Triumphal arches in New Delhi

ಇಂಡಿಯಾ ಗೇಟ್‌

8.4/10

ಇಂಡಿಯಾ ಗೇಟ್‌ ಎಂಬುದು ಭಾರತದ ರಾಷ್ಟ್ರೀಯ ಸ್ಮಾರಕವಾಗಿದೆ. ನವದೆಹಲಿಯ ಹೃದಯಭಾಗದಲ್ಲಿ ನೆಲೆಗೊಂಡಿರುವ ಇಂಡಿಯಾ ಗೇಟ್‌, ಸರ್‌ ಎಡ್ವಿನ್‌ ಲುಟ್ಯೆನ್ಸ್‌ ಎಂಬಾತನಿಂದ ವಿನ್ಯಾಸಗೊಳಿಸಲ್ಪಟ್ಟಿತು. ಮೂಲತಃ ಅಖಿಲ ಭಾರತ ಯುದ್ಧಸ್ಮಾರಕವಾಗಿ ಚಿರಪರಿಚಿತವಾಗಿರುವ ಇದು ದೆಹಲಿಯಲ್ಲಿನ ಒಂದು ಎದ್ದುಕಾಣುವ ಹೆಗ್ಗುರುತಾಗಿದೆ. ಅಷ್ಟೇ ಅಲ್ಲ, Iನೇ ಜಾಗತಿಕ ಸಮರ ಮತ್ತು ಮೂರನೇ ಆಂಗ್ಲೋ-ಆಫ್ಘನ್‌ ಯುದ್ಧದಲ್ಲಿ ಬ್ರಿಟಿಷ್‌ ಭಾರತದ ಸಾಮ್ರಾಜ್ಯದ ಪರವಾಗಿ ಅಥವಾ ಹೆಚ್ಚು ನಿಖರವಾಗಿ ಹೇಳುವುದಾದರೆ ಬ್ರಿಟಿಷ್‌ ಆಳ್ವಿಕೆಯ ಪರವಾಗಿ ಹೋರಾಡುವಾಗ ತಮ್ಮ ಪ್ರಾಣಗಳನ್ನು ತೆತ್ತ ಬ್ರಿಟಿಷ್‌ ಭಾರತದ ಸೇನೆಯ 90,000 ಯೋಧರನ್ನು ನೆನಪಿಗೆ ತರುತ್ತದೆ. ಕೆಮ್ಮರಳು ಶಿಲೆ ಮತ್ತು ಗ್ರಾನೈಟ್‌ನಿಂದ ಇದು ಮಾಡಲ್ಪಟ್ಟಿದೆ.

ಮೂಲತಃ, ಇಂಡಿಯಾ ಗೇಟ್‌ನ ಮುಂಭಾಗದಲ್ಲಿ, ಈಗ-ಖಾಲಿಯಿರುವ ಮೇಲಾವರಣದ ಅಡಿಯಲ್ಲಿ ರಾಜ Vನೇ ಜಾರ್ಜ್‌‌ನ ಪ್ರತಿಮೆಯೊಂದನ್ನು ನಿಲ್ಲಿಸಲಾಗಿತ್ತು, ಮತ್ತು ಇತರ ಪ್ರತಿಮೆಗಳೊಂದಿಗೆ ಇದನ್ನು ತೆಗೆದು ಕಾರೊನೇಷನ್‌ ಉದ್ಯಾನವನ‌ಕ್ಕೆ ವರ್ಗಾಯಿಸಲಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ, ಭಾರತದ ಸೇನೆಯ ಅಜ್ಞಾತ ಯೋಧನ ಸಮಾಧಿಯ ತಾಣವಾಗಿ ಇಂಡಿಯಾ ಗೇಟ್‌ ಮಾರ್ಪಟ್ಟು, ಅಮರ್ ಜವಾನ್‌ ಜ್ಯೋತಿ (ಅಮರ ಯೋಧನ ಜ್ವಾಲೆ) ಎಂಬುದಾಗಿ ಕರೆಯಲ್ಪಟ್ಟಿತು.

