ಬೆಥ್‌ಲೆಹೆಮ್

ಬೆಥ್‌ಲೆಹೆಮ್ (ಅರೇಬಿಕ್: بَيْتِ لَحْمٍ,  Bayt Laḥm (·info), ನ್ನು ಲಿಟ್ "ಹೌಸ್ ಆಫ್ ಮೀಟ್ "; ಹೀಬ್ರೂ:בֵּית לֶחֶם, ಬಿಯಟ್ ಲೆಹೆಮ್ ,ಅಥವಾ ಲಿಟ್ "ಹೌಸ್ ಆಫ್ ಬ್ರೆಡ್;" Greek: Βηθλεέμ ಎನ್ನಲಾಗುತ್ತದೆ.| ಬೆಥ್‌ಲೆಹೆಮ್ ) ಒಂದು ೧೦ kilometers (೬ mi)ಪ್ಯಾಲೇಸ್ಟಿನಿಯನ್ನ ಮಧ್ಯದ ಪಶ್ಚಿಮ ದಂಡೆಯಲ್ಲಿರುವ ದಕ್ಷಿಣ ಜೆರುಸಲೆಮ್ ನ ಒಂದು ನಗರವಾಗಿದೆ.ಇದರ ಒಟ್ಟು ಅಂದಾಜು ಜನಸಂಖ್ಯೆಯು 30,000 ರಷ್ಟಿದೆ. ಇದು ಪ್ಯಾಲೇಸ್ಟಿನಿಯನ್ ನ್ಯಾಶನಲ್ ಆಥಾರಿಟಿಯ ಬೆಥ್ ಲೆಹಮ್ ಗವರ್ನೇಟ್ ಗೆ ರಾಜಧಾನಿಯಾಗಿದ್ದು ಅಲ್ಲದೇ ಪ್ಯಾಲೇಸ್ಟೇನಿಯನ್ ಸಂಸ್ಕೃತಿ ಮತ್ತು ಪ್ರವಾಸೋದ್ಯಮಕ್ಕೆ ಕೇಂದ್ರ ತಾಣವಾಗಿದೆ. ದಿ ಹೀಬ್ರೂ ಬೈಬಲ್ ಪ್ರಕಾರ ಬೆಥ್‌ಲೆಹೆಮ್‌‌‌ ಅನ್ನು ಡೇವಿಡ್ ಎಂಬಾತ ಆಳುತ್ತಿದ್ದನಲ್ಲದೇ ಅದೇ ಸಂದರ್ಭದಲ್ಲಿ ಆತನಿಗೆ ಕಿಂಗ್ ಆಫ್ ಇಸ್ರೇಲ್ ಎಂಬ ಕಿರೀಟವನ್ನು ಇದೇ ಸ್ಥಳದಲ್ಲಿ ತೊಡಿಸಲಾಗಿತ್ತು. ನೂತನ ಉಯಿಲ್ ನಲ್ಲಿ ಮ್ಯಾಥಿವ್ ಮತ್ತು ಲ್ಯುಕ್ ಅವರ ಶುಭವಾರ್ತೆಗಳ ವಿವರದ ಪ್ರಕಾರ ಬೆಥ್ ಲೆಹೆಮ್ ನ್ನು ಅವರು ನಾಜರೆಥ್ ನ ಜೀಸಸ್ ಜನ್ಮಸ್ಥಳವೆಂದು ಉಲ್ಲೇಖಿಸಿದ್ದಾರೆ. ಅತ್ಯಂತ ಹಳೆಯದಾದ ಕ್ರಿಶ್ಚಿಯನ್ ಸಮಾಜದ ಜನಸಮುದಾಯವನ್ನು ಹೊಂದಿದ ವಿಶ್ವದ ಏಕೈಕ ಪಟ್ಟಣವೆನಿಸಿದೆ. ವಲಸೆಯಿಂದಾಗಿ ಜನಸಂಖ್ಯೆ ಕಡಿಮೆಯಾದರೂ ಅದರ ಜನಪ್ರಿಯತೆ ಕಡಿಮೆಯಾಗಿಲ್ಲ.

ಆದರೆ ಆ ನಗರದ ಧಾರ್ಮಿಕ ಜನತೆ ಅಲ್ಲಿ ಕ್ರಿ.ಶ 529 ರಲ್ಲಿ ಬೀಡು ಬಿಡಲು ಯತ್ನಿಸಿತು.ಅವರ ಕ್ರಾಂತಿಯು ಅವರನ್ನು ಹೊರಹಾಕಿದರೂ ಬೈಜೆಂಟೈನ್ ಚಕ್ರವರ್ತಿ ಜಸ್ಟಿನಿನ್ I ಇದನ್ನು ಮರುನಿರ್ಮಿಸಿದರು.ನಂತರ ಬೆಥ್ ಲೆಹೆಮ್ ಅರಬ್ ಕ್ಯಾಲಿಫೇಟ್ ನ 'ಉಮರ್ ಇಬಿನ್ ಅಲ್ -ಖತ್ತಬ್ 632 ರಲ್ಲಿ ಗೆದ್ದುಕೊಂಡು ಆಡಳಿತ ನಡೆಸಿದ್ದ.ಇಲ್ಲಿನ ಎಲ್ಲಾ ದೇವಸ್ಥಾನಗಳ ರಕ್ಷಣೆಗೆ ಆತ ರಕ್ಷಣೆ ಒದಗಿಸಿದ್ದ. ಆಗ 1099 ರಲ್ಲಿ ಬೆಥ್‌‌ಲೆಹೆಮ್ ನ್ನು ಬಂಡಾಯಗಾರರು ವಶಪಡಿಸಿಕೊಂಡರು.ಅಲ್ಲಿ ಇದ್ದ ಗ್ರೀಕ್ ಸಂಪ್ರದಾಯ ಆಡಳಿತವನ್ನು ಲ್ಯಾಟಿನ್ ಆಡಳಿತದಡಿ ತಂದರು. ಈ ಸಂದರ್ಭದಲ್ಲಿ ಲ್ಯಾಟಿನ್ ಧಾರ್ಮಿಕ ಗುರುವನ್ನು ಈಜಿಪ್ತ್ ಮತ್ತು ಸಿರಿಯಾದ ಸುಲ್ತಾನ ಸಲಾದ್ದಿನ್ ಈ ನಗರವನ್ನು ವಶಪಡಿಸಿಕೊಂಡ ನಂತರ ಆತನನ್ನು ಉಚ್ಚಾಟಿಸಿದ. ಸುಮಾರು 1250 ರಲ್ಲಿ ಮಾಮ್ಲುಕ್ಸ್ ಅವರ ಆಗಮನದ ನಂತರ ನಗರದ ಗೋಡೆಗಳನ್ನು ನೆಲಕ್ಕುರುಳಿಸಲಾಯಿತು.ನಂತರ ಒಟ್ಟೊಮನ್ ಸಾಮ್ರಾಜ್ಯದಲ್ಲಿ ಮರುನಿರ್ಮಿಸಲಾಯಿತು.

ಬ್ರಿಟಿಷರು ವಿಶ್ವಯುದ್ದI ರ ಸಂದರ್ಭದಲ್ಲಿ ಒಟ್ಟೊಮನ್ಸ್ ರಿಂದ ಈ ನಗರವನ್ನು ತಮ್ಮ ವಶಕ್ಕೆ ಪಡೆದರು.ಇದನ್ನು 1947 ರ ಯುನೈಟೆಡ್ ನೇಶನ್ಸ್ ಪಾರ್ಟಿಶನ್ ಪ್ಲಾನ್ ಫಾರ್ ಪ್ಯಾಲೆಸ್ಟೈನ್ ನಿಯಮದ ಮೂಲಕ ಅಂತಾರಾಷ್ಟ್ರೀಯ ವಲಯದಲ್ಲಿ ಸೇರಿಸಲಾಯಿತು. ಅದೇ 1948ರ ಅರಬ್ -ಇಸ್ರೇಲಿ ಯುದ್ದದಲ್ಲಿ ಜೊರ್ಡಾನ್ ಈ ನಗರವನ್ನು ತನ್ನ ವಶಕ್ಕೆ ತಂದುಕೊಂಡಿತು. ನಂತರ 1967 ರಲ್ಲಿನ ಆರು ದಿನಗಳ ಯುದ್ದದಲ್ಲಿ ಇಸ್ರೇಲ್ ಇದನ್ನು ಆಕ್ರಮಿಸಿಕೊಂಡಿತು. ಸದ್ಯ ಬೆಥ್ ಲೆಹೆಮ್ 1995 ರಿಂದಲೂ ಪ್ಯಾಲೇಸ್ಟಿನಿಯನ್ ನ್ಯಾಷನಲ್‌‌ ಅಥಾರಿಟಿಯಿಂದ ಆಡಳಿತಕ್ಕೆ ಒಳಪಟ್ಟಿದೆ.

ಬೆಥ್ ಲೆಹೆಮ್ ನಲ್ಲಿ ಮುಸ್ಲಿಮ್ ರು ಬಹುಸಂಖ್ಯಾತರಿದ್ದರೂ ಪ್ಯಾಲೆಸ್ಟಿನಿಯನ್ ನ ಹೆಚ್ಚು ಕ್ರಿಶ್ಚನ್ನರಿಗೆ ಇದು ಆಶ್ರಯ ತಾಣವಾಗಿದೆ. ಬೆಥ್ ಲೆಹೆಮ್ ನ ಒಟ್ಟು ಸಂಘಟಣೆಯು ಬಿಯತ್ ಜಾಲಾ ಮತ್ತು ಬಿಯತ್ ಸಾಹೌರ್ ನಗರಗಳನ್ನಲ್ಲದೇ ಐದಾ ಮತ್ತು ಅಜ್ಜಾ ನಿರಾಶ್ರಿತರ ಶಿಬಿರಗಳು ಇತ್ಯಾದಿಗಳನ್ನು ಒಳಗೊಂಡಿದೆ. ಬೆಥ್ ಲೆಹೆಮ್ ನ ಪ್ರಮುಖ ಆರ್ಥಿಕ ವಲಯದ ಮೂಲವೆಂದರೆ ಪ್ರವಾಸೋದ್ಯಮ,ಇದು ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್ ಆಫ್ ದಿ ನೇಟಿವಿಟಿಗೆ ಮುಗಿಬೀಳುವ ಉನ್ನತ ಪ್ರಮಾಣದಲ್ಲಿ ಬರುವ ಕ್ರಿಸ್ಚಿಯನ್ ಯಾತ್ರಿಗಳ ಭೇಟಿಯನ್ನು ಅವಲಂಬಿಸಿದೆ. ಬೆಥ್ ಲೆಹೆಮ್ ನಲ್ಲಿ ಸುಮಾರು ಮೂವತ್ತು ಹೊಟೇಲುಗಳಿವೆ.ಅಲ್ಲದೇ ಮುನ್ನೂರು ಕರಕುಶಲ ಕಾರ್ಯಾಗಾರದ ಅಂಗಡಿ- ಮುಂಗಟ್ಟುಗಳಿವೆ. ಜಿವಿಶ್ ಧರ್ಮೀಯರ ರಾಚೆಲ್ಸ್ ಟೊಂಬ್ ಅತ್ಯಂತ ಪವಿತ್ರ ಸ್ಥಳವು ಬೆಥ್ ಲೆಹೆಮ್ ನ ಪ್ರವೇಶ ದ್ವಾರದಲ್ಲಿದೆ.

ಇತಿಹಾಸ

ಈ ನಗರಕ್ಕೆ ಅತ್ಯುತ್ತಮ ಐತಿಹಾಸಿಕ ದಾಖಲೆಯ ಉಲ್ಲೇಖವು ಅಮರ್ನಾ ಲೆಟರ್ಸ್ ನಲ್ಲಿ ದೊರೆತಿದೆ.(c. 1400 BC)ಯಾವಾಗ ಜೆರುಸಲೇಮ್ ನ ರಾಜ ತನ್ನ ದೊರೆ ಈಜಿಪ್ತ್ ದೊರೆಗೆ ಅಪಿರುಗಳ ಒತ್ತಾಯದ ಪ್ರವ್ಸಿಶವನ್ನು ತಪ್ಪಿಸುವಂತೆ ಮನವಿ ಮಾಡಿದ್ದ.ಆಗ "ಬಿತೆಲಹಮಿ "ಯನ್ನು ಮರುಪಡೆಯುವ ಯತ್ನದ ಬಗ್ಗೆ ತಿಳಿಸಿದ್ದ. ಅಲ್ಲಿ ಜಿವ್ಸ್ ಮತ್ತು ಅರಬ್ ರು ಬರುವ ಮುಂಚೆ ಅದರ ಹೆಸರು ಆಧುನಿಕ ಹೆಸರಿಗೆ ಕೊಂಚ ಮಟ್ಟಿಗೆ ಹೋಲಿಕೆಯಾಗುತ್ತದೆ.ಇದು ಕ್ಯಾನಾನಿಟ್ಸ್ ಎಂಬ ಯಹ್ಯೂದ್ಯರ ಸಂಸ್ಕೃತಿಯುಳ್ಳ ಮತ್ತು ಅವರ ಭಾಷೆಯನ್ನು ಮಾತನಾಡುತ್ತಿದ್ದ ಜನಾಂಗದವರು ನಂತರ ಅಲ್ಲಿ ಆಗಮಿಸಿದವರೊಂದಿಗೆ ಹೊಂದಿಕೊಳ್ಳಲಾರಂಭಿಸಿದರು.

