Town squares in London

ಟ್ರಾಫಲ್ಗರ್‌‌ ಚೌಕ

7.8/10

ಟ್ರಾಫಲ್ಗರ್‌‌ ಚೌಕ ಎಂಬುದು ಇಂಗ್ಲೆಂಡ್‌‌ನ ಮಧ್ಯ ಲಂಡನ್‌‌ನಲ್ಲಿರುವ ಒಂದು ಸಾರ್ವಜನಿಕ ಸ್ಥಳ. ಲಂಡನ್‌‌ನ ಹೃದಯಭಾಗದಲ್ಲಿರುವುದರಿಂದ, ಇದೊಂದು ಪ್ರವಾಸಿ ಆಕರ್ಷಣೆಯ ತಾಣವಾಗಿದ್ದು ಯುನೈಟೆಡ್‌‌ ಕಿಂಗ್‌ಡಮ್‌ ಹಾಗೂ ವಿಶ್ವದಲ್ಲಿರುವ ಬಹುತೇಕ ಪ್ರಖ್ಯಾತ ಚೌಕಗಳಲ್ಲಿ ಒಂದಾಗಿದೆ. ಇದರ ಕೇಂದ್ರಭಾಗದಲ್ಲಿ ನೆಲ್ಸನ್‌‌ಸ್‌ ಕಾಲಮ್‌ ಇದ್ದು, ಅದಕ್ಕೆ ಅದರ ಪೀಠದ ಮೇಲೆ ನಾಲ್ಕು ಸಿಂಹ ಪ್ರತಿಮೆಗಳು ಕಾವಲಿವೆ. ಚೌಕದಲ್ಲಿಯೇ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಮೆಗಳು ಮತ್ತು ಶಿಲ್ಪಗಳು ಇದ್ದು, ಅವುಗಳಲ್ಲಿ ಒಂದು ಕಂಬದ ಪೀಠವು ಬದಲಾಗುತ್ತಿರುವ ಸಮಕಾಲೀನ ಕಲಾಶೈಲಿಯ ನಿದರ್ಶನಗಳನ್ನು ಪ್ರದರ್ಶಿಸುತ್ತದೆ. ಈ ಚೌಕವನ್ನು ಹೊಸ ವರ್ಷದ ಹಿಂದಿನ ಸಂಜೆಯ ಸಂಭ್ರಮಾಚರಣೆಯಂತಹಾ ಸಮುದಾಯಗಳ ಸಮಾವೇಶಗಳು ಹಾಗೂ ರಾಜಕೀಯ ಪ್ರದರ್ಶನಗಳಿಗೆ ಕೂಡಾ ಬಳಸಲಾಗುತ್ತದೆ.

ಈ ಹೆಸರನ್ನು ನೆಪೋಲಿಯನ್‌ ಮೇಲಿನ ಯುದ್ಧಗಳಲ್ಲಿ ಬ್ರಿಟಿಷ್‌ ನೌಕಾಪಡೆಯ ವಿಜಯವನ್ನು ಪಡೆದ ಟ್ರಾಫಲ್ಗರ್‌‌ ಸಮರದ (೧೮೦೫) ಸ್ಮರಣೆಗೆಂದು ಇಡಲಾಗಿದೆ. ಇದರ ಮೂಲ ಹೆಸರು "ಮಹಾರಾಜ ನಾಲ್ಕನೇ ವಿಲಿಯಮ್‌ರ ಚೌಕ ", ಎಂದಿತ್ತಾದರೂ ಜಾರ್ಜ್‌ ಲೆಡ್‌ವೆಲ್‌ ಟೇಲರ್‌‌ರು "ಟ್ರಾಫಲ್ಗರ್‌‌ ಚೌಕ" ಎಂಬ ಹೆಸರಿಡಲು ಸಲಹೆಯನ್ನಿತ್ತರು.

ಚೌಕದ ಉತ್ತರ ಭಾಗವು ಎಡ್ವರ್ಡ್‌ Iನ ಕಾಲದಿಂದ ರಾಜನ ಅಶ್ವಶಾಲೆಯಾಗಿತ್ತಾದರೆ, ದಕ್ಷಿಣದ ತುದಿಯು ವೆಸ್ಟ್‌‌ಮಿನ್‌‌ಸ್ಟರ್‌ನಿಂದ ಉತ್ತರದೆಡೆಗಿನ ಹಾದಿಯಲ್ಲಿ ಮಹಾನಗರದ ಕಡೆಗಿರುವ ಕರಾವಳಿ ವೈಟ್‌ಹಾಲ್‌ಅನ್ನು ಸಂಧಿಸುವ ಮೊದಲಿನ ಚೇರಿಂಗ್‌ ಕ್ರಾಸ್‌ ಆಗಿತ್ತು. ಈ ಅವಳಿ ನಗರಗಳ ನಡುವಿನ ಸ್ಥಳವಾಗಿರುವುದರಿಂದ, ಇಂದಿನ ದಿನಕ್ಕೂ ಚೇರಿಂಗ್‌ ಕ್ರಾಸ್‌ಅನ್ನು ಎಲ್ಲಾ ಸ್ಥಳಗಳಿಗೂ ಇರುವ ದೂರಗಳನ್ನು ಅಳೆಯುವ ಲಂಡನ್‌‌ನ ಹೃದಯಭಾಗವೆಂಬಂತೆಯೇ ಪರಿಗಣಿಸಲಾಗುತ್ತದೆ.

೧೮೨೦ರ ದಶಕದಲ್ಲಿ ರಾಜ ಪ್ರತಿನಿಧಿಯು ಈ ಪ್ರದೇಶವನ್ನು ಮರು ಅಭಿವೃದ್ಧಿ ಮಾಡಲು ವಾಸ್ತುಶಿಲ್ಪಿ ಜಾನ್‌ ನ್ಯಾಷ್‌‌ರನ್ನು ನೇಮಿಸಿದರು. ನ್ಯಾಷ್‌‌ ತಮ್ಮ ಚೇರಿಂಗ್‌ ಕ್ರಾಸ್‌ ಸುಧಾರಣಾ ಯೋಜನೆಯ ಭಾಗವಾಗಿ ಚೌಕವನ್ನು ಖಾಲಿ ಮಾಡಿಸಿದರು. ಚೌಕದ ಪ್ರಸ್ತುತ ವಾಸ್ತುಸಂರಚನೆಯು ಸರ್‌‌ ಚಾರ್ಲ್ಸ್‌ ಬ್ಯಾರ್ರಿಯವರಿಂದ ನಿರ್ಮಿತವಾದುದು ಹಾಗೂ ಅದು ೧೮೪೫ರಲ್ಲಿ ಪೂರ್ಣಗೊಂಡಿತ್ತು.

ಟ್ರಾಫಲ್ಗರ್‌‌ ಚೌಕವನ್ನು ಪ್ರಭುತ್ವದ ಹಕ್ಕಿನ ಮೂಲಕ ರಾಣಿಯ ಮಾಲೀಕತ್ವದಲ್ಲಿದ್ದು ಗ್ರೇಟರ್‌ ಲಂಡನ್‌‌ ಅಥಾರಿಟಿ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದೆ.

ಸ್ಥೂಲ ಅವಲೋಕನ

ಚೌಕವು ವಿಶಾಲವಾದ ಕೇಂದ್ರ ಸ್ಥಳವನ್ನು ಹೊಂದಿದ್ದು ಮೂರು ಬದಿಗಳಲ್ಲಿ ರಾಜಮಾರ್ಗಗಳಿವೆ ಹಾಗೂ ಉತ್ತರದಲ್ಲಿ ನ್ಯಾಷನಲ್‌ ಗ್ಯಾಲರಿ ವಸ್ತುಸಂಗ್ರಹಾಲಯದ ಮುಂಭಾಗದಲ್ಲಿ ಸೋಪಾನ ಪೀಠ ಪಂಕ್ತಿಗಳಿವೆ. ಚೌಕವನ್ನು ಸುತ್ತುವರೆವ ರಸ್ತೆಗಳು A೪ ರಸ್ತೆಯ ಭಾಗವಾಗುತ್ತವೆ.ಈ ಚೌಕವು ಈ ಮುಂಚೆ ಏಕ-ಮುಖ ಸಂಚಾರ /ಟ್ರಾಫಿಕ್‌ ವ್ಯವಸ್ಥೆಯಿಂದ ಸುತ್ತುವರೆದಿತ್ತು, ಆದರೆ ೨೦೦೩ರಲ್ಲಿ ಪೂರ್ಣಗೊಂಡ ಕಾಮಗಾರಿಗಳು ರಸ್ತೆಗಳ ಅಗಲವನ್ನು ಕಿರಿದುಗೊಳಿಸಿದುದರಿಂದ ಉತ್ತರದ ಪಾರ್ಶ್ವವನ್ನು ಸಂಚಾರಕ್ಕೆ/ಟ್ರಾಫಿಕ್‌ ಗೆ ಮುಚ್ಚುವುದಕ್ಕೆ ಕಾರಣವಾಯಿತು.

