ಹಿಸಿಯೋಡ್‌ ಪ್ರಕಾರ, ಈ ಸ್ಫಿಂಕ್ಸ್‌ ಇಕಿಡ್ನಾ ಮತ್ತು ಆರ್ಥ್ರಸ್‌ರ ಮಗಳಾಗಿದ್ದಳು. ಇತರರ ಪ್ರಕಾರ, ಈಕೆ ಇಕಿಡ್ನಾ ಮತ್ತು ಟೈಫಾನ್‌ರ ಮಗಳಾಗಿದ್ದಳು. ಒಲಿಂಪಿಯನ್ನರು ಗ್ರೀಕ್‌ ದೇವತಾಗಣವನ್ನು ಆಳುವ ಮುಂಚೆ, ಇವೆಲ್ಲವೂ ಸಹ ಗ್ರೀಕ್‌ ಪುರಾಣಗಳ ಆರಂಭ ಕಾಲದ ಕ್ತಾನಿಕ್‌ (ತಾನಿಕ್‌) ರೂಪಗಳಾಗಿದ್ದವು. ಪಿಯರ್‌ ಗ್ರಿಮಾಲ್‌ರ ದಿ ಪೆಂಗ್ವಿನ ಡಿಕ್ಷನರಿ ಆಫ್‌ ಕ್ಲಾಸಿಕಲ್‌ ಮಿತಾಲಜಿ ಪ್ರಕಾರ, ಸ್ಪಿಂಕ್ಸ್‌ನ ಸರಿಯಾದ ಹೆಸರು Phix (Φίξ) (ಫಿಕ್ಸ್‌). ಆದರೂ, ಈ ಮಾಹಿತಿಯ ಮೂಲವನ್ನು ತಿಳಿಸಿಲ್ಲ. ಥಿಯೊಗೊನಿಯ 326ನೆಯ ಸಾಲಿನಲ್ಲಿ ಹೀಸಿಯೊಡ್‌ ಸಹ ಸ್ಫಿಂಕ್ಸ್‌ನ್ನು ಫಿಕ್ಸ್‌ (Φίξ) ಎಂದು ಉಲ್ಲೇಖಿಸಿದ್ದಾನೆ.

ಗ್ರೀಕ್‌ ಪುರಾಣದಲ್ಲಿ, ಸ್ಫಿಂಕ್ಸ್‌ (ಸಿಂಹನಾರಿ) ಎಂಬ ವಿಕಾರರೂಪಿ ಆಕೃತಿಯನ್ನು ಸ್ತ್ರೀಯ ಶಿರ, ಸಿಂಹದ ಶರೀರ, ಹದ್ದಿನ ರೆಕ್ಕೆಗಳು ಹಾಗೂ ಹಾವಿನಂತಿರುವ ಬಾಲ ಹೊಂದಿರುವಂತೆ ನಿರೂಪಿಸಲಾಗಿದೆ.

ಪುರಾತನ ನಗರ-ರಾಜ್ಯ ಚಿಯೊಸ್‌ನ ಲಾಂಛನವಾಗಿತ್ತು. ಆರನೆಯ ಶತಮಾನ BCಯಿಂದ ಮೂರನೆಯ ಶತಮಾನ ADಯ ವರೆಗೆ ಈ ಸಿಂಹನಾರಿಯು ಮುದ್ರೆಗಳು ಹಾಗು ನಾಣ್ಯಗಳ ಮೇಲ್ಮುಖದಲ್ಲಿ ಕಾಣಿಸಿಕೊಳ್ಳುತ್ತಿತ್ತು.

ಅಥೆನಾ ಪಾರ್ಥೆನೊಸ್‌ ಪ್ರತಿಮೆಯ ಶಿರಸ್ತ್ರಾಣದ ಮಧ್ಯಭಾಗದಲ್ಲಿ ಸಿಂಹನಾರಿಯ ಚಿಹ್ನೆಯಿತ್ತು.

ಸಿಂಹನಾರಿಯ ಒಗಟು

ಸಿಂಹನಾರಿಯು ಗ್ರೀಕ್‌ ನಗರವಾದ ಥೀಬ್ಸ್‌ನ ಪ್ರವೇಶದ್ವಾರವನ್ನು ಕಾಯುತ್ತಿದ್ದಳು, ಎಂಬ ಕಥೆಯಿದೆ. ಒಳಗೆ ಪ್ರವೇಶಿಸುವ ಮುಂಚೆ ಪ್ರಯಾಣಿಕರು ಆಕೆಯ ಒಗಟಿಗೆ ಉತ್ತರಿಸುವ ಅವಶ್ಯಕತೆಯಿತ್ತು. ಸಿಂಹನಾರಿಯು ಕೇಳಿದ ಒಗಟಿನ ಬಗ್ಗೆ ಕಥೆಗಳಲ್ಲಿ ನಿಖರವಾಗಿ ಉಲ್ಲೇಖಿಸಲಾಗಿಲ್ಲ. ಗ್ರೀಕ್‌ ಪುರಾಣಗಳಲ್ಲಿ ನಂತರದ ಯುಗದ ತನಕ, ಕೆಳಗೆ ತಿಳಿಸಿದ ಕಥೆಯಂತೆ ಇನ್ಯಾವುದನ್ನೂ ಪ್ರಮಾಣಿಕರಿಸಲಾಗಿಲ್ಲ.

