ಟಿಂಬಕ್ಟು

ಟಿಂಬಕ್ಟು (ಟಿಂಬಕ್ಟೂ ) (ಕೊಯ್ರಾ ಚೀನಿ: ಟುಂಬಟು ; French: Tombouctou) ಟೌಂಬೌಕ್ಟೌ ಪ್ರದೇಶದ, ಪಶ್ಚಿಮ ಆಫ್ರಿಕಾದ ‌ಮಾಲಿ ರಾಷ್ಟ್ರದ ಒಂದು ಮಹಾನಗರವಾಗಿದೆ. ಈ ನಗರವನ್ನು ಮಾಲಿ ಸಾಮ್ರಾಜ್ಯದ ಹತ್ತನೇ ಮಾನ್ಸಾ, ಮಾನ್ಸಾ ಮುಸಾರು ಪ್ರವರ್ಧಮಾನಕ್ಕೆ ತಂದರು. ನಗರವು ಸಂಕೋರ್‌‌ ವಿಶ್ವವಿದ್ಯಾಲಯ ಮತ್ತು ಇತರೆ ಮದ್ರಸಾಗಳಿಗೆ ನೆಲೆಯಾಗಿದ್ದುದಲ್ಲದೇ, ಆಫ್ರಿಕಾದುದ್ದಕ್ಕೂ 15ನೇ ಮತ್ತು 16ನೇ ಶತಮಾನಗಳಲ್ಲಿ ಇಸ್ಲಾಮ್‌‌/ಮಹಮ್ಮದೀಯ ಧರ್ಮದ ಪ್ರಸರಣದ ಕೇಂದ್ರಸ್ಥಳ ಹಾಗೂ ಬೌದ್ಧಿಕ ಮತ್ತು ಪಾರಮಾರ್ಥಿಕ ರಾಜಧಾನಿಯೂ ಆಗಿತ್ತು. ಅಲ್ಲಿನ ಮೂರು ಶ್ರೇಷ್ಠ ಮಸೀದಿಗಳಾದ, ಡ್ಜಿ/ಜಿಂಗಾರೆಬರ್‌‌, ಸಂಕೋರ್‌ ಮತ್ತು ಸಿಧಿ ಯಾಹ್ಯಾಗಳು, ಟಿಂಬಕ್ಟು'ನ ಸುವರ್ಣ ಯುಗವನ್ನು ನೆನಪಿಸುತ್ತವೆ. ಸತತವಾಗಿ ಪುನರುಜ್ಜೀವನಗೊಳ್ಳುತ್ತಿದ್ದರೂ, ಈ ಸ್ಮಾರಕಗಳು ಮರುಭೂಮೀಕರಣದ ಭೀತಿಯಲ್ಲಿವೆ.

ಸಾಂಘಾಯ್‌, ಟುವಾರೆಗ್‌‌, ಫುಲಾನಿ ಮತ್ತು ಮಂಡೆ ಜನರನ್ನು ಹೊಂದಿರುವ, ಟಿಂಬಕ್ಟು ನಗರವು ನೈಗರ್‌ ನದಿಯಿಂದ ಸುಮಾರು 15 km ಉತ್ತರಕ್ಕಿದೆ. ಸಹಾರಾದ ಮೂಲಕ ಅರೌವನೆಯವರೆಗಿನ ಪೂರ್ವದಿಂದ–ಪಶ್ಚಿಮದ ಮತ್ತು ಉತ್ತರದಿಂದ–ದಕ್ಷಿಣದ ದಿಕ್ಕುಗಳಲ್ಲಿ ಸಹಾರಾದಾಚಿನ ವ್ಯಾಪಾರ ಮಾರ್ಗಗಳ ಛೇದಕ ಸ್ಥಳದಲ್ಲಿದೆ ಕೂಡಾ. ಇದು ಪ್ರಮುಖ ಐತಿಹಾಸಿಕವಾಗಿ (ಈಗಲೂ ಕೂಡಾ) ಮೂಲತಃ ಟಘಾಜಾ ಮೂಲದ್ದಾಗಿದ್ದು, ಪ್ರಸ್ತುತ ಟಾವೊಡೆನ್ನಿ ಮೂಲದ ಕಲ್ಲುಪ್ಪಿನ ವ್ಯಾಪಾರದ ವಾಣಿಜ್ಯ ಕೇಂದ್ರ ವಾಗಿತ್ತು.

ಅದರ ಭೌಗೋಳೀಯ ಸನ್ನಿವೇಶವು ಅದನ್ನು ಸಮೀಪದ ಪಶ್ಚಿಮ ಆಫ್ರಿಕಾದ ಜನತೆ ಹಾಗೂ ಉತ್ತರದ ಅರಬ್ಬರು ಮತ್ತು ಅಲೆಮಾರಿ ಬರ್ಬರರುಗಳ ಸಹಜ ಭೇಟಿಯ ಕೇಂದ್ರವನ್ನಾಗಿ ಮಾಡಿತ್ತು. ದೂರದ ವ್ಯಾಪಾರ ಕೇಂದ್ರವಾಗಿ ಇದರ ದೀರ್ಘ ಇತಿಹಾಸವು ಉತ್ತರ ಆಫ್ರಿಕಾದುದ್ದಕ್ಕೂ ಇದ್ದ ಬರ್ಬರರು, ಅರಬ್ಬರು ಹಾಗೂ ಯಹೂದಿ ವ್ಯಾಪಾರಿಗಳೊಂದಿಗೆ ಪಶ್ಚಿಮ ಆಫ್ರಿಕಾವನ್ನು ಸಂಪರ್ಕಿಸುತ್ತಿದ್ದುದರಿಂದ, ಪರೋಕ್ಷವಾಗಿ ಯುರೋಪ್‌‌ನ ವ್ಯಾಪಾರಿಗಳೊಂದಿಗೆ ಹೊಂದಿದ್ದ ಸಂಪರ್ಕವು, ನಗರಕ್ಕೆ ದಂತಕಥಾ ನಗರದ ಸ್ಥಾನವನ್ನು ಮತ್ತು ಪಶ್ಚಿಮದಲ್ಲಿ ಇದು ದೀರ್ಘಕಾಲದವರೆಗೆ ಇಲ್ಲಿಂದ ಟಿಂಬಕ್ಟುವರೆಗೆ" ಎಂದು ಹೇಳುವಂತೆ ವಿಲಕ್ಷಣ ದೂರದ ನಾಡುಗಳಿಗೆ ರೂಪಕವಾಗಿ ಬಳಸುವ ಸ್ಥಾನವನ್ನು ಪಡೆದುಕೊಂಡಿತ್ತು.

ಟಿಂಬಕ್ಟು'ವಿನ ಮಹಮ್ಮದೀಯ ಮತ್ತು ವಿಶ್ವ ನಾಗರೀಕತೆಗೆ ಶಾಶ್ವತ ಕೊಡುಗೆಯೆಂದರೆ ವಿದ್ಯಾರ್ಥಿ/ಪಂಡಿತವೇತನ. ಟಿಂಬಕ್ಟು ನಗರವು ವಿಶ್ವದ ಪ್ರಥಮ ವಿಶ್ವವಿದ್ಯಾಲಯಗಳಲ್ಲಿ ಒಂದನ್ನು ಹೊಂದಿತ್ತೆಂದು ಭಾವಿಸಲಾಗಿದೆ. ಸ್ಥಳೀಯ ಪಂಡಿತೋತ್ತಮರು ಮತ್ತು ಜಿಲ್ಲಾಧಿಕಾರಿಗಳು ಈಗಲೂ ಆ ಯುಗದ ಪ್ರಾಚೀನ ಗ್ರೀಕ್‌‌ ಗ್ರಂಥಗಳ ಸಂಗ್ರಹ ತಮ್ಮಲ್ಲಿದೆಯೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಟಿಂಬಕ್ಟುವಿನಲ್ಲಿ 14ನೇ ಶತಮಾನದ ವೇಳೆಗೆ, ಪ್ರಮುಖ ಗ್ರಂಥಗಳನ್ನು ರಚಿಸುವ ಹಾಗೂ ಪ್ರತಿಗಳನ್ನು ಮಾಡಿಡುವ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ನಗರವನ್ನು ಆಫ್ರಿಕಾದ ಗಮನಾರ್ಹ ಲೇಖನ ಸಂಪ್ರದಾಯದ ಕೇಂದ್ರಸ್ಥಳವನ್ನಾಗಿಸಿತ್ತು.

ಇತಿಹಾಸ

ಮೂಲಗಳು

ಟಿಂಬಕ್ಟು ನಗರವನ್ನು ಅಲೆಮಾರಿ ಟುವಾರೆಗ್‌‌ ಜನರು 10ನೇ ಶತಮಾನದಷ್ಟು ಮುಂಚೆಯೇ ಸ್ಥಾಪಿಸಿದ್ದರು. ಟುವಾರೆಗ್‌‌ ಜನರು ಟಿಂಬಕ್ಟುವನ್ನು ಸ್ಥಾಪಿಸಿದ್ದರೂ ಅದು, ಕೇವಲ ನಿರ್ದಿಷ್ಟಾವಧಿಯ ವಾಸಸ್ಥಳವಾಗಿತ್ತು. ಮಳೆಗಾಲದ ಅವಧಿಯಲ್ಲಿ ಮರಳುಗಾಡಿನಲ್ಲಿ ಅಲೆಯುತ್ತಿದ್ದ ಅವರು ಬೇಸಿಗೆಯಲ್ಲಿ ಆಂತರಿಕ ನೈಗರ್‌‌ ನದೀಮುಖಜ ಭೂಮಿಯ ಪ್ರವಾಹಮುಖಿ ಮೈದಾನಪ್ರದೇಶಗಳ ಸಮೀಪ ವಾಸಿಸುತ್ತಿದ್ದರು. ನದಿಯ ಸಮೀಪದ ಪ್ರದೇಶವು ಸೊಳ್ಳೆಗಳಿಂದಾಗಿ ಸೂಕ್ತವಲ್ಲದುದರಿಂದ ನದಿಯಿಂದ ಕೆಲ ಮೈಲುಗಳಷ್ಟು ದೂರದಲ್ಲಿ ಬಾವಿಯೊಂದನ್ನು ತೋಡಲಾಗಿತ್ತು.

