ಕೆ೨

ಕೆ2 ಭೂಮಿಯ ಮೇಲೆ ಮೌಂಟ್ ಎವರೆಸ್ಟ್‌ನ ನಂತರ ಎರಡನೇ ಅತಿ ಎತ್ತರದ ಪರ್ವತ. ಇದರ ಮೇಲ್ಮೈ ಶಿಖರ 8,611 metres (28,251 ft) ನಷ್ಟಿದ್ದು, ಕಾರಕೋರಂ ಶ್ರೇಣಿಯ ಭಾಗವಾಗಿದೆ, ಮತ್ತು ಕ್ಸಿನ್‌ಜಿಯಾಂಗ್, ಚೀನಾದ ಕ್ಸಿನ್‌ಜಿಯಾಂಗ್‌‌ದ ಟಾಕ್ಸ್‌ಕೊರ್ಗನ್ ಟಜಿಕ್‌ ಸ್ವಯಾಧಿಕಾರದ ಕೌಂಟಿ ಮತ್ತು ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿರುವ ಗಿಲ್ಗಿಟ್ ಪ್ರದೇಶಗಳ ಸೀಮೆಯಲ್ಲಿದೆ.[note]

ಕೆ2 ಪರ್ವತದ ಕ್ಲಿಷ್ಟಕರವಾದ ಅರೋಹಣದಿಂದ ಇದನ್ನು ಉಗ್ರ ಪರ್ವತ ವೆಂದು ಕರೆಯುತ್ತಾರೆ ಮತ್ತು ಹತ್ತುವ "ಎಂಟು ಸಾವಿರದವರಲ್ಲಿ" 2ನೇ ಅತಿ ಪ್ರಾಣಾಂತಿಕ ದರ್ಜೆಯಲ್ಲಿದೆ. ಶಿಖರವನ್ನು ಸೇರಿರುವ ಪ್ರತಿ ನಾಲ್ಕು ಜನರಲ್ಲಿ, ಒಬ್ಬನು ಯತ್ನದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಣಾಂತಿಕ ದರ್ಜೆಯಲ್ಲಿ ಮೊದಲನೇ ಸ್ಥಾನದಲ್ಲಿರುವ ಅನ್ನಪೂರ್ಣದಂತಿಲ್ಲದೆ, ಚಳಿಗಾಲದಲ್ಲಿ ಕೆ2ವನ್ನು ಯಾರೂ ಹತ್ತಿಲ್ಲ.

ನಗರದ ಹೆಸರು

ಕೆ2 ಎಂಬ ಹೆಸರು ಅಸಾಮಾನ್ಯ ಮುಮ್ಮೂಲೆಯರಿಮೆ ಸಮೀಕ್ಷೆಯ ಸಂಕೇತನದಿಂದ ಉದ್ಭವಿಸಿದ್ದು. ಥೊಮಸ್ ಮಾಂಟ್‌ಗೊಮರಿ ಅವರು ಹರಮುಖ್ ಪರ್ವತದಿಂದ ಕರಕೋರಮ್‌ನ ಮೊದಲ ಸಮೀಕ್ಷೆ ನಡೆಸಿದರು, ದಕ್ಷಿಣದಿಂದ ಕೆಲವು 130 miles (210 km) ಕ್ಕೆ, ಮತ್ತು ಎರಡು ಗಣ್ಯ ಶಿಖರಗಳನ್ನು ಚಿತ್ರಿಸಿದರು, ಅವಕ್ಕೆ ಕೆ1 ಮತ್ತು ಕೆ2 ಎಂದು ಹೆಸರಿಟ್ಟರು.

ಅಸಾಮಾನ್ಯ ಮುಮ್ಮೂಲೆಯರಿಮೆ ಸಮೀಕ್ಷೆಯ ಕಾರ್ಯನೀತಿಯ ಪ್ರಕಾರ ಸ್ಥಳೀಯ ಹೆಸರುಗಳನ್ನು ಅವಕಾಶವಿದ್ದಾಗ ಉಪಯೋಗಿಸಬೇಕೆಂದು ಮತ್ತು ಕೆ1 ಅನ್ನು ಸ್ಥಳೀಯವಾಗಿ ಮಾಶರ್‌ಬ್ರಮ್ ಎಂದು ಕರೆಯುತ್ತಾರೆ. ಆದರೆ, ಕೆ2, ಯಾವುದೇ ಸ್ಥಳೀಯ ಹೆಸರನ್ನು ಪಡೆದಿಲ್ಲ, ಬಹುಶಃ ಬಹು ದೂರದಲ್ಲಿರುದರಿಂದ ಇರಬಹುದು. ದಕ್ಷಿಣದ ಕೊನೆಯ ಹಳ್ಳಿಯಾದ ಅಸ್ಕೋಲೆಯಿಂದ ಈ ಪರ್ವತವು ಕಾಣಬರುವುದಿಲ್ಲ, ಅಥವಾ ಉತ್ತರದ ಹತ್ತಿರದಲ್ಲಿರುವ ವಾಸಸ್ಥಳದಿಂದಲೂ ಕಾಣಬರುವುದಿಲ್ಲ, ಮತ್ತು ಬಾಲ್‌ಟೊರೊ ನೀರ್ಗಲ್ಲನದಿಯಿಂದ ಕ್ಷಣಿಕವಾಗಿ, ಅಸ್ಪಷ್ಟವಾಗಿ ಕಾಣುತ್ತದೆ, ಇದರಿಂದಾಚೆಗೆ ಕೆಲವೇ ಕೆಲವು ಜನರು ಪರ್ವತದ ಸಾಹಸಕ್ಕಿಳಿದಿರಬಹುದು. ಚೊಗೊರಿ ಎಂಬ ಹೆಸರು ಎರಡು ಬಾಲ್ಟಿ ಪದಗಳಿಂದ ಉದ್ಭವವಾಗಿದೆ, ಚೊಗೊ (’ದೊಡ್ಡ’) ಮತ್ತು ರಿ (’ಪರ್ವತ’) (شاہگوری) ಸ್ಥಳೀಯರಿಂದ ಸೂಚಿಸಲ್ಪಟ್ಟಿರುವ ಹೆಸರು, ಆದರೆ ವ್ಯಾಪಕವಾಗಿ ಉಪಯೋಗಿಸಿರುವ ಸಾಕ್ಷಿಗಳು ಅತ್ಯಲ್ಪ. ಪಶ್ಚಿಮದ ಅನ್ವೇಷಕರು ಸೃಷ್ಟಿಸಿದ ಸಂಯುಕ್ತ ಹೆಸರಾಗಿರಬಹುದು ಅಥವ ಭ್ರಮೆಗೊಳಗಾದ ಜನರು ಕೇಳುವ "ಅದನ್ನು ಏನೆಂದು ಕರೆಯುತ್ತಾರೆ?" ಎಂಬ ಪ್ರಶ್ನೆಗೆ ಉತ್ತರವಿರಬಹುದು. ಖೊಗಿರ್ ಎಂಬ ಹೆಸರಿಗೆ ಆಧಾರವಾಗಿದೆsimplified Chinese: 乔戈里峰; traditional Chinese: 喬戈里峰; pinyin: Qiáogēlǐ Fēng, ಈ ಹೆಸರಿನಿಂದ ಚೈನೀ ಅಧಿಕಾರಿಗಳು ಅಧಿಕೃತವಾಗಿ ಈ ಶಿಖರವನ್ನು ಕರೆಯುತ್ತಾರೆ. ಇತರ ಸ್ಥಳೀಯ ಹೆಸರುಗಳಾದ ಲಂಬಾ ಪಹಾರ್ (ಉರ್ದುವಿನಲ್ಲಿ "ಎತ್ತರದ ಪರ್ವತ" ಎಂದು) ಮತ್ತು ಡಪ್ಸಂಗ್ ಎಂಬುವೂ ಇವೆ, ಆದರೆ ಯಾವುದೂ ವ್ಯಾಪಕವಾಗಿ ಬಳಕೆಯಲ್ಲಿಲ್ಲ.

ಯಾವುದೇ ಸ್ಥಳೀಯ ಹೆಸರುಗಳ್ಳಿಲ್ಲದ ಕೊರತೆಯಿಂದ, ಮುಂಚಿನ ಪರಿಶೋಧಕರಾದ ಹೆನ್ರಿ ಗಾಡ್ವಿನ್-ಆಸ್ಟೆನ್ ಅವರ ಗೌರವಾರ್ಥ ಮೌಂಟ್ ಗಾಡ್ವಿನ್-ಆಸ್ಟೆನ್ ಎಂದು ಸೂಚಿಸಲಾಯಿತು, ಆದರೆ ಈ ಹೆಸರನ್ನು ರಾಯಲ್ ಜಿಯೊಗ್ರಾಫಿಕಲ್ ಸೊಸೈಟಿ‌ಯವರು ತಿರಸ್ಕರಿಸಿದರು, ಆದರೂ ಅನೇಕ ಭೂಪಟಗಳಲ್ಲಿ ಈ ಹೆಸರನ್ನು ಉಪಯೋಗಿಸಲಾಯಿತು, ಮತ್ತು ಈಗಲೂ ಒಮ್ಮೊಮ್ಮೆ ಉಪಯೋಗಿಸುವುದು ಮುಂದುವರೆದಿದೆ.

ಆದ್ದರಿಂದ, ಸಮೀಕ್ಷಕರ ಗುರುತಾದ ಕೆ2, ಪರ್ವತದ ಸಾಮುದಾಯಿಕ ಹೆಸರಾಗಿ ಪರಿಚಿತವಾಗಿದೆ. ಇದನ್ನು ಬಾಲ್ಟಿ ಭಾಷೆಯಲ್ಲೊ ಉಪಯೋಗಿಸುತ್ತಾರೆ, ಕೇಚು ಅಥವ ಕೇತು ಎಂದು ಭಾಷಾಂತರಗೊಂಡಿದೆ.ಉರ್ದು: کے ٹو ಇಟಲಿಯ ಆರೋಹಿಯೊಬ್ಬರಾದ ಫಾಸ್ಕೊ ಮರೈನಿ ಯವರು ಗಾಶರ್‌ಬ್ರಮ್ IVನ ಆರೋಹಣದ ಹೇಳಿಕೆಯಲ್ಲಿ ಕೆ೨ ಎಂಬ ಹೆಸರು ತನ್ನ ಮೂಲವನ್ನು ಅದೃಷ್ಟಕ್ಕೆ ಋಣಿಯಾಗಿದೆ ಎಂದು ವಾದಿಸಿದರು, ಅದರ ಹಿಡಿಕೆ, ವ್ಯಕ್ತಿಗತವಲ್ಲದ ಪ್ರಕೃತಿ ಎಲ್ಲವೂ ತುಂಬಾ ದೂರದಲ್ಲಿರುವ ಮತ್ತು ಸಲಾಲೆನಿಸುವ ಪರ್ವತಕ್ಕೆ ತಕ್ಕ ಹೆಸರಾಗಿದೆ. ಅವರು ಹೀಗೆ ಮುಕ್ತಾಯಗೊಳಿಸಿದ್ದಾರೆ...

"...ಬರೀ ಹೆಸರಿನ ಸ್ಪಷ್ಟವಾದ ಎಲುಬಿನಂತೆ, ಎಲ್ಲಾ ಕಲ್ಲುಗಳು ಮತ್ತು ಮಂಜು ಮತ್ತು ಬಿರುಗಾಳಿ ಮತ್ತು ಪ್ರಪಾತ. ಮಾನವರಂತೆ ಕಾಣಿಸಲು ಯಾವ ಪ್ರಯತ್ನವನ್ನೂ ಪಡುತ್ತಿಲ್ಲ. ಅವುಗಳು ಅಣುಗಳು ಮತ್ತು ನಕ್ಷತ್ರಗಳು. ಮೊದಲನೇ ಮನುಷ್ಯನ ಮುಂದೆ ಪ್ರಪಂಚದ ನಗ್ನತೆಯಿರುವ ಹಾಗೆ - ಅಥವ ಕೊನೆಯಾದ ನಂತರ ಕೆಂಡವಾದ ಗ್ರಹ."