ಪ್ರಾಚೀನ ಸಿದ್ಧಾಂತದ ಪ್ರಕಾರ ಹೆರಾ ಅಥವಾ ಅರೆಸ್‌ ಸಿಂಹನಾರಿಯನ್ನು ತನ್ನ ಇಥ್ಯೋಪಿಯಾ ಸ್ವದೇಶದಿಂದ ಗ್ರೀಸ್‌ ದೇಶದ ಥೀಬ್ಸ್‌ ನಗರಕ್ಕೆ ಕಳುಹಿಸಿದರು. (ಗ್ರೀಕರು ಸಿಂಹನಾರಿಯ ವಿದೀಶೀ ಮೂಲವನ್ನು ಎಂದಿಗೂ ನೆನಪಿನಲ್ಲಿಟ್ಟುಕೊಂಡಿದ್ದರು). ಇತಿಹಾಸದ ಪ್ರಕಾರ ಥೀಬ್ಸ್‌ನಲ್ಲಿ ಸಿಂಹನಾರಿಯು ಪ್ರತಿಯೊಬ್ಬ ದಾರಿಹೋಕರನ್ನೂ ಪ್ರಸಿದ್ದ ಒಗಟನ್ನು ಕೇಳುತ್ತಿದ್ದಳು: 'ಯಾವ ಪ್ರಾಣಿಯು ಬೆಳಗ್ಗೆ ನಾಲ್ಕು ಕಾಲುಗಳು, ಮಧ್ಯಾಹ್ನ ಎರಡು ಕಾಲುಗಳು, ಸಂಜೆ ಮೂರು ಕಾಲುಗಳ ಮೇಲೆ ಚಲಿಸುತ್ತಿದ್ದು, ಹೆಚ್ಚು ಕಾಲುಗಳನ್ನು ಹೊಂದಿದ್ದಷ್ಟೂ ದುರ್ಬಲವಾಗಿರುತ್ತದೆ?' ಈ ಒಗಟಿಗೆ ಉತ್ತರ ನೀಡಲಾಗದವರನ್ನು ಆಕೆ ಹಿಸುಕಿ ತಿಂದುಹಾಕುತ್ತಿದ್ದಳು. 'ಮಾನವನು ಶಿಶುವಿನ ಅವಸ್ಥೆಯಲ್ಲಿ ನಾಲ್ಕೂ ಕಾಲುಗಳ ಮೇಲೆ ಓಡಾಡಿ, ವಯಸ್ಕನಾಗಿ ತನ್ನೆರಡು ಕಾಲುಗಳ ಮೇಲೆ ನಡೆದು, ನಂತರ ವೃದ್ಧಾಪ್ಯದಲ್ಲಿ ಊರುಗೋಲು ಹಿಡಿದು ನಡೆಯುತ್ತಾನೆ' ಎಂದು ಈಡಿಪಸ್‌ ಈ ಒಗಟಿಗೆ ಉತ್ತರ ನೀಡಿದ. ಇನ್ನೂ ಅಪರೂಪವಾಗಿ ಕೇಳಿಬಂದ ಇನ್ನೊಂದು ವೃತ್ತಾಂತಗಳ ಪ್ರಕಾರ, 'ಇಬ್ಬರು ಸಹೋದರಿಯರಿದ್ದಾರೆ: ಒಬ್ಬಳು ಇನ್ನೊಬ್ಬಳಿಗೆ ಹಾಗೂ ಇನ್ನೊಬ್ಬಳು ಮೊದಲನೆಯಾಕೆಗೆ ಜನ್ಮ ನೀಡುವಳು' ಎಂಬ ಇನ್ನೊಂದು ಒಗಟಿತ್ತು. 'ಹಗಲು ಹಾಗೂ ಇರುಳು' ಎಂಬುದು ಇದಕ್ಕೆ ಉತ್ತರವಾಗಿತ್ತು. (ಗ್ರೀಕ್‌ ಭಾಷೆಯಲ್ಲಿ ಇವೆರಡೂ ಪದಗಳು ಸ್ತ್ರೀಲಿಂಗದ್ದಾಗಿವೆ).

ಸೋಲನ್ನೆದುರಿಸಿದ ಸಿಂಹನಾರಿ ಎತ್ತರದ ಬಂಡೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಳು. ಇನ್ನೊಂದು ಕಥೆಯ ಪ್ರಕಾರ, ಆಕೆ ತನ್ನನ್ನು ತಾನೇ ಭಕ್ಷಿಸಿಕೊಂಡಳಂತೆ. ಇದರಿಂದಾಗಿ, ಈಡಿಪಸ್‌ನ್ನು ಒಬ್ಬ ಕನಿಷ್ಠ ನರ ಪ್ರಚೋದನೆಯ ವ್ಯಕ್ತಿಯೆಂದು ಗುರುತಿಸಬಹುದು. ಸಿಂಹನಾರಿಯ ಸಾವಿನೊಂದಿಗೆ, ಹಳೆಯ ಧಾರ್ಮಿಕ ಪದ್ಧತಿಗಳಿಂದ, ಹೊಸ, ಒಲಿಂಪಿಯನ್‌ ದೇವತೆಗಳ ಉದ್ಭವದತ್ತ ಸಂಕ್ರಮಣದ ವೇಗವರ್ಧಕನೆಂದು ಪರಿಗಣಿಸಲಾಗಿದೆ.

ದಿ ಇನ್ಫರ್ನಲ್‌ ಮೆಷಿನ್‌ ಎಂಬ ಈಡಿಪಸ್‌ ಪುರಾಣಕಥೆಯನ್ನು ಜೀನ್‌ ಕೋಕ್ಟೂ ಅದೇ ರೀತಿಯಲ್ಲಿ ತಿಳಿಸಿದ ಪ್ರಕಾರ, ಸಿಂಹನಾರಿಯು ಈಡಿಪಸ್‌‌ಗೆ ಈ ಒಗಟಿಗೆ ಉತ್ತರ ತಿಳಿಸುತ್ತಾಳೆ. ತಾನು ಆತ್ಮಹತ್ಯೆ ಮಾಡುವುದರ ಮೂಲಕ ಇನ್ಯಾರನ್ನು ಹತ್ಯೆ ಮಾಡುವ ಅಗತ್ಯವಿಲ್ಲ; ಎಂದು ನಿರ್ಣಯಿಸಿದ್ದಳಲ್ಲದೆ, ಈಡಿಪಸ್‌ನ ಹೃದಯ ಗೆಲ್ಲಲೆಂದು ಈ ರೀತಿ ಮಾಡುತ್ತಾಳೆ. ಒಗಟಿಗೆ ಉತ್ತರಿಸಿದ ಸಿಂಹನಾರಿಗೆ ಧನ್ಯವಾದವನ್ನೂ ಸೂಚಿಸದೆ ಈಡಿಪಸ್‌ ಹೊರಟುಹೋಗುತ್ತಾನೆ. ಸಿಂಹನಾರಿ ಹಾಗೂ ಒಗಟಿಗೆ ಉತ್ತರ ನೀಡಲಾದವರನ್ನು ಕೊಲ್ಲಲೆಂದು ಉಪದ್ಥಿತ ಅನುಬಿಸ್‌ರ ಸ್ವರ್ಗಾರೋಹಣದೊಂದಿಗೆ ದೃಶ್ಯ ಮುಗಿಯುತ್ತದೆ.