ಶಾಶ್ವತ ವಾಸಸ್ಥಳಗಳು

ಹನ್ನೊಂದನೇ ಶತಮಾನದಲ್ಲಿ ಡ್ಜೆ/ಜೆನ್ನೆಯ ವ್ಯಾಪಾರಿಗಳು ಅನೇಕ ಮಾರುಕಟ್ಟೆಗಳನ್ನು ಸ್ಥಾಪಿಸಿದರಲ್ಲದೇ ಪಟ್ಟಣದಲ್ಲಿ ಶಾಶ್ವತ ವಾಸಸ್ಥಾನಗಳನ್ನು ನಿರ್ಮಿಸಿದರು, ಇದು ಆ ಸ್ಥಳವು ಒಂಟೆಯ ಮೇಲೆ ಪಯಣಿಸುವವರಿಗೆ ಭೇಟಿಯ ಸ್ಥಳವಾಯಿತು. ಅವರು ಇಸ್ಲಾಮ್‌‌/ಮಹಮ್ಮದೀಯ ಧರ್ಮ ಮತ್ತು ಖುರಾನ್‌‌ ಪಠಣದ ಮೂಲಕ ಓದುವುದನ್ನೂ ಪರಿಚಯಿಸಿದರು. ಇಸ್ಲಾಮ್‌‌/ಮಹಮ್ಮದೀಯ ಧರ್ಮಕ್ಕಿಂತ ಮುನ್ನ, ಜನತೆಯು ನೈಗರ್‌ ನದಿಯ ಕಾಲ್ಪನಿಕ ಜಲ-ಸರ್ಪದೇವತೆಯಾದ ಔಗಾಡೌ-ಬಿಡಾವನ್ನು ಆರಾಧಿಸುತ್ತಿದ್ದರು. ಘಾನಾ ಸಾಮ್ರಾಜ್ಯದ ಪ್ರಗತಿಯೊಡನೆ ಅನೇಕ ಸಹಾರಾದಾಚಿನ ವ್ಯಾಪಾರ ಮಾರ್ಗಗಳನ್ನು ಸ್ಥಾಪಿಸಲಾಯಿತು. ಮೆಡಿಟರೇನಿಯನ್‌‌ ಆಫ್ರಿಕಾದ ಉಪ್ಪು ಮತ್ತು ಪಶ್ಚಿಮ-ಆಫ್ರಿಕಾದ ಚಿನ್ನ ಮತ್ತು ದಂತಕೃತಿಗಳು ಹಾಗೂ ಅಧಿಕ ಸಂಖ್ಯಾತ ಗುಲಾಮರುಗಳ ವ್ಯಾಪಾರವನ್ನು ಇವು ಒಳಗೊಂಡಿದ್ದವು. ಹನ್ನೊಂದನೇ ಶತಮಾನದ ಮಧ್ಯಭಾಗದಲ್ಲಿ, ಬ್ಯೂರ್ ನಗರದ‌ ಸಮೀಪ ಪತ್ತೆಯಾದ ಹೊಸ ಚಿನ್ನದಗಣಿಗಳು ವ್ಯಾಪಾರಮಾರ್ಗವನ್ನು ಪೂರ್ವದೆಡೆಗೆ ಬದಲಿಸಿದವು. ಈ ಬೆಳವಣಿಗೆಯು ನೈಗರ್‌‌ ನದಿಯ ಮೇಲಿನ ದೋಣಿಗಳಿಗೆ ಒಂಟೆಗಳ ಮೇಲಿನ ಸರಕುಗಳನ್ನು ಹೇರಲಾಗುತ್ತಿದ್ದ ಟಿಂಬಕ್ಟುವನ್ನು ಸಮೃದ್ಧ ನಗರವನ್ನಾಗಿ ಮಾಡಿತು.

ಮಾಲಿ ಸಾಮ್ರಾಜ್ಯದ ಉಚ್ಛ್ರಾಯ

ಹನ್ನೆರಡನೇ ಶತಮಾನದ ಅವಧಿಯಲ್ಲಿ, ಘಾನಾ ಸಾಮ್ರಾಜ್ಯದ ಅಳಿದುಳಿದ ಭಾಗದ ಮೇಲೆ ಸಾಸ್ಸೋ ಸಾಮ್ರಾಜ್ಯದ ಅರಸ ಸೌಮಾವ್‌ರೋ ಕಾಂಟೆ ಎಂಬಾತ ದಾಳಿಯಿಟ್ಟನು. ವಲಾಟಾದ ಮಹಮ್ಮದೀಯ ಪಂಡಿತೋತ್ತಮರು (ಔದಾಘೋಸ್ಟ್‌‌‌ ವ್ಯಾಪಾರ ಮಾರ್ಗದ ಎಲ್ಲೆಯಾಗಿದ್ದ ಸ್ಥಾನವನ್ನು ನಗರದ ತೆಕ್ಕೆಗೆ ತೆಗೆದುಕೊಳ್ಳುತ್ತಾ) ಟಿಂಬಕ್ಟುಗೆ ತೆರಳಿ ತಲೆತಪ್ಪಿಸಿಕೊಂಡರಲ್ಲದೇ ಇಸ್ಲಾಮ್‌‌/ಮಹಮ್ಮದೀಯ ಧರ್ಮದ ಸ್ಥಾನವನ್ನು ಅಲ್ಲಿ ಭದ್ರಪಡಿಸಿದರು. ಮಹಮ್ಮದೀಯ ಕಲಿಕೆಯ ಕೇಂದ್ರವಾಗಿ ಮಾರ್ಪಟ್ಟ ಟಿಂಬಕ್ಟು ನಗರವು ಸಂಕೋರ್‌‌ ವಿಶ್ವವಿದ್ಯಾಲಯ ಮತ್ತು 180 ಖುರಾನ್‌ ಬೋಧಕ ಶಾಲೆಗಳನ್ನು ಹೊಂದಿತ್ತು. 1324ನೇ ಇಸವಿಯಲ್ಲಿ ಮೆಕ್ಕಾದ ಯಾತ್ರೆಯಿಂದ ಮರಳುತ್ತಾ ಅರಸ ಮೂ/ಮುಸಾ I, ಟಿಂಬಕ್ಟುವನ್ನು ಶಾಂತಿಪೂರ್ವಕವಾಗಿ ವಶಪಡಿಸಿಕೊಂಡನು. ಆಗ ನಗರವು ಮಾಲಿ ಸಾಮ್ರಾಜ್ಯದ ಭಾಗವಾದ್ದರಿಂದ, ಅರಸನಾದ ಮೂ/ಮುಸಾ I ವೈಭವೋಪೇತ ಅರಮನೆಯನ್ನು ನಿರ್ಮಿಸಲು ಆದೇಶಿಸಿದುದಲ್ಲದೇ ತನ್ನ ಆಶ್ರಯದ ನೂರಾರು ಮಹಮ್ಮದೀಯ ಪಂಡಿತೋತ್ತಮರುಗಳೊಡನೆ, ಡ್ಜಿ/ಜಿಂಗರೇ ಬೆರ್‌‌ ಎಂಬ ಕಲಿಕಾ ಕೇಂದ್ರವನ್ನು 1327ರಲ್ಲಿ ನಿರ್ಮಿಸಿದನು.

1375ರ ಹೊತ್ತಿಗೆ, ಕೆಟಾಲನ್‌ ಭೂಪಟದಲ್ಲಿ ಕಾಣಿಸಿಕೊಂಡಿದ್ದ ಟಿಂಬಕ್ಟು ನಗರವು ಉತ್ತರ-ಆಫ್ರಿಕಾದ ಮಹಾನಗರಗಳೊಂದಿಗೆ ಸಂಪರ್ಕವಿರುವ ವಾಣಿಜ್ಯ ಕೇಂದ್ರವೆನಿಸಿದ್ದು ಯುರೋಪ್‌‌'ನ ಗಮನವನ್ನೂ ಸೆಳೆದಿತ್ತು.

ಟುವಾರೆಗ್‌‌ ಆಳ್ವಿಕೆ & ಸಾಂಘಾಯ್‌‌ರವರುಗಳ ಸಾಮ್ರಾಜ್ಯ

15ನೇ ಶತಮಾನದ ಪ್ರಥಮಾರ್ಧದಲ್ಲಿ ಮಾಲಿ ಸಾಮ್ರಾಜ್ಯದ ಶಕ್ತಿಯು ಕ್ಷೀಣಿಸುತ್ತಿದ್ದ ಹಾಗೆ, ಮಘ್‌ಷರಾನ್‌‌ ಟುವಾರೆಗ್‌‌ 1433-1434ರ ಅವಧಿಯಲ್ಲಿ ನಗರದ ನಿಯಂತ್ರಣ ತೆಗೆದುಕೊಂಡು ಸನ್‌ಹಜ ಪ್ರಾಂತಾಧಿಪತಿಯನ್ನು ನೇಮಿಸಿದರು. ಆದಾಗ್ಯೂ ಮೂವತ್ತು ವರ್ಷಗಳ ನಂತರ ಪ್ರಗತಿ ಹೊಂದುತ್ತಿದ್ದ ಸಾಂಘಾಯ್‌ ಸಾಮ್ರಾಜ್ಯವು, ಟಿಂಬಕ್ಟುವನ್ನು 1468-1469ರಲ್ಲಿ ವಶಪಡಿಸಿಕೊಂಡು ವಿಸ್ತರಣೆಯಾಯಿತು. ಸಾಂಘಾಯ್‌ ಸಾಮ್ರಾಜ್ಯ ಮತ್ತು ಟಿಂಬಕ್ಟುಗಳಲ್ಲಿ ಸುವರ್ಣ ಯುಗವು ಉಂಟಾಗಲು ಕಾರಣರಾದ ಅನುಕ್ರಮವಾಗಿ ಸುನ್ನಿ ಅಲಿ ಬೆರ್‌‌ (1468–1492), ಸುನ್ನಿ ಬರು (1492–1493) ಮತ್ತು ಅಸ್ಕಿಯಾ ಮೊಹಮ್ಮದ್‌‌ I (1493–1528)ರವರುಗಳ ನೇತೃತ್ವವನ್ನು ಹೊಂದಿತ್ತು. ಗಾವೊ ನಗರವು ಸಾಮ್ರಾಜ್ಯದ ರಾಜಧಾನಿಯಾಗಿದ್ದರೂ, ಟಿಂಬಕ್ಟು ಸಾಪೇಕ್ಷವಾಗಿ ಸ್ವಾಯತ್ತ ಸ್ಥಾನಮಾನ ಪಡೆದಿತ್ತು. ಘಾಡೇಮ್ಸ್‌‌, ಔಜಿಡಾ ಮತ್ತಿತರ ಅನೇಕ ಉತ್ತರ ಆಫ್ರಿಕಾದ ನಗರಗಳ ವ್ಯಾಪಾರಿಗಳು ಉತ್ತರ ಆಫ್ರಿಕಾದ ವಸ್ತ್ರಗಳು ಮತ್ತು ಕುದುರೆಗಳು ಮತ್ತು ಟಘಾಜಾದ ಸಹಾರಾದ ಉಪ್ಪುಗಳ ಬದಲಾಗಿ ಅಲ್ಲಿ ಚಿನ್ನ ಮತ್ತು ಗುಲಾಮರನ್ನು ಕೊಳ್ಳಲು ನೆರೆಯುತ್ತಿದ್ದರು. ಸಾಮ್ರಾಜ್ಯದ ನೇತೃತ್ವವು ನಗರದಲ್ಲಿನ ಆಂತರಿಕ ಹೋರಾಟಗಳು ಅಲ್ಲಿನ ಸಮೃದ್ಧಿಯ ಇಳಿಕೆಗೆ ಕಾರಣವಾದರೂ 1591ರವರೆಗೆ ಅಸ್ಕಿಯಾ ರಾಜಸಂತತಿಯವರದಾಗೇ ಉಳಿದಿತ್ತು.

