Clock towers in London

ಬಿಗ್ ಬೆನ್

9.7/10

ಬಿಗ್ ಬೆನ್ ಎಂಬುದು ಲಂಡನ್‌ನ್ನಿನ ವೆಸ್ಟ್‌ಮಿನ್‌ಸ್ಟರ್ ಅರಮನೆಯ ಉತ್ತರ ದಿಕ್ಕಿನ ಕೊನೆಯಲ್ಲಿರುವ ದೊಡ್ಡ ಗಂಟೆಯುಳ್ಳ ಗಡಿಯಾರಕ್ಕೆ ನೀಡಲಾದ ಉಪನಾಮ ಅಥವಾ ಸಂಕ್ಷಿಪ್ತ ಅಡ್ಡ ಹೆಸರು. ಅಲ್ಲದೇ ಇದು ಸಾಮಾನ್ಯವಾಗಿ ಗಡಿಯಾರ ಅಥವಾ ಗಡಿಯಾರದ ಗೋಪುರವೆಂದೂ ಸಹ ಸೂಚಿಸಲ್ಪಡುತ್ತದೆ. ಕೆಲವರು ಈ ಅರ್ಥ ವಿಸ್ತರಣೆಯನ್ನು ಅಶುದ್ಧವೆಂದು ಪರಿಗಣಿಸುತ್ತಾರೆ, ಆದರೆ ಇದೀಗ ಇದನ್ನು ಸಂಪೂರ್ಣವಾಗಿ ದೈನಂದಿನ ಬಳಕೆಯಲ್ಲಿ ತರಲಾಗುತ್ತದೆ. ಇದು ನಾಲ್ಕು ಮುಖದ ಅತ್ಯಧಿಕ ಪ್ರಮಾಣದಲ್ಲಿ ಘಂಟಾ ನಾದ ಹೊರಡಿಸುವ ಗಡಿಯಾರವಾಗಿದ್ದು, ವಿಶ್ವದ ಮೂರನೇ-ಅತ್ಯಂತ ದೊಡ್ಡದು ಎನ್ನಲಾದ, ಪ್ರತ್ಯೇಕ ಗಡಿಯಾರ ಗೋಪುರವಾಗಿದೆ. ಇದು ಮೇ ೨೦೦೯ರಲ್ಲಿ ತನ್ನ ೧೫೦ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ ಹಲವಾರು ಸಮಾರಂಭಗಳು ಏರ್ಪಟ್ಟಿದ್ದವು. ಗಡಿಯಾರದ ನಿರ್ಮಾಣ ಕಾರ್ಯವು ಏಪ್ರಿಲ್ ೧೦, ೧೮೫೮ರಲ್ಲಿ ಮುಕ್ತಾಯಗೊಂಡು ಆಗ ಅದು ಕಾರ್ಯತತ್ಪರವಾಯಿತು.

ಗೋಪುರ

ವೆಸ್ಟ್‌ಮಿನಸ್ಟರ್ ನ ಹಳೆ ಅರಮನೆಯು ೧೬ ಅಕ್ಟೋಬರ್ ೧೮೩೪ರಲ್ಲಿ ಬೆಂಕಿಗಾಹುತಿಯಾದ ನಂತರ, ಚಾರ್ಲ್ಸ್ ಬ್ಯಾರಿಯವರ ಹೊಸ ಅರಮನೆಯ ವಿನ್ಯಾಸದ ಒಂದು ಭಾಗವಾಗಿ ಈಗಿರುವ ಗೋಪುರವನ್ನು ನಿರ್ಮಿಸಲಾಯಿತು. ಹೊಸ ಸಂಸತ್ತನ್ನೂ ನವ್ಯ-ಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾಯಿತು. ಈ ಹೊಸ ಅರಮನೆಗೆ ಬ್ಯಾರಿ ಮುಖ್ಯ ವಿನ್ಯಾಸಕರಾಗಿದ್ದರೂ ಸಹ, ಈ ಗಡಿಯಾರ ಗೋಪುರದ ವಿನ್ಯಾಸಕ್ಕಾಗಿ ಅಗಸ್ಟಸ್ ಪುಗಿನ್ ರ ಮೊರೆ ಹೋದರು, ಇದು ಪುಗಿನ್ ರ ಆರಂಭಿಕ ವಿನ್ಯಾಸಗಳನ್ನೇ ಹೋಲುತ್ತದೆ; ಇದರಲ್ಲಿ ಸ್ಕಾರಿಸ್ಬ್ರಿಕ್ ಹಾಲ್ ಸಹ ಒಂದು. ಗಡಿಯಾರ ಗೋಪುರದ ವಿನ್ಯಾಸವು ಪುಗಿನ್ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ, ಸಾವನ್ನಪ್ಪುವ ಮೊದಲು ಮಾಡಿದ ಕೊನೆಯ ವಿನ್ಯಾಸವಾಗಿತ್ತು.ಅಲ್ಲದೇ ಪುಗಿನ್, ರೇಖಾನಕ್ಷೆಗಳನ್ನು ಪಡೆದುಕೊಳ್ಳಲು ಬ್ಯಾರಿ ಅವರಲ್ಲಿಗೆ ಭೇಟಿ ನೀಡುವವರಿದ್ದಾಗ ಸ್ವತಃ ಈ ರೀತಿ ಬರೆಯುತ್ತಾರೆ: "ನಾನು ನನ್ನ ಜೀವನದಲ್ಲೇ ಇಷ್ಟೊಂದು ಶ್ರಮ ವಹಿಸಿಲ್ಲ, ನಾಳೆ ಶ್ರೀ ಬ್ಯಾರಿಯವರು ಬಂದಾಗ ಗಂಟೆ ಗೋಪುರದ ಬಗ್ಗೆ ನಾನು ಮಾಡಿದ ಎಲ್ಲ ವಿನ್ಯಾಸವನ್ನು ಅವರಿಗೆ ನೀಡುತ್ತೇನೆ, ಅಲ್ಲದೇ ಇದು ಬಹಳ ಸುಂದರವಾಗಿ ಮೂಡಿ ಬಂದಿದೆ." ಗೋಪುರವು ಪುಗಿನ್ ರ ಪ್ರಸಿದ್ಧ ಗೋಥಿಕ್ ಪುನರುದಯದ ಶೈಲಿಯಲ್ಲಿ ವಿನ್ಯಾಸಗೊಂಡಿದೆ, ಹಾಗು ಇದು ರಷ್ಟು ಎತ್ತರವಿದೆ. (ಸರಿಸುಮಾರು ೧೬ ಮಹಡಿಗಳು).

ಗಡಿಯಾರ ಗೋಪುರದ ಮೂಲಾಧಾರವಾದ ಕೆಳಭಾಗದ 61 metres (200 ft)ವಿನ್ಯಾಸವು ಇಟ್ಟಿಗೆಯ ರಚನೆಯೊಂದಿಗೆ ಮರಳಿನ ಬಣ್ಣದ ಆನ್ಸ್ಟನ್ ಸುಣ್ಣದಕಲ್ಲಿನ ಲೇಪನವನ್ನು ಹೊಂದಿದೆ. ಗೋಪುರದ ಉಳಿದ ಭಾಗವು ಬೀಡುಕಬ್ಬಿಣದಿಂದ ರಾಚನಿಕ ವಿನ್ಯಾಸಗೊಂಡಿರುವ ಶಿಖರದಿಂದ ಕೂಡಿದೆ. ಗೋಪುರವನ್ನು ಗಟ್ಟಿಯಾದ ಜಲ್ಲಿಗಾರೆಯಿಂದ3-metre (9.8 ft) ತಯಾರಿಸಲಾದ ಚಪ್ಪಟೆಯಾಕಾರದ15-metre (49 ft) ತೇಲೊಡ್ಡುಗಳ ಮೇಲೆ ನಿರ್ಮಿಸಲಾಗಿದೆ. ಇದು ನೆಲ ಮಟ್ಟಕ್ಕಿಂತ ಕೆಳಗೆ 4 metres (13 ft)ರಷ್ಟು ಆಳ ಹೊಂದಿದೆ. ಗಡಿಯಾರದ ನಾಲ್ಕು ಮುಖಬಿಲ್ಲೆಗಳು55 metres (180 ft) ಭೂಮಿಯಿಂದ ಸ್ವಲ್ಪ ಎತ್ತರದಲ್ಲಿವೆ. ಗೋಪುರದ ಆಂತರಿಕ ಗಾತ್ರದ ಘನ ಅಳತೆಯು ೪,೬೫೦ ಕ್ಯೂಬಿಕ್ ಮೀಟರ್ ಗಳಷ್ಟಾಗಿದೆ. (೧೬೪,೨೦೦ ಕ್ಯೂಬಿಕ್ ಅಡಿ)

ವಿಶ್ವದ ಅತ್ಯಂತ ಪ್ರಸಿದ್ಧ ಪ್ರವಾಸೀ ಆಕರ್ಷಣೆಗಳಲ್ಲಿ ಒಂದಾಗಿರುವುದರ ಹೊರತಾಗಿಯೂ, ಗೋಪುರದ ಒಳಭಾಗಕ್ಕೆ ವಿದೇಶಿ ಪ್ರವಾಸಿಗರಿಗೆ ಅವಕಾಶ ನೀಡಲಾಗುವುದಿಲ್ಲ. ಆದಾಗ್ಯೂ ಯುನೈಟೆಡ್ ಕಿಂಗ್ಡಮ್ ನ ನಿವಾಸಿಗಳು ಸಂಸತ್ತಿನ ಸದಸ್ಯರುಗಳ ಮೂಲಕ ಪ್ರವಾಸಗಳನ್ನು(ಪೂರ್ವಭಾವಿಯಾಗಿ) ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಆದಾಗ್ಯೂ, ಗೋಪುರದಲ್ಲಿ ಯಾವುದೇ ಲಿಫ್ಟ್ ವ್ಯವಸ್ಥೆಯಿಲ್ಲ, ಈ ರೀತಿಯಾಗಿ ಶಿಖರದ ಮೇಲ್ಭಾಗದ ತನಕ ಹೋಗಲು ಇಚ್ಛಿಸುವವರು ಸುಣ್ಣದಕಲ್ಲಿನ ೩೩೪ ಮೆಟ್ಟಿಲುಗಳನ್ನೂ ಹತ್ತಿ ಹೋಗಬೇಕು.

