Monuments and memorials ಫಾರ್ New York

ಸ್ವಾತಂತ್ರ್ಯದ ಪ್ರತಿಮೆ

9.7/10

(ಸ್ಟ್ಯಾಚ್ಯೂ ಆಫ್ ಲಿಬರ್ಟಿ ಪ್ರತಿಮೆಯು ಅಮೆರಿಕದ ಅಪರೂಪದ ಸ್ಮಾರಕ. ಇದನ್ನು ವಿಶ್ವದ ಜ್ಞಾನೋದಯದ ಸಂಕೇತವೆಂದೂ ಪರಿಗಣಿಸಲಾಗುತ್ತದೆ) ಸ್ಟ್ಯಾಚ್ಯೂ ಆಫ್‌ ಲಿಬರ್ಟಿ (ಸ್ವಾತಂತ್ರ್ಯದ ಪ್ರತಿಮೆ) (français. Statue de la Liberté) ಯನ್ನು 'ಲಿಬರ್ಟಿ ಎನ್ಲೈಟೆನಿಂಗ್‌ ದಿ ವರ್ಲ್ಡ್‌ ' (français. la Liberté éclairant le monde) ಎಂದು ಅಧಿಕೃತವಾಗಿ ಹೆಸರಿಸಲಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವದ ಅಂಗವಾಗಿ, 1886ರ ಅಕ್ಟೋಬರ್‌ 28ರಂದು ಈ ಪ್ರತಿಮೆ ಅನಾವರಣಗೊಂಡಿತು. ಫ್ರಾನ್ಸ್‌ ದೇಶದ ಜನರು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಸ್ನೇಹಪೂರ್ವಕವಾಗಿ ಈ ಪ್ರತಿಮೆಯನ್ನು ನೀಡಿದ್ದರು. ಅಮೆರಿಕನ್‌ ಕ್ರಾಂತಿ ಸಂದರ್ಭದಲ್ಲಿ ಇವೆರಡೂ ದೇಶಗಳ ನಡುವೆ ಸ್ನೇಹವೇರ್ಪಟ್ಟಿತ್ತು. 'ಸ್ಟೊಲಾ' ಎಂಬ ಹೊಳಪಿನ ಕಿರೀಟ ಮತ್ತು ಪಾದರಕ್ಷೆ ಧರಿಸಿ, ಮುರಿದುಹೋದ ಸರಪಳಿಯನ್ನು ಮೆಟ್ಟಿ, ಬಲಗೈಯಲ್ಲಿ ಪಂಜು, ಹಾಗೂ ಸ್ವಾತಂತ್ರ್ಯ ದಿನಾಂಕ Шаблон:Smallcaps ಕೆತ್ತಲಾದ 'ಟ್ಯಾಬುಲಾ ಅನ್ಸಾಟಾ' ಫಲಕ ಎಡಗೈಯಲ್ಲಿ ಹಿಡಿದು ನಿಂತ ಮಹಿಳೆಯೊಬ್ಬಳನ್ನು ಪ್ರತಿನಿಧಿಸುವ ಕೆತ್ತನೆ ಕಲಾಕೃತಿ ಇದಾಗಿದೆ. ನ್ಯೂಯಾರ್ಕ್‌ ಬಂದರಿನಲ್ಲಿರುವ ಲಿಬರ್ಟಿ ದ್ವೀಪದ ಮೇಲಿರುವ ಈ ಪ್ರತಿಮೆಯು, ಪ್ರವಾಸಿಗರು, ವಲಸೆಗಾರರು ಮತ್ತು ಹಡಗಿನ ಮೂಲಕ ಬರುವ ಅಮೆರಿಕನ್ನರನ್ನೂ ಸ್ವಾಗತಿಸುತ್ತದೆ. ಫ್ರೆಡೆರಿಕ್‌ ಆಗಸ್ಟ್‌ ಬಾರ್ತೊಲ್ಡಿ ಈ ಪ್ರತಿಮೆಯ ಶಿಲ್ಪಿ. ಇದರ ವಿನ್ಯಾಸಕ್ಕಾಗಿ ಅವರು U.S. ಪೆಟೆಂಟ್‌ ಹಕ್ಕು ಸ್ವಾಮ್ಯ ಪಡೆದಿದ್ದಾರೆ.

ಮೌರಿಸ್‌ ಕೋಚ್ಲಿನ್‌ ಎಂಬಾತ ಪ್ರತಿಮೆಯ ಆಂತರಿಕ ವಿನ್ಯಾಸಕಾರ. ಈತ ವಿಶ್ವವಿಖ್ಯಾತ ಐಫೆಲ್‌ ಗೋಪುರದ ನಿರ್ಮಾತೃ ಗುಸ್ತಾವ್‌ ಐಫೆಲ್‌ನ ಸಂಸ್ಥೆಯಲ್ಲಿ ಮುಖ್ಯ ಅಭಿಯಂತರನಾಗಿದ್ದ. ವಿನ್ಯಾಸಗಾರ ರಿಚರ್ಡ್‌ ಮಾರಿಸ್‌ ಹಂಟ್‌ ಪ್ರತಿಮೆಯ ಪೀಠಭಾಗದ ವಿನ್ಯಾಸ ಮಾಡಿದ. ಯೂಜೆನ್‌ ವೀಯೊಲೆ‌-ಲು-ಡ್ಯುಪ್ರತಿಮೆಯ ನಿರ್ಮಾಣದಲ್ಲಿ ತಾಮ್ರ ಲೋಹದ ಬಳಕೆಗೆ ಕಾರಣನಾಗಿದ್ದಾನೆ. ಮೃದುವಾದ (ಮೆದು ಆಕಾರಕ್ಕೆ ಹೊಂದಿಕೊಳ್ಳಬಲ್ಲ) ಲೋಹವನ್ನು ಬಳಸಿ, ಮೆರಗಿನಿಂದ ಲೋಹಕೃತಿ ನಿರ್ಮಿಸುವ ರಪೂಸೆ ತಂತ್ರಕ್ಕೂ ಈತನೇ ಕಾರಣನಾಗಿದ್ದ.

ಉಕ್ಕಿನ ಚೌಕಟ್ಟಿನ (ಮೂಲತಃ ಹದಗೊಳಿಸಿದ ಕಬ್ಬಿಣ)ದ ಮೇಲೆ ಶುದ್ಧ ತಾಮ್ರದ ರಕ್ಷಣಾ ಕವಚದಿಂದ ಈ ಪ್ರತಿಮೆಯನ್ನು ರಚಿಸಲಾಗಿದೆ. ಆದರೆ ಪಂಜಿನ ಜ್ವಾಲೆಗೆ ಗೋಲ್ಡ್‌ ಲೀಫ್‌ ಲೇಪನ ಮಾಡಲಾಗಿದೆ (ಮೂಲತಃ ತಾಮ್ರದಿಂದ ಮಾಡಲಾಗಿದ್ದು, ಆನಂತರ ಗಾಜಿನ ಹಲಗೆಗೆ ಹೊಂದಿಸಿಕೊಳ್ಳುವಂತೆ ಅದನ್ನು ಪರಿವರ್ತಿಸಲಾಗಿತ್ತು). ಪ್ರತಿಮೆಯು ಆಯತಾಕಾರದ ಶಿಲೆಯ ಪೀಠಸ್ಥಾನದ ಮೇಲೆ ನಿಂತಿದೆ. ಈ ಪೀಠವು ಏರುಪೇರಿನ ಹನ್ನೊಂದು ತುದಿಗಳುಳ್ಳ ನಕ್ಷತ್ರಾಕಾರದ ಆಧಾರವನ್ನು ಹೊಂದಿದೆ. ಪ್ರತಿಮೆಯೂ Шаблон:Ftm ಎತ್ತರವಿದೆ. ಪೀಠ ಮತ್ತು ಆಧಾರ ಪರಿಗಣಿಸಿದರೆ ಅದು Шаблон:Ftmಇನ್ನಷ್ಟು ಎತ್ತರದಲ್ಲಿರುವಂತೆ ಕಾಣುತ್ತದೆ. ಜಗತ್ತಿನಾದ್ಯಂತ, ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಮುಖ ಲಾಂಛನಗಳಲ್ಲಿ ಸ್ವಾತಂತ್ರ್ಯದ ಪ್ರತಿಮೆಯೂ ಸಹ ಒಂದು ಎಂದು ಪರಿಗಣಿಸಲಾಗುತ್ತದೆ. ಜೊತೆಗೆ, 1886ರಿಂದ ಜೆಟ್‌ ಯುಗದ ವರೆಗೂ, ಯೂರೋಪಿನಿಂದ ಹಡಗಿನಲ್ಲಿ ಬರುತ್ತಿದ್ದ ಲಕ್ಷಗಟ್ಟಲೆ ವಲಸೆಗಾರರಿಗೆ, ಮೊಟ್ಟಮೊದಲು ಗೋಚರಿಸುವ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಪರೂಪದ ದೃಶ್ಯಗಳಲ್ಲಿ ಈ ಪ್ರತಿಮೆಯೂ ಒಂದಾಗಿತ್ತು. ಈ ಪ್ರತಿಮೆಯು ರಾಷ್ಟ್ರೀಯ ಉದ್ಯಾನ ಸೇವೆಯ ಆಡಳಿತದಲ್ಲಿ ಸ್ವಾತಂತ್ರ್ಯ ಸಂಕೇತಿಸುವ ಪ್ರತಿಮೆ ಎನಿಸಿಕೊಂಡಿದೆ. ರಾಷ್ಟ್ರೀಯ ಸ್ಮಾರಕ ದ ಕೇಂದ್ರಬಿಂದುವೂ ಆಗಿದೆ. ಈ ರಾಷ್ಟ್ರೀಯ ಸ್ಮಾರಕವು ಎಲಿಸ್‌ ದ್ವೀಪವನ್ನೂ ಸಹ ಒಳಗೊಂಡಿದೆ.

ಇತಿಹಾಸ

ಅಮೆರಿಕನ್‌ ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವದ ಅಂಗವಾಗಿ, ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ನೀಡಬಹುದಾದ ಸೂಕ್ತ ಕೊಡುಗೆಯ ಬಗ್ಗೆ ಫ್ರಾನ್ಸ್‌ನಲ್ಲಿ ಚರ್ಚೆ ನಡೆಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನ ಚರಿತ್ರೆಗಾರ, ಲೇಖಕ ಮತ್ತು ರಾಜಕಾರಣಿ ಎಡ್ವರ್ಡ್‌ ರೆನೆ ಡಿ ಲಬೊಲೆ ಈ ಚರ್ಚೆಯ ಮುಂದಾಳತ್ವ ವಹಿಸಿದ್ದರು. ಇಸವಿ 1876ರಲ್ಲಿ ಪ್ರತಿಮೆಯ ರಚನಾಕಾರ್ಯವನ್ನು ಪೂರ್ಣಗೊಳಿಸಬೇಕೆಂಬ ಉದ್ದೇಶದಿಂದ, ಅದರ ವಿನ್ಯಾಸಕ್ಕಾಗಿ ಫ್ರೆಡೆರಿಕ್‌ ಬಾರ್ತೊಲ್ಡಿ ಎಂಬ ಫ್ರೆಂಚ್‌ ಶಿಲ್ಪಿಯನ್ನು ಅಧಿಕೃತವಾಗಿ ನೇಮಿಸಲಾಯಿತು. ಆ ಸಮಯ ಫ್ರಾನ್ಸ್‌ನಲ್ಲಿ ಸಂಭವಿಸಿದ ರಾಜಕೀಯ ಕ್ಷೋಭೆಯಿಂದಾಗಿ ಫ್ರಾನ್ಸ್ ನಡುಗಿಹೋಗಿತ್ತು. ಇದರ ಜ್ಞಾಪಕಾರ್ಥವೇ ಸ್ಮರಣೀಯ ಕೊಡುಗೆಯ ಯೋಜನೆ ಹುಟ್ಟಿಹೊಂಡಿತ್ತು. ಹಲವರು ಫ್ರೆಂಚ್ ಥರ್ಡ್‌ ರಿಪಬ್ಲಿಕ್‌ ಎಂಬುದನ್ನು ತಾತ್ಕಾಲಿಕ ವ್ಯವಸ್ಥೆ ಎಂದು ಪರಿಗಣಿಸಿದ್ದರು. ಇವರು ರಾಜಪ್ರಭುತ್ವ ಅಥವಾ ನೆಪೊಲಿಯನ್‌‌‌ ಆಳ್ವಿಕೆಯ ರೀತಿಯ ಸಾಂವಿಧಾನಿಕ ಸರ್ವಾಧಿಕಾರದತ್ತ ಒಲವು ತೋರುತ್ತಿದ್ದರು.

ಸಾಗರದಾಚೆ ಇರುವ ಸಹೋದರ ಗಣರಾಜ್ಯಕ್ಕೆ ಬೃಹತ್‌ ಕೊಡುಗೆ ನೀಡುವ ಈ ಕಲ್ಪನೆಯು ಇತರೆ ರಾಜಕಾರಣಿಗಳ ವಿರುದ್ಧದ ಗಣತಂತ್ರ ಚಳವಳಿಗೆ ಕೇಂದ್ರಬಿಂದುವಾಯಿತು.