ಮೊರೊಕ್ಕೋದವರ ಸ್ವಾಧೀನಪಡಿಸಿಕೊಳ್ಳುವಿಕೆ

ಪಾಷಾ ಮಹ್‌ಮೂದ್‌‌ B. ಝರ್ಕೂನ್‌‌ನ ನೇತೃತ್ವದಲ್ಲಿ ಚಿನ್ನದ ಗಣಿಗಳನ್ನು ಹುಡುಕಿಕೊಂಡು ಮೊರೊಕ್ಕೋದ, ಸಾಡಿ/ದಿ ಅರಸನಾದ ಅಹ್ಮದ್‌‌ I ಅಲ್‌‌-ಮನ್ಸೂರ್‌‌‌ ಕಳಿಸಿದ ಸೈನ್ಯವು ಆಗಸ್ಟ್‌ 17, 1591ರಂದು ನಗರವನ್ನು ವಶಪಡಿಸಿಕೊಂಡಾಗ ಸಾಪೇಕ್ಷ ಸ್ವಾಯತ್ತತೆಯ ಒಂದು ಯುಗ ಅಂತ್ಯ ಕಂಡಿತು. ವೈಚಾರಿಕವಾಗಿ, ಹಾಗೂ ಬಹುಮಟ್ಟಿಗೆ ಆರ್ಥಿಕವಾಗಿ ಕೂಡಾ ಟಿಂಬಕ್ಟು ಈ ಸಮಯದಲ್ಲಿ ದೀರ್ಘಾವಧಿಯ ಅವನತಿ ಕಾಣಲಾರಂಭಿಸಿತು. 1593ರಲ್ಲಿ, ಅಹ್ಮದ್‌ ಬಾಬಾರೂ ಸೇರಿದಂತೆ ಅನೇಕ ಟಿಂಬಕ್ಟು'ನ ಪಂಡಿತೋತ್ತಮರನ್ನು ಬಂಧಿಸಿ, ತರುವಾಯ ಕೊಲ್ಲುವುದು ಅಥವಾ ಗಡೀಪಾರು ಮಾಡಿ ಅದಕ್ಕೆ ಅವರು 'ದೇಶದ್ರೋಹ'ವೆಸಗಿದ್ದರೆಂದು ಸಾಡಿ/ದಿ ಅರಸೊತ್ತಿಗೆಯು ಕಾರಣ ನೀಡಿತು. ನಗರದ ಶ್ರೇಷ್ಠ ಪಂಡಿತೋತ್ತಮರಾಗಿದ್ದ ಅವರು ನಗರದ ಮೊರೊಕ್ಕೋ ಜನಾಂಗದ ಪ್ರಾಂತಾಧಿಪತಿಯೊಡನೆ ಹೊಂದಿದ್ದ ತಾತ್ವಿಕ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಪ್ರಾಯಶಃ ಅವರನ್ನು ಮರ್ರಾಕೇಷ್‌‌ಗೆ ಸ್ಥಳಾಂತರಗೊಳ್ಳುವಂತೆ ಮಾಡಲಾಯಿತು, ಅಲ್ಲಿ ಅವರ ಪಂಡಿತೋತ್ತಮ ವರ್ಗ/ವಿಶ್ವದ ಗಮನ ಸೆಳೆಯುವಿಕೆ ಮುಂದುವರೆಯಿತು. ಅಹ್ಮದ್‌ ಬಾಬಾರವರು ನಂತರ ಟಿಂಬಕ್ಟುಗೆ ಮರಳಿದರಲ್ಲದೇ 1608ರಲ್ಲಿ ಅಲ್ಲಿಯೇ ಕೊನೆಯುಸಿರೆಳೆದರು. ಟಿಂಬಕ್ಟು'ವಿನ ಮಹತ್ವ/ಪಾತ್ರವನ್ನು ಕಡೆಗಣಿಸುತ್ತಾ ಅಟ್ಲಾಂಟಿಕ್‌‌ ಆಚಿನ ವ್ಯಾಪಾರಮಾರ್ಗಗಳು (ಟಿಂಬಕ್ಟುವಿನ ಪಂಡಿತೋತ್ತಮರು ಹಾಗೂ ಪ್ರಮುಖರೂ ಸೇರಿದಂತೆ ಆಫ್ರಿಕಾದ ಗುಲಾಮರುಗಳ ಸಾಗಣೆಗೆಂದು) ಹೆಚ್ಚುತ್ತಾ ಹೋದಂತೆ ಚರಮ ಕುಸಿತವು ಮುಂದುವರೆಯಿತು. ಮೊರೊಕ್ಕೋ - ಟಿಂಬಕ್ಟು ವ್ಯಾಪಾರಮಾರ್ಗಗಳ ನಿಯಂತ್ರಣದೊಂದಿಗೆ, ನಗರದ ಮೇಲಿನ ಮೊರೊಕ್ಕೋದವರ ಹಿಡಿತವು 1780ರವರೆಗಿನ ಅವಧಿಯಲ್ಲಿ ತನ್ನ ಸಡಿಲವಾಗತೊಡಗಿತಲ್ಲದೇ, 19ನೇ ಶತಮಾನದ ಆದಿಯಲ್ಲಿ ಸಾಮ್ರಾಜ್ಯವು ಟುವಾರೆಗ್‌‌ (1800), ಫುಲಾ (1813) ಮತ್ತು ಟುಕುಲಾರ್‌‌‌‌ಗಳು 1840ರಲ್ಲಿ ನಡೆಸಿದ ನಗರದ ಮೇಲಿನ ಆಕ್ರಮಣಗಳು ಹಾಗೂ ತರುವಾಯದ ಅಲ್ಪಕಾಲೀನ ಸ್ವಾಧೀನಪಡಿಕೆಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಫ್ರೆಂಚರು ಅಲ್ಲಿಗೆ ಆಗಮಿಸಿದಾಗ ಟುಕುಲಾರ್‌‌‌‌ಗಳೇ ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿದ್ದರೇ, ಅಥವಾ ಟುವಾರೆಗ್‌ಗಳು ಮತ್ತೊಮ್ಮೆ ಅಧಿಕಾರವನ್ನು ಪಡೆದುಕೊಂಡಿದ್ದರೇ, ಎಂಬುದು ಸ್ಪಷ್ಟವಿಲ್ಲ.

ಪಶ್ಚಿಮದವರಿಂದ ಶೋಧನೆ

ಲಿಯೋ ಆಫ್ರಿಕಾನಸ್‌‌'ರು ಮಾಡಿದ್ದ ಪ್ರಸ್ತಾಪದ ಅವಧಿಯ ಸುಮಾರಿಗೆ ನಗರದ ಐತಿಹಾಸಿಕ ವಿವರಣೆಗಳು ಲಭ್ಯವಿದ್ದು 16ನೇ ಶತಮಾನದ ಪ್ರಥಮಾರ್ಧದಲ್ಲಿ, ಅವು ಅನೇಕ ಐರೋಪ್ಯ ವ್ಯಕ್ತಿಗಳು ಮತ್ತು ಸಂಸ್ಥೆಗಳು ಟಿಂಬಕ್ಟುವನ್ನು ಮತ್ತು ಅದರ ಪ್ರಖ್ಯಾತ ಐಶ್ವರ್ಯವನ್ನು ಶೋಧಿಸಲು ಅಸಾಧಾರಣ ಪ್ರಯತ್ನಗಳನ್ನು ಮಾಡುವಂತೆ ಪ್ರೇರೇಪಿಸಿತು. 1788ರಲ್ಲಿ ಬಿರುದಾಂಕಿತ ಆಂಗ್ಲರ ಗುಂಪೊಂದು ನಗರವನ್ನು ಪತ್ತೆಹಚ್ಚುವ ಹಾಗೂ ನೈಗರ್‌ ನದಿಯ ಪಥವನ್ನು ನಿಗದಿಪಡಿಸುವ ಉದ್ದೇಶದೊಂದಿಗೆ ಆಫ್ರಿಕನ್‌‌ ಸಂಘಟನೆಯೊಂದನ್ನು ರಚಿಸಿಕೊಂಡರು. ಅವರ ಪ್ರಾಯೋಜಕತ್ವದಡಿ ಹೊರಟ ತೀರ ಮುಂಚಿನ ಶೋಧಕನೆಂದರೆ ನೈಗರ್‌ ನದಿ ಮತ್ತು ಟಿಂಬಕ್ಟುಗಳ ಹುಡುಕಾಟದಲ್ಲಿ ಎರಡು ಪ್ರವಾಸಗಳನ್ನು ಕೈಗೊಂಡ (ಮೊದಲಿಗೆ 1795ರಲ್ಲಿ ಹೊರಟಿದ್ದು, ನಂತರ 1805ರಲ್ಲಿ) ಮುಂಗೋ ಪಾರ್ಕ್‌ ಎಂಬ ಯುವ ಸ್ಕಾಟಿಷ್‌ ಸಾಹಸಿ. ಪಾರ್ಕ್‌‌ರು ನಗರವನ್ನು ತಲುಪಿದ ಪ್ರಥಮ ಪಾಶ್ಚಿಮಾತ್ಯ ಎನ್ನಲಾದರೂ ಆಧುನಿಕ ಕಾಲದ ನೈಜೀರಿಯಾದಲ್ಲಿ ತಮ್ಮ ಶೋಧನೆಗಳನ್ನು ವರದಿ ಮಾಡುವ ಅವಕಾಶ ಸಿಗದೇ ಮರಣಿಸಿದ್ದರು. 1824ರಲ್ಲಿ ಪ್ಯಾರಿಸ್‌ ಮೂಲದ ಸೊಸೈಟೆ ಡೆ ಜಿಯೋಗ್ರಾಫೆ ಸಂಸ್ಥೆಯು ಆ ಪಟ್ಟಣವನ್ನು ತಲುಪಿ ಅಲ್ಲಿನ ಮಾಹಿತಿ ತೆಗೆದುಕೊಂಡು ಬರುವ ಪ್ರಥಮ ಮಹಮ್ಮದೀಯೇತರನಿಗೆ 10,000 ಫ್ರಾಂಕ್‌ ಮೊತ್ತದ ಬಹುಮಾನವನ್ನು ಘೋಷಿಸಿತ್ತು. ಬ್ರಿಟನ್‌‌ನ‌ ಗಾರ್ಡನ್‌ ಲೈಯಂಗ್‌ರು ಸೆಪ್ಟೆಂಬರ್‌ 1826ರಲ್ಲಿ ಅಲ್ಲಿಗೆ ಆಗಮಿಸಿದರೂ ಕೆಲ ಸಮಯದಲ್ಲೇ ಐರೋಪ್ಯ ಶೋಧನೆ ಮತ್ತು ಹಸ್ತಕ್ಷೇಪದ ಬಗ್ಗೆ ಭೀತರಾಗಿದ್ದ ಸ್ಥಳೀಯ ಮಹಮ್ಮದೀಯರಿಂದ ಕೊಲ್ಲಲ್ಪಟ್ಟರು. ಮಹಮ್ಮದೀಯನ ವೇಷದಲ್ಲಿ ಏಕಾಂಗಿಯಾಗಿ ಪಯಣಿಸುತ್ತಾ ಫ್ರೆಂಚ್‌ ವ್ಯಕ್ತಿ ರೆನೆ ಕೈಲ್ಲಿಯೇ 1828ರಲ್ಲಿ ಆಗಮಿಸಿದರು; ಅವರು ಸುರಕ್ಷಿತವಾಗಿ ಹಿಂದಿರುಗಿ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು.

ರಾಬರ್ಟ್‌‌ ಆಡಮ್ಸ್‌‌, ಎಂಬ ಓರ್ವ ಆಫ್ರಿಕನ್‌-ಅಮೇರಿಕನ್‌ ನೌಕಾಯಾನಿ, ಆಫ್ರಿಕಾದ ತೀರದಲ್ಲಿ ಆತನ ಹಡಗು ಧ್ವಂಸಗೊಂಡಾಗ 1811ರಲ್ಲಿ ಗುಲಾಮನಾಗಿ ನಗರಕ್ಕೆ ಭೇಟಿ ನೀಡಿದ್ದೆನೆಂದು ಹೇಳಿಕೊಂಡಿದ್ದನು. 1813ರಲ್ಲಿ ಮೊರೊಕ್ಕೋದ ಟ್ಯಾಂಜಿಯೆರ್‌‌ನಲ್ಲಿನ ಬ್ರಿಟಿಷ್‌ ರಾಯಭಾರಿ ಕಚೇರಿಗೆ ವರದಿಯನ್ನು ಸಲ್ಲಿಸಿದ್ದರು. ಅವರು ತಮ್ಮ ಕಥನವನ್ನು 1816ರ ಪುಸ್ತಕ, ದ ನರೇಟಿವ್‌ ಆಫ್‌ ರಾಬರ್ಟ್‌‌ ಆಡಮ್ಸ್‌‌, ಎ ಬಾರ್ಬರಿ ಕ್ಯಾಪ್ಟಿವ್ ‌‌ (2006ರ ಮಟ್ಟಿಗೆ ಈಗಲೂ ಮುದ್ರಿತ ಪ್ರತಿ ಲಭ್ಯವಿದೆ)ನಲ್ಲಿ ಪ್ರಕಟಿಸಿದ್ದಾರೆ, ಆದರೆ ಅವರ ಕಥನದ ಬಗ್ಗೆ ಇನ್ನೂ ಅನುಮಾನಗಳಿವೆ. 1890ಕ್ಕೆ ಮುನ್ನ ನಗರಕ್ಕೆ ತಲುಪಿದ ಇತರೆ ಮೂವರು ಐರೋಪ್ಯರೆಂದರೆ : 1853ರಲ್ಲಿ ತಲುಪಿದ ಹೇನ್‌ರಿಚ್‌‌ ಬಾರ್ತ್‌ ಮತ್ತು ಸ್ಪೇನ್‌ವಾಸಿ ಕ್ರಿಸ್ಟೋಬಲ್‌‌‌‌ ಬೆನಿಟೆಜ್‌‌ರೊಡನೆ 1880ರಲ್ಲಿ ತಲುಪಿದ ಜರ್ಮನಿಯ ಆಸ್ಕರ್‌ ಲೆನ್ಜ್‌.