ನೆಲ್ಸನ್‌‌ಸ್‌ ಕಾಲಮ್‌ ಸ್ತಂಭವು ಚೌಕದ ಮಧ್ಯಭಾಗದಲ್ಲಿದ್ದು, ಎರಡು ಹಿಂದಿನ ಪೀಟರ್‌ಹೆಡ್‌ ಗ್ರಾನೈಟ್‌ನ (ಈಗ ಕೆನಡಾದಲ್ಲಿವೆ ) ಕಾರಂಜಿಗಳ ಬದಲಿಯಾಗಿ ೧೯೩೭-೯ರ ಅವಧಿಯಲ್ಲಿ ಸರ್‌ ಎಡ್ವಿನ್‌ ಲ್ಯುಟೆನ್ಸ್‌ರು ವಿನ್ಯಾಸಗೊಳಿಸಿದ ಕಾರಂಜಿಗಳಿಂದ ಸುತ್ತುವರೆದಿದ್ದು ಸರ್‌ ಎಡ್ವಿನ್‌ ಲ್ಯಾಂಡ್‌‌ಸೀರ್‌ರು ನಿರ್ಮಿಸಿದ ನಾಲ್ಕು ಭವ್ಯ ಕಂಚಿನ ಸಿಂಹಗಳಿಂದ ರಕ್ಷಣೆಯನ್ನು ಪಡೆದುಕೊಂಡಿದೆ. ಈ ಸ್ತಂಭದ ಮೇಲ್ಭಾಗದಲ್ಲಿ ಟ್ರಾಫಲ್ಗರ್‌‌ನಲ್ಲಿ ಬ್ರಿಟಿಷ್‌ ನೌಕಾಪಡೆಯನ್ನು ಮುನ್ನಡೆಸಿದ ಉಪ ನೌಕಾಧಿಪತಿಯಾಗಿದ್ದ ಹೊರಾಷಿಯೋ ನೆಲ್ಸನ್‌ರ ಪ್ರತಿಮೆಯನ್ನು ಇಡಲಾಗಿದೆ.

ಚೌಕದ ಉತ್ತರ ಬದಿಗೆ ನ್ಯಾಷನಲ್‌ ಗ್ಯಾಲರಿ ವಸ್ತುಸಂಗ್ರಹಾಲಯವಿದ್ದು ಅದರ ಪೂರ್ವಕ್ಕೆ St ಮಾರ್ಟಿನ್‌-ಇನ್‌-ದ-ಫೀಲ್ಡ್‌ಸ್‌ ಚರ್ಚ್‌/ಇಗರ್ಜಿ ಇದೆ. ಚೌಕವು ನೈಋತ್ಯ ದಿಕ್ಕಿನೆಡೆಗೆ ಅಡ್ಮಿರಾಲ್ಟಿ ಆರ್ಚ್‌/ಕಮಾನಿನ ಮೂಲಕದ ಪ್ರವೇಶಿಸಿದಾಗ ದ ಮಾಲ್‌ ಸಮುಚ್ಚಯದ ಬದಿಯಲ್ಲಿ ಕಂಡುಬರುತ್ತದೆ. ಇದರ ದಕ್ಷಿಣ ದಿಕ್ಕಿಗೆ ವೈಟ್‌ಹಾಲ್‌ ಇದ್ದು, ಪೂರ್ವ ದಿಕ್ಕಿನಲ್ಲಿ ಕರಾವಳಿ ಮತ್ತು ದಕ್ಷಿಣ ಆಫ್ರಿಕಾ ಹೌಸ್‌‌ಗಳಿದ್ದರೆ, ಉತ್ತರ ದಿಕ್ಕಿಗೆ ಚೇರಿಂಗ್‌ ಕ್ರಾಸ್‌ ರಸ್ತೆ ಇದ್ದು ಪಶ್ಚಿಮದಲ್ಲಿ ಕೆನಡಾ ಹೌಸ್‌‌ ಕಂಡುಬರುತ್ತದೆ.

ಇತಿಹಾಸಕಾರ ರಾಡ್ನಿ ಮೇಸ್‌ರು ಬರೆದ ರೀತಿಯಲ್ಲಿ ಈ ಚೌಕವು "ರಾಷ್ಟ್ರದ ರಾಜಕೀಯದಲ್ಲಿ ಮಹತ್ವದ ಸ್ಥಾನಗಳನ್ನು ಗಳಿಸಿಕೊಂಡ ಗಣ್ಯ ರಾಷ್ಟ್ರೀಯ ನಾಯಕರುಗಳಿಂದ ಕೂಡಿದ ಕಿಲ್ಲೆಯ ಮೈದಾನ"ವಾಗಿದ್ದ ತನ್ನ ಇತಿಹಾಸದ ,ಆಧಾರದ ಮೇಲೆ ಬೆಳೆಯುತ್ತಾ ಸಂದರ್ಶಕರು ಹಾಗೂ ಲಂಡನ್‌‌ ನಾಗರಿಕರು ಈರ್ವರಿಗೂ ಒಂದೇ ಮಟ್ಟಿಗೆ ಸಾಮಾಜಿಕ ಹಾಗೂ ರಾಜಕೀಯ ಕೇಂದ್ರಸ್ಥಾನ ವಾಗಿಬಿಟ್ಟಿದೆ. ನಾರ್ಮನ್‌ ಲಾಂಗ್‌ಮೇಟ್‌‌ ತಮ್ಮ ಇಫ್‌ ಬ್ರಿಟನ್‌ ಹ್ಯಾಡ್‌ ಫಾಲನ್ ‌‌ (೧೯೭೨) ಕೃತಿಯಲ್ಲಿ ನಿರೂಪಿಸಿದ ಹಾಗೆ ೧೯೪೦ರಲ್ಲಿ ಸಂಭಾವ್ಯ ಜರ್ಮನ್‌ ಆಕ್ರಮಣದ ನಂತರ ನೆಲ್ಸನ್‌‌ಸ್‌ ಕಾಲಮ್‌ ಅನ್ನು ಬರ್ಲಿನ್‌‌ಗೆ ಸ್ಥಳಾಂತರಿಸುವ ಗುಪ್ತ ಯೋಜನೆಗಳನ್ನು ನಾಝಿ SS ಅಭಿವೃದ್ಧಿಪಡಿಸಿದ್ದು ಅದರ ಸಾಂಕೇತಿಕ ಮಹತ್ವವನ್ನು ಸಾರುತ್ತದೆ.

Trafalgar Square, 1908
A 360-degree view of Trafalgar Square just over a century later, in 2009

ಪ್ರತಿಮೆಗಳು ಹಾಗೂ ಸ್ಮಾರಕಗಳು

ಕಂಬದ ಪೀಠಗಳು

ಚೌಕದ ಮೂಲೆಗಳಲ್ಲಿ ನಾಲ್ಕು ಕಂಬದ ಪೀಠಗಳಿವೆ  ; ಕುದುರೆ ಸವಾರಿಗೆ ಸಂಬಂಧಪಟ್ಟ ಪ್ರತಿಮೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು ಎರಡು ಉತ್ತರ ದಿಕ್ಕಿನ ಜೋಡಿಗಳು ದಕ್ಷಿಣದ ಜೋಡಿಗಳಿಗಿಂತ ದೊಡ್ಡದಾಗಿವೆ. ಅವುಗಳಲ್ಲಿ ಮೂರು ಪ್ರತಿಮೆಗಳನ್ನು ಹೊಂದಿವೆ: ಈಶಾನ್ಯ ಮೂಲೆಯಲ್ಲಿ ಸರ್‌ ಫ್ರಾನ್ಸಿಸ್‌ ಚಾಂತ್ರೆ (೧೮೪೦ರ ದಶಕ)ರು ನಿರ್ಮಿಸಿದ್ದ ಜಾರ್ಜ್‌ IV ; ಆಗ್ನೇಯದಲ್ಲಿ ವಿಲಿಯಂ ಬೆಹ್ನೆಸ್‌‌ (೧೮೬೧)ರು ನಿರ್ಮಿಸಿದ್ದ ಹೆನ್ರಿ ಹ್ಯಾವ್‌ಲಾಕ್‌ ಹಾಗೂ ನೈಋತ್ಯದಲ್ಲಿ ಜಾರ್ಜ್‌ ಕ್ಯಾನನ್‌ ಆಡಮ್ಸ್‌ (೧೮೫೫)ರು ನಿರ್ಮಿಸಿದ್ದ ಸರ್‌ ಚಾರ್ಲ್ಸ್‌ ಜೇಮ್ಸ್‌ ನೇಪಿಯೆರ್‌ಗಳು ಇವುಗಳಲ್ಲಿ ಸೇರಿವೆ. ೨೦೦೦ನೆಯ ಇಸವಿಯಲ್ಲಿ, ಆಗಿನ ಲಂಡನ್‌‌ನ ಮಹಾಪೌರ ಕೆನ್‌ ಲಿವಿಂಗ್‌ಸ್ಟೋನ್‌ರು "ಸಾಧಾರಣ ಲಂಡನ್‌‌ ನಾಗರಿಕರಿಗೆ ಗೊತ್ತಿರುವವರ" ಪ್ರತಿಮೆಗಳನ್ನು ಇಬ್ಬರು ಜನರಲ್‌ಗಳ ಬದಲಿಯಾಗಿ ಸ್ಥಾಪಿಸುವ ಇಚ್ಛೆಯನ್ನು ವ್ಯಕ್ತಪಡಿಸಿ ವಿವಾದಕ್ಕೆ ಕಾರಣವಾಗಿದ್ದರು.

ನಾಲ್ಕನೆಯ ಕಂಬದ ಪೀಠ

Main article: Fourth plinth, Trafalgar Square

ವಾಯುವ್ಯ ಮೂಲೆಯಲ್ಲಿರುವ ನಾಲ್ಕನೆಯ ಕಂಬದ ಪೀಠದಲ್ಲಿ ಮೂಲತಃ ವಿಲಿಯಂ IVರ ಪ್ರತಿಮೆಯನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು ಆದರೆ ಭಾಗಶಃ ಅವರ ಅಪಖ್ಯಾತಿಯಿಂದಾಗಿ ಪ್ರತಿಮೆ ನಿರ್ಮಾಣಕ್ಕೆ ಅಗತ್ಯ ಹಣವನ್ನು ಹೊಂದಿಸಲಾಗಿರಲಿಲ್ಲ. ೧೯೯೮ರಿಂದ ಕಂಬದ ಪೀಠವನ್ನು ನಿರ್ದಿಷ್ಟವಾಗಿ ನಿಯೋಜಿಸಿದ ಕಲಾಕೃತಿಗಳ ಸರಣಿಯನ್ನು ಪ್ರದರ್ಶಿಸಲು ಉಪಯೋಗಿಸಲಾಗುತ್ತಿದೆ. ಇದು ಪ್ರಸ್ತುತ ಬೃಹತ್‌ ಗಾಜಿನ ಬಾಟಲ್‌ನಲ್ಲಿ HMS ವಿಜಯದ ೧:೩೦ ಅಳತೆಯ ಪ್ರತಿಕೃತಿಯನ್ನು ಪ್ರದರ್ಶಿಸುತ್ತಿದೆ.