ಮೊದಲ ಟೆರಾಕೊಟಾ ಮಾದರಿಯನ್ನು 1870ರಲ್ಲಿ ನಿರ್ಮಿಸಲಾಯಿತು. ಅದನ್ನು ಈಗ ಮ್ಯುಸೀ ಡೆ ಬ್ಯೂ-ಆರ್ಟ್ಸ್‌ ಡಿ ಲಯನ್‌ನ ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಅದೇ ವರ್ಷ, ಮೊದಲು ಕಿರುಗಾತ್ರದ ಕಂಚಿನ ಮಾದರಿ ನಿರ್ಮಿಸಲಾಯಿತುШаблон:Citation needed. ಈ ಮೊದಲ ಪ್ರತಿಮೆಯು ಈಗ ಪ್ಯಾರಿಸ್‌ನ ಜಾರ್ಡಿನ್‌ ಡ್ಯು ಲಕ್ಸೆಂಬೊರ್ಗ್‌ನಲ್ಲಿದೆ.Шаблон:Citation needed

ಈಜಿಪ್ಟ್‌ಗೆ ಭೇಟಿ ನೀಡಿದ ಬಾರ್ತೊಲ್ಡಿಗೆ, ಅಲ್ಲಿ ನಡೆಯುತ್ತಿದ್ದ ಸುಯೆಜ್‌ ಕಾಲುವೆಯ ನಿರ್ಮಾಣ ಯೋಜನೆಯು ಸ್ಫೂರ್ತಿಯಾಯಿತು. ಸುಯೆಜ್‌ ಕಾಲುವೆ ನಿರ್ಮಾಣ ಯೋಜನೆಯನ್ನು ವಹಿಸಿಕೊಂಡಿದ್ದ ಕೌಂಟ್‌ ಫರ್ಡಿನಾಂಡ್‌ ಡಿ ಲೆಸೆಪ್ಸ್‌ನಂತರ, ಬಾರ್ತೊಲ್ಡಿಯ ಆಪ್ತ ಸ್ನೇಹಿತನಾದ. ಇದರಿಂದಾಗಿ, ಬಾರ್ತೊಲ್ಡಿಯ ಈಜಿಪ್ಟ್‌ ಭೇಟಿ ಆತನ ಕಲಾತ್ಮಕ ದೃಷ್ಟಿಕೋನವನ್ನು 'ಮಹೋನ್ನತ'ದಿಂದ 'ದೈತ್ಯಾಕಾರ'ಕ್ಕೆ ಕೊಂಡೊಯ್ತು. ಕಾಲುವೆಯ ಪ್ರವೇಶ ದ್ವಾರದಲ್ಲಿ ಒಂದು ಬೃಹದಾಕಾರದ ಬೆಳಕುಗೋಪುರವನ್ನು ಕಲ್ಪಿಸಿ, ಆತ ಅದರಂತೆ ಯೋಜನೆ ರೂಪಿಸಿದ. ಈ ಬೆಳಕುಗೋಪುರವು ರೊಮನ್‌ ದೇವತೆ ಲಿಬರ್ಟಾಸ್‌ಳ ಪ್ರತೀಕವಾಗಿತ್ತು. ಪ್ರಭೆಯುಳ್ಳ ಹಣೆಪಟ್ಟಿ ಹಾಗು ಬಲಗೈಯಲ್ಲಿ ಆಕಾಶದತ್ತ ತೋರುವ ಪಂಜಿನಿಂದ ಬೆಳಕು ಬೀರುತ್ತಿರುವ ವಸ್ತ್ರಧಾರಿ ಈಜಿಪ್ಟಿಯನ್‌ ರೈತ ಮಹಿಳೆಯ ಸ್ವರೂಪದಲ್ಲಿ ಈ ಪ್ರತಿಮೆಯ ವಿನ್ಯಾಸ ಮಾಡಲಾಯಿತು. 1857ರಲ್ಲಿ ಬಾರ್ತೊಲ್ಡಿ ತನ್ನ ಯೋಜಿತ ವಿನ್ಯಾಸವನ್ನು ಈಜಿಪ್ಟ್‌ನ ಖೆಡಿವ್‌ ಇಸ್ಮಯಿಲ್‌ ಪಾಷಾಗೆ ಅರ್ಪಿಸಿದ. ಮಾರ್ಪಾಡುಗಳ ನಂತರ ಪುನಃ 1869ರಲ್ಲಿ ಪ್ರಸ್ತುತಪಡಿಸಿದ. ಆದರೆ, ಆಟೊಮನ್‌ ಸಾಮ್ರಾಜ್ಯವು ಆರ್ಥಿಕ ತೊಂದರೆಯಲ್ಲಿದ್ದ ಕಾರಣ ಈ ಯೋಜನೆ ಸಾಕಾರಗೊಳ್ಳಲಿಲ್ಲ.

ಎರಡೂ ದೇಶಗಳ ಜಂಟಿ ಒಪ್ಪಂದದಂತೆ, ಅಮೆರಿಕಾ ಸಂಯುಕ್ತ ಸಂಸ್ಥಾನವು ಪ್ರತಿಮೆಯ ಪೀಠಸ್ಥ ಭಾಗದ ವೇದಿಕೆ ನಿರ್ಮಾಣ ಹಾಗೂ ಫ್ರೆಂಚರು ಪ್ರತಿಮೆಯ ಉಸ್ತುವಾರಿ ವಹಿಸುವ ಜವಾಬ್ದಾರಿ ಹೊಂದಿದ್ದರು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅದರ ಜೋಡಣೆಯ ಕಾರ್ಯವನ್ನು ನಿರ್ವಹಿಸುವುದಿತ್ತು. ಈ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ಧಹಸಹಾಯವೂ ದೊರಕಿತು. ಜೊತೆಗೆ, ಅಂದಿನ ಪ್ರಖ್ಯಾತ ಉದಯೋನ್ಮುಖ ಸಂಗೀತ ಸಂಯೋಜಕ ಚಾರ್ಲ್ಸ್‌ ಗೊನೊಡ್‌ ಪ್ಯಾರಿಸ್‌ ಒಪೆರಾದಲ್ಲಿ ಸಂಗೀತಗೋಷ್ಠಿ ನಡೆಸಿ ಹಣ ಸಂಗ್ರಹಿಸಿದರು. ಲಾ ಲೀಬೆರ್ಟೆ ಎಕ್ಲೇರನ್‌ ಲು ಮೋಂಡ್‌‌ (ಜಗತ್ತಿಗೆ ಜ್ಞಾನಜ್ಯೋತಿ ನೀಡುವ ಲಿಬರ್ಟಿ) ಸಂಗೀತಗೋಷ್ಠಿ ಸೇರಿದಂತೆ ಹಲವಾರು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಧನಸಹಾಯಾರ್ಥ ಕೊಡುಗೈ ದಾನಿಗಳಿಗಾಗಿ ಚಾರಿಟಿ ಶೊ, ಲಾಟರಿ ಯೋಜನೆಯನ್ನೂ ಸಹ ಆಯೋಜಿಸಲಾಯಿತು. ಇದರಿಂದ 2,250,000 ಫ್ರಾಂಕ್‌ಮೊತ್ತ ($250,000) ಸಂಗ್ರಹಿಸಲಾಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸಹಾಯಾರ್ಥ ರಂಗಮಂದಿರ ಕಾರ್ಯಕ್ರಮ, ಕಲಾ ಪ್ರದರ್ಶನ, ಹರಾಜು ಮತ್ತು ಬಹುಮಾನಾರ್ಥ ಸೆಣಸುವ ಕ್ರೀಡಾ ಸ್ಫರ್ಧೆಗಳನ್ನು ಆಯೋಜಿಸಿ ಅಗತ್ಯ ಧನ ಸಂಗ್ರಹಿಸಲಾಯಿತು.

ಏತನ್ಮಧ್ಯೆ ಫ್ರಾನ್ಸ್‌ನಲ್ಲಿ, ಅಂತಹ ದೈತ್ಯಾಕಾರಾದ ತಾಮ್ರಲೋಹದ ಪ್ರತಿಮೆಯ ವಿನ್ಯಾಸ ರಚನೆಯ ಸಮಸ್ಯೆಗಳನ್ನು ಬಗೆಹರಿಸಲು ಬಾರ್ತೊಲ್ಡಿಗೆ ಒಬ್ಬ ಅಭಿಯಂತರನ ಸಲಹೆಯ ಅಗತ್ಯವಿತ್ತು. ದೈತ್ಯಾಕಾರದ ಕಬ್ಬಿಣದ ಗೋಪುರ(ಪೈಲಾನ್‌)ಗಳು, ಹಾಗೂ ಪ್ರತಿಮೆಯ ತಾಮ್ರದ ಸ್ಥೂಲ ಕವಚವು ಆಕಾರಕ್ಕೆ ಹೊಂದಿಕೊಳ್ಳುವ ಚೌಕಟ್ಟಿನ ವಿನ್ಯಾಸ ಮಾಡಲು ಐಫೆಲ್‌ ಗೋಪುರದ ವಿನ್ಯಾಸಕ ಗುಸ್ತಾವ್‌ ಐಫೆಲ್‌ನನ್ನು ನೇಮಿಸಲಾಯಿತು. ಇಫೆಲ್ ತನ್ನ ಆಪ್ತ ಸ್ನೇಹಿತ, ನಂಬಿಗಸ್ಥ ಹಾಗೂ ರಚನಾ ಅಭಿಯಂತರ ಮೌರೀಸ್‌ ಕೋಚ್ಲಿನ್‌ಗೆ ಈ ಕೆಲಸದ ವಿಸ್ತೃತ ಕಾರ್ಯವನ್ನು ವಹಿಸಿಕೊಟ್ಟ.

ಮೊದಲಿಗೆ, ಪ್ರತಿಮೆಯ ನಿರ್ಮಾಣ ಪೂರ್ಣಗೊಳಿಸಿ 1876ರ ಜುಲೈ 4ರಂದು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಅರ್ಪಿಸಲು ಬಾರ್ತೊಲ್ಡಿ ಯೋಚಿಸಿದ್ದ. ಆದರೆ ತಡವಾದ ಆರಂಭ, ನಂತರದ ವಿಳಂಬಗಳಿಂದಾಗಿ ಇದು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಪ್ರತಿಮೆಯ ಪಂಜು ಹಾಗೂ ಬಲಗೈ ನಿರ್ಮಾಣ ಪೂರ್ಣಗೊಂಡಿತ್ತು. ಪ್ರತಿಮೆಯ ಈ ಭಾಗವನ್ನು ಫಿಲಡೆಲ್ಫಿಯಾದ ಸೆಂಟೆನಿಯಲ್ ಎಕ್ಸ್ಪೊಸಿಷನ್‌ನಲ್ಲಿ ಪ್ರದರ್ಶಿಸಲಾಯಿತು. ವೀಕ್ಷಕರು ಮೆಟ್ಟಿಲು ಹತ್ತಿ ಹೋಗಿ ನೋಡಲು 50 ಸೆಂಟ್‌ಗಳ ಶುಲ್ಕ ಪಾವತಿಸಬೇಕಿತ್ತು. ಈ ರೀತಿ ಸಂಗ್ರಹಿಸಿದ ಹಣವನ್ನು ಪೀಠದ ರಚನೆಯ ವೆಚ್ಚಕ್ಕಾಗಿ ಬಳಸಲಾಯಿತು. 1878ರ ಜೂನ್‌ 20ರಂದು ನಡೆದ ಪ್ಯಾರಿಸ್‌ (ಪ್ರದರ್ಶನದಲ್ಲಿ) ಎಕ್ಸ್‌ಪೊಸಿಷನ್‌ನಲ್ಲಿ ಪೂರ್ಣಗೊಂಡಿದ್ದ ಪ್ರತಿಮೆಯ ಶಿರಭಾಗವನ್ನು ಟ್ರೊಕಾಡೆರೊ ಅರಮನೆಯ ತೋಟದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿತ್ತು. ಇತರೆ ಭಾಗಗಳನ್ನು ಚ್ಯಾಂಪ್ಸ್‌ ಡಿ ಮಾರ್ಸ್‌ನಲ್ಲಿ ಪ್ರದರ್ಶಿಸಲಾಯಿತು.