ಫ್ರೆಂಚರ ವಸಾಹತು ಸಾಮ್ರಾಜ್ಯದ ಭಾಗವಾಗಿ

ಬರ್ಲಿನ್‌ ಸಮ್ಮೇಳನದಲ್ಲಿ ಆಫ್ರಿಕಾದ ಬಗ್ಗೆ ಹೋರಾಟವು ಅಧಿಕೃತಗೊಂಡಾಗ ದಕ್ಷಿಣಕ್ಕೆ ಉದಾಹರಣೆಗೆ ನೈಗರ್‌‌ನ ಸೇನಿಂದ ಬರೌವಾದೆಡೆಗೆ 14ನೇ ಖಗೋಳಮಧ್ಯರೇಖೆ ಮತ್ತು ಚಾಡ್‌ನ ಮಿಲ್‌ಟೌಗಳ ನಡುವಿನ ಭೂಮಿಯು ಫ್ರೆಂಚರ ವಸಾಹತುವೆನಿಸಿಕೊಂಡಿತು. ಟಿಂಬಕ್ಟು ಪ್ರದೇಶವು ಆಗ ಫ್ರೆಂಚರ ಹೆಸರಿನಲ್ಲೇ ಇದ್ದರೂ, ಕಾರ್ಯರೂಪಕ್ಕಿಳಿಸುವ ವಿಧಾನದ ಪ್ರಕಾರ ಫ್ರಾನ್ಸ್‌‌ ಹಾಗೆ ನಿಗದಿಪಡಿಸಲ್ಪಟ್ಟ ಪ್ರದೇಶಗಳಲ್ಲಿ ವಾಸ್ತವವಾಗಿ ಅಧಿಕಾರವನ್ನು ಹೊಂದಬೇಕಿತ್ತು e.g. ಸ್ವಾಮ್ಯವನ್ನು ಪ್ರಮಾಣೀಕರಿಸುವ ಮುನ್ನ ಸ್ಥಳೀಯ ಮುಖ್ಯಸ್ಥರೊಡನೆ ಒಪ್ಪಂದಗಳನ್ನು ಮಾಡಿಕೊಂಡು, ಸರ್ಕಾರ ರಚಿಸಿ ಆ ಪ್ರದೇಶವನ್ನು ಆರ್ಥಿಕವಾಗಿ ಬಳಸಿಕೊಳ್ಳಬೇಕಿರುತ್ತದೆ. ಡಿಸೆಂಬರ್‌ 28, 1893ರಂದು, ನಗರವು ತನ್ನ ಉಚ್ಛ್ರಾಯ ಮುಗಿದು ದೀರ್ಘಕಾಲದ ನಂತರ ಸೇನಾಧಿಕಾರಿ‌ ಬಾಯ್ಟೆಯಕ್ಸ್‌‌ರ ನೇತೃತ್ವದಲ್ಲಿ ಫ್ರೆಂಚರ ಪುಟ್ಟ ಗುಂಪೊಂದು ವಶಪಡಿಸಿಕೊಂಡಿತು : ಟಿಂಬಕ್ಟು ಆಗ ಫ್ರಾನ್ಸ್‌‌ನ ವಸಾಹತುವಾಗಿದ್ದ ಫ್ರೆಂಚ್‌ ಸುಡಾನ್‌ನ ಭಾಗವೆನಿಸಿಕೊಂಡಿತು. 1899ರಲ್ಲಿ ವಸಾಹತುವಿನ ಭಾಗವನ್ನು ವಿಭಜನೆಗೊಳಿಸಿದ ನಂತರ, ಉಳಿದ ಪ್ರದೇಶಗಳನ್ನು ಪುನಃಸ್ಸಂಘಟನೆಗೊಳಿಸಲಾಯಿತಲ್ಲದೇ ಅಲ್ಪಕಾಲದ ಮಟ್ಟಿಗೆ ಸೆನೆಗಾಂಬಿಯಾ ಮತ್ತು ನೈಗರ್ ಎಂದು ಅವುಗಳನ್ನು ಕರೆಯಲಾಯಿತು‌, 1902ರವರೆಗೆ ಇದೇ ಸ್ಥಿತಿಯು ಮುಂದುವರೆಯಿತು. ಎರಡೇ ವರ್ಷಗಳ ನಂತರ 1904ರಲ್ಲಿ, ಮತ್ತೊಂದು ಪುನಸ್ಸಂಘಟನೆ ನಡೆಯಿತಲ್ಲದೇ, 1920ರವರೆಗೆ ಟಿಂಬಕ್ಟು ನಗರವು ಮೇಲಿನ ಸೆನೆಗಲ್‌ ಮತ್ತು ನೈಗರ್‌‌ಗಳ ಭಾಗವಾಗಿತ್ತು, ಆ ನಂತರ ವಸಾಹತು ತನ್ನ ಹಳೆಯ ಹೆಸರಾದ ಫ್ರೆಂಚ್‌‌ ಸೂಡಾನ್‌ ಎಂಬ ಹೆಸರನ್ನು ಮತ್ತೆ ಪಡೆದುಕೊಂಡಿತು.

ವಿಶ್ವ ಸಮರ II

ಜನರಲ್‌ ಚಾರ್ಲ್ಸ್‌‌ ಡಿ ಗಾಲೆಯವರಿಗೆ ನಾಝಿ-ಆಕ್ರಮಿತ ಫ್ರಾನ್ಸ್‌‌ ಹಾಗೂ ದಕ್ಷಿಣದ ವಿಚಿ ಫ್ರಾನ್ಸ್‌‌ನೊಂದಿಗೆ ಹೋರಾಡಲು ಸಹಾಯವಾಗುವಂತೆ ‌‌ವಿಶ್ವ ಸಮರ IIರ ಅವಧಿಯಲ್ಲಿ, ಟಿಂಬಕ್ಟುವಿನಿಂದ ಬಂದಿದ್ದ ಕೆಲವು ಸೇರಿದಂತೆ ಅನೇಕ ತುಕಡಿಗಳನ್ನು ಫ್ರೆಂಚ್‌ ಸೌ/ಸೂಡಾನ್‌‌ನಲ್ಲಿ ನೇಮಿಸಿಕೊಳ್ಳಲಾಯಿತು.

ಸುಮಾರು 60 ಮಂದಿ ಬ್ರಿಟಿಷ್‌‌‌ ಸಮುದ್ರ ವ್ಯಾಪಾರಿಗಳು SS ಅಲ್ಲೆಂಡೆ (ಕಾರ್ಡಿಫ್‌‌‌)ನಿಂದ, 17ನೇ ಮಾರ್ಚ್‌ 1942ರಂದು ಪಶ್ಚಿಮ ಆಫ್ರಿಕಾದ ದಕ್ಷಿಣ ತೀರದಾಚೆಗೆ ಮುಳುಗಿದ್ದವರನ್ನು ದ್ವಿತೀಯ ವಿಶ್ವ ಸಮರದ ಅವಧಿಯಲ್ಲಿ ನಗರದಲ್ಲಿ ಸೆರೆಯಲ್ಲಿಡಲಾಗಿತ್ತು. ಎರಡು ತಿಂಗಳ ನಂತರ ಫ್ರೀಟೌನ್‌ನಿಂದ ಟಿಂಬಕ್ಟುವಿಗೆ ಸ್ಥಳಾಂತರಗೊಂಡ ನಂತರ, ಅವರಲ್ಲಿ ಈರ್ವರು, AB ಜಾನ್‌ ಟರ್ನ್‌ಬುಲ್‌ ಗ್ರಹಾಮ್‌‌‌ (2 ಮೇ 1942, ವಯಸ್ಸು 23) ಮತ್ತು ಮುಖ್ಯ ಅಭಿಯಂತರ ವಿಲಿಯಮ್ ಸೌಟ್ಟರ್‌‌ (28 ಮೇ 1942, ವಯಸ್ಸು 60)ರವರುಗಳು ಅಲ್ಲಿಯೇ 1942ರ ಮೇ ತಿಂಗಳಿನಲ್ಲಿ ಮರಣಿಸಿದರು. ಈರ್ವರನ್ನೂ ಐರೋಪ್ಯ ರುದ್ರಭೂಮಿಯಲ್ಲಿ ಹೂಳಲಾಯಿತು - ಬಹುಶಃ ಇದು ಕಾಮನ್‌ವೆಲ್ತ್‌‌ ವಾರ್‌ ಗ್ರೇವ್ಸ್‌ ಕಮಿಷನ್‌ ಸಂಸ್ಥೆಯ ಉಸ್ತುವಾರಿಯಲ್ಲಿರುವ ಅತ್ಯಧಿಕ ದೂರದ ಬ್ರಿಟಿಷ್‌‌‌ ಯುದ್ಧಸಮಾಧಿಯಾಗಿದೆ.

ಅವರುಗಳು ಮಾತ್ರವೇ ಟಿಂಬಕ್ಟುವಿನಲ್ಲಿ ಯುದ್ಧಕೈದಿಗಳಾಗಿರಲಿಲ್ಲ: 1942ರಲ್ಲಿ ಅವರ ಹಡಗು, SS ಕ್ರಿಟನ್ ‌‌, ಎರಡು ವಿಚಿ ಫ್ರೆಂಚ್‌ ಯುದ್ಧನೌಕೆಗಳಿಂದ ಅಡ್ಡಗಟ್ಟಲ್ಪಟ್ಟಾಗ ಸೆರೆಯಾದ 52 ವ್ಯಕ್ತಿಗಳಲ್ಲಿ ಪೀಟರ್‌ ಡಿ ನ್ಯೂಮನ್‌‌ರೂ ಒಬ್ಬರಾಗಿದ್ದರು. ಡಿ ನ್ಯೂಮನ್ನರೂ ಸೇರಿದಂತೆ ಅನೇಕರು ತಪ್ಪಿಸಿಕೊಂಡು ಹೋದರೂ, ಅವರೆಲ್ಲರನ್ನೂ ಮತ್ತೆ ಸೆರೆಹಿಡಿದು ಸ್ಥಳೀಯರ ಕಾವಲಿನಲ್ಲಿ ಒಟ್ಟು ಹತ್ತು ತಿಂಗಳ ಕಾಲ ನಗರದಲ್ಲಿಡಲಾಗಿತ್ತು. ಅವರು ಇಂಗ್ಲೆಂಡ್‌ಗೆ ಮರಳಿದ ನಂತರ ಅವರು "ಟಿಂಬಕ್ಟೂವಿನಿಂದ ಬಂದ ವ್ಯಕ್ತಿ" ಎಂದೆನಿಸಿಕೊಂಡರು.