ತಾಣ

42-ಮೀಟರ್‌ ಎತ್ತರವಿರುವ ಇಂಡಿಯಾ ಗೇಟ್‌ ವಿಶಿಷ್ಟ ಸ್ಥಾನದಲ್ಲಿ ನೆಲೆಗೊಂಡಿದ್ದು ಅದರಿಂದ ಅನೇಕ ಮುಖ್ಯ ರಸ್ತೆಗಳು ಹರಡಿವೆ. ಭಯೋತ್ಪಾದಕರ ಬೆದರಿಕೆಗಳ ಕಾರಣದಿಂದಾಗಿ ಈ ರಸ್ತೆಗಳು ಸಾರ್ವಜನಿಕರಿಗಾಗಿ ಮುಚ್ಚಲ್ಪಡುವವರೆಗೂ, ಇಂಡಿಯಾ ಗೇಟ್‌ ಸುತ್ತಮುತ್ತ ಸಾಗುವ ಸಂಚಾರವು ನಿರಂತರವಾಗಿರುತ್ತಿತ್ತು.

ಇಂಡಿಯಾ ಗೇಟ್‌ನಲ್ಲಿನ ದೀಪಗಳನ್ನು ಬೆಳಗಿಸಿದಾಗ ಸಾಯಂಕಾಲದ ಸಮಯಗಳಲ್ಲಿ ರಾಜ್‌ಪಥ್‌ ಸುತ್ತಮುತ್ತಲಿರುವ ಹುಲ್ಲುಹಾಸುಗಳು ಜನರಿಂದ ಕಿಕ್ಕಿರಿದು ತುಂಬಿರುತ್ತವೆ. ಈ ಸಂದರ್ಭದಲ್ಲಿ ಐಸ್‌ ಕ್ರೀಮ್‌ ಮತ್ತು ಬೀದಿಬದಿಯ ಆಹಾರಗಳ ಮಾರಾಟಗಾರರು ಹೊರಬರುತ್ತಾರೆ ಮತ್ತು ಕುಟುಂಬಗಳಿಗಾಗಿ ಇದೊಂದು ಜನಪ್ರಿಯವಾದ ವಿಹಾರ-ಪ್ರವಾಸ ತಾಣವಾಗಿ ಮಾರ್ಪಡುತ್ತದೆ.

ಇಂಡಿಯಾ ಗೇಟ್‌ನ ಷಡ್ಭುಜಾಕೃತಿಯ ಸಂಕೀರ್ಣವು ಸರಿಸುಮಾರಾಗಿ 306000m²ನಷ್ಟು ವಿಸ್ತೀರ್ಣಕ್ಕೆ ಆವರಿಸಿಕೊಂಡಿದ್ದು, ಸುಮಾರು 625 ಮೀ.ನಷ್ಟು ವ್ಯಾಸವನ್ನು ಹೊಂದಿದೆ.

ಅಮರ್ ಜವಾನ್‌ ಜ್ಯೋತಿ

ಇಂಡಿಯಾ ಗೇಟ್‌ನ ತೋರಣ-ಕಮಾನಿನ ಅಡಿಯಲ್ಲಿರುವ ಸಂಪುಟವೊಂದರಲ್ಲಿ 1971ರಿಂದಲೂ ಉರಿಯುತ್ತಿರುವ ಅಮರ್ ಜವಾನ್‌ ಜ್ಯೋತಿಯು (ಅಮರ ಯೋಧರ ಜ್ವಾಲೆ) ಅಜ್ಞಾತ ಯೋಧನ ಸಮಾಧಿಯ ಗುರುತಾಗಿದೆ. ಸಂಪುಟವು ಸ್ವತಃ ಒಂದು ಕಪ್ಪು ಅಮೃತಶಿಲೆಯ ಸ್ಮಾರಕ ಸಮಾಧಿಯಾಗಿದ್ದು, ಅದರ ಕೊರಳಿನ ಭಾಗದಲ್ಲಿ ಒಂದು ಬಂದೂಕನ್ನು ಇರಿಸಿ, ಯೋಧನ ಶಿರಸ್ತ್ರಾಣವೊಂದನ್ನು ಅದರ ನೆತ್ತಿಗೇರಿಸಲಾಗಿದೆ. ಸ್ಮಾರಕ ಸಮಾಧಿಯ ಪ್ರತಿ ಮುಖವೂ ಬಂಗಾರದಲ್ಲಿ ಕೆತ್ತಲಾಗಿರುವ "ಅಮರ್‌ ಜವಾನ್‌" (ಅಮರ ಯೋಧ) ಎಂಬ ಪದಗಳನ್ನು ಹೊಂದಿದೆ.