1877ರ ಕಾಂಗ್ರೆಸ್‌ನಲ್ಲಿ ಪ್ರತಿಮೆಗೆ ಸ್ಥಳಾವಕಾಶ ನೀಡಲು ಮಸೂದೆಯೊಂದು ಅನುವು ಮಾಡಿಕೊಟ್ಟಿತು. ಅದರಂತೆ, ನ್ಯೂಯಾರ್ಕ್‌ ಬಂದರಿನಲ್ಲಿ ಪ್ರತಿಮೆ ಪ್ರತಿಷ್ಟಾಪನೆಗೆ, ಬಾರ್ತೊಲ್ಡಿಯ ಇಚ್ಛೆಯಂತೆ ಜನರಲ್‌ ವಿಲಿಯಮ್‌ ಟೆಕಮ್ಸೆಹ್‌ ಷರ್ಮನ್‌ ಸ್ಥಳ ಆಯ್ಕೆ ಮಾಡಿದ. ಐಸಾಕ್‌ ಬೆಡ್ಲೊ ಎಂಬಾತನ ನೆನಪಿನಲ್ಲಿ ಬೆಡ್ಲೊಸ್‌ ಐಲೆಂಡ್‌‌ ಹೆಸರಿನ ಈ ದ್ವೀಪದಲ್ಲಿ ಷರ್ಮನ್‌ ಕಾಮಗಾರಿಗಾಗಿ ಅಲ್ಲಿಯೇ ಬೀಡುಬಿಟ್ಟ. ಅಲ್ಲಿ ಈಗಾಗಲೇ ಫೊರ್ಟ್‌ ವುಡ್‌ ಎಂಬ 19ನೆಯ ಶತಮಾನಕ್ಕೆ ಸೇರಿದ ನಕ್ಷತ್ರಾಕಾರದ ಕೋಟೆಯ-ನಿರ್ಮಾಣವೊಂದಿತ್ತು. ಪ್ರತಿಮೆಯ ನಿರ್ಮಾಣದತ್ತ ಮೊದಲ ಹೆಜ್ಜೆಯ ಸಂಕೇತವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಫ್ರಾನ್ಸ್‌ ರಾಯಭಾರಿ ಸಚಿವ ಲೆವಿ ಪಿ. ಮಾರ್ಟನ್‌ ಮೊದಲ ಗಟ್ಟಿ ತಂತಿಯ ಮೊಳೆ ಸೇರಿಸುವ ಮೂಲಕ ಸಾಂಕೇತಿಕ ಕಾರ್ಯಾರಂಭಗೊಳಿಸಿದರು.

1879ರ ಫೆಬ್ರವರಿ 18ರಂದು ಬಾರ್ತೊಲ್ಡಿಗೆ ವಿನ್ಯಾಸದ ಪೆಟೆಂಟ್‌ Шаблон:US patent(ಹಕ್ಕು ಸ್ವಾಮ್ಯ) ಲಭಿಸಿತು. ಅದರಲ್ಲಿ ಪ್ರತಿಮೆಯ ವಿನ್ಯಾಸ ಹೀಗೆಂದು ವರ್ಣಿಸಲಾಗಿತ್ತು: 'ಪ್ರತಿಮೆಯು ಜಗತ್ತಿಗೆ ಜ್ಞಾನಜ್ಯೋತಿಯನ್ನು ಪ್ರತಿನಿಧಿಸುವ (ಸ್ವಾತಂತ್ರ್ಯ) ಲಿಬರ್ಟಿಯನ್ನು ನಿರೂಪಿಸುತ್ತದೆ; ಅದು ವಸ್ತ್ರಧಾರಿ ಮಹಿಳೆಯ ರೂಪ ಹೊಂದಿದ್ದು, ಮೇಲೆತ್ತಿದ ಬಲಗೈನಲ್ಲಿ ಪಂಜು, ಎಡಗೈಯಲ್ಲಿ ಕೆತ್ತಲ್ಪಟ್ಟ ಅಕ್ಷರಗಳ ಫಲಕವೊಂದಿದೆ, ಆಕೆಯ ತಲೆಯ ಮೇಲೆ ಕಿರೀಟವಿದೆ.' ಪೆಟೆಂಟ್‌ನಲ್ಲಿ ಶಿರಸ್ಸಿನ ಭಾಗವನ್ನು 'ಉನ್ನತವಾದರೂ ಶಾಂತಸ್ವಭಾವದ, ಗಾಢವಾದ ಲಕ್ಷಣಗಳುಳ್ಳದ್ದು' ಎಂದು ವರ್ಣಿಸಲಾಗಿದೆ; 'ಎಡಗಾಲಿನ ಮೇಲೆ ಭಾರ ಹೊತ್ತಿರುವ ಶರೀರವು ಸ್ವಲ್ಪ ಎಡಕ್ಕೆ ವಾಲಿದೆ; ಇಡೀ ಆಕೃತಿಯು ಸಮತೋಲನ ಸ್ಥಿತಿಯಲ್ಲಿದೆ' ಎಂದು ಪ್ರತಿಮೆಯ ಶಾರೀರವನ್ನು ಬಣ್ಣಿಸಿದೆ; 'ಯಾವುದೇ ರೀತಿಯ ಕೆತ್ತನೆಯ ದೊಡ್ಡ ಅಥವಾ ಸಣ್ಣ ಪ್ರತಿಮೆಯಾಗಲಿ, ಉಬ್ಬು ಶಿಲ್ಪಕಲೆಯಾಗಲಿ, ಶಿಲೆ, ಉಕ್ಕು, ಟೆರಾಕೊಟಾ, ಪ್ಲ್ಯಾಸ್ಟರ್‌ ಆಫ್‌ ಪ್ಯಾರಿಸ್‌ ಅಥವಾ ಇತರೆ ಪ್ಲಾಸ್ಟಿಕ್‌ ರಚನೆಯಲ್ಲಿ,' ಉಳಿದ ನಿರೂಪಣೆಗಳನ್ನು ಒಳಗೊಂಡಿದೆ.

ಫ್ರಾನ್ಸ್‌ನಲ್ಲಿ ಪ್ರತಿಮೆಗಾಗಿ ನಿಧಿ ಸಂಗ್ರಹ ಕಾರ್ಯವು 1882ರ ಜುಲೈ ತಿಂಗಳಲ್ಲಿ ಪೂರ್ಣಗೊಂಡಿತು. ವಿಲಿಯಮ್‌ ಎಂ. ಇವರ್ಟ್ಸ್‌ ಮುಂದಾಳುತ್ವದಲ್ಲಿ ಪದತಲದ ಪೀಠದ ವೆಚ್ಚಕ್ಕಾಗಿ ನಡೆದ ಧನ ಸಂಗ್ರಹ ಕಾರ್ಯವು ನಿಧಾನಗತಿಯಲ್ಲಿ ಸಾಗಿತು. ಹಾಗಾಗಿ, 1883ರಲ್ಲಿ ಧನಸಹಾಯಕ್ಕಾಗಿ (ಪುಲಿಟ್ಜರ್‌ ಪ್ರಶಸ್ತಿಯ ಆಯೋಜಕ) ಪ್ರಕಾಶಕ ಜೋಸೆಫ್‌ ಪುಲಿಟ್ಜರ್‌ ತನ್ನ ಪತ್ರಿಕೆ 'ದಿ ವರ್ಲ್ಡ್ ‌'ನ ಸಂಪಾದಕೀಯದ ಪುಟಗಳಲ್ಲಿ ಈ ವಿಷಯ ಪ್ರಸ್ತಾಪಿಸಿದ. ಪೀಠದ ನಿರ್ಮಾಣಕ್ಕಾಗಿ ದೇಣಿಗೆ ನೀಡದ ಶ್ರೀಮಂತರು ಮತ್ತು ದೇಣಿಗೆ ನೀಡಲು ಶ್ರೀಮಂತರೆಡೆಗೆ ಕೈ ತೋರಿಸುವ ಮಧ್ಯಮವರ್ಗದ ಜನರನ್ನು ಪುಲಿಟ್ಜರ್‌ ತನ್ನ ಪತ್ರಿಕೆಯಲ್ಲಿ ಟೀಕಿಸಿದ. ಈ ಯತ್ನಕ್ಕೆ ಅವರ ಅಭಿಯಾನವು ಪ್ರಮುಖ, ಕೊಡುಗೆಯಾಗಿತ್ತು. ಆದರೆ, ಅಂತಿಮವಾಗಿ ಸೆನೇಟರ್‌ ಇವರ್ಟ್ಸ್‌ ಮತ್ತು ಆತ ಅಧ್ಯಕ್ಷತೆ ವಹಿಸಿದ್ದ ಅಮೆರಿಕನ್‌ ಸಮಿತಿಯು ಈ ಹಂತದಲ್ಲಿ ಪೀಠಕ್ಕಾಗಿ ಅಗತ್ಯವಿರುವ ನಿಧಿಯಲ್ಲಿ ಬಹುಪಾಲು ಶೇಖರಣೆ ಮಾಡಿತ್ತು.

ಪ್ರತಿಮೆಯ ನಿರ್ಮಾಣವು ಫ್ರಾನ್ಸ್‌ನಲ್ಲಿ 1884ರ ಜುಲೈ ತಿಂಗಳಲ್ಲಿ ಪೂರ್ಣಗೊಂಡಿತು. ಅಮೆರಿಕನ್‌ ಶಿಲ್ಪಿ ರಿಚರ್ಡ್‌ ಮಾರಿಸ್‌ ಹಂಟ್‌ ವಿನ್ಯಾಸ ಮಾಡಿದ ಪೀಠದ ಮೂಲೆಗಲ್ಲನ್ನು 1884ರ ಆಗಸ್ಟ್‌ 5ರಂದು ಪ್ರತಿಷ್ಠಾಪಿಸಲಾಯಿತು. ಆದರೆ, ನಿಧಿಯ ಕೊರತೆಯಿಂದಾಗಿ ನಿರ್ಮಾಣ ಕಾರ್ಯವನ್ನು 1885ರ ಜನವರಿಯಲ್ಲಿ ಸ್ಥಗಿತಗೊಳಿಸಲಾಯಿತು. ಮಾರ್ಚ್ 1885ರಲ್ಲಿ ಜೋಸೆಫ್‌ ಪುಲಿಟ್ಜರ್‌ ಅವರು ನಿಧಿಸಂಗ್ರಹಣಾ ಅಭಿಯಾನಕ್ಕೆ ಮರುಜೀವ ನೀಡಿದ್ದರ ಫಲವಾಗಿ 1885ರ ಮೇ 11ರಂದು ನಿರ್ಮಾಣಕ್ಕೆ ಮತ್ತೆ ಚಾಲನೆ ದೊರೆಯಿತು. ನಲ್ವತ್ತಾರು ಹಂತಗಳ ಶಿಲಾನಿರ್ಮಾಣದ ಕೆಲಸದಲ್ಲಿ ಮುವತ್ತೆಂಟು ಇನ್ನೂ ಬಾಕಿ ಉಳಿದಿದ್ದವು..

ಪ್ರತಿಮೆಯನ್ನು ಹೊತ್ತ ಇಸೆರ್‌ ಎಂಬ ಫ್ರೆಂಚ್‌ ಹಡಗು, 1885ರ ಜೂನ್‌ 17ರಂದು ನ್ಯೂಯಾರ್ಕ್‌ ಬಂದರು ತಲುಪಿತು. ಸಾಗಣೆಯು ಸುಲಭವಾಗಲೆಂದು ಪ್ರತಿಮೆಯ ವಿವಿಧ 350 ಭಾಗಗಳನ್ನು ಬಿಡಿಯಾಗಿ ಬೇರ್ಪಡಿಸಿ 214 ಪೆಟ್ಟಿಗೆಗಳಲ್ಲಿ ಸುರಕ್ಷಿತಗೊಳಿಸಲಾಗಿತ್ತು. (ಮೊದಲೇ ಪೂರ್ಣಗೊಂಡಿದ್ದ ಬಲಗೈ ಭಾಗ ಮತ್ತು ಪಂಜನ್ನು ಫಿಲಡೆಲ್ಫಿಯಾದ ಸೆಂಟೆನಿಯಲ್‌ ಎಕ್ಸ್‌ಪೊಸಿಷನ್‌ನಲ್ಲಿ, ಆನಂತರ ನ್ಯೂಯಾರ್ಕ್‌ ನಗರದ ಮೆಡಿಸನ್‌ ಸ್ಕ್ವೇರ್‌ನಲ್ಲಿ ಪ್ರದರ್ಶಿಸಲಾಗಿತ್ತು.) ಫ್ರೆಂಚ್‌ ಹಡಗನ್ನು ನ್ಯೂಯಾರ್ಕ್‌ ಬಂದರಿನಲ್ಲಿರುವ ಬೆಡ್ಲೊಸ್‌ ಐಲೆಂಡ್‌ಗೆ ಒಯ್ಯಲು ಪೈಲಟ್‌ ಜೋಸೆಫ್‌ ಹೆಂಡರ್ಸನ್‌ ಬೆಂಗಾವಲಿಗಾಗಿ ನಿಯೋಜಿತನಾದ. ಈ ಅವಿಸ್ಮರಣೀಯ ಸಂದರ್ಭ ಮತ್ತು ಪೈಲಟ್‌ (ಹಡಗು ಚಾಲಕ) ಹೆಂಡರ್ಸನ್‌ನ ಛಾಯಾ ಚಿತ್ರವು ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟಗೊಂಡವು. 'ಆಕಾಶದ ಕಿಟಕಿಯಿಂದ ತೂರಿದ ಈತ ನೇರವಾಗಿ ಇಸೆರ್‌ನ ಹಡಗಿಗಿಳಿದ. ಈ ಕೆಲಸಕ್ಕಾಗಿಯೇ ಹಡಗುಕಟ್ಟೆಗೆ ಬಂದ ಪೈಲಟ್‌ ಹೆಂಡರ್ಸನ್‌' ಎಂದು ವಿವರಿಸಲಾಗಿತ್ತು.