ಬೈಬಲ್ ಶ್ರದ್ದಾವಂತರ ಯುಗ

ಬೆಥ್ ಲೆಹೆಮ್ ಜುಢಾ ದೇಶದ "ಹಿಲ್ ಕಂಟ್ರಿ"ಯಲ್ಲಿ ನೆಲೆಯಾಗಿದೆ.ಇದು ಬಹುಶಃ ಬಿಬ್ಲಿಕಲ್ ಎಪಾರ್ಥ್ ಅಂದರೆ ಫಲವತ್ತಾದ ಎಂಬ ಇದರ ವಿವರ ಬುಕ್ ಆಫ್ ಮಿಕಾದಲ್ಲಿ ಬೆಥ್ ಲೆಹೆಮ್ ನ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದನ್ನು ಬೆಥ್ -ಲೆಹೆಮ್ ಜುಢಾ ಮತ್ತು " ಎ ಸಿಟಿ ಆಫ್ ಡೇವಿಡ್ " ಎನ್ನಲಾಗುತ್ತದೆ. ಇದನ್ನು ಮೊದಲು ತನಾಖ್ ಮತ್ತು ಬೈಬಲ್ ನಲ್ಲಿ ಅಬ್ರಾಹ್ಮಿಕ್ ಮ್ಯಾಟ್ರಿಚ್ ರಾಚೆಲ್ ಮರಣ ಅಪ್ಪಿದ ಬಗ್ಗೆ ಮತ್ತು ಆತನನ್ನು ಅದೇ "ರಸ್ತೆ ಬದಿ" ಅಲ್ಲಿಯೇ ಸಮಾಧಿ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.(Gen. 48:7) ರಾಚೆಲ್ಸ್ ಟೊಂಬ್ ಈ ಸಾಂಪ್ರದಾಯಿಕ ಸಮಾಧಿ ಸ್ಥಳವು ಬೆಥ್ ಲೆಹೆಮ್ ನ ಪ್ರವೇಶದ್ವಾರದಲ್ಲಿದೆ. ಬುಕ್ ಆಫ್ ರುತ್ ಪ್ರಕಾರ ಈ ಕಣಿವೆಯು ಪೂರ್ವಕ್ಕಿರುವ ಮೊಬ್ (ಜೊರ್ಡಾನಿನ ಐತಿಹಾಸಿಕ ಹೆಸರು) ನ ರುತ್ ನಲ್ಲಿದೆ.ಈ ವೈಭವ ನಾವೊಮಿಯೊಂದಿಗೆ ನಗರಕ್ಕೆ ಮರಳಿತು. ಇಸ್ರೇಲಿನ ಎರಡನೆಯ ರಾಜ ಡೇವಿಡ್ ಹುಟ್ಟಿದ ಸಾಂಪ್ರದಾಯಿಕ ನಗರವೆಂದರೆ ಬೆಥ್ ಲೆಹೆಮ್ , ಅದಲ್ಲದೇ ಆತ ರಾಜ ಸ್ಯಾಮ್ಯುವಲ್ ನೊಂದಿಗೆ ಎದುರುಬದುರಾಗಿ ಸೋತ ಜಾಗ ಇದೆಂದು ಹೇಳಲಾಗುತ್ತದೆ. ಆತ ಅಬ್ದುಲ್ಲಮ್ನ ಗವಿಯೊಂದರಲ್ಲಿ ಅವಿತುಕೊಂಡಿದ್ದಾಗ ಮೂವರು ಆತನ ಪಡೆ ಸೈನಿಕರು ಬೆಥ್ ಲೀಹೆಮ್ ನಲ್ಲಿನ ಬಾವಿಯೊಂದರಿಂದ ಅತನಿಗೆ ಕುಡಿಯಲು ನೀರು ಕೊಂಡೊಯ್ಯುತ್ತಿದ್ದರು.

ರೊಮನ್ ಮತ್ತು ಬೈಜೆಂಟೈನ್ ಕಾಲಗಳು

ಸುಮಾರು 132-135 ರ ಸಮಯದಲ್ಲಿ ಈ ನಗರವು ರೊಮನ್ ರಿಂದ ವಶಪಡಿಸಿಕೊಳ್ಳಲ್ಪಟ್ಟಿತು.ಇದು ಬಾರ್ ಕೊಖಾಬಾ ಕ್ರಾಂತಿ ಸಂದರ್ಭದಲ್ಲಿ ವಶಕ್ಕೆ ಬಂದಿತು. ಅದರ ಜಿವಿಶ್ ನಿವಾಸಿಗಳನ್ನು ಹಾರ್ಡಿಯನ್ ನ ಮಿಲಿಟರರಿ ಆಜ್ಞೆಗಳ ಅಲ್ಲಿಂದ ಹೊರಹಾಕಲಾಯಿತು. ಬೆಥ್ ಲೆಹೆಮ್ ನ್ನು ಆಳುವಾಗ ರೊಮನ್ ರು ಗ್ರೀಕ್ ಪುರಾಣಾಧಾರಿತ ಕಲ್ಟ್ ಆಚರಣೆಯ ಮೂರ್ತಿಯುಳ್ಳ ಅಡೊನಿಸ್ ದೇವಾಲಯಗಳನ್ನು ನೇಟಿವಿಟಿ ಜಾಗೆಯಲ್ಲಿ ನಿರ್ಮಿಸಿದರು. ಮೊದಲ ಬೈಜೆಂಟೈನ್ ಚಕ್ರವರ್ತಿ ಕಾನ್ ಸ್ಟಂಟೈನ್ಮೊದಲ ಬಾರಿಗೆ ಬೆಥ್ ಲೆಹೆಮ್ ಗೆ ಭೇಟಿ ನೀಡಿದ್ದ. ಆತನ ತಾಯಿ ಹೆಲೆನಾಳಿಗಾಗಿ ಚರ್ಚ್ ಯೊಂದನ್ನು 326 ರಲ್ಲಿ ನಿರ್ಮಿಸಲಾಯಿತು.

ಬಿಬ್ಲಿಕಲ್ ಅವಧಿಯಲ್ಲಿ ಸಮರ್ಟಿನ್ ಸದಸ್ಯರ 529 ರ ಕ್ರಾಂತಿ ಸಮಯದಲ್ಲಿ ಬೆಥ್ ಲೆಹೆಮ್ ಮತ್ತು ಅದರ ಗೋಡೆಗಳನ್ನು ಮತ್ತು ಚರ್ಚ್ ಆಫ್ ನೇಟಿವಿಟಿಗಳನ್ನು ದ್ವಂಸಗೊಳಿಸಲಾಯಿತು.ನಂತರ ಚಕ್ರವರ್ತಿ ಜಸ್ಟಿನಿನ್ ನ ಆಜ್ಞೆ ಮೇರೆಗೆ ಮರುನಿರ್ಮಿಸಲಾಯಿತು.ತರುವಾಯ 614 ರಲ್ಲಿ ಪೆರ್ಸಿಯನ್ ಸಸ್ಸನಿಡ್ ಚಕ್ರವರ್ತಿ ಪ್ಯಾಲೇಸ್ಟೈನ್ ಮೇಲೆ ದಾಳಿ ನಡೆಸಿ ಬೆಥ್ ಲೆಹೆಮ್ ನ್ನು ವಶಪಡಿಸಿಕೊಂಡನು. ಒಂದು ಕಥೆಯ ಪ್ರಕಾರ ಚರ್ಚ್ ನ್ನು ನಾಶಗೊಳಿಸುವಲ್ಲಿ ಅಡ್ಡಿಪಡಿಸಲಾಯಿತು.ಯೇಸುವಿನ ಜ್ಞಾನಿಯೊಬ್ಬ ಪರ್ಸಿಯನ್ ಉಡುಪಿನಲ್ಲಿ ಒಂದು ಕಲಾಕೃತಿಯಾಗಿ ಕಾಣಿಸಿ ಅಲ್ಲಿನವರನ್ನು ಬೆರಗುಗೊಳಿಸಿದ.

ಜೀಸಸ್ ನ ಜನ್ಮಭೂಮಿ

ಹೊಸ ಆವಿಷ್ಕಾರದ ಎರಡು ವಿಭಾಗಗಳಲ್ಲಿ ಜೀಸಸ್ ಬೆಥ್ ಲೆಹೆಮ್ ನಲ್ಲಿ ಜನಿಸಿದ್ದ ಎಂದು ವರ್ಣಿಸಿವೆ. ಲ್ಯುಕ್ ನ ವಚನ ಭಾಷ್ಯದ ಪ್ರಕಾರ ಜೀಸಸ್ ನ ತಂದೆ ತಾಯಿಗಳು ನಜರೆತ್ ನಲ್ಲಿ ಜೀವಿಸಿದ್ದರು.ಆದರೆ AD 6 ರಲ್ಲಿ ಅವರು ಬೆಥ್ ಲೆಹೆಮ್ ಗೆ ಪಯಣಿಸಿದರು.ಆಗ ಈ ಕುಟುಂಬ ನಾಜ್ರೆತ್ ಗೆ ಮರಳುವ ಮುಂಚೆ ಜೀಸಸ್ ಅಲ್ಲಿ ಜನ್ಮ ತಾಳಿದ.

ಮ್ಯಾಥಿವ್ ನ ಬರೆಹಗಳಲ್ಲಿ ಜೀಸಸ್ ಜನ್ಮ ತಳೆದಾಗ ಆ ಕುಟುಂಬ ಅಲ್ಲಿಯೇ ನೆಲೆಸಿತ್ತು.ನಂತರ ಬೆಥ್ ಲೆಹೆಮ್ ನಿಂದ ಅದು ನಜರೆತ್ ಗೆ ಮರಳಿತು. ಮ್ಯಾಥಿವ್ ನ ವಿವರದ ಪ್ರಕಾರ ರಾಜಾ ಹೆರೊಡ್ ದಿ ಗ್ರೇಟ್ ಹೇಳಿದ್ದೇನೆಂದರೆ ಆ ಸಂದರ್ಭದಲ್ಲಿ'ಬೆಥ್ ಲೆಹೆಮ್ ನಲ್ಲಿ ಜನ್ಮ ತಾಳಿದ.'ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಿಸಿದ ಎಲ್ಲಾ ಎರಡು ವರ್ಷ ಮತ್ತು ಅದಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳನ್ನು ಕೊಲ್ಲುವಂತೆ ಆಜ್ಞಾಪಿಸಿದ್ದ. ಜೀಸಸ್ ನ ಐಹಿಕ ತಂದೆ ಜೊಸೆಫ್ ಈ ಹೇಳಿಕೆಯನ್ನು ಕನಸಿನಲ್ಲಿ ಕಂಡವನು; ಈ ದುರಂತದಿಂದ ಪಾರಾಗಲು ಆ ಕೂಡಲೇ ಈಜಿಪ್ತ್ ಗೆ ತೆರಳಿ ಹೆರೊಡ್ ನ ಸಾವಿನ ನಂತರ ಮತ್ತೆ ವಾಪಸಾಗುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ಇನ್ನೊಂದು ಎಚ್ಚರಿಕೆಯೆಂದರೆ ಅವರು ಜುಡೆಯಾಗೆ ವಾಪಸಾಗದೇ, ಆಗ ಜೊಸೆಫ್ ತನ್ನ ಕುಟುಂಬವನ್ನು ಗಲಿಲೀಯಿಂದ ಹಿಂಪಡೆದು ನಜರೆತ್ ಗೆ ತೆರಳಿ ಜೀವನ ನಡೆಸುತ್ತಾನೆ.