ಸ್ವಾತಂತ್ರ್ಯ & ಆನಂತರ

Main article: Mali Federation

ವಿಶ್ವ ಸಮರ II ಕೊನೆಯಾದ ನಂತರ, ಫ್ರೆಂಚ್‌‌ ಸರ್ಕಾರವು ಚಾರ್ಲ್ಸ್‌‌ ಡಿ ಗಾಲೆರ ನೇತೃತ್ವದಡಿಯಲ್ಲಿ ವಸಾಹತಿಗೆ ಹೆಚ್ಚು ಹೆಚ್ಚಾಗಿ ಸ್ವಾತಂತ್ರ್ಯವನ್ನು ನೀಡಿತು. ಅಲ್ಪಾವಧಿಯ ಮಾಲಿ ಒಕ್ಕೂಟದ ಭಾಗವಾಗಿದ್ದ ಸ್ವಲ್ಪ ಕಾಲದ ನಂತರ, ಮಾಲಿ ಗಣರಾಜ್ಯವನ್ನು ಸೆಪ್ಟೆಂಬರ್‌ 22, 1960ರಂದು ಘೋಷಿಸಲಾಯಿತು. ನವೆಂಬರ್‌ 19, 1968ರ ನಂತರ, 1974ರಲ್ಲಿ ನವೀನ ಸಂವಿಧಾನವೊಂದನ್ನು ರಚಿಸಿ, ಮಾಲಿಯನ್ನು ಏಕ-ಪಕ್ಷದ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಆ ಹೊತ್ತಿಗಾಗಲೇ, ನೈಗರ್‌ ನದಿಗೆ ನಗರವನ್ನು ಸಂಪರ್ಕಿಸುವ ನಾಲೆಯು ಆಕ್ರಮಿಸಿಕೊಳ್ಳುತ್ತಿರುವ ಮರಳುಗಾಡಿನ ಮರಳಿನಿಂದ ತುಂಬಿಹೋಗಿತ್ತು. ತೀವ್ರ ಅನಾವೃಷ್ಟಿಯು ಸಹೇಲ್‌ ಪ್ರದೇಶಕ್ಕೆ 1973 ಮತ್ತು 1985ರಲ್ಲಿ ಆಕ್ರಮಣ ಮಾಡಿ, ಟಿಂಬಕ್ಟು ಸುತ್ತಮುತ್ತಲಿನ ಮೇಕೆ ಸಾಕಾಣಿಕೆಯ ಮೇಲೆ ಆಧಾರಿತರಾಗಿದ್ದ ಟುವಾರೆಗ್‌‌ ಜನತೆಗೆ ವ್ಯಾಪಕ ಹಾನಿಯನ್ನುಂಟು ಮಾಡಿತು. ನೈಗರ್‌‌' ನದಿಯ ನೀರಿನ ಮಟ್ಟ ಇಳಿಕೆಯಾಗಿ ಆಹಾರಸಾಮಗ್ರಿ ಸರಬರಾಜು ಮತ್ತು ವ್ಯಾಪಾರಿ ಹಡಗುಗಳ ಆಗಮನವನ್ನು ವಿಳಂಬಗೊಳಿಸಿತು. ಈ ಬಿಕ್ಕಟ್ಟು ಟೌಂಬೌಕ್ಟೌ ವಲಯದ ಕೆಲ ನಿವಾಸಿಗಳನ್ನು ಅಲ್ಜೀರಿಯಾ ಮತ್ತು ಲಿಬಿಯಾಗಳಿಗೆ ವಲಸೆ ಹೋಗುವಂತೆ ಮಾಡಿತು. ಅಲ್ಲಿಯೇ ಉಳಿದವರು ಆಹಾರ ಮತ್ತು ನೀರಿನ ವಿಷಯಗಳಿಗೆ UNICEFನಂತಹಾ ಮಾನವಹಿತಕಾರಿ ಸಂಸ್ಥೆಗಳ ಮೇಲೆ ಅವಲಂಬಿಸಿದ್ದರು.

ವ್ಯುತ್ಪತ್ತಿಶಾಸ್ತ್ರ

ಶತಮಾನಗಳವರೆಗೆ ಯಾತ್ರಿಕ ಆಂಟೋನಿಯಸ್‌ ಮಾಲ್‌ಫಾಂಟೆ’ರ 1447ರಲ್ಲಿ ಬರೆದ ಪತ್ರದಲ್ಲಿನ “ಥಾಂಬೆಟ್‌‌” ಎಂಬ ಬಳಕೆ ಮತ್ತು ಕಾ ಡಾ ಮಾಸ್ಟೋರಿಂದ ಅವರ “ವಾಯೇಜಸ್‌ ಆಫ್‌ ಕಾಡಾಮಾಸ್ಟೋ" ಕೃತಿಯಲ್ಲಿ ಬಳಕೆಯಿಂದ ಹಿಡಿದು ಹೇನ್‌ರಿಚ್‌‌ ಬಾರ್ತ್‌’ರ ಟಿಂಬಕ್ಟು ಮತ್ತು ಟಿಂಬ'ಕ್ಟುವರೆಗೆ ಟಿಂಬಕ್ಟುವಿನ ಕಾಗುಣಿತವು ಸಾಕಷ್ಟು ವ್ಯತ್ಯಾಸ ಕಂಡಿದೆ. ಟಿಂಬಕ್ಟು’ವಿನ ಕಾಗುಣಿತದೊಂದಿಗೆ ಅದರ ವ್ಯುತ್ಪತ್ತಿಶಾಸ್ತ್ರವೂ ಈಗಲೂ ಚರ್ಚೆಗೆ ಮುಕ್ತವಾಗಿದೆ.

ಟಿಂಬಕ್ಟು ಎಂಬ ಹೆಸರಿಗೆ ಕನಿಷ್ಠ ನಾಲ್ಕು ಸಂಭವನೀಯ ಮೂಲಗಳನ್ನು ವರ್ಣಿಸಲಾಗಿದೆ:

  • ಸಾಂಘಾಯ್‌ ಮೂಲ: ಲಿಯೋ ಆಫ್ರಿಕಾನಸ್‌‌ ಮತ್ತು ಹೇನ್‌ರಿಚ್‌‌ ಬಾರ್ತ್‌ ಈರ್ವರೂ ಈ ಹೆಸರು ಎರಡು ಸಾಂಘೌ ಪದಗಳಿಂದ ವ್ಯುತ್ಪನ್ನವಾಗಿದೆ ಎಂದು ನಂಬಿದ್ದರು. ಲಿಯೋ ಆಫ್ರಿಕಾನಸ್‌‌ ಪ್ರತಿಪಾದಿಸುವ ಪ್ರಕಾರ: “ಈ ಹೆಸರು [ಟಿಂಬಕ್ಟು] ನಮ್ಮ ಕಾಲದಲ್ಲಿ (ಕೆಲವರು ಭಾವಿಸುವ ಹಾಗೆ) ಈ ಸಾಮ್ರಾಜ್ಯದ ಮೇಲೆ (ಅವರು ಹೇಳುವ ಹಾಗೆ) ಅರಸ ಮೆನ್ಸೆ ಸುಲೇಮಾನ್‌‌ ಹೆಜೀರಾ ಶಕೆಯ ವರ್ಷ 610 [1213-1214]ರಲ್ಲಿ ಸ್ಥಾಪಿಸಿದ ಹಾಗೆ ಕರೆಯಲಾಗುತ್ತಿದ್ದ ನಿರ್ದಿಷ್ಟ ಪಟ್ಟಣದ ಹೆಸರನ್ನು ಹೇರಲಾಗಿದೆ ." ಈ ಪದವು ಎರಡು ಭಾಗಗಳನ್ನು ಹೊಂದಿದ್ದು, ಟಿನ್‌‌ (ಗೋಡೆ ) ಮತ್ತು ಬು/ಬಟು ("ಬು/ಬಟುವಿನ ಗೋಡೆ "), ಆಫ್ರಿಕಾನಸ್‌‌ ಇದರ ಅರ್ಥವೇನೆಂದು ವಿವರಿಸಿರಲಿಲ್ಲ. ಹೇನ್‌ರಿಚ್‌‌ ಬಾರ್ತ್‌ : "ಹೆಸರಿನ ಮೂಲ ರೂಪವು, ಇಮೋಷಾಘ್‌‌‌‌ರು ಟುಂಬಿಟ್ಕು ಪದವನ್ನು ವ್ಯುತ್ಪನ್ನಗೊಳಿಸಿದ ಸಾಂಘಾಯ್‌ ರೂಪ ಟುಂಬಟುವಾಗಿದ್ದು, ನಂತರ ಅದನ್ನು ಅರಬ್ಬರು ಟಾಂಬಕ್ಟು ಆಗಿ ಬದಲಾಯಿಸಿದ್ದಿರಬಹುದು ” (1965[1857]: 284) ಎಂದು ಸೂಚಿಸಿದ್ದರು. ಪದದ ಅರ್ಥದ ಬಗ್ಗೆ ಬಾರ್ಥ್‌‌ರು ಹೀಗೆಂದಿದ್ದರು : “ಪಟ್ಟಣವು ಪ್ರಾಯಶಃ ಸಾಂಘಾಯ್‌ ಭಾಷೆಯಲ್ಲಿ ಹಾಗೆಂದು ಕರೆಯಲ್ಪಟ್ಟಿರಬಹುದು : ಅದು ಟೇಮಾಷಿಗ್ಟ್‌ ಪದವಾಗಿದ್ದ ಪಕ್ಷದಲ್ಲಿ, ಅದನ್ನು ಟಿನ್‌ಬಕ್ಟು ಎಂದು ಬರೆದಿರಬೇಕಾಗಿತ್ತು ಈ ಹೆಸರನ್ನು ಐರೋಪ್ಯರು ಸಾಧಾರಣವಾಗಿ "ಬುಕ್ಟುವಿನ ಬಾವಿ"ಯಾಗಿ [ಎಂದು] ಅರ್ಥೈಸುತ್ತಾರೆ, ಆದರೆ "ಟಿನ್‌‌" ಪದಕ್ಕೂ ಬಾವಿಗೂ ಯಾವುದೇ ರೀತಿಯ ಸಂಬಂಧವಿಲ್ಲ”. (ಬಾರ್ಥ್‌‌ 1965:284-285 ಅಡಿಟಿಪ್ಪಣಿ)
  • ಬರ್ಬರರ ಮೂಲ : ಸಿಸ್ಸೋಕೋ ಬೇರೆಯೇ ಆದ ವ್ಯುತ್ಪತ್ತಿಯನ್ನು ತೋರ್ಪಡಿಸುತ್ತಾರೆ: ನಗರದ ಟುವಾರೆಗ್‌‌ ಸ್ಥಾಪಕರು ಅದಕ್ಕೆ “ಇದರ ಸ್ಥಳ ” ಎಂಬರ್ಥದ ಇನ್‌‌ ಎಂಬುದರ ಸ್ತ್ರೀಲಿಂಗ ರೂಪ ಟಿಮ್‌‌‌‌‌‌ , ಮತ್ತು ಅರಬ್‌ ಪದ ನೆಕ್‌ಬಾ (ಮರಳಿನ ಸಣ್ಣ ದಿಬ್ಬ)ದ ಹ್ರಸ್ವರೂಪ “ಬೌಕ್ಟೌ ” ಎಂಬ ಎರಡು ಭಾಗಗಳನ್ನು ಹೊಂದಿರುವ ಬರ್ಬರರ ಹೆಸರನ್ನಿಟ್ಟಿದ್ದರು. ಆದ್ದರಿಂದ, ಟಿಂಬಕ್ಟು ಎಂಬುದರ ಅರ್ಥ “ಸಣ್ಣ ದಿಬ್ಬಗಳಿಂದ ಕೂಡಿದ ಸ್ಥಳ ” ಎಂಬುದಾಗಿತ್ತು.
  • ಅಬ್ದ್‌‌‌ ಅಲ್‌-ಸಾದಿ ತಮ್ಮ ತಾರೀಖ್‌ ಅಲ್‌‌-ಸುಡಾನ್‌‌ (ca. 1655) ಕೃತಿಯಲ್ಲಿ ಹೆಸರಿನ ಮೂರನೇ ವಿವರಣೆ ಕೊಡುತ್ತಾರೆ: “ಮೊದಲಿಗೆ ಭೂಪ್ರದೇಶದ ಹಾಗೂ ಜಲಮಾರ್ಗಗಳ ಪ್ರಯಾಣಿಕರುಗಳು ಭೇಟಿಯಾಗುವ ಸ್ಥಳವಾಗಿತ್ತು. ಅವರು ಈ ಸ್ಥಳವನ್ನು ತಮ್ಮ ಸಾಮಗ್ರಿ ಹಾಗೂ ಧಾನ್ಯಗಳ ಉಗ್ರಾಣವನ್ನಾಗಿಸಿದ್ದರು. ಅಲ್ಪಕಾಲದಲ್ಲೇ ಈ ಸ್ಥಳವು ಆ ಮೂಲಕ ಹಾದುಹೋಗುವ ಯಾತ್ರಿಕರ ಕೂಡು-ಹಾದಿಯಾಗಿ ಮಾರ್ಪಟ್ಟಿತು. ಅವರು ವೃದ್ಧ ಎಂಬರ್ಥದ ಟಿಂಬಕ್ಟೂ ಎಂಬ ಹೆಸರಿನ [ಓರ್ವ] ನಂಬಿಕೆಯ ಗುಲಾಮನ ವಶಕ್ಕೆ ತಮ್ಮ ವಸ್ತು/ಸಾಮಗ್ರಿಗಳನ್ನೆಲ್ಲಾ ಒಪ್ಪಿಸಿರುತ್ತಿದ್ದರು” .
  • ರೆನೆ ಬ್ಯಾಸ್ಸೆಟ್‌‌ ಎಂಬ ಫ್ರೆಂಚ್‌‌‌ ಪೌರಸ್ತ್ಯ ಪಂಡಿತ ಮತ್ತೊಂದು ಸಿದ್ದಾಂತವನ್ನು ಮುಂದಿಟ್ಟರು: ಈ ಹೆಸರು “ದೂರವಿರುವಿಕೆ” ಅಥವಾ “ಮರೆಯಾಗಿರುವಿಕೆ” ಎಂಬರ್ಥದ ಝೆನಾಗಾ ಮೂಲ ಪದ b-k-t ಮತ್ತು ಸ್ತ್ರೀಲಿಂಗ ಷಷ್ಟೀ ವಿಭಕ್ತಿ ಅವ್ಯಯ ಪದ ಟಿನ್‌‌ ಗಳಿಂದ ವ್ಯುತ್ಪನ್ನವಾಗಿದೆ. “ಮರೆಯಾಗಿರುವಿಕೆ” ಎಂಬರ್ಥವು ನಗರವು ಸಣ್ಣಗೆ ಒಳಬಾಗಿದಂತಹಾ ಪ್ರದೇಶದಲ್ಲಿರುವುದನ್ನು ಸೂಚಿಸಲಿರಬಹುದು.