ಪೀಠನಿರ್ಮಾಣಕ್ಕಾಗಿ ನಿಧಿಸಂಗ್ರಹವು 1185ರ ಆಗಸ್ಟ್‌ 11ರಂದು ಪೂರ್ಣಗೊಂಡಿತ್ತು. ವಿನ್ಯಾಸದ ಕಾಮಗಾರಿ 1886ರ ಏಪ್ರಿಲ್‌ 22ರಂದು ಪೂರ್ಣಗೊಂಡಿತ್ತು. ಪೀಠದ ಕೊನೆಯ ಶಿಲೆಯನ್ನು ಜೋಡಿಸಿದಾಗ ಗಾರೆ ಕೆಲಸದವರೆಲ್ಲರೂ ತಮ್ಮ ತಮ್ಮ ಜೇಬುಗಳಿಂದ ಸಂಗ್ರಹಿಸಿದ ಬೆಳ್ಳಿಯ ನಾಣ್ಯಗಳನ್ನು ಗಾರೆಯೊಳಗೆ ಸುರಿಮಳೆಗೈದರು. ಪೀಠದ ಭಾರೀ ಕಲ್ಲುಕೆಲಸದಲ್ಲಿ ನಾಲ್ಕು ಕಬ್ಬಿಣ ತೊಲೆಗಳ ಎರಡು ವಿಭಾಗಗಳಿವೆ. ಇವುಗಳಿಗೆ ಕಬ್ಬಿಣದ ಕಟ್ಟು ಕಂಬಿಗಳನ್ನು ಜೋಡಿಸಿ ಮೇಲಕ್ಕೆ ಒಯ್ಯಲಾಗಿದ್ದು, ಐಫೆಲ್‌ ಗೋಪುರದಂತೆ ವಿನ್ಯಾಸ ಮಾಡಲಾಗಿದೆ. ಹಾಗಾಗಿ, ಸ್ವಾತಂತ್ರ್ಯದ ಪ್ರತಿಮೆ ಯು ತನ್ನ ಪೀಠದೊಂದಿಗೆ ಪ್ರತಿಷ್ಠಾಪಿತವಾಗಿದೆ.

ಪೀಠದ ನಿರ್ಮಾಣ ಸಂಪೂರ್ಣವಾಗುವವರೆಗೂ ಪ್ರತಿಮೆಯ ಭಾಗಗಳು ಹನ್ನೊಂದು ತಿಂಗಳ ಕಾಲ ಪೆಟ್ಟಿಗೆಗಳಲ್ಲಿಯೇ ಬಂಧಿಯಾಗಿದ್ದವು. ನಂತರ ಅದನ್ನು ಹೊರತೆಗೆದು, ನಾಲ್ಕು ತಿಂಗಳುಗಳ ನಂತರ ಜೋಡಿಸಲಾಯಿತು. ಅಕ್ಟೋಬರ್‌ 28ರಂದು 1886ರಲ್ಲಿ, ಸಾವಿರಾರು ಜನ ವೀಕ್ಷಕರ ಎದುರು, ರಾಷ್ಟ್ರಾಧ್ಯಕ್ಷ ಗ್ರೊವರ್‌ ಕ್ಲೆವೆಲೆಂಡ್‌ ಸ್ವಾತಂತ್ರ್ಯದ ಪ್ರತಿಮೆಯನ್ನು ಅನಾವರಣಗೊಳಿಸಿದರು. (ಇದಕ್ಕೆ ಮುಂಚೆ, ಪೀಠದ ನಿರ್ಮಾಣಕ್ಕಾಗಿ ನ್ಯೂಯಾರ್ಕ್‌ ಶಾಸಕಾಂಗವು ಮಂಜೂರು ಮಾಡಿದ್ದ $50,000 ದೇಣಿಗೆಯ ಮಸೂದೆಯನ್ನು ಆಗ ನ್ಯೂಯಾರ್ಕ್‌ ರಾಜ್ಯಪಾಲರಾಗಿದ್ದ ಕ್ಲೆವೆಲೆಂಡ್‌ ನಿರಾಕರಿಸಿದ್ದರು (ವೀಟೊ ಮಾಡಿದ್ದರು)). ಸ್ವಾತಂತ್ರ್ಯದ ಪ್ರತಿಮೆ ಜೋಡಣೆಯಾಗಿ 10 ವರ್ಷಗಳ ನಂತರ, ಅಮೆರಿಕಾ ಸಂಯುಕ್ತ ಸಂಸ್ಥಾನವು ಫ್ರಾನ್ಸ್‌ನಲ್ಲಿರುವ ಹಲವು ಸಹಾಯಾರ್ಥ ದತ್ತಿ ಸಂಸ್ಥೆಗಳಿಗೆ $10,000,000 USD ದಾನ ನೀಡಿತು.

1886ರಿಂದ 1902ರ ವರೆಗೆ ಸ್ವಾತಂತ್ರ್ಯದ ಪ್ರತಿಮೆಯು ದೀಪಸ್ತಂಭವಾಗಿ ಕಾರ್ಯ ನಿರ್ವಹಿಸಿತು. ಆ ಸಮಯದಲ್ಲಿ, ದೀಪಸ್ತಂಭಗಳ ನಿರ್ವಹಣೆಯನ್ನು U.S. ದೀಪಸ್ತಂಭ ಮಂಡಳಿಯು ವಹಿಸಿಕೊಂಡಿತ್ತು. ದೀಪಸ್ತಂಭಕ್ಕೆ ಕಾವಲುಗಾರನೊಬ್ಬನನ್ನು ನೇಮಿಸಲಾಗಿತ್ತು. ಇದರ ವಿದ್ಯುದ್ದೀಪದ ಪ್ರಭೆಯನ್ನು ಸಮುದ್ರದಲ್ಲಿ 24 ಮೈಲಿಗಳ (39 ಕಿ.ಮೀ.ಗಳ) ದೂರದ ಅಂತರದಲ್ಲಿ ಕಾಣಬಹುದಾಗಿದೆ. ಇಡೀ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲೇ ವಿದ್ಯುತ್‌ ಬಳಸುವ ಮೊದಲ ದೀಪಸ್ತಂಭವಾಗಿತ್ತು. ದೀಪಕ್ಕಾಗಿಯೇ ವಿದ್ಯುತ್ತು ಪೂರೈಸಲು ಆ ದ್ವೀಪದಲ್ಲೊಂದು ವಿದ್ಯುತ್‌ ಕೇಂದ್ರವಿತ್ತು.

ಪ್ರತಿಮೆಯ ಸುತ್ತ ವಿಮಾನ ಹಾರಾಟ ನಡೆಸಿದ ಮೊದಲ ವ್ಯಕ್ತಿ ವಿಲ್ಬರ್‌ ರೈಟ್‌. ಹಡ್ಸನ್‌-ಫುಲ್ಟನ್‌ ಉತ್ಸವದ ಅಂಗವಾಗಿ ಈತನು 1909ರ ಸೆಪ್ಟೆಂಬರ್‌ 29ರಂದು ಪ್ರತಿಮೆಯ ಸೊಂಟದ ವರೆಗಿನ ಮಟ್ಟದಲ್ಲಿ ವಿಮಾನ ಹಾರಾಟ ನಡೆಸಿ ಗಮನ ಸೆಳೆಯುವಕಾರ್ಯ ಮಾಡಿದ. ಲಾಂಗ್‌ ಐಲೆಂಡ್‌ನಲ್ಲಿರುವ ಮೊಯ್ಸಂಟ್‌ ಸ್ಕೂಲ್‌ ಆಫ್‌ ಏವಿಯೆಷನ್‌ನಿಂದ ಯುವ ಪೈಲಟ್‌ಗಳ ಗುಂಪೊಂದು 1913ರಲ್ಲಿ ಪದವಿ ಸ್ವೀಕರಿಸಿತು. ಇವರಲ್ಲಿ, ಪ್ರತಿಮೆಯ ಮೇಲ್ಭಾಗದಲ್ಲಿ ವಿಮಾನ ಹಾರಾಟ ನಡೆಸಲು ಜ್ಯುವಾನ್‌ ಪಾಬ್ಲೊ ಅಲ್ಡಸೊರೊ ಎಂಬ ಮೆಕ್ಸಿಕನ್‌ ಪೈಲಟ್‌ ಪದವೀಧರ ಆಯ್ಕೆಯಾದ. ಉಳಿದ ಎಲ್ಲಾ ಪದವೀಧರರು ಆನಂತರ ಅರ್ಲಿ ಬರ್ಡ್ಸ್‌ ಆಫ್‌ ಏವಿಯೆಷನ್‌ನ ಸದಸ್ಯರಾದರು.

1916ರಲ್ಲಿ ಪ್ರತಿಮೆಯ ಆಧಾರದ ಅಡಿಪಾಯದ ಸುತ್ತಲೂ ಹೊನಲು ದೀಪದ ಪ್ರಕಾಶವನ್ನು ವ್ಯವಸ್ಥೆಗೊಳಿಸಲಾಯಿತು. ಅದೇ ವರ್ಷ,ಬ್ಲ್ಯಾಕ್‌ ಟಾಮ್‌ ವಿಸ್ಪೋಟದ ಕಾರಣ, ಪ್ರತಿಮೆ ಮತ್ತು ಅದು ಒಳಗೊಂಡಿರುವ ವಸ್ತುಗಳಿಗೆ ಸುಮಾರು $100,000ರಷ್ಟು ಮೌಲ್ಯದ ಹಾನಿಯುಂಟಾಯಿತು (2008ರ ಡಾಲರ್‌‌ ಲೆಕ್ಕದಲ್ಲಿ $1.98 ದಶಲಕ್ಷ). ಪ್ರತಿಮೆಗೆ ಸಂಭವಿಸಿದ ಈ ಹಾನಿಯ ಘಟನೆಯಿಂದಾಗಿ ಬಹು ಸಮಯದವರೆಗೆ ಸಂದರ್ಶಕರಿಗೆ ಪ್ರವೇಶ ನಿರ್ಭಂದಿಸಲಾಯಿತು. ಇದೇ ವರ್ಷ 1916ರಲ್ಲಿ, ಮೌಂಟ್‌ ರಷ್ಮೋರ್‌ನ ಶಿಲ್ಪಿ ಗುಟ್ಜನ್‌ ಬೊರ್ಗ್ಲುಮ್‌ ಮೂಲ ತಾಮ್ರದ ಪಂಜನ್ನು ಮಾರ್ಪಾಟುಗೊಳಿಸಿದ. ಪಂಜಿನ ಜ್ವಾಲೆಯಲ್ಲಿರುವ ತಾಮ್ರದ ಬಹುಪಾಲನ್ನು ಕತ್ತರಿಸಿ ಅದರ ಜಾಗದಲ್ಲಿ ಗಾಜಿನ ಫಲಕಗಳನ್ನು ಜೋಡಿಸಿ ಒಳಭಾಗದಲ್ಲಿ ಬೆಳಕಿನ ವ್ಯವಸ್ಥೆಯನ್ನು ಅಳವಡಿಸಿದ. ಈ ಮಾರ್ಪಾಡುಗಳ ನಂತರ, ಮಳೆಯ ನೀರು ಹಾಗೂ ಹಿಮ ಕರಗುವಿಕೆಯ ಕಾರಣ ಪಂಜು ತೀವ್ರವಾಗಿ ಸೋರಿಕೆಯಾಯಿತು. ಇದರಿಂದಾಗಿ ಪ್ರತಿಮೆಯ ಒಳಭಾಗದಲ್ಲಿನ ಕಬ್ಬಿಣ ಮತ್ತು ಉಕ್ಕಿನ ಭಾಗಗಳು ಬಹು ಬೇಗ ತುಕ್ಕು ಹಿಡಿದವು. ರಾಷ್ಟ್ರಾಧ್ಯಕ್ಷ ಫ್ರಾಂಕ್ಲಿನ್‌ ಡಿ. ರೂಸ್ವೆಲ್ಟ್, ಪ್ರತಿಮೆಯ ಐವತ್ತನೆಯ ವಾರ್ಷಿಕೋತ್ಸವದಂದು ಇದನ್ನು (28 ಅಕ್ಟೋಬರ್‌ 1936) ಪುನಃ ಅನಾವರಣಗೊಳಿಸಿದರು.

