ಮಿಸ್ಸೂರಿ ಬಟಾನಿಕಲ್ ಗಾರ್ಡನ್

ಮಿಸ್ಸೂರಿ ಬಟಾನಿಕಲ್ ಗಾರ್ಡನ್ ಅಮೆರಿಕ ದೇಶದ ಮಿಸ್ಸೂರಿ ರಾಜ್ಯದ ಸೇಂಟ್ ಲೂಯಿಸ್ ನಗರದಲ್ಲಿರುವ ೧೮೫೯ರಲ್ಲಿ ಸ್ಥಾಪನೆಗೊಂಡ ಒಂದು ಸಸ್ಯಾಗಾರ.ಇಲ್ಲಿನ ಪುಸ್ತಕಭಂಡಾರ ವನ್ನು ಶಿಕ್ಷಣಾರ್ಥಿಗಳು , ಸಂಶೋಧಕರು, ಸಂದರ್ಶಿಸಬಹುದು. ಅದೊಂದು ಅಪರೂಪದ ದೊಡ್ಡ ಹವಾನಿಯಂತ್ರಿತ, 'ತೇವಾಂಶನಿಯಂತ್ರಿತ ನಿಶ್ಯಭ್ದವಾದ ಪುಸ್ತಕಗಳ ಕೋಣೆ,' ಒಳಗೆ ಪ್ರವೇಶಿಸಲು ಲೋಹ-ಶೋಧಕ ಯಂತ್ರಗಳ ಮೂಲಕ ಮತ್ತೊಂದು ಕೋಣೆದಾಟಬೇಕು. ಅಲ್ಲಿ ನಮ್ಮ 'ಸದಸ್ಯತ್ವದ ಪರವಾನಗಿ ಕಾರ್ಡ್,' ನ್ನು 'ನಿಯಮಿತ ಸ್ಲಾಟ್' ಒಳಗೆ ತೂರಿಸಿದರೆ, ಬಾಗಿಲು ತೆಗೆದುಕೊಳ್ಳುತ್ತದೆ. ಬರೆಯಲು ಪೆನ್ ನ ಅವಶ್ಯಕತೆ ಯಿಲ್ಲ. ಒಂದು ಬಹುರಾಷ್ಟ್ರೀಯ ಕಂಪೆನಿಯೊಂದರ ರಹಸ್ಯ ಕೋಣೆಗೆ ಕಾಲಿಟ್ಟರೆ ಆಗುವ ಅನುಭವ. ಸುಮಾರು ೫೦೦ ವರ್ಷಗಳ ಹಿಂದಿನ ಪುಸ್ತಕದ ಒಂದೇ ಪ್ರತಿಯಿರುವಾಗ ಅದನ್ನು ಮುಟ್ಟಲು ಅನುಮತಿಯಿಲ್ಲ. ಆದರೆ ಇದರ ಕಂಪ್ಯೂಟರೀಕೃತ ಪುಸ್ತಕ ಲಭ್ಯವಿದೆ. ಅದನ್ನು ನಾವು ಓದಬಹುದು. ಅಲ್ಲಿ ಕೆಲಸಮಾಡುವ ಲೈಬ್ರೆರಿ ನಿರ್ದೇಶಕರು ಅಲ್ಲಿರುವ ಪುಸ್ತಕಗಳನ್ನು 'ಮುದ್ದಾಂ' ದೇವರಂತೆ ನೋಡಿಕೊಳ್ಳುತ್ತಿದ್ದಾರೆ. ಇವನ್ನು ನೋಡಿದಾಗ ನಮ್ಮದೇಶದ ಸಾವಿರಾರು ಅಮೂಲ್ಯ ಪುಸ್ತಕಗಳು ಹಾಗೂ ತಾಳೆಗರಿಯ ಹಸ್ತಲೇಖನದ ಪ್ರತಿಗಳು ಧೂಳುಹಿಡಿದು ಕಪಾಟಿನಲ್ಲಿ ಬೆಳಕುಕಾಣದೆ ಅಳಿವಿನ ಅಂಚಿನಲ್ಲಿರುವ ಸನ್ನಿವೇಷದ ಅರಿವಾಗುತ್ತದೆ.