ಇತರೆ ಪ್ರತಿಮೆಗಳು

ನ್ಯಾಷನಲ್‌ ಗ್ಯಾಲರಿ ವಸ್ತುಸಂಗ್ರಹಾಲಯದ ಮುಂಭಾಗದಲ್ಲಿರುವ ಹುಲ್ಲಿನ ಮೈದಾನದಲ್ಲಿ ಎರಡು ಪ್ರತಿಮೆಗಳಿವೆ : ಗ್ರಿನ್‌‌ಲಿಂಗ್‌ ಗಿಬ್ಬನ್ಸ್‌ ನಿರ್ಮಿಸಿದ ಜೇಮ್ಸ್‌ IIರ ಪ್ರತಿಮೆಯು ಮೊಗಸಾಲೆಯ ಪಶ್ಚಿಮಕ್ಕಿದೆ , ಹಾಗೂ ಪೂರ್ವಕ್ಕೆ ಜಾರ್ಜ್‌ ವಾಷಿಂಗ್ಟನ್‌ರ ಪ್ರತಿಮೆಯಿದೆ. ಇದರಲ್ಲಿ ವರ್ಜೀನಿಯಾ ರಾಜ್ಯದಿಂದ ಉಡುಗೊರೆಯಾಗಿ ಪಡೆದ ಎರಡನೆಯದನ್ನು, ಬ್ರಿಟಿಷ್‌ ಮಣ್ಣಿನ ಮೇಲೆ ನಾನು ಮುಂದೆಂದೂ ಕಾಲಿಡಲಾರೆ ಎಂಬ ವಾಷಿಂಗ್ಟನ್‌ರ ಪ್ರತಿಜ್ಞೆಯನ್ನು ಗೌರವಿಸಲೆಂದು ಯುನೈಟೆಡ್‌ ಸ್ಟೇಟ್ಸ್‌ನಿಂದ ತೆಗೆದುಕೊಂಡು ಬಂದ ಮಣ್ಣಿನ ಮೇಲೆ ನಿಲ್ಲಿಸಲಾಗಿದೆ.

ಸೇನಾಧಿಕಾರಿ ಚಾರ್ಲ್ಸ್‌ ಜಾರ್ಜ್‌ ಗಾರ್ಡನ್‌ನ ಪ್ರತಿಮೆಯನ್ನು ೧೮೮೮ರಲ್ಲಿಯೇ ಸ್ಥಾಪಿಸಲಾಗಿತ್ತು. ೧೯೪೩ರಲ್ಲಿ ಇದನ್ನು ತೆಗೆದುಹಾಕಿದ ನಂತರ ೧೯೫೩ರಲ್ಲಿ ವಿಕ್ಟೋರಿಯಾ ಅಣೆಕಟ್ಟಿನ ಮೇಲೆ ಮರುಸ್ಥಾಪಿಸಲಾಯಿತು. ಫ್ರಾಂಟಾ ಬೆಲ್‌ಸ್ಕಿ ರಚಿಸಿದ ದ್ವಿತೀಯ ವಿಶ್ವ ಸಮರದ ಪ್ರಥಮ ಸೀ ಲಾರ್ಡ್‌ ಪ್ರಧಾನ ನೌಕಾಧಿಪತಿ ಕನ್ನಿಂಗ್‌‌ಹ್ಯಾಮ್‌‌ರ ಎದೆಮಟ್ಟದ ಪ್ರತಿಮೆಯನ್ನು 2 April೧೯೬೭ರಲ್ಲಿ ಅನಾವರಣಗೊಳಿಸಲಾಯಿತು.

ಚೌಕದ ದಕ್ಷಿಣ ಬದಿಗೆ ಹ್ಯೂಬರ್ಟ್‌ ಲೆ ಸ್ಯೂಎರ್‌ರು ನಿರ್ಮಿಸಿದ ಚಾರ್ಲ್ಸ್‌ Iರ ಕುದುರೆ ಸವಾರಿಯ ಕಂಚಿನ ಪ್ರತಿಮೆಯಿದೆ. ೧೬೩೩ರಲ್ಲಿ ಇದನ್ನು ತಯಾರಿಸಿ ೧೬೭೮ರಲ್ಲಿ ಅದರ ಪ್ರಸ್ತುತ ಸ್ಥಾನದಲ್ಲಿ ಸ್ಥಾಪಿಸಲಾಯಿತು. ಇದು ಮೂಲ ಚೇರಿಂಗ್‌ ಕ್ರಾಸ್‌ನ ಸ್ಥಳದಲ್ಲಿದೆ

ಇತರ ವಿಶಿಷ್ಟ ಲಕ್ಷಣಗಳು

ಕಾರಂಜಿಗಳು

೧೮೪೦ರ ದಶಕದಲ್ಲಿ ಈ ಚೌಕವನ್ನು ಮೊದಲಿಗೆ ವಿನ್ಯಾಸಗೊಳಿಸಿದಾಗ, ಕಾರಂಜಿಗಳ ಮೂಲ ಉದ್ದೇಶ ಕಲಾತ್ಮಕತೆಯದಾಗಿರದೇ ತೆರೆದ ಸ್ಥಳಾವಕಾಶವನ್ನು ಕಡಿಮೆಗೊಳಿಸಿ ಗಲಭೆಕಾರಕ ಗುಂಪುಗೂಡುವಿಕೆಯ ಅಪಾಯವನ್ನು ಕಡಿಮೆ ಮಾಡುವುದು ಮಾತ್ರವಾಗಿತ್ತು. ಅವುಗಳಿಗೆ ಮೂಲತಃ ನ್ಯಾಷನಲ್‌ ಗ್ಯಾಲರಿ ವಸ್ತುಸಂಗ್ರಹಾಲಯದ ಹಿಂದೆ ಸ್ಥಾಪಿತವಾದ ಉಗಿ ಎಂಜಿನ್‌ನ ಮೂಲಕ ಬುಗ್ಗೆ ಬಾವಿಯಿಂದ ನೀರನ್ನು ಎತ್ತಿ ಹಾಕುವ ಮೂಲಕ ನೀರು ದೊರಕಿಸಲಾಗುತ್ತಿತ್ತು. ೧೯೩೦ರ ದಶಕದ ಅಂತ್ಯದ ವೇಳೆಯಲ್ಲಿ ಶಿಲಾ ಬೋಗುಣಿಗಳನ್ನು ಹಾಗೂ ಪಂಪ್‌ಅನ್ನು ಬದಲಿಸಲು ನಿರ್ಧರಿಸಲಾಯಿತು.ಬಹುಮಟ್ಟಿಗೆ £೫೦,೦೦೦ ಮೊತ್ತದ ವೆಚ್ಚದಲ್ಲಿ ಸರ್‌ ಎಡ್ವಿನ್‌ ಲ್ಯುಟೆನ್ಸ್‌ ಮಾಡಿದ ವಿನ್ಯಾಸದ ಮೇರೆಗೆ ಹೊಸ ಕಾರಂಜಿಗಳನ್ನು ನಿರ್ಮಿಸಲಾಯಿತು. ಹಳೆಯ ಕಾರಂಜಿಗಳನ್ನು ಕೆನಡಾದ ಸರ್ಕಾರಕ್ಕೆ ಉಡುಗೊರೆಯಾಗಿ ನೀಡಲು ತರಲಾಯಿತು ಹಾಗೂ ಅವುಗಳು ಈಗ ಒಟ್ಟಾವಾ ಮತ್ತು ರೆಜಿನಾಗಳಲ್ಲಿವೆ. ಈಗಿನ ಕಾರಂಜಿಗಳು ಲಾರ್ಡ್‌ ಜೆಲ್ಲಿಕೋ (ಪಶ್ಚಿಮದ ಬದಿ) ಹಾಗೂ ಲಾರ್ಡ್‌ ಬೀಟ್ಟಿ (ಪೂರ್ವದ ಬದಿ )ರವರುಗಳ ಸ್ಮಾರಕವಾಗಿವೆ

ಮತ್ತಷ್ಟು ನವೀಕರಣ ಕಾಮಗಾರಿಗಳು ಅನಿವಾರ್ಯವಾದವು ಹಾಗೂ ಅವುಗಳನ್ನು May 2009ರ ವೇಳೆಗೆ ಪೂರೈಸಲಾಯಿತು. ಪಂಪ್‌ ವ್ಯವಸ್ಥೆಯನ್ನು ಬದಲಿಸಿ ಗಾಳಿಯಲ್ಲಿ 80-foot (24 m) ನೀರಿನ ಬುಗ್ಗೆಯನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿರುವ ಹೊಸ ಪಂಪ್‌ ಒಂದನ್ನು ಅಳವಡಿಸಲಾಯಿತು. ಹೊಸದಾದ LED ದೀಪಗಳ ವ್ಯವಸ್ಥೆಯನ್ನು ಕೂಡಾ ನವೀಕರಣದ ಸಮಯದಲ್ಲಿ ದೀಪಗಳ ವ್ಯವಸ್ಥೆಯ ನಿರ್ವಹಣೆಯ ವೆಚ್ಚವನ್ನು ಕಡಿಮೆ ಮಾಡಲು ಸ್ಥಾಪಿಸಲಾಯಿತು. ನವೀನ ದೀಪದ ವ್ಯವಸ್ಥೆಯನ್ನು ಲಂಡನ್‌‌ ೨೦೧೨ ಬೇಸಿಗೆ ಒಲಿಂಪಿಕ್ಸ್‌ ಅನ್ನು ಗಮನದಲ್ಲಿರಿಸಿಕೊಂಡು ವಿನ್ಯಾಸಗೊಳಿಸಲಾಗಿದ್ದು, ಪ್ರಪ್ರಥಮ ಬಾರಿಗೆ ಕಾರಂಜಿಗಳು ಬೇರೆ ಬೇರೆ ಬಣ್ಣಗಳ ಸಂಯೋಜನೆಯನ್ನು ಚಿಮ್ಮುವಂತೆ ಮಾಡಲಾಗಿದೆ. ನವೀನ ದೀಪದ ವ್ಯವಸ್ಥೆಯು ಸಾಕಷ್ಟು ಕಡಿಮೆ ಪ್ರಮಾಣದ ವಿದ್ಯುತ್‌ ಅಗತ್ಯತೆಯನ್ನು ಹೊಂದಿದ್ದು ತನ್ನ ಇಂಗಾಲದ ಛಾಯೆಯನ್ನು ಸುಮಾರು ೯೦%ರಷ್ಟು ಇಳಿಕೆಗೊಳಿಸಲಿದೆ.