ಆರೋಹಣದ ಇತಿಹಾಸ

ಮುಂಚಿನ ಪ್ರಯತ್ನಗಳು

ಯೂರೋಪಿಯನ್ನರ ಸಮೀಕ್ಷೆಯ ತಂಡವೊಂದು ಈ ಪರ್ವತದ ಮೊದಲನೆಯ ಸಮೀಕ್ಷೆ 1856ರಲ್ಲಿ ನಡೆಸಿತು. ಥೊಮಸ್ ಮಾಂಟ್ಗೊಮರಿ ಅವರು ಈ ತಂಡದ ಸದಸ್ಯರಾಗಿದ್ದರು, ಹಾಗೂ ಕೆ2 ಎಂದು ಎರಡನೇ ಎತ್ತರದ ಕರಕೊರಮ್ ಶ್ರೇಣಿಯ ಶಿಖರಕ್ಕೆ ಹೆಸರಿಟ್ಟರು. ಇತರ ಶಿಖರಗಳನ್ನು ಮೂಲವಾಗಿ ಕೆ1, ಕೆ3, ಕೆ4 ಮತ್ತು ಕೆ5 ಎಂದು ಕರೆಯಲ್ಪಟ್ಟಿದ್ದವು, ಆದರೆ ಆನಂತರ ಮಾಶರ್‌ಬ್ರಮ್, ಬ್ರಾಡ್ ಪೀಕ್, ಗಾಶರ್‌ಬ್ರಮ್ II ಮತ್ತು ಗಾಶರ್‌ಬ್ರಮ್ I ಎಂದು ಮರು ನಾಮಕರಣ ಮಾಡಲಾಯಿತು. 1892ರಲ್ಲಿ, ಬ್ರಿಟಿಷ್ ಅನ್ವೇಶಕರನ್ನು ಮಾರ್ಟಿನ್ ಕಾನ್ವೆ ಅವರ ನಾಯಕತ್ವದಲ್ಲಿ ಬಾಲ್ಟೊರೊ ನೀರ್ಗಲ್ಲನದಿಯ ಮೇಲಿರುವ ’ಕಾನ್ಕಾರ್ಡಿಯ’ ವನ್ನು ತಲುಪಿದರು.

ನಾರ್ತ್‌ಈಸ್ಟ್ ರಿಡ್ಜ್‌ನ ಮೂಲಕ ಕೆ೨ವನ್ನು ಹತ್ತುವ ಮೊದಲನೆಯ ಗಂಭೀರವಾದ ಪ್ರಯತ್ನವನ್ನು 1902ರಲ್ಲಿ ಆಸ್ಕರ್ ಎಕ್ಕಂಸ್ಟೈನ್ ಮತ್ತು ಅಲೀಸ್ಟರ್ ಕ್ರೌಲಿ ಅವರುಗಳು ಮಾಡಿದರು. ಐದು ಗಂಭೀರ ಮತ್ತು ದುಬಾರಿಯಾದ ಪ್ರಯತ್ನಗಳ ನಂತರ, ತಂಡವು 6,525 metres (21,407 ft) ಷ್ಟೇ ತಲುಪಿದವು. ಪ್ರಶ್ನಾರ್ಥಕ ದೈಹಿಕ ಶಿಕ್ಷಣ, ವೈಯಕ್ತಿಕ ಭಿನ್ನಾಹಿಪ್ರಾಯಗಳು, ಮತ್ತು ಕಳಪೆ ವಾಯುಗುಣ ಇವೆಲ್ಲದರ ಸಂಯುಕ್ತ ಕಾರಣಗಳಿಂದ ಪ್ರಯತ್ನಗಳು ವಿಫಲವಾದವು - ಕೆ2 ಮೇಲೆ ಕಳೆದ 68 ದಿನಗಳಲ್ಲಿ (ಆವಾಗ, ಇದು ಅಂಥಹ ಎತ್ತರದಲ್ಲಿ ಬಹಳ ದೀರ್ಘ ಕಾಲವನ್ನು ಕಳೆದರು) ಪರಿಶುಧ್ಧ ವಾಯುಗುಣವಿದ್ದಿದ್ದು ಬರೀ 8 ದಿನಗಳು.

ಇದರ ನಂತರದ ಕೆ2 ಆರೋಹಣವು 1909ರಲ್ಲಿ ಅಬ್ರುಝಿಯ ದಳಪತಿಯಾದ ಲುಯಿಗಿ ಅಮೆಡಿಯೊ ಅವರ ನಾಯಕತ್ವದಲ್ಲಿ ಸುಮಾರು 6,250 metres (20,505 ft) ರಷ್ಟು ಎತ್ತರವನ್ನು ದಕ್ಷಿಣ-ಪೂರ್ವದ ಸ್ಪರ್ ಮೇಲೆ ತಲುಪಿದರು, ಈಗ ಇದನ್ನು ಅಬ್ರುಝಿ ಸ್ಪರ್ (ಅಥವ ಅಬ್ರುಝಿ ತುದಿ) ಎಂದು ಕರೆಯುತ್ತಾರೆ. ಇದು ನಂತರದ ದಿನಗಳಲ್ಲಿ ಸಾಮಾನ್ಯ ಹಾದಿಯ ಭಾಗವಾಯಿತು, ಆದರೆ ಇದು ಕಡಿದಾದ ಮತ್ತು ಕ್ಲಿಷ್ಟಕರವಾದುದರಿಂದ ಇದನ್ನು ಕೈಬಿಡಲಾಯಿತು. ಪಶ್ಚಿಮದ ತುದಿಯಿಂದ ಅಥವ ಈಶಾನ್ಯದ ತುದಿಯಿಂದ ಒಂದು ಸಾಧಿಸಬಹುದಾದ ಪರ್ಯಾಯ ಹಾದಿಯನ್ನು ಕಂಡುಹಿಡಿಯಲು ಪ್ರಯತ್ನಿಸಿ ಸೋತಿದ್ದರಿಂದ, ದಳಪತಿಯು ಕೆ೨ವನ್ನು ಹತ್ತಲು ಅಸಾಧ್ಯವೆಂದು ಘೋಶಿಸಿದನು, ಮತ್ತು ತಂಡವು ತನ್ನ ಗಮನವನ್ನು ಚೊಗೊಲಿಸಗೆ ತಿರುಗಿಸಿದರು, ಅಲ್ಲಿ ದಳಪತಿಯು ಶಿಖರದ 150 metres (492 ft) ರಷ್ಟು ಹತ್ತಿರಕ್ಕೆ ಬಂದು ಬಿರುಗಾಳಿಯಿಂದ ಹಿಂದಿರುಗಬೇಕಾಯಿತು.

ಕೆ2 ಹತ್ತುವ ಅನಂತರದ ಪ್ರಯತ್ನವು 1938ರ ತನಕ ನಡೆಯಲಿಲ್ಲ, ಅಮೇರಿಕದ ಆರೋಹಣವು ಚಾರ್ಲ್ಸ್ ಹ್ಯೂಸ್ಟನ್ ಅವರ ನಾಯಕತ್ವದಲ್ಲಿ ಪರ್ವತದ ಭೂಪರಿಶೀಲನೆ ನಡೆಸಿತು. ಅವರು ಅಬ್ರುಝಿ ಸ್ಪರ್‌ನ ಹಾದಿಯು ಅತಿ ವಾಸ್ತವಿಕ ಹಾದಿಯಾಗಿದೆ ಎಂದು ಅಭಿಪ್ರಾಯ ಪಟ್ಟರು, ಮತ್ತು ಸಾಮಾನು ಸರಂಜಾಮುಗಳು ಕಡಿಮೆಯಾಗುತ್ತಿತ್ತು ಮತ್ತು ಹವಾಮಾನವು ಅಹಿತಕರವಾಗುತ್ತಿದ್ದ ಕಾರಣ 8,000 metres (26,247 ft) ರಷ್ಟು ಎತ್ತರವನ್ನು ತಲುಪಿ, ವಾಪಸ್ಸಾದರು. ಅದರ ಮುಂದಿನ ವರ್ಷದಲ್ಲಿ, ಫ್ರಿಟ್ಝರ್ ವೆಸ್ಸ್ನರ್ ಅವರ ನಾಯಕತ್ವದಲ್ಲಿ ಆರೋಹಣವು ಶಿಖರದ 200 metres (656 ft) ರಷ್ಟು ಹತ್ತಿರ ತಲುಪಿದರು, ಆದರೆ ಡಡ್ಲಿ ವೂಲ್ಫ್, ಪಸಂಗ್ ಕಿಕುಲಿ, ಪಸಂಗ್ ಕಿಟಾರ್ ಮತ್ತು ಪಿಂಟ್ಸೊ ಅವರುಗಳು ಪರ್ವತದ ಶಿಖ್ರಗಳಲ್ಲಿ ಕಾಣೆಯಾದ್ದರಿಂದ ದುರಂತಕ್ಕೀಡಾಯಿತು.

1953ರ ಅಮೇರಿಕ ಆರೋಹಣದ ನಾಯಕತ್ವ ವಹಿಸಲು ಚಾರ್ಲ್ಸ್ ಹ್ಯೂಸ್ಟನ್ ಅವರು ಕೆ2 ಹತ್ತಲು ಹಿಂದಿರುಗಿದರು. ಆರೋಹಣವು ಬಿರುಗಾಳಿಯಿಂದ ವಿಫಲವಾಯಿತು, ಇದರಿಂದ ತಂಡವನ್ನು ಹತ್ತು ದಿನಗಳ ಕಾಲ 7,800 metres (25,591 ft) ನಲ್ಲಿ ಸಿಕ್ಕಿಕೊಂಡಿತು, ಆ ಸಮಯದಲ್ಲಿ ಆರ್ಟ್ ಗಿಲ್ಕಿರವರು ವಿಷಮ ಸ್ಥಿಥಿಯಲ್ಲಿ ಅನಾರೋಗ್ಯಕ್ಕೊಳಗಾದರು. ಆ ಸಮಯದಲ್ಲಿ ಪೀಟ್ ಸ್ಶೋನಿಂಗ್ ಬಹುತೇಕ ಇಡೀ ತಂಡವನ್ನು ಸಮೂಹ ಪತನದಿಂದ ಪಾರು ಮಾಡಿದರು, ಮತ್ತು ಹಿಮಪಾತದಿಂದ ಅಥವ ತನ್ನ ಸಹಚರರಿಗಾಗುವ ಹೊಣೆಯನ್ನು ತಪ್ಪಿಸುವ ಉದ್ದೇಶದ ಪ್ರಯತ್ನದಿಂದ ಗಿಲ್ಕಿಯವರು ಮರಣ ಹೊಂದಿದರು. ವೈಫಲ್ಯ ಮತ್ತು ದುರಂತಗಳಿದ್ದರೂ ಸಹ, ತಂಡವು ತೋರಿದ ಸ್ಥೈರ್ಯದಿಂದ ಈ ಆರೋಹಣಕ್ಕೆ ಪೂಜನೀಯ ಸ್ಥಾನವನ್ನು ಪರ್ವತಾರೋಹಣ ಇತಿಹಾಸದಲ್ಲಿ ಕೊಟ್ಟಿದೆ.