ಈ ಸ್ಮಾರಕ ಸಮಾಧಿಯು ಸ್ವತಃ ಒಂದು ಭವ್ಯಸೌಧದ ಮೇಲೆ ಇರಿಸಲ್ಪಟ್ಟಿದ್ದು, ಚಿರಂತನವಾಗಿ ಉರಿಯುತ್ತಿರುವಂತೆ ಇಡಲಾಗಿರುವ ನಾಲ್ಕು ದೀವಟಿಗೆಗಳನ್ನು ತನ್ನ ನಾಲ್ಕು ಮೂಲೆಗಳಲ್ಲಿ ಅದು ಹೊಂದಿದೆ. ಇದನ್ನು 1931ರಲ್ಲಿ ಅನಾವರಣಗೊಳಿಸಲಾಯಿತು.

ಇಂದು, ನಾಗರಿಕ ಸರ್ಕಾರದ ಶಿಷ್ಟಾಚಾರಗಳ ಸಂದರ್ಭಗಳಂದು, ಮತ್ತು ಪ್ರತಿವರ್ಷದ ಜನವರಿ 26ರ ಗಣತಂತ್ರ ದಿವಸದಂದು ಈ ತಾಣದಲ್ಲಿ ಗೌರವಾರ್ಪಣ ಮಾಡುವುದು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಸಂಬಂಧಿಸಿದಂತೆ, ಅಷ್ಟೇ ಏಕೆ, ಸಂದರ್ಶಕರಾಗಿ ಬರುವ ನಾಗರಿಕ ಸರ್ಕಾರದ ಅತಿಥಿಗಳಿಗೆ ಸಂಬಂಧಿಸಿದಂತೆ ಇರುವ ಸಂಪ್ರದಾಯ-ಸಂಹಿತೆಯಾಗಿದೆ; ರಾಜ್‌ಪಥ್‌‌ನಲ್ಲಿ ನಡೆಯುವ ವಾರ್ಷಿಕ ಸೈನಿಕ ಮೆರವಣಿಗೆಯ ಸಮ್ಮುಖದಲ್ಲಿ ಸೇರಿಕೊಳ್ಳುವುದಕ್ಕೆ ಮುಂಚಿತವಾಗಿ ಪ್ರಧಾನಮಂತ್ರಿಯವರು ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಯೋಧರಿಗೆ ಗೌರವಾರ್ಪಣ ಮಾಡುವುದು ವಾಡಿಕೆಯಾಗಿದೆ.

ಇಲ್ಲಿರುವ ಧ್ವಜಗಳು ಭಾರತದ 3 ಸೇನಾ ಪಡೆಗಳನ್ನು (ಭೂಸೇನೆ, ನೌಕಾಪಡೆ, ಮತ್ತು ವಾಯು ಪಡೆ) ಪ್ರತಿನಿಧಿಸುತ್ತವೆ; ಒಂದಾದ ಮೇಲೊಂದರಂತೆ ಪಡೆಗಳು ವರಸೆಯಾಗಿ ಬರುವ ರೀತಿಯಲ್ಲಿ, ಪ್ರತಿ ಪಡೆಗೆ ಸೇರಿದ ಓರ್ವ ಯೋಧನು ಪ್ರತಿದಿನವೂ ದ್ವಾರ ಮತ್ತು ಸಮಾಧಿಯನ್ನು ಕಾವಲು ಕಾಯುತ್ತಾನೆ.