ದಕ್ಷಿಣ ಹಾಗೂ ಆಗ್ನೇಯ ಏಷ್ಯಾದಲ್ಲಿನ ಸಿಂಹನಾರಿಗಳು

ಮಾನವನ ತಲೆ ಮತ್ತು ಸಿಂಹದ ಶರೀರ ಹೊಂದಿರುವ ಸಮ್ಮಿಶ್ರ ಶೈಲಿಯ ಪೌರಾಣಿಕ ಜೀವಿಯು, ದಕ್ಷಿಣ ಹಾಗೂ ಆಗ್ನೇಯ ಏಷ್ಯಾದ ಸಂಪ್ರದಾಯ, ಪುರಾಣ ಹಾಗೂ ಕಲೆಗಳಲ್ಲಿದೆ. ಇದನ್ನು ವಿವಿಧ ಭಾಷೆಗಳಲ್ಲಿ ಉಲ್ಲೇಖಿಸಲಾಗಿದೆ: ಭಾರತದಲ್ಲಿ ಪುರುಷಮೃಗ (ಸಂಸ್ಕೃತ, "ಮಾನವ-ಪ್ರಾಣಿ"), ಪುರುಷಮಿರುಕಂ (ತಮಿಳ್‌, "ಮಾನವ-ಪ್ರಾಣಿ"), ನರವಿಡಾಲ (ಸಂಸ್ಕೃತ, "ಮಾನವ-ಬೆಕ್ಕು") ಎಂದು ಕರೆಯಲಾಗಿದೆ. ಶ್ರೀಲಂಕಾದಲ್ಲಿ ನರ-ಸಿಂಹ (ಪಾಲಿ: 'ಮಾನವ-ಸಿಂಹ'); ಮ್ಯಾನ್ಮಾರ್‌ನಲ್ಲಿ ಮನುಸಿಹಾ ಅಥವಾ ಮನುಥಿಹಾ (ಪಾಲಿ: "ಮಾನವ-ಸಿಂಹ"); ಹಾಗೂ ಥಾಯ್ಲೆಂಡ್‌‌ನಲ್ಲಿ ನೋರಾ ನಾಯರ್‌ ಅಥವಾ ಥೆಪ್ನೊರಾಸಿಂಗ್‌ ಎಂದು ಉಲ್ಲೇಖಿಸಲಾಗಿದೆ.

ನಾಗರಿಕತೆಯು ಸ್ಥಗಿತಗೊಂಡು, ಪರಂಪರೆಗಳು ಕಳುವಾದ ಈಜಿಪ್ಟ್‌, ಮೆಸೊಪೊಟಾಮಿಯಾ ಮತ್ತು ಗ್ರೀಸ್‌ ದೇಶಗಳ ಸಿಂಹನಾರಿಗೆ ತದ್ವಿರುದ್ಧವಾಗಿ, ಏಷ್ಯನ್‌ ಸಿಂಹನಾರಿಯ ಸಂಪ್ರದಾಯಗಳು ಇಂದಿಗೂ ಜೀವಂತವಾಗಿವೆ. ದಕ್ಷಿಣ ಏಷ್ಯಾ ಉಪಖಂಡದ ಸಿಂಹನಾರಿಗಳ ಆರಂಭಕಾಲಿಕ ಕಲಾತ್ಮಕ ನಿರೂಪಣೆಗಳು ಕೆಲ ಮಟ್ಟಿಗೆ, ಹೆಲೀನ್‌ ಕಲೆ ಮತ್ತು ಬರಹಗಳಿಂದ ಪ್ರಭಾವಿತವಾಗಿದೆ. ಬೌದ್ಧ ಕಲೆಯು ಹೆಲೀನ್‌ ಪ್ರಭಾವಕ್ಕೊಳಗಾದ ಕಾಲಕ್ಕೆ ಇವು ಸೇರಿವೆ. ಆದರೆ, ಮೂರನೆಯ ಶತಮಾನ BCಯಿಂದ ಮೊದಲ ಶತಮಾನ AD ಕಾಲದ ಮಥುರಾ, ಕೌಶಾಂಬಿ ಹಾಗೂ ಸಾಂಚಿಯ ಸಿಂಹನಾರಿಗಳು ಹೆಲೀನೇತರ, ಸ್ಥಳೀಯ ಶೈಲಿಯನ್ನು ಹೊಂದಿವೆ. ಆದ್ದರಿಂದ, ಇಲ್ಲಿಯ ಸಿಂಹನಾರಿಯ ಪರಿಕಲ್ಪನೆಯು ವಿದೇಶೀ ಪ್ರಭಾವದಿಂದ ಮೂಡಿಬಂತು, ಎಂದು ನಿರ್ಣಯಿಸಲು ಸಾಧ್ಯವಿಲ್ಲ. .