ಕಾಂಗ್ರೆಸ್‌ ಅಂಗೀಕರಿಸಿದ ನಿರ್ಣಯದಂತೆ, 1956ರಲ್ಲಿ ಬೆಡ್ಲೊಸ್‌ ಐಲೆಂಡ್‌ನ್ನು ಅಧಿಕೃತವಾಗಿ ಲಿಬರ್ಟಿ ಐಲೆಂಡ್‌ ಎಂದು ಮರುನಾಮಕರಣ ಮಾಡಲಾಯಿತು. ಆದರೂ, 20ನೆಯ ಶತಮಾನದ ಆರಂಭದಿಂದಲೇ ಈ ದ್ವೀಪವನ್ನು ಅನೌಪಚಾರಿಕವಾಗಿ ಲಿಬರ್ಟಿ ಐಲೆಂಡ್‌ ಎಂದೇ ಕರೆಯಲಾಗುತ್ತಿತ್ತು. ನ್ಯಾಷನಲ್‌ ಪಾರ್ಕ್‌ ಸರ್ವಿಸ್‌ ಆಡಳಿತದಲ್ಲಿರುವ ಎಲ್ಲಾ ಐತಿಹಾಸಿಕ ಸ್ಥಳಗಳಂತೆ, ಎಲಿಸ್‌ ಐಲೆಂಡ್‌ ಮತ್ತು ಲಿಬರ್ಟಿ ಐಲೆಂಡ್‌ ಜೊತೆಗೆ ಸ್ವಾತಂತ್ರ್ಯದ ಪ್ರತಿಮೆ, ರಾಷ್ಟ್ರೀಯ ಸ್ಮಾರಕವನ್ನು, 1966ರ ಅಕ್ಟೋಬರ್‌ 15ರಂದು ಐತಿಹಾಸಿಕ ಸ್ಥಳಗಳ ರಾಷ್ಟ್ರೀಯ ದಾಖಲಾತಿಯ ಪ್ರೇಕ್ಷಣೀಯ ಪಟ್ಟಿಗೆ (ನ್ಯಾಷನಲ್‌ ರಿಜಿಸ್ಟರ್‌ ಆಫ್‌ ಹಿಸ್ಟಾರಿಕ್‌ ಪ್ಲೇಸೆಸ್‌) ಸೇರಿಸಲಾಯಿತು.

ಮುಂಚೆ 'ಫೊರ್ಟ್‌ ವುಡ್‌'ನ ಮೇಲ್ಭಾಗದ ಪೀಠಕ್ಕೆ ಅಂಟಿಕೊಂಡು ನಿರ್ಮಿಸಲಾದ ಕಟ್ಟಡದಲ್ಲಿದ್ದ ಅಮೆರಿಕನ್‌ ಮ್ಯುಸಿಯಮ್‌ ಆಫ್‌ ಇಮಿಗ್ರೇಷನ್‌ ವಸ್ತು ಸಂಗ್ರಹಾಲಯವನ್ನು ರಾಷ್ಟ್ರಾಧ್ಯಕ್ಷ ರಿಚರ್ಡ್‌ ಎಂ.ನಿಕ್ಸನ್‌ 1972ರಲ್ಲಿ ಸಮರ್ಪಿಸಿದರು. 1984ರಲ್ಲಿ, ಸ್ವಾತಂತ್ರ್ಯದ (ಸ್ಟ್ಯಾಚ್ಯೂ ಆಫ್‌ ಲಿಬರ್ಟಿ) ಪ್ರತಿಮೆಯನ್ನು ವಿಶ್ವ ಪರಂಪರೆಯ ಸ್ಥಳಗಳ ಪಟ್ಟಿಗೆ ಸೇರಿಸಲಾಯಿತು. 2007ರಲ್ಲಿ ವಿಶ್ವದ ಏಳು ಅದ್ಭುತಗಳ ಹೊಸ ಪಟ್ಟಿಗಾಗಿ ನಡೆದ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಬಂದವುಗಳಲ್ಲಿ ಸ್ವಾತಂತ್ರ್ಯದ ಪ್ರತಿಮೆಯೂ ಒಂದು.

ಮುಖಕ್ಕೆ ಪ್ರೇರಣೆ

ದೃಢೀಕರಿಸದ ಹಲವಾರು ಮೂಲಗಳು ಪ್ರತಿಮೆಯ ಮುಖಾರವಿಂದಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ಸೂಚಿಸುತ್ತವೆ. ಇವುಗಳಲ್ಲೊಂದು ಆಗತಾನೆ ವಿಧವೆಯಾದ ಇಸಾಬೆಲಾ ಯುಜೆನೀ ಬೊಯರ್‌ಳ ಮುಖದ ರೂಪದಂತಿದೆ ಎಂದಿತ್ತು. ಇಸಾಬೆಲಾ ಹೊಲಿಗೆ ಯಂತ್ರಗಳ ಉದ್ಯಮಿ ಐಸಾಕ್‌ ಸಿಂಗರ್‌ನ ಪತ್ನಿಯಾಗಿದ್ದಳು. 'ಆಕೆಯು ತನ್ನ ಪತಿಯ ಒರಟು ಸ್ವಭಾವದ ಸಹವಾಸದಿಂದ ಮುಕ್ತಳಾಗಿದ್ದಳು; ಆತನು ಆಕೆಗಾಗಿ ಕೇವಲ ಸಾಮಾಜಿಕವಾಗಿ ಅಗತ್ಯವಾದ ತನ್ನ ಆಸ್ತಿಯನ್ನು ಬಿಟ್ಟುಹೋಗಿದ್ದ: ಆತನ ಸಂಪತ್ತು ಮತ್ತು ಆತನ ಮಕ್ಕಳು. ಪ್ಯಾರಿಸ್‌ನಲ್ಲಿ ತನ್ನ ವೃತ್ತಿಯ ಆರಂಭದ ದಿನಗಳಿಂದಲೂ ಆಕೆ ಚಿರಪರಿಚಿತ ವ್ಯಕ್ತಿತ್ವ ಹೊಂದಿದ್ದಳು. ಸ್ವಾತಂತ್ರ್ಯದ ಪ್ರತಿಮೆಯ ಚಹರೆಯ ಹುಡುಕಾಟದಲ್ಲಿದ್ದ ಬಾರ್ತೊಲ್ಡಿಯ ರೂಪದರ್ಶಿಯಾಗಿ ಅಮೆರಿಕನ್‌ ಫ್ರೆಂಚ್‌ ಉದ್ಯಮಿಯ ಪತ್ನಿಯಾಗಿದ್ದ ವಿಧವೆ, ಚೆಲುವೆ ಇಸಾಬೆಲ್ಲಾಳನ್ನು ಆಯ್ಕೆ ಮಾಡಲಾಯಿತು.' 'ಗಡುಸು ಮುಖಚಹರೆಯು' ಬಾರ್ತೊಲ್ಡಿ ಬಹಳ ನೆಚ್ಚಿಕೊಂಡಿದ್ದ ಮುಖಾರವಿಂದಗಳಲ್ಲಿ ಒಂದಾಗಿತ್ತು. ಆದ್ದರಿಂದ ತನ್ನ ತಾಯಿ ಚಾರ್ಲೊಟ್‌ ಬಾರ್ತೊಲ್ಡಿಯ ಚಹರೆ ಇದೆಂದೂ (1801-1891) ಆ ಉದ್ದೇಶಕ್ಕಾಗಿ ಇದನ್ನು ಮಾದರಿಯನ್ನಾಗಿ ಮಾಡಲಾಗಿದೆ ಎಂದು ಇನ್ನೊಂದು ಮೂಲ ತಿಳಿಸಿದೆ. ಪ್ರತಿಮೆಯ ಮುಖ ಬಾರ್ತೊಲ್ಡಿಯ ತಾಯಿಯದನ್ನು ಹೋಲುತ್ತದೆ ಎಂದು ನ್ಯಾಷನಲ್‌ ಜಿಯೊಗ್ರಫಿಕ್‌ ಪತ್ರಿಕೆಯೂ ಸಹ ತಿಳಿಸಿದೆ. ಆದರೆ ಬಾರ್ತೊಲ್ಡಿ ಈ ಹೋಲಿಕೆಯನ್ನು ತಳ್ಳಿಹಾಕುವುದಾಗಲೀ ವಿವರಿಸುವುದಾಗಲೀ ಮಾಡಲಿಲ್ಲ.

ಸಂಕೇತಗಳು

ಪ್ರತಿಮೆಯ ಶಾಸ್ತ್ರೀಯ ಗೋಚರತೆಯು (ರೊಮನ್‌ ಸ್ಟೊಲಾ, ಪಾದರಕ್ಷೆಗಳು, ಮುಖದ ಭಾವ) ಗುಲಾಮಿತನದ, ದಮನ ಮತ್ತು ದಬ್ಬಾಳಿಕೆಯಿಂದ ಮುಕ್ತಿ ಪಡೆವ ರೊಮನ್‌ ಸ್ವಾತಂತ್ರ್ಯ ದೇವತೆ ಲಿಬರ್ಟಾಸ್‌ಳಿಂದ ಪಡೆಯಲಾಗಿದೆ. ಆಕೆಯ ಬಲಗಾಲು ಮುನ್ನುಗ್ಗುವಂತಿದೆ; ಅಥವಾ, ಮುನ್ನಡೆಯನ್ನು ಸೂಚಿಸುತ್ತಿದೆ. ಸ್ವಾತಂತ್ರ್ಯ ಮತ್ತು ಮುಕ್ತಿಯ ಪ್ರತೀಕವಾದ ಈ ಪ್ರತಿಮೆ, ತಟಸ್ಥ ಸ್ಥಿತಿ ಅಥವಾ ಸಾವಧಾನ ಸ್ಥಿತಿಯಲ್ಲಿರದೆ, ಚಲಿಸುತ್ತಿರುವಂತೆ ನಿರೂಪಿಸಲಾಗಿದೆ. ಲಿಬರ್ಟಿ ದೇವತೆಯ ಎಡಗಾಲು ಸಂಕೋಲೆಯನ್ನು ಮೆಟ್ಟಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನವು ದಮನ ಮತ್ತು ದಬ್ಬಾಳಿಕೆಯಿಂದ ಬಿಡುಗಡೆ ಹೊಂದಲು, ಮುಕ್ತವಾಗಿರಲು ಬಯಸುತ್ತದೆ ಎಂಬುದು ಇದರ ಸಂಕೇತ. ಕಿರೀಟದಲ್ಲಿ ಗೋಚರಿಸುವ ಏಳು ಮೊನೆಚುಗಳು ಅಥವಾ ಮುಕುಟದ ಭಾಗವು ಏಳು ಸಾಗರಗಳು ಮತ್ತು ಏಳು ಖಂಡಗಳನ್ನು ಪ್ರತಿನಿಧಿಸುತ್ತವೆ ಎಂಬುದನ್ನು 1940ರ ದಶಕದಿಂದಲೂ ಘೋಷಿಸಿ ಹೇಳಿಕೊಳ್ಳಲಾಗಿದೆ. ಆಕೆಯ ಪಂಜು ಜ್ಞಾನೋದಯದ ಸಂಕೇತವಾಗಿದೆ. ಆಕೆಯ ಎಡಗೈಯಲ್ಲಿನ ಫಲಕವು ಜ್ಞಾನವನ್ನು ನಿರೂಪಿಸುವುದಲ್ಲದೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯ ದಿನಾಂಕವನ್ನು ರೋಮನ್ ಸಂಖ್ಯೆಯಲ್ಲಿ ನಿರೂಪಿಸಿದೆ (ಜುಲೈ IV, MDCCLXXVI).

ಪ್ರತಿಮೆಯ ಶಿರಸ್ಸು ಗ್ರೀಕ್ ಸೂರ್ಯ ದೇವತೆ ಅಪೊಲೊ ಅಥವಾ ರೋಮನ್‌ ಸೂರ್ಯ ದೇವತೆ ಹೀಲಿಯೊಸ್‌ರನ್ನು ಪ್ರತಿಬಿಂಬಿಸುವಂತಿದೆ. ಇಂತಹ ಕೆತ್ತನೆ ಹೊಂದಿರುವ ಪುರಾತನ ಅಮೃತ ಶಿಲೆ ಈಗ ಗ್ರೀಸ್‌ನ ಕೊರಿಂತ್‌ನಲ್ಲಿರುವ ಕೊರಿಂತ್‌ ಪುರಾತತ್ವಶಾಸ್ತ್ರ ವಸ್ತು ಸಂಗ್ರಹಾಲಯದಲ್ಲಿದೆ. ಇದನ್ನು ಅಪೊಲೊ ಸೌರ ದೇವತೆಯಂತೆ ನಿರೂಪಿಸಲಾಗಿದೆ. ಸ್ವಾತಂತ್ರ್ಯದ ಪ್ರತಿಮೆಯಂತೆಯೇ ಅಪೊಲೊ ವಸ್ತ್ರ ಧರಿಸಿದ್ದಾನೆ; ತಲೆಯ ಮೇಲೆ ಏಳು ಮೊನಚುಗಳುಳ್ಳ ಹೊಳಪಿನ ಕಿರೀಟ - ಇದು ಲಿಬರ್ಟಿ ಪ್ರತಿಮೆಯ ಪ್ರಭಾಮಂಡಲದಂತೆ ಸೂರ್ಯನ ಕಿರಣಗಳನ್ನು ಪ್ರಕಾಶಿಸುತ್ತದೆ. ಪುರಾತನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಪುರಾತನ ಕಾಲೊಸಸ್‌ ಆಫ್‌ ರೊಡ್ಸ್‌ ಹೊಳಪಿನ ಕಿರೀಟ ಧರಿಸಿದ ಹೀಲಿಯೊಸ್‌ನ ಪ್ರತಿಮೆಯಾಗಿತ್ತು. ಎಮ್ಮಾ ಲಾಜಾರಸ್‌ 1883ರಲ್ಲಿ ರಚಿಸಿದ ದಿ ನ್ಯೂ ಕಾಲೊಸಸ್‌ ಎಂಬ ನುಡಿಕಾವ್ಯದಲ್ಲಿ ಕೊಲೊಸಸ್‌ ಉಲ್ಲೇಖಿತವಾಗಿದೆ. ಲಾಜಾರಸ್‌ರ ಕಾವ್ಯವನ್ನು ಆನಂತರ ಕಂಚಿನಲ್ಲಿ ಕೆತ್ತಲಾಯಿತು. 1903ರಲ್ಲಿ ಸ್ವಾತಂತ್ರ್ಯದ ಪ್ರತಿಮೆಯ ಒಳಭಾಗದಲ್ಲಿ ಅಳವಡಿಸಲಾಯಿತು.