ಯಶಸ್ಸು ಮತ್ತು ಪುನರಾವರ್ತನೆಗಳು

ಜುಲೈ 31, 1954ರಲ್ಲಿ, ಇಟಾಲಿಯನ್ ಆರೋಹಣವು ಅಂತಿಮವಾಗಿ ಕೆ2 ಶಿಖರವನ್ನು ಹತ್ತುವುದರಲ್ಲಿ ಯಶಸ್ವಿಯಾದರು. ಆರೋಹಣದ ನಾಯಕತ್ವವನ್ನು ಆರ್ಡಿಟೊ ಡೇಸಿಯೊ ಅವರು ವಹಿಸಿದ್ದರು, ಆದರೂ ಇಬ್ಬರು ಆರೋಹಿಗಳಾದ ಲಿನೊ ಲೇಸಿಡೆಲ್ಲಿ ಮತ್ತು ಎಖಿಲ್ಲ್ ಕಾಂಪಗ್ನೊನಿ ಅವರುಗಳು ಶಿಖರವನ್ನು ತಲುಪಿದರು. ತಂಡದಲ್ಲಿನ ಪಾಕಿಸ್ತಾನೀ ಸದಸ್ಯರಾದ ಕರ್ನಲ್ ಮುಹಮ್ಮದ್ ಅಟ-ಉಲ್ಲಾ ಅವರು ೧೯೫೩ರ ಅಮೇರಿಕದ ಆರೋಹಣದ ತಂಡದ ಅಂಶವಾಗಿದ್ದವರು. ಆ ಆರೋಹಣದಲ್ಲಿ ಪ್ರಖ್ಯಾತ ಇಟಾಲಿಯನ್ ಆರೋಹಿ ವಾಲ್ಟರ್ ಬೊನಟ್ಟಿ ಅವರಿದ್ದರು, ಪಾಕಿಸ್ತಾನದ ಹುಂಝ ಪೊರ್ಟರ್ ಮಹ್ದಿ ಅವರು ಆಮ್ಲಜನಕವನ್ನು26,600 feet (8,100 m) ಲೇಸಿಡೆಲ್ಲಿ ಮತ್ತು ಕಾಂಪಗ್ನೊನಿ ಹೊತ್ತೊಯ್ದು ಆರೋಹಣದ ಯಶಸ್ಸಿಗೆ ಬಹು ಅವಶ್ಯಕರಾಗಿದ್ದರು. ಅವರ ಅಷ್ಟು ಎತ್ತರದಲ್ಲಿನ ಮುಕ್ತವಾದ ಆವರಣದಲ್ಲಿ ಪ್ರದರ್ಶನಾತ್ಮಕ ತಾತ್ಕಾಲಿಕ ಶಿಬಿರವು ಹಿಮಾಲಯದ ಆರೋಹಣದಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿದವು.

ಆಗಸ್ಟ್ ೯, 1977ರಲ್ಲಿ, ಇಟಾಲಿಯನ್ ಆರೋಹಣದ 23 ವರ್ಷಗಳ ನಂತರ, ಇಶಿರೊ ಯೊಶಿಝವ ಶಿಖರದ ಎರಡನೇ ಯಶಸ್ವೀ ಆರೋಹಣದ ನಾಯಕತ್ವವನ್ನು ವಹಿಸಿದರು; ಅಶ್ರಫ್ ಅಮನ್ ಅವರು ಮೊದಲನೇ ಪಾಕಿಸ್ತಾನೀ ಆರೋಹಿ. ಜಾಪಾನೀ ಆರೋಹಣವು ಅಬ್ರುಝಿ ಸ್ಪರ್ ಮೂಲಕ ಇಟಾಲಿಯನ್ನರು ನಿರೂಪಿಸಿದ ಹಾದಿಯಲ್ಲಿ ಏರಿದರು, ಮತ್ತು ೧,೫೦೦ಕ್ಕೂ ಹೆಚ್ಚು ಕೂಲಿಗಳನ್ನು ತಮ್ಮ ಗುರಿ ತಲುಪಲು ಉಪಯೋಗಿಸಿದರು.

1978ರ ವರ್ಷವು ಕೆ2 ಪರ್ವತದ ಮೂರನೇ ಆರೋಹಣವನ್ನು ಕಂಡಿತು, ಈಶಾನ್ಯದ ಬಂಡೆಗಳ ಸಾಲಿನಿಂದ, ಬಹು ಉದ್ದದ ಹೊಸ ಹಾದಿಯಲ್ಲಿ ಮಾಡಿದರು. (ಹಾದಿಯ ಮೇಲ್ಭಾಗವು ಎಡಭಾಗದ ಪೂರ್ವದ ಮುಖದಲ್ಲಿ ಶೃಂಗೀಯ ತಲೆಯಗೋಡೆಯನ್ನು ತಡೆಯಲು ಪ್ರವಹಿಸಿದೆ ಮತ್ತು ಅಬ್ರುಝಿ ಹಾದಿಯ ಎತ್ತರದ ಭಾಗವನ್ನು ಕೂಡಿದೆ.) ಅಮೇರಿಕ ತಂಡವು ಈ ಆರೋಹಣವನ್ನು ಮಾಡಿತು, ಇದರ ನಾಯಕತ್ವವನ್ನು ಪ್ರಖ್ಯಾತ ಆರೋಹಿ ಜೇಮ್ಸ್ ವಿಟ್ಟೇಕರ್ ಅವರು ವಹಿಸಿದ್ದರು; ಇವರಲ್ಲಿ ಲೂಯಿ ರೈಖಾರ್ಟ್, ಜಿಮ್ ವಿಕ್ವೈರ್, ಜಾನ್ ರಾಸ್ಕೆಲ್ಲಿ ಮತ್ತು ರಿಕ್ ರಿಡ್ಜ್‌ವೆ ಅವರುಗಳಿದ್ದರು. ವಿಕ್ವೈರ್ ಅವರು ಒಂದು ರಾತ್ರಿಗೆ ತಾತ್ಕಾಲಿಕ ಶಿಬಿರವನ್ನು ಸುಮಾರು 150 metres (492 ft) ರಷ್ಟು ಶಿಖರದ ಕೆಳಗೆ ಮಾಡಿಕೊಂಡಿದ್ದರು, ಆರೋಹಣದ ಇತಿಹಾಸದಲ್ಲೇ ಇದು ಅತಿ ಎತ್ತರದ ತಾತ್ಕಾಲಿಕ ಶಿಬಿರ. ಈ ಆರೋಹಣವು ಅಮೇರಿಕ ತಂಡಕ್ಕೆ ಬಹು ಭಾವಾತ್ಮಕವಾಗಿತ್ತು, 1938ರ ತಂಡವು ನಲ್ವತ್ತು ವರ್ಷಗಳ ಹಿಂದೆ ಆರಂಭಿಸಿದ ಕೆಲಸವನ್ನು ಪೂರ್ಣಗೊಳಿಸಿದ್ದರಿಂದ.

1982ರಲ್ಲಿ, ಚೀನಾ ಕಡೆಯ ಶಿಖರಕ್ಕೆ, ಇನ್ನೊಂದು ಹೆಸರಾಂತ ಜಪಾನೀ ತಂಡವು ಕ್ಲಿಷ್ಟಕರವಾದ ಉತ್ತರದ ತುದಿಯನ್ನು ಹತ್ತಿದರು. ಮೌಟನೀರಿಂಗ್ ಅಸ್ಸೊಸ್ಸಿಯೇಷನ್ ಆಫ್ ಜಪಾನ್‌‌ನಿಂದ ಒಂದು ತಂಡವು ಇಸಾವ್ ಶಿಂಕೈ ಮತ್ತು ಮಸಟ್ಸುಗೊ ಕೊನಿಶಿ ಅವರ ನಾಯಕತ್ವದಲ್ಲಿ, ನೆಒ ಸಕಶಿಟ, ಹಿರೊಶಿ ಯೊಶಿನೊ ಮತ್ತು ಯುಕಿಹಿರೊ ಯನಗಿಸವ ಎಂಬ ಮೂವರು ಸದಸ್ಯರುಗಳನ್ನು ಪರ್ವತಶೃಂಗದ ಮೇಲೆ ಆಗಸ್ಟ್ 14ರಂದು ಇರಿಸಿತು. ಆದಾಗ್ಯೂ, ಯನಗಿಸವ ಇಳಿತದ ಸಮಯದಲ್ಲಿ ಬಿದ್ದು, ಮೃತರಾದರು. ತಂಡದ ಇತರೆ ನಾಲ್ಕು ಸದಸ್ಯರು ಮರುದಿನ ಪರ್ವತಶೃಂಗವನ್ನು ತಲುಪಿದರು.

ಕೆ2 ಶಿಖರಕ್ಕೆ ಎರಡು ಬಾರಿ ಹತ್ತಿರುವ ಮೊದಲನೇ ಆರೋಹಿ ಎಂದರೆ ಝೆಕ್ ಜೋಸೆಫ್ ರೆಕೊನ್ಕಾಜ್. ರೆಕೊನ್ಕಾಜ್‌ರವರು ಫ್ರಾನ್ಸೆಸ್ಕೊ ಸಾಂಟನ್‌ ಅವರ ನಾಯ್ಕತ್ವದಲ್ಲಿ 1983ರ ಇಟಾಲಿಯನ್ ಆರೋಹಣದ ಸದಸ್ಯರಾಗಿದ್ದರು, ಇದು ಉತ್ತರದ ತುದಿಯ ಎರಡನೇ ಯಶಸ್ವೀ ಆರೋಹಣವಾಗಿತ್ತು (ಜುಲೈ 31, 1983). ಮೂರು ವರ್ಷಗಳ ನಂತರ, ಜುಲೈ 5, 1986ರಲ್ಲಿ, ಅವರು ಅಬ್ರುಝಿ ಸ್ಪರ್ ಶಿಖರವನ್ನೇರಿದರು (ಒಬ್ಬಂಟಿಯಾಗಿ ಬ್ರಾಡ್ ಪೀಕ್ ವೆಸ್ಟ್ ಫೇಸ್ ಅನ್ನು ಎರಡು ಸರಿ), ಅಗೊಸ್ಟಿನೊ ಡ ಪೊಲೆನ್ಝಾ ಅವರ ಅಂತರ್ರಾಷ್ಟ್ರೀಯ ಆರೋಹಣದ ಸದಸ್ಯ್ರಾಗಿ.