ಪುರಾತನ ವೈಶಿಷ್ಠ್ಯಪೂರ್ಣ ಪುಸ್ತಕಗಳು, ಅತ್ಯಾಧುನಿಕ ಸೌಲಭ್ಯ-ಸವಲತ್ತುಗಳು

೧೮೫೦ ರಲ್ಲಿ ಆರಂಭಗೊಂಡ ಈ ಲೈಬ್ರರಿಯಲ್ಲಿ ೩ ವಿಭಾಗಗಳಿವೆ. ೧. ಲೈಬ್ರರಿ. ೨. ಅಪರೂಪದ ಪುಸ್ತಕಗಳ ಸಂಗ್ರಹ. ೩. ಹರ್ಬೇರಿಯಂ, ಅಂದರೆ, ಶುಷ್ಕಸಸ್ಯಗಳ ಸಸ್ಯಭಾಗಗಳ ಸಂಗ್ರಹ. ವಿಶ್ವದ ಸಸ್ಯಸಂಬಂಧೀ ಪುಸ್ತಕಸಂಗ್ರಹಾಲಯಗಳಲ್ಲಿ ಇದೂಒಂದು. ಇಲ್ಲಿರುವ ಪುಸ್ತಕಗಳ ಸಂಖ್ಯೆ :

  • ೧. ೧,೬೦,೦೦೦ ಪುಸ್ತಕಗಳು
  • ೨. ೨,೦೦೦ 'ಸಂಶೋಧನಾ ನಿಯತಕಾಲಿಕೆಗಳು'.
  • ೩. ೩,೦೦೦ 'ರೆಫೆರೆನ್ಸ್ ಪುಸ್ತಕ-ಸಂಗ್ರಹಗಳು'.

