ಬೀದರ್ ಕೋಟೆ

ಬೀದರ್ ಕೋಟೆ (Urdu قلعہ بیدر) ಕರ್ನಾಟಕದ ದಕ್ಷಿಣ ಪ್ರಸ್ಥಭೂಮಿಯ ಬೀದರ್ ನಗರದಲ್ಲಿದೆ. ಬಹುಮನಿ ಮನೆತನದ ಸುಲ್ತಾನ್ ಅಲ್-ಉದ್-ದಿನ್ ಬಹಮನ್ ಗುಲ್ಬರ್ಗಾದಿಂದ ಬೀದರ್‌ಗೆ ತನ್ನ ರಾಜಧಾನಿಯನ್ನು ೧೪೨೭ರಲ್ಲಿ ವರ್ಗಾಯಿಸಿಕೊಂಡ ಮತ್ತು ಈ ಕೋಟೆಯನ್ನೂ ಇತರೆ ಇಸ್ಲಾಮಿಕ್ ಸ್ಮಾರಕಗಳನ್ನೂ ಕಟ್ಟಿಸಿದ. ಬೀದರ್ ಕೋಟೆಯ ಒಳಗೆ ೩೦ಕ್ಕೂ ಹೆಚ್ಚು ಸ್ಮಾರಕಗಳಿವೆ.

ಭೂ ವಿವರಣೆ

ಕೋಟೆ, ನಗರ ಮತ್ತು ಜಿಲ್ಲೆಯ ಹೆಸರು ಬೀದರ್‌ ಹೆಸರಿನಿಂದಲೇ ಹೆಸರಿಸಲ್ಪಡುತ್ತವೆ.  ನಗರ ಮತ್ತು ಕೋಟೆ ಆಯತಾಕಾರದ ಪ್ರಸ್ಥಭೂಮಿಯ ಅಂಚಿನಲ್ಲಿದ್ದು, 22 miles (35 km) ಉದ್ದ ಮತ್ತು 12 miles (19 km) ಅಗಲದಷ್ಟು ವಿಶಾಲ ವಾಗಿದೆ, ಒಟ್ಟಾರೆ 12 square miles (31 km2) ವಿಸ್ತಾರವನ್ನು ಆಕ್ರಮಿಸಿಕೊಂಡಿದೆ. ಕಲ್ಯಾಣಿ ಚಾಲುಕ್ಯರ  ಪ್ರಾಚೀನ ರಾಜಧಾನಿ ಕಲ್ಯಾಣಿ (ಬಸವಕಲ್ಯಾಣ) ಬೀದರ್‌ನ ದಕ್ಷಿಣಕ್ಕೆ 40 miles (64 km) ದೂರದಲ್ಲಿದೆ.

ನದಿ ವ್ಯವಸ್ಥೆ

ಬೀದರ್ ನಗರ ಮತ್ತು ಜಿಲ್ಲೆಯನ್ನು ಆವರಿಸಿಕೊಂಡಿರುವ ಸುತ್ತಮುತ್ತಲಿನ ಭೂಪ್ರದೇಶ ಕಾರಂಜ ನದಿ, ಗೋದಾವರಿ ನದಿಯ ಮುಖ್ಯ ಉಪನದಿಯಾದ ಮಂಜಿರದ ಕಾಲುವೆಗಳಿಂದ ಸುತ್ತುವರಿಯಲ್ಪಟ್ಟಿದೆ .

ಹವಾಮಾನ

ಹವಾಮಾನ ವರ್ಷಪೂರ ಹಿತಕರವಾಗಿರುತ್ತದೆ, ಬೇಸಿಗೆಯ ತಿಂಗಳುಗಳಾದ ಏಪ್ರಿಲ್ ಮತ್ತು ಮೇಗಳಲ್ಲಿಯೂ ಕೂಡ, ತೀಕ್ಷ್ಣ ಮತ್ತು ಇದ್ದಕ್ಕಿದಂತೆ ಬೀಳುವ ಗುಡುಗು ಮಳೆಯಿಂದ ಇಡೀ ಪ್ರದೇಶ ತಣ್ಣಗಾಗುತ್ತದೆ. ಜೂನ್ ಪ್ರಾರಂಭದಲ್ಲಿ ಉತ್ತರ-ಪಶ್ಚಿಮದ ಮಾನ್ಸೂನ್ ಇಡೀ ಪ್ರದೇಶದ ಹಿತಕರ ವಾತಾವರಣವನ್ನು ಆವರಿಸಿಕೊಳ್ಳುತ್ತದೆ. ಚಳಿಗಾಲ ಕೂಡ ಆಪ್ಯಾಯಮಾನವಾಗಿರುತ್ತದೆ. ನಗರ ಮತ್ತು ಕಣ್ಣಳತೆಯ ಸುತ್ತಲಿನ ಹಳ್ಳಿಗಳು ಶ್ರೀಮಂತ ಪರಂಪರೆ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ದಂತಕತೆಗಳನ್ನು ಹೊಂದಿವೆ.