ಇತ್ತೀಚಿನ ಪ್ರಯತ್ನಗಳು

ಶಿಖರವನ್ನು ಈಗ ಬಹುತೇಕ ಎಲ್ಲಾ ತುದಿಗಳಿಂದಲೂ ಹತ್ತಲಾಗಿದೆ. ಎವರೆಸ್ಟ್‌ನ ಶಿಖರವು ಅತಿ ಎತ್ತರದಲ್ಲಿದೆಯಾದರೂ, ಕೆ2 ಪರ್ವತವನ್ನು ಹತ್ತುವುದು ಬಹು ಕಷ್ಟಕರ ಮತ್ತು ಅಪಾಯಕರ,[] ಹೆಚ್ಚು ಪ್ರಕ್ಷುಬ್ಧ ಹವಾಮಾನ ಮತ್ತು ತುಲನಾತ್ಮಕವಾಗಿ ನೆಲೆಯಿಂದ ಶಿಖರವು ಬಹಳ ಎತ್ತರದಲ್ಲಿದೆ. ಪರ್ವತವು ಅನೇಕರಿಂದ [] ಪ್ರಪಂಚದ ಅತೀ ಕಷ್ಟಕರವಾದ ಮತ್ತು ಅಪಾಯಕರವಾದ ಏರಿಕೆಯೆಂದು ನಂಬಿದ್ದಾರೆ, ಆದ್ದರಿಂದಲೇ "ಉಗ್ರ ಪರ್ವತ"ವೆಂಬ ಅಡ್ಡಹೆಸರು. ಇದು ಮತ್ತು ನೆರೆಹೊರೆಯ ಶಿಖರಗಳಲ್ಲಿ, ಬೇರೆಯವುಗಳಿಗಿಂತ ಅನೇಕರು ಜೀವ ಕಳೆದುಕೊಂಡಿದ್ದಾರೆ. ಜುಲೈ 2010ರ ವರೆಗೆ, ಬರೀ 302 ಜನಗಳು ಆರೋಹಣವನ್ನು ಪೂರ್ಣಗೊಳಿಸಿದ್ದಾರೆ, ಆದರೆ ಪ್ರಖ್ಯಾತ ಲಕ್ಷ್ಯವಾದ ಎವರೆಸ್ಟ್ ಅನ್ನು 4,000ಕ್ಕೂ ಹೆಚ್ಚು ಜನಗಳು ಹತ್ತಿದ್ದಾರೆ. ಸುಮಾರು 77 ಮಂದಿ ಏರುವ ಪ್ರಯತ್ನ ಮಾಡುವಾಗ ಮೃತ ಪಟ್ಟಿದ್ದಾರೆ. ವಿಶೇಷವಾಗಿ, ಅನೇಕ ಉದ್ದೇಶಿತ ಪ್ರಯಾಣಗಳಿಂದ 13 ಆರೋಹಿಗಳು 1986ರ ಕೆ2 ದುರಂತದಲ್ಲಿ ಮಡಿದರು, ಇವರಲ್ಲಿ ಐದು ಜನರು ವಿಪರೀತವಾದ ಬಿರುಗಾಳಿಯಿಂದ. ಬಹಳ ಇತ್ತೀಚೆಗೆ, ಆಗಸ್ಟ್ 1, 2008ರಲ್ಲಿ, ಹಿಮಪಾತದ ಸಮಯದಲ್ಲಿ ದೊಡ್ಡ ಮಂಜುಗಡ್ಡೆ ಬಿದ್ದು ಆರೋಹಿ ಗುಂಪಿನ ಸದಸ್ಯರು ಕಾಣೆಯಾದರು, ಅವರ ಹಾದಿಯಲ್ಲಿ ನೆಟ್ಟ ಹಗ್ಗಗಳು ಹಾಳಾದವು; ನಾಲ್ಕು ಆರೋಹಿಗಳನ್ನು ಪಾರುಮಾಡಲಾಯಿತು, ಆದರೆ 11 ಜನ, ಜೆರಾರ್ಡ್ ಮೆಕ್‌ಡಾನ್ನೆಲ್ ಎಂಬ ಶಿಖರ ಸೇರಿದ ಮೊದಲನೇ ಐರಿಷ್ ವ್ಯಕ್ತಿಯನ್ನೂ ಒಳಗೊಂಡು ಎಲ್ಲರೂ ಮರಣಹೊಂದಿದ್ದಾರೆಂದು ಸ್ಥಿರಪಡಿಸಿಕೊಂಡರು.

ಸೀಸೆಯಲ್ಲಿರುವ ಆಮ್ಲಜನಕದ ಬಳಕೆ

ಬಹುತೇಕ ಏರಿಕೆಯ ಇತಿಹಾಸದಲ್ಲಿ, ಕೆ2 ಪರ್ವತವನ್ನು ಸಾಮಾನ್ಯವಾಗಿ ಸೀಸೆಯ ಆಮ್ಲಜನಕದೊಂದಿಗೆ ಏರುತ್ತಿರಲಿಲ್ಲ, ಮತ್ತು ಚಿಕ್ಕ, ಲಘು ತಂಡಗಳ ಜೊತೆ ಹೋಗುವುದು ರೂಢಿ. ಆದರೆ, 2004ರ ಸಮಯದಲ್ಲಿ, ಆಮ್ಲಜನಕದ ಬಳಕೆಯಲ್ಲಿ ಹೆಚ್ಚಿನ ಏರಿಕೆ ಉಂಟಾಯಿತು: ೪೭ ಜನ ಶೃಂಗವನ್ನೇರಿದವರಲ್ಲಿ ೨೮ ಜನ ಆಮ್ಲಜನಕವನ್ನು ಆ ವರ್ಷದಲ್ಲಿ ಬಳಸಿದರು.

ಮೇಲ್ಮಟ್ಟದಲ್ಲಿ ಹೋಗುವಾಗ ಕೊಂಚ ಮಟ್ಟದಲ್ಲಿ ಎತ್ತರದ ಅನಾರೋಗ್ಯವಾಗುವುದನ್ನು ತಡೆಗಟ್ಟಲು ಆಮ್ಲಜನಕವಿಲ್ಲದೆ ಹತ್ತುವಾಗ ಒಗ್ಗಿಕೊಳ್ಳುವಿಕೆಯು ತುಂಬಾ ಅಗತ್ಯ. ಕೆ2 ಶಿಖರವು ಬಹು ಎತ್ತರದಲ್ಲಿರುವುದರಿಂದ ಅಲ್ಲಿ ಹೆಚ್ಚು ಎತ್ತರದ ಶ್ವಾಸಕೋಶದ ಅಧಿಕ ದ್ರವ (ಎಚ್‌ಎಪಿಇ), ಅಥವ ಹೆಚ್ಚು ಎತ್ತರದ ಬೌಧ್ದಿಕ ಅಧಿಕ ದ್ರವ (ಎಚ್‌ಎ‌ಸಿಇ) ಕಂಡುಬರುವ ಸಾಧ್ಯತೆಗಳಿವೆ.

ಏರಿಕೆಯ ಮಾರ್ಗಗಳು ಮತ್ತು ಕಷ್ಟಗಳು

ಕೆ2 ಮೇಲೆ ಅನೇಕ ಮಾರ್ಗಗಳಿವೆ, ವಿವಿಧ ಸ್ವಭಾವವುಳ್ಳವುಗಳು, ಆದರೆ ಅವೆಲ್ಲವೂ ಮಹತ್ವದ ಕಷ್ಟಗಳನ್ನು ಹಂಚಿಕೊಳ್ಳುತ್ತವೆ. ಮೊದಲನೆಯದಾಗಿ, ವಿಪರೀತವಾದ ಎತ್ತರ ಮೇಲ್ಮಟ್ಟ ಮತ್ತು ಇದರಿಂದ ಆಮ್ಲಜನಕದ ಕೊರತೆ ಉಂಟಾಗುತ್ತದೆ: ಸಮುದ್ರದ ಮಟ್ಟಕ್ಕಿಂತ ಅಲ್ಲಿ ಮೂರನೇ-ಒಂದರಷ್ಟು ಆಮ್ಲಜನಕ ಮಾತ್ರ ಕೆ2 ಶಿಖರ ಆರೋಹಿಗೆ ಸಿಗುತ್ತದೆ. ಎರಡನೆಯದಾಗಿ, ಪರ್ವತವು ವಿಪರೀತವಾದ ಬಿರುಗಾಳಿಯನ್ನು ಬಹಳ ದಿನಗಳ ವರೆಗೆ ಅನುಭವಿಸುತ್ತದೆ, ಇದರಿಂದ ಶಿಖರದ ಮೇಲೆ ಅನೇಕ ಸಾವುಗಳಾಗಿವೆ. ಮೂರನೆಯದಾಗಿ, ಕಡಿದಾದ, ಬಹಿರಂಗ ಪಡಿಸುವ, ಮತ್ತು ಎಲ್ಲಾ ಪರ್ವತದ ಮಾರ್ಗಗಳಿಗೂ ಬಧ್ಧವಾಗಿರುವ ನಿಸರ್ಗ, ಇವೆಲ್ಲದರಿಂದ ಆಶ್ರಯಕ್ಕೆ ಬಹಳ ಕಷ್ಟವಾಗುತ್ತದೆ, ವಿಶೇಷವಾಗಿ ಬಿರುಗಾಳಿಯ ಸಮಯದಲ್ಲಿ. ಚಳಿಗಾಲದ ಸಮಯದಲ್ಲಿ, ಅನೇಕ ಪ್ರಯತ್ನಗಳ ಬಳಿಕವೂ ಯಶಸ್ವೀ ಏರಿಕೆಗಳು ನಡೆದಿಲ್ಲ. ಎಲ್ಲಾ ಮಹತ್ವದ ಏರಿಕೆಯ ಮಾರ್ಗಗಳು ಪಾಕಿಸ್ತಾನದ ಕಡೆಗಿವೆ, ಅಲ್ಲೇ ಮೂಲ ಶಿಬಿರವು ನೆಲೆಸಿರುವುದು.

ಅಬ್ರುಝಿ ಸ್ಪರ್

ಅಬ್ರುಝಿ ಸ್ಪರ್ ಅನ್ನು ಏರಿಕೆಗಾಗಿ ಸಾಮಾನ್ಯವಾಗಿ ಬೇರೆ ಮಾರ್ಗಗಳಿಗಿಂತ ಇದನ್ನು ಹೆಚ್ಚಾಗಿ ಬಳಸುತ್ತಾರೆ, ಇದು ಪಾಕಿಸ್ತಾನದ ಕಡೆಯಲ್ಲಿ ಇದೆ, ಈ ಮಾರ್ಗವು ಮೊದಲ ಯತ್ನ ಅಬ್ರುಝಿಯ ದಳಪತಿಯಾದ ಲುಯಿಗಿ ಎಮೀಡೊ ಅವರಿಂದ 1909ರಲ್ಲಿ ಮಾಡಲ್ಪಟ್ಟಿತು. ಇದು ಆಗ್ನೇಯ ತುದಿಯ ಶಿಖರ, ಗಾಡ್ವಿನ್ ಆಸ್ಟೆನ್ ನೀರ್ಗಲ್ಲನದಿಯ ಮೇಲೆರುವ. ಸ್ಪರ್ ಆರಂಭವಾಗುವುದು 5,400 m or 17,700 ft ರಷ್ಟು ಎತ್ತರದಲ್ಲಿ, ಅಲ್ಲಿ ಮುನ್ನಡೆ ಮೂಲ ಬಿಡಾರವನ್ನು ಸಮಾನ್ಯವಾಗಿ ನೆಲೆಸಲಾಗುವುದು. ಮಾರ್ಗವು ಪರ್ಯಾಯ ಸಾಲಿನ ಕಲ್ಲಿನ ಪಕ್ಕೆಲುಬುಗಳು, ಹಿಮ/ಮಂಜು ಮೈದಾನ, ಮತ್ತು ಎರಡು ಪ್ರಖ್ಯಾತ ರೂಪಗಳ ಮೇಲೆ ತಾಂತ್ರಿಕ ಶಿಲೆ ಹತ್ತುವುದನ್ನು, "ಮನೆಯ ಹೊಗೆಕೊಳವೆ" ಮತ್ತು "ಕಪ್ಪು ಗೋಪುರಾಕೃತಿಯ ಕಟ್ಟಡ." ಕಪ್ಪು ಗೋಪುರಾಕೃತಿಯ ಕಟ್ಟಡವು, ಅಪಾಯಕರವಾದಿ ಬಹಿರಂಗಗೊಂಡಿದೆ ಮತ್ತು ನಡೆಯಲು ಕಷ್ಟಕರವಾದ ಇಳಿಜಾರು ನಮ್ಮನ್ನು ಸಲೀಸಾಗಿ ಕಾಣುವ "ಭುಜ"ಕ್ಕೆ ಕರೆದೊಯ್ಯುತ್ತವೆ, ಮತ್ತು ಆಮೇಲೆ ಶಿಖರಕ್ಕೆ. ಕೊನೆಯ ಮುಖ್ಯವಾದ ಅಡಚಣೆಯೆಂದರೆ ಕಿರಿದಾದ ಕೊಲಕಲು "ಪ್ರತಿಬಂಧಕ" ಎಂದು, ಇದು ಆರೋಹಿಗಳನ್ನು ಅಪಾಯಕರವಾಗಿ ಒಂದು ಹಿಮರಾಶಿಯ ಗೋಡೆಗೆ ಹತ್ತಿರವಾಗಿ, ಇದರಿಂದ ಮಂಜಿನ ಬಂಡೆಯ ಕಡಿದಾದ ಪ್ರಪಾತವು ಶಿಖರದ ಪೂರ್ವ ದಿಕ್ಕಿನ ಕಡೆ ಆಕಾರಗೊಂಡಿದೆ. ಬಹುಶಃ ಯಾವುದೋ ಒಂದು ಹಿಮರಾಶಿಯು ಸುಮಾಎಉ 2001ರಲ್ಲಿ ಕುಸಿದು ಬಿದ್ದದ್ದರಿಂದ 2002 ಮತ್ತು 2003ರಲ್ಲಿ ಯಾವ ಆರೋಹಿಯೂ ಶಿಖರವನ್ನು ಏರಿಲ್ಲ.