ಪಾರಿವಾಳಗಳು

ಈ ಚೌಕವು ಅಲ್ಲಿರುವ ಕಾಡು ಪಾರಿವಾಳಗಳಿಗೆ ಪ್ರಖ್ಯಾತವಾಗಿದ್ದು ಅವುಗಳಿಗೆ ಉಣಿಸುವುದು ಇಲ್ಲಿನ ಒಂದು ಸಾಂಪ್ರದಾಯಿಕವಾದ ಜನಪ್ರಿಯ ಚಟುವಟಿಕೆಯಾಗಿದೆ. ಪಕ್ಷಿಗಳ ಇರುವಿಕೆಯ ಬಗೆಗಿನ ಅಪೇಕ್ಷಣೀಯತೆಯು ದೀರ್ಘಕಾಲದಿಂದಲೂ ವಿವಾದಾಸ್ಪದ ವಿಚಾರವಾಗಿದೆ: ಅವುಗಳ ತ್ಯಾಜ್ಯಗಳ ಬೀಳುವಿಕೆಯು ಕಟ್ಟಡಗಳ ಬಳಿ ಅಸಹ್ಯವಾಗಿರುತ್ತದೆ ಹಾಗೂ ಶಿಲಾಕೃತಿಗಳಿಗೆ ಹಾನಿಯನ್ನುಂಟು ಮಾಡುತ್ತದೆ, ಮಾತ್ರವಲ್ಲ ಗರಿಷ್ಟ ಪ್ರಮಾಣದಲ್ಲಿ ಸರಿಸುಮಾರು ೩೫,೦೦೦ ಇರಬಹುದೆಂದು ಅಂದಾಜಿಸಲಾಗಿರುವ ಅವುಗಳ ಹಿಂಡು ಆರೋಗ್ಯಕ್ಕೆ ಅಪಾಯಕರವಾಗಬಹುದು ಎಂದು ಪರಿಗಣಿಸಲಾಗಿದೆ. ೨೦೦೫ನೇ ಇಸವಿಯಲ್ಲಿ, ಚೌಕದಲ್ಲಿ ಹಕ್ಕಿಗಳ ಮೇವು/ಕಾಳುಗಳ ಮಾರಾಟವನ್ನು ನಿಲ್ಲಿಸಲಾಯಿತು ಹಾಗೂ ತರಬೇತಿ ಪಡೆದ ಗಿಡುಗಗಳ ಬಳಕೆಯೂ ಸೇರಿದಂತೆ ಪಾರಿವಾಳಗಳ ಹೆಚ್ಚಳವನ್ನು ತಡೆಯುವಂತಹಾ ಇತರೆ ಕ್ರಮಗಳನ್ನು ಕೈಗೊಳ್ಳಲಾಯಿತು. ಟ್ರಾಫಲ್ಗರ್‌‌ ಚೌಕದ ಪಾರಿವಾಳಗಳನ್ನು ಉಳಿಸಿ ಅಭಿಯಾನದಂತಹಾ ಬೆಂಬಲಿಗರ ಸಮೂಹಗಳು ಹಾಗೂ ಹಲವು ಪ್ರವಾಸಿಗರು ಪಕ್ಷಿಗಳಿಗೆ ತಿನಿಸನ್ನು ಉಣಿಸುವುದನ್ನು ಮುಂದುವರೆಸಿದರು, ಆದರೆ ೨೦೦೩ರಲ್ಲಿ ಆಗಿನ-ಮಹಾಪೌರ ಕೆನ್‌ ಲಿವಿಂಗ್‌ಸ್ಟೋನ್‌ರು ಚೌಕದಲ್ಲಿ ಪಾರಿವಾಳಗಳಿಗೆ ಕಾಳುಕಡ್ಡಿ ಉಣಿಸುವುದನ್ನು ನಿಷೇಧಿಸಿ ಪೌರಸಂಸ್ಥೆಗಳ ಉಪನಿಬಂಧನೆಗಳನ್ನು ಜಾರಿಗೆ ತಂದರು. ಇಂತಹಾ ಪೌರಸಂಸ್ಥೆಗಳ ಉಪನಿಬಂಧನೆಗಳ ವಿಪರೀತ ನುಣುಚಿಕೊಳ್ಳುವಿಕೆಗಳು ನಡೆಯುತ್ತಿದ್ದ ಕಾರಣ 10 September ೨೦೦೭ರಂದು ಮತ್ತಷ್ಟು ಪೌರಸಂಸ್ಥೆಗಳ ಉಪನಿಬಂಧನೆಗಳನ್ನು ಜಾರಿಗೊಳಿಸಿ ವೆಸ್ಟ್‌‌ಮಿನ್‌‌ಸ್ಟರ್‌ ಮಹಾನಗರ ಸಮಿತಿಯು ಬಹುತೇಕ ಪಾದಚಾರಿ ಸಂಚಾರವಿರುವ ಚೌಕದ ಉತ್ತರ ಮಾಳಿಗೆ , ಚೌಕದ ಇಡೀ ಪರಿಧಿ ಹಾಗೂ ಆ ಪ್ರದೇಶದಲ್ಲಿರುವ ಇತರೆ ಕಲ್ಲುಹಾಸುಗಳ ಮೇಲೆ ಪಕ್ಷಿಗಳಿಗೆ ಕಾಳುಣಿಸುವುದನ್ನು ನಿಷೇಧಿಸಿತು.ಪ್ರಸ್ತುತ ಟ್ರಾಫಲ್ಗರ್‌‌ ಚೌಕದಲ್ಲಿ ಕೆಲವೇ ಪಕ್ಷಿಗಳಿದ್ದು, ಚೌಕವನ್ನು ಉತ್ಸವಾಚರಣೆಗಳಿಗೆ ಬಳಸಲಾಗುತ್ತಿದೆ ಹಾಗೂ ೧೯೯೦ರ ದಶಕದಲ್ಲಿ ಸಂಭವನೀಯವೆನಿಸದ ರೀತಿಯಲ್ಲಿ ಚಲನಚಿತ್ರ ಕಂಪೆನಿಯಗಳಿಗೆ ಬಾಡಿಗೆಗೆ ನೀಡಲಾಗುತ್ತಿದೆ.

ಪುನರಭಿವೃದ್ಧಿ

]