ಮುಂಚೆ ಇದ್ದ ಕ್ರಿಶ್ಚಯನ್ನರು ಬುಕ್ ಆಫ್ ಮಿಖಾದಲ್ಲಿನ ವಚನದ ಬರಹಗಳಲ್ಲಿ ಬೆಥ್ ಲೆಹೆಮ್ ನಲ್ಲಿ ಓರ್ವ ಧರ್ಮ ಪ್ರವರ್ತಕ ಜನಿಸಿದ್ದಾನೆಂದು ಹೇಳಿದ್ದಾರೆ. ಹಲವಾರು ಆಧುನಿಕ ಬುದ್ದಿಜೀವಿಗಳು ಜೀಸಸ್ ನಿಜವಾಗಿಯೂ ಬೆಥ್ ಲೆಹೆಮ್ ನಲ್ಲಿ ಜನಿಸಿದನೇ ಎಂಬ ಜಿಜ್ಞಾಸೆಯಲ್ಲಿದ್ದಾರೆ.ಆದರೆ ಹಲವಾರು ಹಿಂದಿನ ಬರಹಗಳಲ್ಲಿ ಜೀಸಸ್ ಗೆ ಧಾರ್ಮಿಕ ಗುರುವಿನ ರೂಪ ನೀಡಲು ಮತ್ತು ರಾಜ ಡೇವಿಡ್ ನೊಂದಿಗೆ ಸಂಬಂಧ ಕಲ್ಪಿಸಲು ಈ ರೀತಿ ಮಾಡಲಾಗಿದೆಯೇನೋ ಎಂಬ ಸವಾಲನ್ನೂ ಹಾಕುತ್ತಾರೆ. ಅದೇ ರೀತಿ ಮಾರ್ಕ್ ನ ಸುವಾರ್ತೆ ಮತ್ತು ಜೊನ್ ನ ಸುವಾರ್ತೆಗಳಲ್ಲಿ ಯಾವುದೇ ಪ್ರಾದೇಶಿಕ ನ್ಯಾರೇಟಿವ್ ಅಥವಾ ವಿವರ ಇಲ್ಲವೇ ಜೀಸಸ್ ಬೆಥ್ ಲೆಹೆಮ್ ನಲ್ಲಿಯೇ ಜನಸಿದ್ದಾನೆಂದು ಟಿಪ್ಪಣಿ ಮಾಡಿಲ್ಲ.ಆದರೆ ಜೀಸಸ್ ಕೇವಲ್ ನಜರೆತ್ ನವನು ಎಂಬ ಉಲ್ಲೇಖ ಮಾಡಿದ್ದಾರೆ. ಆದರೆ ಆರ್ಕ್ಯಾಲಾಜಿ ಪತ್ರಿಕೆಯೊಂದರ 2005 ರ ಸಂಚಿಕೆಯಲ್ಲಿ ಪುರಾತತ್ವಶಾಸ್ತ್ರಜ್ಞ ಅವಿರಾಮ್ ಒಶ್ರಿ ಅವರ ಪ್ರಕಾರ,ಬೆಥ್ ಲೆಹೆಮ್ ನಲ್ಲಿ ಜೀಸಸ್ ಹುಟ್ಟಿದ ಕಾಲದಲ್ಲಿ ಯಾವುದೇ ಜನವಸತಿಯ ಕುರುಹು ದೊರೆತಿಲ್ಲ ಎಂದು ಹೇಳಿದ್ದಾರೆ.ಹೀಗಾಗಿ ಜೀಸಸ್ ಗಲಿಲೀಯ ಬೆಥ್ ಲೆಹೆಮ್ ಪ್ರದೇಶದಲ್ಲಿ ಜನಿಸಿರಬಹುದೆಂದು ಅಂದಾಜಿಸಿದ್ದಾರೆ. ಈತನ ಈ ಅಭಿಪ್ರಾಯವನ್ನು ವಿರೋಧಿಸಿರುವ ಜೆರೊಮ್ ಮರ್ಫಿ-ಒ ಕೊನೂರ್ ಇದನ್ನು ಸಾಂಪ್ರದಾಯಿಕ ವಿಷಯವೆಂದು ವಾದ ಮಂಡಿಸಿದ್ದಾರೆ.

ಜೀಸಸ್ ನ ಈ ಪುರಾತತ್ವ ವಿಚಾರಗಳನ್ನು ಆತ ಬೆಥ್ ಲೆಹೆಮ್ ನಲ್ಲಿ ಜನಿಸಿರುವುದನ್ನು ಕ್ರಿಶ್ಚಿಯನ್ ವಿಚಾರಗಳ ಸಮರ್ಥಕ ಜಸ್ಟಿನ್ ಮಾರ್ಟಿಯರ್ ತನ್ನ ಅಭಿಪ್ರಾಯಗಳನ್ನು ಡೈಲಾಗ್ ಉಯಿತ್ ಟ್ರಿಫೊನೊಂದಿಗೆ ಹಂಚಿಕೊಂಡಿದ್ದಾನೆ.(c. 155–161)ಈ ಪವಿತ್ರ ಕುಟುಂಬವು ನಗರದ ಹೊರವಲಯದ ಗುಹೆಯೊಂದರಲ್ಲಿ ಆಶ್ರಯ ಪಡೆದುಕೊಂಡಿತ್ತು ಎಂದಿದ್ದಾನೆ. ಒರೆಜಿನ್ ಆಫ್ ಅಲೆಕ್ಸಾಂಡರಿಯಾದಲ್ಲಿನ ಬರಹಗಳ ಪ್ರಕಾರ ಅಂದರೆ ಸುಮಾರು 247 ರಲ್ಲಿ ಬೆಥ್ ಲೆಹೆಮ್ ನಲ್ಲಿರುವ ಗುಹೆಯೊಂದರಲ್ಲಿ ಜೀಸಸ್ ಜನಿಸಿದನೆಂದು ಸ್ಥಳೀಯ ಜನರು ಇಂದಿಗೂ ನಂಬುತ್ತಾರೆ. ಈ ಗುಹೆಯು ಮುಂಚೆ ತಮ್ಮುಜ್ ಪಂಥಕ್ಕೆ ಸೇರಿದ ಜಾಗವಾಗಿತ್ತೆಂದು ನಂಬಲಾಗಿದೆ.

ಇಸ್ಲಾಮಿಕ್ ಆಡಳಿತ ಮತ್ತು ಹೋರಾಟಗಳು

ಸುಮಾರು 637 ರಲ್ಲಿ ಜೆರುಸಲೇಮ್‌‌ ವಶಪಡಿಸಿಕೊಳ್ಳುವಿಕೆಯು ಬೆಥ್ ಲೆಹೆಮ್ ನ ಎರಡನೆಯ ಕಾಲಿಫ್ ಧರ್ಮಗುರು 'ಉಮರ್ ಇಬಿನ್ ಅಲ್ -ಖತ್ತಬ್ ನ ಮುಸ್ಲಿಮ್ ಸೈನಿಕರಿಂದ ನಡೆಯಿತು.ಆದರೆ ಕ್ರಿಶ್ಚಿಯನರಿಗಾಗಿ ಚರ್ಚ್ ಆಫ್ ನೇಟಿವಿಟಿಯನ್ನು ಕಾಯ್ದಿರಿಸಲಾಗುವುದೆಂದು ಭರವಸೆ ನೀಡಲಾಯಿತು. ಇದೇ ಜಾಗೆಯ ಹತ್ತಿರದ ಪ್ರದೇಶದಲ್ಲಿ ಉಮರ್ ಪ್ರಾರ್ಥನೆ ಮಾಡುತ್ತಿದ್ದ ಜಾಗೆಯಲ್ಲಿ ಮಸೀದೆಯೊಂದನ್ನು ನಿರ್ಮಿಸಿ ಆತನಿಗೆ ಅರ್ಪಿಸಲಾಯಿತು.ನಗರದಲ್ಲಿ ಇದು ಚರ್ಚ್ ನಂತರದ ಒಂದು ಕಟ್ಟಡವಾಗಿ ತಲೆ ಎತ್ತಿತು. ನಂತರ ಬೆಥ್ ಲೆಹೆಮ್ ,ಉಮ್ಮಯಾದ್ಸ್ ಇಸ್ಲಾಮಿಕ್ ಧರ್ಮಗುರುಗಳ ನಿಯಂತ್ರಣದಿಂದ 8 ನೆಯ ಶತಮಾನದಲ್ಲಿ ಹೊರ ಬಂದಿತು,ಅಲ್ಲದೇ 9 ನೆಯ ಶತಮಾನದಲ್ಲಿ ಅಬಾಸಿಡ್ಸ್ ಅವರಿಂದ ಬಿಡಿಸಿಕೊಂಡಿತು. ಪರ್ಸಿಯನ್ ಭೋಗೋಲ ಶಾಸ್ತ್ರಜ್ಞನೊಬ್ಬ 9 ನೆಯ ಶತಮಾನದ ಮಧ್ಯಭಾಗದಲ್ಲಿ ಈ ನಗರದಲ್ಲಿ ಉತ್ತಮ ಸ್ಥಿತಿಯಲಿ ಕಾಯ್ದಿರಿಸಿದ ಚರ್ಚೊಂದು ಇತ್ತೆಂದು ದಾಖಲಿಸಿದ್ದಾನೆ. ಅರಬ್ ನ ಭೂಗೋಲಶಾಸ್ತ್ರಜ್ಞ ಅಲ್ -ಮಕ್ದಸಿ ಸುಮಾರು 985 ರಲ್ಲಿ ಬೆಥ್ ಲೆಹೆಮ್ ಗೆ ಭೇಟಿ ನೀಡಿದ್ದ,ಈ ಪ್ರದೇಶದ ಸುತ್ತಮುತ್ತ ಎಲ್ಲೂ ಇಂತಹ ಚರ್ಚನ್ನು ನೋಡಿಲ್ಲ. ಎಂದಿದ್ದಾನೆ. "ಬೆಸಲಿಕಾ ಆಫ್ ಕಾನ್ ಸ್ಟಂಟೈನ್ ಇಂತಹ ಚರ್ಚಗೆ ಸರಿ ಸಮನಾದ ಯಾವುದೇ ಕಟ್ಟಡವಿಲ್ಲ ಎಂದೂ ಬಣ್ಣಿಸಿದ್ದಾನೆ. ಆದರೆ ಆರನೆಯ ಫತ್ತಿಮಿದ್ ಕಾಲಿಫ್ ಅಲ್ -ಹಕೇಮ್ ಬಿ ಅಲ್ಲ್ಹಾನ ಆಡಳಿತದ 1009 ಅವಧಿಯಲ್ಲಿ ದಿ ಚರ್ಚ್ ನೇಟಿವಿಟಿಯನ್ನು ನೆಲಕ್ಕುರಳಿಸುವಂತೆ ಅಜ್ಞಾಪಿಸಲಾಗಿತ್ತು,ಆದರೆ ಕೆಲವು ಸ್ಥಳೀಯ ಮುಸ್ಲಿಮರು ಇದನ್ನು ತಡೆದು ಈ ಕಟ್ಟಡದ ದಕ್ಷಿಣ ಭಾಗದಲ್ಲಿ ಪ್ರಾಥನೆ,ಪೂಜೆಗೆ ಅವಕಾಶ ಒದಗಿಸಿದರು.

ಆಗ 1099 ರಲ್ಲಿ ಬೆಥ್ ಲೆಹೆಮ್ ಹೋರಾಟಗಾರರಿಂದ ವಶಪಡಿಸಿಕೊಳ್ಳಲ್ಪಟ್ಟಿತು.ಅವರು ಈ ಜಾಗೆಯನ್ನು ಕ್ರೈಸ್ತ್ ಸನ್ಯಾಸಿಗಳಿಗೆ ಉತ್ತರ ಭಾಗದ ಚರ್ಚ್ ಆಫ್ ನೇಟಿವಿಟಿಯ ಪ್ರದೇಶದಲ್ಲಿ ಆಶ್ರಯ ತಾಣ ಮತ್ತು ಅವರಿಗೆ ಏಕಾಂತ ಒದಗಿಸುವ ಕಟ್ಟಡಗಳನ್ನು ನಿರ್ಮಿಸಿದರು. ಆಗ ಗ್ರೀಕ್ ಸಂಪ್ರದಾಯವಾದಿಗಳನ್ನು ತೆಗೆದು ಹಾಕಿ ಲ್ಯಾಟಿನ್ ಧರ್ಮಗುರುಗಳನ್ನು ಆ ಜಾಗೆಗೆ ತರಲಾಯಿತು. ಅಲ್ಲಿನ ವರೆಗೆ ಗ್ರೀಕ್ ಸಂಪ್ರದಾಯವಾದಿಗಳು ಮಾತ್ರ ಅಲ್ಲಿನ ಕ್ರಿಶ್ಚಿಯನ್ ಅಸ್ತಿತ್ವಕ್ಕೆ ಕಾರಣವಾಗಿದ್ದರು. ಆಗ 1100 ಸುಮಾರಿಗೆ ಫ್ರಾಂಕಿಶ್ ಕಿಂಗ್ಡಮ್ ಆಫ್ ಜೆರುಸ್ಲೇಮ್ ನ ಮೊದಲ ಬಾಲ್ಡ್ ವಿನ್ I ಬೆಥ್ ಲೆಹೆಮ್ ನ ರಾಜನಾಗಿ ಅಧಿಕಾರಕ್ಕೆ ಬಂದ.ಅದೇ ವರ್ಷ ಲ್ಯಾಟಿನ್ ಧರ್ಮಾಧಿಕಾರದ ಆಡಳಿತ ವ್ಯವಸ್ಥೆಯನ್ನು ಆ ನಗರದಲ್ಲಿ ಜಾರಿಗೊಳಿಸಲಾಯಿತು.