ಸ್ಮಾರಕಗಳು

ಬಹಮನಿ ರಾಜಮನೆತನವು ಡೆಕ್ಕನ್ ಪ್ರಸ್ತಭೂಮಿಯಲ್ಲಿ ಆಳ್ವಿಕೆ ನಡೆಸಿದ್ದ ಸಮಯದಲ್ಲಿ ಪರ್ಷಿಯನ್ ವಾಸ್ತುಶಿಲ್ಪದ ದಟ್ಟವಾದ ಪ್ರಭಾವವನ್ನು ಬೀದರಿನ ಸುತ್ತಮುತ್ತಲ ಸ್ಮಾರಕಗಳಲ್ಲಿ ಕಾಣಬಹುದು. ಈ ರಾಜಮನೆತನದ ಆಳ್ವಿಕೆಯ ಕಾಲದಲ್ಲಿ ಬೀದರ್ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ, ನಗರದಾಚೆ ಸಹ ಕೋಟೆ, ಕೊತ್ತಲ, ಮಸೀದಿ ಮತ್ತು ಬುರುಜುಗಳನ್ನು ಕತ್ತಲಾಯಿತು. ಈ ಸಂದರ್ಭದಲ್ಲಿ ಕಟ್ಟಲಾದ ಕೆಲವು ಮಹತ್ವವಾದ ಸ್ಮಾರಕಗಳ ಪಟ್ಟಿ ಇಲ್ಲಿದೆ. ಬೀದರ್ ನಗರವು ತನ್ನ ಜಲ ನಿರ್ವಹಣೆಗಾಗಿ ಪ್ರಸಿದ್ಧಿ ಪಡೆದಿತ್ತು .

ಡೆಕ್ಕನ್ ಪ್ರಸ್ತಭೂಮಿಯ ಒಂದು ಅಂಚಿನಲ್ಲಿ ಸ್ಥಾಪಿತವಾಗಿರುವ ಬೀದರ್ ಕೋಟೆಯು ಚೌಕೊನಾಕಾರದಲ್ಲಿ ಕಟ್ಟಲಾಗಿದೆ, ಈ ಕೋಟೆಯ ಸುತ್ತಳತೆ 0.75 miles (1.21 km) ಉದ್ದ ಮತ್ತು 0.5 miles (0.80 km)ಅಗಲವಾಗಿದೆ. ಕೋಟೆಯ ಕೆಲವು ಪಾರ್ಶ್ವಗಳು ಹಾಳಾಗಿದ್ದರೂ ಸಹ ಬೀದರ್ ಕೋಟೆಯ ಆಕರ್ಷಣೆ ಇಂದಿಗೂ ಸಹ ಕುಂದಿಲ್ಲ. ಬೀದರ್ ಕೋಟೆಯನ್ನು ದಾಟುವ ಮೊದಲು ಮೂರು ಹಂತದ ನೀರಿನ ಕಂದಕವನ್ನು ದಾಟಿಕೊಂಡು ಬರಬೇಕಾಗುತ್ತದೆ.