ನಿರ್ಮಾಣದಿಂದೀಚೆಗೆ ಭೂಮಿಯ ಮೇಲ್ಮೈನಲ್ಲಿ ಆದ ಬದಲಾವಣೆಗಳ ಕಾರಣದಿಂದ(ಗಮನಾರ್ಹವಾಗಿ, ಲಂಡನ್ ನ ನೆಲಭಾಗದ ಜ್ಯುಬಿಲಿ ಲೈನ್ ವಿಸ್ತೃತ ನಿರ್ಮಾಣಕ್ಕೆ ಮಾಡಲಾದ ಸುರಂಗ ಮಾರ್ಗ), ಗೋಪುರವು ವಾಯವ್ಯಕ್ಕೆ ಸ್ವಲ್ಪಮಟ್ಟಿಗೆ ಬಾಗಿದೆ.ಹೀಗಾಗಿ ಸರಿಸುಮಾರು ೨೨೦ ಮಿಲಿಮೀಟರ್(೮.೬೬)ಗಳಷ್ಟು ಗಡಿಯಾರದ ಮುಖಬಿಲ್ಲೆಗಳು ಬಾಗಿವೆ; ಇದು ಸರಾಸರಿ ೧/೨೫೦ರಷ್ಟು ಓರೆಯಾಗಿದೆ. ಶಾಖಧಾರಕ ಪರಿಣಾಮಗಳ ಕಾರಣ, ಇದು ವಾರ್ಷಿಕವಾಗಿ ಪೂರ್ವದಿಂದ ಪಶ್ಚಿಮಕ್ಕೆ ಕೆಲವು ಮಿಲಿಮೀಟರ್ ಗಳಷ್ಟು ತೂಗಾಡುತ್ತದೆ.

ಗಡಿಯಾರ

ಮುಖಬಿಲ್ಲೆಗಳು

ಗಡಿಯಾರದ ಮುಖಬಿಲ್ಲೆಗಳು ಎಷ್ಟು ದೊಡ್ಡವೆಂದರೆ ಗಡಿಯಾರದ ಗೋಪುರವು ಒಂದೊಮ್ಮೆ ವಿಶ್ವದ ಅತ್ಯಂತ ದೊಡ್ಡ,ವಿಶಾಲವಾದ ನಾಲ್ಕು-ಮುಖದ ಗಡಿಯಾರವೆನಿಸಿತ್ತು.

ಗಡಿಯಾರ ಹಾಗು ಮುಖಬಿಲ್ಲೆಗಳನ್ನು ಅಗಸ್ಟಸ್ ಪುಗಿನ್ ವಿನ್ಯಾಸಗೊಳಿಸಿದ್ದಾರೆ. ಗಡಿಯಾರದ ಮುಖಬಿಲ್ಲೆಗಳು ಕಬ್ಬಿಣ ಚೌಕಟ್ಟಿನಲ್ಲಿ 7 metres (23 ft)ರಷ್ಟು ವ್ಯಾಸದಲ್ಲಿ ರಚನೆಯಾಗಿವೆ, ಇವು ಬಣ್ಣದ ಗಾಜಿನ ಕಿಟಕಿಗಿಂತ ಹೆಚ್ಚಾಗಿ ೩೧೨ ತುಂಡುಗಳ ಅರೆಪಾರದರ್ಶಕ ಬಿಳಿಗಾಜನ್ನು ಆಧಾರವಾಗಿ ಹೊಂದಿವೆ. ಕೆಲವೊಂದು ಗಾಜಿನ ತುಂಡುಗಳನ್ನು ಅದರ ಮುಳ್ಳುಗಳ ಪರಿಶೀಲನೆಗಾಗಿ ತೆಗೆಯಬಹುದು. ಮುಖಬಿಲ್ಲೆಗಳ ಸುತ್ತಲೂ ಚಿನ್ನದ ಲೇಪ ಹಾಕಲಾಗಿದೆ. ಪ್ರತಿ ಗಡಿಯಾರದ ಮುಖಬಿಲ್ಲೆಯ ಕೆಳಗೆ ಲ್ಯಾಟಿನ್ ಅಭಿಲೇಖವು ಹೊಂಬಣ್ಣದ ಅಕ್ಷರಗಳಲ್ಲಿವೆ:

DOMINE SALVAM FAC REGINAM NOSTRAM VICTORIAM PRIMAM

ಇದರರ್ಥ ಓ ದೇವರೇ, ನಮ್ಮ ರಾಣಿ ಮೊದಲನೇ ವಿಕ್ಟೋರಿಯಾಳನ್ನು ಸುರಕ್ಷಿತವಾಗಿರಿಸು .

ಚಲನೆ

ಗಡಿಯಾರದ ಚಲನೆಯು ಅದರ ವಿಶ್ವಾಸಾರ್ಹತೆಗೆ ಹೆಸರಾಗಿದೆ. ವಕೀಲ ಹಾಗು ಹವ್ಯಾಸಿ ಗಡಿಯಾರ ನಿರ್ಮಾಪಕ ಎಡ್ಮಂಡ್ ಬೆಕೆಟ್ ಡೆನಿಸನ್, ಹಾಗು ಅಸ್ಟ್ರಾನಮರ್ ರಾಯಲ್(ಆಸ್ಥಾನದ ಖಗೋಳಶಾಸ್ತ್ರಜ್ಞ) ಜಾರ್ಜ್ ಐರಿ, ಇದರ ವಿನ್ಯಾಸಕಾರರಾಗಿದ್ದಾರೆ. ಇದರ ರಚನೆಯ ಜವಾಬ್ದಾರಿಯನ್ನು ಎಡ್ವರ್ಡ್ ಜಾನ್ ಡೆಂಟ್ ಗೆ ವಹಿಸಲಾಗಿತ್ತು; ೧೮೫೩ರಲ್ಲಿ ಆತನ ನಿಧನದ ನಂತರ ಆತನ ಮಲಮಗ ಫ್ರೆಡ್ರಿಕ್ ಡೆಂಟ್ ೧೮೫೪ರಲ್ಲಿ ನಿರ್ಮಾಣಕಾರ್ಯವನ್ನು ಪೂರ್ಣಗೊಳಿಸಿದ. ಗೋಪುರದ ನಿರ್ಮಾಣವು ೧೮೫೯ರವರೆಗೂ ಪೂರ್ಣಗೊಳ್ಳದ ಕಾರಣ, ಡೆನಿಸನ್ ಗೆ ತಯಾರಾದ ಗಡಿಯಾರದಲ್ಲಿ ಪ್ರಯೋಗ ಮಾಡಲು ಸಮಯ ದೊರೆಯಿತು: ಮೂಲತಃ ವಿನ್ಯಾಸಗೊಂಡಂತೆ ದುಬಾರಿ ವೆಚ್ಚದ ಡೆಡ್ ಬೀಟ್ ಸಂಯೋಜಕ ಹಾಗು ಯಾಂತ್ರಿಕ ಗಡಿಯಾರ ನಿರ್ಮಾಣವನ್ನು ಬಳಸುವುದರ ಬದಲಾಗಿ, ಡೆನಿಸನ್, ಜೋಡಿ ಮೂರು-ಕಾಲುಗಳುಳ್ಳ ಗುರುತ್ವ ಸಂಯೋಜಕವನ್ನು ಕಂಡುಹಿಡಿದರು. ಈ ಸಂಯೋಜಕವು, ಪೆಂಡುಲಂ(ಲೋಲಕದಂಡ) ಹಾಗು ಗಡಿಯಾರದ ಯಾಂತ್ರಿಕತೆಯ ನಡುವೆ ಉತ್ತಮವಾದ ವಿಯೋಜನೆಯನ್ನು ಒದಗಿಸುತ್ತದೆ. ಪೆಂಡುಲಂನ್ನು, ಗಡಿಯಾರ ಕೋಣೆಯ ಕೆಳಗೆ ಮುಚ್ಚಿದ ಗಾಳಿಯಾಡದ ಪೆಟ್ಟಿಗೆಯಲ್ಲಿ ಇಡಲಾಗಿರುತ್ತದೆ. ಇದು ೩.೯ ಮೀಟರ್ ಉದ್ದ, ೩೦೦ kg ತೂಕವಿದ್ದು ಹಾಗು ಪ್ರತಿ ಎರಡು ಸೆಕೆಂಡಿಗೊಮ್ಮೆ ಶಬ್ದ ಹೊರಡಿಸುತ್ತದೆ. ಕೆಳಗಿನ ಕೊಠಡಿಯಲ್ಲಿರುವ ಗಡಿಯಾರದಲ್ಲಿನ ಯಂತ್ರೋಪಕರಣದ ವಿನ್ಯಾಸವು ೫ ಟನ್ ಗಿಂತಲೂ ಕಡಿಮೆ ತೂಕ ಹೊಂದಿದೆ. ಪೆಂಡುಲಂನ ಮೇಲ್ಭಾಗದಲ್ಲಿ ಹಳೆಯ ಪೆನ್ನಿ ನಾಣ್ಯಗಳ ಜೋಡಿಸಿ ಪೇರಿಸಿರುವ ಒಂದು ಸಣ್ಣ ರಾಶಿಯಿದೆ; ಇವುಗಳು ಗಡಿಯಾರದ ಸಮಯವನ್ನು ಸರಿಹೊಂದಿಸುತ್ತವೆ. ಒಂದು ನಾಣ್ಯವನ್ನು ಅದಕ್ಕೆ ಸೇರಿಸಿದಾಗ, ಲೋಲಕದ ಗಾತ್ರದ ದ್ರವ್ಯಕೇಂದ್ರದ ಸ್ಥಾನವು ಅತ್ಯಲ್ಪ ಪ್ರಮಾಣದಲ್ಲಿ ಮೇಲಕ್ಕೇರುತ್ತದೆ;ಇದು ಲೋಲಕದ ದಂಡವು ಹೊಂದಿರುವ ಉದ್ದವನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ, ಅಲ್ಲದೇ ಈ ರೀತಿಯಾಗಿ ಪೆಂಡುಲಂ ಅತ್ತಿಂದಿತ್ತ ತೂಗಾಡುವ ಪ್ರಮಾಣವೂ ಹೆಚ್ಚಾಗುತ್ತದೆ. ಗಡಿಯಾರಕ್ಕೆ ಒಂದು ನಾಣ್ಯವನ್ನು ಸೇರಿಸುವುದು ಅಥವಾ ತೆಗೆದುಹಾಕುವುದರಿಂದ ಗಡಿಯಾರದ ವೇಗದಲ್ಲಿ ಪ್ರತಿ ದಿನಕ್ಕೆ ೦.೪ ಸೆಕೆಂಡ್ ನಷ್ಟು ಬದಲಾವಣೆ ಕಾಣಿಸುತ್ತದೆ.