೨೦೦೩ರಲ್ಲಿ ಚೌಕದ ಉತ್ತರ ಬದಿಯ ಪುನರಭಿವೃದ್ಧಿಯ ಕಾರ್ಯವು ಸಂಪೂರ್ಣಗೊಂಡಿತು. ಈ ಕಾರ್ಯವು ಅಲ್ಲಿನ ಮುಖ್ಯವಾದ ಪೂರ್ವಮುಖವಾದ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚುವುದನ್ನು ಒಳಗೊಂಡಿತ್ತು – ಆ ಹಾದಿಯ ಪರ್ಯಾಯವಾಗಿ ಚೌಕದ ಉಳಿದ ಭಾಗಕ್ಕೆ ಬದಲಾಗಿಸಿ ಭಾಗಶಃ ಗೋಡೆಯನ್ನು ಕೆಡವುವುದು ಹಾಗೂ ಅಗಲವಾದ ಮೆಟ್ಟಲುಗಳನ್ನು ಕಟ್ಟುವುದು ಇದರಲ್ಲಿ ಒಳಗೊಂಡಿದೆ. ಈ ನಿರ್ಮಾಣ ಕಾರ್ಯವು ಅಂಗವಿಕಲ/ವಿಕಲಚೇತನರ ಬಳಕೆಗೆ ಎರಡು ಸ್ಯಾಕ್ಸನ್‌ ಸಿಸರ್‌ ಲಿಫ್ಟ್‌ಗಳು , ಸಾರ್ವಜನಿಕ ಶೌಚಾಲಯಗಳು ಹಾಗೂ ಸಣ್ಣದೊಂದು ಉಪಹಾರ ಮಂದಿರವನ್ನು ಒಳಗೊಂಡಿರುತ್ತದೆ. ಚೌಕದ ಮೂಲ ನಕಾಶೆಗಳೂ ಸೇರಿದಂತೆ ದೊಡ್ಡದಾದ ಮೆಟ್ಟಿಲುಗಳ ಪ್ರಾಕಾರವನ್ನು ನಿರ್ಮಿಸುವ ಯೋಜನೆಗಳು ದೀರ್ಘಕಾಲದಿಂದಲೂ ಚರ್ಚೆಯಲ್ಲಿದ್ದವು. ಹೊಸದಾಗಿ ನಿರ್ಮಿತವಾದ ಮೆಟ್ಟಿಲಗಳ ಸಾಲು ಬೃಹತ್‌ ಜಗಲಿ ಅಥವಾ ಮೊಗಸಾಲೆ ಅಥವಾ ನ್ಯಾಷನಲ್‌ ಗ್ಯಾಲರಿ ವಸ್ತುಸಂಗ್ರಹಾಲಯದ ಮುಂದಿರುವ ಮೊಗಸಾಲೆಗೆ ತೆರೆದುಕೊಳ್ಳುತ್ತದೆ, ಈ ಭಾಗವು ಹಿಂದೆ ರಸ್ತೆ ಯಾಗಿತ್ತು. ಈ ಹಿಂದೆ ಚೌಕ ಹಾಗೂ ಗ್ಯಾಲರಿ ವಸ್ತುಸಂಗ್ರಹಾಲಯದ ಹಾದಿಗೆ ಪ್ರವೇಶವು ಈಶಾನ್ಯದಲ್ಲಿರುವ ಎರಡು ಜನನಿಬಿಡ ಅಡ್ಡಸೇರುವೆಗಳ ಹಾಗೂ ಚೌಕದ ವಾಯುವ್ಯ ಮೂಲೆಗಳ ಮೂಲಕವಾಗಿತ್ತು. ಪಾದಚಾರಿ ಮಾರ್ಗವನ್ನು ಅಲ್ಲಿ ನಿರ್ಮಿಸುವುದರ ಬಗೆಗಿನ ಯೋಜನೆಯು ವಾಹನ ಸಂಚಾರ/ಟ್ರಾಫಿಕ್‌ನ ಪರ್ಯಾಯ ಮಾರ್ಗದ ವ್ಯವಸ್ಥೆಯು ಲಂಡನ್‌‌ನ ಇನ್ನೆಲ್ಲಿಯೂ ಇರದ ಮಟ್ಟಿಗೆ ವಿಪರೀತ ದಟ್ಟಣೆಯನ್ನು ಉಂಟುಮಾಡೀತು ಎಂಬ ಬಗ್ಗೆ ರಸ್ತೆ -ಬಳಕೆದಾರರು ಹಾಗೂ ಪಾದಚಾರಿಗಳಿಬ್ಬರಿಂದಲೂ ಪ್ರತಿಭಟನೆಗಳು ಎದುರಾದ ಹಿನ್ನೆಲೆಯಲ್ಲಿ ಕಾರ್ಯಗತಗೊಳಿಸಲಾಯಿತು. ಆದಾಗ್ಯೂ, ಹಾಗೆ ಸಂಭವಿಸುವುದು ಸಾಧ್ಯವಿರುತ್ತಿರಲಿಲ್ಲ; [] ಲಂಡನ್‌‌ ಜನದಟ್ಟಣೆ ಶುಲ್ಕದ ಹೇರಿಕೆಯಿಂದಾಗಿ ವಾಹನ ಸಂಚಾರ/ಟ್ರಾಫಿಕ್‌ನಲ್ಲಾದ ಇಳಿಕೆಯೂ ಇದಕ್ಕೆ ಕಾರಣವಿರಬಹುದು.

ಉಪಯೋಗಗಳು

ಹೊಸ ವರ್ಷದ ಸಂಭ್ರಮಾಚರಣೆಗಳು

ಹಲವು ವರ್ಷಗಳಿಂದ, ಸಾರ್ವಜನಿಕ ಸಮಾರಂಭಗಳ ಆಚರಣೆಗೆ ಪ್ರೋತ್ಸಾಹದ ಕೊರತೆಯ ನಡುವೆಯೂ ಹೊಸ ವರ್ಷದ ಆರಂಭವನ್ನು ಆಚರಿಸುವ ವಿಲಾಸಿ ಜನರು ಚೌಕದಲ್ಲಿ ಒಟ್ಟು ಸೇರಿ ಮೋಜು ಮಾಡುತ್ತಾರೆ. ಚೌಕದಲ್ಲಿ ಅಧಿಕೃತ ಸಮಾರಂಭಗಳು ಆಚರಣೆಗಳು ನಡೆಯದಿರಲು ಮೇಜವಾನಿ ಕೂಟಗಳಿಗೆ ಹೋಗುವ ಮಂದಿಯನ್ನು ಹೆಚ್ಚು ಬರುವಂತೆ ಸಕ್ರಿಯವಾಗಿ ಪ್ರೋತ್ಸಾಹಿಸುವುದು ಭಾರೀ ದಟ್ಟಣೆಯನ್ನುಂಟು ಮಾಡಬಹುದು ಎಂಬ ಸಂಬಂಧಿತ ಇಲಾಖೆಗಳ ಆತಂಕವು ಭಾಗಶಃ ಕಾರಣವಾಗಿದೆ. ೨೦೦೫ನೇ ಇಸವಿಯಿಂದ ಲಂಡನ್‌‌ ಐ ಹಾಗೂ ಥೇಮ್ಸ್‌ ನದಿಯ ದಕ್ಷಿಣ ತೀರಗಳಲ್ಲಿ ಕೇಂದ್ರೀಕೃತವಾದ ಬಾಣಬಿರುಸುಗಳ ಪ್ರದರ್ಶನವನ್ನು ಪರ್ಯಾಯವನ್ನಾಗಿಸಲಾಗಿದೆ

VE ದಿನ ಸಂಭ್ರಮಾಚರಣೆಗಳು

ವಿಕ್ಟರಿ ಇನ್‌ ಯುರೋಪ್‌/ಯುರೋಪ್‌ನಲ್ಲಿನ ವಿಜಯ ದಿನಾಚರಣೆಯನ್ನು (VE ದಿನಾಚರಣೆ) 8 May ೧೯೪೫ರಂದಿನದ್ದಾಗಿದ್ದು, ಇದು ದ್ವಿತೀಯ ವಿಶ್ವ ಸಮರದ ಸಂದರ್ಭದಲ್ಲಿ ಮಿತ್ರಪಕ್ಷಗಳು ನಾಝಿ ಜರ್ಮನಿಯ ಸೋಲನ್ನು ಆಚರಿಸಿದ ದಿನಾಂಕವಾಗಿದೆ. ಅಂದು ಟ್ರಾಫಲ್ಗರ್‌‌ ಚೌಕದ ತುಂಬಾ ಸರ್‌‌ ವಿನ್ಸ್‌ಟನ್‌ ಚರ್ಚಿಲ್‌‌ರಿಂದ ಮಹಾಯುದ್ಧವು ಕೊನೆಗೊಂಡಿತು ಎಂಬ ಅಧಿಕೃತ ಘೋಷಣೆಯನ್ನು ನಿರೀಕ್ಷಿಸುತ್ತಿರುವ ಭಾರೀ ಜನಜಂಗುಳಿಯೇ ಸೇರಿತ್ತು. ರಾಷ್ಟ್ರದ ಎಲ್ಲೆಡೆಗಳಿಗೆ ಅಲ್ಲಿಗೆ ಪ್ರಯಾಣಿಸುವ ಜನರಿಗೆ ಕೂಡಾ ಚೌಕವು ಒಂದು ಸಂಭ್ರಮಾಚರಣೆಯ ಸ್ಥಳವಾಗಿದೆ. 8 May ೨೦೦೫ರಂದು BBCಯು VE ದಿನದ ೬೦ನೇ ವರ್ಷಾಚರಣೆಗಾಗಿ ಸಂಗೀತ ಗೋಷ್ಠಿಯನ್ನೇರ್ಪಡಿಸಿತ್ತು.

ಕ್ರಿಸ್‌ಮಸ್‌ ಸಮಾರಂಭ

See also: Trafalgar Square Christmas tree

೧೯೪೭ರಿಂದ ಪ್ರತಿ ವರ್ಷವೂ ಟ್ರಾಫಲ್ಗರ್‌‌ ಚೌಕದಲ್ಲಿ ಕ್ರಿಸ್‌ಮಸ್‌ ಸಮಾರಂಭವನ್ನು ಆಚರಿಸಲಾಗುತ್ತಿದೆ. ನಾರ್ವೆಯ ರಾಜಧಾನಿ ಓಸ್ಲೋದಿಂದ ನಾರ್ವೆ ಸ್ಪ್ರೂಸ್‌ ಮರದ ದಾರುವನ್ನು (ಅಥವಾ ಕೆಲವೊಮ್ಮೆ ಭದ್ರದಾರು) ಲಂಡನ್‌‌ನ ಕ್ರಿಸ್‌ಮಸ್‌ ಮರವನ್ನಾಗಿ ಉಡುಗೊರೆ ನೀಡಲಾಗುತ್ತದೆ,ಇದನ್ನು ವಿಶ್ವ ಸಮರ IIರ ಅವಧಿಯಲ್ಲಿ ಬ್ರಿಟನ್‌ ನ ಬೆಂಬಲ ದೊರೆತಿದ್ದಕ್ಕಾಗಿ ಆ ರಾಷ್ಟ್ರವು ತೋರುವ ಕೃತಜ್ಞತೆಯ ಸಂಕೇತವಾಗಿದೆ. (ಸಾಧಾರಣ ಯುದ್ಧದ ಬೆಂಬಲ ಮಾತ್ರವಲ್ಲದೇ, ನಾರ್ವೆಯ ಪ್ರಭು ಒಲಾವ್‌ರು ಹಾಗೂ ಆ ರಾಷ್ಟ್ರದ ಸರ್ಕಾರಿ ಪ್ರತಿನಿಧಿಗಳು ದೇಶಭ್ರಷ್ಟರಾಗಿ ಯುದ್ಧದುದ್ಧಕ್ಕೂ ಲಂಡನ್‌‌ನಲ್ಲಿಯೇ ಉಳಿದುಕೊಂಡಿದ್ದರು.) ಸಂಪ್ರದಾಯದ ಭಾಗವಾಗಿ ವೆಸ್ಟ್‌‌ಮಿನ್‌‌ಸ್ಟರ್‌ನ ಲಾರ್ಡ್‌ ಮೇಯರ್‌ರು ಶರತ್ಕಾಲದ ಅಂತ್ಯದ ವೇಳೆಗೆ ಮರವನ್ನು ಕಡಿದುಹಾಕುವ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಓಸ್ಲೋಗೆ ಭೇಟಿ ನೀಡುತ್ತಾರೆ, ತದನಂತರ ಓಸ್ಲೋದ ಮಹಾಪೌರರು ಕ್ರಿಸ್‌ಮಸ್‌ ಸಮಾರಂಭದಲ್ಲಿ ಮರವನ್ನು ಬೆಳಗಿಸುವುದಕ್ಕಾಗಿ ಲಂಡನ್‌‌ಗೆ ತೆರಳುತ್ತಾರೆ.