ಅಮೆರಿಕಾ ಸಂಯುಕ್ತ ಸಂಸ್ಥಾನದ ಧ್ಯೇಯ ಮತ್ತು ನೀತಿ-ನಿಯಮ ಮೌಲ್ಯಗಳ ಬಗ್ಗೆ ಈ ಪ್ರತಿಮೆಯು ವಿಭಿನ್ನ ವೀಕ್ಷಕರಿಗೆ, ನೋಡುಗರಿಗೆ ನೆನಪಿನ ಆಳಕ್ಕೆ ತಲುಪಿಸುತ್ತದೆ. ಉದಾಹರಣೆಗೆ, ಪ್ರತಿಮೆಯು ಹೇಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಮುಕ್ತ ದ್ವಾರ ನೀತಿಯ ಸಂಕೇತವಾಯಿತು ಎಂಬುದನ್ನು ಸಾಕ್ಷ್ಯಚಿತ್ರಕಾರ ಕೆನ್‌ ಬರ್ನ್ಸ್‌ ವಿವರಿಸಿದ್ದಾನೆ. 'ಪೂರ್ವ ತೀರದಲ್ಲಿರುವ ಸ್ವಾತಂತ್ರ್ಯದ ಪ್ರತಿಮೆಗೆ ಪೂರಕವಾಗುವಂತೆ, ಪಶ್ಚಿಮ ತೀರದಲ್ಲಿ ಸ್ಟ್ಯಾಚ್ಯೂ ಆಫ್‌ ರೆಸ್ಪಾನ್ಸಿಬಿಲಿಟಿಯೊಂದನ್ನು ಸ್ಥಾಪಿಸಬೇಕು' ಎಂದು ಅಸ್ತಿತ್ವವಾದಿ ವಿಜ್ಞಾನಿ (ಚಿಕಿತ್ಸಕ) ವಿಕ್ಟರ್‌ ಫ್ರಾಂಕ್ಲ್‌ ತಮ್ಮ ಕೃತಿ 'ಮ್ಯಾನ್ಸ್‌ ಸರ್ಚ್‌ ಫಾರ್‌ ಮೀನಿಂಗ್‌ 'ನಲ್ಲಿ ಉಲ್ಲೇಖ ಮಾಡಿದ್ದಾರೆ.

ಮೂರ್ತಿಶಿಲ್ಪದ ಪೂರ್ವನಿದರ್ಶನಗಳು

ಮೇಲೆ ತಿಳಿಸಿದಂತೆ ಹೊಳಪಿನ ಕಿರೀಟಕ್ಕೆ ಕಾಲೊಸಸ್‌ ಆಫ್‌ ರೋಡ್ಸ್‌ ಪ್ರೇರಣೆಯಾಗಿರಬಹುದು.

ಕೆನೊವಾದ ಕ್ಲೆಮೆಂಟ್‌ ಕೆಮಿಲೊ ಪಾಸೆಟ್ಟಿ ಆಧುನಿಕ ಯುಗದಲ್ಲಿ, ವಿಶಿಷ್ಟ ಸಂಕೇತಗಳುಳ್ಳ ಹೊಳಪಿನ ಕಿರೀಟಧಾರೀ ಪ್ರತಿಮೆಗಳನ್ನು ಇಟಲಿಯ ಶಿಲ್ಪಿಗಳು ವಿನ್ಯಾಸಗೊಳಿಸಿದ್ದರು. ಇವುಗಳಲ್ಲಿ ಗಮನಾರ್ಹವಾದದ್ದು ಪೋಪ್‌ ಕ್ಲೆಮೆಂಟ್‌ XIIIರ ಗೋರಿಯ ಮೇಲೆ ಕೆನೊವಾದ ಧಾರ್ಮಿಕತೆಯ ಗೂಡಾರ್ಥಯುಳ್ಳ, ಹಾಗೂ ಮಿಲಾನ್‌ನ ಮುಖ್ಯ ಇಗರ್ಜಿ (ಕತಿಡ್ರಲ್‌‌) ಪ್ರವೇಶದ್ವಾರದ ಮೇಲೆ ಕೆಮಿಲೊ ಪಾಸೆಟ್ಟಿಯ ಹೊಸ ಒಡಂಬಡಿಕೆಯ ಒಳಾರ್ಥಗಳು ಎಂದು ಹೇಳಬಹುದು.

19ನೆಯ ಶತಮಾನದ ಪೂರ್ವಾರ್ಧ ಫ್ರಾನ್ಸ್‌ನಲ್ಲಿ ಇದು ಸರ್ವೇಸಾಮಾನ್ಯವಾಗಲಾರಂಭಿಸಿತು. ಎಲಿಯಾಸ್‌ ರಾಬರ್ಟ್‌ರ ಕೃತಿ 'ಫ್ರಾನ್ಸ್‌ ಅತಿಶ್ರೇಷ್ಠ ಕಲೆ ಮತ್ತು ಕೈಗಾರಿಕೆಗಳು' (1855) ಸೇರಿ ಇತರೆ ಮೂಲಗಳು ಸ್ವಾತಂತ್ರ್ಯದ ಪ್ರತಿಮೆಗೆ ಪ್ರೇರಣೆಯಾಗಿರಬಹುದು. . ಏಳು ಕಿರಣಗಳನ್ನು ನೆನಪಿಸುವ ಹೊಳಪಿನ ಕಿರೀಟ ಧರಿಸಿ ಸುಖಾಸೀನವಾಗಿರುವ ಲಿಬರ್ಟಿಯ ಸಾಂಕೇತಿಕ ನಿರೂಪಣೆಯನ್ನು ಫ್ರೆಂಚ್ ಎರಡನೆಯ ಗಣರಾಜ್ಯದ 'ದಿ ಗ್ರೇಟ್‌ ಸೀಲ್' (1848-1852) ಪ್ರದರ್ಶಿಸುತ್ತದೆ.

.ಏಳು ಕಿರಣಗಳುಳ್ಳ ಹೊಳಪಿನ ಕಿರೀಟ

ಸ್ವಾತಂತ್ರ್ಯದ ಪ್ರತಿಮೆಯ ಮುಂಚಿನ ಮಾದರಿ ಆವೃತ್ತಿಗಳಲ್ಲಿ ಇವೆರಡು ಪ್ರತಿಮೆಗಳು ಸೇರಿವೆ. 1790ರ ಮೇ 30ರಂದು ನಡೆದ ಒಕ್ಕೂಟದ ಉತ್ಸವಕ್ಕಾಗಿ ಲಯನ್‌ನ ಕಾನ್ಕಾರ್ಡಿಯಾ ದೇವಾಲಯದ ಮೇಲೆ ಒಂದು ಪ್ರತಿಮೆ ಸ್ಥಾಪಿಸಲಾಯಿತು.ಸ್ವಾತಂತ್ರ್ಯದ ಪ್ರತಿಮೆಯ ಆರಂಭಿಕ ಮಾದರಿಗಳಲ್ಲಿ ಈ ಪ್ರತಿಮೆಗಳೂ ಸೇರಿವೆ.ಪ್ಯಾರಿಸ್‌ ನಗರದ ಪ್ಲೇಸ್‌ ಲೂಯಿಸ್‌ XV ಎಂಬಲ್ಲಿ ಗಿಲೊಟೀನ್‌ ಪಕ್ಕ ಅಶ್ವಾರೂಢ ಲೂಯಿಸ್‌ XVರ ಪ್ರತಿಮೆಯಿತ್ತು. ನಂತರ ಈ ಪ್ರತಿಮೆಯ ಸ್ಥಾನದಲ್ಲಿ ಫ್ರಿಜಿಯ ಟೋಪಿ (ತಲೆಯುಡುಗೆ) ಧರಿಸಿ ತನ್ನ ಬಲಗೈಯಲ್ಲಿ ಈಟಿ ಹಿಡಿದು ನಿಂತಿರುವ ಪ್ಲಾಸ್ಟರ್‌ ಕೃತಿಯನ್ನು ಸ್ಥಾಪಿಸಿ, ಆ ಸ್ಥಳವನ್ನು ಪ್ಲೇಸ್‌ ಡಿ ಲಾ ರೆವೊಲ್ಯೂಷನ್‌ ಎಂದು ಮರುನಾಮಕರಣ ಮಾಡಲಾಯಿತು. ಇದನ್ನು ನೋಡಿದ ಮ್ಯಾಮ್‌ ರೊಲೆಂಡ್‌ ಉದ್ಗರಿಸಿದ್ದು, 'ಓಹ್‌ ಲಿಬರ್ಟಿ, ನಿನ್ನ ಹೆಸರಿನಲ್ಲಿ ಏನೆಲ್ಲಾ ದುಷ್ಕೃತ್ಯವೆಸಗಲಾಗಿದೆ!'.

ಫ್ರಿಜಿಯನ್‌ ಟೋಪಿಕಿರೀಟ ಧರಿಸಿರುವ ಸಾಂಪ್ರದಾಯಿಕ ಸಂಕೇತದ ಪ್ರತಿಮೆಯು ಅಂದು ಮೂಲಭೂತವಾದದ ಕ್ರಾಂತಿಕಾರಿ ಚಳವಳಿಯ ಲಾಂಛನವಾಗಿತ್ತು. ಇದು ಬಿತ್ತರಿಸುವ ಅಭಿಪ್ರಾಯ-ಸಂದೇಶಗಳನ್ನು ಮರೆಮಾಚಲು, ಲಿಬರ್ಟಿ ಹೊಳಪಿನ ಕಿರೀಟ ಧರಿಸುವಂತೆ ಮಾಡಲು ನಿರ್ಧರಿಸಲಾಯಿತು. ಇದೇ ರೀತಿ, ಕ್ಯಾಪಿಟಲ್‌ನ ಸ್ವಾತಂತ್ರ್ಯ ಪ್ರತಿಮೆಯನ್ನು ಫ್ರಿಜಿಯನ್‌ ಟೋಪಿಯೊಂದಿಗೆ ವಿನ್ಯಾಸ ಮಾಡುವ ಯೋಜನೆಯನ್ನು ಥಾಮಸ್ ಕ್ರಾಫರ್ಡ್‌ ಕೈಬಿಡಬೇಕಾಯಿತು. ಏಕೆಂದರೆ, ಫ್ರಿಜಿಯನ್‌ ಟೋಪಿಯು ಗುಲಾಮಗಿರಿಯ ವಿರುದ್ಧದ ಹೋರಾಟದ ಸಂಕೇತವೆಂದು ಜನರು ಪರಿಗಣಿಸುವ ಸಾಧ್ಯತೆಯಿತ್ತು.

ಬಾರ್ತೊಲ್ಡಿ ಸ್ವಾತಂತ್ರ್ಯದ ಪ್ರತಿಮೆ ವಿನ್ಯಾಸಿಸುವ ಮೊದಲೇ ಲಿಬರ್ಟಿಗೆ ಪಂಜಿನ ಲಾಂಛನದ ಅವಿನಾಭಾವ ಸಂಬಂಧವಿತ್ತು. ಜುಲೈ ಕಾಲಮ್‌‌ನ ಮೇಲೆ ಆಗಸ್ಟಿನ್‌ ಡ್ಯುಮೊಂಟ್‌ನ ಜೀನಿಯಸ್‌ ಆಫ್‌ ಸ್ವಾತಂತ್ರ್ಯದ ಪ್ರತಿಮೆಯೂ ಸಹ ಬಲಗೈಯಲ್ಲಿ ಪಂಜನ್ನು ಹಿಡಿದಿತ್ತು. ಈ ಸ್ಮಾರಕ 1840ರಲ್ಲಿ ಉದ್ಘಾಟನೆಗೊಂಡಿತು. 1866ರಲ್ಲಿ ಜೀನ್‌-ಬ್ಯಾಪ್ಟಿಸ್ಟ್‌ ಕೊಪ್ಯೂ ತಮ್ಮ ಕೃತಿ ಇಂಪೀರಿಯಲ್‌ ಫ್ರಾನ್ಸ್‌ ಬ್ರಿಂಗಿಂಗ್‌ ಲೈಟ್‌ ಟು ದಿ ವರ್ಲ್ಡ್‌ ಅಂಡ್‌ ಪ್ರೊಟೆಕ್ಟಿಂಗ್‌ ಅಗ್ರಿಕಲ್ಚರ್‌ ಅಂಡ್‌ ಸಯನ್ಸ್‌ ನಲ್ಲಿ ಜಗತ್ತಿಗೆ ಬೆಳಕನ್ನು ಕೊಂಡೊಯ್ಯುವ ಕಲ್ಪನೆಯನ್ನು ಪ್ರಸ್ತಾಪಿಸಿದರು. ಆದರೆ, ಹಿಲ್ ಆಫ್‌ ಚಾಯ್ಲಾಟ್‌ ಮೇಲೆ ಇಂಟೆಲಿಜೆಂಟ್‌ ಫ್ರಾನ್ಸ್‌ ಎನ್ಲೈಟೆನಿಂಗ್‌ ದಿ ವರ್ಲ್ಡ್‌ ಎಂಬ ಕಾಲೊಸಸ್‌ ನಿರ್ಮಿಸಲು ಹೆಕ್ಟರ್ ಹೊರೂ 1868ರಲ್ಲಿ ಮಾಡಿದ ಪ್ರಸ್ತಾಪವು ಕಾರ್ಯಗತವಾಗದೇ ಹೋಯಿತು.