ಆಗ ೧೦ ಮೇ ೧೯೪೧ರಲ್ಲಿನ, ಜರ್ಮನ್ನರ ಬಾಂಬ್ ದಾಳಿಯು ಗಡಿಯಾರದ ಎರಡು ಮುಖಬಿಲ್ಲೆಗಳಿಗೆ ಹಾಗು ಗೋಪುರದ ಮೆಟ್ಟಲಿನ ಚಾವಣಿಯ ಭಾಗಕ್ಕೆ ಹಾನಿಯುಂಟುಮಾಡುವುದರ ಜೊತೆಗೇ ಹೌಸ್ ಆಫ್ ಕಾಮನ್ಸ್ ನ ಕೊಠಡಿಗೂ ಹಾನಿ ಉಂಟಾಯಿತು. ವಾಸ್ತುಶಿಲ್ಪಿ ಮತ್ತು ವಿನ್ಯಾಸಕಾರ ಸರ್ ಗೈಲ್ಸ್ ಗಿಲ್ಬರ್ಟ್ ಸ್ಕಾಟ್, ಹೊಸ ಶೈಲಿಯ ಐದು ಮಹಡಿಯ ಕೊಠಡಿಗಳನ್ನು ವಿನ್ಯಾಸಗೊಳಿಸಿದರು. ಪ್ರಸಕ್ತ ಭವನವು ಎರಡು ಮಹಡಿಗಳನ್ನು, ಆಕ್ರಮಿಸಿಕೊಂಡು ೨೬ ಅಕ್ಟೋಬರ್ ೧೯೫೦ರಲ್ಲಿ ಮೊದಲ ಬಾರಿಗೆ ತನ್ನ ಕಾರ್ಯ ಆರಂಭಿಸಿತು. ದೊಡ್ಡ ಪ್ರಮಾಣದಲ್ಲಿ ನಡೆದ ಬಾಂಬ್ ದಾಳಿಯ ಹೊರತಾಗಿಯೂ ಗಡಿಯಾರವು ನಿಖರವಾಗಿ ಹಾಗು ಕ್ಷಿಪ್ರ ದಾಳಿ ಸಂದರ್ಭದ,ದಿ ಬ್ಲಿಟ್ಜ್ ನುದ್ದಕ್ಕೂ ಗಂಟೆ ಬಾರಿಸಿ ಸಮಯವನ್ನು ಸೂಚಿಸಿತು.