ರಾಜಕೀಯದ ಬಹಿರಂಗ ಸಭೆಗಳು

ತನ್ನ ನಿರ್ಮಾಣವಾದಂದಿನಿಂದಲೂ, ಟ್ರಾಫಲ್ಗರ್‌‌ ಚೌಕವು ಸಂಬಂಧಪಟ್ಟ ಇಲಾಖೆಗಳು ಅವುಗಳನ್ನು ನಿಷೇಧಿಸಲು ಅನೇಕ ವೇಳೆ ಪ್ರಯತ್ನಿಸಿದರೂ ರಾಜಕೀಯದ ಬಹಿರಂಗ ಸಭೆಗಳ ತಾಣವಾಗಿದೆ. ಅವುಗಳು ಮೂಲ ನಕಾಶೆಯಲ್ಲಿ ಇರದಿದ್ದುರಿಂದ ಹೇಳಿಕೆಗಳ ಪ್ರಕಾರ [] ೧೯೩೯ರ ಕಾರಂಜಿಗಳನ್ನು ಅವುಗಳ ಪ್ರಸ್ತುತ ಗಾತ್ರದಲ್ಲಿ ಚೌಕದಲ್ಲಿ ಜನಜಂಗುಳಿ ಸೇರುವ ಸಾಧ್ಯತೆಗಳನ್ನು ಕಡಿಮೆಗೊಳಿಸುವುದಕ್ಕಾಗಿ ಅಳವಡಿಸಲಾಗಿದೆ.

ಆ ವರ್ಷದ ಮಾರ್ಚ್‌ನ ವೇಳೆಗೆ ನೆಲ್ಸನ್‌‌ಸ್‌ ಕಾಲಮ್‌ ಪ್ರವೇಶಕ್ಕೆ ಮುಕ್ತವಾಯಿತು, ಸಂಬಂಧಪಟ್ಟ ಇಲಾಖೆಗಳು ಚೌಕದಲ್ಲಿ ಚಾರ್ಟಿಸ್ಟ್‌ ಪಂಥೀಯರ ಸಭೆಗಳ ನಡೆಸುವಿಕೆಯನ್ನು ಅಲ್ಲಿ ನಿಷೇಧಿಸುವುದನ್ನು ಆರಂಭಿಸಿದರು. ಆಗ ಉದ್ಭವಿಸುತ್ತಿದ್ದ ಕಾರ್ಮಿಕ ಚಳುವಳಿಯವರು, ನಿರ್ದಿಷ್ಟವಾಗಿ ಸೋಷಿಯಲ್‌ ಡೆಮೋಕ್ರಟಿಕ್‌ ಫೆಡರೇಷನ್‌ ಸಂಸ್ಥೆಯು, ಅಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದ್ದ ಸಮಯವಾದ್ದರಿಂದ ರಾಜಕೀಯ ಮೆರವಣಿಗೆ/ಅಭಿಯಾನಗಳ ಮೇಲಿನ ಸಾಧಾರಣ ನಿಷೇಧವು ೧೮೮೦ರ ದಶಕದವರೆಗೆ ಚಾಲ್ತಿಯಲ್ಲಿಯೇ ಇತ್ತು.

"ಕರಾಳ ಸೋಮವಾರ/ಬ್ಲ್ಯಾಕ್‌ ಮಂಡೇ " (8 February ೧೮೮೬)ಯಂದು , ನಿರುದ್ಯೋಗ ಸಮಸ್ಯೆಯ ವಿರುದ್ಧ ಮೆರವಣಿಗೆಯನ್ನು ನಡೆಸಿದರು; ಇದು ಪಾಲ್‌ ಮಾಲ್‌‌ನಲ್ಲಿ ದೊಂಬಿಗೆ ಕಾರಣವಾಯಿತು. ("ರಕ್ತಪಾತದ ಭಾನುವಾರ/ಬ್ಲಡೀ ಸಂಡೇ" ಎಂದು ಕರೆಯಲಾದ) ಇನ್ನೂ ದೊಡ್ಡ ದೊಂಬಿಯು ಚೌಕದಲ್ಲಿ 13 November ೧೮೮೭ರಂದು ನಡೆಯಿತು.

ಆಧುನಿಕ ಯುಗದ ಗಮನಾರ್ಹ ಬಹಿರಂಗ ಸಭೆಗಳಲ್ಲಿ ಮೊತ್ತಮೊದಲನೆಯದು ಚೌಕದಲ್ಲಿ 19 September ೧೯೬೧ರಂದು ತತ್ವಜ್ಞಾನಿ ಬರ್ಟ್ರಾಂಡ್‌ ರಸೆಲ್‌ರವರೂ ಇದ್ದ ೧೦೦ ಜನರ ಸಮಿತಿ/ಕಮಿಟಿ ಆಫ್‌ ೧೦೦ ಸಂಸ್ಥೆಯಿಂದ ನಡೆಸಲ್ಪಟ್ಟಿತು. ಪ್ರತಿಭಟನಕಾರರು ಅಂದು ಶಾಂತಿಗಾಗಿ ಹಾಗೂ ಯುದ್ಧಗಳು ಮತ್ತು ಅಣ್ವಸ್ತ್ರಗಳ ವಿರುದ್ಧ ಮೆರವಣಿಗೆಯನ್ನು ನಡೆಸಿದರು.

೧೯೮೦ರ ದಶಕದುದ್ದಕ್ಕೂ , ಸತತವಾಗಿ ವರ್ಣಭೇದ ನೀತಿಯ ವಿರುದ್ಧದ ಪ್ರತಿಭಟನೆಗಳನ್ನು ದಕ್ಷಿಣ ಆಫ್ರಿಕಾ ಹೌಸ್‌‌ನ ಹೊರಭಾಗದಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು. ತೀರ ಇತ್ತೀಚೆಗೆ ಚೌಕದಲ್ಲಿ ಚುನಾವಣಾ ತೆರಿಗೆ ದೊಂಬಿಗಳು/ಪಾಲ್‌ ಟ್ಯಾಕ್ಸ್‌ ರಯಟ್ಸ್‌ (೧೯೯೦) ಮತ್ತು ಆಫ್ಘಾನಿಸ್ತಾನ್‌ ಯುದ್ಧ ಹಾಗೂ ಇರಾಕ್‌ ಯುದ್ಧಗಳನ್ನು ವಿರೋಧಿಸಿ ಯುದ್ಧ-ವಿರೋಧಿ ಬಹಿರಂಗ ಸಭೆಗಳನ್ನು ಆಯೋಜಿಸಲಾಗಿತ್ತು.

ಈ ಚೌಕವು ಗುರುವಾರ, 7 July ೨೦೦೫ರಂದು ಲಂಡನ್‌‌ನಲ್ಲಿ ಭಯೋತ್ಪಾದಕ ಬಾಂಬ್‌ ದಾಳಿಗಳ ನಂತರ ಕೆಲವೇ ಕ್ಷಣಗಳಲ್ಲಿ ಭಾರೀ ಪಹರೆಯ ವ್ಯವಸ್ಥೆಗೆ ಕೂಡಾ ಸಾಕ್ಷಿಯಾಯಿತು.

ಡಿಸೆಂಬರ್‌‌ ೨೦೦೯ರಲ್ಲಿ ವಾತಾವರಣದ ಬದಲಾವಣೆಗಳ ಮೇಲಿನ UN ಸಮಾವೇಶವನ್ನು ಕೋಪೆನ್‌ಹೇಗನ್‌ನಲ್ಲಿ ನಡೆಸಿದ ಕ್ಯಾಂಪ್‌ ಫಾರ್‌ ಕ್ಲೈಮೇಟ್‌ ಆಕ್ಷನ್‌ ಅಭಿಯಾನದ ಸಹಭಾಗಿಗಳು ಚೌಕವನ್ನು ಎರಡು ವಾರಗಳ ಕಾಲ ದಿಗ್ಬಂಧನಕ್ಕೆ ಒಳಪಡಿಸಿದ್ದರು. ಸಮಾವೇಶದ ಸಂದರ್ಭದಲ್ಲಿ ಇದನ್ನು ವಾತಾವರಣ ಬದಲಾವಣೆಯ ಮೇಲಿನ ನೇರ ಕಾರ್ಯಾಚರಣೆಯ UKಯ ಕೇಂದ್ರ ಕಛೇರಿಯೆಂದು ಸೂಚಿಸಲಾಯಿತು, ಹಾಗೂ ಹಿಡುವಳಿಯ ಪರಿಣಾಮವಾಗಿ ತೆಗೆದುಕೊಳ್ಳಲಾದ ಅನೇಕ ಕ್ರಮಗಳು ಹಾಗೂ ಪ್ರತಿಭಟನೆಗಳಿಗೆ ಇದು ಸಾಕ್ಷಿಯಾಯಿತು.