ಈಜಿಪ್ತ್ ಮತ್ತು ಸಿರಿಯಾದ ಸುಲ್ತಾನ್ ಸಲಾದಿನ್ 1187 ರಲ್ಲಿ ಮುಸ್ಲಿಮ್ ಅಯ್ಯುಬಿದ್ಸ್ ಅವರ ನೇತೃತ್ವ ವಹಿಸಿ ಹೋರಾಟಗಾರರ ಕೈಯಿಲ್ಲಿದ್ದ ಬೆಥ್ ಲೆಹ್ಮ್ ನ್ನು ವಶಪಡಿಸಿಕೊಂಡ. ಆಗ ಲ್ಯಾಟಿನ್ ಧರ್ಮಗುರುಗಳು ಒತ್ತಾಯಪೂರ್ವಕವಾಗಿ ಅದನ್ನು ತೆರವುಗೊಳಿಸಿ ಗ್ರೀಕ್ ಸಂಪ್ರದಾಯಿಕ ಧರ್ಮಗುರುವಿಗೆ ಅನುಮತಿ ನೀಡಬೇಕಾಯಿತು. ಸಲಾದಿನ್ 1192 ರಲ್ಲಿ ಇಬ್ಬರು ಲ್ಯಾಟಿನ್ ಅರ್ಚಕರು ಮತ್ತು ಇಬ್ಬರು ಧರ್ಮಾಧಿಕಾರಿಗಳು ವಾಪಸಾಗಬಹುದೆಂದು ಅನುಮತಿ ನೀಡಿದ. ಹೀಗೆ ಬೆಥ್ ಲೆಹೆಮ್ ಯಾತ್ರಿಗಳ ಸಂದರ್ಶನದ ಪ್ರಮಾಣದಲ್ಲಿ ಹೆಚ್ಚು ನಷ್ಟ ಅನುಭವಿಸಬೇಕಾಯಿತು.ಯುರೊಪಿಯನ್ ಯಾತ್ರಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು.

ವಿಲಿಯಮ್ IV ಕೌಂಟ್ ಆಫ್ ನೆವರ್ಸ್ ಬೆಥ್ ಲೆಹೆಮ್ ಕ್ರಿಶ್ಚಿಯನ್ಸ್ ಪಾದ್ರಿಗಳಿಗೆ ಹೇಳಿದ್ದೇನೆಂದರೆ ಇದು ಮುಸ್ಲಿಮ್ ನಿಯಂತ್ರಣಕ್ಕೊಳಪಟ್ಟರೂ ಅವರ ಉಳಿಯುವಿಗಾಗಿ ಅವರನ್ನು ಸಣ್ಣ ಪಟ್ಟಣ ಕ್ಲಾಮೆಸಿ ಅಂದರೆ ಸದ್ಯ ರ್ಫ್ರಾನ್ಸ ನಲ್ಲಿನ ಬರ್ಗಂಡಿಗೆ ತಾನು ಸ್ವಾಗತಿಸುವುದಾಗಿ ಹೇಳಿದ. ಹಾಗೆಯೇ 1223 ರ ಸುಮಾರಿಗೆ ಬೆಥ್ ಲೆಹೆಮ್ ನ ಬಿಶಪ್ ಕ್ಲಾಮೆಸಿಯಾದ ಪಾಂಥನೊರ್ ಆಸ್ಪತ್ರೆಯಲಿ ವಾಸ ಮಾಡಲಾರಂಭಿಸಿದರು. ಕ್ಲಾಮೆಸಿಯು 'ಪಾರ್ಟಿಬಸ್ ಇನ್ ಫಿದೆಹೆಮ್ 'ಬಿಶಪ್ ಆಫ್ ಬೆಥ್ ಲೆಹೆಮ್ ನ್ನು 600 ವರ್ಷಗಳ ವರೆಗೆ ಅಂದರೆ 1789 ರ ಫ್ರೆಂಚ್ ಕ್ರಾಂತಿಯ ವರೆಗೆ ಇವರ ಧರ್ಮಾಡಳಿತ ನಡೆಯಿತು.

ಬೆಥ್ ಲೆಹೆಮ್ , ಜೆರುಸಲೇಮ್ ಸೇರಿದಂತೆ ,ನಜರೇತ್ ಮತ್ತು ಸಿಡೊನ್ ಒಟ್ಟಿಗೆ ಕಿಂಗ್ಡಮ್ ಆಫ್ ಜೆರುಸ್ಲೇಮ್ ಗೆ ಸೇರಲು ಹೊಲಿ ರೊಮನ್ ಎಂಪರರ್ ಫೆಡ್ರಿಕ್ II ಮತ್ತು ಅಯುಬ್ ಸುಲ್ತಾನ್ ಅಲ್ -ಕಮಿಲ್ ನಡುವೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಯಿತು.ಇದನ್ನು 1229 ರಲ್ಲಿ ಅನುಷ್ಠಾನಗೊಳಿಸಿ ಹತ್ತು ವರ್ಷಗಳ ಕದನ ವಿರಾಮಕ್ಕೆ ಅಂತ್ಯ ಹಾಡುವುದೇ ಇದರ ಉದ್ದೇಶವಾಗಿತ್ತು. ಈ ಒಅಂಡಂಬಡಿಕೆಯು 1239 ರಲ್ಲಿ ತನ್ನ ಕಾಲಾವಧಿಯನ್ನು ಅಂತ್ಯಗೊಳಿಸಿದ ನಂತರ ಬೆಥ್ ಲೆಹೆಮ್ ನ್ನು ಮುಸ್ಲಿಮ್ ರು 1244 ರಲ್ಲಿ ಮರುವಶಪಡಿಸಿಕೊಂಡರು.

ಸುಮಾರು 1250 ರಲ್ಲಿ ಮಾಮ್ಲುಕ್ ಗಳು ರುಕ್ನ್ ಅಲ್ -ದಿನ್ ಬೈಬರ್ಸ್ ಅಡಿಯಲ್ಲಿ ಆಡಳಿತ ಬಂದಾಗ ಕ್ರಿಶ್ಚಾನಿಟಿ ಬಗೆಗಿನ ಸಹಿಷ್ಣುತೆಯು ಕಡಿಮೆಯಾಯಿತು.ಧರ್ಮಗುರುಗಳು ನಗರ ತೊರೆದರು,ಅಲ್ಲದೇ 1263 ರಲ್ಲಿ ನಗರದ ಸುತ್ತು ಗೋಡೆಗಳನ್ನು ಧ್ವಂಸ ಮಾಡಲಾಯಿತು. ನಂತರದ ಶತಮಾನದಲ್ಲಿ ಲ್ಯಾಟಿನ್ ಧರ್ಮಗುರು ಬೆಥ್ ಲೆಹೆಮ್ ಗೆ ಹಿಂತಿರುಗಿದರು.ಆಗ ನೇಟಿವಿಟಿಯ ಬೆಸಿಲಿಕಾದ ಹತ್ತಿರದಲ್ಲಿ ತಮ್ಮ ನೆಲೆವಾಸ ಕಂಡುಕೊಳ್ಳುತ್ತಾರೆ. ಗ್ರೀಕ್ ಸಂಪ್ರದಾಯವಾದಿಗಳು ಬೆಸಿಲಿಕಾದ ನಿಯಂತ್ರಣ ಬಿಟ್ಟುಕೊಟ್ಟರು.ಅಲ್ಲದೇ ಮಿಲ್ಕ್ ಗ್ರೊಟ್ಟೊದ ನಿಯಂತ್ರಣವನ್ನು ಲ್ಯಾಟಿನ್ಸ್ ಮತ್ತು ಆರ್ಮೆನಿಯನ್ಸ್ ಅವರೊಟ್ಟಿಗೆ ಹಂಚಿಕೊಳ್ಳುತ್ತಾರೆ.

ಒಟ್ಟೊಮನ್ ಮತ್ತು ಈಜಿಪ್ತಿಯನ್ ಯುಗ

ಆಗಿನ ಒಟ್ಟೊಮನ್ ಕಾಲದ 1517 ರಿಂದ ಬೆಸಿಲಿಕಾದ ಸ್ವಾಧೀನವು ಕ್ಯಾಥೊಲಿಕ್ಸ್ ಮತ್ತು ಗ್ರೀಕ್ ಸಂಪ್ರದಾಯ ಬದ್ದ ಚರ್ಚ್ ಗಳ ನಡುವೆ ತೀವ್ರ ವಿವಾದಕ್ಕೊಳಗಾಯಿತು. ಬೆಥ್ ಲೆಹೆಮ್ 16 ನೆಯ ಶತಮಾನದ ಹೊತ್ತಿಗೆ ಜೆರುಸ್ಲೇಮ್ ಜಿಲ್ಲೆಯ ಅತ್ಯಂತ ದೊಡ್ಡ ಹಳ್ಳಿಯಾಗಿ ಮಾರ್ಪಟ್ಟು ಏಳು ಉಪವಿಭಾಗಗಳಾಗಿ ವಿಭಜಿಸಲ್ಪಟ್ಟಿತು. ಈ ಕಾಲದಲ್ಲಿ ಇನುಳಿದ ನಾಯಕತ್ವದ ಜೊತೆ ಬಾಸ್ಬಸ್ ಕುಟುಂಬವು ಬೆಥ್ ಲೆಹೆಮ್ ನ ನೇತಾರನಾಗಿ ತನ್ನ ಸೇವೆಯನ್ನು ಒದಗಿಸಿತು.

ಬೆಥ್ ಲೆಹೆಮ್ ಗೋಧಿ,ಬಾರ್ಲಿ ಮತ್ತು ದ್ರಾಕ್ಷಿಗಳ ಮೇಲೆ ತೆರಿಗೆ ನೀಡುತಿತ್ತು. ಮುಸ್ಲಿಮ್ ರು ಮತ್ತು ಕ್ರಿಶ್ಚಿಯನ್ ರು ಪ್ರತ್ಯೇಕವಾಗಿ ಸಂಘಟನೆಯಾಗಿ ಅವರದೇ ಆದ ನಾಯಕರನ್ನು ಹೊಂದಿದರು.ಅಲ್ಲಿ 16 ನೆಯ ಶತಮಾನದ ಮಧ್ಯಭಾಗದಲ್ಲಿ ಐವರು ಈ ಹಳ್ಳಿಯ ನಾಯಕರಾದರು.ಅವರಲ್ಲಿ ಮೂವರು ಮುಸ್ಲಿಮ್ ರಾಗಿದ್ದರು. ಒಟ್ಟೊಮನ್ ತೆರಿಗೆ ದಾಖಲೆಗಳನ್ನು ನೋಡಿದರೆ ಕ್ರಿಶ್ಚಿಯನ್ ಜನಸಂಖ್ಯೆಯು ಕೊಂಚ ಉತ್ತಮ ಸ್ಥಿತಿಯಲ್ಲಿತ್ತು.ಹೆಚ್ಚು ಧಾನ್ಯಗಳ ಬೆಳೆಯುವುದರೊಂದಿಗೆ ದುಬಾರಿ ಬೆಲೆಯ ದ್ರಾಕ್ಷಿ ಬೆಳೆಗೂ ಅವರ ವಿರೋಧವೇನಿರಲಿಲ್ಲ.

ಪ್ಯಾಲೆಸ್ಟೈನ್ 1831 ರಿಂದ 1841 ರ ವರೆಗೆ ಈಜಿಪ್ತ್ ನ ಮುಹಮ್ಮದ್ ಅಲಿ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತ್ತು. ಇದೇ ಸಂದರ್ಭದಲ್ಲಿ ನಗರವು ಭೂಕಂಪದ ದುರಂತಕ್ಕೊಳಗಾಯಿತು.ಅದಲ್ಲದೇ 1834 ರಲ್ಲಿ ಈಜೊಪ್ತ್ ನ ಪಡೆಗಳು ಮುಸ್ಲಿಮ್ ಪ್ರದೇಶಗಳನ್ನು ನಾಶಪಡಿಸಿದವು.ಇದಕ್ಕೆ ಹತ್ಯೆಗೀಡಾದ ಇಬ್ರಾಹಿಮ್ ಪಾಶಾನ ಬೆಂಬಲಿಗ ಈ ಕೃತ್ಯಕ್ಕೆ ಬೆಂಬಲ ನೀಡಿದ್ದ ಎನ್ನಬಹುದು. ಹೀಗೆ ಬೆಥ್ ಲೆಹೆಮ್ 1841 ರಲ್ಲಿ ಒಟ್ಟೊಮನ್ ಆಡಳಿತಕ್ಕೊಳಪಟ್ಟಿತ್ತು.ಅದರ ಆಡಳಿತಾವಧಿಯು ಮೊದಲ ಮಹಾಯುದ್ದ I ರ ಅವಧಿ ವರೆಗೂ ಮುಂದುವರೆದಿತ್ತು.ಒಟ್ಟೊಮನ್ ಆಡಳಿತಾವಧಿಯಲ್ಲಿ ಬೆಥ್ ಲೆಹೆಮ್ ವಾಸಿಗಳು ನಿರುದ್ಯೋಗವನ್ನು ಅನುಭವಿಸಿದರು.ಕಡ್ಡಾಯ ಸೇನೆ ಸೇವೆಗೆ ಸೇರ್ಪಡೆ ಮತ್ತು ಭಾರವೆನಿಸುವ ತೆರಿಗೆಗಳು ಬಹಳಷ್ಟು ಜನರು ವಲಸೆ ಹೋಗಬೇಕಾಯಿತು.ಮುಖ್ಯವಾಗಿ ದಕ್ಷಿಣ ಅಮೆರಿಕಾದೆಡೆಗೆ ಎಲ್ಲರ ಪಯಣ ತಿರುಗಿತು. ಒಂದು ಅಮೆರಿಕನ್ ಮಿಶನರಿ 1850 ರಲ್ಲಿ ವರದಿ ಮಾಡಿದಂತೆ ಸುಮಾರು 4,000 ಜನಸಂಖ್ಯೆಯಿತ್ತು.'ಅವರೆಲ್ಲರೂ ಬಹುತ ಗ್ರೀಕ್ ಚರ್ಚ್ ಗೆ ಸೇರಿದವರಾಗಿದ್ದರು.' ಆತ ವಿಮರ್ಶಿಸುವ ಪ್ರಕಾರ 'ತೀವ್ರವಾದ ನೀರಿನ ಕೊರತೆಯನ್ನು ಅನುಭವಿಸಿತು.ಹೀಗಾಗಿ ಇದು ದೊಡ್ಡ ಪಟ್ಟಣವಾಗಿ ಬೆಳೆಯಲಿಲ್ಲ.