ಆಗಸ್ಟ್ 1, 2008ರಲ್ಲಿ, ಹಿಮರಾಶಿಯು ಪ್ರತಿಬಂಧಕದಲ್ಲಿ ಚಟ್ಟನೆ ಮುರಿದು, ಅವರ ದಾರಗಳನ್ನು ಚೂರು ಚೂರು ಮಾಡಿದಾಗ ಅನೇಕ ಆರೋಹಿಗಳು ಕಾಣೆಯಾದರು. ಬದುಕುಳಿದವರು ಒಂದು ಹೆಲಿಕಾಪ್ಟರ್‌ನಲ್ಲಿ ಕಂಡುಬಂದರು ಆದರೆ ಕಾಪಾಡುವ ಯತ್ನಗಳು ಎತ್ತರದ ಮೇಲ್ಮಟ್ಟವು ಅಡಚಣೆಯೊಡ್ಡಿತು. ಹನ್ನೊಂದು ಜನರು ಸಿಗಲೇ ಇಲ್ಲ, ಮತ್ತು ಅವರು ಸತ್ತಿರಬಹುದೆಂದು ಭಾವಿಸಲಾಯಿತು.

ಉತ್ತರದ ತುದಿ

ಅಬ್ರುಝಿ ಸ್ಪರ್‌ನಿಂದ ಬಹುತೇಕ ಅಭಿಮುಖವಾಗಿ ಉತ್ತರದ ತುದಿಯಿದೆ, ಇದು ಚೈನಾ ಕಡೆಯ ಶಿಖರವನ್ನು ಹತ್ತುತ್ತದೆ. ಇದನ್ನು ಅಪರೂಪವಾಗಿ ಏರಿದ್ದಾರೆ, ಏಕೆಂದರೆ, ಬಹಳ ಕಷ್ಟಕರವಾದ ದಾರಿ, ಶಾಕ್ಸ್‌ಗಮ್ ನದಿಯನ್ನು ದಾಟಬೇಕಾಗುತ್ತದೆ, ಹಾಗೂ ಇದು ಬಹಳ ಹಾನಿಕರವಾದುದು. ಬಹುತೇಕ ಆರೋಹಿ ಗುಂಪುಗಳು ಮತ್ತು ಪ್ರವಾಸಿಗರು ಅಬ್ರುಝಿ ಮೂಲ ಶಿಬಿರದಲ್ಲಿ ಇರುತ್ತಾರೆ, ಇದಕ್ಕೆ ವ್ಯತಿರಿಕ್ತವಾಗಿ ಗರಿಷ್ಠ ಎರಡು ತಂಡಗಳು ಉತ್ತರದ ತುದಿಯ ಶಿಬಿರದಲ್ಲಿರುತ್ತಾರೆ. ಈ ಮಾರ್ಗವು, ಅಬ್ರುಝಿಗಿಂತಲೂ ತಾಂತ್ರಿಕವಾಗಿ ಅತ್ಯಂತ ಕಷ್ಟಕರವಾಗಿರುತ್ತದೆ, ಉದ್ದದ, ಕಡಿದಾದ, ಮುಖ್ಯ ಶಿಲೆಯ ತುದಿಯು ಪರ್ವತದ ಎತ್ತರಕ್ಕೆ ಹತ್ತುತ್ತದೆ (ಶಿಬಿರ ಇಊ, "ಹದ್ದಿನ ಗೂಡು", 7,900 m or 25,900 ft), ಮತ್ತು ಹತ್ತುವ ಹಾದಿಯಲ್ಲಿ ಅಡ್ದಲಾಗಿ ಅಪಾಯಕರವಾದ ಇಳಿಜಾರಾದ ನೇತಾಡುವ ನೀರ್ಗಲ್ಲನದಿ ಬರುತ್ತದೆ, ಮಂಜಿನ ಕೊರಕಲಿನ ಹಾದಿಯನ್ನು ಶಿಖರವನ್ನು ತಲುಪಲು ಬಳಸಬೇಕು.

ಪ್ರಾರಂಭಿಕ ಜಪಾನೀ ಆರೋಹಣದವೇ ಅಲ್ಲದೆ, ಉತ್ತರದ ತುದಿಯ ಪ್ರಖ್ಯಾತ ಆರೋಹಣವು 1990ರಲ್ಲಿ ಗ್ರೆಗ್ ಚೈಲ್ಡ್, ಗ್ರೆಗ್ ಮೊರ್ಟಿಮರ್, ಮತ್ತು ಸ್ಟೀವ್ ಸ್ವೆನ್ಸನ್ ಅವರುಗಳಿಂದ ನಡೆಯಿತು, ಶಿಬಿರ 2ರ ಮೇಲೆ ಆಲ್ಪೈನ್ ಪಧ್ಧತಿಯಲ್ಲಿ ಮಾಡಿದರು, ಜಪಾನೀ ತಂಡಗಳಿಂದ ಆಗಲೇ ನೆಟ್ಟ ಹಗ್ಗಗಳನ್ನು ಬಳಸಿ.

ಇತರ ಮಾರ್ಗಗಳು

  • ಈಶಾನ್ಯದ ತುದಿ (ಉದ್ದದ ಮತ್ತು ಅಲಂಕಾರಿಕ ಪಟ್ಟಿ; ಅಬ್ರುಝಿ ಹಾದಿಯ ಮೇಲಿನ ಭಾಗದಲ್ಲಿ ಕೊನೆಗೊಳ್ಳುತ್ತದೆ), 1978.
  • ಪಶ್ಚಿಮದ ತುದಿ, 1981.
  • ನೈಋತ್ಯ ಭಾಗದ ಕಂಭ ಅಥವ "ಇಂದ್ರಜಾಲ ಗೆರೆ", ಬಹು ತಾಂತ್ರಿಕ, ಮತ್ತು ಎರಡನೇ ಅತಿ ಹೆಚ್ಚು ಬೇಡಿಕೆಯಲ್ಲಿರುವ. ಮೊದಲ ಏರಿಕೆ 1986ರಲ್ಲಿ, ಪೊಲಿಶ್-ಸ್ಲೊವಾಕ್ ಪಿಯಸೆಕಿ-ರೊಝ್-ಬೊಝಿಕ್ ತ್ರಯರಿಂದ. ಅವಾಗಿನಿಂದ ಕಟಲಾನ್ ಜೊರ್ಡಿ ಚೊರೊಮಿನಾಸ್ ಅವರೊಬ್ಬರೇ ಈ ಹಾದಿಯಲ್ಲಿ ಯಶಸ್ವೀ ಆರೋಹಿ, ಅನೇಕ ಯತ್ನಗಳು ನಡೆದಿದೆಯಾದರೂ.
  • ದಕ್ಷಿಣದ ಮುಖ ಅಥವ "ಪೊಲಿಶ್ ಗೆರೆ" (ವಿಪರೀತವಾಗಿ ಬಹಿರಂಗಗೊಂಡಿದೆ ಮತ್ತು ಅತ್ಯಂತ ಅಪಾಯಕರ). 1986ರಲ್ಲಿ, ಜೆರ್ಝಿ ಕುಕುಝ್ಕಾ ಮತ್ತು ಟೇಡಿಯಸ್ ಪಿಯೋಟ್ರೊಸ್ಕಿ ಅವರುಗಳು ಶಿಖರವನ್ನು ಈ ಹಾದಿಯಲ್ಲಿ ಮುಟ್ಟಿದರು. ರೈಹೋಲ್ಡ್ ಮೆಸ್ಸ್ನರ್ ಅವರು ಇದನ್ನು ಮಾರಣಾಂತಿಕ ಹಾದಿ ಎಂದು ಕರೆದರು ಮತ್ತು ಅವರ ಸಾಧನೆಯನ್ನು ಯಾರೂ ಮತ್ತೊಮ್ಮೆ ಮಾಡಿಲ್ಲ. "ಇದು ಬಹು ಹಿಮಪ್ರವಾಹ-ಸಂಭವಿಸುವ ಹಾದಿಯು, ಯಾರೂ ಹೊಸ ಪ್ರಯತ್ನವನ್ನು ಆಲೋಚಿಸಿಲ್ಲ."
  • ವಾಯುವ್ಯ ಮುಖ, 1990.
  • ವಾಯುವ್ಯ ತುದಿ (ಉತ್ತರದ ತುದಿಯಲ್ಲಿ ಕೊನೆಗೊಳ್ಳುತ್ತದೆ). ಮೊದಲನೇ ಏರಿಕೆ 1991ರಲ್ಲಿ.
  • ದಕ್ಷಿಣ-ಆಗ್ನೇಯ ಸ್ಪರ್ ಅಥವ "ಸೆಸನ್ ಹಾದಿ" (ಅಬ್ರುಝಿ ಹಾದಿಯಲ್ಲಿ ಕೊನೆಗೊಳ್ಳುತ್ತದೆ. ಪ್ರಾಯಷಃ ಇದು ಅಬ್ರುಝಿ ಸ್ಪರ್‌ಗೆ ಸುರಕ್ಷಿತವಾದ ಪರ್ಯಾಯ ಹಾದಿ ಏಕೆಂದರೆ ಅಬ್ರುಝಿಯಲ್ಲಿ ಮೊದಲನೆ ದೊಡ್ಡ ಕಪ್ಪು ಗೋಪುರಾಕೃತಿ ಅಡಚಣೆಯನ್ನು ನಿವಾರಿಸಬಹುದು), 1994.
  • ಪಶ್ಚಿಮ ಮುಖ (ಎತ್ತರದ ಮೇಲ್ಮಟ್ಟದಲ್ಲಿ ತಾಂತ್ರಿಕವಾಗಿ ಕ್ಲಿಷ್ಟಕರವಾದುದು), ರಷ್ಯಾ ತಂಡದಿಂದ 2007ರಲ್ಲಿ ನಡೆಯಿತು ಅಧಿಕೃತ ತಾಣ

ಸ್ಥಳವಿವರಣಾ ಗುಣಲಕ್ಷಣಗಳು

ಕೆ2 ಸ್ಥಳವಿವರಣಾ ಪ್ರಾಧಾನ್ಯತೆಯಲ್ಲಿ 22ನೇ ಸ್ಥಾನವನ್ನು ಪಡೆದಿದೆ, ಇದು ಪರ್ವತದ ಸ್ವಾವಲಂಬಿ ನಿಲುವಿನ ಅಳತೆ, ಏಕೆಂದರೆ ಮೌಂಟ್ ಎವರೆಸ್ಟ್‌ನಂತೆ ಇದು ಅದೇ ಮೇಲಕ್ಕೇರಿಸಿ ವಿಸ್ತರಿಸಿದ ಮೈದಾನ (ಕರಕೋರಮ್, ಟಿಬೆಟನ್ ಪ್ಲೇಟೊ ಮತ್ತು ಹಿಮಾಲಯ ಸೇರಿದಂತೆ), ಇದರಲ್ಲಿ ಕೆ2ಯಿಂದ ಎವರೆಸ್ಟ್‌ವರೆಗೆ ಹಾದಿಯಲ್ಲಿ ಅನುಸರಿಸಬಹುದು, ಹಾಗೂ 4,594 m (15,072 ft) ಕ್ಕಿಂತ ಕೆಳಗೆ ಹೋಗುವುದಿಲ್ಲ (ಮಸ್ಟಾಂಗ್ ಲೊನಲ್ಲಿ). ಅನೇಕ ಇತರ ಶಿಖರಗಳು ಕೆ2ಗಿಂತ ಕೆಳಗಿನ ಮಟ್ಟದಲ್ಲಿದೆ ಮತ್ತು ಈ ನಿಟ್ಟಿನಲ್ಲಿ ಅವುಗಳು ಹೆಚ್ಚು ಸ್ವತಂತ್ರವಾಗಿವೆ.