ಮಾರ್ಚ್‌ ೨೭, ೨೦೧೧ರಂದು. UKಯ ಆಯವ್ಯಯ ಹಾಗೂ ಅದರಲ್ಲಿ ಪ್ರಸ್ತಾಪಿಸಲಾದ ಆಯವ್ಯಯದ ಖಾತಾಗಳನ್ನು ವಿರೋಧಿಸಿ ಪ್ರತಿಭಟನೆಗಾಗಿ ಚೌಕವನ್ನು ಬಳಸಿಕೊಂಡ ಪ್ರತಿಭಟನಕಾರರಿಂದ ಚೌಕವು ತುಂಬಿಹೋಗಿತ್ತು. ಇಷ್ಟಾಗಿಯೂ ರಾತ್ರಿಯ ಹೊತ್ತಿನಲ್ಲಿ ದೊಂಬಿವಿರೋಧಿ ದಳದ ಆರಕ್ಷಕರು ಹಾಗೂ ಪ್ರತಿಭಟನಕಾರರ ಹೋರಾಟ ತೀವ್ರಗೊಳಿಸಲ್ಪಟ್ಟ ಕಾರಣ ಪರಿಸ್ಥಿತಿಯು ಹಿಂಸೆಗೆ ತಿರುಗಿ, ಪ್ರತಿಭಟನಕಾರರು ಚೌಕದ ಪ್ರಧಾನ ಭಾಗಗಳನ್ನು ಒಡೆದುಹಾಕಿದರು.

ಕ್ರೀಡಾ ಕಾರ್ಯಕ್ರಮಗಳು

೨೧ ಜೂನ್‌ ೨೦೦೨ರಂದು, ಚೌಕದಲ್ಲಿ ಇಂಗ್ಲೆಂಡ್‌‌ನ ರಾಷ್ಟ್ರೀಯ ಫುಟ್‌‌ಬಾಲ್‌‌ ತಂಡದ ವಿಶ್ವ ಕಪ್‌ನ ಬ್ರೆಝಿಲ್‌‌ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯವನ್ನು ಅದಕ್ಕಾಗಿಯೇ ವಿಶೇಷವಾಗಿ ಅಳವಡಿಸಿದ ಬೃಹತ್‌ ವಿಡಿಯೋ ಪರದೆಗಳ ಮೇಲೆ ನೋಡಲು ೧೨,೦೦೦ ಜನರು ನೆರೆದಿದ್ದರು.

೨೧ನೆಯ ಶತಮಾನದ ಆದಿಯಲ್ಲಿ, ಟ್ರಾಫಲ್ಗರ್‌‌ ಚೌಕವು ಕ್ರೀಡಾವಿಜಯೋತ್ಸವಗಳ ಮೆರವಣಿಗೆಗಳ ಪರಾಕಾಷ್ಠೆಯ ತಾಣವಾಗಿ ಮಾರ್ಪಟ್ಟಿದೆ. ಇಂಗ್ಲೆಂಡ್‌‌ ರಾಷ್ಟ್ರೀಯ ರಗ್ಬಿ ಯೂನಿಯನ್‌/ಒಕ್ಕೂಟ ತಂಡವು 9 December ೨೦೦೩ರಂದು ೨೦೦೩ರ ರಗ್ಬಿ ವಿಶ್ವಕಪ್‌ನಲ್ಲಿ ಗಳಿಸಿದ ತನ್ನ ವಿಜಯವನ್ನು ಆಚರಿಸಲು , ಹಾಗೂ ನಂತರ 13 September ೨೦೦೫ರಂದು ಆಷಸ್‌ನಲ್ಲಿನ ಇಂಗ್ಲೆಂಡ್‌‌ ರಾಷ್ಟ್ರೀಯ ಕ್ರಿಕೆಟ್‌ ತಂಡದ ವಿಜಯವನ್ನು ಆಚರಿಸಲು ಇದನ್ನು ಬಳಸಲಾಯಿತು.

೬ ಜುಲೈ ೨೦೦೫ರಂದು ಟ್ರಾಫಲ್ಗರ್‌‌ ಚೌಕವು ೨೦೧೨ರ ಬೇಸಿಗೆ ಒಲಿಂಪಿಕ್ಸ್‌ ಪಂದ್ಯಾವಳಿಗಳ ಆತಿಥೇಯವಾಗುವ ಹರಾಜನ್ನು ಲಂಡನ್‌‌ ಗೆದ್ದಿದೆ ಎಂಬ ಘೋಷಣೆಯನ್ನು ಕೇಳಲು ಸಾರ್ವಜನಿಕರು ಸಭೆ ಸೇರುವ ಸ್ಥಳವಾಗಿ ಪರಿಣಮಿಸಿತ್ತು.

೨೦೦೭ರಲ್ಲಿ ಚೌಕದಲ್ಲಿಯೇ ಟೂರ್‌ ಡಿ ಫ್ರಾನ್ಸ್‌ನ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು.

ಇತರೆ ಉಪಯೋಗಗಳು

ಟ್ರಾಫಲ್ಗರ್‌‌ ಚೌಕವನ್ನು ಲಂಡನ್‌‌ನ ಪ್ರಾತಿನಿಧಿಕ ಜನಪ್ರಿಯ ತಾಣವನ್ನಾಗಿ ಚಲನಚಿತ್ರಗಳಲ್ಲಿ ಬಳಸಲಾಗುತ್ತದೆ. ಇದು ೧೯೬೦ರ ದಶಕದ ಅಂತ್ಯದ ವೇಳೆಯ ಸ್ವಿಂಗಿಂಗ್‌‌ ಲಂಡನ್‌‌ ಯುಗದಲ್ಲಿ ದ ಅವೆಂಜರ್ಸ್ ‌, ಕ್ಯಾಸಿನೋ ರಾಯಲೆ , ಡಾಕ್ಟರ್‌ ಹೂ , ದ ಐಪ್‌ಕ್ರೆಸ್‌ ಫೈಲ್ ‌ ಮತ್ತು ಮ್ಯಾನ್‌ ಇನ್‌ ಎ ಸೂಟ್‌ಕೇಸ್ ‌ಗಳೂ ಸೇರಿದಂತೆ ಚಲನಚಿತ್ರಗಳು ಹಾಗೂ ಕಿರುತೆರೆ ಕಾರ್ಯಕ್ರಮಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿತ್ತು.

ಮೇ ೨೦೦೭ರಲ್ಲಿ, ಲಂಡನ್‌‌ ಪೌರಸಂಸ್ಥೆಗಳ ಮಹಾನಗರದಲ್ಲಿ "ಹಸಿರು ಸ್ಥಳಗಳಿಗೆ " ಉತ್ತೇಜನ ನೀಡುವ ಅಭಿಯಾನದ ಭಾಗವಾಗಿ ಚೌಕದ ೨,೦೦೦ ಚದುರ ಮೀಟರ್‌ಗಳಷ್ಟು ಪ್ರದೇಶದಲ್ಲಿ ಎರಡು ದಿನಗಳ ಕಾಲ ಹುಲ್ಲನ್ನು ಬೆಳೆಸಲಾಯಿತು.

ಟ್ರಾಫಲ್ಗರ್‌‌ ಸಮರದ (21 October) ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷ ಸಾಗರ ಕೆಡೆಟ್‌ ಪಡೆ ಸಂಸ್ಥೆಯು ನೌಕಾಧಿಪತಿ ಲಾರ್ಡ್‌ ನೆಲ್ಸನ್‌ರ ಸ್ಮರಣಾರ್ಥ ಹಾಗೂ ಟ್ರಾಫಲ್ಗರ್‌‌ನಲ್ಲಿ ಫ್ರಾನ್ಸ್ ಹಾಗೂ ಸ್ಪೇನ್‌ಗಳ ಜಂಟಿ ನೌಕಾಪಡೆಗಳ ಮೇಲೆ ಬ್ರಿಟಿಷರ ವಿಜಯೋತ್ಸವದ ಸ್ಮರಣಾರ್ಥ ಸೈನಿಕ ಕವಾಯತು ನಡೆಸುತ್ತದೆ. ಸಾಗರ ಕೆಡೆಟ್‌ ಪಡೆಯ ಕಾರ್ಯಕ್ಷೇತ್ರಗಳನ್ನು ಏಳು ೨೪-ಕೆಡೆಟ್‌ಗಳ ತುಕಡಿಗಳು ಪ್ರತಿನಿಧಿಸುತ್ತವೆ. ರಾಷ್ಟ್ರೀಯ ಸಾಗರ ಕೆಡೆಟ್‌ ಬ್ಯಾಂಡ್‌ ಕೂಡಾ ಇಲ್ಲಿ ಕವಾಯತು ನಡೆಸುತ್ತದೆ, ಹಾಗೆಯೇ ಗಾರ್ಡ್‌ ಮತ್ತು ಕಲರ್‌ ಪಾರ್ಟಿಗಳು ಕೂಡಾ.