ದಕ್ಷಿಣ ಭಾರತದಲ್ಲಿ, 'ಸಿಂಹನಾರಿ'ಯನ್ನು ಸಂಸ್ಕೃತದಲ್ಲಿ ಪುರುಷಮೃಗ ಹಾಗೂ ತಮಿಳ್‌ನಲ್ಲಿ ಪುರುಷಮಿರುಕಮ್ ‌ (ಅರ್ಥಾತ್‌ ಮಾನವ-ಮೃಗ) ಎನ್ನಲಾಗಿದೆ. ಪುರಾತನ ಜಗತ್ತಿನ ಇತರೆ ಭಾಗಗಳ ಸಿಂಹನಾರಿಗಳಂತೆ, ಇಲ್ಲಿಯೂ ಸಹ, ದೇವಾಲಯಗಳು ಮತ್ತು ಅರಮನೆಗಳಲ್ಲಿ ಅವುಗಳನ್ನು ದುರದೃಷ್ಟ ನಿವಾರಕಗಳಾಗಿ ಸ್ಥಾಪಿಸಲಾಗಿದೆ. ಸಂಪ್ರದಾಯದ ಪ್ರಕಾರ, ಸ್ಥಾಪಿಸಲಾದ ಸಿಂಹನಾರಿಗಳು ದೇವಾಲಯವನ್ನು ಪ್ರವೇಶಿಸುವ ಭಕ್ತಾದಿಗಳ ಪಾಪಗಳನ್ನು ಕಳೆಯುವುದಲ್ಲದೆ, ಒಟ್ಟಾರೆ ಯಾವುದೇ ದುರದೃಷ್ಟವನ್ನು ತಡೆಗಟ್ಟುತ್ತವೆ. ಇದಕ್ಕಾಗಿಯೇ ಇವುಗಳನ್ನು ಗೋಪುರ ಅಥವಾ ದೇವಾಲಯದ ದ್ವಾರ ಅಥವಾ ಗರ್ಭಗುಡಿಯ ಬಳಿ ವಿಶಿಷ್ಟ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ.

ದಕ್ಷಿಣ ಭಾರತದ ಶೈವ ದೇವಾಲಯಗಳಲ್ಲಿ ಪುರುಷಮೃಗ ವು ದೈನಿಕ ಹಾಗೂ ವಾರ್ಷಿಕ ಆಚರಣೆಗಳಲ್ಲಿ ಗಮನಾರ್ಹ ಪಾತ್ರ ವಹಿಸುತ್ತದೆ. ದಿನದ ಪವಿತ್ರ ಕಾಲಗಳಲ್ಲಿ ಒಂದರಿಂದ ಆರು ಬಾರಿ ನಡೆಸಲಾದ ಷೋಡಶ-ಉಪಚಾರ (ಹದಿನಾರು ಉಪಚಾರಗಳು) ಪದ್ಧತಿಯಲ್ಲಿ, ಇದು ದೀಪಾರಾಧನೆಯ ದೀಪಗಳ ಪೈಕಿ ಒಂದನ್ನು ಅಲಂಕರಿಸುತ್ತದೆ. ಹಲವು ದೇವಾಲಯಗಳಲ್ಲಿ, ಬ್ರಹ್ಮೋತ್ಸವ ಮೆರವಣಿಗೆಗಳಲ್ಲಿ ಪುರುಷಮೃಗ ವು ದೇವತೆಯ ಹಲವು ವಾಹನ ಗಳಲ್ಲಿ ಒಂದಾಗಿರುತ್ತದೆ.

ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿ ಜಿಲ್ಲೆಯಲ್ಲಿ, ಶಿವರಾತ್ರಿ ಹಬ್ಬದ ರಾತ್ರಿಯಲ್ಲಿ, ಭಕ್ತಾದಿಗಳು ಶಿವನ ಹನ್ನೆರಡು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವಾಗ 75 ಕಿಲೋಮೀಟರ್‌ಗಳಷ್ಟು ದೂರ ಕ್ರಮಿಸುವರು. ಸಿಂಹನಾರಿ ಹಾಗೂ ಮಹಾಭಾರತ ದ ಪ್ರಮುಖ ಪಾತ್ರಗಳಲ್ಲೊಬ್ಬನಾಗಿದ್ದ ಭೀಮ ಮತ್ತು ಸಿಂಹನಾರಿಯ ನಡುವಿನ ಓಟದ ಸ್ಪರ್ಧೆಯನ್ನು ನೆನಪಿಗೆ ತರಲು ಈ ಶಿವ ಓಟಮ್‌ (ಶಿವನಿಗಾಗಿ ಓಟ)ವನ್ನು ನಡೆಸಲಾಗುತ್ತದೆ.

ಸಿಂಹನಾರಿಯ ಕುರಿತು ಭಾರತೀಯ ಪರಿಕಲ್ಪನೆಯು, ಗ್ರೀಕ್‌ ಪರಿಕಲ್ಪನೆಗೆ ಸನಿಹವಾಗಿದೆ. ನರಸಿಂಹನ ಹಿಂಸಾಚಾರ ತಡೆಗಟ್ಟಲು ಶಿವ ಪರಮಾತ್ಮನು, ಸಿಂಹ, ಮಾನವ ಹಾಗು ಹಕ್ಕಿಯ ಅಂಶಗಳುಳ್ಳ ಶರಭ ಎಂಬ ಪೌರಾಣಿಕ ರೂಪವನ್ನು ತಾಳಿದನು.

ಫಿಲಿಪೀನ್ಸ್‌ ದೇಶದಲ್ಲಿ, ಸಿಂಹನಾರಿಯು ನಿಕೊಲೊನಿಯಾ ಎನ್ನಲಾಗಿದೆ. ಇದು ಅರ್ಧ ಮಾನವ, ಅರ್ಧ ಹದ್ದಿನ ಆಕಾರ ತಾಳಿ, ಬಿಕೊಲ್‌ ವಲಯದೊಳಗೆ ಅತಿಕ್ರಮ ಪ್ರವೇಶ ಮಾಡಿದ ತಿರುಕರಿಗೆ ಒಗಟುಗಳನ್ನು ಕೇಳುತ್ತಿದ್ದುಂಟು. ಈ ಒಗಟಿಗೆ ಉತ್ತರ ನೀಡಲಾಗದವರನ್ನು ಮೆಯಾನ್‌ ಜ್ವಾಲಾಮುಖಿಗೆ ಒಯ್ದು, ಅಲ್ಲಿ ಜ್ವಾಲಾಮುಖಿ ದೇವತೆ ಗೆವ್ರಾನ ಕೋಪವನ್ನು ಶಾಂತಗೊಳಿಸಲು ಅವರನ್ನು ಸಮರ್ಪಿಸಲಾಗುತ್ತಿತ್ತು.