ಇಪ್ಪತ್ತನೆಯ ಶತಮಾನ

ಬೆಥ್ ಲೆಹೆಮ್ 1920 ರಿಂದ 1948 ರ ವರೆಗೆ ಬ್ರಿಟಿಶ್ ನಿಯಮಗಳಡಿ ಆಡಳಿತಕ್ಕೊಳಪಟ್ಟಿತ್ತು. ಯುನೈಟೆಡ್ ನೇಶನ್ಸ್ ನ ಜನರಲ್ ಅಸೆಂಬ್ಲಿಯು 1947 ರಲ್ಲಿ ಪ್ಯಾಲೇಸ್ಟಿಯನ್ ವಿಭಜನೆ ಕುರಿತು ವಿಶೇಷ ನಿರ್ಧಾರ ಕೈಗೊಂಡಿತು.ಆಗ ಬೆಥ್ ಲೆಹೆಮ್ ವಿಶೇಷ ಇಂಟರ್ ನ್ಯಾಶನಲ್ ಎನ್ಕ್ಲೇವ್ ಆಫ್ ಜೆರುಸ್ಲೇಮ್ ಗೆ ಸೇರಿಸಿ ಅದನ್ನು ಯುನೈಟೆಡ್ ನೇಶನ್ಸ್ ನ ಆಡಳಿತಕ್ಕೆ ಒಳಪಡಿಸಲಾಯಿತು.

1948 ಅರಬ್-ಇಸ್ರೇಲ್ ಯುದ್ದ ದ ಸಂದರ್ಭದಲ್ಲಿ ಈ ನಗರವನ್ನು ಜೊರ್ಡಾನ್ ತನ್ನ ಸುಪರ್ದಿಗೆ ಒಳಪಡಿಸಿಕೊಂಡಿತು. ಇಸ್ರೇಲಿ ಪಡೆಗಳು ಹಲವಾರು ನಿರಾಶ್ರಿತರನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ಯತ್ನಿಸಿದಾಗ 1947-48 ರ ಸಮಯದಲ್ಲಿ ಹಲವಾರು ಜನರು ಬೆಥ್ ಲೆಹೆಮ್ ಗೆ ಪಲಾಯನಗೈದರು.'ಅಜ್ಜಾ (ಬೀತ್ ಜಿಬ್ರಿನ್ ) ಮತ್ತು ಉತ್ತರದಲ್ಲಿನ 'ಐದಾ ಮತ್ತು ದಕ್ಷಿಣದಲ್ಲಿ ಧೆಶೆಸ್ ನ ಶಿಬಿರಗಳಲ್ಲಿ ನಿರಾಶ್ರಿತರ ಗುಂಪು ವಲಸೆ ಹೋದ ಉದಾಹರಣೆ ಇದೆ. ಹೀಗೆ ಅತ್ಯಧಿಕ ನಿರಾಶ್ರಿತರ ನುಸುಳುವಿಕೆಯು ಬೆಥ್ ಲೆಹೆಮ್ ನ ಕ್ರಿಶ್ಚಿಯನ್ ಸಂಖ್ಯೆಗಿಂತ ಮುಸ್ಲಿಮರ ಜನಸಂಖ್ಯೆ ಏರತೊಡಗಿತು.

ಜೊರ್ಡಾನ್ , ನಗರದ ಮೇಲಿನ ನಿಯಂತ್ರಣವನ್ನು 1967 ರ ಸಿಕ್ಸ್ -ಡೇ ವಾರ್ ದ ವರೆಗೆ ಪಡೆದುಕೊಂಡಿತ್ತು.ನಂತರ ಬೆಥ್ ಲೆಹೆಮ್ , ವೆಸ್ಟ್ ಬ್ಯಾಂಕ್ ಪ್ರದೇಶದೊಂದಿಗೆ ಇಸ್ರೇಲಿನ ಆಡಳಿತಕ್ಕೆ ಒಳಪಟ್ಟಿತು. ನಂತರ 1995 ರ ಡಿಸೆಂಬರ್ 21 ರಂದು ಇಸ್ರೇಲ್ ನ ಪಡೆಯು ಬೆಥ್ ಲೆಹೆಮ್ ನಿಂದ ಹಿಂತೆಗೆಯಿತು.ಅದರ ಮೂರು ದಿನಗಳಲ್ಲೇ ಸಂಪೂರ್ಣವಾಗಿ ಪ್ಯಾಲೇಸ್ಟಿಯನ್ ನ್ಯಾಶನಲ್ ಆಥಾರಟಿಯ ಆಡಳಿತ ಮತ್ತು ನಿಯಂತ್ರಣಕ್ಕೆ ಒಳಪಟ್ಟಿತು.1995 ರ ಇಂಟಿರಿಯಮ್ ಅಗ್ರೀಮೆಂಟ್ ಆನ್ ದಿ ವೆಸ್ಟ್ ಬ್ಯಾಂಕ್ ಮತ್ತುಗಾಜಾ ಪಟ್ಟಿ (ವೆಸ್ಟ್ ಬ್ಯಾಂಕ್ ಮತ್ತ್ತು ಗಾಜಾ ಪಟ್ಟಿಯ ಮಧ್ಯಂತರ ಒಪ್ಪಂದ)ಇಲ್ಲಿ ಪ್ರಸ್ತಾಪ ಮಾಡಲಾಯಿತು.

ಎರಡನೆಯ ಬಾರಿ ಚಳವಳಿ

ಈ ವೇಳೆಗೆ ಎರಡನೆಯ ಪ್ಯಾಲೆಸ್ಟಿನಿಯನ್ ಚಳವಳಿ ಉದ್ರಿಕ್ತವಾಗಿ ಕೆರಳಿಸುವಿಕೆ ಸಂದರ್ಭದಲ್ಲಿ 2000-01 ಆರಂಭಗೊಂಡ ಈ ದಂಗೆಗಳು ಬೆಥ್ ಲೆಹೆಮ್ ನ ಮೂಲಭೂತ ಸೌಕರ್ಯ ಮತ್ತು ಪ್ರವಾಸೋದ್ಯಮ ಕೈಗಾರಿಕೆಗೆ ದೊಡ್ಡ ಪೆಟ್ಟು ನೀಡಿದವು. 2002ರ ಮಿಲಿಟರಿ ಕಾರ್ಯ ಚರಣೆಯ ವಿರುದ್ಧ ನಡೆದ ರಕ್ಷ ಣಾ ದಾಳಿಯು ಆ ವಲಯದಲ್ಲಿ ಯುದ್ದದ ವಾತಾವರಣ ಉಂಟು ಮಾಡಿತು ಮೂಲ ಭೂತವಾಗಿ ಅಲ್ಲಿನ ಬಂಡಕೊರರನ್ನು ನಿಭಾಯಿಸಲು ಇಸ್ರೇಲ್ ಅದನ್ನು ಕದಾಟದ ಕ್ಷೇತ್ರವನ್ನಾಗಿಸಿತು.

ಈ ಕಾರ್ಯಾಚರಣೆಯಲ್ಲಿ IDF ಚರ್ಚ್ ಆಫ್ ದಿ ನೇಟಿವಿಟಿಯನ್ನು ಮುತ್ತಿಗೆ ಹಾಕಿತು. ಸುಮಾರು 200 ಪ್ಯಾಲೇಸ್ಟಿನಿಯನ್ ಉಗ್ರರು ಚರ್ಚ್ ನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಈ ಮುತ್ತಿಗೆಯು ಸುಮಾರು 39 ದಿನಗಳ ವರೆಗೆ ಮುಂದುವರೆಯಿತು.ಒಂಬತ್ತು ಉಗ್ರಗಾಮಿಗಳು ಹಾಗು ಚರ್ಚ್ ನ (ಗಂಟೆ ಬಾರಿಸುವವ) ಸಂಗೀತವಾದ್ಯಗಾರನೊಬ್ಬ ಹತನಾದ. ವಿವಿಧ ಯುರೊಪಿಯನ್ ದೇಶ ಮತ್ತು ಮೌರಿಶಿನಿಯಾಗಳಲ್ಲಿರುವ 13 ಜನ ಉಗ್ರಗಾಮಿಗಳನ್ನು ಬಿಡುಗಡೆ ಮಾಡುವ ಕುರಿತ ಒಪ್ಪಂದದ ಮೇರೆಗೆ ಇದನ್ನು ಅಂತ್ಯಗೊಳಿಸಲಾಯಿತು.

ಭೂಗೋಳ ಶಾಸ್ತ್ರ

ಬೆಥ್ ಲೆಹೆಮ್ ಇದರಲ್ಲಿ ನೆಲೆಗೊಂಡಿದೆ. ಬೆಥ್ ಲೆಹೆಮ್ ಸಮುದ್ರ ಮಟ್ಟದಿಂದ ಸುಮಾರು ಎತ್ತರದಲ್ಲಿದೆ.ಇದು ಹತ್ತಿರದ ಜೆರುಸ್ಲೇಮ್ ಗಿಂತ ಹೆಚ್ಚು ಎತ್ತರದಲ್ಲಿದೆ. ಬೆಥ್ ಲೆಹೆಮ್ ಜುಡೆನ್ ಪರ್ವತಗಳ ದಕ್ಷಿಣ ಭಾಗದಲ್ಲಿ ತನ್ನ ಭಾಗವನ್ನು ಹೊಂದಿದೆ.

ಈ ನಗರವು ೭೩ kilometers (೪೫ mi) ಈಶಾನ್ಯದಲ್ಲಿನ ಗಾಜಾ ಮತ್ತು ದಿ ಮೆಡಿಟೆರೆನಿಯನ್ ಸೀ , ೭೫ kilometers (೪೭ mi) ಪಶ್ಚಿಮದಲ್ಲಿರುವ of ಅಮ್ಮಾನ್, ಜೊರ್ಡಾನ್, ೫೯ kilometers (೩೭ mi) ನೈಋತ್ಯದಲ್ಲಿಟೆಲ್ ಅವಿವ್ , ಇಸ್ರೇಲ್ ಮತ್ತು೧೦ kilometers (೬ mi) ದಕ್ಷಿಣದ ಜೆರುಸ್ಲೇಮ್ ನಲ್ಲಿ ಇದು ಸ್ಥಾಪಿತಗೊಂಡಿದೆ. ನೆರೆಯ ನಗರಗಳು ಮತ್ತು ಪಟ್ಟಣಗಳು ಬೀತ್ ಸಫಾಫಾ ಮತ್ತು ಜೆರುಸಲೇಮ್ ,ಉತ್ತರದಲ್ಲಿ ಬೀತ್ ಜಲಾ ವಾಯವ್ಯ, ಹುಸನ್ ಪಶ್ಚಿಮದಲ್ಲಿ, ಅಲ್-ಖದರ್ ಮತ್ತು ಅರ್ತಾಸ್ ಆಗ್ನೇಯದಲ್ಲಿ, ಮತ್ತು ಬೀತ್ ಸಾಹೌರ್ ಪೂರ್ವಕ್ಕಿದೆ. ಬೀತ್ ಜಲಾ ಮತ್ತು ನಂತರ ಒಂದು ಒಕ್ಕೂಟವು ಬೆಥ್ ಲೆಹೆಮ್ ಮತ್ತು ಐದಾ ಹಾಗು ಅಜ್ಜಾ ನಿರಾಶ್ರಿತರ ಶಿಬಿರಗಳು ನಗರದ ಪರಿಧಿಯಲ್ಲಿವೆ.