ಈ ಸಿದ್ದಾಂತಗಳ ಅಂಗೀಕಾರಾರ್ಹತೆಯು ನಗರದ ಮೂಲ ಸ್ಥಾಪಕರ ವ್ಯಕ್ತಿತ್ವದ ಮೇಲೆ ಆಧರಿಸಿರುತ್ತದೆ: ಸಾಂಘಾಯ್‌ ಸಾಮ್ರಾಜ್ಯದ ಅಸ್ತಿತ್ವಕ್ಕೆ ಹಿಂದಿನ ಅವಶೇಷಗಳು ಮತ್ತು ಅದಕ್ಕೂ ಹಿಂದಿನ ಇತಿಹಾಸದ ಬಗೆಗಿನ ಕಥೆಗಳು ಟುವಾರೆಗ್‌‌ಗಳೆಡೆಗೆ ಬೊಟ್ಟು ಮಾಡುತ್ತವೆ. ಆದರೆ 2000ನೇ ಇಸವಿಯಷ್ಟು ಇತ್ತೀಚಿನದಾದ, ಪುರಾತತ್ವಶಾಸ್ತ್ರೀಯ ಸಂಶೋಧನೆಗಳಲ್ಲಿಯೂ ಹಿಂದಿನ ಶತಮಾನಗಳ ಕಾಲದಲ್ಲಿ ಮೀಟರ್‌ಗಟ್ಟಲೆ ಮರಳು ಅವಶೇಷಗಳ ಮೇಲೆ ಆವರಿಸಿರುವುದರಿಂದ 11ನೇ/12ನೇ ಶತಮಾನದಷ್ಟು ಹಳೆಯದಾದ ಯಾವ ಅವಶೇಷಗಳೂ ಕಂಡುಬಂದಿಲ್ಲ. ಒಮ್ಮತವಿಲ್ಲದ ಕಾರಣ, ಟಿಂಬಕ್ಟುವಿನ ವ್ಯುತ್ಪತ್ತಿಯು ಅಸ್ಪಷ್ಟವಾಗಿಯೇ ಉಳಿದಿದೆ.

ಐತಿಹ್ಯ ಕಥೆಗಳು

ಟಿಂಬಕ್ಟು'ವಿನ ಅಸಾಧಾರಣ ಐಶ್ವರ್ಯದ ಬಗೆಗಿನ ಕಥೆಗಳು ಆಫ್ರಿಕಾದ ಪಶ್ಚಿಮ ಕರಾವಳಿಯ ಐರೋಪ್ಯ ಶೋಧನೆಗೆ ಕಾರಣವಾದವು. ಟಿಂಬಕ್ಟುವಿನ ಅತಿ ಜನಪ್ರಿಯ ವಿವರಣೆಗಳೆಂದರೆ ಇಬ್ನ್‌‌ ಬಟ್ಟೂಟಾ, ಲಿಯೋ ಆಫ್ರಿಕಾನಸ್‌‌ ಮತ್ತು ಷಬೇನಿಯವರುಗಳದ್ದು.

ಇಬ್ನ್‌‌ ಬಟ್ಟೂಟಾ

ಟಿಂಬಕ್ಟುವಿನ ಅತಿ ಹಳೆಯ ಕಥನಗಳೆಂದರೆ ಪ್ರಸಿದ್ಧ ಯಾತ್ರಿಕ ಮತ್ತು ಪಂಡಿತೋತ್ತಮ ಇಬ್ನ್‌‌ ಬಟ್ಟೂಟಾರದ್ದು. ಇಬ್ನ್‌‌ ಬಟ್ಟೂಟಾ'ರ ಫೆಬ್ರವರಿ 1352ರಿಂದ ಡಿಸೆಂಬರ್‌ 1353ರವರೆಗಿನ ಪಶ್ಚಿಮ ಆಫ್ರಿಕಾದ ಭೇಟಿಯ ಅವಧಿಯಲ್ಲಿ ಟಿಂಬಕ್ಟು ನಗರವು ಮಾಲಿ ಸಾಮ್ರಾಜ್ಯದ ಭಾಗವಾಗಿಯೇ ಇದ್ದರೂ ನೆರೆಯ ರಾಜ್ಯಗಳು ಹಾಗೂ ಅದುವರೆಗೆ ಸಾಮಂತ ರಾಜ್ಯವಾಗಿದ್ದ ಸಾಂಘಾಯ್‌ ಸಾಮ್ರಾಜ್ಯದ ಹೆಚ್ಚಿದ ಬಲವು ಸಾಮ್ರಾಜ್ಯಕ್ಕೆ ಅಪಾಯವಾಗಿ ಪರಿಣಮಿಸಿದ್ದವು. ಆ ಹೊತ್ತಿಗಾಗಲೇ ವಾಣಿಜ್ಯಕೇಂದ್ರವಾಗಿದ್ದ, ಟಿಂಬಕ್ಟು ನಗರವು ಆಧುನಿಕ-ದಿನಮಾನದ ಬುರ್ಕಿನಾ ಫಾಸೊದಲ್ಲಿದ್ದ ಮಾಸ್ಸಿ ಸಾಮ್ರಾಜ್ಯಕ್ಕೆ ಆಕರ್ಷಕ ಗುರಿಯಾಗಿ ಪರಿಣಮಿಸಿತ್ತು - ಇಬ್ನ್‌‌ ಬಟ್ಟೂಟಾ ಹಾಗೆ ಅವರು ನಗರವನ್ನ ಕೊಳ್ಳೆಹೊಡೆದಿದ್ದನ್ನೇ ವಿವರಣೆ ನೀಡಿದ್ದಾಗಿತ್ತು :

The Malians fled in fear, and abandoned the city to them. The Mossi sultan entered Timbuktu, and sacked and burned it, killing many persons and looting it before returning to his land.

- Ibn Battuta's Rihla according to the Tarikh al-Sudan

ಲಿಯೋ ಆಫ್ರಿಕಾನಸ್‌‌

ಟಿಂಬಕ್ಟುವಿನ ಬಗ್ಗೆ ಬರೆದ ಕಥನಗಳಲ್ಲಿ ಬಹುಶಃ ಅತಿ ಪ್ರಖ್ಯಾತವಾದದ್ದೆಂದರೆ ಲಿಯೋ ಆಫ್ರಿಕಾನಸ್‌‌ರದ್ದು. ಗ್ರನಡಾದಲ್ಲಿ 1485ರಲ್ಲಿ ಎಲ್‌ ಹಸನ್‌‌ ಬೆನ್‌ ಮುಹಮ್ಮದ್‌‌ ಎಲ್‌-ವಾಜ್ಜನ್‌-ಎಜ್‌-ಝಯ್ಯಟಿ ಎಂಬ ಹೆಸರಿನೊಂದಿಗೆ ಜನಿಸಿದ ಆತ, ಅರಸ ಫರ್ಡಿನೆಂಡ್‌‌ ಮತ್ತು ರಾಣಿ ಇಸಾಬೆಲ್ಲಾರ 1492ರ ಸ್ಪೇನ್‌‌ಅನ್ನು ಪುನಃವಶಪಡಿಕೆಯ ನಂತರ ಆತನ ಪೋಷಕರು ಮತ್ತು ಸಾವಿರಾರು ಇತರೆ ಮಹಮ್ಮದೀಯರೊಂದಿಗೆ ದೇಶಭ್ರಷ್ಟರಾದರು. ಮೊರೊಕ್ಕೋದಲ್ಲಿ ನೆಲೆಯಾಗಿ, ಫೆಸ್‌‌ನಲ್ಲಿ ಅಧ್ಯಯನ ನಡೆಸಿ ಆತ ತನ್ನ ಚಿಕ್ಕಪ್ಪ/ಮಾವನೊಡನೆ ಉತ್ತರ ಆಫ್ರಿಕಾದುದ್ದಕ್ಕೂ ನಡೆಸಿದ ರಾಜತಾಂತ್ರಿಕ ಕಾರ್ಯಭಾರಗಳಲ್ಲಿ ಪಾಲ್ಗೊಂಡಿದ್ದರು. ಈ ಪರ್ಯಟನೆಯ ಅವಧಿಯಲ್ಲಿ, ಆತ ಟಿಂಬಕ್ಟುವಿಗೆ ಭೇಟಿ ನೀಡಿದ್ದರು. ಯುವಕನಾಗಿದ್ದುದರಿಂದ ಆತನನ್ನು ಕಡಲ್ಗಳ್ಳರು ಸೆರೆಯಾಗಿಸಿ ಅಪವಾದವೆನಿಸುವಂತಹಾ ಸುಶಿಕ್ಷಿತ ಗುಲಾಮನನ್ನಾಗಿ ಪೋಪ್‌‌ ಲಿಯೋ Xರಿಗೆ ಕಾಣಿಕೆಯನ್ನಾಗಿ ನೀಡಿದರು, ಆತನನ್ನು ಮುಕ್ತಗೊಳಿಸಿದ ಅವರು “ಜೋಹಾನ್ನಿಸ್‌‌ ಲಿಯೋ ಡಿ ಮೆಡಿಸಿ” ಎಂಬ ಹೆಸರಿನಲ್ಲಿ ದೀಕ್ಷಾಸ್ನಾನ ನೀಡಿ ಆತನಿಗೆ ಇಟಾಲಿಯನ್‌ ಭಾಷೆಯಲ್ಲಿ ಆಫ್ರಿಕಾದ ವಿವರಣಾತ್ಮಕ ಅವಲೋಕನ/ಸಮೀಕ್ಷೆಯನ್ನು ಬರೆಯುವ ಕೆಲಸ ವಹಿಸಿದರು. ಮುಂದಿನ ಅನೇಕ ಶತಮಾನಗಳ ಕಾಲದಲ್ಲಿ ಐರೋಪ್ಯರು ಆ ಖಂಡದ ಬಗ್ಗೆ ಮಾಹಿತಿಗಾಗಿ ಬಹುತೇಕ ಆತನ ಕಥನಗಳನ್ನೇ ಆಧರಿಸಿದ್ದರು. ಸಾಂಘಾಯ್‌ ಸಾಮ್ರಾಜ್ಯವು ತನ್ನ ಉಚ್ಛ್ರಾಯದಲ್ಲಿದ್ದಾಗಿನ ಟಿಂಬಕ್ಟು ನಗರದ ಸ್ಥಿತಿಯನ್ನು ವಿವರಿಸಿದ ಅವರ ಪುಸ್ತಕದ ಆಂಗ್ಲ ಆವೃತ್ತಿಯ ಈ ವಿವರಣೆಯನ್ನು ಒಳಗೊಂಡಿದೆ:

The rich king of Tombuto hath many plates and scepters of gold, some whereof weigh 1300 pounds. ... He hath always 3000 horsemen ... (and) a great store of doctors, judges, priests, and other learned men, that are bountifully maintained at the king's cost and charges.

Leo Africanus, Descrittione dell’ Africa, Volume 3 pp. 824-825

ಲಿಯೋ ಆಫ್ರಿಕಾನಸ್‌‌ರ ಪ್ರಕಾರ, ನಗರದ ಸುತ್ತಮುತ್ತ ಯಾವುದೇ ತೋಟಗಳಾಗಲೀ ಅಥವಾ ಫಲೋದ್ಯಾನಗಳಾಗಲಿ ಇರದಿದ್ದರೂ ಸ್ಥಳೀಯವಾಗಿ ಬೆಳೆಯಲಾದ ಮುಸುಕಿನ ಜೋಳ, ಜಾನುವಾರು, ಹಾಲು ಮತ್ತು ಬೆಣ್ಣೆಗಳ ವಿಪುಲ ಸರಬರಾಜು ಲಭ್ಯವಿತ್ತು. ಅರಸ ಮತ್ತು ಪರಿಸರದ ಸಮೃದ್ಧಿಯನ್ನು ವಿವರಿಸಲು ಮೀಸಲಿಟ್ಟ ಮತ್ತೊಂದು ವಾಕ್ಯವೃಂದದಲ್ಲಿ, ಆಫ್ರಿಕಾನಸ್‌‌ರು ಟಿಂಬಕ್ಟು'ವಿನ ಮಾರಾಟ ಸರಕುಗಳ ಅಪರೂಪತ್ವದ ಬಗ್ಗೆ ಪ್ರಸ್ತಾಪಿಸುತ್ತಾರೆ: ಉದಾಹರಣೆಗೆ ಉಪ್ಪು.

The inhabitants are very rich, especially the strangers who have settled in the country; so much so that the current king has given two of his daughters in marriage to two brothers, both businessmen, on account of their wealth. Grain and animals are abundant, so that the consumption of milk and butter is considerable. But salt is in very short supply because it is carried here from Tegaza, some 500 miles from Timbuktu. I happened to be in this city at a time when a load of salt sold for eighty ducats. The king has a rich treasure of coins and gold ingots.

Leo Africanus, Descrittione dell’ Africa in Paul Brians' Reading About the World, Volume 2

ಈ ವಿವರಣೆಗಳು ಹಾಗೂ ವಾಕ್ಯವೃಂದಗಳು ಒಟ್ಟಾಗಿಯೇ ಐರೋಪ್ಯ ಶೋಧಕರುಗಳ ಗಮನ ಸೆಳೆದಿತ್ತು. ಆಫ್ರಿಕಾನಸ್‌‌ರು "ಸುಣ್ಣದಕಲ್ಲಿನಿಂದ ನಿರ್ಮಿಸಿ ಹುಲ್ಲಿನ ಹೊದಿಕೆಯ ಗುಡಿಸಿಲುಗಳು"ನಂತಹಾ ನಗರದ ಇತರೆ ವಾಡಿಕೆಯ ಅಂಶಗಳ ಬಗ್ಗೆ ಕೂಡಾ ಪ್ರಸ್ತಾಪಿಸಿದ್ದರೂ ಅವೆಲ್ಲವನ್ನು ನಿರ್ಲಕ್ಷಿಸಲಾಗಿತ್ತು.

ಷಬೇನಿ

ಸ್ಥೂಲವಾಗಿ ಲಿಯೋ ಆಫ್ರಿಕಾನಸ್‌‌ರ' ಟಿಂಬಕ್ಟು ಭೇಟಿಯ 250 ವರ್ಷಗಳ ನಂತರದ ಅವಧಿಯೊಳಗೆ, ನಗರವು ಅನೇಕ ಅರಸರನ್ನು ಕಂಡಿತ್ತು. 18ನೇ ಶತಮಾನದ ಕೊನೆಗೆ ಮೊರೊಕ್ಕೋದ ಅರಸರುಗಳ ನಗರದ ಮೇಲಿನ ಹಿಡಿತ ಸಡಿಲಗೊಂಡು, ಆಗ್ಗಾಗ್ಗೆ ಬದಲಾದ ವಿವಿಧ ವಂಶ/ಜನಾಂಗಗಳ ಅಸ್ಥಿರ ಸರ್ಕಾರದ ಅವಧಿಯಾಗಿ ಪರಿಣಮಿಸಿತ್ತು. ಅಂತಹಾ ವಂಶ/ಜನಾಂಗಗಳಲ್ಲಿ ಒಂದರ ಆಳ್ವಿಕೆಯ ಸಮಯದಲ್ಲಿ, ಹೌಸಾ ಎಂಬ ಟೆಟೌವನ್‌‌ನ 14ರ ಬಾಲಕನೊಬ್ಬನು ತನ್ನ ತಂದೆಯ ಜೊತೆಗೆ ಟಿಂಬಕ್ಟುವಿಗೆ ಭೇಟಿ ನೀಡಿದ್ದನು. ಅಲ್ಲಿಯೇ ಬೆಳೆದು ವ್ಯಾಪಾರಿಯಾಗಿ ಮಾರ್ಪಟ್ಟ ಆತನನ್ನು ಸೆರೆಹಿಡಿದು ಅಂತಿಮವಾಗಿ ಇಂಗ್ಲೆಂಡ್‌ಗೆ ಕರೆತರಲಾಯಿತು.

The town is once and a half the size of Tetouan, and contains, besides natives, about 10,000 of the people of Fas and Marocco. The natives of the town of Timbuctoo may be computed at 40,000, exclusive of slaves and foreigners [..] The natives are all blacks: almost every stranger marries a female of the town, who are so beautiful that travellers often fall in love with them at first sight.

- Shabeni in James Grey Jackson's An Account of Timbuctoo and Hausa, 1820

ಹೌಸಾಗೆ ಸ್ಥಳಾಂತರಗೊಳ್ಳುವ ಮುನ್ನಾ ಷಬೇನಿ, ಅಥವಾ ಅಸೀದ್‌‌ ಎಲ್‌‌ ಹಗೆ ಅಬ್ದ್‌‌‌ ಸಲಾಮ್‌ ಷಬೀನಿಯು ಟಿಂಬಕ್ಟುವಿನಲ್ಲಿ ಮೂರು ವರ್ಷ ಕಾಲ ಕಳೆದನು. ಎರಡು ವರ್ಷಗಳ ನಂತರ, ಟಿಂಬಕ್ಟೂಗೆ ಹಿಂದಿರುಗಿದ ಆತ ಅಲ್ಲಿಯೇ ಮತ್ತೆ ಏಳು ವರ್ಷಗಳ ಕಾಲ ವಾಸಿಸಿದನು - ಉಚ್ಛ್ರಾಯದ ಶತಮಾನಗಳ ನಂತರವೂ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದ ಗುಲಾಮರುಗಳನ್ನು ಹೊರತುಪಡಿಸಿ, ಈತ 21ನೇ ಶತಮಾನದ ಪಟ್ಟಣದ ಗಾತ್ರದ ಎರಡರಷ್ಟು ಜನಸಂಖ್ಯೆಯನ್ನು ಹೊಂದಿದ್ದ ಜನಾಂಗದ ಭಾಗವಾಗಿದ್ದ:

ಷಬೇನಿಯು 27 ವರ್ಷದವನಾಗುವ ಹೊತ್ತಿಗೆ, ಆತ ತನ್ನ ತವರುನಗರದಲ್ಲಿ ವ್ಯಾಪಾರಿಯಾಗಿ ನೆಲೆ ಕಂಡುಕೊಂಡಿದ್ದ. ಡಿಸೆಂಬರ್‌, 1789ರಲ್ಲಿ ಹ್ಯಾಮ್‌ಬರ್ಗ್‌ನಲ್ಲಿನ ವ್ಯಾಪಾರೋದ್ದೇಶದ ಯಾನದಿಂದ ಮರಳುತ್ತಿದ್ದ ಆತನ ಆಂಗ್ಲ ಹಡಗನ್ನು ವಶಪಡಿಸಿಕೊಂಡು ರಷ್ಯನ್‌ ಸೇನಾನೌಕೆಯೊಂದು ಆಸ್ಟೆಂಡೆಗೆ ಕರೆತಂದಿತು.

ತರುವಾಯ ಬ್ರಿಟಿಷ್‌‌‌ ರಾಯಭಾರ ಕಛೇರಿಯು ಆತನನ್ನು ಮುಕ್ತಗೊಳಿಸಿದರೂ, ಆತನ ಹಡಗಿನವರು ಮತ್ತೆ ಸೆರೆಗೊಳಗಾಗುವ ಭಯದಿಂದ ಡೋವರ್‌ ತೀರದಲ್ಲಿ ಇಳಿಸಿದರು. ಇಲ್ಲಿ ಆತನ ಕಥನವನ್ನು ದಾಖಲಿಸಲಾಯಿತು. ಷಬೀನಿ 18ನೇ ಶತಮಾನದ ದ್ವಿತೀಯಾರ್ಧದಲ್ಲಿ ನಗರದ ಗಾತ್ರದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತಾನೆ. ಹಿಂದಿನ ವಾಕ್ಯವೃಂದವೊಂದರಲ್ಲಿ, ಆತ ಟಿಂಬಕ್ಟು'ವಿನ ಶುಷ್ಕ ಪರಿಸರಕ್ಕಿಂತ ತಕ್ಕ ಮಟ್ಟಿಗೆ ಭಿನ್ನವಾದ ಪರಿಸರವನ್ನು ಚಿತ್ರಿಸಿದ್ದಾನೆ:

On the east side of the city of Timbuctoo, there is a large forest, in which are a great many elephants. Shabeeny cannot say what is the extent of this forest, but it is very large [..] Close to the town of Timbuctoo, on the south, is a small rivulet in which the inhabitants wash their clothes, and which is about two feet deep. It runs in the great forests on the east, and does not communicate with the Nile, but is lost in the sands west of the town. Its water is brackish; that of the Nile is pleasant.