ಶ್ರೀಲಂಕಾದಲ್ಲಿ ಸಿಂಹನಾರಿಗೆ ನರಸಿಂಹ ಅಥವಾ ಮಾನವ-ಸಿಂಹ ಎನ್ನಲಾಗಿದೆ. ಸಿಂಹನಾರಿಯಾಗಿ, ಇದಕ್ಕೆ ಸಿಂಹದ ಶರೀರ ಮತ್ತು ಮಾನವನ ಶಿರವಿದೆ. ಇದಕ್ಕೆ ಹಾಗೂ ವಿಷ್ಣು ದೇವರ ನಾಲ್ಕನೆಯ ಅವತಾರವಾದ ನರಸಿಂಹನ ನಡುವೆ ಯಾವುದೇ ಸಂಬಂಧವಿಲ್ಲ. ಈ ನರಸಿಂಹನ ಅವತಾರವು ಸಿಂಹದ ತಲೆ ಮತ್ತು ಮಾನವನ ಶರೀರವನ್ನು ಹೊಂದಿತ್ತು. ಸಿಂಹನಾರಿ (ಸ್ಫಿಂಕ್ಸ್‌) ನರಸಿಂಹವು ಬೌದ್ಧ ಸಂಪ್ರದಾಯದ ಅಂಗವಾಗಿದೆ. ಇದು ಉತ್ತರ ದಿಕ್ಕಿನ ಪಾಲಕನಾಗಿ ಕಾರ್ಯ ನಿರ್ವಹಿಸುತ್ತದೆ, ಜೊತೆಗೆ ಪತಾಕೆಗಳ ಮೇಲೂ ಸಹ ಕಾಣಿಸಲಾಗಿತ್ತು.

ಮ್ಯಾನ್ಮಾರ್‌ನಲ್ಲಿ, ಸಿಂಹನಾರಿಯನ್ನು ಮನುಸಿಹಾ ಮತ್ತು ಮನುಥಿಹಾ ಎನ್ನಲಾಗಿದೆ. ಬೌದ್ಧ ಸ್ಥೂಪಾಗಳ ಮೂಲೆಗಳಲ್ಲಿ ಇವುಗಳನ್ನು ಸ್ಥಾಪಿಸಲಾಗಿವೆ. ರಾಜಮನೆತನದ ನವಜಾತ ಶಿಶುವನ್ನು ನರಭಕ್ಷಕ ರಾಕ್ಷಸಿಯರಿಂದ ರಕ್ಷಿಸಲು ಬೌದ್ಧ ಸಂನ್ಯಾಸಿಗಳು ಅವುಗಳನ್ನು ಹೇಗೆ ಸೃಷ್ಟಿಸಿದರೆಂಬುದನ್ನು ಪುರಾಣಗಳು ವಿವರಿಸುತ್ತವೆ.

ಥಾಯ್ಲೆಂಡ್‌ನ ಸ್ಫಿಂಕ್ಸ್‌ ಪ್ರತಿಮೆಗಳು 'ನೊರಾ ನಾಯರ್‌' ಮತ್ತು 'ಥೆಪ್‌ ನೊರಾಸಿಂಘ್' ಎಂಬ ಎರಡು ಹೆಸರುಗಳ ಮೂಲಕ ಚಿರಪರಿಚಿತವಾಗಿವೆ.‌ ಇವುಗಳು ಮೇಲ್ಮುಖವಾಗಿ ನಡೆಯುವ ಜೀವಿಗಳಾಗಿದ್ದು, ಶರೀರದ ಕೆಳಭಾಗ ಸಿಂಹದ್ದೋ ಅಥವಾ ಜಿಂಕೆಯದೋ ಆಗಿದ್ದು, ಶರೀರದ ಮೇಲ್ಭಾಗವು ಮಾನವನದ್ದಾಗಿತ್ತು. ಇವುಗಳು ಆಗಾಗ್ಗೆ ಸ್ತ್ರೀ-ಪುರುಷ ಜೋಡಿಯ ರೂಪದಲ್ಲಿ ಕಾಣಸಿಗುತ್ತವೆ. ಇಲ್ಲೂ ಸಹ, ಸ್ಫಿಂಕ್ಸ್‌ ಕಾವಲಿನ, ರಕ್ಷಣಾ ಕಾರ್ಯ ನಿರ್ವಹಿಸುತ್ತದೆ. ಪವಿತ್ರವಾದ ಹಿಮಪನ್‌ ಪರ್ವತಶ್ರೇಣಿಗಳಲ್ಲಿ ವಾಸಿಸುವ ಪೌರಾಣಿಕ ಜೀವಿಗಳಲ್ಲಿ ಇದೂ ಸಹ ಒಂದು ಎಂದು ಹೇಳಲಾಗಿತ್ತು.