ಅಸಮರ್ಪಕ ಕಾರ್ಯಗಳು, ನಿಲುಗಡೆಗಳು, ಹಾಗು ಇತರ ಸ್ಥಗಿತದ ಅವಧಿಗಳು

  • ೧೯೧೬: ವಿಶ್ವ ಮಹಾಯುದ್ಧ I,ರ ಎರಡು ವರ್ಷಗಳ ಅವಧಿಯಲ್ಲಿ, ಗಂಟೆಗಳನ್ನು ನಿಶಬ್ದಗೊಳಿಸಲಾಗಿತ್ತು, ಹಾಗು ಜರ್ಮನ್ ಜೆಪ್ಪೆಲಿನ್ ಗಳ (ಯುದ್ದ ವಿಮಾನಗಳ ಮೂಲಕದ)ಆಕ್ರಮಣ ತಡೆಗಟ್ಟಲು ಗಡಿಯಾರದ ಮುಖಭಾಗವನ್ನು ನೆರಳುಗವಿಸಲಾಗುತ್ತಿತ್ತು.
  • ಸೆಪ್ಟೆಂಬರ್ ೧, ೧೯೩೯: ಗಂಟೆಗಳು ನಿರಂತರವಾಗಿ ಶಬ್ದ ಹೊರಡಿಸುತ್ತಿದ್ದರೂ, ಗಡಿಯಾರದ ಮುಖಭಾಗಗಳನ್ನು ಎರಡನೇ ವಿಶ್ವ ಸಮರದುದ್ದಕ್ಕೂ ಬ್ಲಿಟ್ಜ್ ವಿಮಾನಚಾಲಕರಿಗೆ ಮಾರ್ಗದರ್ಶನ ಪಡೆಯಲು ಸಾಧ್ಯವಾಗದಂತೆ ರಾತ್ರಿ ಅವಧಿಯಲ್ಲಿ ಮಸುಕುಗೊಳಿಸಲಾಗುತ್ತಿತ್ತು.
  • ಹೊಸ ವರ್ಷಾಚರಣೆ ಸಂದರ್ಭ,೧೯೬೨: ದೊಡ್ಡ ಮುಳ್ಳಿನ ಮೇಲೆ ಸಂಗ್ರಹವಾಗುವ ಭಾರಿ ಹಿಮ ಹಾಗು ಮಂಜಿನ ಕಾರಣದಿಂದಾಗಿ ಗಡಿಯಾರದ ಚಲನೆಯು ನಿಧಾನಗೊಂಡಿತು.ಇದು ತಾಂತ್ರಿಕ ಭಾಗದ ಬೇರೆಡೆ ಉಂಟಾಗುವ ಹಾನಿಯನ್ನು ತಡೆಗಟ್ಟಲು ಗಡಿಯಾರದ ಯಾಂತ್ರಿಕತೆಯಿಂದ ಪೆಂಡುಲಂ ಅನ್ನು ಪ್ರತ್ಯೇಕಗೊಳ್ಳುವಂತೆ ಮಾಡಿತು—ಪೆಂಡುಲಂ ಆಗ ಮುಕ್ತವಾಗಿ ಚಲನೆಯನ್ನು ಮುಂದುವರೆಸಿತು. ಈ ರೀತಿಯಾಗಿ ಹೊಸ ವರ್ಷದಂದು ಗಡಿಯಾರವು ೧೦ ನಿಮಿಷಗಳ ವಿಳಂಬ ಗತಿಯಲ್ಲಿ ಗಂಟೆ ಬಾರಿಸಿತು.
  • ೫ ಆಗಸ್ಟ್ ೧೯೭೬: ಗಡಿಯಾರವು ಮೊದಲ ಹಾಗು ಏಕೈಕ ಬಾರಿಗೆ ಪ್ರಮುಖ ನಿಲುಗಡೆಯ ವೈಫಲ್ಯ ಕಂಡಿತು. ಶಬ್ದ ಹೊರಡಿಸುವ ಯಾಂತ್ರಿಕತೆಯ ಏರ್ ಬ್ರೇಕ್ ವೇಗ ನಿಯಂತ್ರಕಕ್ಕೆ ೧೦೦ ವರ್ಷಗಳಲ್ಲಿ ತಿರುಚುವಿಕೆಯ ದುರ್ಬಲತೆಯು ಮೊದಲ ಬಾರಿಗೆ ಉಂಟಾಯಿತು, ಇದು ೪ ಟನ್ ತೂಕದ ತಿರುಚು ಡ್ರಂನ ತಿರುಗುವಿಕೆಗೆ ಸಂಪೂರ್ಣ ಹಾನಿಯನ್ನು ಉಂಟುಮಾಡುವುದರ ಜೊತೆಗೆ ದೊಡ್ಡ ಮಟ್ಟದ ಹಾನಿಯನ್ನೂ ಮಾಡಿತು. ಒಂಬತ್ತು ತಿಂಗಳಲ್ಲಿ ಈ ಬೃಹತ್ ಗಡಿಯಾರವನ್ನು ಒಟ್ಟಾರೆ ೨೬ ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು - ಇದು ಮತ್ತೆ ೯ ಮೇ ೧೯೭೭ರಲ್ಲಿ ಮತ್ತೆ ಸಕ್ರಿಯಗೊಂಡಿತು; ಇದರ ನಿರ್ಮಾಣದಿಂದೀಚೆಗೆ ಇಷ್ಟು ದೀರ್ಘಾವಧಿಗೆ ಸ್ಥಗಿತಗೊಂಡಿದ್ದು ಇದೇ ಮೊದಲ ಬಾರಿಯಾಗಿತ್ತು. ಈ ಅವಧಿಯಲ್ಲಿ BBC ರೇಡಿಯೋ ೪ ಪಿಪ್ ಗಳ(ರೇಡಿಯೋದಲ್ಲಿ ಧ್ವನಿ ಸಂಕೇತಗಳಲ್ಲಿ ಕಾಲಮಾನ ಸೂಚಿಸಲು ಸಾಮಾನ್ಯವಾಗಿ ಯಾಂತ್ರಿಕವಾಗಿ ಹೊರಡಿಸುವ ತಂತಿ ಸ್ವರದ ತಾರಶ್ರುತಿಯ ಸಾಂಪ್ರದಾಯಿಕ ಹೃಸ್ವಧ್ವನಿ) ಮೂಲಕ ಪ್ರಸಾರ ಮಾಡಬೇಕಿತ್ತು. ಆಗ ೧೯೭೭ ರಿಂದ ೨೦೦೨ರವರೆಗಿನ ಅವಧಿಯಲ್ಲಿ ಈ ಗಡಿಯಾರವು ಅಲ್ಪಾವಧಿಗೆ ಸ್ಥಗಿತಗೊಂಡಿತ್ತಾದರೂ, ಗಡಿಯಾರ ತಯಾರಿಕೆ ಸಂಸ್ಥೆಯಾದ ಥ್ವೈಟ್ಸ್ & ರೀಡ್ ಎಂಬ ಹಳೆ ಸಂಸ್ಥೆಯು ಇದರ ನಿರ್ವಹಣೆ ಮಾಡುತ್ತಿತ್ತು. ಇದನ್ನು ಸಾಮಾನ್ಯವಾಗಿ ಎರಡು ಗಂಟೆಗಳ ಸ್ಥಗಿತಾವಧಿಯಲ್ಲಿಯೇ ದುರಸ್ತಿ ಮಾಡಲಾಗುತ್ತದೆ, ಆದರೆ ಆಗ ಸ್ಥಗಿತಗೊಂಡಿದ್ದರ ಬಗ್ಗೆ ಯಾವುದೇ ದಾಖಲೆಯಾಗಿಲ್ಲ. ನಂತರ ೧೯೭೦ಕ್ಕೆ ಮುಂಚೆ, ಗಡಿಯಾರದ ನಿರ್ವಹಣೆಯನ್ನು ಡೆಂಟ್ಸ್ ಎಂಬ ಹಳೆಯ ಸಂಸ್ಥೆಯು ಮಾಡುತ್ತಿತ್ತು, ಹಾಗು ೨೦೦೨ರಿಂದೀಚೆಗೆ ಇದರ ನಿರ್ವಹಣೆಯನ್ನು ಸಂಸತ್ತಿನ ಸಿಬ್ಬಂದಿಯವರು ಮಾಡುತ್ತಾರೆ.
  • ೨೭ ಮೇ ೨೦೦೫: ಸ್ಥಳೀಯ ಕಾಲಮಾನ ೧೦:೦೭ ಗಡಿಯಾರವು ಸ್ಥಗಿತಗೊಂಡಿತ್ತು, ಇದು ಬಹುಶಃ ಬಿಸಿಯಾದ ವಾತಾವರಣಕ್ಕಿರಬಹುದು; ಲಂಡನ್ ನಲ್ಲಿನ ತಾಪಮಾನವು ಅಕಾಲಿಕವಾಗಿ ೩೧.೮ °C (೯೦ °F)ನಷ್ಟು ತಲುಪಿತು. ಇದು ಮತ್ತೆ ಸಕ್ರಿಯಗೊಂಡಿತಾದರೂ, ಮತ್ತೊಮ್ಮೆ ಸ್ಥಳೀಯ ಕಾಲಮಾನ ೧೦:೨೦ pmಗೆ ಸ್ಥಗಿತಗೊಂಡಿತು. ಜೊತೆಗೆ ಮತ್ತೆ ಸಕ್ರಿಯಗೊಳ್ಳುವ ಮೊದಲು ೯೦ ನಿಮಿಷಗಳ ಕಾಲ ನಿಂತುಹೋಗಿತ್ತು.
  • ೨೯ ಅಕ್ಟೋಬರ್ ೨೦೦೫: ಗಡಿಯಾರದ್ದು ಯಾಂತ್ರಿಕತೆಯು ಸುಮಾರು ೩೩ ಗಂಟೆಗಳ ಅವಧಿಗೆ ಸ್ಥಗಿತಗೊಂಡಿತ್ತು, ಈ ಸಂದರ್ಭದಲ್ಲಿ ಗಡಿಯಾರ ಹಾಗು ಅದರ ಗಂಟೆ ಸದ್ದನ್ನು ಸರಿಪಡಿಸಲಾಯಿತು. ಇದು ೨೨ ವರ್ಷಗಳ ಅವಧಿಯಲ್ಲಿ ಅತ್ಯಂತ ದೀರ್ಘಾವಧಿಗೆ ಸ್ಥಗಿತಗೊಂಡಿತ್ತು.
  • ಬೆಳಗ್ಗೆ ೭:೦೦ ಗಂಟೆ ೫ ಜೂನ್ ೨೦೦೬: ಗಡಿಯಾರ ಗೋಪುರದ "ಕ್ವಾರ್ಟರ್ ಬೆಲ್ಸ್" ನಾಲ್ಕು ವಾರಗಳ ಕಾಲ ಕೆಟ್ಟು ಹೋಗಿತ್ತು.ಏಕೆಂದರೆ ಕ್ವಾರ್ಟರ್ ಬೆಲ್ ಗಳಲ್ಲಿ ಒಂದು ಬೇರಿಂಗ್ ಗೆ (ಘರ್ಷಣೆಯನ್ನು ತಡೆದುಕೊಳ್ಳುವ ಯಂತ್ರದ ಭಾಗಗಳು) ಅದನ್ನು ಅಳವಡಿಸಿದಂದಿನಿಂದ ಮೊದಲ ಬಾರಿಗೆ ಹಾನಿಗೊಳಪಟ್ಟಿತ್ತು, ಹಾಗು ಇದನ್ನು ದುರಸ್ತಿಗಾಗಿ ತೆಗೆಯಲೇಬೇಕಿತ್ತು. ಈ ಅವಧಿಯಲ್ಲಿ, BBC ರೇಡಿಯೋ ೪ ಪ್ರಸರಣವು, ಸಾಮಾನ್ಯ ಸಾಲುಗಂಟೆಗೆ ಬದಲಾಗಿ ಬ್ರಿಟಿಷ್ ಪಕ್ಷಿಗಾನ ಹಾಗು ಪಿಪ್ ಗಳನ್ನು ಪ್ರಸಾರ ಮಾಡಿತು.
  • ೧೧ ಆಗಸ್ಟ್ ೨೦೦೭: ನಿರ್ವಹಣಾ ಕಾರ್ಯಕ್ಕಾಗಿ ೬ ವಾರಗಳ ಕಾಲ ಗಡಿಯಾರವನ್ನು ಸ್ಥಗಿತಗೊಳಿಸಲಾಗಿತ್ತು. ಗಡಿಯಾರದ ಗೋಯಿಂಗ್ ಟ್ರೈನ್(ಗಡಿಯಾರದ ಮುಳ್ಳುಗಳನ್ನು ಸಂಘಟ್ಟಿಸುವ ಸಲಕರಣೆ) ಬೇರಿಂಗ್ ಗಳು ಹಾಗು "ದೊಡ್ಡ ಗಂಟೆಯ" ನಾಲಿಗೆಯನ್ನು ಅದನ್ನು ಅಳವಡಿಸಿದಂದಿನಿಂದ ಮೊದಲ ಬಾರಿಗೆ ಬದಲಾಯಿಸಲಾಯಿತು. ನಿರ್ವಹಣಾ ಕಾರ್ಯವು ನಡೆಯುತ್ತಿರುವ ಸಂದರ್ಭದಲ್ಲಿ, ಗಡಿಯಾರವು ಮೂಲ ಯಾಂತ್ರಿಕತೆಯೊಂದಿಗೆ ಕಾರ್ಯ ನಿರ್ವಹಿಸುವುದರ ಬದಲಿಗೆ, ವಿದ್ಯುತ್ ಚಾಲಿತ ಮೊಟಾರಿನಿಂದ ಕಾರ್ಯ ನಿರ್ವಹಿಸುತ್ತಿತ್ತು. ಮತ್ತೊಮ್ಮೆ, BBC ರೇಡಿಯೋ ೪, ಈ ಅವಧಿಯಲ್ಲಿ ಪಿಪ್ಸ್ ಗಳ ಸಹಾಯದೊಂದಿಗೆ ಕಾರ್ಯ ನಿರ್ವಹಿಸಬೇಕಿತ್ತು.

ಗಂಟೆಗಳು

ಬೃಹತ್ ಗಂಟೆ

ಅಧಿಕೃತವಾಗಿ ಬೃಹತ್ ಗಂಟೆ ಎಂದು ಕರೆಯಲ್ಪಡುವ ಮುಖ್ಯ ಗಂಟೆಯೂ, ಗೋಪುರದ ಅತ್ಯಂತ ದೊಡ್ಡ ಗಂಟೆಯಾಗಿದೆ; ಹಾಗು ವೆಸ್ಟ್‌ಮಿನಸ್ಟರ್ ನ ಬೃಹತ್ ಗಡಿಯಾರದ ಭಾಗವಾಗಿದೆ. ಗಂಟೆಯು ಸಂಕ್ಷಿಪ್ತವಾಗಿ ಬಿಗ್ ಬೆನ್ ಎಂಬ ಅಡ್ಡ ಹೆಸರಿನಿಂದ ಹೆಚ್ಚು ಪರಿಚಿತವಾಗಿದೆ.

ಮೂಲ ಗಂಟೆಯು ೧೬.೩-ಮೆಟ್ರಿಕ್ ಟನ್ ಗಳಷ್ಟು ಭಾರವಿದ್ದ (೧೬ ಟನ್ ಸಮಯ ಸೂಚಕ ಗಂಟೆಯಾಗಿತ್ತು, ಇದನ್ನು ೬ ಆಗಸ್ಟ್ ೧೮೫೬ರಲ್ಲಿ, ಜಾನ್ ವಾರ್ನರ್ & ಸನ್ಸ್ ಸ್ಟಾಕ್ಟನ್-ಆನ್-ಟೀಸ್ ನಲ್ಲಿ ನಿರ್ಮಿಸಿದರು. ಗಂಟೆಗೆ ಸರ್ ಬೆಂಜಮಿನ್ ಹಾಲ್ ರ ಗೌರವಾರ್ಥವಾಗಿ ಈ ಹೆಸರನ್ನು ಇರಿಸಲಾಯಿತು, ಹಾಗು ಅವರ ಹೆಸರನ್ನು ಇದರ ಮೇಲೆಯೂ ಕೆತ್ತಲಾಗಿದೆ. ಆದಾಗ್ಯೂ, ಇದಕ್ಕೆ ಸಮಕಾಲೀನ ಹೆವಿವೇಯ್ಟ್ ಬಾಕ್ಸರ್ ಬೆಂಜಮಿನ್ ಕೌಂಟ್ ರ ಹೆಸರನ್ನು ನೀಡಲಾಗಿದೆ, ಎಂಬುದು ಗಂಟೆಯ ಹೆಸರಿನ ಬಗ್ಗೆ ಇರುವ ಮತ್ತೊಂದು ಸಿದ್ಧಾಂತ. ಗಂಟೆಗೆ ಮೂಲವಾಗಿ ರಾಣಿ ವಿಕ್ಟೋರಿಯಾ ಅವರ ಗೌರವಾರ್ಥವಾಗಿ ವಿಕ್ಟೋರಿಯಾ ಅಥವಾ ರಾಯಲ್ ವಿಕ್ಟೋರಿಯಾ ಎಂದು ಹೆಸರಿಸಲು ಯೋಜಿಸಲಾಗಿತ್ತು, ಆದರೆ ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ MPಯೊಬ್ಬರು ಈ ಅಡ್ಡಹೆಸರನ್ನು ಸೂಚಿಸಿದರು; ಈ ವ್ಯಾಖ್ಯಾನದ ಚರ್ಚೆಯು ಸಂಸತ್ತಿನ ಲಿಖಿತ ಕಡತವಾದ ಹಾಂಸರ್ಡ್ ನಲ್ಲಿ ದಾಖಲೆಯಾಗಿಲ್ಲ.