ಬೀದರ್ ಕೋಟೆಯು ಏಳು ದ್ವಾರಗಳನ್ನು ಹೊಂದಿದೆ. ಮುಖ್ಯ ದ್ವಾರವು ಪರ್ಷಿಯನ್ ವಾಸ್ತುಶಿಲ್ಪ ಮಾದರಿಯಂತೆ ಕಟ್ಟಲಾಗಿದೆ. 'ಗುಂಬದ್ ದರ್ವಾಜ' ಎಂಬ ದ್ವಾರವು ಪರ್ಷಿಯನ್ ವಾಸ್ತುಶಿಲ್ಪದ ಮಾದರಿಯನ್ನು ಅನುಸರಿಸಿ ನಿರ್ಮಿಸಲಾಗಿದೆ. ಬೀದರ್ ಕೋಟೆಯಾ ಒಳ ಬರಲು ಬಳಸುವ ಮತ್ತೊಂದು ದ್ವಾರ 'ಶೇರ್ಜ ದರ್ವಾಜಾ". ಈ ದ್ವಾರದ ಹೊರ ಕವಚದ ಮೇಲೆ ಎರಡು ಹುಲಿಗಳನ್ನು ಕೆತ್ತಲಾಗಿದೆ. ಶಿಯಾ ಸಮುದಾಯದ ನಂಬಿಕೆಯ ಪ್ರಕಾರ ಹುಲಿಯು ವಿಜಯದ ಸಂಕೇತವಾಗಿದೆ ಮತ್ತು ಮುಸ್ಲಿಂ ಸಮುದಾಯದ ನಾಯಕರಾದ ಯವರ ಪ್ರತೀಕವಾಗಿದೆ. ಈ ಹುಲಿಗಳ ಲಾಂಛನವು ಕೋಟೆಯನ್ನು ಶತ್ರುಗಳ ದಾಳಿಯಿಂದ ರಕ್ಷಿಸುತ್ತದೆ ಎಂದು ನಂಬಲಾಗಿತ್ತು . ಈ ಕೋಟೆಯಲ್ಲಿರುವ ಇತರ ದ್ವಾರಗಳೆಂದರೆ , ದಕ್ಷಿಣದಲ್ಲಿರುವ "ಫತೇಹ್ ದರ್ವಾಜ"ವು ಅಷ್ಟಾಕಾರದ ಸ್ಥಂಭಗಳು ಮತ್ತು ಕೀಲು ಸೇತುವೆಯನ್ನು ಹೊಂದಿದೆ. ಪೂರ್ವದಲ್ಲಿ "ತಾಲ್ಘಾಟ್ ದರ್ವಾಜ", "ಡೆಲ್ಲಿ ದರ್ವಾಜ" ಮತ್ತು "ಮಾಂಡು ದರ್ವಾಜ" ಗಳಿವೆ. ಈ ಕೋಟೆಯ ಪ್ರವೇಶದ್ವಾರದಲ್ಲಿ ಬೃಹತ್ ತೋಪೊಂದನ್ನು "ಮುಂಡ ಬುರುಜ್ "ನಿಲ್ಲಿಸಲಾಗಿದೆ.

ಬಹಮನಿ ಸುಲ್ತಾನರು ಸಸ್ಸಾನಿಯನ್ ರಾಜಮನೆತನದ ಲಾಂಛನಗಳನ್ನು ತಮ್ಮ ಆಳ್ವಿಕೆಯ ಕಾಲದಲ್ಲಿ ಅಳವಡಿಸಿಕೊಂಡರು ಎಂದು ಭಾವಿಸಲಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಸಸ್ಸಾನಿಯನ್ ರಾಜಮನೆತನದ ಲಾಂಛನಗಳಾದ ಕಿರೀಟದ ಚಿಹ್ನೆ ಮತ್ತು ಅರ್ಧಚಂದ್ರಾಕೃತಿಯ ಚಿಹ್ನೆಗಳನ್ನು ಬಹಮನಿ ರಾಜಮನೆತನದ ಕಟ್ಟಡಗಳ ಮೇಲೆ ಕಾಣಬಹುದಾಗಿದೆ.

ತಖ್ತ್ ಮಹಲ್

ತಖ್ತ್ ಮಹಲ್ ಬೀದರ ಕೋಟೆಯೋಳಗಿರುವ ಅನೇಕ ಅರಮನೆ ಸಮೂಹಗಳಲ್ಲಿ ಒಂದಾಗಿದೆ. ಈ ಅರಮನೆಯು ರಾಜ ಮನೆತನದ ನಿವಾಸಕ್ಕೆಂದು ಬಳಸಲಾಗುತ್ತಿತ್ತು. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಈ ಅರಮನೆಯ ಪ್ರವೇಶ ದ್ವಾರವು ಉತ್ತರ ದಿಕ್ಕಿನಲ್ಲಿದ್ದರೂ ಸಹ ಅರಮನೆಯ ಒಳಗೆ ಮತ್ತು ಹೊರಗೆ ಓಡಾಡಲು ಅನುಕೂಲವಾಗುವಂತೆ ಬೇರೆ ಬೇರೆ ದಿಕ್ಕಿನಲ್ಲಿ ಸಣ್ಣ ಪ್ರವೇಶ ದ್ವಾರಗಳಿವೆ. ಈ ಅರಮನೆಯನ್ನು ರಾಜಗೃಹವೆಂದು ಕರೆಯಲಾಗುತ್ತಿತ್ತು.