ಭೌತಿಕ ಲಕ್ಷಣಗಳು

11 ಸೆಪ್ಟೆಂಬರ್‌ 2001 ರಿಂದ 4 ಜುಲೈ 2009ರ ಅವಧಿಯನ್ನು ಹೊರತುಪಡಿಸಿ ಉಳಿದ ಅವಧಿಗಳಲ್ಲಿ ಪ್ರತಿಮೆಯ ಒಳಭಾಗವು, ಸಾರ್ವಜನಿಕರ ಸಂದರ್ಶನಕ್ಕೆ ಮುಕ್ತವಾಗಿರುತ್ತದೆ. ಸಾರ್ವಜನಿಕರು ಕ್ರೌನ್‌ ಟಿಕೆಟ್‌ಗಳನ್ನು ಮುಂಗಡವಾಗಿಯೇ ಕೊಂಡುಕೊಳ್ಳಬೇಕು. ಸಾರ್ವಜನಿಕರು ದೋಣಿಯ ಮೂಲಕ ಬಂದಿಳಿದ ನಂತರ, ಮಾಹಿತಿ ಕೇಂದ್ರದಲ್ಲಿ ತಮ್ಮ ಮಾಹಿತಿ ನೋಂದಾಯಿಸಿಕೊಳ್ಳಬೇಕು. ನಂತರ ಪ್ರತಿಮೆಯ ತಳಪಾಯದೆಡೆಗೆ ಹೋಗಿ ಅಲ್ಲಿಂದ ಮೇಲೆ ಹತ್ತಿ ಸ್ಮಾರಕಕ್ಕೆ ಹೋಗಬಹುದು. ಮೇಲ್ಭಾಗದ ತುದಿಗೆ ಹತ್ತಿ ಹೋಗಲು ಡಬಲ್‌-ಹೀಲಿಕ್ಸ್‌ ಮೆಟ್ಟಿಲುಗಳ ಸಾಲು ಇದೆ. ಇಲ್ಲಿ 146 ಮೆಟ್ಟಿಲುಗಳಿವೆ. ತಾಮ್ರದ ಪ್ರತಿಮೆಯೊಳಗೆ, ಹೊರಗಡೆಗಿಂತಲೂ ಸುಮಾರು 15ರಿಂದ 20 ಡಿಗ್ರಿ (F)ರಷ್ಟು ಬೆಚ್ಚಗಿನ ವಾತಾವರಣ ಕಾಣಬರುತ್ತದೆ. NPS ಏಕಕಾಲಕ್ಕೆ 10 ಜನರನ್ನು, ಪ್ರತಿ ಗಂಟೆಗೆ ಮೂರು ಗುಂಪುಗಳಂತೆ ಕಿರೀಟದೊಳಗೆ ಪ್ರವೇಶಿಸಲು ಅವಕಾಶ ನೀಡುತ್ತದೆ. 25 ಕಿಟಕಿಗಳ ಮೂಲಕ (ಅತಿ ದೊಡ್ಡ ಕಿಟಕಿ ಸುಮಾರು 18" (46 ಸೆ.ಮೀ.) ಎತ್ತರವಿದೆ) ಇದು ನ್ಯೂಯಾರ್ಕ್‌ ಬಂದರಿನ ನೋಟದಿಂದ ಕಣ್ಮನ ತಣಿಸುತ್ತದೆ. ಪ್ರತಿಮೆಯು ಬ್ರೂಕ್ಲಿನ್‌ನತ್ತ ಮುಖ ಮಾಡಿದೆ. ಮ್ಯಾನ್‌ಹ್ಯಾಟನ್‌ನ ಬಾನಗೆರೆ ದೃಶ್ಯ ಅಷ್ಟಾಗಿ ಗೋಚರಿಸುವದಿಲ್ಲ. ಆದರೆ ಕಿರೀಟದ ಎಡಭಾಗದಲ್ಲಿರುವ ಅತಿ ಸಣ್ಣ ಕಿಟಕಿಗಳ ಮೂಲಕ ಇದನ್ನು ಸೂಕ್ಷ್ಮವಾಗಿ ಗಮನಿಸಬಹುದು. ದೋಣಿಗಳು ಮತ್ತು ದೋಣಿ ಪ್ರಯಾಣದ ಟಿಕೆಟ್‌ಗಳನ್ನು ಪಡೆವ ಸಮಯ ಹೊರತುಪಡಿಸಿ, ಸಂದರ್ಶಕರು ಮೂರುಗಂಟೆಗೂ ಅಧಿಕ ಕಾಲ ಹೊರಭಾಗದಲ್ಲಿ ಕಾಯಬೇಕಾದ ಸಂದರ್ಭ ಒದಗಬಹುದು.

ಸ್ವಾಭಾವಿಕವಾದ ರಾಸಾಯನಿಕ ಆಮ್ಲದ ಪ್ರಕ್ರಿಯೆಯು ತಾಮ್ರದ ಲವಣಗಳ ಬಿಡುಗಡೆಗೊಳಿಸಿ ಕಿಲುಬಿನ ಹಸಿರು ಬಣ್ಣಕ್ಕೆ ಕಾರಣವಾಗುತ್ತದೆ. ಇದು ನೇರಳೆ-ಹಸಿರು ಕಿಟ್ಟದ ಬಣ್ಣದ್ದಾಗಿರುತ್ತದೆ.

ಪ್ರತಿಮೆಯ ಪದತಲದ ನಿರ್ಮಾಣದಲ್ಲಿ ಬಳಸಲಾದ ಮರಳುಗಲ್ಲನ್ನು ನೈಋತ್ಯ ಸ್ಕಾಟ್ಲೆಂಡ್‌ನ ಡಂಫ್ರೀಸ್‌ ಗಡಿಯಲ್ಲಿರುವ ಲೊಕರ್‌ಬ್ರಿಗ್ಸ್‌ ಕಲ್ಲುಗಣಿಯಿಂದ ತರಲಾಯಿತು.

ಪ್ರತಿಮೆ ಮತ್ತು ಅದರ ವೇದಿಕೆಯ ಪೀಠದೊಳಗೆ 354 ಮೆಟ್ಟಿಲುಗಳಿವೆ. ಪ್ರತಿಮೆಯ ಕಿರೀಟದಲ್ಲಿರುವ ಏಳು ಮೊನಚುಗಳ ಕೆಳಭಾಗ ರತ್ನಖಚಿತವಿದೆ; ಇದರ ಜೊತೆಗೆ 25 ಕಿಟಕಿಗಳಿವೆ. ಪ್ರತಿಮೆಯ ಎಡಗೈಯಲ್ಲಿರುವ ಶಿಲಾ ಬಿಲ್ಲೆಯು ರೋಮನ್‌ ಅಂಕಿಗಳಲ್ಲಿ ಜುಲೈ 4, 1776 ಎಂದು ಕೆತ್ತನೆಯನ್ನು ತೋರಿಸುತ್ತದೆ. ಈ ದಿನವೇ ಅಮೆರಿಕಾ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯ ಅಂಗೀಕಾರವೆನಿಸಿದೆ. ಎಂತಹ ಬಿರುಗಾಳಿಗೂ ಜಗ್ಗದೇ ಅಲುಗಾಡದಂತೆ ಪ್ರತಿಮೆಯನ್ನು ವಿನ್ಯಾಸಗೊಳಿಸಲಾಗಿದೆ. ಜೋರಾದ ಗಾಳಿ Шаблон:Convert ಬೀಸಿದಾಗ ಪ್ರತಿಮೆ Шаблон:Convert ಮತ್ತು ಅದರ ಕೈಯಲ್ಲಿರುವ ಪಂಜು ಅತ್ಯಲ್ಪ ಓಲಾಡುತ್ತದೆ Шаблон:Convert. ಇದರಿಂದ ಪ್ರತಿಮೆ ಮುರಿದುಬೀಳುವ ಸಂಭವನೀಯತೆ ಕಡಿಮೆ ಅದರಿಂದಾಗಿ ಸ್ವಲ್ಪ ಮಟ್ಟಿಗೆ ಓಲಾಡವ ಮಟ್ಟದಲ್ಲಿರುತ್ತದೆ.

ತಳದಿಂದ ಪಂಜಿನವರೆಗೆ ಎತ್ತರ 151 ಅಡಿ 1 ಅಂಗುಲ 46 ಮೀ.
ಪೀಠದ ಅಡಿಪಾಯ ನೆಲಮಟ್ಟದಿಂದ ಪಂಜಿನ ತುದಿಯ ವರೆಗೆ 305 ಅಡಿ 1 ಅಂಗುಲ 93 ಮೀ.
ಪ್ರತಿಮೆಯ ಹಿಮ್ಮಡಿಯಿಂದ ಶಿರೊಭಾಗದ ನೆತ್ತಿಯವರೆಗೆ 111 ಅಡಿ 1 ಅಂಗುಲ 34 ಮೀ.
ತೋಳುಗಳು 16 ಅಡಿ 5 ಅಂಗುಲ 5 ಮೀ.
ತೋರ್ಬೆರಳು 8 ಅಡಿ 1 ಅಂಗುಲ 2.44 ಮೀ.
ಎರಡನೆಯ ಕೀಲಿನಲ್ಲಿ ಪರಿಧಿ 3 ಅಡಿ 6 ಅಂಗುಲ 1.07 ಮೀ.
ತಲೆಯ ಗಾತ್ರ - ಕೆನ್ನೆಭಾಗದಿಂದ ತಲೆಬುರುಡೆಯ ವರೆಗೆ 17 ಅಡಿ 3 ಅಂಗುಲ 5.26 ಮೀ.
ತಲೆಯ ದಪ್ಪ (ಕಿವಿಯಿಂದ ಕಿವಿಯ ವರೆಗೆ 10 ಅಡಿ 0 ಅಂಗುಲ 3.05 ಮೀ.
ಕಣ್ಣುಗಳ ನಡುವಿನ ಅಂತರ 2 ಅಡಿ 6 ಅಂಗುಲ 0.76 ಮೀ.
ಮೂಗು 4 ಅಡಿ 6 ಅಂಗುಲ 1.48 ಮೀ.
ಬಲಗೈಯು 42 ಅಡಿ 0 ಅಂಗುಲ 12.8 ಮೀ.
ಬಲಗೈ ಹೆಚ್ಚು ದಪ್ಪ ಅಂದರೆ 12 ಅಡಿ 0 ಅಂಗುಲ 3.66 ಮೀ.
ಸೊಂಟ 35 ಅಡಿ 0 ಅಂಗುಲ 10.67 ಮೀ.
ಬಾಯಿಯ ವಿಶಾಲತೆ 3 ಅಡಿ 0 ಅಂಗುಲ 0.91 ಮೀ.
ಫಲಕ 23 ಅಡಿ 7 ಅಂಗುಲ 7.19 ಮೀ.
ಫಲಕದ ಅಗಲ 13 ಅಡಿ 7 ಅಂಗುಲ 4.14 ಮೀ.
ಫಲಕದ ದಪ್ಪ 2 ಅಡಿ 0 ಅಂಗುಲ 0.61 ಮೀ.
ಶಿಲಾ ಪೀಠದ ಎತ್ತರ 89 ಅಡಿ 0 ಅಂಗುಲ 27.13 ಮೀ.
ಅಡಿಪಾಯದ ಎತ್ತರ 65 ಅಡಿ 0 ಅಂಗುಲ 19.81 ಮೀ.
ಪ್ರತಿಮೆಯಲ್ಲಿ ಬಳಸಲಾದ ತಾಮ್ರದ ಪ್ರಮಾಣ 60,000 ಪೌಂಡ್‌ಗಳು 27.22 ಮೆಟ್ರಿಕ್‌ ಟನ್‌ಗಳು
ಪ್ರತಿಮೆಯಲ್ಲಿ ಬಳಸಲಾದ ಉಕ್ಕಿನಪ್ರಮಾಣ 250,000 ಪೌಂಡ್‌ಗಳು 113.4 ಮೆಟ್ರಿಕ್‌ ಟನ್‌ಗಳು
ಪ್ರತಿಮೆಯಲ್ಲಿ ಬಳಸಲಾದ ಲೋಹಗಳ ಒಟ್ಟು ತೂಕ 450,000 ಪೌಂಡ್‌ಗಳು 204.1 ಮೆಟ್ರಿಕ್‌ ಟನ್‌ಗಳು
ತಾಮ್ರದ ಹಾಳೆಯ ದಪ್ಪ ಒಟ್ಟಾರೆಯ 3/32ನೆಯ ಭಾಗ 2.4 ಮಿಮೀ.