ಗೋಪುರದ ನಿರ್ಮಾಣ ಕಾರ್ಯವು ಪೂರ್ಣಗೊಳ್ಳುವ ಮೊದಲೇ ಗಂಟೆಯನ್ನು ಹೊಸ ಅರಮನೆಯ ಪ್ರಾಂಗಣದಲ್ಲಿ ಸ್ಥಾಪಿಸಲಾಗಿತ್ತು. ಇದು ೧೮೫೬ರಲ್ಲಿ ಅಳವಡಿಕೆಯಾದ ನಂತರ, ಮೊದಲ ಗಂಟೆಯನ್ನು ಹದಿನಾರು ಕುದುರೆಗಳ ತಳ್ಳುಬಂಡಿಯಲ್ಲಿ ಗೋಪುರದ ಮೇಲ್ಭಾಗಕ್ಕೆ ಸಾಗಿಸಲಾಯಿತು. ಜೊತೆಗೆ ಜನಸಮೂಹದ ಜಯಕಾರದೊಂದಿಗೆ ಮೇಲಕ್ಕೆ ಸಾಗಿಸಲಾಯಿತು. ದುರದೃಷ್ಟವಶಾತ್, ಇದರ ಪರೀಕ್ಷೆ ನಡೆಸುವಾಗಿ ಸರಿಪಡಿಸಲು ಸಾಧ್ಯವಾಗದಷ್ಟು ಬಿರುಕು ಬಿಟ್ಟಿತು, ಹಾಗು ಇದಕ್ಕೆ ಬದಲಾಗಿ ಹೊಸದನ್ನು ತಯಾರಿಸುವ ಸಂದರ್ಭ ಏರ್ಪಟ್ಟಿತ್ತು. ಗಂಟೆಯನ್ನು ಮತ್ತೊಮ್ಮೆ ವೈಟ್ ಚ್ಯಾಪಲ್ ಬೆಲ್ ಫೌಂಡ್ರಿಯಲ್ಲಿ ದುರಸ್ತಿಗೊಳಿಸಿ ಹೊಸರೂಪ ನೀಡಲಾಯಿತು; ಹಾಗು ಇದು ೧೩.೭೬-ಮೆಟ್ರಿಕ್ ಟನ್ (೧೩½ ಟನ್) ಭಾರದ ಗಂಟೆಯಾಗಿತ್ತು. ಇದನ್ನು ೨೦೦ ಅಡಿ ಎತ್ತರದ ಗಡಿಯಾರ ಗೋಪುರದ ಗಂಟೆಗೂಡಿಗೆ ವಿಸ್ತರಿಸಿ ಎಳೆಯಲಾಯಿತು, ಈ ಗಮನಾರ್ಹ ಸಾಧನೆಯ ಕಾರ್ಯಕ್ಕೆ ೧೮ ಗಂಟೆಗಳ ಅವಧಿ ಹಿಡಿಯಿತು. ಇದು ೨.೨ ಮೀಟರ್ ಎತ್ತರ ಹಾಗು ೨.೯ ಮೀಟರ್ ಅಗಲವಿದೆ. ಈ ಹೊಸ ಗಂಟೆಯು ಜುಲೈ ೧೮೫೯ರಲ್ಲಿ ಮೊದಲ ಬಾರಿಗೆ ತನ್ನ ಶಬ್ದದೊಂದಿಗೆ ಸಮಯ ಸೂಚಿಸಿತು. ಸೆಪ್ಟೆಂಬರ್ ನಲ್ಲಿ ಇದರ ಕೆಳಭಾಗದಲ್ಲಿ ಸುತ್ತಿಗೆಯ ಹೊಡೆತದಿಂದ ಮತ್ತೆ ಬಿರುಕು ಕಾಣಿಸಿತು, ಕೇವಲ ಎರಡು ತಿಂಗಳ ನಂತರ ಇದು ಅಧಿಕೃತವಾಗಿ ರಿಪೇರಿಗೆ ಹೋಯಿತು. ಎರಕಗೃಹದ ನಿರ್ವಾಹಕ ಜಾರ್ಜ್ ಮೆಯರ್ಸ್ ರ ಪ್ರಕಾರ, ಡೆನಿಸನ್, ನಿರ್ದಿಷ್ಟವಾಗಿ ಸೂಚಿಸಲ್ಪಟ್ಟ ಗರಿಷ್ಠ ತೂಕಕ್ಕಿಂತ ಎರಡು ಪಟ್ಟು ಭಾರದ ಸುತ್ತಿಗೆಯನ್ನು ಬಳಸಿದ್ದ. ಮೂರು ವರ್ಷಗಳ ಕಾಲ ಬಿಗ್ ಬೆನ್ ಕೆಟ್ಟು ಹೋಗಿತ್ತು, ಹಾಗು ಇದು ರಿಪೇರಿಯಾಗುವವರೆಗೂ ಸಮಯ ಸೂಚಕ ಮುಳ್ಳುಗಳನ್ನು ಕ್ವಾರ್ಟರ್ ಬೆಲ್ ನ ಕೆಳಭಾಗದಲ್ಲಿ ಗಂಟೆ ಬಾರಿಸಿ ಸಮಯ ಸೂಚಿಸುವಂತೆ ಮಾಡಲಾಗಿತ್ತು. ರಿಪೇರಿ ಮಾಡುವಾಗ ಚೌಕಟ್ಟಾದ ಲೋಹದ ಒಂದು ಸಣ್ಣ ತುಂಡನ್ನು ಬಿರುಕು ಉಂಟಾಗಿದ್ದ ಅಂಚು ಕಟ್ಟಿನ ಸುತ್ತ ಇಟ್ಟು ಹೊಡೆಯಲಾಗಿತ್ತು;ಹಾಗು ಗಂಟೆಯು ಎಂಟು ಸುತ್ತು ಬರುವಂತೆ ಮಾಡಲಾಗಿತ್ತು, ಈ ರೀತಿಯಾಗಿ ಹೊಸ ಬಡಿಯಂತ್ರವು ಬೇರೆ ಸ್ಥಾನದಲ್ಲಿ ಬಡಿದುಕೊಳ್ಳುತ್ತಿತ್ತು. ಅಂದಿನಿಂದ ಬಿಗ್ ಬೆನ್ ವಿಚಿತ್ರವಾದ ಟಂಕಾರದಲ್ಲಿ ಬಾರಿಸುತ್ತಿತ್ತು, ಹಾಗು ಬಿರುಕನ್ನು ಸರಿಪಡಿಸಿದ್ದರ ಹೊರತಾಗಿಯೂ ಇಂದಿಗೂ ಸಹ ಇದೇ ರೀತಿ ಸದ್ದು ಹೊರಡಿಸುತ್ತದೆ. ಇದನ್ನು ಸ್ಥಾಪಿಸುವ ಸಮಯದಲ್ಲಿ, ೧೮೮೧ರಲ್ಲಿ ನಿರ್ಮಾಣಗೊಂಡು ಇಂದಿಗೂ ಸೆಂಟ್ ಪಾಲ್ಸ್ ಕಥಿಡ್ರಲ್ ನಲ್ಲಿರುವ ೧೭ ಮೆಟ್ರಿಕ್ ಟನ್(೧೬¾ ಟನ್) ಭಾರದ ಗಂಟೆಯಾದ "ಗ್ರೇಟ್ ಪಾಲ್" ನ ಸ್ಥಾಪನೆಯವರೆಗೂ ಬಿಗ್ ಬೆನ್ ಬ್ರಿಟಿಷ್ ಐಲ್ಸ್ ನ ಅತ್ಯಂತ ದೊಡ್ಡ ಗಂಟೆಯಾಗಿತ್ತು.

ನಾದತರಂಗಗಳು

ಬೃಹತ್ ಗಂಟೆಯ ಜೊತೆಯಲ್ಲಿ, ಗಂಟೆಗೋಪುರಗಳು ನಾಲ್ಕು ಕ್ವಾರ್ಟರ್ ಬೆಲ್ ಗಳನ್ನು ಒಳಗೊಂಡಿವೆ, ಇದು ಕಾಲು ಗಂಟೆಯ ಅಂತರದಲ್ಲಿ ವೆಸ್ಟ್‌ಮಿನಸ್ಟರ್ ಕ್ವಾರ್ಟರ್ಸ್ ನಲ್ಲಿ ಬಾರಿಸುತ್ತದೆ. ನಾಲ್ಕು ಕ್ವಾರ್ಟರ್ ಬೆಲ್ ಗಳೆಂದರೆ G, F, E, ಹಾಗು B. ಇದನ್ನು ಜಾನ್ ವಾರ್ನರ್ & ಸನ್ಸ್ ಸಂಸ್ಥೆಯು ೧೮೫೭ರಲ್ಲಿ ತಮ್ಮ ಕ್ರೆಸೆಂಟ್ ಫೌಂಡ್ರಿಯಲ್ಲಿ ಸ್ಥಾಪಿಸಿದೆ; (G, F ಹಾಗು B) ಹಾಗು ೧೮೫೮ (E). ಎರಕಗೃಹವು, ಲಂಡನ್ ನಗರದಲ್ಲಿ ಬಾರ್ಬಿಕನ್ ಎಂದು ಕರೆಯಲ್ಪಡುವ ಜೆವಿನ್ ಕ್ರೆಸೆಂಟ್ ನಲ್ಲಿದೆ.