ಇತಿಹಾಸ: ತಖ್ತ್ ಮಹಲ್ಅರಮನೆಯನ್ನು ಬಹಮನಿ ಸುಲ್ತಾನನಾದ ಅಹಮದ್ ಷಾ ಬಹಮನಿ 1426-1432 ಅವಧಿಯಲ್ಲಿ ನಡುವೆ ನಿರ್ಮಿಸಿದನು. ತಖ್ತ್ ಮಹಲ್ ಬೀದರ್ ಕೋಟೆಯ ಪಶ್ಚಿಮ ಭಾಗದಲ್ಲಿ ನೆಲೆಸಿದೆ. ಈ ಅರಮನೆಯ ಪ್ರಾಂಗಣವನ್ನು ಆಡಳಿತಗಾರರು ಖಾಸಗಿ ದರ್ಬಾರ್ ಮತ್ತು ಚರ್ಚೆಗಳಿಗಾಗಿ ವ್ಯಾಪಕವಾಗಿ ಬಳಸಿದರು. ಕಟ್ಟಡದ ರಚನೆಯು ಸಂಕೀರ್ಣ ವಾಸ್ತುಶೈಲಿಯದ್ದಾಗಿದೆ. ತಖ್ತ್ ಮಹಲಿನ ದರ್ಬಾರ್ ಸಭಾಂಗಣವನ್ನು ವಿವಿಧ ಸಮಾರಂಭಗಳಿಗಾಗಿ ಮತ್ತು ಬೀದರ್ ಅರಸರ ಪ್ರಮುಖ ಕಾರ್ಯಕ್ರಮಗಳಿಗಾಗಿ ಉಪಯೋಗಿಸುತ್ತಿದ್ದರು. ಬಹಮನಿ ಸುಲ್ತಾನರ ಬೀದರ್ ಸಾಮ್ರಾಜ್ಯದ ಅನುಸ್ಥಾಪನ ಸೇರಿದಂತೆ ಅನೇಕ ಐತಿಹಾಸಿಕ ಘಟನೆಗಳು ಇಲ್ಲಿ ನಡೆದಿವೆ. ಪ್ರಸ್ತುತ ಕಾಲದಲ್ಲಿ ಬೀದರ್ ಕೋಟೆಯ ಕಮಾನುಗಳು ಮಾತ್ರ ಸುಸ್ಥಿತಿಯಲ್ಲಿವೆ. ಈ ಅರಮನೆಯ ಒಳಗಿನ ಗುಮ್ಮಟ ತನ್ನ ವಿಸ್ತಾರ ಮತ್ತು ವಿಸ್ತೀರ್ಣದಿಂದಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮಹಲಿನ ಒಳಗೆ ನಿರ್ಮಿಸಲಾಗಿರುವ ಕೋಣೆಗಳನ್ನು ರಾಜಮನೆತನದವರ ಖಾಸಗಿ ನಿವಾಸಕ್ಕಾಗಿ ಬಳಸಲಾಗುತ್ತಿತ್ತು.

ಪ್ರವೇಶ

ಬೀದರ್ ರಸ್ತೆ, ರೈಲು ಮತ್ತು ವಾಯು ಸಾರಿಗೆಗಳಿಂದ ಉತ್ತಮವಾಗಿ ಸಂಪರ್ಕಿತಗೊಂಡಿದೆ. ಬೀದರ್ ನಗರ ಬೆಂಗಳೂರಿನಿಂದ ದಕ್ಷಿಣಕ್ಕೆ 740 kilometres (460 mi) ದೂರ NH 7ನಲ್ಲಿ 116 kilometres (72 mi) ಗುಲ್ಬರ್ಗದ ನೈರುತ್ಯಕ್ಕೆ ಮತ್ತು 130 kilometres (81 mi)  NH 9 ನಲ್ಲಿ ಹೈದರಬಾದ್‌ನಿಂದ ಸಂಪರ್ಕಹೊಂದಿದೆ.

ವಿಮಾನ ನಿಲ್ದಾಣ

  • ಸಮೀಪದ ವಿಮಾನ ನಿಲ್ದಾಣ, ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 
  • ಬೀದರ್ ಏರ್‌ಪೋರ್ಸ್ ಸ್ಟೇಷನ್ ಅನ್ನು ವಿ.‌ಐ.ಪಿ ಆಗಮನದ ಸಮಯದಲ್ಲಿ ಸಾಂಧರ್ಭಿಕವಾಗಿ ಬಳಸಲಾಗುತ್ತದೆ. 
  • Kempegowda International Airport, ಬೆಂಗಳೂರು.

ಬೀದರ್ ಕೋಟೆಗೆ ಪ್ರವೇಶ

ಬೀದರ್ ಕೋಟೆ ಹೈದರಾಬಾದ್ ನಿಂದ ೧೧೫ ಕಿ.ಮಿ ದೂರದಲ್ಲಿದೆ.