ಆದಾಗ್ಯೂ, ಕೆ2 ತನ್ನ ಸ್ಥಳೀಯ ಪರಿಹಾರ ಹಾಗೂ ಅದರ ಒಟ್ಟು ಎತ್ತರಕ್ಕೆ ಹೆಸರುವಾಸಿಯಾಗಿದೆ. ಅದು 3,000 metres (9,843 ft) ರಷ್ಟು ಎತ್ತರಕ್ಕೆ ನಿಂತಿದೆ, ಬಹುತೇಕ ನೀರ್ಗಲ್ಲನದಿಯ ಕಣಿವೆಯ ಆಧಾರದ ಕೆಳಗಿವೆ. ಇನ್ನೂ ಹೆಚ್ಚಿನ ಅಸಾಮಾನ್ಯವಾದ ಸಂಗತಿಯೆಂದರೆ, ಸುಸಂಗತವಾಗಿ ಕಡಿದಾದ ಗೋಪುರಾಕೃತಿ, ಚುರುಕಾಗಿ ಎಲ್ಲಾ ದಿಕ್ಕುಗಳಲ್ಲೂ ಕೆಳಗೆ ಬೀಳುತ್ತದೆ. ಉತ್ತರದ ಭಾಗವು ಅತ್ಯಂತ ಕಡಿದಾದುದು: ಅಲ್ಲಿ 3,200 metres (10,499 ft) ರಷ್ಟು ಎತ್ತರಕ್ಕೆ ಕೆ2 (ಖೊಗಿರ್) ನೀರಗಲ್ಲನದಿಯ ಮೇಲೆ 3,000 metres (9,843 ft) ನಷ್ಟು ಮಾತ್ರ ಸಮತಲವಾದ ಅಂತರದಲ್ಲಿದೆ. ಬಹುತೇಕ ದಿಕ್ಕುಗಳಲ್ಲಿ, ಇದು 2,800 metres (9,186 ft) ಕ್ಕೊ ಹೆಚ್ಚು ಎತ್ತರವನ್ನು ಸಾಧಿಸುತ್ತದೆ ಹಾಗೂ ನೆಟ್ಟಗಿನ ಪರಿಹಾರವನ್ನು 4,000 metres (13,123 ft) ಕ್ಕಿಂತ ಕಡಿಮೆ ಇದೆ.

ಮೀಡಿಯಾದಲ್ಲಿ

ಕೆ2 ಬಗೆಗಿನ ಪುಸ್ತಕಗಳು

(ಕುರ್ರಾನ್ ಪ್ರಕಾರ ಆರೋಹಣಗಳ ಪಟ್ಟಿ ಮಾಡಲಾಗಿದೆ. ಯಕುಶಿ ಪ್ರಕಾರ ಎಲ್ಲ ಬಗೆಯವುಗಳನ್ನು ಪಟ್ಟಿ ಮಾಡಿಲ್ಲ. ಕ್ಯಾಟಲಾಗ್ ಆಫ್ ದಿ ಹಿಮಾಲಯನ್ ಲಿಟರೇಚರ್, ಎಡ್. ಯೊಶಿಮಿ ಯಕುಶಿ ಅವರಿಂದ, 1994ರ ಪ್ರತಿ). ಇಂಗ್ಲಿಷ್ ಪ್ರತಿಗಳು ಲಭ್ಯವಿಲ್ಲದಾಗ ವಿದೇಶೀ ಭಾಷೆಯ ಪ್ರತಿಗಳನ್ನು ಪಟ್ಟಿ ಮಾಡಲಾಗಿದೆ. ಐಎಸ್‌ಬಿಎನ್ ಅನ್ನು ಕೈಬಿಡಲಾಗಿದೆ ಏಕೆಂದರೆ ಅದು ಯಾವ ಸಂಕಲ್ಪವನ್ನೂ ಉಪಕರಿಸುವುದಿಲ್ಲ. ಇವು ಪೂರ್ಣವಾಗಿಲ್ಲ, ಆದರೆ ಇನ್ನೂ ಕಾರ್ಯನಿರತರಾಗಿದ್ದೇವೆ!)

1887 - ಬ್ರಿಟಿಶ್ - ಯಂಗ್‌ಹಸ್ಬೆಂಡ್

  • ಫ್ರಾನ್ಸಿಸ್ ಯಂಗ್‌ಹಸ್ಬೆಂಡ್, ದಿ ಹಾರ್ಟ್ ಆಫ್ ಎ ಕಾಂಟಿನೆಂಟ್ , 1896, (ಯಕುಶಿ ವೈ27 )

1892 - ಬ್ರಿಟಿಶ್ - ಕಾನ್ವೇ

  • ಮಾರ್ಟಿನ್ ಕಾನ್ವೇ, ಕ್ಲೈಂಬಿಂಗ್ ಅಂಡ್ ಎಕ್ಸ್‌ಪ್ಲೊರೇಶನ್ ಇನ್ ದಿ ಕರಾಕೋರಂ ಹಿಮಾಲಯಾಸ್ , 1894, (ಯಕುಶಿ ಸಿ336ಎ )
  • ಆಸ್ಕರ್ ಎಕೆನ್‌ಸ್ಟೀನ್, ದಿ ಕರಾಕೋರಮ್ಸ್ ಅಂಡ್ ಕಾಶ್ಮೀರ್ ಹಿಮಾಲಯನ್ಸ್ , 1896, (ಯಕುಶಿ ಇ10 )

1902 - ಅಂತಾರಾಷ್ಟ್ರೀಯ - ಎಕೆನ್‌ಸ್ಟೀನ್ ಮತ್ತು ಕ್ರೌಲೇ

  • ಏಲಿಯೆಸ್ಟರ್ ಕ್ರೌಲೇ, ದಿ ಕನ್‌ಫೆಶನ್ಸ್ ಆಫ್ ಏಲಿಯೆಸ್ಟರ್ ಕ್ರೌಲೇ , 1969, (ಯಕುಶಿಯಲ್ಲಿ ಇಲ್ಲ )
  • ಡಾ ಜೂಲ್ಸ್ ಜಾಕೊಟ್-ಗಿಲ್ಲರ್ಮೊಡ್, ಸಿಕ್ಸ್ ಮೊಯಿಸ್ ಡಾನ್ಸ್ l'ಹಿಮಾಲಯ, ಲೆ ಕರಾಕೋರಂ ಎಟ್ l'ಹಿಂದು-ಕುಶ್. , 1904, (ಯಕುಶಿ ಜೆ17 ), ( ಆವೃತ್ತಿ ಮಾತ್ರ )

1909 - ಇಟಾಲಿಯನ್ - ಲುಯಿಗಿ ಅಮೆಡಿಯೊ

  • ಫಿಲಿಪ್ಪೊ ಡೆ ಫಿಲಿಪ್ಪಿ, ಲಾ ಸ್ಪೆಡಿಝಿಯೊನೆ ನೆಲ್ ಕರಾಕೋರಂ ಎ ನೆಲ್ಲ್'ಇಮಲಾಯಿಯ ಆಕ್ಸಿಡೆಂಟಲೆ , 1912, (ಯಕುಶಿ ಎಫ್71ಎ ), ( ಆವೃತ್ತಿ)
  • ಫಿಲಿಪ್ಪೊ ಡೆ ಫಿಲಿಪ್ಪಿ, ಕರಾಕೋರಂ ಅಂಡ್ ವೆಸ್ಟರ್ನ್ ಹಿಮಾಲಯ , 1912, (ಯಕುಶಿ ಎಫ್71ಬಿ ), ( / ( ಆವೃತ್ತಿ)
  • ಮಿರೆಲ್ಲಾ ಟೆಂಡೆರಿನಿ ಮತ್ತು ಮೈಕೇಲ್ ಶಾಂಡ್ರಿಕ್, ದಿ ಡ್ಯೂಕ್ ಆಫ್ ಅಬ್ರುಝಿ: ಅನ್ ಎಕ್ಸ್‌ಪ್ಲೋರರ್ಸ್ ಲೈಫ್ , 1977, (ಯಕುಶಿಯಲ್ಲಿ ಇಲ್ಲ )

1929 - ಇಟಾಲಿಯನ್ - ಅಯ್ಮೊನೆ ಡಿ ಸವೊಯಿಯ-ಅವೊಸ್ತಾ

  • ಅಯ್ಮೊನೆ ಡಿ ಸವೊಯಿಯ-ಅವೊಸ್ತಾ ಮತ್ತು ಆರ್ಡಿಟೊ ಡೆಸಿಯೊ, ಲಾ ಸ್ಪೆಡಿಝಿಯೊನೆ ಜಿಯೊಗ್ರಾಫಿಕಾ ಇಟಾಲಿಯಾನ್ ಅಲ್ ಕರಾಕೋರಂ , 1936, (ಯಕುಶಿ ಎಸ್670 ), ( ಆವೃತ್ತಿ ಮಾತ್ರ )

1937 - ಬ್ರಿಟಿಶ್ - ಶಿಪ್ಟನ್

  • ಎರಿಕ್ ಶಿಪ್ಟನ್, ಬ್ಲ್ಯಾಂಕ್ ಆನ್ ದಿ ಮ್ಯಾಪ್ , 1938, (ಯಕುಶಿ ಎಸ್432 )

1938 - ಅಮೇರಿಕನ್ - ಹೌಸ್ಟನ್

  • ಚಾರ್ಲ್ಸ್ ಹೌಸ್ಟನ್ ಮತ್ತು ಬಾಬ್ ಬೇಟ್ಸ್, ಫೈವ್ ಮೈಲ್ಸ್ ಹೈ , 1939, (ಯಕುಶಿ ಬಿ165 )

1939 - ಅಮೇರಿಕನ್ - ವಿಎಸ್ನರ್

  • ಜೆನ್ನಿಫರ್ ಜೋರ್ಡನ್, ಲಾಸ್ಟ್ ಮ್ಯಾನ್ ಆನ್ ದಿ ಮೌಂಟೇನ್ , 2010, ( ಯಕುಶಿಯಲ್ಲಿ ಇಲ್ಲ ), (ಇನ್ನು ಪ್ರಕಾಶಿತವಾಗಬೇಕು, ಆಗಸ್ಟ್ 2010ರಲ್ಲಿ)
  • ಆಂಡ್ರ್ಯೂ ಕಾಫ್ಮನ್ ಮತ್ತು ವಿಲಿಯಮ್ ಪುಟ್ನಾಮ್, ಕೆ2; ದಿ 1939 ಟ್ರ್ಯಾಜಿಡಿ , 1992, (ಯಕುಶಿ ಕೆ66 )
  • ಫ್ರಿಟ್ಜ್ ವಿಎಸ್ನರ್, ಕೆ2, ಟ್ರ್ಯಾಗೊಡಿಯನ್ ಉಂಡ್ ಸೀಗ್ ಆ‍ಯ್‌ಮ್ ಝ್ವಿಥೊಚ್‌ಸ್ಟನ್ ಬರ್ಗ್ ಡೆರ್ ಎರ್ಡೆ , 1955, (ಯಕುಶಿ ಡಬ್ಲು152 ), ( ಆವೃತ್ತಿ ಮಾತ್ರ )