ಪುಸ್ತಕಗಳನ್ನು ಕಪಾಟಿನಲ್ಲಿ ಜೋಡಿಸಿಟ್ಟಿರುವ ಅನನ್ಯ ವ್ಯವಸ್ಥೆ

೩-೪ ಕಪಾಟುಗಳನ್ನು ಹಿಡಿಕೆಯ ಸಹಾಯದಿಂದ ಸರಿದಾಡಿ ಬಳಸುವ ಕಪಾಟುಗಳು ಜಾಗದ ಸದುಪಯೋಗಮಾಡಲು, ಸಹಾಯಮಾಡುತ್ತವೆ. ಕಡಿಮೆಜಾಗದಲ್ಲಿ ಹೆಚ್ಚುಹೆಚ್ಚು ಕಪಾಟುಗಳನ್ನು ಅಡಕಮಾಡಬಹುದು. ಯಾವಪುಸ್ತಕವನ್ನೂ ಹುಡುಕುವ ಅಗತ್ಯವಿಲ್ಲ. ಕಂಪ್ಯೂಟರ್ ನಲ್ಲಿ ಟೈಪಿಸಿದರೆ ಕೂಡಲೇ ಬೇಕಾದ ಪುಸ್ತಕವೆಲ್ಲಿದೆ ಯೆನ್ನುವುದು ಕ್ಷಣಮಾತ್ರದಲ್ಲಿ ಗೊತ್ತಾಗುತ್ತದೆ. 'ಸಸ್ಯಶಾಸ್ತ್ರದ ಪಿತಾಮಹ, ಲಿನಾಯಸ್ ' ಗಿಂತಾ ಹಿಂದಿನ ೪೬೩ ಪುಸ್ತಕಗಳು ಹಾಗೂ ಲಿನಾಯಸ್ ಮತ್ತು ಆತನ ವಿದ್ಯಾರ್ಥಿಗಳು ಕೆಲಸಮಾಡಿ ದಾಖಲಿಸಿದಂತಹ, ೯೦೦ ಪುಸ್ತಕಗಳಿವೆ. 'ವಿಕಾಸವಾದದ ಜನಕ, ಚಾರ್ಲ್ಸ್ ಡಾರ್ವಿನ್' ನ " Origin of Species by Natural Selection " ಪುಸ್ತಕದ ಮೊದಲ ಪ್ರತಿ ಈ ಲೈಬ್ರರಿಯಲ್ಲಿ ಲಭ್ಯವಿದೆ. ಹಲವಾರು ಪ್ರಖ್ಯಾತ ವಿಜ್ಞಾನಿಗಳ ಸ್ವಂತ ಪುಸ್ತಕಗಳ ಸಂಗ್ರಹವಿದೆ. ಜೊತೆಗೆ, ೧,೦೦೦ ಸಂಪೂರ್ಣ ಸಸ್ಯಚಿತ್ರಳು, ೭, ೦೦೦ ಸಸ್ಯಸಂಬಂಧೀಚಿತ್ರಗಳು ವಿವಿಧವರ್ಣಗಳಲ್ಲಿ ಲಭ್ಯವಿವೆ. ೭,೦೦೦ ವಿವಿಧ ಮ್ಯಾಪ್ ಗಳೂ ಇವೆ. ಅಮೆರಿಕಾ, ಯೂರೋಪ್, ಹಾಗೂ ವಿಶ್ವದ ಎಲ್ಲಾದೇಶಗಳ ಸಸ್ಯಶಾಸ್ತ್ರದ ಪುಸ್ತಕಗಳಿವೆ. ಈ ಸಸ್ಯಸ್ಶಾಸ್ತ್ರದ ವಿಭಾಗದ ಭಾರತದಲ್ಲೂ ತಕ್ಷಣಕ್ಕೆ ಲಭ್ಯವಾಗದ ಹೊತ್ತಿಗೆಗಳು ಈ ಪುಸ್ತಕಾಲಯದಲ್ಲಿ ಸುಲಭವಾಗಿ ದೊರೆಯುತ್ತವೆ. ಚಿಕ್ಕ ಪ್ಲಾಸ್ಟಿಕ್ ಶೀಟ್ ಗಳಮೇಲೆ ಮುದ್ರಿತ ಸಸ್ಯಗಳ ಮಾಹಿತಿಗಳೆಲ್ಲಾ ದೊರೆಯುತ್ತವೆ. ಇಂತಹ ೫,೦೦೦ ಪುಸ್ತಕಗಳನ್ನೊಳಗೊಂಡಿವೆ. ವಿಶಿಷ್ಠ ಓದುವ ಸಾಧನಗಳೂ ಲಭ್ಯವಿದೆ. ಅತಿವಿರಳ ಪುಸ್ತಕಗಳ 'ಕಂಪ್ಯೂಟರೀಕರಣದ ಕಾರ್ಯ-ಯೋಜನೆಯೂ' ಕಾರ್ಯಗತವಾಗುತ್ತಿದೆ. ಈಗಾಗಲೇ, ' ಓನ್ ಲೈನ್ ' ನಲ್ಲಿ ಕೆಲವು ಪುಸ್ತಕಗಳು ಸಿಗುತ್ತವೆ. ತೋಟಗಾರಿಕಾ ತಜ್ಞರು, ಸಸ್ಯಶಾಸ್ತ್ರಜ್ಞರು, ಇತಿಹಾಸತಜ್ಞರು, ಮತ್ತು ಸಂಶೋದನಾ ವಿಧ್ಯಾರ್ಥಿಗಳಿಗೆ ಹೇಳಿಮಾಡಿಸಿದ ತಾಣವಿದು. ವಿಶಾಲವಾದ ಓಗುಗರ ಕೋಣೆಯಲ್ಲಿ ನಿಯಮಿತಜಾಗಗಳಲ್ಲೆಲ್ಲಾ ಚೆನ್ನಾಗಿ ಕೆಲಸಮಾಡುವ ಅತ್ಯಾಧುನಿಕ ಕಂಪ್ಯೂಟರಗಳನ್ನು ಸ್ಥಾಪಿಸಿರುವುದು ಗಮನಾರ್ಹವಾದ ಸಂಗತಿಗಳಲ್ಲೊಂದಾಗಿದೆ. ಸಿಬ್ಬಂದಿವರ್ಗದವರು ಸ್ವಲ್ಪ ಅನುಮಾನವಿದ್ದರೂ ತಕ್ಷಣ ಬಂದು ವಿಚಾರಿಸಿ ಸಹಾಯಮಾಡುತ್ತಾರೆ. ಇಂತಹ ಲೈಬ್ರರಿಯನ್ನು ಕೇವಲ ೭-೮ ಜನ ನಗುಮೊಗದ-ಸದಾಸಿದ್ಧರಾಗಿರುವ ಕಾರ್ಯನಿರ್ವಾಕರು ನಿರ್ವಹಿಸುತ್ತಿದ್ದಾರೆ. ಪುಸ್ತಕಗಳ ಒಳಪುಟಗಳು ಮಡಿಸಿಲ್ಲ, ಹರಿದಿಲ್ಲ. ಪುಸ್ತಕದಲ್ಲಿ ಯಾರೂ ಶಾಯಿಯಿಂದ ಬರೆದು ಕೊಳೆಮಾಡಿಲ್ಲ. ಪೆನ್ ಯಾರೂ ಬಳಸುವಂತಿಲ್ಲ. ಕೇವಲ ಪೆನ್ಸಿಲ್ ಮಾತ್ರಬಳಸಬೇಕು.