ಕ್ವಾರ್ಟರ್ ಬೆಲ್ ಗಳು ೨೦-ಆವರ್ತಗಳ ಕ್ರಮಾನುಗತಿಯಲ್ಲಿ ಬಾರಿಸುತ್ತವೆ, ೧–೪ ಕಾಲುಗಂಟೆಗೊಮ್ಮೆ, ೫–೧೨ ಅರ್ಧಗಂಟೆಗೊಮ್ಮೆ, ೧೩–೨೦ ಹಾಗು ೧–೪ ಮುಕ್ಕಾಲುಗಂಟೆಗೊಮ್ಮೆ ಹಾಗು ೫–೨೦ ಒಂದು ಗಂಟೆಗೊಮ್ಮೆ ಬಾರಿಸುತ್ತದೆ.(ಇದು ಒಂದು ಗಂಟೆಗೊಮ್ಮೆ ಬಾರಿಸುವ ಮುಖ್ಯ ಗಂಟೆಗೆ ಮೊದಲು ೨೫ ಸೆಕೆಂಡುಗಳ ಕಾಲ ನಾದ ಹೊರಡಿಸುತ್ತದೆ). ಕೆಳಭಾಗದ ಗಂಟೆಯು(B) ಶೀಘ್ರ ಅನುಕ್ರಮದಲ್ಲಿ ಎರಡು ಬಾರಿ ಬಾರಿಸುವುದರಿಂದ, ಬಡಿಯಂತ್ರವು ಹಿಂದಕ್ಕೆ ಬರಲು ಹೆಚ್ಚು ಸಮಯಾವಕಾಶ ದೊರೆಯುವುದಿಲ್ಲ, ಹಾಗು ಇದಕ್ಕೆ ಗಂಟೆಯ ವಿರುದ್ಧ ದಿಕ್ಕುಗಳಲ್ಲಿ ಎರಡು ಬಲವಂತವಾಗಿ ಬಡಿಯುವ ಬಿಲ್ಮುಡಿಕೆ ಬಡಿಯಂತ್ರಗಳನ್ನು ಒದಗಿಸಲಾಗಿರುತ್ತದೆ. ಇದರಲ್ಲಿ ಹೊರಡುವ ಘಂಟಾನಾದವು ಕೇಂಬ್ರಿಡ್ಜ್ ಗಂಟೆಯದ್ದು, ಇದನ್ನು ಮೊದಲ ಬಾರಿಗೆ ಕೇಂಬ್ರಿಡ್ಜ್ ನ ಗ್ರೇಟ್ ಸೆಂಟ್ ಮೇರಿ'ಸ್ ಚರ್ಚ್ ನ ಗಂಟೆಯಲ್ಲಿ ಬಳಸಲಾಗಿತ್ತು. ಅಲ್ಲದೇ ಬಹುಶಃ, ಹಾಂಡೆಲ್ ರ ಮೆಸಿಯಾ ಮೇಲೆ ವಿಲ್ಲಿಯಮ್ ಕ್ರೊಟ್ಚ್ ಬರೆದ ಪದಗುಚ್ಛವು ಈ ಬದಲಾವಣೆಗೆ ಕಾರಣವೆಂದು ಹೇಳಲಾಗುತ್ತದೆ. ಗಂಟೆಯ ಮುಖ್ಯವಾದ ಪದಗಳು, ಮತ್ತೊಮ್ಮೆ ಗ್ರೇಟ್ ಸೆಂಟ್ ಮೇರಿ'ಸ್ ನಿಂದ ಜನ್ಯವಾಗಿವೆ, ಅಲ್ಲದೇ ಇದು ಸಾಲ್ಮ್ ೩೭:೨೩-೨೪ನ ಪ್ರಾಸಂಗಿಕ ಸೂಚನೆಯಾಗಿರಬಹುದು, ಇದರಂತೆ: "ಈ ಎಲ್ಲ ಅವಧಿಯುದ್ದಕ್ಕೂ/ದೇವರೇ ನೀನು ನನಗೆ ಮಾರ್ಗದರ್ಶಕನಾಗಿರು/ ಹಾಗು ನಿನ್ನ ಶಕ್ತಿಯಿಂದ/ಯಾವುದೇ ತಪ್ಪು ಹೆಜ್ಜೆ ಇಡದಂತೆ ಮಾಡು". ಈ ಸಾಲುಗಳನ್ನು ಗಡಿಯಾರ ಕೊಠಡಿಯ ಭಿತ್ತಿಯ ಮೇಲಿನ ಫಲಕದಲ್ಲಿ ಕೆತ್ತಲಾಗಿದೆ.

ಅಡ್ಡಹೆಸರು,ಉಪನಾಮ

ಬಿಗ್ ಬೆನ್ ಎಂಬ ಅಡ್ಡ ಹೆಸರಿನ ಮೂಲವು ಚರ್ಚಾಸ್ಪದ ವಿಷಯವಾಗಿದೆ. ಈ ಅಡ್ಡಹೆಸರನ್ನು ಮೊದಲು ಬೃಹತ್ ಗಂಟೆಗೆ ಅನ್ವಯವಾಗುವಂತೆ ನೀಡಲಾಗಿತ್ತು; ಇದು ಬಹುಶಃ ಸರ್ ಬೆಂಜಮಿನ್ ಹಾಲ್ ರ ಗೌರವಾರ್ಥವಾಗಿ ಇರಿಸಿರಬಹುದು. ಇವರು ಬೃಹತ್ ಗಂಟೆಯ ಸ್ಥಾಪನೆಯ ಮೇಲ್ವಿಚಾರಣೆ ವಹಿಸಿದ್ದರು ಅಥವಾ ಇಂಗ್ಲಿಷ್ ಹೆವಿವೈಟ್ ಬಾಕ್ಸಿಂಗ್ ಚ್ಯಾಂಪಿಯನ್ ಬೆಂಜಮಿನ್ ಕೌಂಟ್ ರ ಗೌರವಾರ್ಥವಾಗಿಯೂ ಇರಿಸಿರಬಹುದು. ಇದೀಗ ಬಿಗ್ ಬೆನ್ ಎಂಬ ಹೆಸರನ್ನು ಸಾಮಾನ್ಯವಾಗಿ, ವಿಸ್ತರಣೆಯಲ್ಲಿ ಒಟ್ಟಾರೆಯಾಗಿ ಗಡಿಯಾರ, ಗೋಪುರ ಹಾಗು ಗಂಟೆಗೆ ಸೂಚಿತವಾಗುವಂತೆ ಬಳಸಲಾಗುತ್ತದೆ.ಆದಾಗ್ಯೂ ಈ ಅಡ್ಡಹೆಸರು ಗಡಿಯಾರ ಹಾಗು ಗೋಪುರಕ್ಕೆ ಸಂಬಂಧಿಸಿದಂತೆ ಸಾರ್ವತ್ರಿಕವಾಗಿ ಸ್ವೀಕಾರವಾಗುವುದಿಲ್ಲ. ಗೋಪುರ, ಗಡಿಯಾರ ಹಾಗು ಗಂಟೆಯ ಬಗ್ಗೆ ಕೆಲವು ಲೇಖಕರ ಕೃತಿಗಳು, ಶೀರ್ಷಿಕೆಯಲ್ಲಿ ಬಿಗ್ ಬೆನ್ ಎಂಬ ಪದದ ಬಳಕೆಯ ವಿವಾದವನ್ನು ಪಕ್ಕಕ್ಕಿಟ್ಟು, ಪುಸ್ತಕವು ಗಡಿಯಾರ ಹಾಗು ಗೋಪುರ ಜೊತೆಗೆ ಗಂಟೆಯ ವಿಷಯವನ್ನು ಒಳಗೊಂಡಿದೆಯೆಂದು ಸ್ಪಷ್ಟಪಡಿಸುತ್ತವೆ.

ಜನಪ್ರಿಯ ಸಂಸ್ಕೃತಿಯಲ್ಲಿ ಇದರ ಮಹತ್ವ

ಗಡಿಯಾರವು ಯುನೈಟೆಡ್ ಕಿಂಗ್ಡಮ್ ಹಾಗು ಲಂಡನ್ ನ ಸಂಕೇತವಾಗಿದೆ. ಅದರಲ್ಲೂ ವಿಶೇಷವಾಗಿ ದೃಶ್ಯ ಮಾಧ್ಯಮದಲ್ಲಿ ಇದು ಮಹತ್ವ ಪಡೆದಿದೆ. ದೂರದರ್ಶನ ಅಥವಾ ಚಿತ್ರ ನಿರ್ಮಾಪಕರು ಬ್ರಿಟನ್ ನ ಸರ್ವ ಸಾಮಾನ್ಯ ಸ್ಥಳವನ್ನು ತೋರಿಸುವುದಾದರೆ, ಗಡಿಯಾರ ಗೋಪುರದ ಚಿತ್ರವನ್ನು ತೋರಿಸುವುದು ಅತ್ಯಂತ ಜನಪ್ರಿಯ ಮಾರ್ಗವೆನಿಸಿದೆ. ಸಾಮಾನ್ಯವಾಗಿ ಒಂದು ಕೆಂಪು ಡಬಲ್ ಡೆಕ್ಕರ್ ಬಸ್ ಅಥವಾ ಕಪ್ಪು ಕ್ಯಾಬ್ ನ್ನು ಮುನ್ನೆಲೆಯಲ್ಲಿ ಪ್ರಮುಖ ರೂಪಕವಾಗಿ ತೋರಿಸಲಾಗುತ್ತದೆ. ಗಡಿಯಾರವು ಹೊರಡಿಸುವ ನಾದವನ್ನು ಸಹ ಹಲವು ವಿಧದಲ್ಲಿ ಶ್ರಾವ್ಯ ಮಾಧ್ಯಮದಲ್ಲಿ ಬಳಸಲಾಗಿದೆ. ಆದರೆ ವೆಸ್ಟ್‌ಮಿನಸ್ಟರ್ ಕ್ವಾರ್ಟರ್ಸ್ ನಿಂದ ಕೇಳಿಬರುವ ಇತರ ಗಡಿಯಾರಗಳು ಹಾಗು ಇತರ ಸಾಧನಗಳ ಶಬ್ದವು, ಈ ನಾದದ ವಿಶಿಷ್ಟತೆಯನ್ನು ಗಮನಾರ್ಹವಾಗಿ ಮಂದಗೊಳಿಸುತ್ತವೆ.