ಮೇಲಾವರಣ

ದ್ವಾರಕ್ಕೆ ಸರಿಯಾಗಿ ಹಿಂಭಾಗದಲ್ಲಿ ನಿಂತಿರುವಂತಿರುವ ಒಂದು ಖಾಲಿ ಮೇಲಾವರಣವು ಮರಳುಗಲ್ಲಿನಿಂದ ಮಾಡಲ್ಪಟ್ಟಿದ್ದು, ಇದೂ ಕೂಡ ಲುಟ್ಯೆನ್ಸ್‌ನಿಂದ ವಿನ್ಯಾಸಗೊಳಿಸಲ್ಪಟ್ಟಿದೆ, ಮತ್ತು 18ನೇ ಶತಮಾನಕ್ಕೆ ಸೇರಿದ ಮಹಾಬಲಿಪುರಂನ ಚಾಚುಭಾಗವೊಂದರಿಂದ ಇದು ಪ್ರೇರೇಪಿಸಲ್ಪಟ್ಟಿದೆ; 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೂ, ಇದು ರಾಜ Vನೇ ಜಾರ್ಜ್‌ನ ಪ್ರತಿಮೆಯನ್ನು ಹೊಂದಿತ್ತು. ಈ ಪ್ರತಿಮೆಯು ಈಗ ದೆಹಲಿಯ ಕಾರೊನೇಷನ್‌ ಉದ್ಯಾನವನದಲ್ಲಿ ನಿಂತಿದೆ. ಕುಳಿತಿರುವ ಅಥವಾ ನಿಂತಿರುವ ಭಂಗಿಯಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯೊಂದು ಇಲ್ಲಿ ಪ್ರತಿಷ್ಠಾಪಿಸಲ್ಪಡಬೇಕು ಎಂಬುದರ ಕುರಿತು ಅನೇಕ ಯೋಜನೆಗಳು ಮತ್ತು ಕರೆಗಳು ಪ್ರಸ್ತಾವಿಸಲ್ಪಟ್ಟಿದ್ದವು; ಇವೆಲ್ಲಾ ಚರ್ಚಾವಿಷಯಗಳಾಗಿ ಮಾರ್ಪಟ್ಟಿದ್ದವು ಮತ್ತು ಈ ಕುರಿತಾದ ಯಾವುದೇ ಸಮ್ಮತಿಯು ಹೊರಬೀಳಲಿಲ್ಲ.Шаблон:Citation needed

ಇವನ್ನೂ ನೋಡಿ

  • ಗೇಟ್‌ವೇ ಆಫ್ ಇಂಡಿಯಾ

ಬಾಹ್ಯ ಕೊಂಡಿಗಳು

Шаблон:Commons category

2005ರಲ್ಲಿ ಭಾರತದಾದ್ಯಂತ ಪ್ರವಾಸ ಮಾಡಿದ ಓರ್ವ ಬೆನ್ನುಹೊರೆ ಹೊತ್ತ ಪ್ರವಾಸಿಗನಿಂದ ಪಡೆದದ್ದು.