ಯುರೋಪ್‌ನಲ್ಲಿ ಸಿಂಹನಾರಿಗಳ ಜೀರ್ಣೋದ್ಧಾರ

ಜೀರ್ಣೋದ್ಧಾರ ಪಡೆದ ಹದಿನಾರನೆಯ ಶತಮಾನದ 'ಮ್ಯಾನರಿಸ್ಟ್ ‌ ಸ್ಫಿಂಕ್ಸ್‌ ನ್ನು ಕೆಲವೊಮ್ಮೆ ಫ್ರೆಂಚ್‌ ಸ್ಫಿಂಕ್ಸ್‌ ಎನ್ನಲಾಗಿದೆ. ಕುಲಾವಿ ಧರಿಸಿರುವ ಆಕೆಯ ತಲೆಯು ನೆಟ್ಟಗಿದ್ದು ಅದರ ಕುಚಗಳು ಯುವತಿಯೊಬ್ಬಳ ವಕ್ಷಗಳಂತಿವೆ. ಆಗಾಗ್ಗೆ ಆಕೆ ಕಿವಿಗಳಿಗೆ ಮುತ್ತುಗಳನ್ನು ಒಡವೆಯ ರೂಪದಲ್ಲಿ ಧರಿಸುವುದುಂಟು. ಆಕೆಯ ಶರೀರವು ಸಹಜವಾಗಿ ಚಾಚಿರುವ ಹೆಣ್ಣು ಸಿಂಹದಂತಿದೆ. ರೋಮ್‌ನಲ್ಲಿ ಹದಿನೈದನೆಯ ಶತಮಾನದ ಅಪರಾರ್ಧದಲ್ಲಿ ನೀರೊನ ಗ್ರೊಟೆಸ್ಚೆ ಅಥವಾ ಗ್ರೋಟೆಸ್ಕ್‌ ಅಲಂಕಾರಗಳನ್ನು ಗೋಲ್ಡನ್‌ ಹೌಸ್‌ (ಡಾಮಸ್‌ ಅರಿಯಾ ) ಬೆಳಕಿಗೆ ತಂದಾಗ ಇಂತಹ ಸಿಂಹನಾರಿಗಳಿಗೆ ಪುನಶ್ಚೇತನ ನೀಡಲಾಗಿತ್ತು. ಹದಿನಾರು ಮತ್ತು ಹದಿನೇಳನೆಯ ಶತಮಾನಗಳಲ್ಲಿ ಅರಾಬೀ ಶೈಲಿಯ ಕೆತ್ತನೆಗಳಲ್ಲಿ ಈ ಸಿಂಹನಾರಿಗಳನ್ನು ಸೇರಿಸಿಕೊಳ್ಳಲಾಯಿತು. ಇಸವಿ 1515-20ರರಲ್ಲಿ ರಫೇಲ್‌ನ ಕಾರ್ಯಾಗಾರದಿಂದ ವ್ಯಾಟಿಕನ್‌ ಅರಮನೆಯ ಲಾಗಿಯಾ ವನ್ನು ಸಿಂಗರಿಸಲು ಸಿಂಹನಾರಿಗಳನ್ನು ಸೇರಿಸಿಕೊಳ್ಳಲಾಗಿತ್ತು.

ಫ್ರೆಂಚ್‌ ಕಲೆಯಲ್ಲಿ ಸಿಂಹನಾರಿಗಳು ಮೊದಲ ಬಾರಿಗೆ ಬಂದದ್ದು 1520 ಹಾಗೂ 1530ರಲ್ಲಿ ಸ್ಕೂಲ್‌ ಆಫ್ ಫೌಂಟೇನ್‌ಬ್ಲೂದಲ್ಲಿ. ಇದು ಫ್ರೆಂಚ್‌ ರೇಜೆನ್ಸ್‌ನ ಲೇಟ್‌ ಬಾರೋಕ್‌ ಶೈಲಿಯಲ್ಲಿ ಮುಂದುವರೆಯುತ್ತದೆ.

ಫ್ರ್ಯಾನ್ಸ್‌ನಿಂದ ಸಿಂಹನಾರಿಯ ಅಭಿಯಾನವು ಯುರೋಪಿನಾದ್ಯಂತ ವ್ಯಾಪಿಸಿತು. ವಿಯೆನ್ನಾದಲ್ಲಿರುವ ಅಪ್ಪರ್‌ ಬೆಲ್ವೆಡರ್‌, ಪಾಟ್ಸ್‌ಡ್ಯಾಮ್‌ನಲ್ಲಿರುವ ಸ್ಯಾನ್ಸೋಸಿ ಪಾರ್ಕ್‌, ಸ್ಪೇನ್‌ನಲ್ಲಿರುವ ಲಾ ಗ್ರ್ಯಾಂಜಾ, ಬ್ಯಾಲಿಸ್ಟಾಕ್‌ನಲ್ಲಿರುವ ಬ್ರ್ಯಾನಿಕಿ ಪ್ಯಾಲೆಸ್‌ - ಇಂತಹ ಹದಿನೆಂಟನೆಯ ಶತಮಾನದ ಅರಮನೆಯ ತೋಟಗಳು; ಅಥವಾ, 1760ರ ದಶಕದಲ್ಲಿ ಪೋರ್ಚುಗೀಸ್‌ ಕ್ಯೂಲುಜ್‌ ನ್ಯಾಷನಲ್‌ ಪ್ಯಾಲೇಸ್‌ ಆಧಾರಿತ ರೊಕೊಕೊ ಶೈಲಿಗಳಲ್ಲಿ ಕೊರಳ ನೆರಿಗೆ, ವಕ್ಷಸ್ಥಳಕ್ಕೆ ಹೊದಿಕೆಯುಂಟು.

ಸಿಂಹನಾರಿಗಳು ರಾಬರ್ಟ್‌ ಆಡಮ್‌ ಮತ್ತು ಅವರ ಅನುಯಾಯಿಗಳ ಹೊಸ ಶಾಸ್ತ್ರೀಯ ಶೈಲಿಯ ಆಂತರಿಕ ವಿನ್ಯಾಸಗಳ ಅಂಗವಾಗಿವೆ. ಗ್ರೋಟೆಸ್ಚೆಯ ನಿರ್ವಸ್ತ್ರ ಶೈಲಿಗೆ ಇದು ಸನಿಹವಾಗಿದೆ. ಹತ್ತೊಂಬತ್ತನೆಯ ಶತಮಾನದಲ್ಲಿನ ರೋಮ್ಯಾಂಟಿಕ್‌ ಶೈಲಿ ಹಾಗೂ ಆನಂತರದ ಪ್ರತಿಮಾಪಂಥದ ಚಳವಳಿಯ ಕಲಾವಿದರು ಮತ್ತು ವಿನ್ಯಾಸಕರಿಗೆ ಇದು ಮುದ ನೀಡಿದ್ದವು. ರೆಕ್ಕೆಗಳಿಲ್ಲದಿದ್ದರೂ ಸಹ, ಇಂತಹ ಸಿಂಹನಾರಿಗಳಲ್ಲಿ ಹಲವು, ಈಜಿಪ್ಟ್‌ನ ಸಿಂಹನಾರಿಗಳ ಬದಲಿಗೆ ಗ್ರೀಕ್‌ ಸಿಂಹನಾರಿಗಳನ್ನು ಹೋಲುತ್ತಿದ್ದವು.