ಗಡಿಯಾರದ ಗೋಪುರವು ಯುನೈಟೆಡ್ ಕಿಂಗ್ಡಂನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಕೇಂದ್ರಬಿಂದುವಾಗಿರುತ್ತದೆ, ಜೊತೆಗೆ ರೇಡಿಯೋ ಹಾಗು ದೂರದರ್ಶನ ಕೇಂದ್ರಗಳು ಹೊಸ ವರ್ಷವನ್ನು ಸ್ವಾಗತಿಸಲು ಗಂಟೆಯ ನಾದವನ್ನು ಪ್ರಸಾರ ಮಾಡುತ್ತವೆ. ಇದೆ ರೀತಿಯಾಗಿ, ಸ್ಮರಣ ದಿನದಂದು, ಬಿಗ್ ಬೆನ್ ನ ಗಂಟೆಯ ನಾದವನ್ನು ೧೧ನೇ ತಿಂಗಳ ೧೧ ದಿನದಂದು ೧೧ ಗಂಟೆಗೆ ಪ್ರಸಾರ ಮಾಡಲಾಗುತ್ತದೆ. ಜೊತೆಗೆ ಎರಡು ನಿಮಿಷಗಳ ಆರಂಭಿಕ ಮೌನಾಚರಣೆಯನ್ನೂ ಮಾಡಲಾಗುತ್ತದೆ.

ITNನ ಹತ್ತು ಗಂಟೆಯ ವಾರ್ತೆ ಯ ಆರಂಭಿಕ ಸರಣಿಯು ಗಡಿಯಾರ ಗೋಪುರದ ದೃಶ್ಯವನ್ನು ಒಳಗೊಂಡಿರುತ್ತದೆ. ಜೊತೆಗೆ ಬಿಗ್ ಬೆನ್ ಗಂಟೆಯ ನಾದವು ವಾರ್ತೆಯ ಮುಖ್ಯಾಂಶಗಳ ಘೋಷಣೆಯನ್ನು ವಿಂಗಡಿಸುತ್ತದೆ, ಹಾಗು ಈ ರೀತಿಯಾದ ಪ್ರಸಾರವು ಕಳೆದ ೪೧ ವರ್ಷಗಳಿಂದಲೂ ಸತತವಾಗಿ ನಡೆಯುತ್ತಿದೆ. ಬಿಗ್ ಬೆನ್ ನ ಗಂಟೆಯ ಶಬ್ದಗಳು(ITN ವಲಯದೊಳಗೆ ಇದನ್ನು "ದಿ ಬಾಂಗ್ಸ್" ಗಹನ ಗಂಟೆನಾದ ಎಂದು ಕರೆಯಲಾಗುತ್ತದೆ.) ಮುಖ್ಯಾಂಶಗಳ ಅವಧಿಯಲ್ಲಿ ಇಂದಿಗೂ ಸಹ ಬಳಸಲಾಗುತ್ತದೆ, ಹಾಗು ಎಲ್ಲ ITV ಸುದ್ದಿ, ವರದಿಗಳು ವೆಸ್ಟ್‌ಮಿನಸ್ಟರ್ ಗಡಿಯಾರ ಸೂಚಿಫಲಕಗಳ ಗ್ರ್ಯಾಫಿಕ್ ಆಧಾರವನ್ನು ಬಳಸುತ್ತವೆ. ಬಿಗ್ ಬೆನ್, BBC ರೇಡಿಯೋ ೪ನಲ್ಲಿ ಪ್ರಸಾರವಾಗುವ ಕಿರು ಸುದ್ದಿಗಳ ಮುನ್ನ ಗಂಟೆ ಹೊಡೆಯುವ ಶಬ್ದವನ್ನು ಕೇಳಬಹುದು.(ಸಂಜೆ ಆರು ಗಂಟೆಗೆ ಹಾಗು ಮಧ್ಯರಾತ್ರಿ, ಜೊತೆಗೆ ಭಾನುವಾರಗಳಂದು ರಾತ್ರಿ ಹತ್ತು ಗಂಟೆಗೆ) ಹಾಗು BBC ವರ್ಲ್ಡ್ ಸರ್ವೀಸ್, ಈ ರೂಢಿಯಾಗಿರುವ ಅಭ್ಯಾಸವು ೩೧ ಡಿಸೆಂಬರ್ ೧೯೨೩ರಿಂದ ಆರಂಭಗೊಂಡಿತು. ಗೋಪುರದಲ್ಲಿ ಶಾಶ್ವತವಾಗಿ ಅಳವಡಿಸಲಾಗಿರುವ ಮೈಕ್ರೋಫೋನ್ ಮೂಲಕ ಸರಿಯಾದ ಸಮಯವನ್ನು ಗಂಟೆಯ ನಾದದ ರೂಪದಲ್ಲಿ ಕಳುಹಿಸಲಾಗುತ್ತದೆ, ಹಾಗು ಇದು ಪ್ರಸಾರ ಕೇಂದ್ರದೊಂದಿಗೆ ಸಂಪರ್ಕ ಹೊಂದುತ್ತದೆ.

ಗಡಿಯಾರ ಗೋಪುರ ಹಾಗು ಬಿಗ್ ಬೆನ್ ನಿಂದ ಸೂಕ್ತ,ನಿಕಟ ಅಂತರದಲ್ಲಿ ವಾಸಿಸುವ ಲಂಡನ್ ನ ನಿವಾಸಿಗಳು, ಗಂಟೆಯ ನಾದದ ಮೂಲಕ ರೇಡಿಯೋ ಅಥವಾ ದೂರದರ್ಶನ ಕಾರ್ಯಕ್ರಮಗಳನ್ನು ವೀಕ್ಷಿಸುವುದರ ಜೊತೆಗೇ, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಹದಿಮೂರು ಬಾರಿ ಗಂಟೆಯ ರಿಂಗಣ ಕೇಳುತ್ತಾರೆ. ಬಹುಶಃ ಇದಕ್ಕೆ ಕಾರಣ ನೇರ ಪ್ರಸಾರ ಹಾಗು ವಿದ್ಯುತ್ ಚಾಲಿತ ಗಂಟೆಯ ನಾದಗಳ ನಡುವಿನ ವ್ಯತ್ಯಾಸ, ಏಕೆಂದರೆ ಧ್ವನಿಯ ವೇಗವು, ರೇಡಿಯೋ ತರಂಗಗಳ ವೇಗಕ್ಕಿಂತ ಬಹಳ ನಿಧಾನವಾಗಿರುತ್ತದೆ. ಗಂಟೆಯ ಬಾರಿಸುವಿಕೆಯ ತೀವ್ರತೆಯನ್ನು ಅಂದಾಜಿಸಲು ಅತಿಥಿಗಳಿಗೆ ಆಹ್ವಾನಿಸಲಾಗುತ್ತದೆ, ಅದರೊಂದಿಗೆ ರೇಡಿಯೋ ಶಬ್ದವನ್ನು ಕ್ರಮೇಣ ನಿಧಾನಗೊಳಿಸಲಾಗುತ್ತದೆ.