ಪುರಾತನ ನಗರ

ಬೆಥ್ ಲೆಹೆಮ್ ನಗರದ ಮಧ್ಯದಲ್ಲಿ ಪುರಾತನ ಹಳೆ ನಗರಪ್ರದೇಶವಿದೆ. ಪುರಾತನ ನಗರದಲ್ಲಿ ಎಂಟು ವಿಭಾಗಗಳನ್ನು ಹೊಂದಿದೆ.ಮೊಸಾಯಿಕ್ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದ್ದು ಸುತ್ತಮುತ್ತಲಿನ ಮಾಂಗರ್ ಸ್ಕ್ವಾಯರ್ ಪ್ರದೇಶದಲ್ಲಿ ಇದೇ ಪ್ರಕಾರದ ಕಟ್ಟಡಗಳು ಕಾಣುತ್ತವೆ. ಇಲ್ಲಿನ ಉಪವಿಭಾಗಗಳೆಂದರೆ ಕ್ರಿಸ್ಸ್ಚಿಯನ್ ಅಲ್-ನಜಾಜ್ರೆಹ್, ಅಲ್-ಫರಾಹಿಯಾ, ಅಲ್-ಅನತೆರಹ್, ಅಲ್-ತಾರಾಜೆಮೆಹೆ, ಅಲ್-ಕ್ವವಾವಾಸ್ ಮತ್ತು ಹ್ರ್ಜಾತ್ ಕ್ವಾರ್ಟರ್ಸ್ ಮತ್ತು ಅಲ್-ಫವಾಗ್ಱೆಯ್— ಇದೊಂದೇ ಮುಸ್ಲಿಮ್ ಕ್ವಾರ್ಟರ್ . ಬಹಳಷ್ಟು ಕ್ರಿಶ್ಚಿಯನ್ ಕ್ವಾರ್ಟರ್ಸ್ ಅರಬ್ ಘಸಾನಿದ್ ವಂಶಸ್ಥರನ್ನು ಹೊಂದಿವೆ.ಇವರೆಲ್ಲರೂ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಅಲ್ -ಕವಾವ್ಸಾ ಕ್ವಾರ್ಟರ್ ಅರಬ್ ಕ್ರಿಸ್ಚಿಯನ್ ವಲಸೆಗಾರರಿಂದ ರಚಿಸಲ್ಪಟ್ಟಿದೆ.ಇವರೆಲ್ಲರೂ 18 ನೆಯ ಶತಮಾನದ ಹತ್ತಿರದ ತುಕು ಪಟ್ಟಣದವರಾಗಿದ್ದಾರೆ. ಇಲ್ಲಿ ಸಿರಿಯಾಕ್ ವಿಭಾಗ ಕೂಡ ಹಳೆ ನಗರದ ಹೊರವಲಯದಲ್ಲಿದೆ.ಇದರ ವಾಸಿಗಳು ಸಾಮಾನ್ಯವಾಗಿ ಮಿದ್ಯತ್ ಮತ್ತು ಟರ್ಕಿಯಲ್ಲಿನ ಮಾ'ಅಸುರೇಟ್ ನಗರಕ್ಕೆ ಸೇರಿದವರಾಗಿದ್ದಾರೆ. ಹಳೆ ನಗರದ ಒಟ್ಟಾರೆ ಜನಸಂಖ್ಯೆಯು ಸುಮಾರು 5,000 ರಷ್ಟಿದೆ.

ಹವಾಗುಣ/ವಾತಾವರಣ

ಬೆಥ್ ಲೆಹೆಮ್ ಸಾಮಾನ್ಯವಾಗಿ ಮಧ್ಯಮ ತರಗತಿಯ ವಾಯುಗುಣ ಹೊಂದಿದೆ.ಉಷ್ಣತೆ ಮತ್ತು ಒಣ ಬೇಸಿಗೆಗಳು ಮತ್ತು ತಂಪಾದ ಚಳಿಗಾಲವಿರುತ್ತದೆ. ಚಳಿಗಾಲದಲ್ಲಿ ಉಷ್ಣತೆಯು (ಡಿಸೆಂಬರ್ ಮಧ್ಯೆದಿಂದ ಮಧ್ಯದ ಮಾರ್ಚ್ ವರೆಗೆ)ಇದು ತಂಪು ಹವೆ ಮತ್ತು ಮಳೆಯಿಂದ ಕೂಡಿರುತ್ತದೆ. ಜನವರಿಯು ಅತ್ಯಧಿಕ ಚಳಿ-ತಂಪಿರುವ ತಿಂಗಳಾಗಿದ್ದು ಆಗ ಉಷ್ಣಾಂಶವು 1 ರಿಂದ 13 ಡಿಗ್ರೀ ಸೆಲ್ಸಿಯಸ್ (33–55 °F) ಆಗಿರುತ್ತದೆ. ಮೇದಿಂದ ಸೆಪ್ಟೆಂಬರ್ ವರೆಗೆ ಹವಾಗುಣವು ಬೆಚ್ಚಗೆ ಮತ್ತು ಬಿಸಿಲಿನಿಂದ ಕೂಡಿರುತ್ತದೆ. ಆಗಷ್ಟ್ ತಿಂಗಳು ಅತ್ಯಧಿಕ ಉಷ್ಣಾಂಶ ಕಾಣುವ ತಿಂಗಳು,ಅಂದರೆ ಅತ್ಯಧಿಕ 27 ಡಿಗ್ರಿ ಸೆಲ್ಸಿಯಸ್ (81 °F)ಆಗಿರುತ್ತದೆ. ಬೆಥ್ ಲೆಹೆಮ್ ವಾರ್ಷಿಕ ಸರಾಸರಿ ಮಳೆ ಪಡೆಯುತ್ತಿದ್ದು,ಇದರಲ್ಲಿ 70% ರಷ್ಟು ಮಳೆ ನವೆಂಬರ್ ಮತ್ತು ಜನವರಿ ಅವಧಿಯಲ್ಲಾಗುತ್ತದೆ.

ಬೆಥ್ ಲೆಹೆಮ್ ನ ಸರಾಸರಿ ಆರ್ಧ್ರತೆ ಪ್ರ್ತಮಾಣವು 60% ರಷ್ಟಿದ್ದು ಜನವರಿ ಅಮ್ತ್ತು ಫೆಬ್ರವರಿಯಲ್ಲಿ ಗರಿಷ್ಟ ಮಟ್ಟಕ್ಕೇರುತ್ತದೆ. ಈ ಆರ್ದ್ರತೆಯು ಮೇ ತಿಂಗಳಲ್ಲಿ ಅತ್ಯಂತ ಕಡಿಮೆ ಮತ್ತು ರಾತ್ರಿಹೊತ್ತಿನ ಮಂಜು ಬೀಳುವುದು ವರ್ಷದಲ್ಲಿ 180 ದಿನಗಳ ರಾತ್ರಿಯಲ್ಲಿ ಎಂದೂ ಅಂದಾಜಿಸಲಾಗಿದೆ. ನಗರಕ್ಕೆ ಮೆಡಿಟೇರಿಯನ್ ಸಮುದ್ರದ ತಂಗಾಳಿಯು ಸುಮಾರಾಗಿ ದಿನದ ಮಧ್ಯಾವಧಿಯಲ್ಲಿ ಬೀಸುತ್ತದೆ. ಅದಲ್ಲದೇ ಬೆಥ್ ಲೆಹೆಮ್ ವಾರ್ಷಿಕವಾಗಿ ಸರಾಸರಿ ಬಿಸಿಗಾಳಿ,ಒಣ,ಮರಳಿನ ಮತ್ತು ಧೂಳು ತುಂಬಿದ ಸುಂಟರ ಗಾಳಿಯನ್ನುಖಾಮಸೀನ್ ಮಾರುತಗಳಿಂದ ಪಡೆಯುತ್ತದೆ,ಇದು ಅರೇಬಿಯನ್ ಮರಭೂಮಿಯಿಂದ ಏಪ್ರಿಲ್ ಮೇ ಮತ್ತು ಮಧ್ಯಾವಧಿಯ ಜೂನ್ ತಿಂಗಳಲ್ಲಿ ಈ ವಾತಾವರಣ ಕಾಣಬರುತ್ತದೆ.

ಜನಸಂಖ್ಯೆಯ ಅಂಕಿ-ಅಂಶದ ವಿವರ

ಜನಸಂಖ್ಯೆ

ವರ್ಷ ಜನಸಂಖ್ಯೆ
1867 3,000-4,000
1945 8,820
1961 22,450
1983 16,300
1997 21,930
2004 (ಯೋಜಿತ) 28,010
2006 (ಯೋಜಿತ) 29,930
2007 25,266

ಒಟ್ಟು PCBS ನ 1997 ರ ಜನಗಣತಿಯಂತೆ ನಗರವು 21,670 ರಷ್ಟು ಜನಸಂಖ್ಯೆ ಹೊಂದಿತ್ತು,ಇದರಲ್ಲಿ 6,570 ನಿರಾಶ್ರಿತರು ನಗರದ ಜನಸಂಖ್ಯೆಯ ಪ್ರಮಾಣದಲ್ಲಿ 30.3% ಪಾಲು ಹೊಂದಿದ್ದರು. ಅದೇ 1997 ರ ಜನಗಣತಿಯಲ್ಲಿ 10 ವರ್ಷಕ್ಕಿಂತ ಕಡಿಮೆ ವಯೋಮಾನದವರು 27.4%,ಇನ್ನು 10 ರಿಂದ 19 ನೆಯ ವಯೋಮಾನದವರು 20% ರಷ್ಟು,ಅಲ್ಲದೇ 20-29 ರ ವಯೋಮಾನದವರು ಒಟ್ಟು 17.3%,ಇನ್ನುಳಿದವರಲ್ಲಿ 30 ರಿಂದ 44 ರ ವಯಸ್ಸಿನವರ ಪಾಲು 17.7% ರಷ್ಟು ಇತ್ತು.ಇನ್ನುಳಿದಂತೆ 45 ರಿಂದ 64 ರ ವಯೋಮಾನದವರ ಶೇಕಡಾವಾರು12.1% ಅಲ್ಲದೇ 65 ಕ್ಕಿಂತ ಮೇಲ್ಪಟ್ಟ ವಯಸ್ಸಿನವರ ಪ್ರಮಾಣ 5.3% ರಷ್ಟಿತ್ತು. ಒಟ್ಟಾರೆ 11,079 ಪುರುಷರು ಮತ್ತು 10,594 ರಷ್ಟು ಮಹಿಳೆಯರಿದ್ದಾರೆ.

PCBS ನ ಅಂದಾಜಿನ ಪ್ರಕಾರ 2006 ರ ಮಧ್ಯಭಾಗದಲ್ಲಿ 29,930 ರಷ್ಟಿತ್ತು. ನಂತರ 2007 ರ PCBS ಜನಗಣತಿಯಲ್ಲಿ,ಒಟ್ಟು ಜನಸಂಖ್ಯೆ 25,266, ಅದರಲ್ಲಿ 12,753 ಪುರುಷರು ಮತ್ತು 12,513 ರಷ್ಟು ಮಹಿಳೆಯರಿದ್ದರು. ಅಲ್ಲಿ ಒಟ್ಟು 6,709 ಗೃಹ ಸಮುಚ್ಛಯಗಳು ಅದರಲ್ಲಿ 5,211 ರಷ್ಟು ಕೇವಲ ಗೃಹೋಪಿಯಾಗಿದ್ದವು. ಪ್ರತಿ ಮನೆಯ ಸರಾಸರಿ ಕುಟುಂಬ ಸದಸ್ಯರ ಸಂಖ್ಯೆಯು 4.8 ರಷ್ಟಿತ್ತು.

ಒಟ್ಟೊಮನ್ ತೆರಿಗೆ ದಾಖಲೆಗಳ ಪ್ರಕಾರ 16 ನೆಯ ಶತಮಾನ ಆರಂಭದಲ್ಲಿ ಕ್ರಿಶ್ಚಿಯನ್ ರು 60% ರಷ್ಟಿದ್ದರೆ ಇಅರ ಅಂತ್ಯಕ್ಕೆ ಮುಸ್ಲಿಮ್ ರು ಮತ್ತು ಕ್ರಿಶ್ಚಿಯನ್ ರ ಜನಸಂಖ್ಯೆ ಸಮ-ಸಮವಾಗಿತ್ತು. ಆದರೆ ಈ ಶತಮಾನದ ಅಂತ್ಯಕ್ಕೆ ಮುಸ್ಲಿಮ ರ ವಾಸವೇ ಅಲ್ಲಿರಲಿಲ್ಲ ಎನ್ನಬಹುದಾಗಿತ್ತು,ಅದೂ ಕೇವಲ ತೆರಿಗೆ ಕಟ್ಟುವ 287 ಪುರುಷರು ಮಾತ್ರ ಇದ್ದರು. ಕ್ರಿಸ್ಚಿಯನ್ ರಂತೆ ಇನ್ನುಳಿದ ಮುಸ್ಲಿಮೇತರರು ಒಟ್ಟೊಮನ್ ಸಾಮ್ರಾಜ್ಯದಲ್ಲಿ ಜಿಜ್ಯಾ ತೆರಿಗೆಯನ್ನು ಕಟ್ಟಬೇಕಾಗಿತ್ತು. ಸುಮಾರು 1867 ರಲ್ಲಿ ಭೇಟಿ ನೀಡಿದ ಅಮೆರಿಕನ್ ನೊಬ್ಬ ಈ ಪಟ್ಟಣದಲ್ಲಿ ಒಟ್ಟು 3,000 ದಿಂದ 4,000 ದಷ್ಟು ಜನಸಂಖ್ಯೆ ಇತ್ತು.ಅದರಲ್ಲಿ 100 ಜನ ಪ್ರೊಟೆಸ್ಟಂಟ್ಸ್ ,300 ಮುಸ್ಲಿಮ್ ರು "ಇನ್ನುಳಿದವರು ಲ್ಯಾಟಿನ್ ಮತ್ತು ಗ್ರೀಕ್ ಚರ್ಚಗೆ ಸಂಬಂಧಪಟ್ಟವರು ಅದರಲ್ಲಿ ಕೆಲವರು ಆರ್ಮೇನಿಯನ್ಸ್ ಗಳೂ ಇದ್ದರು ಎಂದು ವಿವರಿಸಿದ್ದಾನೆ.