ಹರ್ಬೇರಿಯಂ ಸಸ್ಯ-ಪ್ರಜಾತಿಗಳು

ಒಣ/ಶುಷ್ಕ ಸಸ್ಯಸಂಗ್ರಹಾಲಯದಲ್ಲಿರುವ ಹರ್ಬೇರಿಯಂ ಸಸ್ಯ-ಪ್ರಜಾತಿಯಲ್ಲಿ ೩,೮೭,೦೪೧ 'ಬ್ರಯೋಫೈಟ್ಸ್,' ಮತ್ತು ೪೮,೩೨,೧೭೫ ಸಸ್ಯಗಳ ಸಂಗ್ರಹವಿದೆ. ಸುಮಾರು ೪,೦೦೦ ಸಸ್ಯಗಳ ಡಿಎನ್ ಎ ನಮೂನೆಗಳಿವೆ. ಆಫ್ರಿಕಾ, ದಕ್ಷಿಣ ಅಮೆರಿಕಾ, ಏಷ್ಯಾ, ಉತ್ತರ ಅಮೆರಿಕಾ, ಯೂರೋಪ್ ಮುಂತಾದ ಎಲ್ಲಾ ಖಂಡದ ಸಸ್ಯಗಳ ಪ್ರತಿಗಳನ್ನು (ಸಣ್ಣ ಟೊಂಗೆ, ಎಲೆ, ಹೂವು, ಹಣ್ಣು,ಕಾಯಿ, ಇತ್ಯಾದಿ) ಕ್ರಮಬದ್ಧವಾಗಿ ಬೇರೆಬೇರೆ ಬಣ್ಣದ ಕಡತಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಅವುಗಳನ್ನು ಹೊರಗೆ ತೆಗೆಯಲು ಮತ್ತು ಸ್ವಸ್ಥಾನದಲ್ಲಿಡಲು ಅನುಕೂಲ. ಅವುಗಳ ಸಂರಕ್ಷಣೆಗೆ ಯಾವುದೇ ರಾಸಾಯನಿಕ ವಸ್ತುಗಳ ಬಳಕೆಮಾಡುತ್ತಿಲ್ಲ. ಬದಲಾಗಿ, ತೇವಂಶ ಮತ್ತು ಉಷ್ಣತೆ ನಿಯಂತ್ರಣಗಳನ್ನು ಮಾಡಿ ಹಾಳಾಗದಂತೆ ತಡೆಯುತ್ತಾರೆ. ಅವುಗಳ 'ಕಂಪ್ಯೂಟರೀಕರಣವೂ' ತ್ವರಿತಗತಿಯಿಂದ ನಡೆಯುತ್ತಿದೆ.

Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
Eric White
19 April 2022
Wait a while… smell the roses… beautiful.
ನಕ್ಷೆ
4300 Shaw Boulevard, St. Louis, MO 63110, ಯುನೈಟೆಡ್ ರಾಜ್ಯದ ನಿರ್ದೇಶನಗಳನ್ನು ಪಡೆ
Sat 10:00 AM–9:00 PM
Sun 10:00 AM–4:00 PM
Mon-Tue 10:00 AM–2:00 PM
Wed 9:00 AM–1:00 PM
Thu 10:00 AM–1:00 PM

Missouri Botanical Garden Rose Gardens ನಲ್ಲಿ Foursquare

ಮಿಸ್ಸೂರಿ ಬಟಾನಿಕಲ್ ಗಾರ್ಡನ್ ನಲ್ಲಿ Facebook

Home2 Suites by Hilton St Louis/Central West End/Forest Park

starting $178

Hampton Inn & Suites St. Louis at Forest Park

starting $208

Parkway Hotel Saint Louis

starting $169

Holiday Inn St. Louis-Forest Park

starting $131

Drury Inn and Suites Near Forest Park

starting $199

Red Roof PLUS St Louis - Forest Park Hampton Avenue

starting $76

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Cathedral Basilica of Saint Louis

The Cathedral Basilica of Saint Louis, also known as the Saint Louis

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
World Chess Hall of Fame

The World Chess Hall of Fame (WCHOF) is a nonprofit, collecting

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Saint Louis University Museum of Art

The Saint Louis University Museum of Art is the formal art museum for

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Continental Life Building

The Continental-Life Building, also known as the Continental Building,

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Monsanto Insectarium

The Monsanto Insectarium is an insectarium located within the St.

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Fox Theatre (St. Louis)

The Fox Theatre, a former movie palace, is a performing arts center

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Third Baptist Church (St. Louis)

Third Baptist Church is a Baptist church in the United States located

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Saint Louis Art Museum

The Saint Louis Art Museum is one of the principal U.S. art museums,

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಕ್ಯೂ ಸಸ್ಯೋದ್ಯಾನ

ಕ್ಯೂ ಸಸ್ಯೋದ್ಯಾನ ಲಂಡನ್ ನಗರದ ರಾಯಲ್ ಬೊಟಾನಿಕಲ್ ಗಾರ್ಡನ್ನಿನ ಜನಪ್ರ

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Jardin botanique d'Èze

The Jardin botanique d'Èze, also called the Jardin exotique d'Èze or s

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Jardin des Plantes

The Jardin des Plantes is the main botanical garden in France. It is

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Royal Botanic Garden Edinburgh

The Royal Botanic Garden Edinburgh is a scientific centre for the

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Cambridge University Botanic Garden

The Cambridge University Botanic Garden is a botanical garden located

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