ಈ ಗಡಿಯಾರ ಗೋಪುರದ ದೃಶ್ಯವು ಹಲವು ಚಿತ್ರಗಳಲ್ಲಿ ಕಂಡುಬಂದಿದೆ. ಇದರಲ್ಲಿ ಗಮನಾರ್ಹವಾದುದೆಂದರೆ ೧೯೭೮ರಲ್ಲಿ ಬಿಡುಗಡೆಯಾದ ದಿ ಥರ್ಟಿ ನೈನ್ ಸ್ಟೆಪ್ಸ್ ನ ರೂಪಾಂತರ;ಇದರಲ್ಲಿನ ಸನ್ನಿವೇಶವೊಂದರಲ್ಲಿ ಚಿತ್ರದ ನಾಯಕ ರಿಚರ್ಡ್ ಹನ್ನಯ್ ಗಡಿಯಾರದ ಚಲನೆಯನ್ನು (ಬಾಂಬ್ ಆಸ್ಫೋಟನವನ್ನು ತಡೆಗಟ್ಟಲು) ಗಡಿಯಾರದ ಪಶ್ಚಿಮ ಭಾಗದ ಮುಖಬಿಲ್ಲೆಯ ನಿಮಿಷದ ಮುಳ್ಳನ್ನು ಹಿಡಿದುಕೊಂಡು ತೂಗಾಡುವ ಮೂಲಕ ಸ್ಥಗಿತಗೊಳಿಸಲು ಪ್ರಯತ್ನಿಸುತ್ತಾನೆ. ಜೇಮ್ಸ್ ಬಾಂಡ್ ನ ನಾಲ್ಕನೇ ಚಿತ್ರ ಥಂಡರ್ ಬಾಲ್ ನಲ್ಲಿ, ಬಿಗ್ ಬೆನ್ ಅವಿವೇಚಿತವಾಗಿ ಹೆಚ್ಚುವರಿಯಾಗಿ ಬಾರಿಸಬೇಕೆಂದು ಕ್ರಿಮಿನಲ್ ಸಂಸ್ಥೆ SPECTRE ನಿರ್ದಿಷ್ಟವಾಗಿ ಸೂಚಿಸುತ್ತದೆ. ಇದು ಬ್ರಿಟಿಶ್ ಸರ್ಕಾರಕ್ಕೆ ತನ್ನ ಅಣು ವಾಗ್ದಾನದ ಕೋರಿಕೆಗಳಿಗೆ ಸಮ್ಮತಿ ಸೂಚಿಸುವಂತೆ ನೀಡಿದಂತಹ ಎಚ್ಚರಿಕೆಯಾಗಿತ್ತು. ತಮಾಷೆಯಾಗಿ ಪದಗುಚ್ಛ "ಬಿಗ್ ಬೆನ್! ಸಂಸತ್ತು!" ಎಂದು ಸತತವಾಗಿ ಹೇಳುವುದರ ಮೂಲಕ ನ್ಯಾಷನಲ್ ಲ್ಯಾಮ್ಪೂನ್'ಸ್ ಯುರೋಪಿಯನ್ ವೆಕೇಶನ್ ನಲ್ಲಿ ಚೆವಿ ಚೇಸ್ ಹಾಸ್ಯದ ವಾತಾವರಣವನ್ನು ನಿರ್ಮಿಸುತ್ತಾನೆ. ಏಕೆಂದರೆ ನಿರೂಪಿತ ಕುಟುಂಬವು ಲ್ಯಾಮ್ಬೆತ್ ಬ್ರಿಡ್ಜ್ ರೌಂಡ್ ಅಬೌಟ್ ನ್ನು ಅವಲಂಬಿಸಿರುತ್ತದೆ. ಇದನ್ನು ಜ್ಯಾಕಿ ಚಾನ್ ಹಾಗು ಓವೆನ್ ವಿಲ್ಸನ್ ಅಭಿನಯದ ಶಾಂಘೈ ನೈಟ್ಸ್ ಚಿತ್ರದಲ್ಲೂ ಸಹ ಬಳಸಲಾಗಿದೆ.ಅಲ್ಲದೇ ಇದು ಡಾಕ್ಟರ್ ಹೂ ಧಾರಾವಾಹಿ ಸರಣಿಯ"ಯೆಲಿಯನ್ಸ್ ಆಫ್ ಲಂಡನ್" ನಲ್ಲಿ ಭಾಗಶಃ ನಾಶಹೊಂದಿರುವಂತೆ ನಿರೂಪಿಸಲಾಗಿದೆ. ಗಡಿಯಾರ ಹಾಗು ಅದರ ಒಳಾಂಗಣ ವಿನ್ಯಾಸದ ಅನಿಮೇಟೆಡ್ ರೂಪಾಂತರವನ್ನೂ ಸಹ ಬೇಸಿಲ್ ಆಫ್ ಬೇಕರ್ ಸ್ಟ್ರೀಟ್ ಹಾಗು ಆತನ ಪ್ರತಿಕಾರ ದೇವತೆ ರಾಟಿಗನ್ ಹೊಡೆದಾಡುವ ದೃಶ್ಯವನ್ನು ವಾಲ್ಟ್ ಡಿಸ್ನಿಯ ಅನಿಮೇಟೆಡ್ ಚಿತ್ರ ದಿ ಗ್ರೇಟ್ ಮೌಸ್ ಡಿಟೆಕ್ಟೀವ್ ನ ಕ್ಲೈಮ್ಯಾಕ್ಸ್ ನಲ್ಲಿ ತೋರಿಸಲಾಗಿದೆ. ಜೊತೆಗೆ ಪೀಟರ್ ಪ್ಯಾನ್ ಚಿತ್ರದಲ್ಲಿ, ನೆವರ್ಲ್ಯಾಂಡ್ ಗೆ ಹೊರಡುವ ಮುನ್ನ ಗಡಿಯಾರದ ಮೇಲೆ ಪೀಟರ್ ಇಳಿಯುತ್ತಾನೆ. ಇದು UFO ಚಿತ್ರ ಮಾರ್ಸ್ ಅಟ್ಯಾಕ್ ನಲ್ಲಿ ಇತಿಹಾಸಪೂರ್ವ ಜೀವಿಯಾಗಿರುವ "ಗೊರ್ಗೋ" ಇದನ್ನು ನಾಶಪಡಿಸಿರುವಂತೆ ಚಿತ್ರಿಸಲಾಗಿದೆ, ಹಾಗು ದಿ ಅವೆಂಜರ್ಸ್ ಚಿತ್ರದಲ್ಲಿ ಸಿಡಿಲಿನಿಂದ ನಾಶವಾಗಿರುವಂತೆ ಚಿತ್ರಿಸಲಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ನಾಶವಾಗಿರುವುದೆಂದೂ ಜೊತೆಗೆ V ಫಾರ್ ವೆಂಡೆಟ್ಟಾ ಚಿತ್ರದಲ್ಲಿ ಗ್ರ್ಯಾಫಿಕ್ ಸಹಿತ ಚಿತ್ರಿಸಲಾಗಿವೆ. ಮೇಲೆ ವಿವರಿಸಲಾದಂತಹ ಸ್ಪಷ್ಟವಾಗಿ "ಹದಿಮೂರು ಬಾರಿ ಬಾರಿಸುವ" ಗಂಟೆಯು ಕ್ಯಾಪ್ಟನ್ ಸ್ಕಾರ್ಲೆಟ್ ಅಂಡ್ ದಿ ಮೈಸ್ಟರಾನ್ಸ್ ನ ಸರಣಿ"ಬಿಗ್ ಬೆನ್ ಸ್ಟ್ರೈಕ್ಸ್ ಅಗೈನ್" ನ ಮುಖ್ಯ ಕಥಾವಸ್ತುವಾಗಿದೆ.

ಇತ್ತೀಚಿಗೆ ೨೦೧೦ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳ ಸಂದರ್ಭದಲ್ಲಿ, ರಾಷ್ಟ್ರೀಯ ಸಾರ್ವಜನಿಕ ಅಭಿಪ್ರಾಯ ಸಂಗ್ರಹವನ್ನು ಬಿಗ್ ಬೆನ್ ನ ಮುಖಭಾಗದ ಮೇಲೆ ಪ್ರದರ್ಶಿಸಲಾಗಿತ್ತು.

ಪುರಸ್ಕಾರಗಳು

ಸುಮಾರು ೨,೦೦೦ ಜನರನ್ನು ಆಧರಿಸಿದ ಒಂದು ಸಮೀಕ್ಷೆಯ ಸರ್ವೇಕ್ಷಣೆ ಪ್ರಕಾರ, ಗೋಪುರವು ಯುನೈಟೆಡ್ ಕಿಂಗ್ಡಮ್ ನ ಅತ್ಯಂತ ಜನಪ್ರಿಯ ಹೆಗ್ಗುರುತಾಗಿದೆ.

ಬಿಗ್ ಬೆನ್, ಲಂಡನ್ ನಲ್ಲಿ ಚಲನಚಿತ್ರ ಹೊರಾಂಗಣಕ್ಕೆ ಅತ್ಯಂತ ಪ್ರತಿಮಾರೂಪದ ಸ್ಥಳ ವೆಂದು ಜನಾಭಿಪ್ರಾಯ ಸಂಗ್ರಹವಾಗಿದೆ.

ಇವನ್ನೂ ಗಮನಿಸಿ

  • ವಿಕ್ಟೋರಿಯಾ ಗೋಪುರ

ಬಾಹ್ಯ ಕೊಂಡಿಗಳು‌

Categories:
Post a comment
Tips & Hints
Arrange By:
Othmane Guerrou
16 January 2013
Really beautiful
HISTORY UK
14 February 2011
Big Ben refers to the 13 ton bell in the clock tower of Westminster Palace. Opinion is divided as to whether it was named after the then Commissioner of Works, or a famous prize-fighter of the time.
Load more comments
foursquare.com
Location
Map
Address

0.2km from Palace of Westminster, Westminster, London SW1A 2PW, ಯುನೈಟೆಡ್ ಕಿಂಗ್ಡಮ್

Get directions
Open hours
Mon-Sun 24 Hours
References

Big Ben (Elizabeth Tower) on Foursquare

ಬಿಗ್ ಬೆನ್ on Facebook

Hotels nearby

See all hotels See all
Spectacular Strand 2 bed apartment!!

starting $0

Amba Hotel Charing Cross

starting $645

1 Compton

starting $0

The Grand at Trafalgar Square

starting $418

Clarendon Serviced Apartments - Chandos Place

starting $0

Amba Hotel Charing Cross

starting $0

Recommended sights nearby

See all See all
Add to wishlist
I've been here
Visited
House of Commons of the United Kingdom
United Kingdom

House of Commons of the United Kingdom is a tourist attraction, one

Add to wishlist
I've been here
Visited
Parliament Square
United Kingdom

Parliament Square is a tourist attraction, one of the Town squares in

Add to wishlist
I've been here
Visited
ವೆಸ್ಟ್‌ಮಿನಿಸ್ಟರ್‌ ಅರಮನೆ
United Kingdom

ವೆಸ್ಟ್‌ಮಿನಿಸ್ಟರ್‌ ಅರಮನೆ ಯನ್ನು ಸಂಸತ್ತು ಭವನಗಳು ಅಥವಾ ವೆಸ್ಟ್‌ಮಿನಿಸ್ಟರ್

Add to wishlist
I've been here
Visited
St. Margaret's, Westminster
United Kingdom

St. Margaret's, Westminster is a tourist attraction, one of the

Add to wishlist
I've been here
Visited
ವೆಸ್ಟ್‌ಮಿನ್‌ಸ್ಟರ್‌ ಸೇತುವೆ
United Kingdom

ವೆಸ್ಟ್‌ಮಿನ್‌ಸ್ಟರ್ ಸೇತುವೆ ಯು, ವೆಸ್ಟ್‌ಮಿನ್‌ಸ್ಟರ್, ಮಿಡಲ್ ಸೆಕ್ಸ್ ದಂಡೆ, ಹಾಗ

Add to wishlist
I've been here
Visited
Cenotaph
United Kingdom

Cenotaph is a tourist attraction, one of the Military memorials and

Add to wishlist
I've been here
Visited
Westminster Abbey
United Kingdom

Westminster Abbey is a tourist attraction, one of the Christian

Add to wishlist
I've been here
Visited
Victoria Tower
United Kingdom

Victoria Tower is a tourist attraction, one of the Towers in London,

Similar tourist attractions

See all See all
Add to wishlist
I've been here
Visited
Independence Hall
United States

Independence Hall is a tourist attraction, one of the Clock towers in

Add to wishlist
I've been here
Visited
Izmir Clock Tower
ತುರ್ಕಿ

Izmir Clock Tower (Türkçe: İzmir Saat Kulesi) is a tourist at

Add to wishlist
I've been here
Visited
Zytglogge
Switzerland

Zytglogge is a tourist attraction, one of the Clock towers in Berne,

Add to wishlist
I've been here
Visited
Zimmer tower
Belgium

Zimmer tower (Nederlands: Zimmertoren) is a tourist attraction, one of

Add to wishlist
I've been here
Visited
Gastown steam clock
Canada

Gastown steam clock is a tourist attraction, one of the Clock towers

See all similar places