ಕ್ರೈಸ್ತ ಭಾತೃ ಸಂಘದಲ್ಲಿನ ಸಿಂಹನಾರಿಗಳು

ಸಿಂಹನಾರಿಯ ಆಕೃತಿಯನ್ನು ಮೇಸನಿಕ್‌ ವಾಸ್ತುಶಿಲ್ಪದಲ್ಲಿಯೂ ಸಹ ಆಯ್ದುಕೊಳ್ಳಲಾಗಿದೆ. ಈಜಿಪ್ಟಿಯನ್‌ ನಾಗರೀಕತೆಯಲ್ಲಿ, ರಹಸ್ಯಗಳ ಕಾವಲುಗಾರಿಕೆಗಾಗಿ ಸಿಂಹನಾರಿಗಳನ್ನು ದೇವಾಲಯಗಳ ದ್ವಾರಗಳಲ್ಲಿ ಸ್ಥಾಪಿಸಲಾಗುತ್ತಿತ್ತು. ಒಳಗೆ ಪ್ರವೇಶಿಸಲು ಯತ್ನಿಸಿದವರಿಗೆ ಇದು ಎಚ್ಚರಿಕೆಯ ಸಂಕೇತವೂ ಹೌದು. ಅವರು (ದೀಕ್ಷೆ ಹೊಂದದವರು)ಅದೀಕ್ಷಿತರಿಂದ ಜ್ಞಾನವನ್ನು ರಹಸ್ಯವಾಗಿಡಬೇಕಾದುದು ಸಹ. ಇದರಿಂದಾಗಿ, ಪೋರ್ಟಲ್‌ ಎಂಬುದು ಹೆಬ್ರೂ ಪದ TSaPHaN ಅರ್ಥಾತ್ ರಹಸ್ಯವಾಗಿಡುವುದು . [] ಚಾಂಪೊಲಿಯನ್‌ ಪ್ರಕಾರ, ಪ್ರತಿಯೊಂದು ದೇವತೆಯ ಚಿಹ್ನೆಯಾಯಿತಂತೆ. ಎಲ್ಲಾ ದೇವತೆಗಳೂ ಜನರಿಂದ ಮರೆಮಾಚಲ್ಪಟ್ಟಿದ್ದು; ಸುಭದ್ರವಾಗಿದ್ದ ಅವರ ಬಗೆಗಿನ ಅರಿವು-ಜ್ಞಾನವು ಕೇವಲ ದೀಕ್ಷಿತರಿಗೆ ಮಾತ್ರ ಎಂದು ಅರ್ಚಕರು ಕಲ್ಪನೆ ಹೊಂದಿದ್ದರೆಂದು ಪೋರ್ಟಲ್‌ ಸೂಚಿಸಿದ್ದಾರೆ. ಮೇಸನಿಕ್‌ ಚಿಹ್ನೆಯ ರೂಪದಲ್ಲಿ, ಸಿಂಹನಾರಿಯು ತನ್ನ ಈಜಿಪ್ಟಿಯನ್‌ ಅವತಾರದಲ್ಲಿ ನಿಗೂಢತೆಯ ಪ್ರತೀಕವಾಗಿದೆ. ಇದರಿಂದಾಗಿ ಅದು ಆಗಾಗ್ಗೆ ಮೇಸನಿಕ್‌ ದೇವಾಲಯಗಳ ಮುಂದೆ ಕೆತ್ತಲಾದ ಅಲಂಕಾರದ ರೂಪವಾಗಿ, ಅಥವಾ ಮೇಸನಿಕ್‌ ಪತ್ರಗಳ ಮೇಲಂಚಿನಲ್ಲಿ ಕೊರೆಯಲಾಗಿದೆ. ಆದರೂ, ಇದು ಪುರಾತನ, ಗುರುತಿಸಲಾಗುವ ಚಿಹ್ನೆಯೆಂದು ನಿಖರವಾಗಿ ಹೇಳಲಾಗದು. ಇದರ ಪರಿಚಯವು ಇತ್ತೀಚೆಗಿನ ದಿನದ್ದಾಗಿದೆ. ಇದು ಯಾವುದೇ ಮತತತ್ತ್ವವನ್ನು ಸೂಚಿಸುವ ಚಿಹ್ನೆಗಿಂತಲೂ ಹೆಚ್ಚಾಗಿ ಒಂದು ಸಾಂಕೇತಿಕ ಅಲಂಕಾರವಷ್ಟೆ.