1953 - ಅಮೇರಿಕನ್ - ಹೌಸ್ಟನ್

  • ಚಾರ್ಲ್ಸ್ ಹೌಸ್ಟನ್ ಮತ್ತು ಬಾಬ್ ಬೇಟ್ಸ್, ಕೆ2, ದಿ ಸ್ಯವೇಜ್ ಮೌಂಟೇನ್ , 1954, (ಯಕುಶಿ ಎಚ್429ಎ )
  • ಚಾರ್ಲ್ಸ್ ಹೌಸ್ಟನ್, ಬಾಬ್ ಬೇಟ್ಸ್ ಮತ್ತು ಜಾರ್ಜ್ ಬೆಲ್, ಕೆ2, 8611ಎಮ್ , 1954, (ಯಕುಶಿ ಎಚ್430 ), ( ಆವೃತ್ತಿ ಮಾತ್ರ )

1954 - ಇಟಾಲಿಯನ್ - ದೇಸಿಯೊ

  • ಮೊಹಮ್ಮದ್ ಅತಾ-ಉಲ್ಲಾಹ್, ಸಿಟಿಜನ್ ಆಫ್ ಟು ವರ್ಲ್ಡ್ಸ್ , 1960, (ಯಕುಶಿ ಎ284 )
  • ವಾಲ್ಟರ್ ಬೊನಟ್ಟಿ, ದಿ ಮೌಂಟೇನ್ಸ್ ಆಫ್ ಮೈ ಲೈಫ್ , 2001, (ಯಕುಶಿಯಲ್ಲಿ ಇಲ್ಲ )
  • ವಾಲ್ಟರ್ ಬೊನಟ್ಟಿ, ಪ್ರೊಸೆಸ್ಸೊ ಅಲ್ ಕೆ2 , 1985, (ಯಕುಶಿ ಬಿ453 ), ( ಆವೃತ್ತಿ)
  • ವಾಲ್ಟರ್ ಬೊನಟ್ಟಿ, ಕೆ2. ಲಾ ವೆರಿಟಾ. 1954-2004 , 2005, (ಯಕುಶಿಯಲ್ಲಿ ಇಲ್ಲ ), ( ಆವೃತ್ತಿ)
  • ಅಚಿಲ್ಲೆ ಕಂಪ್ಯಾಗ್ನೊನಿ, ಉಯೊಮಿನಿ ಸುಲ್ ಕೆ2 , 1958, (ಯಕುಶಿ ಸಿ328 ), ( ಆವೃತ್ತಿ ಮಾತ್ರ )
  • ಎಖಿಲ್ಲ್ ಕಾಂಪಗ್ನೊನಿ, ಟ್ರೈಕಲರ್ ಸುಲ್ ಕೆ2 , 1965, (ಯಕುಶಿ ಸಿ329 ), ( ಆವೃತ್ತಿ ಮಾತ್ರ )
  • ಎಖಿಲ್ಲ್ ಕಾಂಪಗ್ನೊನಿ, ಕೆ2: ಕಾಂಕ್ವಿಸ್ಟಾ ಇಟಾಲಿಯಾನ ಟ್ರಾ ಸ್ಟೋರಿಯಾ ಇ ಮೆಮೊರಿಯ , 2004, (ಯಕುಶಿಯಲ್ಲಿ ಇಲ್ಲ ), ( ಆವೃತ್ತಿ ಮಾತ್ರ )
  • ಆರ್ಡಿಟೊ ದೆಸಿಯೊ, ಅಸೆಂಟ್ ಆಫ್ ಕೆ2. ಸೆಕೆಂಡ್ ಹೈಯೆಸ್ಟ್ ಪೀಕ್ ಇನ್ ದಿ ವರ್ಲ್ಡ್ , 1955, (ಯಕುಶಿ ಡಿ167ಬಿ ), ( ಆವೃತ್ತಿ)
  • ಆರ್ಡಿಟೊ ದೆಸಿಯೊ, ಲಿಬ್ರೊ ಬೈಯಾಂಕೊ , 1956, (ಯಕುಶಿ ಡಿ168 ), ( ಆವೃತ್ತಿ ಮಾತ್ರ )
  • ಮಾರಿಯೊ ಫಾಂಟಿನ್, ಸೊಗ್ನೊ ವಿಸುಟೊ , 1958, (ಯಕುಶಿ ಎಫ್10 ), ( ಆವೃತ್ತಿ ಮಾತ್ರ )
  • ಲಿನೊ ಲೇಸಿಡೆಲ್ಲಿ ಮತ್ತು ಜಿಯೊವನ್ನಿ ಸೆನಾಚಿ, ಕೆ2: ದಿ ಪ್ರೈಸ್ ಆಫ್ ಕಾಂಕ್ವೆಸ್ಟ್ , 2006, (ಯಕುಶಿ)ಯಲ್ಲಿ ಇಲ್ಲ , ( ಆವೃತ್ತಿ)
  • ರಾಬರ್ಟ್ ಮಾರ್ಶಲ್, ಕೆ2. ಲೈಸ್ ಮತ್ತು ಟ್ರೆಚೆರಿ , 2009, ( ಯಕುಶಿಯಲ್ಲಿ ಇಲ್ಲ )

1975 - ಅಮೇರಿಕನ್ - ವ್ಹಿಟೇಕರ್

  • ಗಾಲೆನ್ ರೊವೆಲ್, ಇನ್ ದಿ ಥ್ರೋನ್ ರೂಮ್ ಆಫ್ ದಿ ಮೌಂಟೇನ್ ಗಾಡ್ಸ್ , 1977, (ಯಕುಶಿ ಆರ್366 )

1978 - ಮೇರಿಕನ್ - ವ್ಹಿಟೇಕರ್

  • ಚೆರೀ ಬ್ರೆಮರ್-ಕ್ಯಾಂಪ್ / ಚೆರೀ ಬೆಚ್, ಲಿವಿಂಗ್ ಆನ್ ದಿ ಎಡ್ಜ್ , 1987, (ಯಕುಶಿ ಬಿ558 )
  • ರಿಕ್ ರಿಡ್ಜ್‌ವೇ, ದಿ ಲಾಸ್ಟ್ ಸ್ಟೆಪ್: ದಿ ಅಮೇರಿಕನ್ ಅಕ್ಸೆಂಟ್ ಆಫ್ ಕೆ2 , 1980, (ಯಕುಶಿ ಆರ್216 )

1979 - ಫ್ರೆಂಚ್ - ಮೆಲ್ಲೆಟ್

  • ಬರ್ನಾರ್ಡ್ ಮೆಲ್ಲೆಟ್, ಕೆ2. ಲಾ ವಿಕ್ಟೋರಿ ಸಸ್ಪೆಂಡು , 1980, (ಯಕುಶಿ ಎಮ್307 ), ( ಆವೃತ್ತಿ ಮಾತ್ರ )

1979 - ಅಂತಾರಾಷ್ಟ್ರೀಯ - ಮೆಸ್ನರ್

  • ರೀನ್‌ಹೋಲ್ಡ್ ಮೆಸ್ನರ್ ಮತ್ತು ಅಲೆಸ್ಸಾಂಡ್ರೊ ಗೊಗ್ನಾ, ಕೆ2, ಮೌಂಟೇನ್ ಆಫ್ ಮೌಂಟೇನ್ಸ್ , 1981, (ಯಕುಶಿ ಎಮ್340ಸಿ ), ( ಆವೃತ್ತಿ)

1986 - (ಎಕ್ಸ್‌ಪೆಡಿಶನ್ಸ್ ಮೊಮೆಂಟರಿಲಿ ಲಂಪ್‌ಡ್ ಟುಗೆದರ್ ಫಾರ್ ಕನ್ವೀನಿಯನ್ಸ್ ಸೇಕ್.)

  • ಜಾನ್ ಬ್ಯಾರಿ, ಕೆ2, ಸ್ಯಾವೇಜ್ ಮೌಂಟೇನ್, ಸ್ಯಾವೇಜ್ ಸಮ್ಮರ್ , 1987, (ಯಕುಶಿ ಬಿ135 )
  • ಬೆನೊಯಿಟ್ ಚಮಾಕ್ಸ್, ಲೆ ವರ್ಟಿಜ್ ಡೆ ಎಲ್’ಇನ್ಫಿನೀ , 1988, (ಯಕುಶಿ ಸಿ125 ), ( ಆವೃತ್ತಿ ಮಾತ್ರ )
  • ಜಿಮ್ ಕುರ್ರನ್, ಕೆ2, ಟ್ರಿಯಂಫ್ ಅಂಡ್ ಟ್ರ್ಯಾಜಿಡಿ. , 1987, (ಯಕುಶಿ ಸಿ405ಎ )
  • ಅನ್ನಾ ಸ್ಜೆರ್ವಿನ್‌ಸ್ಕಾ, ಗ್ರೊಝಾ ವೊಕೊಲ್ ಕೆ2 , 1990, (ಯಕುಶಿ ಸಿ420 ), ( ಆವೃತ್ತಿ ಮಾತ್ರ )
  • ಕುರ್ಟ್ ಡೀಮ್‌ಬರ್ಗರ್, ದಿ ಎಂಡ್‌ಲೆಸ್ ನಾಟ್: ಕೆ2, ಮೌಂಟೇನ್ ಆಫ್ ಡ್ರೀಮ್ಸ್ ಅಂಡ್ ಡೆಸ್ಟಿನಿ , 1991, (ಯಕುಶಿ ಡಿ234ಡಿ ), ( ಆವೃತ್ತಿ)

1993 - ಅಮೇರಿಕನ್ / ಕೆನೆಡಿಯನ್ - ಅಲಿಸನ್

  • ಜಿಮ್ ಹೇಬರ್ಲ್, ಕೆ2, ಡ್ರೀಮ್ಸ್ ಅಂಡ್ ರಿಯಾಲಿಟಿ , 1994, (ಯಕುಶಿಯಲ್ಲಿ ಇಲ್ಲ )

2008 - (ಎಕ್ಸ್‌ಪೆಡಿಶನ್ಸ್ ಮೊಮೆಂಟರಿಲಿ ಲಂಪ್ಡ್ ಟುಗೆದರ್ ಫಾರ್ ಕನ್ವೀನಿಯನ್ಸ್ ಸೇಕ್.)

  • ಗ್ರಾಹಂ ಬೌಲೇ, ನೋ ವೇ ಡೌನ್ - ಲೈಫ್ ಅಂಡ್ ಡೆತ್ ಆನ್ ಕೆ2 , 2010, (ಯಕುಶಿಯಲ್ಲಿ ಇಲ್ಲ )
  • ಮಾರ್ಕೊ ಕನ್ಫೊರ್ಟೊಲ, ಜಿಯೊರ್ನಿ ಡಿ ಘಿಯಾಚಿಯೊ. ಅಗೊಸ್ಟೊ 2008. ಲಾ ಟ್ರ್ಯಾಜಿಡಿಯಾ ಡೆಲ್ ಕೆ2 , 2009, (ಯಕುಶಿಯಲ್ಲಿ ಇಲ್ಲ ), ( ಆವೃತ್ತಿ)