ಆಗ 1948 ರಲ್ಲಿ ಧಾರ್ಮಿಕ ರಚನೆಯು ನಗರದಲ್ಲಿ 85% ರಷ್ಟು ಕ್ರಿಶ್ಚಿಯನ್ಸ್ ,ಅವರು ಬಹುತೇಕ ಗ್ರೀಕ್ ಸಂಪ್ರದಾಯವಾದಿಗಳು ಮತ್ತು ರೊಮನ್ ಕ್ಯಾಥೊಲಿಕ್ ಪಂಥದವರಾಗಿದ್ದರು.ಅಲ್ಲದೇ 13% ರಷ್ಟು ಸುನ್ನಿ ಮುಸ್ಲಿಮ್ ರಿದ್ದರು. ಆದರೆ 2005 ರ ಹೊತ್ತಿಗೆ ಕ್ರಿಸ್ಚಿಯನ್ ರಹವಾಸಿಗಳ ಸಂಖ್ಯೆಯು ಕೇವಲ 20% ರಷ್ಟಿದ್ದುದು ನಾಟಕೀಯ ಬೆಳವಣಿಗೆಯೊಂದರಲ್ಲಿ ಕಡಿಮೆಯಾಯಿತು. ಹಳೆಯ ನಗರದಲ್ಲಿ ಒಂದೇ ಒಂದು ಒಮರ್ ಮಸೀದೆ ಇತ್ತು,ಅದೂ ಮ್ಯಾಂಗೆರ್ ಸ್ಕ್ವಾಯೆರ್ ನಲ್ಲಿ ನಿರ್ಮಿಸಲ್ಪಟ್ಟಿದೆ.

ಕ್ರಿಸ್ಚಿಯನ್ ಜನಸಂಖ್ಯೆ

ಬೆಥ್ ಲೆಹೆಮ್ ನ ಬಹುಸಂಖ್ಯಾತ ಕ್ರಿಶ್ಚಿಯನ್ ರು ತಾವು ಅರಬ್ ಕ್ರಿಶ್ಚಿಯನ್ ರೇ ತಮ್ಮ ಪೂರ್ವಜರೆಂದು ಹೇಳಿಕೊಳ್ಳುತ್ತಾರೆ,ತಾವು ಅರೇಬಿಯನ್ ದ್ವೀಪದಿಂದ ಬಂದವರೆನ್ನುತ್ತಾರೆ.ಇನ್ನುಳಿದ ನಗರದ ಅತಿ ದೊಡ್ಡ ಪ್ರಮಾಣದ ಜನಸಂಖ್ಯೆ ಇರುವ ಅಲ್ -ಫರಾಹಿಯಾ ಮತ್ತು ಅಲ್ -ನಜ್ರೆತ್ ಇದರಲ್ಲಿ ಸೇರಿವೆ. ಅವರ ಹಿಂದಿನವರ ಹೇಳಿಕೆಯಂತೆ ತಾವು ಘಸ್ಸನಿದ್ಸ್ ನಿಂದ ಮೂಲದಿಂದ ಬಂದಿದ್ದೇವೆ. ಇವರು ಯೆಮೆನ್ ನಿಂದ ವಲಸೆ ಬಂದಿದ್ದಾರೆ.ಪ್ರಸ್ತುತ ಬಂದಿರುವ ವಾಡಿ ಮುಸಾ ಪ್ರದೇಶವು ಸದ್ಯ ಜೊರ್ಡಾನ್ ನಲ್ಲಿದೆ,ಹೀಗೆ ನಜರೆಹ್ ಗಳು ದಕ್ಷಿಣದ ಹೆಜಾಜ್ ನಲ್ಲಿರುವ ಅರಬ್ ನಜ್ರಾನ್ ನಿಂದ ಬಂದಿದ್ದಾರೆ. ಇನ್ನೊಂದು ಬೆಥ್ ಲೆಹೆಮ್ ನ ರಹವಾಸಿ ವರ್ಗ ಅಲ್ -ಅನಂಟ್ರೆಹ್ ಅವರೂ ಕೂಡಾ ಅರೇಬಿಯನ್ ದ್ವೀಪದಿಂದ ಬಂದಿದ್ದಾರೆ.

ಆದರೆ ಬೆಥ್ ಲೆಹೆಮ್ನಲ್ಲಿ ಕ್ರಿಶ್ಚಿಯನ್ ರ ಪ್ರಮಾಣವು ಪ್ರತಿವರ್ಷ ಕಡಿಮೆಯಾಗುತ್ತಾ ನಡೆದಿರುವುದು ಅಲ್ಲಿನ ನಿರಂತರ ವಲಸೆಯೇ ಕಾರಣವಾಗಿದೆ. ಮುಸ್ಲಿಮ್ ರಿಗೆ ಹೋಲಿಸಿದರೆ ಕ್ರ್ಶ್ಚಿಯನ್ ರ ಜನನ ಪ್ರಮಾಣ ಅತ್ಯಲ್ಪವಾಗಿರುವುದೂ ಇದಕ್ಕೆ ಕಾರಣವಾಗಿದೆ. ಹಾಗೆ ನೋಡಿದರೆ ಕ್ರಿಶ್ಚಿಯನ್ ರು 1947 ರಲ್ಲಿ 75% ರಷ್ಟಿದ್ದರು,ಆದರೆ 1998 ರ ಹೊತ್ತಿಗೆ ಅವರ ಶೇಕಡಾವಾರು ಪ್ರಮಾಣ 23% ರಷ್ಟಾಗಿದೆ. ಸದ್ಯದ ಬೆಥ್ ಲೆಹೆಮ್ ನ ಮೇಯರ್ ವಿಕ್ಟರ್ ಬಾಟಾರ್ಸೆಹ್ ಅವರು ವೈಸ್ ಆಫ್ ಅಮೆರಿಕಾಗೆ ಹೇಳಿಕೆ ನೀಡಿದ ಪ್ರಕಾರ ಇಲ್ಲಿನ ಒತ್ತಡ,ಮಾನಸಿಕ ನೆಮ್ಮದಿ ಇಲ್ಲದಿರುವುದು ಮತ್ತು ವಿಪರೀತ ಆರ್ಥಿಕ ಕೊರತೆ ಇಲ್ಲಿವರನ್ನು ಬೇರೆಡೆಗೆ ಹೋಗುವಂತೆ ಮಾಡುತ್ತದೆ.ಅದಲ್ಲದೇ ಕ್ರಿಶ್ಚಿಯನ್ ರು ಯಾವಾಗಲೂ ಅಲ್ಪಸಂಖ್ಯಾತರಾಗಿಯೇ" ಬದುಕಿದ್ದಾರೆಂದು ಅವರು ಹೇಳುತ್ತಾರೆ.

ಪ್ಯಾಲಸ್ಟಿಯನ್ ಅಥಾರಾಟಿ ನಿಯಮದ ಪ್ರಕಾರ ಕ್ರಿಸ್ವ್ಚಿಯನ್ ರಿಗೆ ಸಮನಾದ ನ್ಯಾಯ ದೊರಕಿಸಬೇಕೆಂಬ ನಿಯಮಾವಳಿಗಳಿದ್ದರೂ ಬೆಥ್ ಲೆಹೆಮ್ ಪ್ರದೇಶದ ಕ್ರಿಶ್ಚಿಯನ್ ರ ವಿರುದ್ದ ಆಗಾಗ ಪ್ರೆವೆಂಟಿವ್ ಸೆಕ್ಯುರಿಟಿ ಸರ್ವಿಸಿಸ್ ಮತ್ತು ಉಗ್ರರ ಸಂಘಟಣೆಗಳು ನಡೆಸುವ ಹಿಂಸಾಚಾರಗಳು ವಿರೋಧಗಳು ಮತ್ತು ಕಿರುಕಳಗಳು ಅವರನ್ನು ಅಲ್ಲಿಂದ ಪಲಾಯನಗೊಳ್ಳುವಂತೆ ಪ್ರಚೋದಿಸುತ್ತವೆ.

ಮತ್ತೆ ಎರಡನೆಯ ಬಾರಿಗೆ ಸಂಘಟಿತ ಅರಬ್ ರ ವಿರೋಧವು ಪ್ರವಾಸೋದ್ಯಮದ ಆದಾಯಕ್ಕೆ ಕೊಕ್ಕೆ ಹಾಕಿತಲ್ಲದೇ ಕ್ರಿಶ್ಚಿಯನ್ ಅಲ್ಪಸಂಖ್ಯಾತರು ಮತ್ತಷ್ಟು ಕಷ್ಟಕ್ಕೀಡಾದರು.ಅಲಿನ ಹಲವಾರು ಹೊಟೆಲ್ ಮತ್ತು ರೆಸ್ಟಾರಂಟ್ ಗಳ ಒಡೆಯರಾಗಿದ್ದ ಕ್ರಿಶ್ಚಿಯನ್ನರಿಗೆ ತೀವ್ರತರ ಆರ್ಥಿಕ ಬಿಕ್ಕಟ್ಟು ಉಂಟಾಯಿತು.ಸಾವಿರಾರು ಪ್ರವಾಸಿಗಳಿಗೆ ಆದರ ಸತ್ಕಾರಗಳಿಂದ ಆದಾಯ ಮಾಡುತ್ತಿದ್ದ ಅವರು ಕಂಗಾಲಾದರು. ಒಂದು ಅಂಕಿಸಂಖ್ಯಾ ವಿಶ್ಲೇಷಣದ ವಿವರದ ಪ್ರಕಾರ ಕ್ರಿಶ್ಚಿಯನ್ಸ್ ಮೊದಲೇ ಮಧ್ಯಮ ವರ್ಗದ ಜನ ತಮ್ಮ ಆರ್ಥಿಕ ಮತ್ತು ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲಾಗದೇ ಅಲ್ಲಿಂದ ವಲಸೆ ಹೋಗಲು ಯತ್ನಿಸಿದರು.ಮಧ್ಯಮ ವರ್ಗದ ಜನರ ಮನೋಧರ್ಮ ಮತ್ತು ಉನ್ನತ ಶಿಕ್ಷಣದ ಅವಕಾಶಗಳು ಇಲ್ಲದ್ದರಿಂದ ಅಲ್ಲಿನ ಸಮುದಾಯ ಬೆಥ್ ಲೆಹೆಮ್ ನ್ನು ಬಿಟ್ಟು ಹೊರಡಲಾರಂಭಿಸಿದರು. ಎರಡನೆಯ ಬಾರಿಗೆ ನಡೆದ ಈ ಅರಬ್ ಸಂಘಟನೆಗಳ ಒಗ್ಗಟ್ಟದ ಹೋರಾಟವು ಸುಮಾಅರು 10% ರಷ್ತು ಕ್ರಿಶ್ಚಿಯನ್ ರು ನಗರ ಬಿಟ್ಟು ಹೋಗುವಂತಾಯಿತು.

ಇತ್ತೀಚಿಗೆ ಬೆಥ್ ಲೆಹೆಮ್ ನಲ್ಲಿನ ಪ್ಯಾಲೇಸ್ಟಿನಿಯನ್ ಸೆಂಟರ್ ಫಾರ್ ರಿಸರ್ಚ್ ಅಂಡ್ ಕಲ್ಚರಲ್ ಡೈಲಾಗ್ 2006 ರಲ್ಲಿ ಮಾಡಿದ ಸರ್ವೇಕ್ಷಣೆಯಂತೆ ಕ್ರಿಶ್ಚಿಯನ್ ರಿಗೆ ಸುಮಾರು 90% ರಷ್ಟು ಮುಸ್ಲಿಮ್ ಸ್ನೇಹಿತರಿದ್ದಾರೆ,ಪ್ಯಾಲೇಸ್ಟಿನಿಯನ್ ನ್ಯಾಶನಲ್ ಅಥಾರಟಿ ಕ್ರಿಶ್ಚಿಯನ್ ರನ್ನು ಗೌರಯುತವಾಗಿ ನೋಡುತ್ತದೆ, ಎಂದು 73.3% ರಷ್ಟು ಜನ ಅಭಿಪ್ರಾಯಪಡುತ್ತಾರೆ,ಅದಲ್ಲದೇ ಪ್ರವಾಸಕ್ಕಾಗಿ ಇಸ್ರೇಲ್ ನ ನಿರ್ಭಂಧನೆಗಳಿಗಾಗಿ ವಲಸೆ ನಿರಂತರವಾಗಿರುತ್ತದೆ ಎಂದು 78% ರಷ್ಟು ಜನರ ಅಭಿಪ್ರಾಯವಾಗಿದೆ.