- Shabeni in James Grey Jackson's An Account of Timbuctoo and Hausa, 1820

ಶಿಕ್ಷಣದ ಕೇಂದ್ರ

UNESCO World Heritage Site
Timbuktu
Name as inscribed on the World Heritage List
Type Cultural
Criteria ii, iv, v
Reference 119
UNESCO region Africa
Inscription history
Inscription 1988 (12th Session)
Endangered 1990-2005

15ನೇ ಶತಮಾನದ ಆದಿಯಲ್ಲಿ, ಅನೇಕ ಮಹಮ್ಮದೀಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಇವುಗಳಲ್ಲಿ ಅತಿ ಪ್ರಸಿದ್ಧವಾದುದೆಂದರೆ ಸಂಕೋರ್‌ ಮಸೀದಿ, ಇದನ್ನು ಸಂಕೋರ್‌ ವಿಶ್ವವಿದ್ಯಾಲಯವೆಂದೂ ಕರೆಯಲಾಗುತ್ತದೆ.

ಈ ನಗರಗಳಲ್ಲಿ ಇಸ್ಲಾಮ್‌‌/ಮಹಮ್ಮದೀಯ ಧರ್ಮವನ್ನು ಆಚರಿಸುತ್ತಿದ್ದರೂ ಸ್ಥಳೀಯ ಗ್ರಾಮೀಣ ಬಹುಸಂಖ್ಯಾತ ಜನರು ಮಹಮ್ಮದೀಯವಲ್ಲದ ಸಂಪ್ರದಾಯದವರಾಗಿದ್ದರು. ಅನೇಕವೇಳೆ ಅಲ್ಲಿನ ನಾಯಕರೆನಿಸಿಕೊಂಡವರು ಆರ್ಥಿಕ ಉನ್ನತಿಗೆಂದು ಸಾಂಕೇತಿಕವಾಗಿ ಮಹಮ್ಮದೀಯರಾಗಿದ್ದು, ಜನಸಾಮಾನ್ಯರು ಇತರೆ ಸಂಪ್ರದಾಯದವರಾಗಿದ್ದರು.

ಸಂಕೋರ್‌ ವಿಶ್ವವಿದ್ಯಾಲಯ

Main article: Sankore University

ಸಂಕೋರ್‌ ಎಂದು ಈಗ ಕರೆಯಲ್ಪಡುತ್ತಿರುವುದನ್ನು, 1581 ADಯಲ್ಲಿ (= 989 A. H.) (ಬಹುಶಃ 13ನೇ ಅಥವಾ 14ನೇ ಶತಮಾನದ) ಮತ್ತೂ ಹಳೆಯದಾದ ಪ್ರದೇಶದಲ್ಲಿ ಕಟ್ಟಿಸಲಾಯಿತು, ಹಾಗೂ ಇದು ಟಿಂಬಕ್ಟುವಿನ ಮಹಮ್ಮದೀಯ ಪಂಡಿತೋತ್ತಮ ಸಮುದಾಯದ ಕೇಂದ್ರವಾಗಿ ಮಾರ್ಪಟ್ಟಿತು. "ಸಂಕೋರ್‌ ವಿಶ್ವವಿದ್ಯಾಲಯ"ವು ಮಧ್ಯಯುಗೀಯ ಯುರೋಪ್‌‌ನ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ಸಂಘಟಿತಗೊಂಡಿದ್ದ ಮದ್ರಸಾವಾಗಿತ್ತು. ಸಂಪೂರ್ಣವಾಗಿ ಸ್ವಾಯತ್ತ ಶಾಲೆಗಳು ಅಥವಾ ಮಹಾವಿದ್ಯಾಲಯಗಳ ಸಂಯೋಜನೆಯಾಗಿದ್ದು, ಅವುಗಳಲ್ಲಿ ಪ್ರತಿಯೊಂದೂ ತನ್ನದೇ ಆದ ಓರ್ವ ಬೋಧಕ ಅಥವಾ ಇಮಾಮರ ನೇತೃತ್ವದಲ್ಲಿ ನಡೆಯುತ್ತಿತ್ತು. ವಿದ್ಯಾರ್ಥಿಗಳು ನಿರ್ದಿಷ್ಟ ಬೋಧಕರೊಂದಿಗೆ ಗುರುತಿಸಿಕೊಳ್ಳುತ್ತಿದ್ದರಲ್ಲದೇ, ತರಗತಿಗಳನ್ನು ಮಸೀದಿ ಕಟ್ಟಡಗಳ ಅಥವಾ ಖಾಸಗಿ ಗೃಹಗಳ ಮುಕ್ತ ಪ್ರಾಂಗಣಗಳಲ್ಲಿ ನಡೆಸಲಾಗುತ್ತಿತ್ತು. ವ್ಯಾಪಕ ಬೋಧನೆಯಲ್ಲಿ ತರ್ಕ, ಖಗೋಳಶಾಸ್ತ್ರ ಮತ್ತು ಇತಿಹಾಸಗಳೆಲ್ಲವೂ ಒಳಗೊಂಡಿತ್ತಾದರೂ ಈ ಶಾಲೆಗಳ ಪ್ರಮುಖ ಧ್ಯೇಯವು ಖುರಾನ್‌‌ಅನ್ನು ಬೋಧಿಸುವುದಾಗಿತ್ತು. ಪಂಡಿತೋತ್ತಮರು ಪಾಂಡಿತ್ಯವೇತನ/ಗೌರವಧನದ ಮೇಲೆ ಆಧಾರಿತವಾಗಿದ್ದ ಸಾಮಾಜಿಕ ಅರ್ಥಶಾಸ್ತ್ರದ ಚೌಕಟ್ಟಿನ ಭಾಗವಾಗಿ ತಮ್ಮದೇ ಆದ ಗ್ರಂಥಗಳನ್ನು ಬರೆಯುತ್ತಿದ್ದರು. ಗ್ರಂಥಗಳನ್ನು ಕೊಂಡು ಮಾರುವುದರಿಂದ ಬರುತ್ತಿದ್ದ ಲಾಭವು ಚಿನ್ನ-ಉಪ್ಪಿನ ಮಾರಾಟದ ನಂತರದ ಮಟ್ಟದ್ದಾಗಿತ್ತು. ಅಗಾಧ ಪಾಂಡಿತ್ಯದ ಪಂಡಿತೋತ್ತಮರು, ಪ್ರಾಧ್ಯಾಪಕರು ಮತ್ತು ಬೋಧಕರುಗಳಲ್ಲಿ ಹೆಚ್ಚು ಪ್ರಖ್ಯಾತನೆಂದರೆ ಅಹ್ಮದ್‌‌ ಬಾಬಾ ಆಗಿದ್ದರು, ಆತ ತಾರೀಖ್‌ ಅಲ್‌‌-ಸುಡಾನ್‌‌ ಮತ್ತಿತರ ಕೃತಿಗಳಲ್ಲಿ ಅನೇಕ ಬಾರಿ ಹೆಸರಿಸಲಾದ ಐತಿಹಾಸಿಕ ವ್ಯಕ್ತಿಯೂ ಹೌದು.

ಟಿಂಬಕ್ಟುವಿನ ಹಸ್ತಪ್ರತಿಗಳು ಮತ್ತು ಗ್ರಂಥಾಲಯಗಳು

ಟಿಂಬಕ್ಟುವಿನ ಪ್ರಧಾನ ಮೌಲ್ಯಯುತ ನಿಧಿಯೆಂದರೆ ಪಟ್ಟಣದ ಶ್ರೇಷ್ಠ ಕುಟುಂಬಗಳು ಸಂರಕ್ಷಿಸಿಟ್ಟುಕೊಂಡಿರುವ 100,000 ಹಸ್ತಪ್ರತಿಗಳು.. ಮಹಮ್ಮದೀಯಪೂರ್ವ ಕಾಲದ ಮತ್ತು 12ನೇ ಶತಮಾನದ ಅವಧಿಯ ಈ ಹಸ್ತಪ್ರತಿಗಳಲ್ಲಿ ಕೆಲವನ್ನು, ಪಟ್ಟಣ ಹಾಗೂ ಸಮೀಪದ ಇತರೆ ಹಳ್ಳಿಗಳಲ್ಲಿ ಕೌಟುಂಬಿಕ ರಹಸ್ಯವಾಗಿ ರಕ್ಷಿಸಿಡಲಾಗಿದೆ. ಅವುಗಳಲ್ಲಿ ಬಹುತೇಕವನ್ನು ಅರೇಬಿಕ್‌ ಅಥವಾ ಫುಲಾನಿ ಭಾಷೆಗಳಲ್ಲಿ ಮಾಲಿ ಸಾಮ್ರಾಜ್ಯದಿಂದ ಬಂದಿದ್ದ ಪ್ರಾಜ್ಞರು ಬರೆದಿದ್ದರು. ಅವುಗಳಲ್ಲಿರುವ ಅಂಶಗಳು ವಿಶೇಷವಾಗಿ ಖಗೋಳಶಾಸ್ತ್ರ, ಸಂಗೀತ ಮತ್ತು ಸಸ್ಯಶಾಸ್ತ್ರಗಳ ಕ್ಷೇತ್ರಗಳಲ್ಲಿ ಶಿಕ್ಷಣಾತ್ಮಕವಾಗಿತ್ತು. ತೀರ ಇತ್ತೀಚಿನ ಹಸ್ತಪ್ರತಿಗಳು ಕಾನೂನು, ವಿಜ್ಞಾನ ಕ್ಷೇತ್ರ ಮತ್ತು ಇತಿಹಾಸ (ಪ್ರಮುಖ 17ನೇ ಶತಮಾನದ ಆಖ್ಯಾನಗಳಾದ, ತಾರೀಖ್‌‌ ಅಲ್‌‌-ಫಟ್ಟಾಷ್‌‌ ಮತ್ತು ತಾರೀಖ್‌ ಅಲ್‌‌-ಸುಡಾನ್‌‌), ಧರ್ಮ, ವ್ಯಾಪಾರ, etc. ಗಳನ್ನು ಒಳಗೊಂಡಿವೆ.

ಯುನೆಸ್ಕೋದ ಸಹಯೋಗ

Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
Ari Wahyudi
14 March 2013
This must be the end of the world as Donald Duck describe it.
Bravia Hotel Ouagadougou

starting $218

Sopatel Silmandé

starting $180

Hotel Splendid Ouagadougou

starting $123

Faso Hotel

starting $119

Hotel Palm Beach

starting $107

Elite Hotel

starting $35

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Sankore Madrasah

Sankoré Madrasah, The University of Sankoré, or Sankore Masjid is o

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Djinguereber Mosque

The Djinguereber Mosque (Masjid) in Timbuktu, Mali is a famous

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Moscow Kremlin

The Moscow Kremlin (Russian: Московский Кремль Moskovskiy Krem

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Old Havana

Old Havana (español. La Habana Vieja) contains the core of the

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Perito Moreno Glacier

The Perito Moreno Glacier is a glacier located in the Los Glaciares

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Geirangerfjord

The Geiranger fjord (Geirangerfjorden) is a fjord in the Sunnmøre

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Batalha Monastery

Mosteiro Santa Maria da Vitória, more commonly known as the Batalha

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