ತಲುಪುವ ಮಾರ್ಗ

ಅತ್ಯಂತ ಸಮೀಪವಿರುವ ಲಂಡನ್‌‌ ಭೂಗತ ನಿಲ್ದಾಣಗಳು :

 • ಚೇರಿಂಗ್‌ ಕ್ರಾಸ್‌ – ಉತ್ತರ ದಿಕ್ಕಿನ ಹಾಗೂ ಬಾಕರ್‌ಲೂ ಮಾರ್ಗಗಳು — ಚೌಕದಲ್ಲಿ ಒಂದು ನಿರ್ಗಮನವನ್ನು ಹೊಂದಿವೆ. ಈ ಎರಡೂ ಮಾರ್ಗಗಳು ಮೂಲತಃ ಪ್ರತ್ಯೇಕ ನಿಲ್ದಾಣಗಳನ್ನು ಹೊಂದಿದ್ದವು, ಅವುಗಳಲ್ಲಿ ಬಾಕರ್‌ಲೂ ನಿಲ್ದಾಣವನ್ನು ಟ್ರಾಫಲ್ಗರ್‌‌ ಚೌಕ ನಿಲ್ದಾಣವೆಂದು ಕರೆಯಲಾಗುತ್ತಿತ್ತು; ಅವುಗಳನ್ನು ಜ್ಯೂಬಿಲೀ ಲೈನ್ ಮಾರ್ಗದ ನಿರ್ಮಾಣ ಕಾಮಗಾರಿಯ ಭಾಗವಾಗಿ ೧೯೭೯ರಲ್ಲಿ ನಂತರ ಸಂಪರ್ಕಿಸಿ ಮರುನಾಮಕರಣ ಮಾಡಲಾಯಿತು, ನಂತರ ೧೯೯೯ರ ಅಂತ್ಯದ ವೇಳೆಗೆ ಅದನ್ನು ಪರ್ಯಾಯ ಮಾರ್ಗದ ಮೂಲಕ ವೆಸ್ಟ್‌‌ಮಿನ್‌‌ಸ್ಟರ್‌ ಟ್ಯೂಬ್‌ ನಿಲ್ದಾಣಕ್ಕೆ ಸಂಪರ್ಕಿಸಲಾಯಿತು.
 • ಅಣೆಕಟ್ಟು – ಜಿಲ್ಲೆ, ವೃತ್ತ/ಸರ್ಕಲ್‌, ಉತ್ತರ ದಿಕ್ಕಿನ ಹಾಗೂ ಬಾಕರ್‌ಲೂ ಮಾರ್ಗಗಳು.
 • ಲೀಸೆಸ್ಟರ್‌‌ ಚೌಕ – ಉತ್ತರ ದಿಕ್ಕಿನ ಹಾಗೂ ಪಿಕ್ಕಾಡಿಲ್ಲಿ ಮಾರ್ಗಗಳು

ಟ್ರಾಫಲ್ಗರ್‌‌ ಚೌಕವನ್ನು ಹಾದು ಹೋಗುವ ಬಸ್‌ ಮಾರ್ಗಗಳು:

 • ೬, ೯, ೧೧, ೧೨, ೧೩, ೧೫, ೨೩, ೨೪, ೨೯, ೫೩, ೮೭, ೮೮, ೯೧, ೧೩೯, ೧೫೯, ೧೭೬, ೪೫೩.

ಇತರೆ ಟ್ರಾಫಲ್ಗರ್‌‌ ಚೌಕಗಳು

ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ನೌಕಾಧಿಪತಿ ಹೊರಾಷಿಯೋ ನೆಲ್ಸನ್‌ರ ಮತ್ತೊಂದು ಪ್ರತಿಮೆಯನ್ನು ಹೊಂದಿದ್ದ ರಾಷ್ಟ್ರೀಯ ನಾಯಕರ/ನ್ಯಾಷನಲ್‌ ಹೀರೋಸ್‌‌‌ ಚೌಕವನ್ನು ಮೂಲತಃ ಟ್ರಾಫಲ್ಗರ್‌‌ ಚೌಕವೆಂದು ಬೇರೆ ಉತ್ತಮವಾದ ಬ್ರಿಟಿಷ್‌ ಹೆದ್ದಾರಿಯು ತಿಳಿದುಬರುವ ಮುನ್ನ ೧೮೧೩ರಲ್ಲಿ ನಾಮಕರಣ ಮಾಡಲಾಗಿತ್ತು. ಇದನ್ನು 28 April ೧೯೯೯ರಂದು ಬದಲಿಸಲಾಯಿತು.

ಮಸಾಚುಸೆಟ್ಸ್‌ನ ಬಾರ್ರೆನಲ್ಲಿ ಕೂಡಾ ಒಂದು ಟ್ರಾಫಲ್ಗರ್‌‌ ಚೌಕವಿದೆ. ನ್ಯೂಜಿಲೆಂಡ್‌ನ ಲೋಯರ್‌ ಹಟ್ಟ್ ನಗರದ ವಾಟರ್‌ಲೂ ಉಪನಗರವು ವಾಟರ್‌ಲೂ ಪರ್ಯಾಯ ಜೋಡಿ ರಸ್ತೆ ರೈಲುನಿಲ್ದಾಣದ ಎದುರು ಒಂದು ಪ್ರಮುಖ ಮಹಾನಗರ ವ್ಯಾಪಾರ ಪ್ರಾಂತ್ಯ ಕೇಂದ್ರ ಟ್ರಾಫಲ್ಗರ್‌‌ ಚೌಕವನ್ನು ಹೊಂದಿದೆ.

ಇವನ್ನೂ ಗಮನಿಸಿ‌

 • ಕೆನಡಾ ಹೌಸ್‌‌
 • ಪಾರ್ಲಿಮೆಂಟ್‌/ಸಂಸತ್ತಿನ ಚೌಕ
 • ದಕ್ಷಿಣ ಆಫ್ರಿಕಾ ಹೌಸ್‌‌

ಹೆಚ್ಚಿನ ಓದಿಗಾಗಿ

ಲೇಖನಗಳು

ಪುಸ್ತಕಗಳು

 • Hargreaves, Roger (೨೦೦೫), Trafalgar Square: Through the Camera, London: National Portrait Gallery Publications, ISBN  Check |isbn= value ()  Check date values in: |date= ()
 • Holt, Gavin (೧೯೩೪), Trafalgar Square, London: Hodder & Stoughton  Check date values in: |date= ()
 • Hood, Jean (2005), Trafalgar Square: A Visual History of London’s Landmark through Time, London: Batsford, ISBN  Check |isbn= value () 
 • Mace, Rodney (೧೯೭೬), Trafalgar Square: Emblem of Empire, London: Lawrence and Wishart, ISBN  Check |isbn= value ()  Check date values in: |date= () ಎರಡನೇ ಆವೃತ್ತಿಯನ್ನು ಎರಡನೇ ಆವೃತ್ತಿಯನ್ನು Mace, Rodney (2005), Trafalgar Square: Emblem of Empire (2nd ed.), London: Lawrence and Wishart, ISBN  Check |isbn= value ()  ಎಂದು ಪ್ರಕಟಿಸಲಾಗಿದೆ

ಬಾಹ್ಯ ಕೊಂಡಿಗಳು‌

ಸಾಮಾನ್ಯ

ನಾಲ್ಕನೆಯ ಕಂಬದ ಪೀಠ

Post a comment
Tips & Hints
Arrange By:
Louis Vuitton
19 May 2010
A wonderful place for people watching on a sunny day or as a romantic meeting place at dusk, but look out for the pigeons. A visit to the National Gallery is also highly recommended.
HISTORY UK
9 August 2011
Every year a Norway Spruce is erected here and decorated as part of the Christmas festivities. The tree is a gift of thanks from the Norwegians for Britain's support during the Second World War
Load more comments
foursquare.com
Location
Map
Address

5 Trafalgar Square, London WC2N 5NJ, ಯುನೈಟೆಡ್ ಕಿಂಗ್ಡಮ್

Get directions
Open hours
Mon-Sun 24 Hours
References

Trafalgar Square on Foursquare

ಟ್ರಾಫಲ್ಗರ್‌‌ ಚೌಕ on Facebook

Hotels nearby

See all hotels See all
Spectacular Strand 2 bed apartment!!

starting $0

Amba Hotel Charing Cross

starting $645

1 Compton

starting $0

The Grand at Trafalgar Square

starting $418

Clarendon Serviced Apartments - Chandos Place

starting $0

Amba Hotel Charing Cross

starting $0

Recommended sights nearby

See all See all
Add to wishlist
I've been here
Visited
Nelson's Column
United Kingdom

Nelson's Column is a tourist attraction, one of the Monuments and

Add to wishlist
I've been here
Visited
National Gallery (London)
United Kingdom

National Gallery (London) is a tourist attraction, one of the Art

Add to wishlist
I've been here
Visited
National Portrait Gallery (London)
United Kingdom

National Portrait Gallery (London) is a tourist attraction, one of

Add to wishlist
I've been here
Visited
Leicester Square
United Kingdom

Leicester Square is a tourist attraction, one of the Town squares in

Add to wishlist
I've been here
Visited
Wyndham's Theatre
United Kingdom

Wyndham's Theatre is a tourist attraction, one of the Theatres in

Add to wishlist
I've been here
Visited
Duke of York Column
United Kingdom

Duke of York Column is a tourist attraction, one of the Monuments and

Add to wishlist
I've been here
Visited
Horse Guards Parade
United Kingdom

Horse Guards Parade is a tourist attraction, one of the Town squares

Add to wishlist
I've been here
Visited
Victoria Embankment Gardens
United Kingdom

Victoria Embankment Gardens is a tourist attraction, one of the

Similar tourist attractions

See all See all
Add to wishlist
I've been here
Visited
Hősök tere
Hungary

Hősök tere is a tourist attraction, one of the Town squares in B

Add to wishlist
I've been here
Visited
Grand Army Plaza
United States

Grand Army Plaza is a tourist attraction, one of the Town squares in

Add to wishlist
I've been here
Visited
Place des Victoires
ಫ್ರಾನ್ಸ್

Place des Victoires is a tourist attraction, one of the Town squares

Add to wishlist
I've been here
Visited
Praza de María Pita
Spain

Praza de María Pita is a tourist attraction, one of the Town squares

Add to wishlist
I've been here
Visited
Churchill Square (Edmonton)
Canada

Churchill Square (Edmonton) is a tourist attraction, one of the Town

See all similar places