ಜನರಲ್ ಲಿಟರೇಚರ್ ಆನ್ ಕೆ2

  • ಫುಲ್ವಿಯೊ ಕ್ಯಾಂಪಿಯೊಟ್ಟಿ, ಕೆ2 , 1954, (ಯಕುಶಿ ಸಿ36 ), ( ಆವೃತ್ತಿ ಮಾತ್ರ )
  • ಜಿಮ್ ಕುರ್ರನ್, ಕೆ2, ದಿ ಸ್ಟೋರಿ ಆಫ್ ದಿ ಸ್ಯಾವೇಜ್ ಮೌಂಟೇನ್ , 1995, (ಯಕುಶಿಯಲ್ಲಿ ಇಲ್ಲ )
  • ಕುರ್ಟ್ ಡೀಮ್‌ಬರ್ಗರ್ ಮತ್ತು ರಾಬರ್ಟೊ ಮಾಂಟೊವನಿ, ಕೆ2. ಚಾಲೆಂಜಿಗ್ ದಿ ಸ್ಕೈ , 1995, (ಯಕುಶಿಯಲ್ಲಿ ಇಲ್ಲ )
  • ಹೀಡಿ ಹಾಕಿನ್ಸ್, ಕೆ2: ಒನ್ ವುಮನ್ಸ್ ಕ್ವೆಸ್ಟ್ ಫಾರ್ ದಿ ಸುಮಿತ್ , 2001, (ಯಕುಶಿಯಲ್ಲಿ ಇಲ್ಲ )
  • ಮಾರೀಸ್ ಇಸ್ಸೆರ್ಮನ್ ಮತ್ತು ಸ್ಟೀವರ್ಟ್ ವೀವರ್, ಫಾಲನ್ ಜಯಂಟ್ಸ್: ಎ ಹಿಸ್ಟರಿ ಆಫ್ ಹಿಮಾಲಯನ್ ಮೌಂಟೇನೀರಿಂಗ್ ಫ್ರಂ ದಿ ಏಜ್ ಆಫ್ ಎಂಪೈರ್ ಟು ದಿ ಏಜ್ ಆಫ್ ಎಕ್ಸ್‌ಟ್ರೀಮ್ಸ್ , 2008, (ಯಕುಶಿಯಲ್ಲಿ ಇಲ್ಲ )
  • ದುಸನ್ ಜೆಲಿಂಚಿಚ್, ಜ್ವೆಜ್ಡ್‌ನಾಟೆ ನೊಚಿ (ಸ್ಟಾರಿ ನೈಟ್ಸ್), 2006, (ಯಕುಶಿಯಲ್ಲಿ ಇಲ್ಲ )
  • ಜೆನ್ನಿಫರ್ ಜೋರ್ಡನ್, ಸ್ಯಾವೇಜ್ ಸುಮಿತ್: ದಿ ಟ್ರೂ ಸ್ಟೋರೀಸ್ ಆಫ್ ದಿ ಫರ್ಸ್ಟ್ ಫೈವ್ ವುಮೆನ್ ವ್ಹು ಕ್ಲೈಂಬ್‌ಡ್ ಕೆ2 , 2005, (ಯಕುಶಿಯಲ್ಲಿ ಇಲ್ಲ )
  • ಜಾನ್ ಕ್ರಕವೆರ್, ಈಗರ್ ಡ್ರೀಮ್ಸ್: ವೆಂಚರ್ಸ್ ಅಮಾಂಗ್ ಮೆನ್ ಅಂಡ್ ಮೌಂಟೇನ್ಸ್ , 1997, (ಯಕುಶಿಯಲ್ಲಿ ಇಲ್ಲ )
  • ಕೆನ್ನೆತ್ ಮೇಸನ್, ಅಬೋಡ್ ಆಫ್ ಸ್ನೋ , 1955, (ಯಕುಶಿ M214a ), ( ಆವೃತ್ತಿ)
  • ಬರ್ನಾಡೆಟ್ ಮೆಕ್‌ಡೊನಾಲ್ಡ್, ಬ್ರದರ್‌ಹುಡ್ ಆಫ್ ದಿ ರೋಪ್: ದಿ ಬಯಾಗ್ರಫಿ ಆಫ್ ಚಾರ್ಲ್ಸ್ ಹೌಸ್ಟನ್ , 2007, (ಯಕುಶಿಯಲ್ಲಿ ಇಲ್ಲ)
  • ರೀನ್‌ಹೋಲ್ಡ್ ಮೆಸ್ನರ್, ಕೆ2 ಚೊಗೊರಿ. ಲಾ ಗ್ರಾಂಡೆ ಮೊಂಟಗ್ನಾ , 2004, (ಯಕುಶಿಯಲ್ಲಿ ಇಲ್ಲ ), ( ಆವೃತ್ತಿ)
  • ಗ್ರೆಗ್ ಮೊರ್ಟೆನ್ಸನ್ ಮತ್ತು ಡೇವಿಡ್ ಒಲಿವರ್ ರೆಲಿನ್, ಥ್ರೀ ಕಪ್ಸ್ ಆಫ್ ಟೀ: ಒನ್ ಮ್ಯಾನ್ಸ್ ಮಿಷನ್ ಟು ಪ್ರಮೋಟ್ ಪೀಸ್ . . . ಒನ್ ಸ್ಕೂಲ್ ಅಟ್ ಎ ಟೈಮ್ , 2007, ( ಯಕುಶಿಯಲ್ಲಿ ಇಲ್ಲ )
  • ಮುಸ್ತನ್ಸರ್ ಹುಸೇನ್ ತರ್ರಡ್, ಕೆ2 ಕಹನಿi , (ಉರ್ದುವಿನಲ್ಲಿ), 2002, (ಯಕುಶಿಯಲ್ಲಿ ಇಲ್ಲ )
  • ಎಡ್ ವಿಎಸ್ಚರ್ಸ್, ನೊ ಶಾರ್ಟ್‌ಕಟ್ಸ್ ಟು ದಿ ಟಾಪ್: ಕ್ಲೈಂಬಿಂಗ್ ದಿ ವರ್ಲ್ಡ್ಸ್ 14 ಹೈಯೆಸ್ಟ್ ಪೀಕ್ಸ್ , 2007, (ಯಕುಶಿಯಲ್ಲಿ ಇಲ್ಲ )

ಚಲನಚಿತ್ರಗಳು

  • ವರ್ಟಿಕಲ್ ಲಿಮಿಟ್ , 2000
  • ಕೆ2 , 1992
  • ಕರಾಕೋರಂ & ಹಿಮಾಲಯಾಸ್ , 2007

CDಗಳು

  • 1988ರಲ್ಲಿ, ಬ್ರಿಟಿಶ್ ರಾಕ್ ಸಂಗೀತಕಾರ ಡಾನ್ ಏರೇ ಎಂಬುವವನು ಕೆ2 (ಟೇಲ್ಸ್ ಆಫ್ ಟ್ರೈಯಂಫ್ ಅಂಡ್ ಟ್ರ್ಯಾಜಿಡಿ) ಆಲ್ಬಂ ಅನ್ನು ಬಿಡುಗಡೆ ಮಾಡಿದನು (ಫೀಟ್. ಗ್ಯಾರಿ ಮೂರ್ ಮತ್ತು ಕಾಲಿನ್ ಬ್ಲನ್‌ಸ್ಟೋನ್), ಇದನ್ನು 1986ರಲ್ಲಿ 13 ಕೆ2-ಬಲಿಯಾದವರಿಗಾಗಿ ಅರ್ಪಿಸಲಾಯಿತು.
  • ಹ್ಯಾನ್ಸ್ ಜಿಮ್ಮರ್ ಕೆ2 ಚಲನಚಿತ್ರಕ್ಕಾಗಿ ಸ್ಕೋರ್ ಅನ್ನು ತಯಾರಿಸಿದನು. ಈ ಸ್ಕೋರ್ ಅನ್ನು ಚಿತ್ರದಲಿ ಬಳಸಲಿಲ್ಲ: 1992ರಲ್ಲಿ ಕೆ2: ಚಲನಚಿತ್ರದಿಂದ ಪ್ರೇರಿತವಾದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಯಿತು.

ಇವನ್ನೂ ಗಮನಿಸಿ

  • 1986 ಕೆ2 ದುರಂತ
  • 2008 ಕೆ2 ದುರಂತ
  • ಕನ್ಕಾರ್ಡಿಯಾ
  • ಗಿಲ್ಗಿಟ್-ಬಾಲ್ಟಿಸನ್
  • ಪಾಕೀಸ್ತಾನದಲ್ಲಿರುವ ಪರ್ವತಗಳ ಪಟ್ಟಿ
  • ಪ್ರಪಂಚದ ಅತಿ ಎತ್ತರದ ಪರ್ವತಗಳ ಪಟ್ಟಿ
  • ಎದ್ದುಕಾಣುವ ಶಿಖರಗಳ ಪಟ್ಟಿ
  • ಎಂಟು-ಸಾವಿರದಲ್ಲಿ ಸತ್ತವರ ಪಟ್ಟಿ
  • ಹಸನ್ ಸದ್ಪರ

ಆಕರಗಳು ಮತ್ತು ಟಿಪ್ಪಣಿಗಳು

^ ಭಾರತ ಸರ್ಕಾರವೂ ಕೆ೨ ತನ್ನ ಸೀಮೆಯಲ್ಲಿದೆಯೆಂದು ಹೇಳಿದೆ, ಇದು ಪಾಕಿಸ್ತಾನದ-ಆಡಳಿತದಲ್ಲಿರುವ ಕಾಶ್ಮೀರದ ಸೀಮಾ ವ್ಯಾಜ್ಯದ ದೆಸೆಯಿಂದ.

ಬಾಹ್ಯ ಕೊಂಡಿಗಳು

Listed in the following categories:
ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿ
ಸಲಹೆಗಳು ಮತ್ತು ಸುಳಿವುಗಳು
ಇವರಿಂದ ವ್ಯವಸ್ಥೆ ಮಾಡಿ:
derGianni
23 August 2011
Ganz schön zugig, aber tolle Aussicht!
derGianni
23 August 2011
Ganz schön zugig hiet oben, aber die Aussicht ist nicht schlecht.
Chamba Camp Diskit

starting $981

Roost Duktuk

starting $66

Hotel Siachen

starting $27

Royal Gasho Hotel

starting $72

Zojila Residency

starting $41

Hotel Greenland

starting $46

ಹತ್ತಿರದ ದೃಶ್ಯಗಳನ್ನು ಶಿಫಾರಸು ಮಾಡಲಾಗಿದೆ

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
ಕರಕೊರಂ

ಕರಕೊರಂ ಪರ್ವತ ಶ್ರೇಣಿಗಳು ಪಾಕಿಸ್ತಾನದ ಗಿಲಿಗಿಟ್ಬಲ್ಟಿಸ್ತಾನ್, ಭಾರತದ ಲ

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Broad Peak

Broad Peak (originally named K3), known locally as Faichan Kangri, is

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Broad Peak

Broad Peak (originally named K3), known locally as Faichan Kangri, is

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Gasherbrum II

Gasherbrum II (also known as K4) is the 13th highest mountain on

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Gasherbrum I

Gasherbrum I (also known as Hidden Peak or K5) is the 11th highest

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Khaplu Palace

Khaplu Palace (اردو. Шаблон:Nastaliq; bft. Шаблон:Na

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Skardu Fort

Skardu Fort or Karpachu Fort is a fort in Skardu city in Northern

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Altit Fort

Altit Fort is an ancient fort above Karimabad in the Hunza valley in

ಇದೇ ರೀತಿಯ ಪ್ರವಾಸಿ ಆಕರ್ಷಣೆಗಳು

ಎಲ್ಲವನ್ನೂ ನೋಡು ಎಲ್ಲವನ್ನೂ ನೋಡು
ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Çamlıca Hill

Çamlıca Hill (Turkish: Çamlıca Tepesi), aka Big Çamlıca Hill (Turk

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Üetliberg

The Üetliberg (also spelled Uetliberg, pronounced Шаблон:IPA in Zür

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Top of Mt. Takao (高尾山頂)

Top of Mt. Takao (高尾山頂) ಒಂದು ಪ್ರವಾಸಿ ಆಕರ್ಷಣೆಯಾಗಿದೆ ಒಂದಾಗಿದೆ Mounta

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Gellért Hill

Gellért Hill (magyar. Gellért-hegy; Deutsch. Blocksberg; Latina. M

ಇಚ್ l ೆಪಟ್ಟಿಗೆ ಸೇರಿಸಿ
ನಾನು ಇಲ್ಲಿದ್ದೇನೆ
ಭೇಟಿ ನೀಡಿದರು
Lysá hora

Lysá hora (Czech pronunciation: ]; Polish: Łysa Góra; German: Lys

ಎಲ್ಲಾ ರೀತಿಯ ಸ್ಥಳಗಳನ್ನು ನೋಡಿ