ಮೇಲ್ಭಾಗ ಭಾರವಾಗಿರುವಂತೆ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಏಕೆಂದರೆ ನೆಲಮಟ್ಟದಿಂದ ಪ್ರತಿಮೆಯ ಗೋಚರತೆ ದೃಶ್ಯ ಸಮಾನಾಗಿ ಕಂಡುಬರಲೆಂದು ಈ ರೀತಿ ಮಾಡಲಾಗಿದೆ. 1800ರ ದಶಕದಲ್ಲಿ ಪ್ರತಿಮೆ ವಿನ್ಯಾಸಗೊಂಡಾಗ (ವಿಮಾನ ಸಂಶೋಧನೆಗೂ ಮುಂಚೆ) ಪ್ರತಿಮೆಯತ್ತ ದೃಷ್ಟಿ ಹಾಯಿಸಲು ಇತರೆ ಕೆಲವೇ ಕೋನಮಾಪಕಗಳಿದ್ದವು. ಘೋಸ್ಟ್‌ಬಸ್ಟರ್ಸ್‌ II ಎಂಬ ಚಲನಚಿತ್ರ ನಿರ್ಮಾಣದ ಸಮಯದಲ್ಲಿ ವಿಶೇಷ ಪರಿಣಾಮಗಳನ್ನು, ಸ್ಪೆಷಲ್ ಎಫೆಕ್ಟ್ಸ್‌ ಅಳವಡಿಸುವ ತಂತ್ರಜ್ಞರಿಗೆ ಇದು ಸವಾಲೊಡ್ಡಿತು.

ತಾಮ್ರದ ಮೂಲ

ಸ್ವಾತಂತ್ರ್ಯದ ಪ್ರತಿಮೆಯಲ್ಲಿ ಬಳಸಲಾದ ತಾಮ್ರದ ಮೂಲವನ್ನು ಯಾವುದೇ ಐತಿಹಾಸಿಕ ದಾಖಲೆಗಳು ಸ್ಫಷ್ಟಪಡಿಸಿಲ್ಲ. ಫ್ರೆಂಚ್‌-ಸ್ವಾಮ್ಯದ ವಿಸ್ನೆಸ್‌ ಗಣಿಯಿಂದ ತಾಮ್ರವನ್ನು ಪಡೆಯಲಾಯಿತೆಂದು ನಾರ್ವೇ ದೇಶದ ಕಾರ್ಮೊಯ್‌ ಪುರಸಭೆಯಲ್ಲಿನ ಸಾಂಪ್ರದಾಯಿಕ ವಿಸ್ನೆಸ್‌ ನಲ್ಲಿ ಹೇಳಲಾಗಿದೆ. ಫ್ರಾನ್ಸ್‌ ಮತ್ತು ಬೆಲ್ಜಿಯಮ್‌ ದೇಶಗಳಲ್ಲಿ ಪರಿಶುದ್ಧಗೊಳಿಸಲಾದ ಇಲ್ಲಿನ ಗಣಿಯ ಅದಿರು, ಹತ್ತೊಂಬತನೆಯ ಶತಮಾನದಲ್ಲಿ ಯುರೋಪ್ಯ ಭಾಗದಲ್ಲಿ ವಿಫುಲ ತಾಮ್ರಕ್ಕೆ ಮೂಲವಾಯಿತು. 1985ರಲ್ಲಿ ಬೆಲ್‌ ಲ್ಯಾಬ್ಸ್‌ ಪ್ರಯೋಗಾಲಯವು ಹೊಗೆಯುಗುಳುವ ಪರೀಕ್ಷಾ ತಂತ್ರ (ಎಮಿಷನ್‌ ಸ್ಪೆಕ್ಟ್ರೊಗ್ರಫಿ) ಬಳಸಿತು. ಸ್ವಾತಂತ್ರ್ಯದ ಪ್ರತಿಮೆಯಲ್ಲಿರುವ ತಾಮ್ರದ ನಮೂನೆ ಮತ್ತು ವಿಸ್ನೆಸ್‌ ಗಣಿಯ ತಾಮ್ರವನ್ನು ಹೋಲಿಕೆ ಮಾಡಿತು. ಇದರಂತೆ ಎರಡೂ ನಮೂನೆಗಳಲ್ಲಿ ಕಚ್ಚಾ ಅದಿರಿನ ಪ್ರಮಾಣವು ಒಂದೇ ತೆರನಾಗಿತ್ತು. ಆದ್ದರಿಂದ, ಸ್ವಾತಂತ್ರ್ಯದ ಪ್ರತಿಮೆಯಲ್ಲಿ ಬಳಸಿದ ತಾಮ್ರದ ಮೂಲ ನಾರ್ವೇ ಎಂದು ನಿರ್ಣಯಿಸಲಾಯಿತು. ಯೆಕಾಟೆರಿನ್ಬರ್ಗ್‌ ಅಥವಾ ನಿಝ್ನಿ ಟಗಿಲ್‌ನಲ್ಲಿ ಗಣಿಯಿಂದ ತಾಮ್ರದ ಅದಿರನ್ನು ತರಲಾಗಿತ್ತು ಎಂದು ಇತರೆ ಮೂಲಗಳು ತಿಳಿಸಿವೆ. ಗ್ಯಾಗಟ್‌-ಗೌತಿಯರ್‌ ಸಂಸ್ಥೆಯ ಕಾರ್ಯಾಗಾರದಲ್ಲಿ ತಾಮ್ರದ ತಗಡುಗಳನ್ನು ಸೃಷ್ಟಿಸಿ, ಪ್ಯಾರಿಸ್‌ ನಗರದ ಪಶ್ಚಿಮ ಭಾಗದ ಅಟೆಲಿಯರಸ್‌ ಮೆಸುರೊನಲ್ಲಿ ಅದಕ್ಕೆ ಆಕಾರ ನೀಡಲಾಯಿತು. ಪಿಯರ್‌-ಯೂಜೆನ್‌ ಸಿಕ್ರೆಟಾನ್‌ ತಾಮ್ರ ಖರೀದಿಗಾಗಿ ಧನಸಹಾಯ ಒದಗಿಸಿತು.

ಲಿಬರ್ಟಿಯ ಶತಮಾನೋತ್ಸವ

Шаблон:See also

'ಕಾಜ್‌ ಮಾರ್ಕೆಟಿಂಗ್‌'ಪ್ರಚಾರ ಆಂದೋಲನದ ಅಭಿಯಾನದ ಮೊದಲ ಫಲಾನುಭವಿಗಳಲ್ಲಿ ಸ್ವಾತಂತ್ರ್ಯದ ಪ್ರತಿಮೆಯೂ ಒಂದು. 1983ರಲ್ಲಿ ಪ್ರಕಟವಾದ ಜಾಹೀರಾತಿನಲ್ಲಿ, 'ಅಮೆರಿಕನ್‌ ಎಕ್ಸ್‌ಪ್ರೆಸ್‌ ಕಾರ್ಡ್‌ನೊಂದಿಗೆ ಮಾಡುವ ಪ್ರತಿಯೊಂದು ಖರೀದಿಗೂ, ಪ್ರತಿಮೆಯ ನವೀಕರಣಕ್ಕೆ ಒಂದು ಪೆನ್ನಿ ಸಹಾಯಧನ ನೀಡಲು' ಅಮೆರಿಕನ್‌ ಎಕ್ಸ್‌ಪ್ರೆಸ್‌ ತಿಳಿಸಿತ್ತು. ಸ್ವಾತಂತ್ರ್ಯದ ಪ್ರತಿಮೆಯ ನವೀಕರಣಾ ಯೋಜನೆಗಾಗಿ ಈ ಅಭಿಯಾನವು $1.7 ದಶಲಕ್ಷದಷ್ಟು ಮೊತ್ತ ಸಂಗ್ರಹಿಸಿತು. ಶತಮಾನೋತ್ಸವಕ್ಕಾಗಿ $62 ದಶಲಕ್ಷ ಮೊತ್ತವನ್ನೊಳಗೊಂಡ ಪ್ರತಿಮೆಯ ನವೀಕರಣಾ ಕಾರ್ಯಕ್ಕಾಗಿ, 1984ರಲ್ಲಿ ಪ್ರತಿಮೆಯನ್ನು ಪರದೆಯಿಂದ ಮುಚ್ಚಲಾಯಿತು. ಅಂದಿನ ರಾಷ್ಟ್ರಾಧ್ಯಕ್ಷ ರೊನಾಲ್ಡ್‌ ರೀಗನ್‌, ಈ ಯೋಜನೆಯ ಉಸ್ತುವಾರಿ ಮತ್ತು ಮೇಲ್ವಿಚಾರಣಾ ಆಯೋಗದ ಅಧ್ಯಕ್ಷ ಹುದ್ದೆಗೆ, ಕ್ರಿಸ್ಲರ್‌ ವಾಹನ ಸಂಸ್ಥೆಯ ಅಧ್ಯಕ್ಷ ಲೀ ಇಯಾಕೊಕಾರನ್ನು ನೇಮಿಸಿದರು. (ಆದರೆ, ಆನಂತರ, ಸ್ವಹಿತಾಸಕ್ತಿಯ ಘರ್ಷಣೆ ತಡೆಗಟ್ಟಲು ಅ??

ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
May ♍
29 September 2016
Lady Liberty, you have seen her in many pictures but, up close and personal is different and better. Get a ticket to climb right up to the Crown, 377 steps but, oh man does the view look spectacular!
Matthew Ferguson
20 November 2016
This place is awesome. Great up close views of the statue and and panorama views of Manhattan. Make sure to get tickets to the pedestal or crown in advance of your trip.
Lufthansa
21 March 2014
Did you know? In 1885, the dismantled Statue of Liberty arrived in New York Harbor after being shipped across the Atlantic in 350 individual pieces packed in more than 200 cases!
James Panther
18 April 2016
A must see for anyone visiting New York City. Make sure you book early and get the crown access pass so you can climb to the top.
Augustus Collection
23 February 2014
This colossal statue sits in the middle of the harbour. Originally gifted by the French, the Statue of Liberty is today a symbol of the strength of America and our open arms towards immigrants.
Vasilis
21 April 2013
you should definitely take the boat and have this one hour tour. see manhattan, Statue of Liberty, Manhattan and Brooklyn bridge. tip: pick the right side of the boat (starboard) for better view!
ಸ್ಥಳ
ನಕ್ಷೆ
ವಿಳಾಸ

1 Liberty Island - Ellis Island, New York, NY 10004, USA

ನಿರ್ದೇಶನಗಳನ್ನು ಪಡೆ
ತೆರೆದ ಸಮಯ
Mon-Sun 8:30 AM–4:00 PM
ಸಂಪರ್ಕಿಸಿ
ಉಲ್ಲೇಖಗಳು

Statue of Liberty ನಲ್ಲಿ Foursquare

ಸ್ವಾತಂತ್ರ್ಯದ ಪ್ರತಿಮೆ ನಲ್ಲಿ Facebook

Lenox Ave Unit 1 by Luxury Living Suites

starting $397

Upper West Brownstone Unit 1 by Luxury Living Suites

starting $345

Lenox Ave Unit 2 by Luxury Living Suites

starting $0

Lenox Unit 3 by Luxury Living Suites

starting $0

Lenox Ave Unit 4 by Luxury Living Suites

starting $371

Lenox Ave Garden Unit by Luxury Living Suites

starting $345

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Liberation (Holocaust memorial)

Liberation is a bronze Holocaust memorial created by the sculptor

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Ellis Island

Ellis Island, at the mouth of the Hudson River in New York Harbor, is

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Castle Williams

Castle Williams is a circular fortification of red sandstone on the

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Fort Jay

Fort Jay is a harbor fortification and the name of the former Army

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Battery Park

Battery Park is a Шаблон:Convert public park located at the south

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Staten Island Ferry Whitehall Terminal

The Whitehall Terminal is a ferry terminal in South Ferry section of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Charging Bull

Charging Bull, which is sometimes referred to as the Wall Street Bull

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Trinity Church (New York City)

Trinity Church (also known as Trinity Wall Street) at 79 Broadway,

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Hiroshima Peace Memorial

Hiroshima Peace Memorial, commonly called the Atomic Bomb Dome or

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Kata Tjuta

Kata Tjuta, sometimes written Kata Tjuta (Kata Joota), and also known

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Caernarfon Castle

Caernarfon Castle (Cymraeg. Castell Caernarfon) was constructed at

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Madara Rider

The Madara Rider or Madara Horseman (български. Мадарски

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Leshan Giant Buddha

The Leshan Giant Buddha (=乐山大佛, =樂山大佛, Lèshān Dàfó) was built d

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