ಹಮಾಸ್ ಕೂಡಾ ಸರ್ಕಾರದ ಸವಲತ್ತುಗಳ ಬಗ್ಗೆ ಕ್ರಿಶ್ಚಿಯನ್ ಜನಸಂಖ್ಯೆಗೆ ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆಯಾದರೂ ಅದು ಹಲವಾರು ಬಾರಿ ಟೀಕೆಗೆ ಒಳಗಾಗಿದೆ.ಉದಾಹರಣೆಗೆ ಕ್ರಿಶ್ಚಿಯನ್ ವಾಸಸ್ಥಾನದ ಹತ್ತಿರದ ಮಸೀದೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಕುರಿತ ವಾದ-ವಿವಾದ ಬಗ್ಗೆ ತಕರಾರುಗಳು ಉದ್ಭವಿಸಿವೆ. ಜೆರುಸ್ಲೇಮ್ ಪೊಸ್ಟ್ ವರದಿ ಪ್ರಕಾರ ಕ್ರಿಶ್ಚಿಯನ್ನರಿಗೆ ಕಾನೂನು-ಸುವ್ಯವಸ್ಥೆ ಬಗ್ಗೆ ಅಷ್ಟಾಗಿ ಭದ್ರತೆ ಇಲ್ಲ.ಅಲ್ಲಿನ ನ್ಯಾಯಾಲಯಗಳು ಪರಿಣಾಮಕಾರಿಯಾಗಿ ಕ್ರಿಶ್ಚಿಯನ್ ರ ಪ್ರಕರಣಗಳ ಬಗ್ಗೆ ಆಸಕ್ತಿ ತೋರದಿರುವ ಕಾರಣದಿಂದ ವಲಸೆ ಹೆಚ್ಚಾಗಿದೆ.ಇದರಿಂದಾಗಿ ಈ ಸಮುದಾಯವು ತನ್ನಷ್ಟಟಕ್ಕೆ ತಾನೇ ನಿಲ್ಲಲಾಗದು ಎಂಬ ಪರಿಸ್ಥಿತಿ ಉಂಟಾಗಿದೆ.

ಆರ್ಥಿಕತೆ

ಗ್ರಾಹಕರ ಖರೀದಿ ಮತ್ತು ಉದ್ಯಮ

ಕ್ರಿಸ್ಮಸ್ ಸಂದರ್ಭದಲ್ಲಿ ಬೆಥ್ ಲೆಹೆಮ್ ನಲ್ಲಿ ಗ್ರಾಹಕರ ಭರಾಟೆ ಜಾಸ್ತಿ,ಇದೊಂದು ಪ್ರಮುಖ ವ್ಯಾಪಾರಿ ತಾಣವಾಗಿದೆ. ನಗರದ ಪ್ರಮುಖ ಬೀದಿಗಳು ಮತ್ತು ಹಳೆ ಮಾರುಕಟ್ಟೆಗಳು ಕರಕುಶಲ ವಸ್ತುಗಳ ಮಾರಾಟ ನಡೆಯುತ್ತದೆ.ಮಧ್ಯಪೂರ್ವ ಮಣ್ಣಿನ ಪಾತ್ರೆಗಳು,ಮಸಾಲೆಗಳು ಹಾಗು ರತ್ನಾಭರಣಗಳ ಮಾರಾಟವು ಸಾಮಾನ್ಯವಾಗಿದೆ.ಬಕ್ಲವಾದಂತಹ ಸಿಹಿ ತಿಂಡಿಗಳು ಅಲ್ಲಿನ ಗ್ರಾಹಕರ ಆಕರ್ಷಣೆಗಳಾಗಿವೆ.

ಕರಕುಶಲ ವಸ್ತುಗಳ ತಯಾರಿಕೆಯ ಸಂಪ್ರದಾಯವು ನಗರದ ಸ್ಥಾಪನೆಯ ಕಾಲದಿಂದಲೂ ಅವ್ಯಾಹತವಾಗಿದೆ. ಬೆಥ್ ಲೆಹೆಮ್ ನಲ್ಲಿರುವ ಅಸಂಖ್ಯಾತ ಅಂಗಡಿಗಳು ಅಲ್ಲಿನ ಪ್ರಮುಖ ಮರಮುಟ್ಟು ಆಲಿವ್ ನ ಹಲವಾರು ಕಟ್ಟಿಗೆ ಕೆತ್ತನೆ ಕರಕುಶಲ ವಸ್ತುಗಳಿಗೆ ಅವುಗಳ ಕಲಾಪ್ರಕಾರಗಳಿಗೆ ಪ್ರಸಿದ್ದಿ ಪಡೆದಿದೆ. ಬೆಥ್ ಲೆಹೆಮ್ ಗೆ ಭೇಟಿ ನೀಡುವ ಪ್ರವಾಸಿಗರು ಮೊದಲು ಈ ಕಟ್ಟಿಗೆಯ ಕೆತ್ತನೆ ಕರಕುಶಲ ವಸ್ತುಗಳನ್ನು ಖರೀದಿಸುತ್ತಾರೆ. ಧಾರ್ಮಿಕ ಕರಕುಶಲ ವಸ್ತುಗಳ ತಯಾರಿಕೆಯು ಬೆಥ್ ಲೆಹೆಮ್ ನ ಪ್ರಮುಖ ಉದ್ದಿಮೆಯಾಗಿದೆ,ಕೆಲವು ಕೈಯಿಂದ ತಯಾರಿಸಿದ ಮದರ್ ಆಫ್ ಪರ್ಲ್ (ಅತ್ಯಂತ ಸುಂದರ ವರ್ಣರಂಜಿತ ಮುತ್ತಿನ ಕೋಶಗಳು) ಇತ್ಯಾದಿಗಳಿಂದ ಆಭರಣ ತಯಾರಿಕೆ,ಆಲಿವ್ ಮರದ ಮೂರ್ತಿಗಳು,ಪೆಟ್ಟಿಗೆಗಳು ಮತ್ತು ಏಸುವಿನ ಶಿಲುಬೆ (ಕ್ರಾಸಿಸ್ )ಗಳ ನಿರ್ಮಾಣ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಮದರ್ - ಆಫ್ -ಪರ್ಲ್ ಕರಕುಶಲ ಆಭರಣ ತಯಾರಿಕೆಯು ಬೆಥ್ ಲೆಹೆಮ್ ನಲ್ಲಿ 14 ನೆಯ ಶತಮಾನದಲ್ಲಿ ಡಾಮಸ್ಕಸ್ ನಿಂದ ಫ್ರಾನ್ಸಿಕೊನ್ ಫ್ರಿಯರ್ ಗಳ ಮೂಲಕ ಪರಿಚಯಗೊಂಡಿತು. ಕಲ್ಲು ಮತ್ತು ಮಾರ್ಬಲ್ -ಕತ್ತರಿಸುವುದು,ಜವಳಿಗಳು,ಪೀಠೋಪಕರಣ ಮತ್ತು ಗೃಹೋಪಯೋಗಿ ಉಪಕರಣಗಳು ಇನ್ನಿತರ ಪ್ರಸ್ತುತ ಉದ್ಯಮಗಳು ಇಲ್ಲಿ ಪ್ರಸಿದ್ದವಾಗಿದೆ. ಬೆಥ್ ಲೆಹೆಮ್ ನಲ್ಲಿ ವರ್ಣಚಿತ್ರಗಳನ್ನು ಸಹ ನಿರ್ಮಿಸಲಾಗುತ್ತದೆ,ಪ್ಲ್ಯಾಸ್ಟಿಕ್ ಗಳು,ಸಿಂಥೆಟಿಕ್ ರಬ್ಬರ್ ,ಔಷಧಿಗಳು,ನಿರ್ಮಾಣ ಸಾಮಗ್ರಿಗಳು ಮತ್ತು ಆಹಾರ ಉತ್ಪನ್ನಗಳು ಪ್ರಮುಖವಾಗಿ ಪಾಸ್ತಾ ಮತ್ತು ಮಿಠಾಯಿಗಳು ಅಲ್ಲಿನ ವಿಶೇಷಗಳಾಗಿವೆ.

ಬೆಥ್ ಲೆಹೆಮ್ ನಲ್ಲಿ ವೈನ್ ಉತ್ಪಾದನಾ ಉದ್ಯಮವೂ ಇದೆ.ಕ್ರೆಮಿಸನ್ ವೈನ್ ಕಂಪನಿ ಪ್ರಸಿದ್ದವಾದದ್ದು. ಅದನ್ನು 1885 ರಲ್ಲಿ ಸ್ಥಾಪಿಸಲಾಗಿದ್ದು ಅದು ಈಗ ಹಲವಾರು ದೇಶಗಳಿಗೆ ವೈನ್ ನನ್ನು ರಫ್ತು ಮಾಡುತ್ತದೆ. ಈ ವೈನ್ ಅಥವಾ ಮದ್ಯಸಾರವು ಅಲ್ಲಿನ ಕ್ರೈಸ್ತ ಸನ್ಯಾಸಿಗಳ ಕ್ರೆಮಿಸನ್ ಮಠದಲ್ಲಿ ಭಿಕ್ಷುಗಳು ಅಥವಾ ಸಂತರಿಂದ ಉತ್ಪಾದಿಸಲ್ಪಡುತ್ತದೆ.ಇದಕ್ಕೆ ಬೇಕಾಗುವ ಪ್ರಮುಖ ದ್ರಾಕ್ಷಿಯು ಅಲ್ -ಖದರ್ ಪ್ರದೇಶದಿಂದ ಪಡೆಯಲಾಗುತ್ತದೆ. ಈ ಕ್ರೈಸ್ತ ಸನ್ಯಾಸಿಗಳ ಧಾಮದಿಂದ ಪ್ರ್ಫತಿವರ?

Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
Timothy Greig
11 January 2016
Get coffee or falafel from a street vender. I want to come back and visit the old town.
Safwan
9 February 2017
The best city on the world
Angeline Teoh
9 December 2019
Pretty little town which consists mostly of Palestinians in this area. Most of the people staying here are Muslims. It can be quiet during the night but also peaceful
Damian Brooks
16 June 2013
Don't catch a taxi from the bus stop, it's not far to walk and an interesting walk
Christian
13 October 2014
One of the must see places when you visited Israel. Prepare uour camera since getting a good shot is not that easy
Olga ????????
11 October 2021
Интересный старый город. Прямо напротив Церкви Рождества Христова находится мечеть. Своеобразно было слышать одновременно звон колоколов и пение муэдзина. Всё тихо, мирно.
Saint Gabriel Hotel

starting $130

Jacir Palace Hotel Bethlehem

starting $140

Manger Square Hotel

starting $90

Grand Park Hotel Bethlehem

starting $99

Ararat Hotel

starting $100

Alexander Hotel

starting $70

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Mosque of Omar (Bethlehem)

The Mosque of Omar (Arabic: مسجد عمر‎) is the oldest and only mosque i

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Church of the Nativity

The Church of the Nativity (العربية. 'كنيسة المهد') in Bethlehem is

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Cremisan

The Cremisan Monastery is a Salesian monastery in the West Bank, near

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Herodium

Herodium or Herodion (הרודיון, Arabic: هيروديون, Jabal al-Fraidees) i

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Judean Mountains

The Judean Mountains, (العربية. جبال الخليل; Transliteration:

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Jerusalem Biblical Zoo

The Tisch Family Zoological Gardens in Jerusalem - The Biblical Zoo,

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Monastery of the Cross

The Monastery of the Cross is a monastery in the Nayot neighborhood of

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಇಸ್ರೇಲ್ ಮ್ಯೂಸಿಯಂ

ಇಸ್ರೇಲ್ ಮ್ಯೂಸಿಯಂ (ಹಿಬ್ರೂ: מוזיאון ישראל, ירושלים, Muze'on Yisrael,

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Technion – Israel Institute of Technology

The Technion – Israel Institute of Technology (Hebrew:

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Ein Kerem

Ein Kerem (עברית. עין כרם; العربية. عين كارم, lit. Spring of the Vine

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Yasaka Shrine

Yasaka ShrineШаблон:Nihongo, once called Gion Shrine, is a Shint

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Mashhad

Mashhad (مشهد, literally the place of martyrdom) is the second lar

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Ouranoupoli

Ouranoupoli (Greek: Ουρανούπολη, formerly Ouranopolis) is an ancient

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