Post a comment
Tips & Hints
Arrange By:
Master M|A|R|Z|I™ ♂ ੴ
The India Gate is the national monument of India, designed by Sir Edwin Lutyens and Is inspired by the Arc de Triomphe in Paris, which in turn was inspired by the Roman Arch of Titus.
Manisha K
17 August 2013
Perfect place for a late night walk accompanied by an ice-cream or chuski. Or both ;)
Load more comments
foursquare.com
Location
Map
Address

Rajpath, India Gate, New Delhi, Delhi 110001, India

Get directions
Open hours
Tue 11:00 AM–Noon
Wed 2:00 PM–9:00 PM
Thu 3:00 PM–7:00 PM
Fri Noon–1:00 AM
Sat 11:00 AM–1:00 AM
Sun 11:00 AM–Midnight
References

India Gate on Foursquare

ಇಂಡಿಯಾ ಗೇಟ್‌ on Facebook

Hotels nearby

See all hotels See all
Hotel Samrat New Delhi

starting $135

The Ashok Hotel

starting $96

The Claridges, New Delhi

starting $105

Hotel Diplomat

starting $67

Lutyens Bungalow

starting $69

The Janpath Hotel

starting $93

Recommended sights nearby

See all See all
Add to wishlist
I've been here
Visited
Purana Qila
ಭಾರತ

Purana Qila is a tourist attraction, one of the Forts in New Delhi,

Add to wishlist
I've been here
Visited
Appu Ghar
ಭಾರತ

Appu Ghar is a tourist attraction, one of the Amusement parks in New

Add to wishlist
I've been here
Visited
Agrasen ki Baoli
ಭಾರತ

Agrasen ki Baoli is a tourist attraction, one of the Water wells in

Add to wishlist
I've been here
Visited
ನ್ಯಾಷನಲ್ ಜೂವಲಾಜಿಕಲ್ ಪಾರ್ಕ್
ಭಾರತ

ಮೂಲತಃ ದಿಲ್ಲಿ ಮೃಗಾಲಯ ಎಂದು ಕರೆಯಲ್ಪಟ್ಟ ಈಗಿನ ನ್ಯಾಷನಲ್ ಜೂವಲಾಜಿಕಲ್ ಪಾರ್ಕ

Add to wishlist
I've been here
Visited
ಯಂತ್ರ ಮಂತ್ರ
ಭಾರತ

ಜನಪ್ರಿಯವಾಗಿ ಜಂತರ್ ಮಂತರ್ ಎಂದು ಕರೆಯಲ್ಪಡುವ ಯಂತ್ರ ಮಂತ್ರ ಒಂದು ವಿಷು ಆಧಾ

Add to wishlist
I've been here
Visited
ತ್ರಿಯುಗಿ ನಾರಾಯಣ
ಭಾರತ

ತ್ರಿಯುಗಿ ನಾರಾಯಣ ಭಾರತದ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ

Add to wishlist
I've been here
Visited
Hanuman Temple, Connaught Place
ಭಾರತ

Hanuman Temple, Connaught Place is a tourist attraction, one of the

Add to wishlist
I've been here
Visited
Lodi Gardens
ಭಾರತ

Lodi Gardens is a tourist attraction, one of the Parks in New Delhi,

Similar tourist attractions

See all See all
Add to wishlist
I've been here
Visited
Brandenburg Gate
ಜರ್ಮನಿ

Brandenburg Gate (Deutsch: Brandenburger Tor) is a tourist attraction,

Add to wishlist
I've been here
Visited
Porta Sempione
ಇಟಲಿ

Porta Sempione is a tourist attraction, one of the Triumphal arches

Add to wishlist
I've been here
Visited
Siegestor
ಜರ್ಮನಿ

Siegestor is a tourist attraction, one of the Triumphal arches in

Add to wishlist
I've been here
Visited
Arch of Hadrian
Greece

Arch of Hadrian (ελληνικά: Πύλη του Αδριανού) is a tourist attractio

Add to wishlist
I've been here
Visited
ಗೇಟ್‍ವೇ ಆಫ್ ಇಂಡಿಯ, ಮುಂಬೈ
ಭಾರತ

ಗೇಟ್‌ವೇ ಆಫ್ ಇಂಡಿಯಾ ಭಾರತದ ಮುಂಬಯಿ ನಗರದಲ್ಲಿರುವ ಬ್ರಿಟಿಷ್ ಆಡಳಿತವನ್ನು ನೆ

See all similar places