ಇದೇ ರೀತಿಯ ಆಕೃತಿಗಳು

  • ಸಿಂಹ ಮಾನವ ಎಂಬ 32,000-ವರ್ಷ ಹಳೆಯ ಸಿಂಹ ಮನುಷ್ಯತ್ವಾರೋಪಣದ ಅರಿಗ್ನೇಷಿಯನ್‌ ಕಿರುಪ್ರತಿಮೆಯು, ಸಿಂಹದ್ ತಲೆ ಮತ್ತು ಮಾನವ ಶರೀರವನ್ನು ಹೊಂದಿದೆ.
  • ಎಲ್ಲಾ ಪುರಾತನ 'ಮಾನವನ ತಲೆಯುಳ್ಳ ಪ್ರಾಣಿಗಳ ಆಕೃತಿ'ಗಳೂ ಸ್ಫಿಂಕ್ಸ್‌(ಸಿಂಹನಾರಿ)ಗಳಲ್ಲ. ಉದಾಹರಣೆಗೆ, ಪುರಾತನ ಅಸ್ಸಿರಿಯಾದಲ್ಲಿ, ವೃಷಭ ಶರೀರ ಮತ್ತು ಕಿರೀಟ ಹಾಗೂ ಗಡ್ಡಧಾರಿ ರಾಜರುಗಳ ಶಿರವುಳ್ಳ ಅಕೃತಿಗಳು ದೇವಾಲಯಗಳ ಪ್ರವೇಶದ್ವಾರಗಳ ಪಾಲಕರಾಗಿದ್ದವು.
  • ಗ್ರೀಸ್‌ನ ಶಾಸ್ತ್ರೀಯ ಒಲಿಂಪಿಯನ್‌ ಪುರಾಣಗಳಲ್ಲಿ, ಎಲ್ಲಾ ದೇವತೆಗಳೂ ಮಾನವ ರೂಪಗಳನ್ನು ಹೊಂದಿದ್ದವು. ಆದರೆ ಅವರು ಪ್ರಾಣಿಗಳ ಅವತಾರಗಳಿಗೂ ಪರಿವರ್ತಿಸಿಕೊಳ್ಳಬಹುದಿತ್ತು. ಗ್ರೀಕ್‌ ಪುರಾಣಗಳಲ್ಲಿ ಮಾನವ ಹಾಗೂ ಪ್ರಾಣಿ ರೂಪಗಳನ್ನು ಮಿಶ್ರಿಸುವ ಎಲ್ಲಾ ಆಕೃತಿಗಳೂ ಹಳೆಯ ಕಾಲದ್ದಾಗಿವೆ: ನರಾಶ್ವಗಳು, ಟೈಫಾನ್‌, ಮೆಡುಸಾ, ಲಾಮಿಯಾ
  • ನರಸಿಂಹ ("ಮಾನವ-ಸಿಂಹ") ಎಂಬುದು ಹಿಂದೂ ಧರ್ಮದ ಪೌರಾಣಿಕ ಕಥೆಗಳಲ್ಲಿ ವಿಷ್ಣುವಿನ ಅವತಾರವಾಗಿದೆ. ಇದು ಅರ್ಧ ಮಾನವ ಹಾಗೂ ಅರ್ಧ ಸಿಂಹದ ಆಕಾರ ಹೊಂದಿದ್ದು, ಮನುಷ್ಯನ ಮುಂಡ ಹಾಗೂ ಕೈ-ಕಾಲುಗಳು ಮತ್ತು ಸಿಂಹನ ಮುಖ ಮತ್ತು ನಖಗಳನ್ನು ಹೊಂದಿತ್ತು.
  • ಮ್ಯಾಂಟಿಕೋರ್‌ ಎಂಬುದು ಇದೇ ರೀತಿಯ ಆಕೃತಿ, ಇದು ಸಿಂಹನ ಶರೀರ ಮತ್ತು ಮಾನವನ ಮುಖ ಹೊಂದಿದೆ.

ಇವನ್ನೂ ನೋಡಿ

  • ಗ್ರಿಫಿನ್‌
  • ಪಿರಮಿಡ್‌
  • ಈಜಿಪ್ಟ್‌ನ ಪಿರಮಿಡ್‌ಗಳು
  • ಹಿಪೊಗ್ರಿಫ್‌
  • ಸಿಮುರ್ಘ್‌
  • ಏಂಜಲ್‌
  • ಫೈ ಸಿಗ್ಮಾ ಸಿಗ್ಮಾ
Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
Abinesh S
4 January 2018
Negotiate the horse carriage prices to lesser than half before getting on the horse. And all the pyramids in the area are walkable. As the 'guides'to cut the bullshit when they say u can't walk.
MedellinStyle.com GMID
1 November 2012
Just say "no thank you no". To all the camel and horse scammers. They may take pictures and say is free or also free ride saying "pay what makes you happy" be careful. But nothing to worry about.
Dave Mc
31 August 2018
No, Napoleon Bonaparte didn't shoot off his nose, but yes the head looks smaller than the body so maybe there was originally a larger head that was re-carved into what we see today?
Bassem Helal
1 March 2018
It is really amazing to see. My advice to you is to go there at winter not summer due to the scorching sun and sunburns many will try to sell you stuff and make you ride for money.Enjoy.
Angeline Teoh
9 December 2019
The side and front angle looks amazing. Great place for photography but be aware of pick pockets and gift sellers who continues to pester you non stop
Chelsea Doll
6 March 2017
Go on the 30 minute camel ride for the best view of all of the pyramids. The panorama views are breathtaking and even better on a camel.
8.7/10
憑き狐娘, Vadim I ಮತ್ತು 20,324 ಹೆಚ್ಚಿನ ಜನರು ಇಲ್ಲಿದ್ದಾರೆ
Marriott Mena House, Cairo

starting $247

Four Seasons Hotel Cairo at The First Residence

starting $180

Swiss Inn Nile Hotel

starting $29

Barcelo Cairo Pyramids

starting $60

Amarante Pyramids Hotel

starting $34

Hor Moheb Hotel

starting $31

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Khufu ship

The Khufu ship is an intact full-size vessel from Ancient Egypt that

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Giza Necropolis

The Giza Necropolis stands on the Giza Plateau, on the outskirts of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಗೀಜಾದ ಮಹಾ ಪಿರಾಮಿಡ್

ಗೀಜಾದ ಮಹಾ ಪಿರಾಮಿಡ್ (ಇದು ಖುಫುದ ಪಿರಾಮಿಡ್ ಮತ್ತು ಚಿಯೋಪ್ಸ್‌ನ ಪಿರಾ

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Pyramid of Khafre

The Pyramid of Khafre is the second largest of the Ancient Egyptian

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Pyramid of Menkaure

The Pyramid of Menkaure, located on the Giza Plateau in the

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Layer Pyramid

The Layer Pyramid (known locally in Arabic as il-haram il-midawwar,

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Abu Rawash

Abu Rawash (also known as Abu Roach, Abu Roash), 8 km to the North of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Pyramid of Djedefre

The Pyramid of Djedefre consists today mostly of ruins located at Abu

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Pnyx

The Pnyx (Greek: Πνὐξ, pronounced 'Pniks' in Ancient Greek, Πνύκ

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Saint-Bertrand-de-Comminges

Saint-Bertrand-de-Comminges is a commune in the Haute-Garonne

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Choragic Monument of Lysicrates

The Choragic Monument of Lysicrates near the Acropolis of Athens was

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Bryn Celli Ddu

Bryn Celli Ddu is a prehistoric site on the Welsh island of Anglesey

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Chumash Painted Cave State Historic Park, California

Painted Cave State Historic Park is a small sandstone cave adorned

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