ಜನಪ್ರಿಯ ಸಂಸ್ಕೃತಿಯಲ್ಲಿ

ದ ಡರ್ಟಿ ಪಿಕ್ಚರ್, ೨೦೧೧ರ ಬಾಲಿವುಡ್ ಹಿಟ್ ಸಿನೆಮಾದ ಇಶ್ಕ್ ಸುಫಿಯಾನ ಹಾಡು ಬೀದರ್ ಕೋಟೆಯಲ್ಲಿ ಚಿತ್ರಿಸಲ್ಪಟ್ಟಿದೆ. ವಿದ್ಯಾ ಬಾಲನ್ ಮತ್ತು ಇಮ್ರಾನ್ ಹಶ್ಮಿ ಈ ಹಾಡಿನ ಚಿತ್ರೀಕರಣದಲ್ಲಿದ್ದಾರೆ.

ಬೀದರ್ ಕೋಟೆ ಒಳಗಿನ ಸ್ಮಾರಕಗಳು

  • ಚಾಂದನಿ ಚಬೂತರ್

ಇವನ್ನೂ ನೋಡಿ

  • Bahmanid Dynasty
  • ಕರ್ನಾಟಕದ ಕೋಟೆಗಳು
  • ರಾಯಚೂರು ಕೋಟೆ
  • ಗುಲ್ಬರ್ಗಾ ಕೋಟೆ
  • ಬಳ್ಳಾರಿ ಕೋಟೆ
  • ಬಸವಕಲ್ಯಾಣ ಕೋಟೆ
  • ಮುದ್ಗಲ್ ಕೋಟೆ

ಬಾಹ್ಯ ಕೊಂಡಿಗಳು

Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
Karthik Arun Bhaskaran
28 April 2013
HUGE! Good place to visit - especially in winter...
Ateeq Jaffar
19 September 2023
Historical Fort of Mughals Era
Deepak Hupleker
10 January 2016
bidar fort is heritage of bidar cultured
Nikhil Viru
25 June 2013
Best place to visit
ನಕ್ಷೆ
Darbar Hall, Ground Fort Area, Bidar, Karnataka 585401, India ನಿರ್ದೇಶನಗಳನ್ನು ಪಡೆ

Bidar Fort ನಲ್ಲಿ Foursquare

ಬೀದರ್ ಕೋಟೆ ನಲ್ಲಿ Facebook

Lahari Resorts

starting $57

Pragati Green Meadows and Resort

starting $61

Citrus Hotel Gulbarga

starting $51

Hotel Sonai Palace

starting $37

Hotel Sitara Grand Ramchandrapuram

starting $37

Hotel Amogha Residency

starting $17

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಬಸವಕಲ್ಯಾಣ ಕೋಟೆ

ಕಲ್ಯಾಣ ಕೋಟೆ , ಬಸವಕಲ್ಯಾಣ ಕೋಟೆ ಭಾರತದ ಕರ್ನಾಟಕ ರಾಜ್ಯದ ಬೀದರ್ ಜಿಲ

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಗುಲ್ಬರ್ಗಾ ಕೋಟೆ

 ಗುಲ್ಬರ್ಗಾ ಕೋಟೆ ಉತ್ತರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಗುಲ್ಬರ್ಗಾ

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಗೋಲ್ಕೊಂಡ

ಹೈದರಾಬಾದ್ ನಗರದ ಪಶ್ಚಿಮಕ್ಕೆ 11 ಕಿಮೀ ದೂರದಲ್

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Rashtrapati Nilayam

Rashtrapati Nilayam (తెలుగు. రాష్ట్రపతి

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Gnana Saraswati Temple, Basar

Gnana Saraswati Temple is a Hindu temple of Goddess Saraswati located

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Mecca Masjid

Mecca Masjid (Telugu: మక్కా మసీదు, Urdu: مکہ مسجد) is one of the ol

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Chowmahalla Palace

Chowmahalla Palace or Chowmahallat (4 Palaces), is a palace of the

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಚಾರ್ ಮಿನಾರ್

‹ The template below (Infobox mosque) is being considered for

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Alba Carolina Citadel

The Alba Carolina Citadel (Romanian: Cetatea Alba Carolina) is a

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Fort Copacabana

Fort Copacabana (Portuguese: Forte de Copacabana, IPA: ]) is a

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Kilitbahir Castle

Kilitbahir Castle (Turkish: Kilitbahir Kalesi) is a fortress on the

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Belém Tower

Belém Tower (in Portuguese Torre de Belém, pron. Шаблон:IPA2) is a fo

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Castillo de Alcalá la Real

Castillo de Alcalá la Real (or Fortaleza de La Mota) is a castle in

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